ಚೀನಾದಿಂದ ಭಾರತ ಕಲಿಯಬೇಕಾದ ಪಾಠ ಯಾವುದು?

ರಫ್ತು ವ್ಯಾಪಾರದ ಬೆಳವಣಿಗೆಯನ್ನು ತೀವ್ರಗೊಳಿಸಲು ಮತ್ತು ಕೋಟ್ಯಾಂತರ ಉದ್ಯೋಗಗಳನ್ನು ಸೃಷ್ಟಿಸಲು ಚೀನಾ ರಫ್ತು ಕ್ಷೇತ್ರದಲ್ಲಿ ಅನುಸರಿಸುತ್ತಿರುವ ಮಾದರಿಯನ್ನು ಅಳವಡಿಸಿಕೊಳ್ಳುವುದೊಂದೆ ಭಾರತಕ್ಕಿರುವ ಏಕೈಕ ಮಾರ್ಗ. ಹೀಗೆಂದು ಕಳೆದ ಜನವರಿ ಕೊನೆಯಲ್ಲಿ ಬಿಡುಗಡೆಗೊಳಿಸಿದ 2019-20ರ ಭಾರತ ಸರ್ಕಾರದ ಆರ್ಥಿಕ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ.

ಪ್ರಿಯ ಓದುಗರೆ,

ಸಾವಿನ ಹಾಸಿಗೆಯಲ್ಲಿ ಮಲಗಿದ್ದ ವಾಲ್ಟೆರ್‌ನನ್ನು ಪುರೋಹಿತನೊಬ್ಬ ‘ನೀನು ಈಗ ಸೈತಾನನನ್ನು ತಿರಸ್ಕರಿಸುತ್ತೀಯಾ’ ಎಂದು ಕೇಳಿದಾಗ ಆತ ‘ಈಗ, ಇದೀಗ, ನನ್ನ ಹಿತೈಷಿಯೇ, ಇದು ಶತ್ರುಗಳನ್ನು ಮಾಡಿಕೊಳ್ಳುವ ಸಮಯವಲ್ಲ’ ಎಂದನAತೆ.

ಭಾರತ ಮತ್ತು ಚೀನಾ ನಡುವಣ ಗಡಿ ವಿವಾದ ಹೊಸದೇನಲ್ಲ. ಆದರೆ 1960ರಲ್ಲಿ ಜಾಗತಿಕವಾಗಿ ಎರಡೂ ಆರ್ಥಿಕತೆಗಳು ಕನಿಷ್ಟತಮವಾಗಿದ್ದವು. ಆದರೆ ಇಂದು ಸ್ಥಿತಿಗತಿಗಳು ಸಂಪೂರ್ಣವಾಗಿ ಭಿನ್ನವಾಗಿವೆ. ಚೀನಾ ಮತ್ತು ಭಾರತ ದೇಶಗಳ 270 ಕೋಟಿ ಜನಸಂಖ್ಯೆಯು ಭೂಗ್ರಹದ ಒಟ್ಟು ಜನಸಂಖ್ಯೆಯಲ್ಲಿ ಶೇ. 40 ರಷ್ಟಾಗುತ್ತದೆ. ಇಷ್ಟು ಮಾತ್ರವಲ್ಲ, ಇವು ಜಗತ್ತಿನ ಎರಡು ಅತಿದೊಡ್ಡ ಆರ್ಥಿಕತೆಗಳಾಗಿವೆ.

ಆದರೆ ಜಗತ್ತಿನ ಮುಂದುವರಿದ ದೇಶಗಳ ತಲಾ ಜಿಡಿಪಿಗೆ ಹೋಲಿಸಿದರೆ ಸಾಪೇಕ್ಷವಾಗಿ ಇವೆರಡೂ ತಲಾ ಜಿಡಿಪಿಯಲ್ಲಿ ‘ಬಡದೇಶ’ಗಳಾಗಿವೆ. ಉದಾ: ಅಮೆರಿಕೆಯ ತಲಾ ಜಿಡಿಪಿಯು 2018ರಲ್ಲಿ 64659 ಡಾಲರಿನಷ್ಟಾಗಿದ್ದರೆ (ರೂ.48.49 ಲಕ್ಷ) ಸ್ವೀಡನ್ನಿನ ತಲಾ ಜಿಡಿಪಿಯು 57866 ಡಾಲರಿನಷ್ಟಿದೆ (ರೂ.43.40 ಲಕ್ಷ). ಇವುಗಳಿಗೆ ಹೋಲಿಸಿದರೆ ಚೀನಾದ್ದು 7752 ಡಾಲರ್ (ರೂ.5.81 ಲಕ್ಷ) ಮತ್ತು ಭಾರತದ್ದು 2100 ಡಾಲರಿನಷ್ಟು (ರೂ.1.57 ಲಕ್ಷ) ಕೆಳಮಟ್ಟದಲ್ಲಿದೆ (ಡಾಲರಿನ ಸದ್ಯದ ವಿನಿಮಯ ದರ ರೂ.75 ಎಂದು ಲೆಕ್ಕ ಹಾಕಲಾಗಿದೆ). ಇವೆರಡರಲ್ಲಿ ಭಾರತವು ಕನಿಷ್ಟ ಸ್ಥಾನದಲ್ಲಿದೆ. ಚೀನಾದ ತಲಾ ಜಿಡಿಪಿಯು ಭಾರತದ ತಲಾ ಜಿಡಿಪಿಯ ನಾಲ್ಕುಪಟ್ಟಿದ್ದರೆ ಅಮೆರಿಕ ಮತ್ತು ಸ್ವೀಡನ್ನಿನ ತಲಾ ಜಿಡಿಪಿಗಳು ಅನುಕ್ರಮವಾಗಿ ಭಾರತದಕ್ಕಿಂತ 31 ಮತ್ತು 27 ಪಟ್ಟು ಅಧಿಕವಾಗಿವೆ.

ಇದು ಸರಾಸರಿ ಭಾರತೀಯನೊಬ್ಬ ಸರಾಸರಿ ಚೀನೀಯನಿಗಿಂತ ಅಥವಾ ಅಮೇರಿಕನ್ನನಿಗಿಂತ ಎಷ್ಟು ತಳದಲ್ಲಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಈ ಕಾರಣಕ್ಕೆ ಮುಂದುವರಿದ ದೇಶಗಳ ಜೀವನಶೈಲಿಯ ಮಟ್ಟವನ್ನು ಸಾಧಿಸಿಕೊಳ್ಳಬೇಕಾದರೆ ಭಾರತವು ಸತತವಾಗಿ ದಶಕಗಳ ಕಾಲ ತೀವ್ರಗತಿಯಲ್ಲಿ ಜಿಡಿಪಿ ಬೆಳೆವಣಿಗೆಯನ್ನು ಸಾಧಿಸಿಕೊಳ್ಳಬೇಕಾಗುತ್ತದೆ ಎಂದು ಅರ್ಥಶಾಸ್ತಜ್ಞರು ಮತ್ತೆ ಮತ್ತೆ ಹೇಳುತ್ತಿದ್ದಾರೆ. 

ಈ ಸಂದರ್ಭದಲ್ಲಿ ಏಷ್ಯಾದ ಎರಡು ಬೃಹತ್ ದೇಶಗಳ ಗಡಿವಿವಾದವು ಆರ್ಥಿಕ ರಂಗವನ್ನು ಪ್ರವೇಶಿಸಿರುವುದು ಅಕಾಲಿಕವಾಗಿದೆ. ಚೀನಾದ ಆಕ್ರಮಣದಿಂದ ಘಾಸಿಗೊಂಡು ಅನೇಕ ಭಾರತೀಯರು ಮತ್ತು ಸರ್ಕಾರದ ಉನ್ನತಸ್ಥಾನಗಳಲ್ಲಿರುವ ಅನೇಕ ಅಧಿಕಾರಿಗಳು ಚೀನಿ ಸರಕುಗಳ ಆಮದನ್ನು ಬಹಿಷ್ಕರಿಸುವ ಪರವಾಗಿ ವಾದ ಮಾಡುತ್ತಿದ್ದಾರೆ. ಆದರೆ, ಅನೇಕ ಕಾರಣಗಳಿಂದಾಗಿ ಚೀನವನ್ನು ಗುರಿಯನ್ನಾಗಿ ಮಾಡಿಕೊಳ್ಳುವ ಕಾರ್ಯತಂತ್ರವು ಭಾರತದ ಆರ್ಥಿಕತೆಗೆ ಹೆಚ್ಚು ಧಕ್ಕೆಯುಂಟು ಮಾಡುತ್ತದೆ.

ಜನರ ಭಾವನಾತ್ಮಕ ನಿಲುವಿಗೆ ವಿರುದ್ಧವಾಗಿ ಭಾರತವು ಚೀನಾದಿಂದ ಬೃಹತ್ ಪ್ರಮಾಣದಲ್ಲಿ ಮಧ್ಯವರ್ತಿ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದನ್ನು ನಿಲ್ಲಿಸಿದರೆ ನಮ್ಮ ಸರಕು-ಸೇವೆಗಳನ್ನು ತಯಾರಿಸುವ ಉತ್ಪಾದನಾ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ದಿ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆ ವರದಿ ಮಾಡಿರುವಂತೆ ವಾಹನ ತಯಾರಿಕೆ, ಔಷಧಿ ಕಾರ್ಖಾನೆಗಳು, ಎಲೆಕ್ಟಾನಿಕ್ಸ್, ಟೆಲಿಕಮ್ಯುನಿಕೇಶನ್ ಮುಂತಾದವು ಆಮದು-ಅವಲಂಬಿತ ಉದ್ದಿಮೆಗಳಾಗಿವೆ. ಇವುಗಳ ಆಮದುಗಳನ್ನು ತಡೆಯುವ ಕ್ರಮಗಳು ನಮಗೆ ತಿರುಗು ಬಾಣವಾಗಬಹುದು. ಏಕೆಂದರೆ ಇದು ಭಾರತೀಯ ತಯಾರಿಕಾ ರಂಗದ ಒಟ್ಟಾರೆ ಪೈಪೊಟಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿ, ತದನಂತರ ನಮ್ಮ ರಫ್ತು ಕ್ಷೇತ್ರದಲ್ಲಿನ ಪೈಪೋಟಿ ಸಾಮರ್ಥ್ಯವನ್ನು ಕುಂಟಿತಗೊಳಿಸಬಹುದು.

ಅAದರೆ ಭಾರತವು ಚೀನಾ ದೇಶದ ಸರಕುಗಳ ‘ಆಮದಿನ ದಾಸ’ ಆಗಿರಬೇಕೆ ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ. ಇದಕ್ಕೆ ಸಮಾಧಾನಕರ ಉತ್ತರ ‘ಇಲ್ಲ’. ಆದರೆ ಚೀನೀ ಸರಕುಗಳ ಮೇಲಿನ ಅಥವಾ ಇತರೆ ದೇಶಗಳ ಮೇಲಿನ ಆಮದು-ಅವಲಂಬನೆಯಿAದ ದೇಶ ಹೊರಬರಬೇಕಾದರೆ ನೀತಿಗಳನ್ನು ರೂಪಿಸುವವರು ಮತ್ತು ವ್ಯಾಪಾರಿ ಧುರೀಣರು ನಿಜವಾಗಿ ಬಹಳ ಕಷ್ಟಪಡಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ ವ್ಯಾಪಾರವನ್ನು ಬಹಿಷ್ಕರಿಸುವುದು ಅಥವಾ ಆಮದುಗಳ ಮೇಲೆ ಅತಿಯಾದ ಸುಂಕ ಹೇರುವುದು ಸೋಮಾರಿತನದ ಕ್ರಮವಾಗುತ್ತದೆ ವಿನಾ ಪರಿಹಾರವಾಗಲಾರದು.

ಮೊಟ್ಟಮೊದಲನೆಯದಾಗಿ ನಾವು ತಿಳಿದುಕೊಳ್ಳಬೇಕಾದುದು ಜಗತ್ತಿನ ಸರಕು-ಸೇವೆಗಳ ವ್ಯಾಪಾರದ ಪ್ರಮಾಣದಲ್ಲಿ ಭಾರತದ ಪಾಲು ಅತ್ಯಂತ ಕನಿಷ್ಠವಾಗಿದೆ. ಅದರಲ್ಲೂ, ಸರಕುಗಳ ವ್ಯಾಪಾರದಲ್ಲಿ ನಮ್ಮ ಪೈಪೋಟಿ ಸಾಮರ್ಥ್ಯ ಅತ್ಯಂತ ಕೆಳಮಟ್ಟದಲ್ಲಿದೆ. ಇದು ವಾಸ್ತವ ಸ್ಥಿತಿ. ಈ ನಿಜಸ್ಥಿತಿಯನ್ನು ಸುಮ್ಮನೆ ಒಪ್ಪಿಕೊಳ್ಳಲಾಗದೆ ನಮ್ಮ ರಫ್ತು ವ್ಯಾಪಾರದ ಕುಸಿತಕ್ಕೆ ಕಾರಣವನ್ನು ನಮ್ಮ ನೀತಿ ಕರ್ತೃಗಳು ಜಾಗತಿಕ ವ್ಯಾಪಾರದ ಬೆಳವಣಿಗೆಯಲ್ಲಿನ ಕುಸಿತದ ಮೇಲೆ ಆರೋಪಿಸುತ್ತಿದ್ದಾರೆ. ಹಾಂಗ್‌ಕಾAಗ್ ಶ್ಯಾಂಗೈ ಬ್ಯಾಂಕಿAಗ್ ಕಾರ್ಪೋರೇಸನ್ (ಎಚ್‌ಎಸ್‌ಬಿಸಿ) ಸಂಸ್ಥೆಯು 2016ರಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿನ ವಿಶ್ಲೇಷಣೆ ಪ್ರಕಾರ ನಮ್ಮ ರಫ್ತು ವ್ಯಾಪಾರದ ಮಂದಗತಿಗೆ ಜಾಗತಿಕ ವ್ಯಾಪಾರದಲ್ಲಿನ ಕುಸಿತವು ಶೇ. 33 ರಷ್ಟು ಕಾರಣವಾಗಿದ್ದರೆ ಉತ್ಪಾದನೆಗೆ ಆಂತರಿಕ ತೊಡಕುಗಳು ಶೇ. 50 ರಷ್ಟು ಕಾರಣಗಳಾಗಿವೆ. ಉಳಿದ ಶೇ. 17 ರಷ್ಟು ನಮ್ಮ ರೂಪಾಯಿಯ ವಿನಿಮಯ ದರದ ಉತ್ಪೆçÃಕ್ಷಿತ ಮೌಲ್ಯ ಕಾರಣವಾಗಿದೆ.

 

ಸೇವೆಗಳ ರಫ್ತು ಬಿಟ್ಟು ಕೇವಲ ಸರಕುಗಳ ರಫ್ತು ಮಾತ್ರ ತೆಗೆದುಕೊಂಡರೆ ಇದರ ರಫ್ತುವಿನಲ್ಲಿನ ಕುಸಿತಕ್ಕೆ ಆಂತರಿಕ ಕಾಲ್ತೊಡಕುಗಳು (ಮೂಲಸೌಕರ್ಯಗಳÀ ಕೊರತೆ, ವಿಶ್ವಾಸಾರ್ಹ ಇಂಧನ ಸರಬರಾಜು, ಯಂತ್ರೋಪಕರಣಗಳ ಸಾಗಣಿಕೆಯಲ್ಲಿ ಅನಗತ್ಯ ವಿಳಂಬ, ನಿಯಂತ್ರಣಾತ್ಮಕ ಕ್ರಮಗಳು, ಗುತ್ತಿಗೆಯನ್ನು ಜಾರಿಗೊಳಿಸುವ ಕ್ರಮಗಳಲ್ಲಿನ ಸಮಸ್ಯೆಗಳು ಇತ್ಯಾದಿ) ಶೇ. 60 ರಷ್ಟು ಕಾರಣಗಳಾಗಿವೆ,

ಜಾಗತಿಕ ಆರ್ಥಿಕ ಬೆಳವಣಿಗೆ ಅಥವಾ ಜಾಗತಿಕ ಬೇಡಿಕೆ ಬಗ್ಗೆ ಒಂದು ದೇಶವು ಏಕಾಂಗಿಯಾಗಿ ಏನನ್ನು ಮಾಡಲು ಸಾಧ್ಯವಿಲ್ಲ. ಈ ಮಾತು ಎಲ್ಲ ದೇಶಗಳಿಗೂ ಅನ್ವಯವಾಗುತ್ತದೆ. ಅಂದಮೇಲೆ ನಮ್ಮ ಮುಂದಿರುವ ಸಮಸ್ಯೆಗಳು ಆಂತರಿಕ ಕಾಲ್ತೊಡಕುಗಳು ಮತ್ತು ರೂಪಾಯಿಯ ವಿನಿಮಯ ದರ.

ರೂಪಾಯಿಯ ವಿನಿಮಯ ದರದ ಬಗ್ಗೆ ಇನ್ನೂ ಯಾವುದು ಸ್ಪಷ್ಟ ಚಿತ್ರ ದೊರೆಯುತ್ತಿಲ್ಲ. ಕೆಲವರ ವಾದದ ಪ್ರಕಾರ ರೂಪಾಯಿಯ ವಿನಿಮಯ ದರವು ಸೋವಿಯಾದರೆ ನಮ್ಮ ಸರಕುಗಳ ಬೆಲೆಯು ಕಡಿಮೆಯಾಗುತ್ತದೆ ಮತ್ತು ಇದರಿಂದ ನಮ್ಮ ರಫ್ತು ವ್ಯಾಪಾರದ ಪೈಪೋಟಿ ಸಾಮರ್ಥ್ಯವು ಉತ್ತಮವಾಗುತ್ತದೆ. ಇದು ಸರಳವಾದ ಮತ್ತು ಗೊಂದಲಕ್ಕೆ ಅವಕಾಶವಿಲ್ಲದ ನಿಲುವಾಗಿದೆ. ಮತ್ತೊಂದು ಗುಂಪಿನ ವಾದದ ಪ್ರಕಾರ ರೂಪಾಯಿಯ ವಿನಿಮಯ ದರವು ದುಬಾರಿಯಾದರೆ ಮಧ್ಯವರ್ತಿ ಸರಕುಗಳನ್ನು ಆಮದು ಮಾಡಿಕೊಳ್ಳುವುದು ಸೋವಿಯಾಗುತ್ತದೆ. ಇದರ ಪರಿಣಾಮವಾಗಿ ರಫ್ತು ವ್ಯಾಪಾರದ ಪೈಪೋಟಿ ಸಾಮರ್ಥ್ಯವು ಉತ್ತಮವಾಗುತ್ತದೆ. ಹೀಗೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ. ಆದರೆ ನಮ್ಮ ರಪ್ತು ವ್ಯಾಪಾರದ ಕುಸಿತಕ್ಕೆ ಕಾರಣವಾಗಿರುವ ಆಂತರಿಕ ಕಾಲ್ತೊಡಕುಗಳ ಪಾತ್ರದ ಬಗ್ಗೆ ಒಮ್ಮತಾಭಿಪ್ರಾಯವಿದೆ. ಪ್ರಾಂಜುಲ್ ಭಂಡಾರಿ ಅವರ ವಿಶ್ಲೇಷಣೆ ಪ್ರಕಾರ ವಲಯ-ನಿರ್ದಿಷ್ಟ ಸಂಗತಿಗಳು ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉದಾ: ಭಾರತದ ಜವಳಿ ರಫ್ತು ವ್ಯಾಪಾರವನ್ನು ಪುನಶ್ಚೇತನಗೊಳಿಸಬೇಕಾದರೆ ಹತ್ತಿಯ ಇಳುವರಿಯನ್ನು ಹೆಚ್ಚಿಸಬೇಕು (ಇಂದು ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡರೆ ಇದು ಸಾಧ್ಯ: ಬಿಟಿ ಹತ್ತಿ). ವ್ಯಾಪಾರ ಒಪ್ಪÀಂದಗಳ (ದ್ವಿರಾಷ್ಟಿçÃಯ, ಬಹುರಾಷ್ಟಿçÃಯ ಮತ್ತು ವಿವಿಧ ಬಗೆಯ ದೇಶಗಳ ಜೊತೆಯಲ್ಲಿನ) ಮೂಲಕ ವಿದೇಶಗಳಲ್ಲಿ ನಮ್ಮ ರಫ್ತು ಎದುರಿಸುತ್ತ್ತಿರುವ ಅಧಿಕ ಸುಂಕವನ್ನು ಕಡಿಮೆ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾದರೆ ನಮ್ಮ ಜವಳಿ ಹಾಗೂ ಎಂಜಿನಿಯರಿAಗ್ ಸರಕುಗಳ ರಫ್ತುಗಳನ್ನು ತೀವ್ರವಾಗಿ ಹೆಚ್ಚಿಸಬಹುದು. 

ರಫ್ತು ವ್ಯಾಪಾರವನ್ನು ತೀವ್ರ ಹೆಚ್ಚಿಸಬೇಕಾದರೆ ವಲಯ-ನಿರ್ದಿಷ್ಟ ಕಾರ್ಯತಂತ್ರವನ್ನು ಖಚಿತವಾಗಿ ರೂಪಿಸಬೇಕು. ಇದಕ್ಕಿರುವ ಏಕೈಕ ಮಾರ್ಗವೆಂದರೆ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರÀ ಕೃಷ್ಣಮೂರ್ತಿ ವಿ.ಸುಬ್ರಮಣಿಯನ್ ಅವರು 2020ರ ಜನವರಿ ಕೊನೆಯಲ್ಲಿ ಬಿಡುಗಡೆಗೊಳಿಸಿರುವÀ ಆರ್ಥಿಕ ಸಮೀಕ್ಷೆಯಲ್ಲಿ ನೀಡಿರುವ ಸಲಹೆಗಳನ್ನು ಗಮನಿಸುವುದೇ ಆಗಿದೆ. ಈ ಸಮೀಕ್ಷೆಯ ಅಧ್ಯಾಯ 5ರಲ್ಲಿ ಇದರ ಬಗ್ಗೆ ವಿವರವಾಗಿ ಪರಿಶೀಲಿಸಲಾಗಿದೆ. ಈ ಸಮೀಕ್ಷೆಯಲ್ಲಿ ಎರಡು ಸಂಗತಿಗಳ ಬಗ್ಗೆ ಚರ್ಚೆ ಮಾಡಲಾಗಿದೆ.

ಮೊದಲನೆಯದಾಗಿ, ವ್ಯಾಪಾರ ಕ್ಷೇತ್ರಕ್ಕೆ ಸಂಬAಧಿಸಿದAತೆ ಭಾರತವು ಅನಗತ್ಯವಾಗಿ ಅಭದ್ರತೆಯ ಭಾವನೆಗೆ ಒಳಗಾಗಬಾರದು. ಹಾಗೇನಾದರೂ ಅಭದ್ರತೆಯ ಭಾವನೆ ಉಂಟಾದರೆ ವ್ಯಾಪಾರವು ಒದಗಿಸುವ ಅವಕಾಶವನ್ನು ಕಳೆದುಕೊಂಡAತಾಗುತ್ತದೆ. ಈ ಅಭದ್ರತೆಯನ್ನು ಸೂಕ್ಷö್ಮವಾಗಿ ಸಮೀಕ್ಷೆಯಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಇದರಲ್ಲಿ ಇತ್ತೀಚಿಗಿನ ವರ್ಷಗಳಲ್ಲಿನ ವ್ಯಾಪಾರ ಒಪ್ಪಂದದಿAದ ಭಾರತವು ಹೆಚ್ಚು ಗಳಿಸಿಕೊಂಡಿದೆ ಎಂಬುದು ಕಂಡುಬAದಿದೆ. ಉದಾ: ಪಾಲುದಾರ ರಾಷ್ಟçಗಳ ಜೊತೆಗಿನ ತಯಾರಿಕಾ ಸರಕುಗಳ ವ್ಯಾಪಾರದಲ್ಲಿ ಭಾರತವು ಶೇ. 0.7 ರಷ್ಡು ವ್ಯಾಪಾರ ಆಧಿಕ್ಯವನ್ನು ಸಾಧಿಸಿಕೊಂಡಿದ್ದರೆ ಸಾಮಾನ್ಯ ಸರಕುಗಳ ವ್ಯಾಪಾರದಲ್ಲಿ ಶೇ. 2.3 ರಷ್ಟು ವ್ಯಾಪಾರಿ ಆಧಿಕ್ಯವನ್ನು ಗಳಿಸಿಕೊಂಡಿದೆ. 

ಎರಡನೆÀಯದಾಗಿ, ಸಮೀಕ್ಷೆಯಲ್ಲಿ ಹೇಳಿರುವುದೇನೆಂದರೆ, ಪ್ರಸಕ್ತ ಅಂತಾರಾಷ್ಟಿಯ ವಾತಾವರಣವು ಚೀನಾ ರೀತಿಯ ಶ್ರಮಸಾಂದ್ರ ಮತ್ತು ರಫ್ತು ಚಾಲಿತ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದಕ್ಕೆ ಅದ್ಭುತ ಅವಕಾಶ ಒದಗಿಸಿದೆ. ಈ ಮೂಲಕ ಭಾರತದ ಬೃಹತ್ ಸಂಖ್ಯೆಯಲ್ಲಿರುವ ಯುವಕರಿಗೆ ಅಸಾಮಾನ್ಯ ರೀತಿಯಲ್ಲಿ ಉದ್ಯೋಗಗಳನ್ನು ನೀಡಬಹುದು.

ಸಮೀಕ್ಷೆಯ ಪ್ರಕಾರ ‘ಜಾಗತಿಕ ಮಾರುಕಟ್ಟೆಗಾಗಿ ಭಾರತದಲ್ಲಿಯೇ ಜೋಡಿಸಿ’ ಎಂಬ ಕಾರ್ಯತಂತ್ರವನ್ನು ‘ಭಾರತದಲ್ಲಿ ತಯಾರಿಸಿ’ ಎಂಬ ಕಾರ್ಯತಂತ್ರದ ಜೊತೆ ವಿಲೀನಗೊಳಿಸಿದರೆ ಭಾರತವು 2025 ರಷ್ಟೊತ್ತಿಗೆ 4 ಕೋಟಿ ಮತ್ತು 2030ರಷ್ಟೊತ್ತಿಗೆ 8 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬಹುದು. ಚೀನಾದ ಮೇಲ್ಪಂಕ್ತಿಯಲ್ಲಿ ಭಾರತವು ನಡೆಯಬೇಕು ಎಂಬ ಸಂಗತಿಯನ್ನು ಸಮೀಕ್ಷೆಯು ಆದ್ಯತೆಯ ಸಂಗತಿಯಾಗಿ ಗುರುತಿಸಿದೆ. ಚೀನಾ ರಫ್ತು ಕ್ಷೇತ್ರದಲ್ಲಿ ಸಾಧಿಸಿಕೊಂಡಿರುವ ಮಹತ್ವದ ಸಾಧನೆಯ (ಇದಕ್ಕೆ ಸಮಸಮನಾಗಿ ಭಾರತವು ಸಾಧನೆಯಲ್ಲಿ ಹಿಂದಿರುವುದರ) ಚಾಲಕ ಶಕ್ತಿಯೆಂದರೆ ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡಿರುವ ಬೃಹತ್ ಪ್ರಮಾಣದಲ್ಲಿ ನಡೆಸುವ ಶ್ರಮಸಾಂದ್ರ ಚಟುವಟಿಕೆಗಳಾಗಿವೆ. ಬಹಳ ಮುಖ್ಯವಾಗಿ ‘ನೆಟ್‌ವರ್ಕಿಂಗ್ ಉತ್ಪನ್ನಗಳು’. ಇಲ್ಲಿ ಉತ್ಪಾದನೆಯು ಬಹುರಾಷ್ಟಿಯ ಕಂಪನಿಗಳ ಮೂಲಕ ಜಾಗತಿಕ ಮೌಲ್ಯ ಸೇರ್ಪಡೆ ಸರಪಳಿಯಲ್ಲಿ ನಡೆಯುತ್ತದೆ.

ಭಾರತವು ತನ್ನ ಭೌಗೋಳಿಕ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳಬೇಕು. ಚೀನಾವನ್ನು ಹಿಮ್ಮೆಟ್ಟಿಸುವುದಕ್ಕೆ ಏನೆಲ್ಲ ಮಾಡಬಹುದೋ ಅವೆಲ್ಲವನ್ನು ಭಾರತ ಕೈಗೊಳ್ಳಬೇಕು. ಆದರೆ ಇದನ್ನು ಅತಿಯಾಗಿ ರಂಚಿಸುವುದು ಬೇಡ. ಸರಳೀಕೃತ ಕ್ರಮಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ‘ನೀರು ಎಲ್ಲಿ ಹರಿಯುತ್ತದೋ ಅಲ್ಲಿನ ಭೌಗೋಳಿಕ ಸ್ವರೂಪಕ್ಕೆ ತಕ್ಕಂತೆ ಅದು ತನ್ನ ರೂಪವನ್ನು ಪಡೆದುಕೊಳ್ಳುತ್ತದೆ’ ಮತ್ತು ‘ಸೈನಿಕರು ತಮ್ಮ ಶತ್ರುವನ್ನು ಎದುರಿಸಿ ವಿಜಯ ಸಾಧಿಸಿಕೊಳ್ಳಲು ತಮ್ಮದೇ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತಾರೆ’ (ಸನ್ ಟಿಜೂ).

ಇದೇ ರೀತಿಯಲ್ಲಿ ನಾವು ವ್ಯಾಪಾರ ನೀತಿಯನ್ನು ಬಹಳ ಎಚ್ಚರಿಕೆಯಿಂದ ಮತ್ತು ಸನ್ನಿವೇಶದ ತಿಳಿವಳಿಕೆಯಿಂದ ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.

ಸುರಕ್ಷಿವಾಗಿರಿ!

ನಿಮ್ಮ

ಉದಿತ್

 

*ಲೇಖಕರು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಉಪ ಸಹಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಮೂಲ: ದ ಇಂಡಿಯನ್ ಎಕ್ಸ್ಪ್ರೆಸ್

ಅನುವಾದ: ಡಾ.ಟಿ.ಆರ್.ಚಂದ್ರಶೇಖರ

Leave a Reply

Your email address will not be published.