ತಪ್ಪು ಮಾಡದಿದ್ದರೆ ಆತಂಕವೇಕೇ?

ಬಿಜೆಪಿಯವರು ‘ಎಸ್.ಐ.ಟಿ. ತನಿಖೆ ಬೇಡವೇ ಬೇಡ. ನಾವು ತಪ್ಪು ಮಾಡಿದ್ದೇವೆ, ಕ್ಷಮಿಸಿ’ ಎಂದು ಮೂರು ದಿನಗಳ ಕಾಲ ಸದನದಲ್ಲಿ ಅಂಗಲಾಚಿ ಬೇಡಿಕೊಂಡರು. ಮಾಧುಸ್ವಾಮಿ, ಯಡಿಯೂರಪ್ಪನವರೇ ಒಳಗೆ ಕರೆದು ಮಾತುಕತೆ ಮೂಲಕ ಬಗೆಹರಿಸಿಬಿಡಿ, ಎಸ್.ಐ.ಟಿ. ತನಿಖೆ ಬೇಡ ಎಂದು ಕೇಳಿಕೊಂಡರು.

ಆಪರೇಷನ್ ಕಮಲ ನಡೆಸುವ ಧ್ವನಿಸುರುಳಿ ಬಿಡುಗಡೆಯಾಗಿದೆ. ಈಗ ಆ ಪ್ರಕರಣವನ್ನು ತನಿಖೆ ಮಾಡಲು ಎಸ್.ಐ.ಟಿಯನ್ನು ರಚಿಸಲಾಗಿದೆ. ಅದಕ್ಕೂ ಮೊದಲು ನಾನು ಹೇಳುವುದಾದರೆ, ಈ ಪ್ರಜಾಪ್ರಭುತ್ವದಲ್ಲಿ ಸಮ್ಮಿಶ್ರ ಸರಕಾರಗಳು ಅನಿವಾರ್ಯ. ಸಾಂದರ್ಭಿಕವಾಗಿ ಸಮ್ಮಿಶ್ರ ಸರಕಾರಗಳು ಅಸ್ತಿತ್ವಕ್ಕೆ ಬರುತ್ತವೆ. ಹಾಗೆ ಸಮ್ಮಿಶ್ರ ಸರಕಾರಗಳು ಬಂದಾಗ ಯಾವುದೇ ರಾಜಕೀಯ ಪಕ್ಷಗಳು ಆ ಸರಕಾರವನ್ನು ಅಸ್ಥಿರಗೊಳಿಸಬಾರದು.

ಬಿಜೆಪಿಯವರು ಹಿಂದೆ ಆಪರೇಷನ್ ಕಮಲ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಮತ್ತೆ ‘ನಾವು ಈ ಬಾರಿ ಯಶಸ್ವಿಯಾಗಬಹುದು’ ಎಂದು ಹಾಗೆ ಮಾಡಲು ಹೋದರು. ಆದರೆ ಒಂದು ಪಕ್ಷದ ಅಧ್ಯಕ್ಷರಾಗಿ ಅವರು ಹಾಗೆ ಮಾಡಬಾರದಿತ್ತು. ಮಾಡಿದ್ದು ನಿಜ, ಹಾಗೆ ಮಾಡಿದ್ದು ತಪ್ಪು ಎಂದು ಅವರೇ ಒಪ್ಪಿಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡವಳಿಕೆ. ಇದನ್ನು ಅವರು ಮಾಡಬಾರದಿತ್ತು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ.

ಈ ಧ್ವನಿಸುರುಳಿ ಪ್ರಕರಣದಲ್ಲಿ ವಿಧಾನಸಭಾಕ್ಷರ ಹೆಸರು ಪ್ರಸ್ತಾಪವಾಗಿತ್ತು. ಸಭಾಧ್ಯಕ್ಷರ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಆ ವಿಚಾರವನ್ನು ಸಭಾಧ್ಯಕ್ಷರ ಗಮನಕ್ಕೆ ತರುವುದು ಸರಕಾರದ ಕರ್ತವ್ಯ. ಇದು ಕಾನೂನಿನಲ್ಲೇ ಇದೆ. ಸೆಕ್ಷನ್ 201ರ ಪ್ರಕಾರ ಅಧಿಕಾರದಲ್ಲಿದ್ದವರ ಮೇಲೆ ಯಾವುದೇ ಆಪಾದನೆಗಳು ಬಂದಾಗ ಆ ಬಗ್ಗೆ ಸದನದ ಗಮನಕ್ಕೆ ತರಬೇಕು. ಹಾಗೆ ಮುಖ್ಯಮಂತ್ರಿಗಳು ಅದನ್ನು ಸಭಾಧ್ಯಕ್ಷರ ಗಮನಕ್ಕೆ ತಂದರು. ಆಗ ಆ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ಪ್ರಕರಣವನ್ನು ತನಿಖೆ ನಡೆಸಲು ಎಸ್.ಐ.ಟಿಗೆ ಕೊಡಬೇಕೆಂಬುದು ಸರಕಾರದ ವಾದವಾದರೆ, ಸದನ ಸಮಿತಿಗೆ ಕೊಡಬೇಕೆಂಬುದು ಪ್ರತಿಪಕ್ಷದವರ ವಾದವಾಗಿತ್ತು.

ಪ್ರತಿಪಕ್ಷದವರು ತಪ್ಪು ಮಾಡಿರದಿದ್ದರೆ ಯಾವುದಾದರೊಂದು ತನಿಖೆ ನಡೆಯಲಿ ಎಂದುಬಿಡಬಹುದಿತ್ತು. ಇವರು ‘ಎಸ್.ಐ.ಟಿ. ತನಿಖೆ ಬೇಡವೇ ಬೇಡ. ನಾವು ತಪ್ಪು ಮಾಡಿದ್ದೇವೆ, ಕ್ಷಮಿಸಿ’ ಎಂದು ಮೂರು ದಿನಗಳ ಕಾಲ ಸದನದಲ್ಲಿ ಅಂಗಲಾಚಿ ಬೇಡಿಕೊಂಡರು. ಮಾಧುಸ್ವಾಮಿ, ಯಡಿಯೂರಪ್ಪನವರೇ ಒಳಗೆ ಕರೆದು ಮಾತುಕತೆ ಮೂಲಕ ಬಗೆಹರಿಸಿಬಿಡಿ ಎಸ್.ಐ.ಟಿ. ತನಿಖೆ ಬೇಡ ಎಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ, ವಿಧಾನಸಭಾಧ್ಯಕ್ಷರು ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ವಹಿಸಿದರೆ ಫಲಿತಾಂಶ ಬರುವುದು ವಿಳಂಬವಾಗುತ್ತದೆ. ಈ ಪ್ರಕರಣದಲ್ಲಿ ‘ನನ್ನ ಮೇಲೆ ಗುರುತರವಾದ ಹಣಕಾಸಿನ ಆರೋಪ ಬಂದಿದೆ. ಹಾಗಾಗಿ 15 ದಿನಗಳಲ್ಲಿ ತನಿಖಾ ವರದಿ ಬಂದರೆ ಒಳ್ಳೆಯದು’ ಎಂದು ಯೋಚಿಸಿ ಸರಕಾರಕ್ಕೆ ಆ ನಿಟ್ಟಿನಲ್ಲಿ ಸೂಚನೆ ನೀಡಿದರು. ಸರಕಾರ ಅದಕ್ಕೆ ಬದ್ಧವಾಗಿ ಎಸ್.ಐ.ಟಿ. ತನಿಖೆ ನಡೆಸಲು ಒಪ್ಪಿಕೊಂಡಿತು. ಪ್ರತಿಪಕ್ಷದವರು ತಪ್ಪು ಮಾಡಿರದಿದ್ದರೆ ಯಾವುದಾದರೊಂದು ತನಿಖೆ ನಡೆಯಲಿ ಎಂದುಬಿಡಬಹುದಿತ್ತು. ಇವರು ‘ಎಸ್.ಐ.ಟಿ. ತನಿಖೆ ಬೇಡವೇ ಬೇಡ. ನಾವು ತಪ್ಪು ಮಾಡಿದ್ದೇವೆ, ಕ್ಷಮಿಸಿ’ ಎಂದು ಮೂರು ದಿನಗಳ ಕಾಲ ಸದನದಲ್ಲಿ ಅಂಗಲಾಚಿ ಬೇಡಿಕೊಂಡರು. ಮಾಧುಸ್ವಾಮಿ, ಯಡಿಯೂರಪ್ಪನವರೇ ಒಳಗೆ ಕರೆದು ಮಾತುಕತೆ ಮೂಲಕ ಬಗೆಹರಿಸಿಬಿಡಿ ಎಸ್.ಐ.ಟಿ. ತನಿಖೆ ಬೇಡ ಎಂದು ಕೇಳಿಕೊಂಡರು.

ಇವರು ತಪ್ಪೇ ಮಾಡಿರದಿದ್ದರೆ, ಎಸ್.ಐ.ಟಿ. ಒಂದು ವೇಳೆ ಏನೋ ಒಂದು ತಪ್ಪು ವರದಿ ನೀಡಿದರೆ, ಅದನ್ನು ಜಾರಿಗೆ ತರುವ ಸಂದರ್ಭದಲ್ಲಿ ಮತ್ತೆ ನ್ಯಾಯಾಲಯಕ್ಕೇ ಹೋಗಬೇಕಾಗುತ್ತದೆ. ಏನೇ ಶಿಕ್ಷೆ ಕೊಡಬೇಕಿದ್ದರೂ ನ್ಯಾಯಾಲಯದ ಮುಂದೆ ಪ್ರಕರಣ ಬರಬೇಕಾಗುತ್ತದೆ. ಆಗ ಇವರು ತನಿಖೆ ಸರಿಯಾಗಿ ನಡೆದಿಲ್ಲ ಎಂದು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಅದನ್ನು ಬಿಟ್ಟು ಮೂರು ದಿನಗಳ ಕಾಲ ಸದನದಲ್ಲಿ ಪ್ರತಿಭಟನೆ ನಡೆಸಿದ್ದು, ಧನವಿನಿಯೋಗ ವಿಧೇಯಕ ಚರ್ಚೆಯಿಲ್ಲದೇ ಅಂಗೀಕಾರ ಆಗುವಂತೆ ಮಾಡಿದ್ದು ಬಹಳ ನೋವಿನ ಸಂಗತಿ.

ತನಿಖೆ ಅದು-ಇದು ಅಂತಾರೆ ಯಗರಿಸ್ತಾರೆ. ಅದು ಹಾಗೇ ಹೋಗ್ತಾ ಇರುತ್ತೆ. ಒಂದು ವೇಳೆ ತನಿಖೆಯಲ್ಲಿ ಆರೋಪ ಸಾಬೀತಾದರೂ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತರುತ್ತಾರೆ. ಅದೆಲ್ಲಾ ನಡೀತಾ ಇರುತ್ತದೆ.

ಒಟ್ಟಾರೆ ಬಿಜೆಪಿಯವರು ಈ ವಿಚಾರದಲ್ಲಿ ಬಹಳ ತಪ್ಪು ಮಾಡಿದರು. ಮೂರು ದಿನಗಳ ಕಾಲ ಸದನ ನಡೆಯದಂತೆ ಮಾಡಿದ್ದು ಹಾಗೂ ಶಾಸಕರನ್ನು ಖರೀದಿ ಮಾಡಲು ಮುಂದಾಗಿದ್ದು ದೊಡ್ಡ ತಪ್ಪು. ಇದೊಂದೆ ಪಕ್ಷ ಹೀಗೆ ಮಾಡುವುದು. ಬೇರೆ ಪಕ್ಷದವರು ಬೇರೆಯವರನ್ನು ಸೇರಿಸಿಕೊಳ್ಳುತ್ತಾರೆ. ಆದರೆ ಸಮಯ ಸಂದರ್ಭ ನೋಡಿ ಚುನಾವಣೆ ನಡೆಯುವಂತಹ ಸಂದರ್ಭದಲ್ಲಿ ಸೇರಿಸಿಕೊಳ್ಳುತ್ತಾರೆ. ಬಿಜೆಪಿಯವರು ಶಾಸಕರನ್ನು ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಮತ್ತೆ ಅವರು ಚುನಾವಣೆಗೆ ಹೋಗಬೇಕು. ರಾಜಿನಾಮೆ ಕೊಡದೆ ಹಾಗೇ ಸೇರಿದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹರಾಗುತ್ತಾರೆ. ಹೀಗೆ ಶಾಸಕರನ್ನು ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವುದು ತಪ್ಪು.

ಈ ಪ್ರಕರಣ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಂತಹ ಪ್ರಕರಣಗಳು ನಡೆಯಬಾರದು. ಇದು ನಡೆದಿದ್ದರಿಂದಾಗಿ ವೈಯಕ್ತಿಕವಾಗಿ ನನ್ನ ಮನಸ್ಸಿಗೂ ನೋವಾಗಿದೆ. ಇಂತಹ ಬೆಳವಣಿಗೆಗಳಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿಗಿರುವ ಗೌರವ ಹಾಳಾಗಿ ಹೋಗುತ್ತದೆ.

ರಾಜಕಾರಣಿಗಳು ಯಾರೂ ಯಾರ ಮೇಲೂ ಸೇಡು ತೀರಿಸಿಕೊಳ್ಳಲು ಹೋಗುವುದಿಲ್ಲ. ಹಾಗಾಗಿ ಈ ಪ್ರಕರಣದಲ್ಲೂ ಯಾರಿಗೋ ಶಿಕ್ಷೆ ಆಗುತ್ತದೆ ಎಂದು ಹೇಳಲಾಗದು. ತನಿಖೆ ಅದು-ಇದು ಅಂತಾರೆ ಯಗರಿಸ್ತಾರೆ. ಅದು ಹಾಗೇ ಹೋಗ್ತಾ ಇರುತ್ತೆ. ಒಂದು ವೇಳೆ ತನಿಖೆಯಲ್ಲಿ ಆರೋಪ ಸಾಬೀತಾದರೂ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತರುತ್ತಾರೆ. ಅದೆಲ್ಲಾ ನಡೀತಾ ಇರುತ್ತದೆ.

ಕುರ್ಚಿ ಹಿಡಿಯಬೇಕೆಂದು ವಾಮಮಾರ್ಗ ಮತ್ತು ಅಸಾಂವಿಧಾನಿಕ ಮಾರ್ಗ ಅನುಸರಿಸಿದರೆ ಅದಕ್ಕೆ ಕೊನೆ ಎಲ್ಲಿದೆ. ಇಂತಹ ಪ್ರಕರಣಗಳು ನಡೆಯದಂತೆ ತಡೆಯುವುದು, ಸುಧಾರಣೆ ತರುವುದು ಜನರ ಕೈಯಲ್ಲಿ ಇದೆ. ಸ್ಪಷ್ಟ ಬಹುಮತ ಕೊಟ್ಟರೆ ಮಾತ್ರ ಈ ತರಹದ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ.

*ಅರಸೀಕೆರೆ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕರು.

Leave a Reply

Your email address will not be published.