ಚಿಕ್ಕ ಚೊಕ್ಕ ಕುಟುಂಬ

ಈ ಕುಟುಂಬ ಯಾವುದೇ ಅಪೇಕ್ಷೆಗಳನ್ನು ಹೊಂದಿಲ್ಲ. ಕುಟುಂಬದವರೆಲ್ಲ ಆರೋಗ್ಯವಂತರಾಗಿರಬೇಕೆಂಬುದು ಇವರ ಆಶಯ.

ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕು, ಹುಲಿಕೆರೆ ಗ್ರಾಮದ 54 ವರ್ಷದ ಪ್ರಸಾದ್ ಕುಟುಂಬದ ಯಜಮಾನ. ಹೆಂಡತಿ 40 ವರ್ಷದ ಶಿವಮ್ಮ ಹಾಗೂ ಇಬ್ಬರು ಗಂಡು ಮಕ್ಕಳ ಚಿಕ್ಕ ಕುಟುಂಬ ಇವರದು. ಹಿರಿಯ ಮಗ ಯಶವಂತ 13 ವರ್ಷದವನಾಗಿದ್ದು, 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಎರಡನೆಯ ಮಗ ಪ್ರವೀಣ 11 ವರ್ಷದವನಿದ್ದು 6ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇವರಿಗೆ ಯಾರೂ ಅವಲಂಬಿತರಿಲ್ಲ; ಚಿಕ್ಕ-ಚೊಕ್ಕ ಕುಟುಂಬ.

ಪ್ರಸಾದ್ ರೂ.2000 ಮನೆ ಬಾಡಿಗೆಗೆ ಕೊಡುತ್ತಾರೆ. ಹತ್ತನೇ ತರಗತಿವರೆಗೆ ಓದಿರುವ ಇವರು ರಸ್ತೆ ಬದಿಯ ಸಣ್ಣ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರಸ್ತೆಬದಿ ವ್ಯಾಪಾರದಿಂದ ತಿಂಗಳಿಗೆ ರೂ.10,000 ಆದಾಯ ಬರುತ್ತದೆ. ಇದರಲ್ಲಿ ಮನೆ ಖರ್ಚು ಕಳೆದು ತಿಂಗಳಿಗೆ 500 ರಿಂದ 1000 ರೂಪಾಯಿ ಉಳಿಯುತ್ತದೆ. ಅದನ್ನು ವ್ಯಾಪಾರಕ್ಕೆ ಮತ್ತೆ ಹೂಡಿಕೆ ಮಾಡುತ್ತಾರೆ. ಪ್ರಸಾದ್ ಅವರ ಹೆಂಡತಿ ಶಿವಮ್ಮ ಗೃಹಿಣಿಯಾಗಿದ್ದು, ಯಾವುದೇ ಶಿಕ್ಷಣ ಪಡೆದಿಲ್ಲ. ಇವರು ಎಲ್ಲೂ ದುಡಿಮೆಗೂ ಹೋಗುವುದಿಲ್ಲ. ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವುದೇ ಇವರ ಕೆಲಸ.

ಮಕ್ಕಳ ಶಿಕ್ಷಣ ಸರಕಾರದಿಂದ ಉಚಿತವಾಗಿ ನಡೆಯುತ್ತಿದೆ. ಬಸ್ ಪಾಸಿಗಾಗಿ 750 ರೂಪಾಯಿ ವೆಚ್ಚವಾಗುತ್ತದೆ. ಪ್ರಸಾದ್ ಅವರಿಗೆ ಯಾವುದೇ ಸ್ವತ್ತುಗಳಿಲ್ಲ, ಹಾಗೆಯೇ ಯಾವುದೇ ಸಾಲ ಮಾಡಿಕೊಂಡಿಲ್ಲ. ಸರಳ ಜೀವನ ನಡೆಸುವ ಇವರ ಕುಟುಂಬದ ಖರ್ಚು ತಿಂಗಳಿಗೆ 8 ರಿಂದ 9 ಸಾವಿರವಾಗುತ್ತದೆ. ಅದರಲ್ಲಿ ಹಾಲು, ಮಾಂಸಕ್ಕಾಗಿ ರೂ.3000 ವೆಚ್ಚ ಮಾಡುತ್ತಾರೆ.

ಇವರಿಗೆ ಕೃಷಿ ಜಮೀನು ಯಾವುದೂ ಇಲ್ಲ. ಸಮಾಜದಲ್ಲಿನ ಆಗು- ಹೋಗುಗಳನ್ನು ತಿಳಿಯಲು ಪತ್ರಿಕೆ ಓದುತ್ತಾರೆ. ಮನರಂಜನೆಗಾಗಿ ಟಿ.ವಿ. ಸಂಪರ್ಕವಿದೆ.

ಸರಕಾರದಿಂದ ಉಚಿತ ಶಿಕ್ಷಣದ ಸವಲತ್ತು ಪಡೆದಿರುವ ಪ್ರಸಾದ್ ಕುಟುಂಬ ಈಗಿರುವ ಶಿಕ್ಷಣ ಪದ್ಧತಿ ಸಮಾಧಾನಕರವಾಗಿದೆ ಎಂಬ ಭಾವನೆ ಹೊಂದಿದ್ದಾರೆ. ಸರಕಾರದಿಂದ ಈ ಕುಟುಂಬ ಯಾವುದೇ ಅಪೇಕ್ಷೆಗಳನ್ನು ಹೊಂದಿಲ್ಲ. ಕುಟುಂಬದವರೆಲ್ಲ ಆರೋಗ್ಯವಂತರಾಗಿರಬೇಕೆಂಬುದು ಇವರ ಆಶಯ. ಬೇರೆ ಅಡೆತಡೆಗಳೇನು ಇಲ್ಲ. ಸ್ವಂತ ಮನೆ ಕಟ್ಟುವ ಆಶಯ ಹೊಂದಿದ್ದಾರೆ. ಇಷ್ಟು ಬಿಟ್ಟರೆ ಇವರಿಗೆ ಅನಪೇಕ್ಷಿತ ಖರ್ಚುಗಳು ಯಾವುದು ಇಲ್ಲ. ಮೊ: 7411197500

Leave a Reply

Your email address will not be published.