ಜಾತಿಯ ಎಂಟು ಆಧಾರಸ್ತoಭಗಳು

ಇಸಾಬೆಲ್ ವಿಲ್ಕರ್ಸನ್

ಇಸಾಬೆಲ್ ವಿಲ್ಕರ್ಸನ್ ಅವರು ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಗಳಿಸಿರುವ ಪತ್ರಕರ್ತೆ ಮತ್ತು ಬರಹಗಾರ್ತಿ. ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಅಮೆರಿಕಾದ ಹಲವಾರು ಪ್ರಮುಖ ವೃತ್ತಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಇಸಾಬೆಲ್ ಎಮೊರಿ, ಪ್ರಿನ್ಸಟನ್ ಮತ್ತು ಷಿಕಾಗೊ ನಗರದ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮದ ಪ್ರಾಧ್ಯಾಪಕರಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ.

ಈ ಲೇಖಕಿ 2020ರಲ್ಲಿ ಪ್ರಕಟಿಸಿದ ‘ಜಾತಿ: ನಮ್ಮ ಅಸಮಾಧಾನದ ಮೂಲಗಳು’ ಪುಸ್ತಕದಲ್ಲಿ, ಅಮೆರಿಕದ ವರ್ಣಭೇದ ನೀತಿಯನ್ನು ಒಂದು ಹೊಸ ದೃಷ್ಟಿಕೋನದಲ್ಲಿ ಅದ್ಭುತವಾಗಿ ಓದುಗರಿಗೆ ನೀಡುತ್ತಾರೆ. ಅವರ ಆಳವಾದ ಸಂಶೋಧನೆ ಮತ್ತು ನೈಜ ಘಟನೆಗಳ ನಿರೂಪಣೆಯು, ಅಮೆರಿಕಾ ತನ್ನ ಇತಿಹಾಸದುದ್ದಕ್ಕೂ ಆಫ್ರಿಕಾ ಮೂಲದ ಕಪ್ಪುವರ್ಣಿಯರನ್ನು ಬಿಳಿಯರಿಂದ ಶ್ರೇಣೀಕೃತವಾಗಿ ಬೇರ್ಪಡಿಸಿರುವುದನ್ನು ವಿಸ್ತೃತವಾಗಿ ತೋರಿಸುತ್ತದೆ. ವರ್ಣಭೇದ ನೀತಿಯ Ä, ಭಾರತದ ಜಾತಿವ್ಯವಸ್ಥೆ ಮತ್ತು ಜರ್ಮನಿಯಲ್ಲಿ ನಾಜಿ ಆಡಳಿತ ಯಹೂದಿಗಳನ್ನು ನಡೆಸಿಕೊಂಡ ರೀತಿಗೆ ಹೇಗೆ ಹೋಲುತ್ತದೆ ಎನ್ನುವುದನ್ನು ಚೆನ್ನಾಗಿ ನಿರೂಪಿಸಿದ್ದಾರೆ.

ಈ ಪುಸ್ತಕದ ಮೂರನೇ ಭಾಗದ (‘ಜಾತಿಯ ಎಂಟು ಆಧಾರಸ್ತಂಭಗಳು’) ಭಾವಾನುವಾದ ವನ್ನು ಕನ್ನಡ ಓದುಗರಿಗಾಗಿ ನೀಡಲಾಗಿದೆ.

 

ಇಲ್ಲಿ ಪ್ರಸ್ತಾಪಿಸಿರುವ ಜಾತಿವ್ಯವಸ್ಥೆಯ ಎಂಟು ಆಧಾರಸ್ತಂಭಗಳು ಐತಿಹಾಸಿಕವಾಗಿ ಜನರ ಮನದಲ್ಲಿ ಬೇರೂರಿವೆ. ಜೊತೆಗೆ, ಇದರೊಳಗಿರುವ ಕ್ರೌರ್ಯ ಮತ್ತು ಅಸಮಾನತೆಯನ್ನು ಜನರು ಪ್ರಕೃತಿಯ ನಿಯಮವೆಂದು ಸಹಜವಾಗಿ ಸ್ವೀಕರಿಸಿರುವುದರಿಂದ ಅವುಗಳ ಕುರಿತಾದ ತಪ್ಪು ಗ್ರಹಿಕೆಗಳ ಚರ್ಚೆ ಇಲ್ಲಿ ಅಪ್ರಸ್ತುತ. ನಾನು ಗಮನಿಸಿದಂತೆ ಅಮೆರಿಕ, ಭಾರತ ಅಥವಾ ಜರ್ಮನಿಯಲ್ಲಿ ಜಾತಿವ್ಯವಸ್ಥೆಯನ್ನು ರೂಪಿಸಿರುವ ತತ್ವಗಳು ಸಾಂಸ್ಕೃತಿಕವಾಗಿ ಆಳದಿಂದ ಬೇರೂರಿದವುಗಳು.

ಆಧಾರಸ್ತಂಭ ಒಂದು:

ದೈವಿಕ ಇಚ್ಛೆ ಮತ್ತು ಪ್ರಕೃತಿ ನಿಯಮಗಳು

ಪ್ರಾಚೀನ ಹಿಂದೂ ಧರ್ಮಗ್ರಂಥದ ಪ್ರಕಾರ, ಮನುಷ್ಯನ ಅರಿವಿನ ಮೊದಲ ದಿನಗಳಲ್ಲಿ, ಕೆಲವು ಮಹಾಪುರುಷರು, ಜ್ಞಾನ ಕೇಂದ್ರವೆನಿಸಿಕೊAಡಿದ್ದ ಮನುವಿನಲ್ಲಿಗೆ ಬಂದು, ಮಾನವ ಸಮಾಜದ ವಿಂಗಡಣೆಯ ತರ್ಕವನ್ನು ವಿವರಿಸಿಯೆಂದು ಬಿನ್ನವಿಸಿಕೊಂಡರು. ಆಗ, ಮನು ಬ್ರಹ್ಮಾಂಡದ ಮೂಲ ಅವಸ್ಥೆಯಿಂದ ವಿವರಿಸುತ್ತಾ, ಸೃಷ್ಟಿಕರ್ತ ಬ್ರಹ್ಮ ಮೊದಲು ಭೂಮಿಯಲ್ಲಿ ನೀರನ್ನು ಸೃಷ್ಟಿಸಿದ ಎನ್ನುತ್ತಾನೆ.

ನಂತರ ಮನುಷ್ಯ ಸೃಷ್ಟಿಯ ಕುರಿತು ಮನು ಹೀಗೆ ಹೇಳುತ್ತಾನೆ, ‘ಬ್ರಹ್ಮ ತನ್ನ ಬಾಯಿಯಿಂದ ಬ್ರಾಹ್ಮಣ, ತೋಳುಗಳಿಂದ ಕ್ಷತ್ರಿಯ, ತೊಡೆಯಿಂದ ವೈಶ್ಯ ಮತ್ತು ಪಾದಗಳಿಂದ ಶೂದ್ರನನ್ನು ಸೃಷ್ಟಿಸಿದ. ಹೀಗೆ, ಅವರವರ ಹುಟ್ಟಿನ ಮೂಲಕ್ಕೆ ಸಮನಾದ ಸಾಮಾಜಿಕ ಸ್ಥಾನ ಅವರಿಗೆ ಕಲ್ಪಿಸಲಾಗಿದೆ. ಪಾದಗಳಿಂದ ಹುಟ್ಟಿದ ಶೂದ್ರ ದೈಹಿಕ ಶ್ರಮವಹಿಸಿ ಸಮಾಜದ ಭಾರ ಹೊರುತ್ತಾನೆ. ತೊಡೆಗಳಿಂದ ಹುಟ್ಟಿದ ವೈಶ್ಯ ವ್ಯಾಪಾರ ಮಾಡುತ್ತಾನೆ. ತೋಳುಗಳಿಂದ ಹುಟ್ಟಿದ ಕ್ಷತ್ರಿಯ ಆಡಳಿತ ನಡೆಸಿ ರಕ್ಷಣೆ ನೀಡುತ್ತಾನೆ. ವಿಶೇಷವಾಗಿ, ತಲೆಯಿಂದ ಹುಟ್ಟಿದ ಬ್ರಾಹ್ಮಣ ಬುದ್ಧಿಶಕ್ತಿ ಉಪಯೋಗಿಸಿ ಸಾಧು, ತತ್ವಜ್ಞ ಮತ್ತು ಅರ್ಚಕನಾಗಿ ದೇವರಿಗೆ ಅತ್ಯಂತ ನಿಕಟವರ್ತಿಯಾಗುತ್ತಾನೆ.

ಬ್ರಹ್ಮನ ಇಚ್ಛೆಯಂತೆ ಬ್ರಾಹ್ಮಣ ಮನುಷ್ಯರಲ್ಲಿ ಶ್ರೇಷ್ಠನೆನಿಸಿಕೊಳ್ಳುತ್ತಾನೆ. ಹಾಗಾಗಿ, ಬ್ರಾಹ್ಮಣ ಸಂತುಷ್ಟನಾಗಿದ್ದರೆ, ಉಳಿದವರು ಕ್ಷೇಮವಾಗಿದ್ದಂತೆ. ಈ ನಾಲ್ಕು ಜಾತಿಗಳನ್ನು ಹೊರತುಪಡಿಸಿ, ಇನ್ನೊಂದು ವರ್ಗವಿದೆ. ಅವರು ಶೂದ್ರರಿಗಿಂತಲೂ ಕೆಳಗಿನ ಸ್ಥಾನ ಪಡೆಯುತ್ತಾರೆ. `ಅವರು ಹಿಂದಿನ ಜನ್ಮದ ಪಾಪವನ್ನು ಕಳೆದುಕೊಳ್ಳಲು ಮನುಷ್ಯ ರೂಪದಲ್ಲಿ ಹುಟ್ಟಿರುತ್ತಾರೆ. ಉಳಿದವರು ಅವರನ್ನು ಹತ್ತಿರ ಸೇರಿಸಿಕೊಳ್ಳುವಂತಿಲ್ಲ ಅಥವಾ ಮುಟ್ಟುವಂತಿಲ್ಲ. ಅವರ ನೆರಳೂ ಅಪವಿತ್ರವಾಗಿದೆ.’ ಅವರನ್ನು ಭಾರತದಲ್ಲಿ ಅಸ್ಪೃಶ್ಯರು ಅಥವಾ ದಲಿತರೆಂದು ಕರೆಯುತ್ತಾರೆ.

ಅದೇ ರೀತಿ ಬೈಬಲ್ ಪ್ರಕಾರ, ಭೂಮಿಯ ಮೇಲಿರುವ ಸಮಸ್ತ ಮನುಷ್ಯರು ಮೊದಲ ಮಹಾಪ್ರಳಯದಲ್ಲಿ ಬದುಕುಳಿದ ದೇವಮಾನವ ನೋಹಾನ ಮೂರು ಮಕ್ಕಳಾದ ಶೆಮ್, ಹ್ಯಾಮ್ ಮತ್ತು ಜಫೆತ್ ರ ವಂಶಸ್ಥರು. ಒಂದು ದಿನ, ಮದ್ಯಪಾನದ ಅಮಲಲ್ಲಿ ನಗ್ನಾವಸ್ಥೆಯಲ್ಲಿದ್ದ ನೋಹಾನನ್ನು ನೋಡಿದ ಹ್ಯಾಮ್ ಅವನ ಮೇಲೆ ಬಟ್ಟೆ ಹೊದಿಸಿದ. ಎಚ್ಚರಗೊಂಡ ನೋಹಾ ಕೋಪದಿಂದ, ‘ನಿನ್ನ ಮಗ ಕೆನಾನ್ ಪೀಳಿಗೆಯವರೆಲ್ಲಾ ಉಳಿದವರಿಗೆ ಗುಲಾಮರಾಗಲಿ’ ಎಂದು ಶಾಪ ಕೊಟ್ಟ. ಇದರಂತೆ, ಶೆಮ್ ವಂಶಸ್ಥರು ಪೂರ್ವದಲ್ಲಿ, ಜಫೆತ್ ವಂಶಸ್ಥರು ಪಶ್ಚಿಮದಲ್ಲಿ ಮತ್ತು ಹ್ಯಾಮ್ ವಂಶಸ್ಥರು ದಕ್ಷಿಣದಲ್ಲಿ ನೆಲೆಯಾಗುತ್ತಾರೆ.

ಮುಂದೆ, ಪಾಶ್ಚಾತ್ಯರು ಆಫ್ರಿಕಾವನ್ನು ವಸಾಹತು ಮಾಡಿಕೊಂಡು ಕಪ್ಪುವರ್ಣಿಯರ ಮೇಲೆ ನಡೆಸಿದ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳಲು ಈ ಕತೆಯನ್ನು ಉಪಯೋಗಿಸಿಕೊಳ್ಳುತ್ತಾರೆ. ವಿಸ್ಮಯವೆಂದರೆ, ಈ ಕತೆಯಲ್ಲಿನ ಹ್ಯಾಮ್ ಮಕ್ಕಳು ಕಪ್ಪುವರ್ಣಿಯರೆಂದು ಮಧ್ಯಯುಗದಲ್ಲಿಯೇ ತಿದ್ದುಪಡಿ ಮಾಡಲಾಗಿತ್ತು. ಅಂದರೆ, ದೇವದೂತ ನೋಹಾನ ಪ್ರಕಾರ ಕಪ್ಪುವರ್ಣಿಯರೆಲ್ಲಾ ಬಿಳಿ ಜನಾಂಗದವರ ಗುಲಾಮಗಿರಿಗೆ ಬದ್ಧರಾಗಿರಬೇಕಿತ್ತು. ಇದರ ಅನುಸಾರವಾಗಿ, ಅಮೇರಿಕಾದಲ್ಲಿ ವರ್ಣಭೇದ ನೀತಿ ಹುಟ್ಟಿತು. ಅಧಿಕೃತವಾಗಿ 1865ರಲ್ಲಿ ಗುಲಾಮಗಿರಿ ಅಂತ್ಯವಾದರೂ ದೈನಂದಿನ ಜೀವನದಲ್ಲಿ ಇಂದಿಗೂ ಜೀವಂತವಾಗಿದೆ.

ಪ್ರಪAಚದ ಮೊದಲ ಮತ್ತು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಗಳಾದ ಅಮೆರಿಕಾ ಮತ್ತು ಭಾರತ ದೇಶಗಳೆರಡೂ ಧರ್ಮ ಗ್ರಂಥಗಳಲ್ಲಿ ಪ್ರಸ್ತಾಪಿಸಿರುವ ಜಾತಿವ್ಯವಸ್ಥೆಯನ್ನು ಅನುಸರಿಸುತ್ತಿವೆ. ಇಲ್ಲಿ ಕೆಳಜಾತಿಯವರ ಸಾಮಾಜಿಕ ನಿಷ್ಕೃಷ್ಟತೆಯನ್ನು ಹಿಂದಿನ ಜನ್ಮಗಳ ಪಾಪದ ಫಲವೆಂದೇ ನಂಬುತ್ತಾರೆ. ಈ ಸಿದ್ಧಾಂತಗಳನ್ನು ತಮಗನುಕೂಲದಂತೆ ವ್ಯಾಖ್ಯಾನಿಸಿದ ಮೇಲ್ಜಾತಿಯವರು ಅದಕ್ಕೆ ದೈವಿಕತೆಯ ಅಡಿಪಾಯ ಕೊಟ್ಟು ಶತಮಾನಗಳಿಂದ ಭದ್ರವಾಗಿ ಕಾಪಾಡಿಕೊಂಡಿದ್ದಾರೆ. ಆದ್ದರಿಂದ, ಜಾತಿವ್ಯವಸ್ಥೆಯ ಮೊದಲ ಆಧಾರಸ್ತಂಭವನ್ನು, ದೈವಿಕ ಇಚ್ಛೆ ಮತ್ತು ಪ್ರಕೃತಿಯ ನಿಯಮವೆಂದು ಹೆಸರಿಸಬಹುದು.

ಆಧಾರಸ್ತಂಭ ಎರಡು:

ಆನುವಂಶಿಕತೆ

ಪ್ರತಿ ಸಮಾಜದಲ್ಲಿಯೂ ವೃತ್ತಿ ಆಯ್ಕೆಗಾಗಿ, ಸ್ಪಷ್ಟವಾದ ಶ್ರೇಣಿಕೃತ ಪಾತ್ರಗಳನ್ನು ನಿಗದಿಪಡಿಸಿರುವುದನ್ನು ನಾವು ಕಾಣಬಹುದು. ಸಾಮಾನ್ಯವಾಗಿ, ಮನುಷ್ಯ ಹುಟ್ಟಿದ ಜಾತಿಗನುಗುಣವಾಗಿ ಶಾಶ್ವತವಾದ ಉನ್ನತ ಅಥವಾ ಕನಿಷ್ಠ ಸ್ಥಾನಮಾನ ದೊರೆಯುತ್ತದೆ. ಹಾಗಾಗಿ, ಆನುವಂಶಿಕತೆಯನ್ನು ಜಾತಿಯ ಎರಡನೇ ಆಧಾರಸ್ತಂಭವೆನ್ನಬಹುದು. ವಿಶೇಷವೆಂದರೆ, ಭಾರತದಲ್ಲಿ ಸಾಮಾನ್ಯವಾಗಿ ಮಕ್ಕಳು ತಂದೆಯ ಜಾತಿಯಿಂದ ಗುರುತಿಸಿಕೊಂಡರೆ, ಅಮೆರಿಕಾದ ವಸಾಹತುಶಾಹಿ ವರ್ಜೀನಿಯಾ ಪ್ರಾಂತ್ಯದಲ್ಲಿ ಮಕ್ಕಳು ಆನುವಂಶಿಕವಾಗಿ ತಮ್ಮ ತಾಯಿಯ ಜಾತಿಯಿಂದ ಗುರುತಿಸಿಕೊಳ್ಳುತ್ತಿದ್ದರು.

ಇಲ್ಲಿ ಕಪ್ಪುವರ್ಣಿಯ ಮಹಿಳೆಯರು ಬಿಳಿಯ ವಸಾಹತುದಾರರಿಂದ ಪಡೆಯುವ ಮಕ್ಕಳು, ತಂದೆಯೊAದಿಗೆ ಗುರುತಿಸಿಕೊಳ್ಳುವ ಸಾಧ್ಯತೆಯಿರಲಿಲ್ಲ, ಮಾತ್ರವಲ್ಲ, ತಾಯಿಯಂತೆ ಗುಲಾಮರಾಗಿಯೇ ಉಳಿಯುತ್ತಿದ್ದರು. ಆದರೆ, ಇದೇ ವಸಾಹತುದಾರರು ತಮ್ಮ ದೇಶಗಳಲ್ಲಿ ತಂದೆಯಿAದ ವಂಶಾವಳಿಯನ್ನು ಪಡೆಯುತ್ತಿದ್ದರು. ವಿಶೇಷವೆಂದರೆ, ಕಪ್ಪುವರ್ಣಿಯ ಮಹಿಳೆಯರಿಂದ ಇವರು ಪಡೆದ ಮಕ್ಕಳನ್ನು ಆಜೀವಪರ್ಯಂತ ಗುಲಾಮರಾಗಿ ಇಟ್ಟುಕೊಳ್ಳುವ ಸೌಲಭ್ಯವೂ ಇತ್ತು. ಹೀಗಾಗಿ, ಕಪ್ಪುವರ್ಣಿಯರಿಗೆ ತಮ್ಮ ಜಾತಿಯಿಂದ ಹೊರಬರುವ ಯಾವ ಅವಕಾಶವೂ ಇರಲಿಲ್ಲ.

ಜಾತಿ ಮತ್ತು ವರ್ಗದ ವ್ಯತ್ಯಾಸವೆಂದರೆ, ಒಬ್ಬ ವ್ಯಕ್ತಿ ತನ್ನ ವರ್ಗವನ್ನು ವಿದ್ಯೆ, ಆದಾಯ ಮತ್ತು ವೃತ್ತಿ ಬದಲಾದಂತೆ ಬದಲಾಯಿಸಬಹುದು. ತನ್ನ ಕಠಿಣ ಪರಿಶ್ರಮದಿಂದ ಬದುಕಿನ ದಾರಿ ಬದಲಾಯಿಸಬಹುದು. ಇದರ ಅರ್ಥ, ವ್ಯಕ್ತಿಗೆ ವರ್ಗದಿಂದ ಬಿಡುಗಡೆಯಿದೆ, ಆದರೆ, ಜಾತಿಯಿಂದಲ್ಲ. ಒಂದು ವೇಳೆ ಕೆಳಜಾತಿಯವರು ಶ್ರೀಮಂತರಾದರೂ, ಸಮಾಜದಲ್ಲಿರುವ ಜಾತಿ ತಾರತಮ್ಯದಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದಲು ಸಾಧ್ಯವಿಲ್ಲ. ಹಾಗಾಗಿ, ಅಮೆರಿಕಾದಲ್ಲಿ ಶ್ರೀಮಂತ ಕಪ್ಪುವರ್ಣಿಯರು ಶಾಶ್ವತವಾಗಿ ಅಸ್ಪೃಶ್ಯರಾಗಿಯೇ ಉಳಿಯುತ್ತಾರೆ. ಇಂದಿಗೂ, ಸಾಕಷ್ಟು ಪ್ರಖ್ಯಾತ ಕಪ್ಪುವರ್ಣಿಯರು ಸಾರ್ವಜನಿಕವಾಗಿ ವರ್ಣಭೇದ ನೀತಿಗೆ ಮತ್ತು ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಘಟನೆಗಳು ವರದಿಯಾಗುತ್ತಲಿವೆ.

2018ರಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಫುಟ್ಬಾಲ್ ಆಟಗಾರ ಡೆಸ್ಮಂಡ್ ಮಾರೋ ಹೇಳುವಂತೆ, ‘ಜೀವನದಲ್ಲಿ ನೀವೇನೇ ಸಾಧಿಸಬಹುದು. ಜನರು ನಿಮ್ಮನ್ನು ಆರಾಧಿಸಬಹುದು. ಆದರೆ, ಕಪ್ಪು ಚರ್ಮ ನಿಮ್ಮ ಸಾಮಾಜಿಕ ಅಂತಸ್ತನ್ನು ನಿರ್ಧರಿಸುತ್ತದೆ.’

ಆಧಾರಸ್ತಂಭ ಮೂರು:

ಸಜಾತಿ ವಿವಾಹ ಹಾಗು ಸಂಯೋಗದ ಮೂಲಕ ನಿಯಂತ್ರಣ

ಅಮೆರಿಕಾದಲ್ಲಿ ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವೆ ಯಾವುದೇ ಸಂಬAಧ ಬೆಳೆಯದಂತೆ ನಿಯಂತ್ರಿಸಲು ಸಜಾತೀಯ ವಿವಾಹ ಕಡ್ಡಾಯಗೊಳಿಸಲಾಯಿತು. ಇದರ ಮೂಲವನ್ನು ಪ್ರಾಚೀನ ಭಾರತ, ಅಮೆರಿಕಾದ ವಸಾಹತುಶಾಹಿಯ ಆರಂಭಿಕ ದಿನಗಳು ಮತ್ತು ಜರ್ಮನಿಯ ನಾಜಿ ಆಡಳಿತದಲ್ಲಿ ಕಾಣಬಹುದು. ಮುಂದೆ ಇದು ಜನಾಂಗೀಯ ಅಂತರಕ್ಕೆ ಬುನಾದಿಯಾಯಿತು.

ಸಜಾತೀಯ ವಿವಾಹ, ಜಾತಿಗಳ ನಡುವೆ ಗೋಡೆಗಳನ್ನು ನಿರ್ಮಿಸುವುದಲ್ಲದೆ, ಜಾತಿಯ ಹೊರಗಿನ ಪ್ರೇಮಾಂಕುರವನ್ನು ನಿಷೇಧಿಸುತ್ತದೆ. ಅಲ್ಲದೆ, ಜನರ ಸಂಪನ್ಮೂಲಗಳನ್ನು ಜಾತಿಯ ಒಳಗೆ ಉಳಿಸಿಕೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ಮೇಲ್ಜಾತಿಯವರು, ಕೆಳಜಾತಿಯವರನ್ನು ಹೀನವಾಗಿ ಮಾತ್ರವಲ್ಲ, ಶತ್ರುಗಳಂತೆ ನೋಡುತ್ತಾರೆ.

ಭಾರತದಲ್ಲಿ ಜಾತಿವ್ಯವಸ್ಥೆಯ ವಿರೋಧವಾಗಿ ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ, “ಸಜಾತೀಯ ವಿವಾಹವು ಜನರಲ್ಲಿ ಬಾಂಧವ್ಯ ಬೆಸೆಯದಂತೆ ತಡೆಯುತ್ತದೆ.” ಅಂತೆಯೇ, ಅಮೆರಿಕಾದಲ್ಲಿ ಸಜಾತೀಯ ವಿವಾಹವನ್ನು ದೇವರ ನಿಯಮವೆಂದೇ ಪರಿಗಣಿಸಲಾಗಿತ್ತು. ಇದು ಮುಂದೆ ಜನಾಂಗವೆAಬ ರೂಪಾಂತರ ಪಡೆದು ಬಿಳಿ ಮತ್ತು ಕಪ್ಪುವರ್ಣಿಯರ ನಡುವೆ ವಿವಾಹವಾಗದಂತೆ ತಡೆಯಿತು. 1630ರಲ್ಲಿ ವರ್ಜೀನಿಯಾ ಹಗ್ ಡೇವಿಸ್ ಎನ್ನುವ ಬಿಳಿಯನಿಗೆ, ಕಪ್ಪುವರ್ಣಿಯ ಹೆಣ್ಣು ಮಗಳೊಂದಿಗೆ ಸಂಬAಧ ಬೆಳೆಸಿದ್ದಕ್ಕಾಗಿ ಸಾರ್ವಜನಿಕವಾಗಿ ಚಾಟಿಯೇಟು ನೀಡಲಾಯಿತು. ‘ಇದು ಕ್ರಿಶ್ಚಿಯನ್ನರಿಗೆ ಅವಮಾನ, ಅವನ ದೇಹ ಈ ಸಂಬAಧದಿAದಾಗಿ ಅಪವಿತ್ರವಾಗಿದೆ’ ಎಂದು ಆರೋಪಿಸಲಾಯಿತು. ಈ ಶಿಕ್ಷೆಯು ಉಳಿದವರಿಗೆ ಎಚ್ಚರಿಕೆಯಂತಿತ್ತು.

ಡೇವಿಸ್‌ಗೆ ಶಿಕ್ಷೆ ವಿಧಿಸುವ ಹೊತ್ತಿಗೆ, ಯುರೋಪಿನ ಅಸಂಖ್ಯಾತ ಪುರುಷರು ಕಪ್ಪುವರ್ಣಿಯ ಮಹಿಳೆಯರೊಂದಿಗೆ, ಅವರ ಒಪ್ಪಿಗೆ ಇಲ್ಲದೆ, ಲೈಂಗಿಕ ಸಂಬAಧ ಹೊಂದಿದ್ದರು. ಈ ಸಂಬAಧದಲ್ಲಿ ಯಾವುದೇ ಸಮಾನತೆಯ ಪ್ರಶ್ನೆಯಿರಲಿಲ್ಲ. ಆದರೆ, ವಿವಾಹವನ್ನು ಮಾತ್ರ ಕಡ್ಡಾಯವಾಗಿ ಸಜಾತಿಯಲ್ಲಿ ನಡೆಯುವಂತೆ ನೋಡಿಕೊಂಡರು.

ಈ ಘಟನೆಯ ಹತ್ತು ವರ್ಷಗಳ ನಂತರ, ರಾಬರ್ಟ್ ಸ್ವೀಟ್ ಎಂಬ ಬಿಳಿಯನನ್ನು ಕಪ್ಪುವರ್ಣಿಯ ಮಹಿಳೆಯರೊಂದಿಗೆ ಸಂಬAಧ ಬೆಳೆಸಿದ್ದಕ್ಕಾಗಿ ಛೀಮಾರಿ ಹಾಕಲಾಯಿತು. ಆದರೆ, ಚಾಟಿಯೇಟಿನ ಶಿಕ್ಷೆ ಮಾತ್ರ ಕಪ್ಪುಮಹಿಳೆಗೆ, ಅವಳು ಗರ್ಭಿಣಿಯಾಗಿದ್ದಾಳೆಂದು ಲೆಕ್ಕಿಸದೆ ಕೊಡಲಾಯಿತು. ತದನಂತರ 1691ರಲ್ಲಿ, ವರ್ಜೀನಿಯಾದಲ್ಲಿ ಇಂತಹ ವಿವಾಹವನ್ನು ಕಾನೂನುಬಾಹಿರವೆಂದು ನಿಷೇಧಿಸಲಾಯಿತು. ಒಂದು ವೇಳೆ ವಿವಾಹವಾದಲ್ಲಿ, 5,000 ಡಾಲರ್ ದಂಡ ಮತ್ತು ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು.

ಈ ರೀತಿ ಸಜಾತಿ ವಿವಾಹವನ್ನು ಜನರ ಮೇಲೆ ಹೇರುವ ಮೂಲಕ ಪ್ರೀತಿಸಿ ಮದುವೆಯಾಗುವ ಹಕ್ಕನ್ನು ರಾಜಕೀಯ ವ್ಯವಸ್ಥೆ ಕಿತ್ತುಕೊಂಡಿತು. ಇಂತಹ ನಿಯಂತ್ರಿತ ಸಜಾತಿ ಸಂತಾನೋತ್ಪತ್ತಿ ಬಾಹ್ಯ ಸಾಮಾಜಿಕ ವ್ಯತ್ಯಾಸಗಳನ್ನು ಉಳಿಸಿಕೊಳ್ಳಲು ನೆರವಾಯಿತು. ಇದರ ಪ್ರತೀಕವಾಗಿ, 1958ರ ಗ್ಯಾಲಪ್ ಸಮೀಕ್ಷೆಯ ಪ್ರಕಾರ 94 ಶೇಕಡಾ ಬಿಳಿಯರು ಕಪ್ಪುವರ್ಣಿಯರನ್ನು ವಿವಾಹವಾಗಲು ಇಚ್ಛಿಸುವುದಿಲ್ಲ.

ಅವರ ಪ್ರಕಾರ, ಕಪ್ಪುವರ್ಣಿಯರ ಬುದ್ಧಿಶಕ್ತಿ ಕಡಿಮೆ. ಈ ಅಪನಂಬಿಕೆಯಿAದಾಗಿ, ಅಮೆರಿಕಾದಲ್ಲಿ ಅಸಂಖ್ಯಾತ ಕಪ್ಪುವರ್ಣಿಯರು ಬಿಳಿ ಮಹಿಳೆಯರನ್ನು ಪ್ರೀತಿಸಿದ್ದಕ್ಕಾಗಿ ಹತ್ಯೆಗೀಡಾದರು.

ಈ ಅವಹೇಳನ ಕೆಳಜಾತಿಯ ಪುರುಷರನ್ನು ಶಕ್ತಿಹೀನರನ್ನಾಗಿಸಿ, ಅವರು ತಮ್ಮ ಮಹಿಳೆಯರನ್ನು ಬಿಳಿಯರ ಲೈಂಗಿಕ ಶೋಷಣೆಯಿಂದ ರಕ್ಷಿಸಲು ನಿಸ್ಸಾಯಕರಾದರು.

1830ರ ದಶಕದಲ್ಲಿ ಮಿಸ್ಸಿಸ್ಸಿಪ್ಪಿಯಲ್ಲಿ ಬಿಳಿಯರು ಒಬ್ಬ ಕಪ್ಪುವರ್ಣಿಯನನ್ನು ಜೀವಂತವಾಗಿ ಸುಟ್ಟುಹಾಕಿದರು.

ಅವನು ತನ್ನ ಹೆಂಡತಿಯ ಲೈಂಗಿಕ ಶೋಷಣೆ ಮಾಡಿದ ಬಿಳಿಯನನ್ನು ಕೊಂದಿದ್ದ. ಇದಾದ ನಂತರ, 1943ರಲ್ಲಿ, ವಿಲ್ಲಿ ಜೇಮ್ಸ್ ಹೊವಾರ್ಡ್ ಎಂಬ ಹದಿನೈದು ವರ್ಷದ ಹುಡುಗ, ಬಿಳಿ ಹುಡುಗಿಯನ್ನು ಪ್ರೀತಿಸಿದ್ದಕ್ಕಾಗಿ, ಅವನ ತಂದೆಯೆದುರೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದರು. ಹೀಗೆ, ಅಮೆರಿಕಾದಲ್ಲಿ ಜಾತಿವ್ಯವಸ್ಥೆಯ ಭೀಕರತೆ ಮುಂದುವರಿಯುತ್ತಲೇ ಇದೆ.

ಆಧಾರಸ್ತಂಭ ನಾಲ್ಕು:

ಪರಿಶುದ್ಧತೆ ಮತ್ತು ಮಾಲಿನ್ಯ

ಜಾತಿಯ ನಾಲ್ಕನೇ ಆಧಾರಸ್ತಂಭವು ಮನುಷ್ಯನ ಮೂಲಭೂತ ನಂಬಿಕೆಯ ಮೇಲೆ ನಿಂತಿದೆ. ಅದೆಂದರೆ, ಮೇಲ್ಜಾತಿಯ ಪರಿಶುದ್ಧತೆಯ ಕಲ್ಪನೆ ಹಾಗು ಕೆಳಜಾತಿಗಳ ಸಂಪರ್ಕದಿAದ ಆಗಬಹುದಾದ ಮಾಲಿನ್ಯದ ಭ್ರಮೆ. ಶತಮಾನಗಳಿಂದ ಈ ಪರಿಕಲ್ಪನೆಯನ್ನು ಮೇಲ್ಜಾತಿಯವರು ತಮ್ಮ ಔನ್ನತ್ಯವನ್ನು ಕಾಯುಕೊಳ್ಳಲು ಬಳಸಿಕೊಂಡಿದ್ದಾರೆ. ಈ ನಂಬಿಕೆ, ಭಾರತ ಮತ್ತು ಅಮೆರಿಕಾದಲ್ಲಿ ಜಾತಿಪದ್ಧತಿ ಉತ್ತುಂಗದಲ್ಲಿದ್ದಾಗ ಮತ್ತು ಜರ್ಮನಿಯಲ್ಲಿ ನಾಜಿಗಳ ಘೋರ ಆಡಳಿತವಿದ್ದಾಗ ತಳವೂರಿತು.

ಭಾರತದಲ್ಲಿ ಕೆಳಜಾತಿಯವರು ಸಾರ್ವಜನಿಕವಾಗಿ ಮೇಲ್ಜಾತಿಯವರಿಂದ ಜಾತಿಗನುಗುಣವಾಗಿ ಸುಮಾರು 12ರಿಂದ 90 ಹೆಜ್ಜೆಗಳ ಅಂತರ ಕಾಯ್ದುಕೊಳ್ಳಬೇಕಿತ್ತು. ಅಲ್ಲದೆ, ಎಚ್ಚರಿಕೆಯ ಕರೆಗಂಟೆಯನ್ನು ಕುತ್ತಿಗೆಗೆ ಕಟ್ಟಿಕೊಂಡು ತಮ್ಮ ಉಪಸ್ಥಿತಿಯನ್ನು ಮೇಲ್ಜಾತಿಯವರಿಗೆ ಎಚ್ಚರಿಸಬೇಕಿತ್ತು. ಮರಾಠಾ ಪ್ರಾಂತ್ಯದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಅಳಿಸಿಹಾಕಲು ಮುಳ್ಳಿನ ಕೊಂಬೆಯನ್ನು ಎಳೆದುಕೊಂಡು ಹೋಗಬೇಕಿತ್ತು. ಅಸ್ಪೃಶ್ಯನಾದವನು ನಡೆಯುವಾಗ ನೆರಳು ಬ್ರಾಹ್ಮಣನಿಗೆ ಸ್ಪರ್ಶಿಸಿ ಮಾಲಿನ್ಯ ಮಾಡದಂತೆ, ಬ್ರಾಹ್ಮಣ ಹಾದುಹೋಗುವವರೆಗೆ ನೆಲದ ಮೇಲೆ ಸಾಷ್ಟಾಂಗ ಮಲಗಬೇಕಿತ್ತು. ಅಸ್ಪöÈಶ್ಯರು ಮುಟ್ಟಿರುವ ವಸ್ತುವನ್ನು ಸ್ಪರ್ಶಿಸುವುದು ಮೇಲ್ಜಾತಿಯವರಿಗೆ ಮಾಲಿನ್ಯವೆಂದು ಪರಿಗಣಿಸಲಾಗಿತ್ತು. ಅದಕ್ಕೆ ಪ್ರಾಯಶ್ಚಿತವಾಗಿ, ಮೇಲ್ಜಾತಿಯವರು, ಹರಿಯುವ ನೀರಿನಲ್ಲಿ ಸ್ನಾನ ಅಥವಾ ಪ್ರಾಣಾಯಾಮದ ಮೂಲಕ ಶುದ್ಧೀಕರಣವಾಗಬೇಕಿತ್ತು.

ಅದೇ ರೀತಿ, ನಾಜಿ ಆಡಳಿತದ ಜರ್ಮನಿಯಲ್ಲಿ ಕೂಡ ತತ್ವಜ್ಞಾನಿ ಸಾರ್ತ್ರೆ ಗಮನಿಸಿದಂತೆ, ಯಹೂದಿಗಳು ಸ್ನಾನ ಮಾಡಿದರೆ ನೀರು ಅಶುದ್ಧವಾಗುತ್ತದೆಯೆಂದು ಕಡಲತೀರಗಳಿಗೆ ಅವರನ್ನು ನಿಷೇಧಿಸಲಾಗಿತ್ತು. ಅಮೆರಿಕಾದಲ್ಲಿ ಕಪ್ಪುವರ್ಣಿಯರನ್ನು ದೇಶದ ಇತಿಹಾಸದ ಆರಂಭದಿAದ 20ನೇ ಶತಮಾನದವರೆಗೆ ಪ್ರತ್ಯೇಕಿಸಲಾಗಿತ್ತು.

ಕಪ್ಪುವರ್ಣಿಯರ ಸಂಖ್ಯೆ ಹೆಚ್ಚಿದ್ದ ದಕ್ಷಿಣ ಪ್ರಾಂತ್ಯಗಳಲ್ಲಿ ಬಿಳಿ ಮತ್ತು ಕಪ್ಪುವರ್ಣಿಯ ಮಕ್ಕಳು ಪ್ರತ್ಯೇಕ ಪಠ್ಯಪುಸ್ತಕಗಳನ್ನು ಓದುತ್ತಿದ್ದರು. ಫ್ಲೋರಿಡಾದಲ್ಲಿ, ಕಪ್ಪುವರ್ಣಿಯ ಮಕ್ಕಳ ಪುಸ್ತಕಗಳನ್ನು ಬೇರೆ ಪುಸ್ತಕಗಳೊಂದಿಗೆ ಇಡಲು ಅವಕಾಶವಿರಲಿಲ್ಲ. ಕಪ್ಪುವರ್ಣಿಯರು ಕುದುರೆಯ ತೊಟ್ಟಿಗಳಿಂದ ನೀರು ಕುಡಿಯಬೇಕಾಗಿತ್ತು. ಜೈಲುಗಳಲ್ಲಿ ಕೂಡ ಅವರ ಬೆಡ್‌ಶೀಟ್‌ಗಳನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಅವರೆಲ್ಲಾ ಖಾಸಗಿ ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಜೀವನ ಪರ್ಯಂತ ಪ್ರತ್ಯೇಕಿಸಲಾಗಿತ್ತು. ಉದಾಹರಣೆಗೆ, ಆಸ್ಪತ್ರೆ, ರೈಲ್ವೆ ಪ್ಲಾಟ್‌ಫಾರ್ಮ್, ಆಂಬ್ಯುಲೆನ್ಸ್, ಸ್ಮಶಾನ, ಇತ್ಯಾದಿಗಳು. ಬಟ್ಟೆ ಅಂಗಡಿಗಳಲ್ಲಿ, ಕಪ್ಪುವರ್ಣಿಯರು ಟ್ರಯಲ್ ನೋಡುವುದನ್ನು ನಿಷೇಧಿಸಲಾಗಿತ್ತು. 1937ರಲ್ಲಿ ಇತಿಹಾಸಕಾರ ಬರ್ಟ್ರಾಮ್ ಡಾಯ್ಲ್ ದಾಖಲಿಸಿದಂತೆ, ಅವರ ಹೆಣಗಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕ ಮೂಲೆಯಲ್ಲಿ ಇಟ್ಟಿರುತ್ತಿದ್ದರು.

ಅಮೆರಿಕಾದಲ್ಲಿ ಜಾತಿಯ ಈ ಆಧಾರಸ್ತಂಭವನ್ನು ಕಾನೂನಿನ ಮೂಲಕ ಜಾರಿಗೊಳಿಸಲಾಗಿತ್ತು. 1896ರಲ್ಲಿ, ಲೂಸಿಯಾನದಲ್ಲಿ ಕಪ್ಪುವರ್ಣಿಯನೊಬ್ಬ ರೈಲುಗಳಲ್ಲಿ ಕಪ್ಪು ಮತ್ತು ಬಿಳಿ ಜನರನ್ನು ಪ್ರತ್ಯೇಕಿಸಿರುವ ಕಾನೂನನ್ನು ಪ್ರಶ್ನಿಸಿದ್ದ. ಇದರ ವಿರುದ್ಧ ಕಪ್ಪುವರ್ಣಿಯರು ಹಣವನ್ನು ಸಂಗ್ರಹಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು ಕೂಡ. ಆದರೆ, ಸುಪ್ರೀಂ ಕೋರ್ಟ್, ಈ ಪ್ರತ್ಯೇಕತೆಯನ್ನು ಸಮರ್ಥಿಸಿತು. ಅಲ್ಲದೆ, ಅಲ್ಲಿನ ನ್ಯಾಯಾಲಯಗಳಲ್ಲಿ ಸತ್ಯ ಪ್ರಮಾಣಿಸಲು ಕಪ್ಪು ಮತ್ತು ಬಿಳಿ ಜನರಿಗೆ ಎರಡು ಪ್ರತ್ಯೇಕ ಬೈಬಲ್‌ಗಳನ್ನು ಇಡಲಾಗಿತ್ತು. 1930ರ ದಶಕದಲ್ಲಿ ರೈಲ್ವೆ ನೌಕರನೊಬ್ಬ ರೈಲ್ವೆಕಂಬಿಗಳ ನಡುವೆ ಸಿಕ್ಕಿ ಸಾಯುತ್ತಾ ಬಿದ್ದಿದ್ದರೂ, ಅಲ್ಲಿಗೆ ಬಂದ ಆಂಬುಲೆನ್ಸ್ ಅವನು ಕಪ್ಪುವರ್ಣಿಯನೆಂದು ಸಾಯಲು ಬಿಟ್ಟು ವಾಪಸ್ಸಾಯಿತು.

ನೀರಿನ ಪವಿತ್ರತೆ

ಅಮೆರಿಕಾದಲ್ಲಿ, ಇಪ್ಪತ್ತನೇ ಶತಮಾನದವರೆಗೂ ಮೇಲ್ಜಾತಿಯವರ ಇಚ್ಛೆಯಂತೆ, ಪ್ರಕೃತಿದತ್ತ ನೀರು ಮತ್ತು ಸಮುದ್ರತೀರ ಪ್ರದೇಶಗಳನ್ನು ಕೆಳಜಾತಿಯವರಿಗೆ ನಿಷೇಧಿಸಲಾಗಿತ್ತು. ಭಾರತದಲ್ಲಿ ದಲಿತರನ್ನು ನಿಷೇಧಿಸಿದಂತೆ ಮತ್ತು ಜರ್ಮನಿಯಲ್ಲಿ ಯಹೂದಿಗಳನ್ನು ದೂರವಿಟ್ಟಂತೆ, ಕಪ್ಪು ವರ್ಣಿಯರನ್ನು ಕಡಲತೀರ, ಸರೋವರ ಮತ್ತು ಕೊಳಗಳು ಕಲುಷಿತವಾಗದಂತೆ ನಿಷೇಧಿಸಲಾಗಿತ್ತು. ಇದು 20ನೇ ಶತಮಾನದ ಮಧ್ಯಭಾಗದವರೆಗೆ ಮುಂದುವರಿಯಿತು.

1950ರ ದಶಕದಲ್ಲಿ, ಸಿನ್ಸಿನ್ನಾಟಿ ಪ್ರದೇಶದಲ್ಲಿ ಸಾರ್ವಜನಿಕ ಈಜುಕೊಳಗಳಿಗೆ ಕಪ್ಪುವರ್ಣಿಯ ಈಜುಗಾರರನ್ನು ಪ್ರವೇಶಿಸಲು ಅನುಮತಿಯಿದ್ದರೂ, ಬಿಳಿಯರು ಮೊಳೆ ಮತ್ತು ಗಾಜಿನ ಚೂರುಗಳನ್ನು ನೀರಿಗೆ ಎಸೆದು ಉಪಯೋಗಿಸದಂತೆ ನೋಡಿಕೊಂಡರು. 1960ರ ದಶಕದಲ್ಲಿ, ನಾಗರಿಕ ಹಕ್ಕು ಪ್ರತಿಪಾದಕನೊಬ್ಬ ಸಾರ್ವಜನಿಕ ಕೊಳದಲ್ಲಿ ಈಜಿ ಪ್ರತಿಭಟಿಸಿದನಾದರೂ, ಆಮೇಲೆ ನೀರನ್ನು ಶುದ್ದೀಕರಿಸಲಾಯಿತು. ಇದಕ್ಕಿಂತ ಹಿಂದೆ 1919ರಲ್ಲಿ, ಚಿಕಾಗೋದಲ್ಲಿ ಒಬ್ಬ ಕಪ್ಪುವರ್ಣಿಯ ಸಮುದ್ರದಲ್ಲಿ ಈಜುವಾಗ ಆಕಸ್ಮಿಕವಾಗಿ ಈ ಕಾಲ್ಪನಿಕ ನಿಷೇಧದ ರೇಖೆಯನ್ನು ದಾಟಿದ್ದಕ್ಕಾಗಿ ಅವನನ್ನು ಕಲ್ಲು ಹೊಡೆದು ಸಾಯಿಸಲಾಗಿತ್ತು. ಈ ಘಟನೆ, ಅಮೆರಿಕಾದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಜನಾಂಗ ಗಲಭೆಗೆ ಮುನ್ನುಡಿಯಾಯಿತು.

ಈ ಘಟನೆಯ ದಶಕಗಳ ನಂತರವೂ, ಅಮೆರಿಕಾದ ವಿವಿಧ ಪ್ರಾಂತ್ಯಗಳಲ್ಲಿ, ಕಪ್ಪುವರ್ಣಿಯರು ಸಾರ್ವಜನಿಕ ಈಜುಕೊಳದ ಹತ್ತಿರ ಸುಳಿದಾಡಿದ್ದಲ್ಲಿ ಬಿಳಿಯರು ಅಸಹನೆ ತೋರ್ಪಡಿಸುತ್ತಿದ್ದರು. 1931ರಲ್ಲಿ, ಪಿಟ್ಸ್ಟ್ಸ್ಟ್ಸ್ಬರ್ಗ್ನ ಈಜುಕೊಳಕ್ಕೆ ಪ್ರವೇಶಿಸಿದ ಪ್ರತಿ ಕಪ್ಪುವರ್ಣಿಯನನ್ನು ಬಿಳಿಯರು ಅಟ್ಟಿಸಿಕೊಂಡು ಹೋಗಿ, ಮತ್ತೆಂದೂ ಕಾಲಿಡದಂತೆ ಮಾಡುತ್ತಿದ್ದುದು ವರದಿಯಾಗಿದೆ. 1949ರಲ್ಲಿ, ಸೇಂಟ್ ಲೂಯಿಸ್ ನಗರದಲ್ಲಿ ಸಾರ್ವಜನಿಕ ಈಜುಕೊಳ ಪ್ರವೇಶಕ್ಕೆ ಕಪ್ಪುವರ್ಣಿಯರಿಗೆ ಅನುಮತಿಯಿದ್ದರೂ, ಉಸ್ತುವಾರಿ ಅಧಿಕಾರಿಗಳಿಗೆ ಜೀವ ಬೆದರಿಕೆ ಬಂದುದರಿAದ ತಕ್ಷಣವೇ ಹಿಂದೆಗೆದುಕೊಳ್ಳಬೇಕಾಯಿತು. ಈಜಲು ಬಂದ ಕಪ್ಪುವರ್ಣಿಯರನ್ನು ಹೊಡೆದು ಓಡಿಸಲಾಯಿತು. ಹಾಗೆಯೇ, 1935ರಲ್ಲಿ ಸರ್ವೋಚ್ಚ ನ್ಯಾಯಾಲಯವು ನ್ಯೂಟನ್ ಪಟ್ಟಣದ ಈಜುಕೊಳದಿಂದ ಕಪ್ಪುವರ್ಣಿಯರನ್ನು ಹೊರಗಿಡುವ ಬಿಳಿಯರ ಬೇಡಿಕೆಗೆ ಅನುಮೋದನೆ ಸೂಚಿಸಿತು. ಅದರಂತೆಯೇ, ಪಿಟ್ಸ್ಬರ್ಗ್ನಲ್ಲಿ ಕಪ್ಪುವರ್ಣಿಯರಿಗೆ ಈಜುಕೊಳವನ್ನು ಬಿಳಿಯರು ಉಪಯೋಗಿಸದ ಋತುವಿನಲ್ಲಿ ಮಾತ್ರ ಉಪಯೋಗಿಸಲು ಅವಕಾಶವಿತ್ತು. ಆನಂತರ ನೀರನ್ನು ಶುದ್ಧೀಕರಿಸಿ ಬಿಳಿಯರಿಗೆ ಬಿಡುತ್ತಿದ್ದರು.

1951ರಲ್ಲಿ, ಬೇಸ್‌ಬಾಲ್ ಚಾಂಪಿಯನ್‌ಶಿಪ್ ಗೆದ್ದ ತಂಡ ಓಹಿಯೋದ ಈಜುಕೊಳದಲ್ಲಿ ವಿಜಯೋತ್ಸವ ಆಚರಿಸಲು ನಿರ್ಧರಿಸಿತು. ತಂಡದಲ್ಲಿದ್ದ ಒಬ್ಬ ಕಪ್ಪು ಹುಡುಗನಿಗೆ ನೀರಿಗಿಳಿಯಲು ಬಿಡಲಿಲ್ಲ. ಎಲ್ಲರೂ ಆಟವಾಡಿ ಮೇಲೆ ಬಂದ ಮೇಲಷ್ಟೇ ಅವನೊಬ್ಬನಿಗೆ 10 ನಿಮಿಷ ಬಿಟ್ಟರು. ಇದರಿಂದ ಅತೀವ ಅವಮಾನಗೊಂಡ ಹುಡುಗ ಜೀವನದಲ್ಲಿ ಮತ್ತೆಂದೂ ನೀರಿಗಿಳಿಯಲಿಲ್ಲ.

ಜಾತಿ ಶ್ರೇಣಿಯ ಜಾಡು ಹಿಡಿದು

(ಗ್ರಿಫ್, ಮರಾಬನ್… ಸಾಂಗ್‌ಮೀಲಿ):

ಭಾರತದ ಜಾತಿವ್ಯವಸ್ಥೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದರೆ, ಅಮೆರಿಕದ ಜಾತಿವ್ಯವಸ್ಥೆಗೆ ಇತ್ತೀಚಿನ ಇತಿಹಾಸವಿದೆ. ಇದನ್ನು ಸ್ಥಾಪಿಸಿದವರು, ನೋಹಾ ಮತ್ತು ಅವನ ಮಕ್ಕಳ ಕಥೆಯನ್ನು ಮಾರ್ಪಡಿಸಿ ಸಮರ್ಥಿಸಿಕೊಂಡರು. ಈ ಪ್ರಕಾರ, ಯುರೋಪಿನಿಂದ ಬಂದವರು ಶ್ರೇಷ್ಠವೆಂದು, ಆಫ್ರಿಕಾದಿಂದ ಬಂದವರು ಕೆಳಜಾತಿಯವರೆಂದು, ಏಷ್ಯಾದವರು ಅಥವಾ ಸ್ಥಳೀಯ ಮೂಲನಿವಾಸಿಗಳು ಮಧ್ಯಸ್ಥರೆಂದು ಗುರುತಿಸಿಕೊಳ್ಳುತ್ತಾರೆ. ಅಚ್ಚರಿಯೆಂದರೆ, ದಕ್ಷಿಣ ಆಫ್ರಿಕಾದಲ್ಲಿರುವ ಕಡಿಮೆ ಜನಸಂಖ್ಯೆಯ ಬಿಳಿಯರಿಗೆ ಸವಲತ್ತುಗಳನ್ನು ನೀಡಿ ಜನಸಂಖ್ಯೆ ವೃದ್ಧಿಸಬೇಕೆಂದು ಕರೆ ನೀಡುತ್ತಾರೆ. ಆದರೆ, ಅಮೆರಿಕಾದಲ್ಲಿರುವ ಕಡಿಮೆ ಜನಸಂಖ್ಯೆಯ ಬಿಳಿಯರು ಬಹುಸಂಖ್ಯಾತ ಕರಿಯರನ್ನು ಅಧೀನದಲ್ಲಿಟ್ಟುಕೊಳ್ಳುವುದನ್ನು ಇಷ್ಟಪಡುತ್ತಾರೆ.

1790ರಲ್ಲಿ ಬಿಳಿಯರ ಪ್ರಾಬಲ್ಯ ಕಾಪಾಡಿಕೊಳ್ಳುವ ಸಲುವಾಗಿ ಅಮೆರಿಕಾದ ಪೌರತ್ವವನ್ನು ಬಿಳಿ ವಲಸಿಗರಿಗಷ್ಟೇ ಸೀಮಿತಗೊಳಿಸಲಾಯಿತು. ಈ ಸಮಯದಲ್ಲಿ ಅಮೆರಿಕಾಕ್ಕೆ ವಲಸೆ ಬಂದವರಲ್ಲಿ ಹೆಚ್ಚಿನವರು ಜರ್ಮನಿ ಮತ್ತು ಐರ್ಲೆಂಡಿನವರು. ಒಟ್ಟಿನಲ್ಲಿ, ಅಮೆರಿಕಾದ ಇತಿಹಾಸದುದ್ದಕ್ಕೂ, ಬಿಳಿಯರಲ್ಲದವರನ್ನು ಕಲುಷಿತರೆಂದೇ ಪರಿಗಣಿಸಲಾಗಿತ್ತು. ವರ್ಜೀನಿಯಾದ ಗವರ್ನರ್ ಹೇಳಿದಂತೆ, ‘ಬೇರೆ ವಲಸಿಗರು ತಮ್ಮೊಂದಿಗೆ, ಅಪರಾಧದ ಹಿನ್ನೆಲೆ ಮತ್ತು ರೋಗಗಳನ್ನು ಉದ್ದೇಶಪೂರ್ವಕವಾಗಿ ತಂದು, ಅಮೆರಿಕದ ಶುದ್ಧ ಬಿಳಿರಕ್ತವನ್ನು ಕಲುಷಿತಗೊಳಿಸುತ್ತಾರೆ.’ 1910ರಲ್ಲಿ ಪೆನ್ಸಿಲ್ವೇನಿಯಾದ ಸಚಿವರೊಬ್ಬ ಹೇಳಿದಂತೆ, ‘ನಾವಿಂದು ನಮ್ಮ ಶುದ್ಧ ಬಿಳಿರಕ್ತ ಬೆರೆಕೆಯಾಗದಂತೆ ನೋಡಿಕೊಳ್ಳಬೇಕಿದೆ.’ ಅದಕ್ಕಾಗಿ, ವಲಸಿಗರ ಮೇಲೆ ನಿಗಾ ಇಡಲಾಗಿತ್ತು.

ಬಿಳಿಯರು ನಿರೂಪಿಸಿದ ಕಪ್ಪುವರ್ಣಿಯರ ವ್ಯಾಖ್ಯಾನ ಬಹಳ ಕಾಲ್ಪನಿಕ ಆಧಾರಗಳನ್ನು ಅವಲಂಬಿಸಿದೆ. ಅವರ ಪ್ರಕಾರ, ಕಪ್ಪುವರ್ಣಿಯರೆಂದರೆ, ಆಫ್ರಿಕ ಮೂಲದವರು. ಅವರ ರಕ್ತದಲ್ಲಿರುವ ನೀಗ್ರೋ ಅಂಶವನ್ನು ಕೂಡ ಪರಿಗಣಿಸಿ ಅವರನ್ನು ವಿವಿಧ ಉಪವರ್ಗಗಳಾಗಿ ವಿಂಗಡಿಸಲಾಗಿದೆ: ಗ್ರಿಫ್, ಮರಾಬನ್, ಮುಲಾಟ್ಟೊ, ಕ್ವಾಡ್ರೋನ್, ಆಕ್ಟಾರೂನ್, ಸೆಕ್ಸಾ÷್ಟರೂನ್, ಡೆಮಿಮೆಮೆಲೌಕ್ ಮತ್ತು ಸಾಂಗ್‌ಮೀಲಿ.

ಅದೇ ರೀತಿ, ಈ ಎಲ್ಲಾ ಜಾತ್ಯಾಧಾರಿತ ವರ್ಗಗಳು ಐತಿಹಾಸಿಕತೆಗೆ ಸಾಕ್ಷಿಯಾಗಿದೆ. ವರ್ಜೀನಿಯಾ ಪ್ರಾಂತ್ಯ 1924ರ ಜನಾಂಗೀಯ ಸಮಗ್ರತೆ ಕಾಯ್ದೆಯನ್ನು ಅಂಗೀಕರಿಸಿತು, ಇದು ಅಂತರ್ಜಾತಿ ವಿವಾಹವನ್ನು ನಿಷೇಧಿಸುವುದರ ಜೊತೆಗೆ, ಒಬ್ಬ ಬಿಳಿ ವ್ಯಕ್ತಿಯನ್ನು ‘ಕಕೇಶಿಯನ್’ ರಕ್ತ ಹೊಂದಿದವನು ಎಂದು ಹೆಸರಿಸಿತು.

ಮಧ್ಯಮ ಜಾತಿಗಳ ಅಸ್ತಿತ್ವ ಹುಡುಕಾಟ:

ಬಿಳಿಯರೊಂದಿಗೆ ಗುರುತಿಸಿಕೊಳ್ಳುವ ಪ್ರಯತ್ನ

ಭೂಮಿಯ ಸಂಪನ್ಮೂಲಗಳ ಮೇಲಿನ ಪ್ರಾಬಲ್ಯ ಸಾಧಿಸಲು, ಅಮೆರಿಕಾದಲ್ಲಿ ಬೇರೆಲ್ಲಾ ಜಾತಿಯವರು ಬಿಳಿಯರೊಂದಿಗೆ ಗುರುತಿಸಿಕೊಳ್ಳಲು ಆರಂಭಿಸಿದರು. 1905ರಲ್ಲಿ ಕ್ಯೂಬದವರಿಗೆ ಬಿಳಿಯರೊಂದಿಗೆ ಕುಳಿತುಕೊಳ್ಳಲು ಅವಕಾಶ ನೀಡಿದಾಗ ಸಂಭ್ರಮಿಸಿದರು. ಬಿಳಿಯರೊಂದಿಗೆ ಗುರುತಿಸಿಕೊಂಡವರಿಗೆ, ಪೂರ್ಣ ಪೌರತ್ವ ಮತ್ತು ಉನ್ನತ ಸ್ಥಾನಮಾನಕ್ಕೆ ಏರುವ ಅವಕಾಶವಿತ್ತು. 1922ರಲ್ಲಿ ಟಕಾವೊ ಓಜಾವಾ ಎಂಬ ಜಪಾನಿನ ವಲಸಿಗ ತನ್ನ ಬಿಳಿ ಚರ್ಮ ಆಧಾರಿಸಿ ತಾನು ಪೌರತ್ವಕ್ಕೆ ಅರ್ಹನೆಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ. ಆಗ, ಸುಪ್ರೀಂ ಕೋರ್ಟ್ ಬರೀ ಬಿಳಿ ಬಣ್ಣ ಮಾತ್ರವಲ್ಲ, ಕಕೇಶಿಯನ್ ಮೂಲವನ್ನು ಕೂಡ ಹೊಂದಿರಬೇಕೆAದು ಹೇಳಿತು. ಕೆಲವು ತಿಂಗಳುಗಳ ನಂತರ, ಮೇಲ್ಜಾತಿಯ ಭಾರತೀಯ ವಲಸಿಗನೊಬ್ಬ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿ, ತಾನು ಆರ್ಯ ಜನಾಂಗದವನು, ಕಕೇಶಿಯನ್‌ಗೆ ಹೆಚ್ಚು ನಿಕಟವರ್ತಿ ಎಂದು ವಾದಿಸಿದ. ಆದರೆ, ಅವುಗಳ ನಡುವೆ ಆಳವಾದ ವ್ಯತ್ಯಾಸಗಳಿವೆಯೆಂದು ಕೋರ್ಟ್ ಹೇಳಿತು.

ಇದಾದನಂತರ, ಕಾನೂನುಬದ್ಧವಾಗಿ ವಾಸಿಸುತ್ತಿದ್ದ ಏಷ್ಯ ಮೂಲದವರ ಪೌರತ್ವವನ್ನು ಸರ್ಕಾರ ರದ್ದುಗೊಳಿಸಲು ಪ್ರಾರಂಭಿಸಿತು. ಈ ಕ್ರಮದಿಂದಾದ ಒಂದು ದುರಂತ ಪ್ರಕರಣವೆಂದರೆ, ಭಾರತೀಯ ವಲಸೆಗಾರ ವೈಷ್ಣೋ ದಾಸ್ ಬಾಗೈ, ಸುಪ್ರೀಂ ಕೋರ್ಟ್ ನೀಡಿದ ತೀರ್ಪುನಿಂದಾಗಿ, ಪೌರತ್ವ ಕಳೆದುಕೊಂಡು ತಾನು ನಡೆಸುತ್ತಿದ್ದ ಉದ್ಯಮದಿಂದ ಹೊರಹಾಕಲ್ಪಟ್ಟರು. ನಂತರ, ಭಾರತಕ್ಕೆ ಮರಳಲು ವಿಫಲ ಪ್ರಯತ್ನಿಸಿ, ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡರು. ಹೀಗೆ, ಬಿಳಿಯರ ಶುದ್ಧತೆ ಕಾಪಾಡಿಕೊಳ್ಳಲು, ಬಿಳಿಯರಲ್ಲದವರು ಪೌರತ್ವ ಪಡೆಯುವುದು ಕಷ್ಟಸಾಧ್ಯವಾಗಿತ್ತು.

ಪರಿಶುದ್ಧತೆಯ ವ್ಯಾಖ್ಯಾನ ಮತ್ತು

ಕೆಳಸ್ತರದ ಶಾಶ್ವತ ಸ್ಥಾನಮಾನ:

ಮಧ್ಯಮ ಜಾತಿಗಳು ಮೇಲ್ಜಾತಿಯವರೊಂದಿಗೆ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ, ಕೆಳಜಾತಿಗಳು ಮಾತ್ರ ಶಾಶ್ವತವಾಗಿ ಹೊರಗೆ ತಳ್ಳಲ್ಪಟ್ಟವು. ಹಾಗಾಗಿಯೇ, ಅಮೆರಿಕಾದಲ್ಲಿ ಕಪ್ಪುವರ್ಣಿಯರು, ಭಾರತದ ದಲಿತರಂತೆ ನಾಗರಿಕ ಸಮಾಜ ವ್ಯವಸ್ಥೆಯ ಹೊರಗೆ ಉಳಿದುಬಿಟ್ಟರು. ಅವರ ದೈನಂದಿನ ಬದುಕು ದಲಿತರಂತೆ ಕಳಂಕಮಯವಾಗಿತ್ತು.

ಅಮೆರಿಕಾದಲ್ಲಿ, ಕಪ್ಪುವರ್ಣಿಯರರಿಗೆ, ಬಿಳಿಯವರ ಮನೆಗಳಿಗೆ ಮುಂಬಾಗಿಲಿನ ಪ್ರವೇಶವಿರಲಿಲ್ಲ. ಅಲ್ಲದೆ, ಸೂರ್ಯಾಸ್ತದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ನಿಷೇಧಿಸಲಾಗಿತ್ತು. ಒಂದು ವೇಳೆ ಕಾಣಿಸಿಕೊಂಡಲ್ಲಿ ಜೀವಕ್ಕೆ ಅಪಾಯವಿತ್ತು. ಹಾಗೆಯೇ, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ, ಅವರಿಗೆ ಕುಳಿತು ತಿನ್ನಲು ಅನುಮತಿಯಿದ್ದರೂ, ಅವರು ಬಳಸಿದ ಗಾಜಿನ ಪ್ಲೇಟುಗಳನ್ನು ಎಲ್ಲರೆದುರೇ ರೆಸ್ಟೋರೆಂಟಿನವರು ಒಡೆದು ಹಾಕಿ ಜಾತಿ ಮಾಲಿನ್ಯದ ಪರಿಭಾಷೆಯನ್ನು ಪ್ರದರ್ಶಿಸುತ್ತಿದ್ದರು.

ಭಾರತದಲ್ಲಿ, ಅಸ್ಪöÈಶ್ಯರಿಗೆ ಹೇಗೆ ದೇವಾಲಯಗಳ ಒಳಗೆ ಪ್ರವೇಶವಿರಲಿಲ್ಲವೋ, ಹಾಗೆಯೇ, ಅಮೆರಿಕಾದಲ್ಲಿ 1978ರವರೆಗೆ ಚರ್ಚ್ ಪಾದ್ರಿಯಾಗಲು ಕಪ್ಪುವರ್ಣಿಯರಿಗೆ ಅವಕಾಶವಿರಲಿಲ್ಲ. ಅಲ್ಲಿ ಗುಲಾಮರಿಗೆ, ಬೈಬಲ್ ಓದು ನಿಷೇಧವಾಗಿದ್ದರೆ, ಭಾರತದಲ್ಲಿ ಅಸ್ಪöÈಶ್ಯರಿಗೆ ಸಂಸ್ಕöÈತ ನಿಷೇಧವಾಗಿತ್ತು. ಅಲ್ಲಿನ ಚರ್ಚುಗಳಲ್ಲಿ, ಕಪ್ಪುವರ್ಣಿಯರಿಗೆ ಹಿಂದಿನ ಸಾಲುಗಳಲ್ಲಿ ಮಾತ್ರ ಕುಳಿತುಕೊಳ್ಳಲು ಅವಕಾಶವಿತ್ತು. ಮುಂದೆ, ನಾಗರಿಕ ಹಕ್ಕುಗಳ ಸ್ಥಾಪನೆಯ ಕಾಲದಲ್ಲೂ ಕೂಡ ಕಪ್ಪುವರ್ಣಿಯರನ್ನು ಸಾಮಾನ್ಯ ದೈನಂದಿನ ಚಟುವಟಿಕೆಗಳಿಂದ ಹೊರವಿಡಲಾಗಿತ್ತು. ಅವರು, ಪಟ್ಟಣಕ್ಕೆ ಬರುವ ಸರ್ಕಸ್ ಅಥವಾ ರಾಜಕೀಯ ಸಮಾರಂಭಗಳಿAದ ದೂರವಿರುತ್ತಿದ್ದರು. ಇತಿಹಾಸಕಾರ ಡೇವಿಡ್ ರೋಡಿಗರ್ ದಾಖಲಿಸಿದಂತೆ, ಅವರನ್ನು ಸ್ವಾತಂತ್ರ÷್ಯದಿನದ ಮೆರವಣಿಗೆಯಿಂದ ಓಡಿಸಲಾಗಿತ್ತು. ಇತಿಹಾಸಕಾರ ಡಬ್ಲೂ÷್ಯ.ಡಬ್ಲು÷್ಯ.ಹಂಟರ್ ಹೇಳುವಂತೆ, ‘ಕೆಳಜಾತಿಯವರು ಈ ವ್ಯವಸ್ಥೆಯಿಂದ ಎಂದಿಗೂ ಹೊರಬರಲು ಸಾಧ್ಯವಿಲ್ಲ.’

ಒಟ್ಟಿನಲ್ಲಿ, ಬಿಳಿಯರು ಹೇರಲಾದ ಎಲ್ಲ ನಿರ್ಬಂಧಗಳನ್ನು ಶಾಸ್ತೊçÃಕ್ತವಾಗಿ ಸಮರ್ಥಿಸುತ್ತಾ ಬರಲಾಯಿತು. ಇದರಿಂದಾಗಿ, ಕಪ್ಪುವರ್ಣಿಯರಿಗೆ ತಾವು ಮಾಡುತ್ತಿದ್ದ ಕೆಳದರ್ಜೆಯ ಕೆಲಸದಿಂದಾಗಿ ಕ್ರಮೇಣ ಕೀಳರಿಮೆ ಅಂತರ್ಗತವಾಯಿತು.

ಹತ್ತೊಂಬತ್ತನೇ ಶತಮಾನದಲ್ಲಿ ವಾಸ್ತುಶಿಲ್ಪ ತರಬೇತಿ ಪಡೆದ ಒಬ್ಬ ಕಪ್ಪುವರ್ಣಿಯನಿಗೆ ನಕಾಶೆಗಳನ್ನು ತಲೆಕೆಳಗಾಗಿ ಓದಲು ಅಭ್ಯಶಿಸುವಂತೆ ಹೇಳಲಾಯಿತು. ವಿದ್ವಾಂಸ ಚಾರ್ಲ್ಸ್ ಡಬ್ಲೂ÷್ಯ. ಮಿಲ್ಸ್ ಹೇಳಿದಂತೆ, ಬಿಳಿ ಗ್ರಾಹಕರು ಅವನ ಪಕ್ಕದಲ್ಲಿ ನಿಲ್ಲುವುದನ್ನು ತಪ್ಪಿಸಿ, ಎದುರು ಬದುರಾಗಿ ನಿಲ್ಲಲು ಮತ್ತು ಅವರಿಗೆ ಓದಲು ಅನುಕೂಲ ಮಾಡಿಕೊಡಲು, ಈ ಕಲಿಕೆ ಅವನಿಗೆ ಅಗತ್ಯವಿತ್ತು.

ಇಪ್ಪತ್ತನೇ ಶತಮಾನದಲ್ಲಿಯೂ ಕೂಡಾ ಮಿಸ್ಸಿಸ್ಸಿಪ್ಪಿಯಲ್ಲಿ, ಒಬ್ಬ ತಾಯಿ, ಕಪ್ಪು ಹುಡುಗಿಯ ಕೈ ಮುಟ್ಟಿತೆಂದು ತನ್ನ ಮಗುವಿನ ಕೈ ಉಜ್ಜಿ ತೊಳೆದ ಘಟನೆ ವರದಿಯಾಗಿದೆ.

ವಿಶೇಷವಾಗಿ, ಅಮೆರಿಕಾದ ದಕ್ಷಿಣ ಪ್ರಾಂತ್ಯಗಳಲ್ಲಿ ಈ ಪರಿಶುದ್ಧತೆ ಆಧಾರಿತ ಸ್ಪರ್ಶ ನಿಷೇಧ 1970ರವರೆಗೂ ಮುಂದುವರಿಯಿತು. ಆದರೆ, ಉತ್ತರ ಅಮೆರಿಕಾದಲ್ಲಿ ಇಷ್ಟೊಂದು ಜಾತಿ ಕಟ್ಟುಪಾಡುಗಳಿರಲಿಲ್ಲ. ಈ ವೈರುಧ್ಯಗಳ ಹಿನ್ನೆಲೆಯಲ್ಲಿ, ದಕ್ಷಿಣದಿಂದ ಉತ್ತರಕ್ಕೆ ಬಂದ ಬಿಳಿಯನೊಬ್ಬ ಹೇಳಿಕೊಂಡAತೆ, ಮೊದಮೊದಲು ಕರಿಯರೊಂದಿಗೆ ಸಹಬಾಳ್ವೆ ನಡೆಸಲು ಕಷ್ಟವಾಗುತ್ತಿತ್ತು. ಯಾಕೆಂದರೆ, ದಕ್ಷಿಣದಲ್ಲಿ ಅವರನ್ನು ಕೇವಲ ಕೆಲಸದವರಂತೆ ಪರಿಗಣಿಸಲಾಗಿತ್ತು, ಸಹವರ್ತಿಗಳಂತೆಯಲ್ಲ.

 

ಆಧಾರಸ್ತಂಭ ಐದು:

ವೃತ್ತಿ ಆಧಾರಿತ ಶ್ರೇಣಿಯೇ ಜಾತಿಗಳ ಅಡಿಪಾಯ

ಕೆಳಜಾತಿಯು, ಯಾವುದೇ ಸಮಾಜದಲ್ಲಿ ಜಾತಿವ್ಯವಸ್ಥೆಯ ಭದ್ರಬುನಾದಿಯಂತೆ ಕಾರ್ಯನಿರ್ವಹಿಸುತ್ತದೆ. ಅಂದರೆ, ಇಡೀ ವ್ಯವಸ್ಥೆಯ ಭಾರವನ್ನು ಕೆಳಜಾತಿ ಸಂಭಾಳಿಸುತ್ತದೆ. 1858ರಲ್ಲಿ ಅಮೆರಿಕಾದ ಸಂಸತ್ತಿನಲ್ಲಿ ಜೇಮ್ಸ್ ಹೆನ್ರಿ ಹ್ಯಾಮಂಡ್ ಹೇಳಿದಂತೆ, ‘ಎಲ್ಲಾ ಸಾಮಾಜಿಕ ವ್ಯವಸ್ಥೆಗಳಲ್ಲಿ ಶ್ರಮವಹಿಸಿ ದುಡಿಯಲು ಒಂದು ವರ್ಗದ ಅಗತ್ಯವಿರುತ್ತದೆ. ಅದನ್ನು ಯಾವಾಗಲೂ ಕಡಿಮೆ ಬುದ್ಧಿಶಕ್ತಿ ಮತ್ತು ಕೌಶಲ್ಯ ಹೊಂದಿರುವAತೆ ನೋಡಿಕೊಳ್ಳಬೇಕು. ಈ ವರ್ಗಕ್ಕೆ ಬೇಕಾಗಿರುವ ಅವಶ್ಯಕತೆಗಳೆಂದರೆ, ಶಕ್ತಿ ಮತ್ತು ನಿಷ್ಠೆ ಮಾತ್ರ. ಕಪ್ಪುವರ್ಣಿಯರು ಈ ಸಾಮಾಜಿಕ ತಳಹದಿಯ ಕೆಲಸಕ್ಕೆ ಸೂಕ್ತರಾಗಿದ್ದಾರೆ. ಅವರು ಬಿಳಿಯರ ಗುಲಾಮಗಿರಿ ಮಾಡುವುದರಿಂದ, ಮೂಲತಃ ದೇವರು ಅವರಿಗೆ ನಿಗದಿಪಡಿಸಿದ ಸ್ಥಿತಿಗಿಂತ ಔನತ್ಯ ಸಾಧಿಸುತ್ತಾರೆ.’

ಇನ್ನು ಭಾರತೀಯ ಜಾತಿವ್ಯವಸ್ಥೆಯಲ್ಲಿ, ಪುರೋಹಿತರಿಂದ ಹಿಡಿದು ಶೌಚಾಲಯ ಸ್ವಚ್ಛಗೊಳಿಸು ವವರವರೆಗೆ ಹೆಚ್ಚು ವಿಸ್ತಾರದ ಜಾತಿ ಶ್ರೇಣಿಗಳಿವೆ. ಶೌಚಾಲಯ ಶುದ್ಧಗೊಳಿಸುವವರು ಅಥವಾ ಚರ್ಮ ಸಂಸ್ಕರಿಸುವವರನ್ನು ಅಸ್ಪöÈಶ್ಯರೆನ್ನುತ್ತಾರೆ. ಅಂತೆಯೇ, ಇಪ್ಪತ್ತನೇ ಶತಮಾನದವರೆಗೂ ಕಪ್ಪುವರ್ಣಿಯರನ್ನು ಅತ್ಯಂತ ಕೀಳಾಗಿ ಕಾಣಲಾಯಿತು. ಅವರು ಕೇವಲ ಸೇವಕರು, ಚಾಲಕರು ಅಥವಾ ದ್ವಾರಪಾಲಕರಾಗಬಹುದಷ್ಟೆ. ಸ್ವಲ್ಪ ಶಿಕ್ಷಣ ಪಡೆದವರು, ಟೀಚರ್ ಅಥವಾ ಆರೋಗ್ಯಪಾಲಕರಾಗಿ ನೇಮಕಗೊಳ್ಳುತ್ತಿದ್ದರು.

1971ರಲ್ಲಿ ಅಮೆರಿಕಾ ಮತ್ತು ಭಾರತದ ಜಾತಿವ್ಯವಸ್ಥೆಯ ತುಲನಾತ್ಮಕ ಅಧ್ಯಯನ ಮಾಡಿದ ಸಿಡ್ನಿ ವರ್ಬಾ, ಬಶಿರುದ್ದೀನ್ ಅಹ್ಮದ್ ಮತ್ತು ಅನಿಲ್ ಭಟ್ ಹೇಳುವಂತೆ, ‘ಎರಡೂ ದೇಶಗಳಲ್ಲಿ ತೀವ್ರ ತರನಾದ ಜಾತಿ ಆಧಾರಿತ ಔದ್ಯೋಗಿಕ ಅಂತರವಿದೆ.’ ದಕ್ಷಿಣ ಕೆರೊಲಿನಾ ಪ್ರಾಂತ್ಯದಲ್ಲಿ, ಕಪ್ಪುವರ್ಣಿಯರು ಕೃಷಿ ಅಥವಾ ಮನೆಕೆಲಸ ಹೊರತುಪಡಿಸಿ ಇನ್ಯಾವುದೇ ದುಡಿಮೆ ಮಾಡುವುದನ್ನು ನಿಷೇಧಿಸಲಾಗಿತ್ತು. ಅಲ್ಲದೆ, ಕುಶಲಕರ್ಮಿ, ಮೆಕ್ಯಾನಿಕ್, ವ್ಯಾಪಾರಿ ಅಥವಾ ಕಲಾಕಾರ ತರಬೇತಿ ಪಡೆದರೂ ಸ್ವಂತ ಉಪಯೋಗಕ್ಕಾಗಿ ವೃತ್ತಿಯನ್ನಾಗಿಸಲು ಮಾತ್ರ ಅವಕಾಶವಿರಲಿಲ್ಲ. ಒಂದು ವೇಳೆ ವೃತ್ತಿಯನ್ನಾಗಿ ತೆಗೆದುಕೊಳ್ಳಬೇಕೆಂದಿದ್ದರೆ, ಪ್ರತಿವರ್ಷ 100 ಡಾಲರ್ ಪಾವತಿಸಿ, ಜಿಲ್ಲಾ ನ್ಯಾಯಾಲಯದಿಂದ ಪರವಾನಗಿ ಪಡೆಯಬೇಕಿತ್ತು. ಅದನ್ನು ಪ್ರತಿವರ್ಷ ನವೀಕರಿಸಬೇಕಿತ್ತು ಕೂಡ. ಈ ಕಾನೂನು ಕಪ್ಪುವರ್ಣಿಯರಿಗೆ ಮಾತ್ರ ಅನ್ವಯವಾಗಿತ್ತು.

ಗುಲಾಮಗಿರಿ ಯುಗದಲ್ಲಿ ಉತ್ತರ ಕೆರೊಲಿನಾ ಪ್ರಾಂತ್ಯದಲ್ಲಿ, ಕಪ್ಪುವರ್ಣಿಯರಿಗೆ ಯಾವುದೇ ರೀತಿಯ ಸರಕುಗಳ ವ್ಯಾಪಾರ ಮಾಡಲು ಅವಕಾಶವಿರಲಿಲ್ಲ. ಒಂದು ವೇಳೆ ಮಾಡುತ್ತಿದ್ದುದು ಕಂಡು ಬಂದಲ್ಲಿ, ಮೂವತ್ತೊಂಬತ್ತು ಛಡಿಯೇಟಿನ ಶಿಕ್ಷೆ ಅನುಭವಿಸಬೇಕಿತ್ತು. ಇದರ ಉದ್ದೇಶವಿಷ್ಟೇ, ಕಪ್ಪುವರ್ಣಿಯರು ಸ್ವಾವಲಂಬಿಗಳಾಗಿ ಬದುಕುವುದನ್ನು ತಡೆಯುವುದು. ವಿದ್ವಾಂಸ ಎಡ್ವರ್ಡ್ ರೊಯ್ಟರ್ ವ್ಯಾಖಾನಿಸಿದಂತೆ, ‘ನೀಗ್ರೋಗಳೆಂದರೆ ಬಿಳಿಯರ ಸೇವಕರು.’ ಕಪ್ಪುವರ್ಣಿಯರ ಉದ್ಯೋಗ ಆಯ್ಕೆಗಳ ವ್ಯಾಪ್ತಿ ಬಹಳ ಚಿಕ್ಕದಾಗಿತ್ತು. ಮಿಸ್ಸಿಸ್ಸಿಪ್ಪಿಯ ಗವರ್ನರ್ ಜೇಮ್ಸ್ ಕೆ. ವರ್ದಮಾನ್ ಹೇಳಿದಂತೆ, ‘ನೀಗ್ರೋವಿನ ಮಹತ್ವಾಕಾಂಕ್ಷೆ ಸೇವಕನ ಕಾರ್ಯವ್ಯಾಪ್ತಿಗಿಂತ ಮೀರಬಾರದು. ದೇವರು ಅವನನ್ನು ಸೃಷ್ಟಿಸಿರುವುದೇ ಈ ಕೆಲಸಗಳಿಗಾಗಿ.’

ಒಂದನೆಯ ಮಹಾಯುದ್ಧದ ದಿನಗಳಲ್ಲಿ ದಕ್ಷಿಣ ಭಾಗದಿಂದ ಉತ್ತರಕ್ಕೆ ವಲಸೆ ಹೋದ ಕಪ್ಪುವರ್ಣಿಯರು ಅರಿತುಕೊಂಡ ಸತ್ಯವೆಂದರೆ, ಯಾವುದರಿಂದಾದಲೂ ಬಿಡಿಸಿಕೊಳ್ಳಬಹುದು, ಜಾತಿಯಿಂದಲ್ಲ. ಆ ದಿನಗಳಲ್ಲಿ ಅಮೆರಿಕಕ್ಕೆ ಕಾಲಿಟ್ಟ ಇಂಗ್ಲಿಷ್ ಬಾರದ ಯುರೋಪಿಯನ್ನರು ಕೂಡ ಇವರಿಗಿಂತ ಹೆಚ್ಚಿನ ಸವಲತ್ತು ಮತ್ತು ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದರು. ಆದರೆ, ಇವರಿಗೆ ಮಾತ್ರ ಕೆಳಮಟ್ಟದ ಉದ್ಯೋಗಗಳಿಗಷ್ಟೇ ಪ್ರವೇಶವಿತ್ತು.

ಲೇಖಕ ವಿಲಿಯಂ ಎ.ಸಿಂಕ್ಲೇರ್ ಬರೆದಂತೆ, ‘ಸುಧಾರಣೆಯ ಪ್ರತಿಯೊಂದು ಮಾರ್ಗವನ್ನು ಕಪ್ಪುವರ್ಣಿಯರಿಗೆ ಮುಚ್ಚಲಾಗಿತ್ತು.’ ಅದೇ ರೀತಿ, ನ್ಯೂಯಾರ್ಕ್ ಮತ್ತು ಫಿಲಡೆಲ್ಫಿಯಾದಲ್ಲಿ, ಕಪ್ಪುವರ್ಣಿಯರಿಗೆ ವಾಹನ ಚಲಾಯಿಸಲು ಪರವಾನಗಿ ನಿರಾಕರಿಸಲಾಯಿತು. ವಿಶೇಷವೆಂದರೆ, ಕಪ್ಪುವರ್ಣಿಯ ಮಹಿಳೆಯರಿಗೆ ಬಿಳಿ ಮಾಲೀಕರಿಂದ ಹುಟ್ಟಿದ ಮಕ್ಕಳಿಗೆ ಕೆಲವು ವಿನಾಯಿತಿ ನೀಡಲಾಗಿತ್ತು. ಅಂತವರು, ಬಡಗಿಗಳಾಗಿ ಅಥವಾ ಕಮ್ಮಾರರಾಗಿ ಸೇವೆ ಸಲ್ಲಿಸಲು ಅನುಮತಿ ನೀಡಲಾಗಿತ್ತು.

ಮಾನವಶಾಸ್ತçಜ್ಞರಾದ ಡಬ್ಲೂ÷್ಯ.ಲಾಯ್ಡ್ ವಾರ್ನರ್ ಮತ್ತು ಆಲಿಸನ್ ಡೇವಿಸ್ ಹೇಳುವಂತೆ, ‘ಭಾರತದಲ್ಲಿ ಜಾತಿಗಳೊಳಗೆ ಸಾವಿರಾರು ಉಪಜಾತಿಗಳಿದ್ದರೂ, ಯಾವುದೇ ಉದ್ಯೋಗವು ಒಂದು ಜಾತಿಗೆ ಸೀಮಿತವಾಗಿಲ್ಲ.’ ಉದಾಹರಣೆಗೆ, ಬ್ರಾಹ್ಮಣರು ಹಲವಾರು ರೀತಿಯ ಉದ್ಯೋಗಗಳನ್ನು ಮಾಡುತ್ತಾರೆ. ಫ್ರಾನ್ಸಿನ ಮಾನವಶಾಸ್ತçಜ್ಞ ಸೆಲೆಸ್ಟಿನ್ ಬೌಗ್ಲೆ ಹೇಳುವಂತೆ, ‘ಭಾರತೀಯ ಜಾತಿವ್ಯವಸ್ಥೆಯಲ್ಲಿ ನಾವು ಈ ಮಾದರಿಯ ಜಾತಿ ವಿಂಗಡನೆಯನ್ನು ಕಾಣಬಹುದು- ವ್ಯಾಪಾರಿಗಳಲ್ಲಿ ಆರು ಉಪಜಾತಿಗಳು; ಬರಹಗಾರರಲ್ಲಿ ಮೂರು; ರೈತರಲ್ಲಿ ನಲವತ್ತು; ಅಲೆಮಾರಿಗಳಲ್ಲಿ ಇಪ್ಪತ್ನಾಲ್ಕು; ಕುರುಬರು ಮತ್ತು ಬೇಟೆಗಾರರಲ್ಲಿ ಒಂಬತ್ತು; ಮೀನುಗಾರರು ಮತ್ತು ನಾವಿಕರಲ್ಲಿ ಹದಿನಾಲ್ಕು; ಕುಶಲಕರ್ಮಿಗಳು, ಬಡಗಿಗಳು, ಕಮ್ಮಾರರು, ಚಿನ್ನದ ಕೆಲಸಗಾರರು ಮತ್ತು ಕುಂಬಾರರಲ್ಲಿ ಹನ್ನೆರಡು; ನೇಕಾರರಲ್ಲಿ ಹದಿಮೂರು ಮತ್ತು ಮನೆಕೆಲಸ ಮಾಡುವವರಲ್ಲಿ ಹನ್ನೊಂದು.

ಅಮೆರಿಕದಲ್ಲಿ ಕೂಡ, ಅದೇ ಮಾದರಿಯ ಜಾತಿಗಳ ವರ್ಗಿಕರಣ ಒಂದು ಕಾಲದಲ್ಲಿ ಅಸ್ತಿತ್ವದಲ್ಲಿರಬಹುದು ಅಥವಾ ಅದಕ್ಕಿಂತಲೂ ಭೀಕರವಾಗಿದ್ದಿರಬಹುದು. ಸಮಾಜಶಾಸ್ತçಜ್ಞ ಸ್ಟೀಫನ್ ಸ್ಟೆöÊನ್ಬರ್ಗ್ ಹೇಳುವಂತೆ,

1890ರಲ್ಲಿ 85 ಶೇಕಡಾ ಕಪ್ಪುವರ್ಣಿಯ ಪುರುಷರು ಮತ್ತು 96 ಶೇಕಡಾ ಮಹಿಳೆಯರು, ಕೇವಲ ಎರಡು ರೀತಿಯ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದರು; ಕೃಷಿ ಮತ್ತು ವೈಯಕ್ತಿಕ ಸೇವೆ. ನಲವತ್ತು ವರ್ಷಗಳ ನಂತರವೂ, ಇವರು ಉತ್ತರದ ನಗರಗಳಿಗೆ ವಲಸೆ ಹೋದಾಗ, ಹೆಚ್ಚಿನ ಕಪ್ಪುವರ್ಣಿಯರು ದೈಹಿಕ ದುಡಿಮೆ ಮಾತ್ರ ಮಾಡುತ್ತಿದ್ದರು. ಕೇವಲ 5 ಶೇಕಡಾ ಮಂದಿ ಶಿಕ್ಷಕರಾಗಿ ಅಥವಾ ಸಣ್ಣ ವ್ಯಾಪಾರಿಗಳಾಗಿ ಕೆಲಸ ಮಾಡುತ್ತಿದ್ದರು.

ಅಮೆರಿಕದಾದ್ಯಂತ, ಕಪ್ಪುವರ್ಣಿಯರು ಮಾಡುವ ಕೆಲಸ ಎಷ್ಟು ನಿಕೃಷ್ಟವೆಂದು ಪ್ರಚಲಿತವಿತ್ತೆಂದರೆ,

ಮೇಲ್ಜಾತಿಯವರು ಅದನ್ನು ಮಾಡಲು ಅಸಹ್ಯ ಪಡುತ್ತಿದ್ದರು. 1810ರ ದಶಕದಲ್ಲಿ ಬಿಳಿಯರು ಕೆಲವು ಕೆಲಸಗಳು ಕೇವಲ ಕಪ್ಪುವರ್ಣಿಯರಿಗೆ ಮಾತ್ರ ಸೂಕ್ತವೆಂದು ನಿರ್ಧರಿಸಿದ್ದರು. ಇತಿಹಾಸಕಾರ ಡೇವಿಡ್ ಆರ್. ರೋಡಿಗರ್ನ್ ಗಮನಿಸಿದಂತೆ, ಓಹಿಯೋದಲ್ಲಿ ಬಿಳಿಯರು ತಮ್ಮ ಸ್ವಂತ ಬಳಕೆಗಾಗಿ ಕೂಡ ನೀರು ಸಾಗಿಸುವುದನ್ನು ನಿಕೃಷ್ಟವೆಂದು ಪರಿಗಣಿಸಿದ್ದರು.

ದೈಹಿಕ ಶ್ರಮ ಮತ್ತು ಕಪ್ಪುವರ್ಣದ ನಡುವಿನ ಐತಿಹಾಸಿಕ ಸಂಬAಧ, ಕಪ್ಪುವರ್ಣಿಯರನ್ನು ಮತ್ತಷ್ಟು ದಾಸ್ಯಕ್ಕೆ ತಳ್ಳಿತು. ಇಪ್ಪತ್ತನೇ ಶತಮಾನದಲ್ಲಿಯೂ ಕೂಡ ಜಾತಿವ್ಯವಸ್ಥೆಯ ಶ್ರೇಣಿಗಳನ್ನು ಉಳಿಸಿಕೊಳ್ಳಲು ಮೇಲ್ಜಾತಿಯವರು ಸೂಕ್ತ ಮಾರ್ಗಗಳನ್ನು ಕಂಡುಕೊAಡಿದ್ದಾರೆ. 1930ರ ದಶಕದಲ್ಲಿ ಇತಿಹಾಸಕಾರ ಬರ್ಟ್ರಾಮ್ ಡಾಯ್ಲ್ ಗಮನಿಸಿದಂತೆ, ‘ಒಂದು ವೇಳೆ

ಬಿಳಿ ಮತ್ತು ಕಪ್ಪುವರ್ಣಿಯರನ್ನು ಸಮನಾದ ಹುದ್ದೆಗೆ ನೇಮಿಸಿಕೊಂಡರೂ ಅವರಿಬ್ಬರೂ ಸಮನಾದ ಕಾರ್ಯಗಳನ್ನು ಮಾಡುವಂತಿರಲಿಲ್ಲ. ಅವರೆಂದೂ ಅಧಿಕಾರ ಸ್ಥಾನ ಪಡೆಯುವಂತಿರಲಿಲ್ಲ. ಯಾಕೆಂದರೆ, ಬಿಳಿಯರು ಕಪ್ಪುವರ್ಣಿಯರನ್ನು ತಳಭಾಗದಲ್ಲಿಯೇ ಇಡಲು ಇಚ್ಚಿಸುತ್ತಾರೆ. ಒಬ್ಬ ನೀಗ್ರೋ ಹುಟ್ಟುವ ಮೊದಲೇ ಸಮಾಜದಲ್ಲಿ ಅವನ ಸ್ಥಾನ ನಿರ್ಧಾರವಾಗಿರುತ್ತದೆ. ಅವನು ಹೆಚ್ಚೆಂದರೆ, ಕಪ್ಪುವರ್ಣಿಯರ ಮೇಲಾಧಿಕಾರಿಯಾಗಬಹುದು.’

1930ರ ದಶಕದಲ್ಲಿ ಕಪ್ಪುವರ್ಣಿಯನೊಬ್ಬ ತನ್ನ ಗೆಳತಿಯನ್ನು ಭೇಟಿಯಾಗಲು ಚೆನ್ನಾಗಿರುವ ಬಟ್ಟೆ ಧರಿಸಿರುವುದನ್ನು ನೋಡಿ ಅವನನ್ನು ಸುತ್ತುವರಿದ ಬಿಳಿಯರು ಬಟ್ಟೆ ಬದಲಾಯಿಸುವಂತೆ ಆಗ್ರಹಿಸಿದರು.

ಗುಲಾಮರಾದವರಿಗೆ, ಹೊಲ ಮತ್ತು ಮನೆಕೆಲಸ ಹೊರತುಪಡಿಸಿದರೆ, ಮೇಲ್ಜಾತಿಯವರಿಗೆ ಅವರಿಚ್ಛೆಯಂತೆ ಮನರಂಜಿಸುವ ಇನ್ನೊಂದು ದಾಸ್ಯವೃತ್ತಿಗೆ ಅವಕಾಶವಿತ್ತು. ಅವರಿಗೆ ಸುಸ್ತಾದರೂ ಹಾಡಿಸುವುದಾಗಲಿ, ಹಾಡದಿದ್ದರೆ ಹೊಡೆಯುವುದಾಗಲಿ ನಡೆದಿತ್ತು.

ಮನರಂಜಿಸುವಾಗ ಅವರ ಮುಖದಲ್ಲಿ ಮೂಡುವ ಒತ್ತಾಯದ ನಗುವನ್ನು, ನಿಜವಾದ ಸಂತೋಷವೆAದು ಅಪಭ್ರಮಿಸಲಾಗಿತ್ತು. ಗುಲಾಮರನ್ನು ಅವರ ಮನೆಯವರಿಂದ ಬೇರ್ಪಡಿಸಿ, ಖರೀದಿಸಿ ಅವರಿಂದ ಮನರಂಜನೆ ಮಾಡಿಸುವಾಗಲೂ, ಅವರ ಮುಖದಲ್ಲಿ ನಗುವಿರಬೇಕೆಂದು ಒತ್ತಾಯಿಸಲಾಗುತ್ತಿತ್ತು.

ಗುಲಾಮರನ್ನು ಮಾರಾಟ ಮಾಡುತ್ತಿದ್ದ ವಿಲಿಯಂ ವೆಲ್ಸ್ ಬ್ರೌನ್ ಹೇಳಿದಂತೆ, ‘ಅವರು ಅಳುವುದನ್ನು ನೋಡಿದಾಗಲೆಲ್ಲಾ, ಅವರಿಂದ ನೃತ್ಯ ಮಾಡಿಸುತ್ತಿದ್ದೆ.’

ಹಾಗಾಗಿಯೇ, 20ನೇ ಶತಮಾನದಲ್ಲಿ ಪ್ರಸಿದ್ದರಾದ ಹೆಚ್ಚಿನ ಕಪ್ಪುವರ್ಣಿಯರೆಲ್ಲಾ ಮನೋರಂಜನೆಗಾರರು ಅಥವಾ ಆಟಗಾರರಾಗಿದ್ದರು. ಉದಾಹರಣೆಗೆ, ಮೊಹಮ್ಮದ್ ಅಲಿ. 2020ರ ಶ್ರೀಮಂತ ಕಪ್ಪುವರ್ಣಿಯರ ಪಟ್ಟಿಯಲ್ಲಿಯೂ ಕೂಡ ಮೊದಲ 20 ಜನರಲ್ಲಿ 17 ಜನರು ಮನೋರಂಜನೆ ಮತ್ತು ಕ್ರೀಡಾ ಜಗತ್ತಿಗೆ ಸೇರಿದವರು.

ಆದರೆ, ಅವರಿಗೆ ಪ್ರವೇಶವಿದ್ದ ಕ್ಷೇತ್ರಗಳಲ್ಲಿಯೂ ಅವರ ಪ್ರದರ್ಶನ ಸಾಮರ್ಥ್ಯಕ್ಕೆ ಮಿತಿಯಿತ್ತು. 1910ರಲ್ಲಿ ಕಪ್ಪುವರ್ಣಿಯ ಬಾಕ್ಸರ್ ಜಾಕ್ ಜಾನ್ಸನ್, ಬಿಳಿಯ ಜೇಮ್ಸ್ ಜೆಫ್ರಿಸ್‌ನ್ನು ಸೋಲಿಸಿದಾಗ ಜನಾಂಗೀಯ ದಂಗೆಯೆದ್ದು ಇಬ್ಬರು ಕಪ್ಪುವರ್ಣಿಯರನ್ನು ಸಾಯಿಸಿದ್ದರು.

ಶತಮಾನಗಳಿಂದ, ಕಪ್ಪುವರ್ಣಿಯರು ದೈಹಿಕ ದುಡಿಮೆಯೊಂದಿಗೆ, ಮಾಲೀಕರಿಗೆ ಮನೋರಂಜನೆಯನ್ನೂ ಮಾಡಬೇಕಿತ್ತು. ಅಮೆರಿಕಾದ ಸಂಸ್ಕçತಿಯಲ್ಲಿ ಜೋಕರ್ ಪಾತ್ರವನ್ನು ಹೆಚ್ಚಾಗಿ ಕಪ್ಪುವರ್ಣಿಯರಿಗೆ ಕೊಡಲಾಗುತ್ತಿತ್ತು. ಅವರಿಗೆ ಸಿದ್ಧಮಾದರಿಯ ಪಾತ್ರಗಳಷ್ಟೇ ಸಿಗುತ್ತಿತ್ತು. ಹೀಗೆ, ಅಮೆರಿಕಾದ ಸಮಾಜದಲ್ಲಿ ಬಿಳಿಯರು ರೂಪಿಸಿದ ಪ್ರತಿಯೊಂದು ವ್ಯವಸ್ಥೆಯಲ್ಲಿ ಕೆಳಜಾತಿಯವರನ್ನು ಶಾಶ್ವತವಾಗಿ ಅಧೀನವಾಗಿಡುವುದು ತಮ್ಮ ಹಕ್ಕೆಂದು ಪರಿಗಣಿಸಿದ್ದರು.

ಆಧಾರಸ್ತಂಭ ಆರು:

ಅಮಾನವೀಯತೆ ಮತ್ತು ಕಳಂಕ

ಮನುಷ್ಯನಾದವನು ಇನ್ನೊಬ್ಬ ಮನುಷ್ಯನನ್ನು ಅಮಾನವೀಯವಾಗಿ ಕಾಣುವುದು ಒಂದು ಆಕಸ್ಮಿಕ ಸಂಗತಿಯಲ್ಲ, ಅದೊಂದು ಪ್ರಕ್ರಿಯೆ. ಸಾಮಾನ್ಯವಾಗಿ, ತನ್ನ ಮುಂದಿರುವ ವ್ಯಕ್ತಿಯನ್ನು ಅಮಾನವೀಯವಾಗಿ ಕಂಡು, ಮಾನವ ಹಕ್ಕುಗಳನ್ನು ಸ್ಪಷ್ಟವಾಗಿ ನಿರಾಕರಿಸುವುದು ಅಸಾಧ್ಯ. ಅದಕ್ಕಾಗಿಯೇ, ಒಂದು ಜನಸಮುದಾಯದ ಮೇಲೆ ಅಧಿಕಾರ ಚಲಾಯಿಸಲು ಬಯಸುವ ಜನರು, ಇಡೀ ಒಂದು ಗುಂಪಿಗೆ ಕಳಂಕ ಹಚ್ಚುವ ಮೂಲಕ ಹಿಡಿತ ಸಾಧಿಸಲು ಬಯಸುತ್ತಾರೆ.

ಈ ರೀತಿ ಒಂದು ಸಮುದಾಯವನ್ನು ಗುರಿಯಾಗಿಸಿ, ಕಳಂಕ ಹಚ್ಚಿ, ಅವರಲ್ಲಿ ಕೀಳರಿಮೆ ತುಂಬಿ, ಅವರ ದೃಷ್ಟಿಕೋನ ಮತ್ತು ಆಲೋಚನೆಗಳನ್ನು ಹತೋಟಿಯಲ್ಲಿಡುತ್ತಾರೆ. ಇಂತಹ ದೌರ್ಜನ್ಯಕ್ಕೆ ಒಳಗಾದ ಜನರು ಸ್ವಂತವಾಗಿ ಆಲೋಚಿಸುವುದನ್ನು ಬಿಟ್ಟುಬಿಡುವುದಲ್ಲದೆ, ತಮ್ಮವರೊಂದಿಗೆ ಸಮುದಾಯ ಚಿಂತನೆಗಳನ್ನು ಕೂಡ ಹಂಚಿಕೊಳ್ಳುವುದಿಲ್ಲ.

ನಾಜಿ ಆಳ್ವಿಕೆಯ ಜರ್ಮನಿಯಲ್ಲಿ, ಯಹೂದಿಗಳನ್ನು ಮತ್ತು ಅಮೆರಿಕಾದಲ್ಲಿ, ಕಪ್ಪುವರ್ಣಿಯರನ್ನು ಹೆಸರಿಲ್ಲದ ಬಲಿಪಶುಗಳನ್ನಾಗಿಸಿ, ದೇಶದ ಕಷ್ಟನಷ್ಟಗಳಿಗೆ ಅವರನ್ನೇ ಹೊಣೆಯಾಗಿಸಲಾಗುತ್ತಿತ್ತು. ಜರ್ಮನಿಯು, ತನ್ನ ಮೊದಲನೆಯ ಮಹಾಯುದ್ಧದ ಸೋಲು ಮತ್ತು ಆರ್ಥಿಕ ಸಂಕಷ್ಟಗಳಿಗೆ ಯಹೂದಿಗಳನ್ನು ದೂಷಿಸಿದಂತೆ, ಅಮೆರಿಕಾ ಕೂಡ ತನ್ನ ಸಾಮಾಜಿಕ ಸಮಸ್ಯೆಗಳಿಗೆ ಕಪ್ಪುವರ್ಣಿಯರನ್ನು ದೂಷಿಸಿತು. ಇಲ್ಲಿ ವ್ಯಕ್ತಿಗಳನ್ನು ಒಂದು ಕಳಂಕಿತ ಸಮುದಾಯವಾಗಿ ಪ್ರತ್ಯೇಕಿಸಲಾಯಿತು. ಅವರು ಮೇಲ್ಜಾತಿಯವರಂತೆ ವ್ಯಕ್ತಿಗಳಾಗಿರಲಿಲ್ಲ, ಒಂದು ನಿಗದಿತ ವ್ಯಕ್ತಿತ್ವವಾಗಿ ಗುರುತಿಸಲ್ಪಟ್ಟಿದ್ದರು. ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದು ಕೇವಲ ಮೇಲ್ಜಾತಿಯವರ ಸವಲತ್ತಾಗಿತ್ತು.

ಜರ್ಮನಿಯಲ್ಲಿ ನಡೆದ 6 ಮಿಲಿಯನ್ ಯಹೂದಿಗಳ ಹತ್ಯಾಕಾಂಡದ ಬಗ್ಗೆ ನಮಗೆ ದುಃಖವಿದೆ. ಆದರೆ, ಅದಕ್ಕಿಂತ ಮುಂಚೆ ಕಾರ್ಮಿಕ ಶಿಬಿರಗಳಲ್ಲಿ ಹತ್ಯೆಯಾದ ಲಕ್ಷಾಂತರ ಜನರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕಾರ್ಮಿಕ ಶಿಬಿರಗಳಲ್ಲಿ ಒತ್ತೆಯಾಳುಗಳಾಗಿದ್ದ ಯಹೂದಿಗಳಾಗಲಿ ಅಥವಾ ಕಪ್ಪುವರ್ಣಿಯರಾಗಲಿ ಅತ್ಯಂತ ಅಮಾನವೀಯತೆಗೆ ಒಳಪಟ್ಟಿದ್ದರು. ಉದಾಹರಣೆಗೆ, ಯಹೂದಿಗಳನ್ನು ನಿರ್ವಸ್ತçಗೊಳಿಸಿದರು ಮತ್ತು ತಲೆ ಬೋಳಿಸಿದರು. ಅವರ ಕಾರ್ಮಿಕ ಶಿಬಿರಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ಹಾಜರಾತಿ ಕರೆಯುವ ಸಂದರ್ಭದಲ್ಲಿ ತಾಸುಗಟ್ಟಲೆ ಚಳಿ, ಬಿಸಿಲೆನ್ನದೆ ಬೋಳು ತಲೆ ಮತ್ತು ಕಡಿಮೆ ಬಟ್ಟೆಯಲ್ಲಿ ನಿಲ್ಲಬೇಕಿತ್ತು. ಹೀಗೆ ವಿವಿಧ ವರ್ಗದ ಹಾಗೂ ವಿದ್ಯಾರ್ಹತೆಯ ಎಲ್ಲರೂ ಒಂದೇ ಗುಂಪಿನಲ್ಲಿ ಸಾಮಾನ್ಯರಂತೆ ಇರಬೇಕಿತ್ತು. ಅವರು ಕೇವಲ ಸಂಖ್ಯೆಯಾಗಿ ಮಾರ್ಪಟ್ಟಿದ್ದರು.

ಆಫ್ರಿಕಾದಿಂದ ಗುಲಾಮರಾಗಿ ಅಮೆರಿಕಕ್ಕೆ ಸಾಗಿಸಲ್ಪಟ್ಟ ಕಪ್ಪುವರ್ಣಿಯರನ್ನು ಅವರ ಮೂಲ ಹೆಸರಿನಿಂದ ಗುರುತಿಸಲಿಲ್ಲ, ಬದಲಾಗಿ ಹಾಸ್ಯಾಸ್ಪದ ಹೆಸರುಗಳಿಂದ ಕರೆಯಲಾಯಿತು. ಇದು ಹೇಗಿತ್ತೆಂದರೆ, ನಾಯಿಗೆ ಮಾಲೀಕನ ಬದಲಾವಣೆ ಮಾಡಿದಂತೆ. ಅವರ ಗತಕಾಲವನ್ನು ಸಂಪೂರ್ಣವಾಗಿ ಅಳಸಿ ಹಾಕಲಾಯಿತು. ಅದೇ ರೀತಿ, ಜರ್ಮನಿಯಲ್ಲಿ ಯಹೂದಿಗಳನ್ನು ನಡೆಸಿಕೊಳ್ಳಲಾಯಿತು. ಭಾರತದಲ್ಲೂ ಕೂಡ ಅಸ್ಪöÈಶ್ಯರಿಗೆ ಅವರು ನಿರ್ವಹಿಸಿದ ವೃತ್ತಿಗನುಗುಣವಾಗಿ ಉಪನಾಮಗಳನ್ನು ನಿಗದಿಪಡಿಸಲಾಯಿತು. ಅವರ ಹೆಸರೇ ಜಾತಿಯನ್ನು ಗುರುತಿಸುತ್ತಿತ್ತು. ದುರಾದೃಷ್ಟವಷಾತ್, ಜಾತಿಯ ಪರಿಚಯವೆಂದರೆ, ಅವನತಿಯ ಘೋಷಣೆೆ. ಆದರೆ, ಬ್ರಾಹ್ಮಣರು ದೇವರ ಹೆಸರನ್ನೇ ಇಟ್ಟುಕೊಳ್ಳುತ್ತಿದ್ದರು.

ಎರಡು ಆಧುನಿಕ ಜಾತಿವ್ಯವಸ್ಥೆಯಿರುವ, ಯುರೋಪ್ ಮತ್ತು ಅಮೆರಿಕಾದ ಕಾರ್ಮಿಕ ಶಿಬಿರಗಳಲ್ಲಿ ಒತ್ತೆಯಾಳುಗಳಿಂದ ಅಮಾನವೀಯವಾಗಿ ಭಾರೀ ಕೆಲಸವನ್ನು ಮಾಡಿಸುತ್ತಿದ್ದರು. ಆದರೆ, ಆಹಾರ ಸರಿಯಾಗಿ ಕೊಡುತ್ತಿರಲಿಲ್ಲ, ಬರಿ ಬದುಕುಳಿಯಲು ಎಷ್ಟು ಬೇಕೋ ಅಷ್ಟೇ ಸಿಗುತ್ತಿತ್ತು. ಅದರಿಂದಾಗಿ, ಎಷ್ಟೋ ಮಂದಿ ನಿಧಾನವಾಗಿ, ಹಸಿವಿನಿಂದ ಮತ್ತು ದುಡಿಯಲಾಗದೆ ಸಾವನ್ನಪ್ಪುತ್ತಿದ್ದರು.

ಅವರೆಲ್ಲರಿಗೂ ಉದ್ದೇಶಪೂರ್ವಕವಾಗಿ ಒಂದೇ ಅಳತೆಯ ಸಮವಸ್ತçಗಳನ್ನು ಕೊಡಲಾಗುತ್ತಿತ್ತು. ಯಾವುದೇ ನೈಸರ್ಗಿಕ ಮಾನವ ಸ್ಪಂದನೆಗಳಿಗೆ ಅವಕಾಶವಿರಲಿಲ್ಲ. ಉದಾಹರಣೆಗೆ, ಅವರ ಮಕ್ಕಳನ್ನು ಎಳೆದುಕೊಂಡು ಹೋಗುವಾಗ, ಹೆಂಡತಿ ಅಥವಾ ಗಂಡನನ್ನು ಮಾರುವಾಗ, ಅಳಲು ಬಿಡದೆ ಹಾಡಲು ಒತ್ತಾಯಿಸಲಾಗುತ್ತಿತ್ತು. ಪ್ರೀತಿಪಾತ್ರರ ಧ್ವನಿ ಕೇಳದಂತೆ, ಕಣ್ಣೀರನ್ನು ನೋಡದಂತೆ ಮಾಡಲಾಗುತ್ತಿತ್ತು. ಅಂತಹ ಮನುಷ್ಯ ಸಹಜ ಸ್ಪಂದನೆಗಳಿಗೆ ಅವರು ಶಿಕ್ಷೆ ಅನುಭವಿಸುತ್ತಿದ್ದರು.

‘ದಲಿತ ಧ್ವನಿ’ ಸಂಪಾದಕ ವಿ.ಟಿ.ರಾಜಶೇಖರ್ ಬರೆದಂತೆ, ‘ಭಾರತದಲ್ಲಿ, ದಲಿತರು ಒಂದು ವೇಳೆ ಹಸಿವನ್ನು ತಾಳಲಾರದೆ ಆಹಾರವನ್ನು ಕದ್ದರೆ ಅವರನ್ನು ಹೊಡೆದು ಸಾಯಿಸಲಾಗುತ್ತಿತ್ತು. ಅಮೆರಿಕಾದ ಗುಲಾಮರಂತೆಯೇ, ದಲಿತರು ವಿದ್ಯೆ ಕಲಿತರೆ, ಶಿಕ್ಷೆಯಾಗಿ ಅವರ ನಾಲಿಗೆಯನ್ನು ಕತ್ತರಿಸುತ್ತಿದ್ದರು ಅಥವಾ ಕರಗಿದ ಸೀಸವನ್ನು ಕಿವಿಗೆ ಸುರಿಯುತ್ತಿದ್ದರು.’ ಅಮೆರಿಕಾದಲ್ಲಿ ಕಪ್ಪುವರ್ಣಿಯರಿಗೆ 20ನೇ ಶತಮಾನದವರೆಗೆ ದುಡಿಮೆಗೆ ವೇತನ ನಿರಾಕರಿಸಲಾಗಿತ್ತು. ಆನಂತರ, ಕಡಿಮೆ ಸಂಬಳದಲ್ಲಿ ದುಡಿಸಲಾಗುತ್ತಿತ್ತು. ಅಕಸ್ಮಾತ್, ಹಸಿವಿನಿಂದ ಆಹಾರ ಅಥವಾ ಚಿಲ್ಲರೆ ಕಾಸನ್ನು ಕದ್ದರೆ, ತಮ್ಮನ್ನು ಸಮರ್ಥಿಸಿಕೊಂಡರೆ, ಅಥವಾ ಮೇಲ್ಜಾತಿಯವರನ್ನು ಪ್ರಶ್ನಿಸಿದರೆ ಅವರನ್ನು ಸಾಯಿಸಲಾಗುತ್ತಿತ್ತು. ನಾಜಿ ಕಾರ್ಮಿಕ ಶಿಬಿರಗಳಲ್ಲಿ, ಕೈದಿಗಳಿಗೆ ಕೊಡುತ್ತಿದ್ದ ಕ್ರೂರ ಶಿಕ್ಷೆಯೆಂದರೆ, ಖಾಲಿ ಹೊಟ್ಟೆಯಲ್ಲಿ ಬೇಕರಿಯಲ್ಲಿ ಕೆಲಸ ಮಾಡಿಸುವುದು. ಅವರು ಹಸಿವಿನಿಂದ ಬಳಲುತ್ತಾ, ಘಮಘಮಿಸುವ ಆಹಾರ ಬೇಯಿಸಬೇಕಿತ್ತು.

ಅಮೆರಿಕಾದಲ್ಲಿ, ಗುಲಾಮರ ಹರಾಜು ಪ್ರಕ್ರಿಯೆ ಘೋರ ಸಾರ್ವಜನಿಕ ಪ್ರದರ್ಶನವಾಗಿತ್ತು. ಗುಲಾಮರು ಹೆಚ್ಚು ಬೆಲೆಗೆ ಮಾರಲ್ಪಡುವ ಸಲುವಾಗಿ ಹರ್ಷಚಿತ್ತರಾಗಿ ಕಾಣಿಸಿಕೊಳ್ಳಬೇಕಿತ್ತು. ಜನಸಮೂಹದ ಮುಂದೆ ಮಹಿಳೆಯರಿಗೆ ನಗ್ನರಾಗಿ ನಿಲ್ಲಲು ಆದೇಶಿಸಲಾಗಿತ್ತು. ಗಂಟೆಗಟ್ಟಲೆ, ಪುರುಷರ ದೈಹಿಕ ಪರೀಕ್ಷೆ ನಡೆಸಲಾಗುತ್ತಿತ್ತು. ಹರಾಜಿನಲ್ಲಿ, ಅವರು ಯಾವುದೇ ಪ್ರಶ್ನೆಗೆ ನಗುತ್ತಾ ಉತ್ತರಿಸಬೇಕಿತ್ತು ಮತ್ತು ಮಾರಾಟವಾಗದಿದ್ದಲ್ಲಿ ಶಿಕ್ಷೆಗೆ ಒಳಗಾಗುತ್ತಿದ್ದರು. ಗುಲಾಮಗಿರಿಯಿಂದ ಮುಕ್ತಿಹೊಂದಿದ ಜಾನ್ ಬ್ರೌನ್ ಹೇಳಿದಂತೆ, ‘ಗುಲಾಮರು ತ್ವರಿತವಾಗಿ, ಸಂತೋಷದಿAದ ಉತ್ತರಿಸಬೇಕಿತ್ತು. ಈ ಹರಾಜಿನಲ್ಲಿ, ಗಂಡ-ಹೆAಡತಿಯಿAದ, ಮಕ್ಕಳು-ಹೆತ್ತವರಿಂದ, ಒಂದು ವಿದಾಯ ಹೇಳಲು ಅವಕಾಶವಿಲ್ಲದೆ ಬೇರ್ಪಡುತ್ತಿದ್ದರು ಮತ್ತು ಪ್ರೀತಿಪಾತ್ರರು ಹರಾಜಾಗುವುದನ್ನು ನೋಡುತ್ತಿದ್ದರು.’

ವರ್ಜೀನಿಯಾದಲ್ಲಿ, ಘೋರ ಅಪರಾಧಗಳಾದರೆ ಕಪ್ಪುವರ್ಣಿಯರಿಗೆ ಮರಣದಂಡನೆ ಮತ್ತು ಬಿಳಿಯರಿಗೆ ಜೈಲು ಶಿಕ್ಷೆಯಿತ್ತು. ಅದೇ ರೀತಿ, ಕಪ್ಪುವರ್ಣಿಯರು ತಮ್ಮ ಮಕ್ಕಳಿಗೆ ಕೂಡ ಪಾಠ ಹೇಳಿಕೊಡುವುದಾಗಲಿ, ಬಂದೂಕುಗಳನ್ನು ಹೊಂದುವುದಾಗಲಿ ಅಥವಾ ಬಿಳಿಯರ ವಿರುದ್ಧ ಸಾಕ್ಷ÷್ಯ ಹೇಳುವುದಾಗಲಿ ನಿಷೇಧಿಸಲಾಗಿತ್ತು. ಹಸಿವಿನಿಂದ ಬಳಲುತ್ತಿದ್ದ ಗುಲಾಮರು ಮರಗಳನ್ನು ಕತ್ತರಿಸಿ, ತೋಟಗಳನ್ನು ನಿರ್ಮಿಸಬೇಕಿತ್ತು.

ಇತಿಹಾಸಕಾರ ಕೆನ್ನೆತ್ ಸ್ಟಾ÷್ಯಂಪ್ ದಾಖಲಿಸಿದಂತೆ, ‘ಬಿಳಿಯರು ಹಾದುಹೋಗುವಾಗ, ಕರಿಯರು ಬದಿಗೆ ಸರಿಯಬೇಕಿತ್ತು. ಸ್ವತಃ ವಾಹನಗಳನ್ನು ಚಲಾಯಿಸುವಂತಿರಲಿಲ್ಲ. ಜೊತೆಗೆ, ಗುಲಾಮರಿಗೆ ಪ್ರತಿಜ್ಞೆ ಮಾಡಲು, ಧೂಮಪಾನ ಮಾಡಲು, ಬೆತ್ತ ಕೈಯಲ್ಲಿ ಹಿಡಿದುಕೊಂಡು ನಡೆದಾಡಲು ಅಥವಾ ಸಂತೋಷವನ್ನು ಪ್ರದರ್ಶಿಸಲು ಅವಕಾಶವಿರಲಿಲ್ಲ.’

ಈ ಜಾತಿ ಅಮಾನವೀಯತೆಯ ಸರಹದ್ದಿನಲ್ಲಿ, ಯಹೂದಿಗಳು ಮತ್ತು ಕಪ್ಪುವರ್ಣಿಯರು ಮೇಲ್ಜಾತಿಯ ವೈದ್ಯರ ಕೈಯಲ್ಲಿ ವೈದ್ಯಕೀಯ ಪ್ರಯೋಗಕ್ಕೆ ಬಲಿಯಾಗಿದ್ದರು. ಜರ್ಮನಿಯ ವಿಜ್ಞಾನಿಗಳು ಯಹೂದಿಗಳ ಮೇಲೆ ಅನೇಕ ಪ್ರಯೋಗಗಳನ್ನು ನಡೆಸಿದರು. ವಿಷಾನಿಲದ ಪರಿಣಾಮ ತಿಳಿಯಲು ಅವರ ಮೇಲೆ ಪ್ರಯೋಗಿಸಲಾಯಿತು. ಇಪ್ಪತ್ತನೇ ಶತಮಾನದವರೆಗೆ, ಅಮೆರಿಕಾದಲ್ಲಿ

ಕಪ್ಪುವರ್ಣಿಯರ ಮೇಲೆ ವೈದ್ಯರು ಅರವಳಿಕೆ ನೀಡದೆ ಪ್ರಯೋಗಕ್ಕಾಗಿ ಬಳಸಿಕೊಂಡರು.

ಅಮೆರಿಕಾದ ಹೆಸರಾಂತ ಸ್ತಿçÃರೋಗ ತಜ್ಞ ಜೇಮ್ಸ್ ಮರಿಯನ್ ಸಿಮ್ಸ್ ಕಪ್ಪುವರ್ಣಿಯ ಮಹಿಳೆಯರ ಮೇಲೆ ಘೋರವಾದ ಶಸ್ತçಚಿಕಿತ್ಸೆಗಳನ್ನು ನಡೆಸಿ ಆವಿಷ್ಕಾರಗಳನ್ನು ಮಾಡಿದರು. ಅರಿವಳಿಕೆ ನೀಡದೆ, ಅವರ ಮೇಲೆ ಯೋನಿ ಶಸ್ತçಚಿಕಿತ್ಸೆ ಮಾಡುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಎಷ್ಟೋ ಸಾವು ಸಂಭವಿಸಿತ್ತು.

ಲೂಯಿಸಿಯಾನದ ಪ್ರಖ್ಯಾತ ವೈದ್ಯನೊಬ್ಬ 1830ರ ದಶಕದಲ್ಲಿ ಗುಲಾಮ ಮಹಿಳೆಯರ ಮೇಲೆ ಅರಿವಳಿಕೆ ನೀಡದೆ ಸಿಸೇರಿಯನ್ ಸರ್ಜರಿ ಮಾಡುತ್ತಿದ್ದ. ಪಟ್ಟಣದ ಪ್ರಮುಖ ಪುರುಷರನ್ನು ಆಹ್ವಾನಿಸಿ ಅವರೆದುರು ಪ್ರದರ್ಶಿಸುತ್ತಿದ್ದ. 1963ರ ವಿವಾದಾತ್ಮಕ ಪ್ರಸಿದ್ಧ ಅಧ್ಯಯನಕ್ಕಾಗಿ, ಕಾಲೇಜು ವಿದ್ಯಾರ್ಥಿಗಳು ಕಪ್ಪುವರ್ಣಿಯನಿಗೆ ಗರಿಷ್ಠ ವೋಲ್ಟೇಜ್ ವಿದ್ಯುತ್ ಆಘಾತಗಳನ್ನು ನೀಡಿ ಪರೀಕ್ಷಿಸಿದರು.

ಒಟ್ಟಿನಲ್ಲಿ, ಅಮೆರಿಕಾದ ಸಂಸ್ಕöÈತಿಯಲ್ಲಿ, ಮನುಷ್ಯನ ಕ್ರೌರ್ಯ ಮನೋರಂಜನೆಯAತೆ ಬಿಂಬಿಸಲ್ಪಟ್ಟಿದೆ. ಇತಿಹಾಸಕಾರ ಕ್ರಿಸ್ಟಿನಾ ಡುರೊಚೆರ್ ಹೇಳಿದಂತೆ, ‘ಒಂದು ನಿರ್ದಿಷ್ಟ ರೀತಿಯ ಹಿಂಸಾಚಾರವು ಮೇಲ್ಜಾತಿಯ ಮಕ್ಕಳಿಗೆ ಕ್ರೌರ್ಯವೆಂದು ಕಾಣಿಸದಂತೆ ಬಿಂಬಿಸಲಾಯಿತು. ಇದರಿಂದಾಗಿ, ಅವರೂ ಅದನ್ನು ಸಹಜವೆಂಬAತೆ ಮುಂದುವರಿಸಿದರು.’

ಆಧಾರಸ್ತಂಭ ಏಳು:

ಹತ್ತಿಕ್ಕಲು ಭಯ ಉತ್ಪಾದನೆ, ನಿಯಂತ್ರಣಕ್ಕೆ ಕ್ರೌರ್ಯ

ಒಂದು ಜನಸಮೂಹವನ್ನು ಹತ್ತಿಕ್ಕಲು ಮತ್ತು ಅವರ ಯೋಗ್ಯತೆಗಿಂತ ಸದಾ ಕೆಳಗಿಡಲು ಒಳ್ಳೆಯ ಮಾರ್ಗವೆಂದರೆ, ಮಾನಸಿಕ ಭಯ ಮತ್ತು ದೈಹಿಕ ಕ್ರೌರ್ಯದ ಮೂಲಕ. ಹೀಗೆ, ಜರ್ಮನಿಯಲ್ಲಿ ಯಹೂದಿಗಳು, ಅಮೆರಿಕಾದಲ್ಲಿ ಕಪ್ಪುವರ್ಣಿಯರು ಮತ್ತು ಭಾರತದಲ್ಲಿ ದಲಿತರು ಮೇಲ್ವರ್ಗದವರ ತಿರಸ್ಕಾರ ಮತ್ತು ದ್ವೇಷಕ್ಕೆ ಬಲಿಯಾದರು. ಈ ರೀತಿಯಲ್ಲಿ ತಮ್ಮ ಮೇಲುಗೈ ಸಾಧಿಸಿದವರು, ಕೆಳಜಾತಿಯವರನ್ನು ಕ್ಷುಲ್ಲಕ ಕಾರಣಕ್ಕೂ ಚಾಟಿಯೇಟಿನಿಂದ ದಂಡಿಸುತ್ತಿದ್ದರು. ಜರ್ಮನಿಯಲ್ಲಿ ಯಹೂದಿಗಳನ್ನು ಹೊಡೆಯುವಾಗ ಅವರಿಗೇನೇ ಚಾಟಿಯೇಟನ್ನು ಲೆಕ್ಕ ಮಾಡಲು ಹೇಳಿ, ಲೆಕ್ಕ ತಪ್ಪಾಗಿದೆಯೆಂದು ಪುನಃ ಹೊಡೆಯುತ್ತಿದ್ದರು. ಅಮೆರಿಕಾದಲ್ಲಿ ಗುಲಾಮರಿಗೆ ಸಾಮಾನ್ಯ ಶಿಕ್ಷೆಯಾಗಿ 300 ಛಡಿಯೇಟು ನೀಡುವಾಗ ಬಿಳಿಯರು ಸುಸ್ತಾಗಿ ಸರದಿಯಂತೆ ಹೊಡೆಯುತ್ತಿದ್ದರು. ಒಬ್ಬ ಬಿಳಿ ಮಾಲೀಕ ಹೇಳಿದಂತೆ, ‘ಚಾಟಿಯೇಟು ಮತ್ತು ಗುಲಾಮರ ಆರ್ತನಾದ ಕೇಳಲು ಆಹ್ಲಾದ ಮತ್ತು ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿದೆ ಎನ್ನುವುದರ ಸಂಕೇತ.’

ಹೀಗೆ, ಮನುಷ್ಯನ ಇತಿಹಾಸದುದ್ದಕ್ಕೂ ಕ್ರೌರ್ಯವನ್ನು ಕಾಣಬಹುದು. ಅಮೆರಿಕಾದ ಅಧ್ಯಕ್ಷ ಆಂಡ್ರೂ ಜ್ಯಾಕ್ಸನ್, ಮೂಲನಿವಾಸಿಗಳ ಚರ್ಮ ಸುಲಿದು ಅದನ್ನು ತನ್ನ ಹಾಸುಗಂಬಳಿಯAತೆ ಉಪಯೋಗಿಸು ತ್ತಿದ್ದ. 20ನೇ ಶತಮಾನದಲ್ಲಿ ಕೂಡ ಕಪ್ಪುವರ್ಣಿಯರನ್ನು ಜೀವಂತ ಸುಡುತ್ತಿದ್ದರು. ಅಮೆರಿಕಾದ ಸಮಾಜದಲ್ಲಿ ಕೊಲೆ, ಅತ್ಯಾಚಾರ ಮತ್ತು ದೌರ್ಜನ್ಯ ಅಪರಾಧವೆಂದು ಪರಿಗಣಿಸಲ್ಪಟ್ಟಿದ್ದರೂ, ಅದೆಲ್ಲವನ್ನು ಕಪ್ಪುವರ್ಣಿಯರ ಮೇಲೆ ಮಾಡುತ್ತಿದ್ದರು. ಹೀಗೆ, ಅಮೆರಿಕಾದಲ್ಲಿ 12 ಪೀಳಿಗೆಯ ಕಪ್ಪುವರ್ಣಿಯರು ಈ ದೌರ್ಜನ್ಯವನ್ನು ಅನುಭವಿಸಿದ್ದರು.

ಜರ್ಮನಿಯಲ್ಲಿ ಕೂಡ ಯಹೂದಿಗಳನ್ನು ಸಾರ್ವಜನಿಕವಾಗಿ ನೇಣು ಹಾಕಲಾಗುತ್ತಿತ್ತು. ಅದೇ ರೀತಿ ಅಮೆರಿಕಾದಲ್ಲಿ ಕಪ್ಪುವರ್ಣಿಯ ಕೈದಿಗಳು ತಪ್ಪಿಸಿಕೊಳ್ಳದಂತೆ, ಭಾರವಾದ ಕಬ್ಬಿಣದ ಸರಪಳಿಯಲ್ಲಿ ಅವರನ್ನು ಕಟ್ಟಿಹಾಕಲಾಗುತ್ತಿತ್ತು. ಗುಲಾಮರ ಮಾರಾಟದ ಹರಾಜಿನಲ್ಲಿ ಲವಲವಿಕೆಯಿಂದ ಇರದಿದ್ದಲ್ಲಿ ಅವರಿಗೆ ಛಡಿಯೇಟು ನೀಡಲಾಗುತ್ತಿತ್ತು. ‘ಬಕಿಂಗ್’ ಎಂದು ಕರೆಯಲ್ಪಡುವ ಶಿಕ್ಷೆಯಲ್ಲಿ ಗುಲಾಮರನ್ನು ನಗ್ನರಾಗಿಸಿ ಮೂರು ಗಂಟೆಗಳ ಛಡಿಯೇಟು, ಆಮೇಲೆ ಉಪ್ಪು ಮತ್ತು ಕಾರದ ಪುಡಿಯಿಂದ ಮೈಯುಜ್ಜಲಾಗುತ್ತಿತ್ತು. ವಿಶೇಷವೆಂದರೆ, ಈ ಎಲ್ಲಾ ಕ್ರೂರ ಶಿಕ್ಷೆಗಳನ್ನು ಗುಲಾಮರಿಗೆ ಗುಲಾಮರಿಂದಲೇ ಮಾಡಿಸುತ್ತಿದ್ದರು. ಆದರೆ, ಶಿಕ್ಷಿಸುವ ಗುಲಾಮರಿಗೆ ಬೇರೆ ದಾರಿಯಿರಲಿಲ್ಲ. ಮಾಡದಿದ್ದಲ್ಲಿ, ಅವರಿಗೆ ಶಿಕ್ಷೆ ಕಾದಿತ್ತು.

ಚಾಣಾಕ್ಷರಾದ ಬಿಳಿಯರು ಗುಲಾಮರಲ್ಲಿಯೇ ಶ್ರೇಣಿಗಳನ್ನು ಮಾಡಿ, ಅವರ ನಡುವೆ ಭೇದÀ-ಭಾವ, ಒಡಕನ್ನುಂಟು ಮಾಡುತ್ತಿದ್ದರು. ಅವರಲ್ಲಿ ಕೆಲವರನ್ನು ಮುಖಂಡರನ್ನಾಗಿಸಿ, ಉಳಿದವರನ್ನು ನಿಯಂತ್ರಿಸುತ್ತಿದ್ದರು. ಅವರು, ತಮ್ಮಲ್ಲಿಯೇ ಜಗಳವಾಡಿ ಹೊಡದಾಡಿ ಸಾಯುವುದನ್ನು ಪ್ರಚೋದಿಸುತ್ತಿದ್ದರು. ಜರ್ಮನಿಯಲ್ಲಿ ಯಹೂದಿಗಳನ್ನು ಸುಡುತ್ತಿದ್ದುದು ಸ್ವತಃ ಯಹೂದಿಗಳೇ, ನಾಜಿ ಅಧಿಕಾರಿಗಳಲ್ಲ. ಅಮೆರಿಕಾದಲ್ಲಿ ಗುಲಾಮರಿಗೆ ಹೊಡೆಯುವಾಗ ಅವರ ಕೈಕಾಲು ಕೊಸರಾಡದಂತೆ ಹಿಡಿದುಕೊಳ್ಳುತ್ತಿದ್ದುದು ಸಹವರ್ತಿಗಳೇ.

ಹೀಗೆಯೇ, ಈ ಭಯ ಉತ್ಪಾದನೆ ಮುಂದುವರಿಯಿತು. 1935ರಲ್ಲಿ ಮಿಸ್ಸಿಸ್ಸಿಪ್ಪಿಗೆ ಹೋದ ಸಂಶೋಧಕ ಜಾನ್ ಡಾಲರ್ಡ್ ಗಮನಿಸಿದಂತೆ, ಅಲ್ಲಿರುವ ಕರಿಯರು ಅತ್ಯಂತ ವಿನಮ್ರರಾಗಿ ಕಾಣಿಸಿದರು. ಈ ಕುರಿತು ಬಿಳಿಯನೊಬ್ಬನಲ್ಲಿ ವಿಚಾರಿಸಿದಾಗ ಹೇಳಿದಿಷ್ಟೇ, ‘ಅವರಿಗೆ ಬೇರೆ ವಿಧಿಯಿಲ್ಲ.’

 

ಆಧಾರಸ್ತಂಭ ಎಂಟು:

ಅಂತರ್ಗತವಾಗಿರುವ ಶ್ರೇಷ್ಠತೆ ಮತ್ತು ಕೀಳರಿಮೆ

1930ರ ದಶಕದಲ್ಲಿ ಬಿಡುಗಡೆಯಾದ ಹೆಚ್ಚಿನ ಹಾಲಿವುಡ್ ಚಲನಚಿತ್ರಗಳಲ್ಲಿ ಕಪ್ಪು ಮಹಿಳೆಯ ಚಿತ್ರಣ ಈ ಸಾಮಾನ್ಯ ಚೌಕಟ್ಟಿನಲ್ಲಿಯೇ ಇರುತ್ತಿತ್ತು; ಸೇವಕರ ಸಮವಸ್ತç ಮತ್ತು ಮೇಕಪ್ ಇಲ್ಲದ ಮುಖ. ಅದಕ್ಕೆ ತದ್ವಿರುದ್ಧವಾಗಿ, ಬಿಳಿ ಮಹಿಳೆ ತೆಳ್ಳಗೆ ಸುಂದರವಾಗಿ ಕಾಣಿಸುತ್ತಾಳೆ. ಮಾತ್ರವಲ್ಲ, ಅವಳ ಭಾಷೆ ಮತ್ತು ನಡತೆ ನಾಜೂಕಾಗಿರುತ್ತದೆ. ಆದರೆ, ಕಪ್ಪು ಮಹಿಳೆಯ ಮಾತಿನಲ್ಲಿ ಅಜ್ಞಾನ ಮತ್ತು ದೇಹ ಒರಟಾಗಿ ದಪ್ಪಗೆ ಕಾಣಿಸುತ್ತದೆ. ಉದಾಹರಣೆಗೆ, ಕಪ್ಪುವರ್ಣಿಯ ನಟಿ ಲೂಯಿಸ್ ಬೀವರ್ಸ್ ಪರದೆಯಲ್ಲಿ ಕಾಣಿಸಿಕೊಂಡಿದ್ದಕ್ಕಿAತ ವ್ಯತಿರಿಕ್ತಳಾಗಿದ್ದಳು. ಅವರ ಕಲ್ಪನೆಯ ಕಪ್ಪು ಮಹಿಳೆಯಾಗಿ ಕಾಣಿಸಿಕೊಳ್ಳಲು ಅವಳು ಒರಟಾದ ಭಾಷೆ, ಹಾವಭಾವ ಮತ್ತು ದಪ್ಪ ದೇಹದಲ್ಲಿ ಅಳವಡಿಸಿಕೊಳ್ಳಬೇಕಿತ್ತು.

ಜಾತಿ ಆಧಾರಿತ ಜನ್ಮಜಾತ ಶ್ರೇಷ್ಠತೆ ಮತ್ತು ಅಧೀನತೆಯ ಅಂತರ್ಗತ ಕೀಳರಿಮೆ, ದಿನನಿತ್ಯ ಜ್ಞಾಪಿಸುವ ಪ್ರಕ್ರಿಯೆಗಳಾಗಿ ನಿರಂತರವಾಗಿ ನಡೆಯುತ್ತಿತ್ತು. ಉದಾಹರಣೆಗೆ, ಪರಿಶುದ್ಧತೆ-ಮಾಲಿನ್ಯತೆ, ಅಂತರ್ಜಾತಿಯ ವಿವಾಹ ನಿಷೇಧ, ಪಾಪ-ಪುಣ್ಯಗಳ ಪರಿಕಲ್ಪನೆ. ಮಾನವಶಾಸ್ತçಜ್ಞರಾದ ಆಡ್ರೆ ಮತ್ತು ಬ್ರಿಯಾನ್ ಹೇಳಿದಂತೆ, ‘ಕೆಳಜಾತಿಯ ವ್ಯಕ್ತಿಯಲ್ಲಿ ಕೀಳರಿಮೆಯನ್ನು ಶಾಶ್ವತವಾಗಿ ಬಿತ್ತಿದರೆ, ಅವರೆಂದು ಗುಲಾಮರಾಗಿಯೇ ಉಳಿಯುತ್ತಾರೆ.’ ಇದು ಸಮಾಜದಲ್ಲಿ ವಿವಿಧ ಸಂಕೇತಗಳ ಮೂಲಕ ಬೇರೂರುತ್ತವೆ. ಹತ್ತೊಂಬತ್ತನೇ ಶತಮಾನದ ಜಾತಿ ನಿರ್ಮೂಲನವಾದಿ ವಿಲಿಯಂ ಗೂಡೆಲ್ ವಿಶ್ಲೇಶಿಸಿದಂತೆ, ‘ಅವನನ್ನು ಪ್ರಾಣಿಗಳಂತೆ ಒಂದು ವಸ್ತುವಾಗಿ ಪರಿಗಣಿಸುವುದು.’

ಜಿಮ್ ಕ್ರೌ ಆಡಳಿತದಲ್ಲಿ ನೀಗ್ರೋಗಳಿಗೆ, ನಾಜಿ ಆಡಳಿತದಲ್ಲಿ ಯಹೂದಿಗಳಿಗೆ, ಮುಖ್ಯ ದಾರಿಗಳಲ್ಲಿ ನಡೆಯುವುದನ್ನು ನಿಷೇಧಿಸಲಾಗಿತ್ತು. ಇತಿಹಾಸಕಾರ ಬರ್ಟ್ರಾಮ್ ಡಾಯ್ಲ್ ಹೇಳಿದಂತೆ, ‘ವರ್ಜೀನಿಯಾದಲ್ಲಿ ಒಬ್ಬ ನೀಗ್ರೋ, ಬೀದಿಯಲ್ಲಿ ಒಬ್ಬ ಬಿಳಿ ವ್ಯಕ್ತಿಯನ್ನು ಭೇಟಿಯಾದರೆ, ಪಕ್ಕಕ್ಕೆ ಸರಿಯಬೇಕಿತ್ತು.’ ಅಮೆರಿಕ ಮತ್ತು ಭಾರತದಲ್ಲಿ ಜಾತಿ ವ್ಯವಸ್ಥೆ ಉತ್ತುಂಗ ಸ್ಥಿತಿಯಲ್ಲಿದ್ದಾಗ, ಕೆಳಜಾತಿಯವರು ತಮ್ಮ ಯಶಸ್ಸು ಮತ್ತು ಶ್ರೀಮಂತಿಕೆಯನ್ನು ಪ್ರದರ್ಶಿಸುವಂತಿರಲಿಲ್ಲ. ಅವರು ಮೇಲ್ಜಾತಿಯವರಿಗಿಂತ ಉತ್ತಮವಾದ ಬಟ್ಟೆ ಧರಿಸುವುದಕ್ಕಾಗಲಿ, ವಾಹನ ಚಲಾಯಿಸುವುದಕ್ಕಾಗಲಿ ಅಥವಾ ದುಬಾರಿ ಮನೆಗಳನ್ನು ಹೊಂದುವುದಕ್ಕಾಗಲಿ ಅವಕಾಶವಿರಲಿಲ್ಲ.

ಭಾರತದಲ್ಲಿ, ಜಾತಿವ್ಯವಸ್ಥೆಯು ದಲಿತ ಮಹಿಳೆಯರ ಸೀರೆಯ ಉದ್ದ ಅಳತೆಯನ್ನು ನಿರ್ಧರಿಸುತ್ತಿತ್ತು. ದಲಿತರು ಮೇಲ್ಜಾತಿಯವರಂತೆ ಚೆನ್ನಾಗಿರುವ ಬಟ್ಟೆ ಅಥವಾ ಆಭರಣಗಳನ್ನು ಧರಿಸುವಂತಿರಲಿಲ್ಲ. 1735ರಲ್ಲಿ ಅಮೆರಿಕಾದ ದಕ್ಷಿಣ ಕೆರೊಲಿನಾದಲ್ಲಿ ‘ನೀಗ್ರೋ ಕೋಡ್’ ಜಾರಿಗೆ ತಂದು, ಗುಲಾಮರು ಇಂತಹದ್ದೇ ಬಟ್ಟೆ ಧರಿಸಬೇಕೆಂದು ನಿಗದಿ ಮಾಡಲಾಯಿತು. ಇನ್ನೂರು ವರ್ಷಗಳ ನಂತರವೂ ಕೂಡ, ಸೈನಿಕರ ಸಮವಸ್ತçವನ್ನು ಧರಿಸಿದ್ದಕ್ಕಾಗಿ ಕೆಲವು ನೀಗ್ರೋ ಸೈನಿಕರನ್ನು ಕೊಲ್ಲಲಾಯಿತು.

ಜರ್ಮನಿಯಲ್ಲಿ, ನಾಜಿಗಳನ್ನು ಕೆರಳಿಸಿದ ಮುಖ್ಯ ಕಾರಣವೆಂದರೆ, ಯಹೂದಿಗಳ ಸಂಪತ್ತು, ಯಶಸ್ಸು ಮತ್ತು ಅದರ ಸಾರ್ವಜನಿಕ ಪ್ರದರ್ಶನ. ಬರ್ಲಿನ್‌ನಲ್ಲಿ ಯಹೂದಿ ಯುವತಿಯೊಬ್ಬಳು ಚರ್ಮದ ಕೋಟ್ ಧರಿಸಿದ್ದಕ್ಕಾಗಿ ಅವಳನ್ನು ಶಿಕ್ಷಿಸಲಾಯಿತು. ಜಾತಿಯ ಮುಖ್ಯ ಸಮಸ್ಯೆಯೆಂದರೆ, ಒಂದು ಗುಂಪಿಗೆ ಉನ್ನತ ಸ್ಥಾನಮಾನವನ್ನು ಅವರ ಯೋಗ್ಯತೆಗೆ ಮೀರಿ ಪ್ರತಿಯೊಬ್ಬರಿಗೂ ನೀಡುವುದು. ಅದೇ ರೀತಿ, ಸಾರಾಸಗಟಾಗಿ ಕೆಳಜಾತಿಯವರೆಲ್ಲರನ್ನೂ ಕೂಡ ಒಂದೇ ಮಟ್ಟದಲ್ಲಿ ಅಳೆಯುವುದು.

ಇತಿಹಾಸಕಾರ ಕೆನ್ನೆತ್ ಸ್ಟಾ÷್ಯಂಪ್ ವಿವರಿಸಿದಂತೆ, ‘ಜಾತಿವ್ಯವಸ್ಥೆಯಲ್ಲಿ ಗುಲಾಮರ ಜೀವನದ ಸಂಪೂರ್ಣ ಅಧಿಕಾರ ಅನರ್ಹ ವ್ಯಕ್ತಿಗಳ ಕೈಯಲ್ಲಿ. ಉದಾಹರಣೆಗೆ, ಒಬ್ಬ ಅನಕ್ಷರಸ್ತ ಮೇಲ್ಜಾತಿ ಮಹಿಳೆಯ ಒಡೆತನದಲ್ಲಿ ಗುಲಾಮನ ಬದುಕು, ಒಬ್ಬ ಕುಡುಕನ ಕೈಯಲ್ಲಿ ಗುಲಾಮನ ಸಾವು, ಒಬ್ಬ ಕ್ರೂರಿ ಮೇಲ್ವಿಚಾರಕನ ಉಸ್ತುವಾರಿಯಲ್ಲಿ ಗುಲಾಮರ ಕೆಲಸ.’ ಒಟ್ಟಿನಲ್ಲಿ, ನೀಗ್ರೋಗಳು ತಾವು ಬದುಕಿ ಉಳಿಯಲು ಹಲವಾರು ಸೂತ್ರಗಳನ್ನು ಕಂಡುಹಿಡಿಯಬೇಕಾಗಿತ್ತು. ಉದಾಹರಣೆಗೆ, ಸದಾ ವಿನಮ್ರತೆ, ಬೇಡಿಕೆಗಳ ಪೂರೈಕೆ ಮತ್ತು ಹೆಚ್ಚಿನ ಕಾರ್ಯಕ್ಷಮತೆ. ಇದು, ನೀಗ್ರೋಗಳ ದೈನಂದಿನ ಬದುಕಿನ ಮೇಲೆ ಅಗಾಧ ದೈಹಿಕ ಆಘಾತ ಮತ್ತು ಮಾನಸಿಕ ಒತ್ತಡ ಹುಟ್ಟಿಸುತ್ತಿತ್ತು.

ಹತ್ತೊಂಬತ್ತನೇ ಶತಮಾನದ ವಾಗ್ಮಿ ಫ್ರೆಡೆರಿಕ್ ಡೌಗ್ಲಾಸ್ ವಿವರಿಸಿದಂತೆ, ‘ಬಿಳಿಯರಿಗೆ ಕಪ್ಪುವರ್ಣಿಯರ ಈ ಕೆಳಗಿನ ವಿಚಾರಗಳು ಕೋಪ ತರಿಸುತ್ತಿತ್ತು; ಉತ್ತರಿಸಿದ್ದಕ್ಕೆ, ಉತ್ತರಿಸದಿದ್ದಿದ್ದಕ್ಕೆ, ಮುಖಭಾವಕ್ಕೆ, ತಲೆಯಾಡಿಸಿದ್ದಕ್ಕೆ, ನಡಿಗೆಗೆ, ವರ್ತನೆಗೆ, ಇತ್ಯಾದಿ.’ ಕೆರೊಲಿನಾದ ನ್ಯಾಯಾಧೀಶರು ಹೇಳಿದಂತೆ, ‘ಇಂತಹ ವರ್ತನೆಗಳನ್ನು ಸಹಿಸಿಕೊಂಡರೆ ನಮ್ಮ ಸಾಮಾಜಿಕ ವ್ಯವಸ್ಥೆ ನಾಶವಾಗುತ್ತದೆ.’ ಈ ನೀಗ್ರೋ ಕೋಡ್ ಹಲವಾರು ತಲೆಮಾರುಗಳವರೆಗೆ ವಿಸ್ತರಿಸಿತು. ನಾಜಿಗಳು ಸೋಲಿಸಲ್ಪಟ್ಟರೂ, ನೀಗ್ರೋಗಳು ಮಾತ್ರ ತಮ್ಮ ಮನೆಯಿಂದ ಹೊರಬಂದದ್ದಕ್ಕೂ ಶಿಕ್ಷೆ ಅನುಭವಿಸಿದರು. ಮಾಲೀಕರು ಕ್ಷುಲ್ಲಕ ಅಪರಾಧಗಳಿಗೂ ಚಾವಟಿ ಏಟು ನೀಡಿದರು.

1948ರಲ್ಲಿ, ಇತಿಹಾಸಕಾರ ಜೇಮ್ಸ್ ಸಿ. ಕಾಬ್ ಬರೆದಂತೆ, ‘ಕಪ್ಪುವರ್ಣಿಯನೊಬ್ಬ ತಾನು ಪಾವತಿಸಿದ ನೀರಿನ ಬಿಲ್ಲಿನ ರಶೀದಿ ಕೇಳಿದ್ದಕ್ಕೆ ಹೊಡೆತ ತಿನ್ನುತ್ತಾನೆ.’ 1960ರ ದಶಕದಲ್ಲಿ, ಅಮೆರಿಕಾದ ದಕ್ಷಿಣದಲ್ಲಿ ಸಾರ್ವಜನಿಕ ಬಸ್‌ನಲ್ಲಿ ಕಪ್ಪುವರ್ಣಿಯರು ಟಿಕೆಟನ್ನು ಮುಂಬಾಗಿಲಿನಲ್ಲಿ ಪಡೆದು, ಇಳಿದು, ಹಿಂಬಾಗಿಲಿನಲ್ಲಿ ಪ್ರವೇಶಿಸಿ ಅವರಿಗೆ ಮೀಸಲಿಟ್ಟ ಸೀಟುಗಳಲ್ಲಿ ಮಾತ್ರ ಕೂರಬೇಕಿತ್ತು. ಕೆಲವೊಮ್ಮೆ, ಈ ಪ್ರಕ್ರಿಯೆಯಲ್ಲಿ ಅವರು ಟಿಕೆಟ್ ಪಡೆದೂ ಬಸ್ಸು ಹತ್ತಲಾಗದೆ, ಕೆಲಸಕ್ಕೆ ಹೋಗಲಾಗುತ್ತಿರಲಿಲ್ಲ.

ಕಾನೂನುಗಳು ಕೂಡ ಕೆಳಜಾತಿಯವರನ್ನು ಪ್ರತ್ಯೇಕವಾಗಿ ಮತ್ತು ಕನಿಷ್ಠ ಮಟ್ಟದಲ್ಲಿ ಇರಿಸಿಕೊಂಡಿವೆ. ಕೆಳಜಾತಿಯವರು ವಿಭಜನೆಯಾಗಿದ್ದಷ್ಟು ಅವರ ಅವನತಿ ಸುಲಭ. ಅಮೆರಿಕದ ವಿದ್ವಾಂಸ ಜೆರಾಲ್ಡ್ ಬೆರೆಮನ್ ಹೇಳುವಂತೆ, ‘ಇಂತಹ ವ್ಯವಸ್ಥೆಯಲ್ಲಿ ಮನುಷ್ಯರ ನಡುವಿನ ಅಂತರ ಹೀಗಿರುತ್ತದೆ; ಶಕ್ತಿ ಮತ್ತು ದುರ್ಬಲತೆ, ಸವಲತ್ತು ಮತ್ತು ದಬ್ಬಾಳಿಕೆ, ಗೌರವ ಮತ್ತು ನಿರಾಕರಣೆ, ಅತಿಯಾಗಿ ಇದೆ ಮತ್ತು ಏನೂ ಇಲ್ಲ, ಪ್ರತಿಫಲ ಮತ್ತು ಅಭಾವ, ಭದ್ರತೆ ಮತ್ತು ಆತಂಕ.’

ಮೇಲ್ಜಾತಿಯವರು ಈ ವ್ಯವಸ್ಥೆಗೆ ಎಷ್ಟು ಒಗ್ಗಿಕೊಂಡಿದ್ದರೆAದರೆ, ‘ಸಾವಿನ ನಂತರ ಸ್ವರ್ಗದಲ್ಲೂ ಗುಲಾಮರು ಲಭ್ಯವಿದ್ದಾರೆಯೇ?’ ಎಂದು ಮೇಲ್ಜಾತಿಯ ಮಹಿಳೆಯೊಬ್ಬರು ಕೆರೊಲಿನಾದಲ್ಲಿ ಚರ್ಚ್ ಪಾದ್ರಿಯಲ್ಲಿ ಕೇಳುತ್ತಾಳೆ.

ಹೀಗೆ, ಶತಮಾನಗಳಿಂದ ಜಾತಿವ್ಯವಸ್ಥೆ ಕಾಲಕ್ಕನುಗುಣವಾಗಿ ರೂಪಾಂತರಗೊಳ್ಳುತ್ತಲಿದೆ, ಆದರೆ ಅದರ ಆಧಾರಸ್ತಂಭಗಳು ಮಾತ್ರ ಹಾಗೆಯೇ ಉಳಿದಿವೆ. ಅಮೆರಿಕಾ ಎರಡನೆಯ ಮಹಾಯುದ್ಧದಲ್ಲಿ ಹೋರಾಡುತ್ತಿದ್ದಾಗ ಓಹಿಯೋದ ಸರಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಷಯ: “ಯುದ್ಧದ ನಂತರ ಹಿಟ್ಲರ್‌ನಿಗೆ ಏನು ಶಿಕ್ಷೆ ನೀಡಬೇಕು?” ಅದೇ ವರ್ಷ ಕಪ್ಪುವರ್ಣಿಯನೊಬ್ಬ ಬಿಳಿ

ಹುಡುಗಿಗೆ ಕ್ರಿಸ್‌ಮಸ್ ಕಾರ್ಡ್ ಕೊಟ್ಟಿದ್ದಕ್ಕಾಗಿ, ಅವನ ರೋಗಿಷ್ಠ ತಂದೆಯೆದುರೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಲಾಗಿತ್ತು. ಹದಿನಾರು ವರ್ಷದ ಕಪ್ಪು ಹುಡುಗಿಯೊಬ್ಬಳು ಆ ಘಟನೆಯನ್ನು ಮೆಲುಕುಹಾಕುತ್ತಾ ಬರೆದ ಒಂದು ವಾಕ್ಯದಿಂದಾಗಿ ಪ್ರಬಂಧ ಸ್ಪರ್ಧೆ ಗೆದ್ದಳು; ‘ಹಿಟ್ಲರ್‌ನಿಗೆ ಕಪ್ಪು ಚರ್ಮ ಹೊದಿಸಿ, ಅವನ ಉಳಿದ ಜೀವನವನ್ನು ಅಮೆರಿಕದಲ್ಲಿ ಕಳೆಯಲು ಬಿಡಿ.’

`ಜಾತಿ: ನಮ್ಮ ಅಸಮಾಧಾನದ ಮೂಲಗಳು’

ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಇಸಾಬೆಲ್ ವಿಲ್ಕರ್ಸನ್ 2020ರಲ್ಲಿ ಪ್ರಕಟಿಸಿದ ‘ಜಾತಿ: ನಮ್ಮ ಅಸಮಾಧಾನದ ಮೂಲಗಳು’ ಪುಸ್ತಕದಲ್ಲಿ, ಅಮೆರಿಕದ ವರ್ಣಭೇದ ನೀತಿಯನ್ನು ಒಂದು ಹೊಸ ದೃಷ್ಟಿಕೋನದಲ್ಲಿ ಅದ್ಭುತವಾಗಿ ಓದುಗರಿಗೆ ನೀಡುತ್ತಾರೆ. ಅವರ ಆಳವಾದ ಸಂಶೋಧನೆ ಮತ್ತು ನೈಜ ಘಟನೆಗಳ ನಿರೂಪಣೆಯು, ಅಮೆರಿಕಾ ತನ್ನ ಇತಿಹಾಸದುದ್ದಕ್ಕೂ ಆಫ್ರಿಕಾ ಮೂಲದ ಕಪ್ಪುವರ್ಣಿಯರನ್ನು ಬಿಳಿಯರಿಂದ ಶ್ರೇಣೀಕೃತವಾಗಿ ಬೇರ್ಪಡಿಸಿರುವುದನ್ನು ವಿಸ್ತೃತವಾಗಿ ತೋರಿಸುತ್ತದೆ. ವರ್ಣಭೇದ ನೀತಿಯು, ಭಾರತದ ಜಾತಿವ್ಯವಸ್ಥೆ ಮತ್ತು ಜರ್ಮನಿಯಲ್ಲಿ ನಾಜಿ ಆಡಳಿತ ಯಹೂದಿಗಳನ್ನು ನಡೆಸಿಕೊಂಡ ರೀತಿಗೆ ಹೇಗೆ ಹೋಲುತ್ತದೆ ಎನ್ನುವುದನ್ನು ಚೆನ್ನಾಗಿ ನಿರೂಪಿಸಿದ್ದಾರೆ. ಮೇಲ್ಜಾತಿಯು, ಕೆಳಜಾತಿಯವರ ಜೀವನ, ನಡವಳಿಕೆ ಮತ್ತು ರಾಷ್ಟçದ ಭವಿಷ್ಯದ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತದೆ ಎನ್ನುವುದನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.

ಲೇಖಕಿ ತನ್ನ ಅಧ್ಯಯನಕ್ಕೆ ಆಯ್ದುಕೊಂಡ ಮೂರು ದೇಶಗಳಾದ ಅಮೆರಿಕ, ಭಾರತ ಮತ್ತು ನಾಜಿ ಆಡಳಿತದ ಜರ್ಮನಿಯಲ್ಲಿ ಜಾತಿವ್ಯವಸ್ಥೆಯು ತನ್ನ ಎಂಟು ಆಧಾರಸ್ತಂಭಗಳಾದ; ದೈವಿಕ ಇಚ್ಛೆ ಮತ್ತು ಪ್ರಕೃತಿ ನಿಯಮಗಳು, ಅನುವಂಶಿಕತೆ, ಸಜಾತಿ ವಿವಾಹದ ಮೂಲಕ ಸಂಯೋಗ ನಿಯಂತ್ರಣ, ಪರಿಶುದ್ಧತೆ ಮತ್ತು ಮಾಲಿನ್ಯದ ಪರಿಕಲ್ಪನೆ, ಜಾತಿಗಳ ಅಡಿಪಾಯವಾದ ವೃತ್ತಿ ಆಧಾರಿತ ಶ್ರೇಣಿ, ಅಮಾನವೀಯತೆ ಮತ್ತು ಕಳಂಕದ ಕಲ್ಪನೆ, ಹತ್ತಿಕ್ಕಲು ಭಯ ಉತ್ಪಾದನೆ, ನಿಯಂತ್ರಣಕ್ಕೆ ಕ್ರೌರ್ಯ ಹಾಗು ಅಂತರ್ಗತವಾಗಿರುವ ಶ್ರೇಷ್ಠತೆ ಮತ್ತು ಕೀಳರಿಮೆಯ ಪರಿಕಲ್ಪನೆಗಳ ಮೇಲೆ ನಿಂತಿರುವುದನ್ನು ಗುರುತಿಸುತ್ತಾರೆ.

ಹೆಸರಾಂತ ಕಪ್ಪುವರ್ಣಿಯರಾದ ಮಾರ್ಟಿನ್ ಲೂಥರ್ ಕಿಂಗ್, ಬೇಸ್ ಬಾಲ್ ಆಟಗಾರ ಸ್ಯಾಚೆಲ್ ಪೈಜ್ ಒಳಗೊಂಡAತೆ, ಸ್ವತಃ ಲೇಖಕಿಯು ಕೂಡ ತಮ್ಮ ದೈನಂದಿನ ಜೀವನದಲ್ಲಿ ಜಾತಿವ್ಯವಸ್ಥೆಯ ಕ್ರೌರ್ಯಕ್ಕೆ ಒಳಗಾಗಿದ್ದಾರೆ ಎನ್ನುವುದನ್ನು ಚರ್ಚಿಸುತ್ತಾರೆ. ವಿಶೇಷವಾಗಿ ಲೇಖಕಿ ಗುರುತಿಸಿದಂತೆ, ಅಮೆರಿಕಾದ ವರ್ಣಭೇದ ನೀತಿಯನ್ನು ನಾಜಿಗಳು ಅಧ್ಯಯನಮಾಡಿ ಅದರಲ್ಲಿರುವ ಅಮಾನುಷತೆಯನ್ನು ಯಹೂದಿಗಳ ಮೇಲೆ ಪ್ರಯೋಗಿಸಿದರು. ಮೇಲ್ಜಾತಿಯವರು, ಜಾತಿವ್ಯವಸ್ಥೆಯಲ್ಲಿರುವ ವರ್ಗೀಕರಣವನ್ನು ಉಳಿಸಿಕೊಳ್ಳುವುದರ ಮೂಲಕ ತಮ್ಮ ಔನ್ನತ್ಯ ಕಾಯ್ದುಕೊಳ್ಳುತ್ತಾರೆ. ಅವರು ಗಮನಿಸಿದಂತೆ, ಜಾತಿವ್ಯವಸ್ಥೆಯಿಂದಾಗಿ,

ಕೆಳಜಾತಿಯವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅತೀವ ದುಷ್ಪರಿಣಾಮ ಉಂಟಾಗುತ್ತದೆ. ಕೊನೆಯದಾಗಿ, ಈ ಮಾನವ ನಿರ್ಮಿತ ವಿನಾಶಕಾರಿ ಪ್ರತ್ಯೇಕತೆಗಳನ್ನು ಮೀರಿ, ಸಹೋದರತೆ ಮತ್ತು ಸಹಬಾಳ್ವೆಯ ಮೂಲಕ ಭವಿಷ್ಯದಲ್ಲಿ, ಅಮೆರಿಕ ಉದಾತ್ತತೆಯ ಮಾದರಿಯನ್ನು ಜಗತ್ತಿಗೆ ಪ್ರದರ್ಶಿಸಬೇಕಾದ ಅಗತ್ಯವಿದೆಯೆಂದು ಲೇಖಕಿ ಕರೆ ನೀಡುತ್ತಾರೆ.

ಒಟ್ಟಿನಲ್ಲಿ, ‘ಜಾತಿ: ನಮ್ಮ ಅಸಮಾಧಾನದ ಮೂಲಗಳು’ ಮಾನವನ ಇತಿಹಾಸವನ್ನು ಪುನರ್ ವಿಮರ್ಶಿಸುವ ಮೂಲಕ ಓದುಗರಿಗೆ ಹೊಸ ದೃಷ್ಟಿಕೋನದಿಂದ ಮತ್ತು ಸಹಾನುಭೂತಿಯಿಂದ ನೋಡಲು ಪ್ರೇರೇಪಿಸುತ್ತದೆ. ಹೊರ ಪ್ರಪಂಚಕ್ಕೆ ಬಹಳ ಸುಂದರವಾಗಿ ಕಾಣುವ ಅಮೆರಿಕಾದ ಇತಿಹಾಸದ ಗರ್ಭದಲ್ಲಿ ಇಷ್ಟೊಂದು ಕ್ರೌರ್ಯ ಅಡಗಿದೆ ಎನ್ನುವ ಹೊಸ ಅರಿವನ್ನು ಈ ಪುಸ್ತಕ ಮೂಡಿಸುತ್ತದೆ.

ಇಸಾಬೆಲ್ ವಿಲ್ಕರ್ಸನ್

ಆಫಿû್ರಕನ್ ಅಮೆರಿಕನ್ ಹಿನ್ನೆಲೆಯ ಇಸಾಬೆಲ್ ಅವರ ಎರಡು ಮುಖ್ಯ ಕೃತಿಗಳು ಅಮೆರಿಕಾದ ಕಪ್ಪುವರ್ಣೀಯರ ಐತಿಹಾಸಿಕ ಅನುಭವಗಳನ್ನು ವಿಶ್ಲೇಷಿಸುತ್ತವೆ. 2010ರಲ್ಲಿ ಪ್ರಕಟವಾದ ಅವರ ಮೊದಲ ಕೃತಿಯಾದ `ದ ವಾರ್ಮ್ತ್ ಅ¥s಼ï ಅದರ್ ಸನ್ಸ್: ದ ಸ್ಟೋರಿ ಆ¥s಼ï ಅಮೆರಿಕಾಸ್ ಗ್ರೇಟ್ ಮೈಗ್ರೇಷನ್’ ಗ್ರಂಥವು ಕಪ್ಪು ವರ್ಣೀಯರು ಅಮೆರಿಕಾದ ದಕ್ಷಿಣದ ರಾಜ್ಯಗಳಿಂದ ಉತ್ತರದ ರಾಜ್ಯಗಳಿಗೆ ವಲಸೆ ಹೋದ ಪ್ರಕ್ರಿಯೆಯನ್ನು ಪುನಾರಾಚನೆ ಮಾಡುತ್ತದೆ. 1915ರಿಂದ 1970ರ ನಡುವೆ ಸುಮಾರು ಅರವತ್ತು ಲಕ್ಷದಷ್ಟು ಕಪ್ಪು ವರ್ಣೀಯರು ಉತ್ತರದ ರಾಜ್ಯಗಳ ನಗರದಲ್ಲಿ ನೆಲಸಿದ್ದು 20ನೆಯ ಶತಮಾನದ ಅಮೆರಿಕವನ್ನು ರೂಪಿಸಿದ ಪ್ರಮುಖ ವಿದ್ಯಮಾನಗಳಲ್ಲಿ ಒಂದು.

2020ರಲ್ಲಿ ಪ್ರಕಟವಾದ ‘ಕಾಸ್ಟ್: ದ ಆರಿಜನ್ಸ್ ಆ¥s಼ï ಅವರ್ ಡಿಸಕಂಟೆAಟ್ಸ್’ (ಜಾತಿ: ನಮ್ಮ ಅಸಮಾಧಾನಗಳ ಮೂಲ) ಎಂಬುದು ಅವರ ಎರಡನೆಯ ಕೃತಿ. ಅಮೆರಿಕಾದಲ್ಲಿ ಬಹುಚರ್ಚಿತವಾದ ಈ ಕೃತಿಯಲ್ಲಿ ಅಮೆರಿಕಾದ ಮೂಲ ಪಾಪ (ಒರಿಜಿನಲ್ ಸಿನ್) ಎಂದೆ ಗುರುತಿಸಲ್ಪಡುವ ವರ್ಣಭೇದ ನೀತಿ (ರೇಸಿಸಮ್)ಯನ್ನು ಇಸಾಬೆಲೆ ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವ ಪ್ರಶ್ನೆಯನ್ನು ವಿಶ್ಲೇಷಿಸುತ್ತಾರೆ. ಅವರ ದೃಷ್ಟಿಯಲ್ಲಿ ವರ್ಣಭೇದ ನೀತಿಯು ಭಾರತ ಮತ್ತು ನಾಝಿ ಜರ್ಮನಿಗಳಲ್ಲಿ ಕಾಣಬರುವ ಜಾತಿಪದ್ಧತಿಯನ್ನು ಹೋಲುತ್ತದೆ. ಈ ತಾತ್ವಿಕ ಗ್ರಹಿಕೆಯನ್ನು ಕೇಂದ್ರದಲ್ಲಿರಿಸಿಕೊAಡು ಇಸಾಬೆಲ್ ಅಮೆರಿಕಾದ ಇಂದಿನ ವರ್ಣ ಶ್ರೇಣೀಕೃತ ಸಮಾಜದ ಸ್ವರೂಪವನ್ನು ವಿವರಿಸುತ್ತಾರೆ. ಪ್ರಕಟಣೆಯಾದ ಶೀಘ್ರದಲ್ಲಿಯೆ ಈ ಪುಸ್ತಕವು ಒಂದು ಕ್ಲಾಸಿಕ್ ಕೃತಿಯೆಂದು ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು.

ಜಾತಿ ಮತ್ತು ವರ್ಣಭೇದ ನೀತಿಗಳ ತುಲನಾತ್ಮಕ ಅಧ್ಯಯನಗಳು ಪ್ರಕಟವಾಗುತ್ತಿರುವುದು ಹೊಸದೇನಲ್ಲ. ಈ ಹಿಂದೆ ಅಮೆರಿಕಾ ಮತ್ತು ದಕ್ಷಿಣ ಆಫಿû್ರಕಾಗಳ ವರ್ಣಭೇದ ನೀತಿಗಳನ್ನು ಭಾರತದ ಜಾತಿವ್ಯವಸ್ಥೆ ಮತ್ತು ಅಸ್ಪöÈಶ್ಯತೆಗಳ ಜೊತೆಗೆ ತುಲನೆ ಮಾಡುವ ಅಧ್ಯಯನಗಳು ಇಪ್ಪತ್ತನೆಯ ಶತಮಾನದ ಆರಂಭದಿAದಲೂ ನಡೆದಿವೆ. 2001ರಲ್ಲಿ ಜರುಗಿದ ವರ್ಣಭೇದ ನೀತಿ ಮತ್ತು ಜಾತಿ ಆಧಾರಿತ ತಾರತಮ್ಯಗಳ ವಿರುದ್ಧದ ಜಾಗತಿಕ ಸಮ್ಮೇಳನದ ಸಂದರ್ಭದಲ್ಲಿ ಈ ಎರಡೂ ಬಗೆಯ ಸಾಮಾಜಿಕ ಕೆಡುಕುಗಳ ಬಗ್ಗೆ ವಿಶೇಷವಾದ ಚರ್ಚೆ ನಡೆಯಿತು.

ಇವುಗಳ ನಡುವೆ ಇಸಾಬೆಲ್ ಅವರ ಹೊಸ ಗ್ರಂಥವು ಮುಖ್ಯವಾಗುವುದು ಎರಡು ಕಾರಣಗಳಿಂದ. ವರ್ಣಭೇದ ನೀತಿ ಮತ್ತು ಆಚರಣೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಇಸಾಬೆಲ್ ಜಾತಿ ಪದ್ಧತಿಯ ಪರಿಕಲ್ಪನಾತ್ಮಕ ನೆಲೆಗಳನ್ನು ಬಳಸುತ್ತಾರೆ. ಎರಡನೆಯದಾಗಿ, ಈ ಸಂದರ್ಭದಲ್ಲಿ ಜಾತಿಯ ಬಗ್ಗೆ ಇದುವರಗೆ ಬಂದಿರುವ ಚಿಂತನೆಗಳನ್ನು ವಿಮರ್ಶಿಸುತ್ತ ಅದೇನಿರಬಹುದು ಎಂದು ಪುನಾರಚಿಸುವ ಮಹತ್ವಾಕಾಂಕ್ಷಿ ಪ್ರಯತ್ನವನ್ನೂ ಮಾಡುತ್ತಾರೆ. ಹಾಗೆಂದ ಮಾತ್ರಕ್ಕೆ ಇಸಾಬೆಲ್ ಅವರ ಗ್ರಹಿಕೆಗಳು ಸರಿಯೆಂದಲ್ಲ. ಮಾನವಶಾಸ್ತçಜ್ಞ ಅರ್ಜುನ್ ಅಪ್ಪಾದುರೈ ಅವರು ‘ದ ವೈರ್’ ಪತ್ರಿಕೆಯಲ್ಲಿ ಇಸಾಬೆಲ್ ಅವರ ವಿಶ್ಲೇಷಣೆಯಲ್ಲಿರುವ ಸಮಸ್ಯೆಗಳನ್ನು ವಿಶದವಾಗಿ ಚರ್ಚಿಸಿದ್ದಾರೆ. ಅಪ್ಪಾದುರೈ ಅವರು ಇಸಾಬೆಲ್ಲರ ಪುಸ್ತಕದ ಮಿತಿಗಳನ್ನು ಗುರುತಿಸುತ್ತಾರೆ.

Leave a Reply

Your email address will not be published.