ತಾಯಿ ಅಂತಃಕರಣದ ಕಾಡು ಕನಸಿನ ಬೀಡಿಗೆ

ಕಾದಂಬರಿಯ ಉದ್ದಕ್ಕೂ ಕರದಳ್ಳಿಯವರು ಎಲ್ಲಿಯೂ ತಮ್ಮ ಪ್ರೌಢಿಮೆಯನ್ನು ಪ್ರದರ್ಶಿಸುವುದಕ್ಕೆ ಹೋಗಿಲ್ಲ. ಅತ್ಯಂತ ಸರಳ, ಮುದ್ದಿನ ಭಾಷೆಯಲ್ಲೇ ಘಟನಾವಳಿಗಳನ್ನು ಕಟ್ಟಿಕೊಡುತ್ತಾರೆ. ಮಕ್ಕಳು ಮತ್ತು ಕಾಡು ತಾಯಿಯ ಸಂವಾದಗಳು, ತಾಯಿ-ಮಕ್ಕಳ ಮಾತುಕತೆಗಳಂತಿವೆ. ಲೇಖಕ ಓರ್ವ ತಾಯಿಯಾಗಿ, ಮಕ್ಕಳಿಗೆ ಹೇಳುವುದಿದೆಯಲ್ಲ, ಅದು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕಾದ ಜವಾಬ್ದಾರಿ. ಕೃತಿಕಾರ ಸ್ವತಃ ‘ತಾಯಿ’ ಇಲ್ಲವೇ ‘ಆಯಿ’ ಆಗದ ಹೊರತು ಅದು ಸಿದ್ಧಿಸದು.

ಶಹಪೂರದ ಗೆಳೆಯರು ಪ್ರೀತಿಯಿಂದ ಪುಸ್ತಕವೊಂದನ್ನು ಕಳಿಸಿದ್ದಾರೆ. ಪುಸ್ತಕದ ಜೊತೆಗೆ ಸಣ್ಣ ಕಾಗದವನ್ನು ಇಡಲು ಮರೆತಿರಲಿಲ್ಲ. ‘ಕೇವಲ ಎರಡು ತಾಸುಗಳಲ್ಲಿ ಓದಿ ಮುಗಿಸಬಹುದಾದ ಕಾದಂಬರಿ’ ಎಂಬುದು ಅದರಲ್ಲಿಯ ಒಂದು ಸಾಲಾಗಿತ್ತು. ಇದೀಗ ಓದಿ ಕೆಳಗಿಟ್ಟಿರುವೆ. ಲೇಖಕರ ಜವಾಬ್ದಾರಿ ಅಲ್ಲಿಗೆ ಮುಗಿದಂತಾಗಿದೆ. ಓದುಗನಾದ ನನ್ನ ಜವಾಬ್ದಾರಿ ಹುಟ್ಟಿಕೊಂಡಿದೆ.

ಇದೊಂದು 120 ಪುಟಗಳ ಚಿಕ್ಕ ಕಾದಂಬರಿ. ಇನ್ನೂ ಒಂದೆರಡು ದಿವಸ ಕಣ್ಮನಗಳಿಂದ ಸರಿಯುವ ಲಕ್ಷಣ ಕಾಣುತ್ತಿಲ್ಲ. ನಂತರ ಮನದ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಸ್ಥಾಯಿಯಾಗುತ್ತದೆ. ಮಹತ್ವದ ಕೃತಿಗಳೆಲ್ಲ ಓದುಗನ ಅರಿವಿನಲ್ಲಿ ಉಳಿಯುವ ಬಗೆಯೇ ಹಾಗೆ. ಜೊಳ್ಳು ಗಾಳಿಯಲ್ಲಿ ತೇಲಿ ಹೋಗುತ್ತವೆ.

ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿಗೆ ಇರುವಷ್ಟು ಹರವು ಇನ್ನೊಂದಕ್ಕೆ ಇಲ್ಲ. ಅದಕ್ಕಿರುವುದು ಮಹಾಕಾವ್ಯದ ವ್ಯಾಪ್ತಿ. ಹತ್ತಾರು ಪಾತ್ರಗಳು, ನೂರಾರು ಚಿತ್ರಣಗಳು, ಘಟನಾವಳಿಗಳು, ಕಥೆಗಳು, ಉಪಕಥೆಗಳು, ವಾಸ್ತವ-ಅವಾಸ್ತವ ವರ್ಣನೆಗಳು ಹೀಗೆ ಅದು ಉದ್ದಕ್ಕೂ ಬೆಳೆಯುತ್ತ ಹೋಗುತ್ತದೆ. ಪ್ರಪಂಚದ ಎಲ್ಲ ಸ್ವಭಾವದ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ಕಥೆ ತಿರುವಿನ ಮೇಲೆ ತಿರುವು ಪಡೆಯುತ್ತ, ಕುತೂಹಲವನ್ನು ಕೇರಳಿಸುತ್ತ ಹೋಗುತ್ತದೆ.

ಹೀಗೊಂದು ಸಾಹಿತ್ಯ ಪ್ರಬೇಧವನ್ನು ಮಕ್ಕಳ ಮನೋಭೂಮಿಕೆಗೆ ಒಗ್ಗುವ ಹಾಗೆ ಸಿದ್ಧಗೊಳಿಸುವುದು ಸವಾಲಿನ ಕೆಲಸವೇ. ಎಷ್ಟು ಪಾತ್ರಗಳನ್ನು ಸೃಷ್ಟಿಸಬೇಕು? ಯಾವ ಭಾಷೆಯಲ್ಲಿ ಮಾತಾಡಬೇಕು? ವಸ್ತು ಆಯ್ಕೆ ಯಾವುದಿರಬೇಕು? ನಿರೂಪಣೆ ಹೇಗಿರಬೇಕು? ಕಥೆ-ಘಟನಾವಳಿಗಳನ್ನು ಮಕ್ಕಳಿಗೆ ಇಷ್ಟವಾಗುವಂತೆ ಹೇಗೆ ಹೆಣೆಯಬೇಕು? ಅದರಲ್ಲೂ, ವಿಶೇಷವಾಗಿ ಕೃತಿಕಾರನ ಆಶಯವನ್ನು ಮಕ್ಕಳಿಗೆ ಹೇಗೆ ತಲುಪಿಸಬೇಕು? ಇಂಥ ಹಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕೃತಿಯನ್ನು ಓದುತ್ತಾ ಹೋದೆ.

ನಂತರದಲ್ಲಿ ಕನಸು ಕಾಣುವ ಮಕ್ಕಳನ್ನು ಎತ್ತಿಕೊಂಡು ಹೋಗಿ, ಇಡೀ ಕಾಡಿನ ತುಂಬೆಲ್ಲ ಸುತ್ತಿಸುತ್ತಾರೆ. ಮಾರ್ಗದರ್ಶಿಕೆಯಾಗಿ ಕಾಡಿನ ತಾಯಿ ಮಕ್ಕಳಿಗೆ ಕಾಡಿನ ದರ್ಶನವನ್ನು ಮಾಡಿಸುತ್ತಾ ಹೋಗುತ್ತಾಳೆ.

ಈಗಾಗಲೇ ಪ್ರಕಟವಾಗಿರುವ ಮಕ್ಕಳ ಕವನ ಸಂಕಲನಗಳಿಗೆ ಬರವಿಲ್ಲ. ಮಕ್ಕಳ ಕಥಾಸಾಹಿತ್ಯ, ಕಥನಕಾವ್ಯ, ಶಿಶುಪ್ರಾಸ ಹೀಗೆ ಮಕ್ಕಳ ಸಾಹಿತ್ಯ ಹೇರಳವಾಗಿದೆ. ಮಕ್ಕಳ ಕಾದಂಬರಿ ಸಾಹಿತ್ಯ ಪ್ರಕಾರ ಇಲ್ಲವೆಂದಲ್ಲ, ಆದರೆ ಈ ಕ್ಷೇತ್ರದಲ್ಲಿ ಬರೆದಿರುವವರು ಬೆರಳೆಣಿಕೆಯಷ್ಟು ಮಾತ್ರ.

ಕಾದಂಬರಿ ಸಣ್ಣ ಕಥೆಗಳ ಸಂದರ್ಭದಲ್ಲಿ ಬಳಸುವ ‘ತಂತ್ರದ’ ಪಾತ್ರ ಬಹು ಪ್ರಮುಖವಾದದ್ದು. ಎಷ್ಟೋ ಸಲ ವಸ್ತುವಿಗಿಂತಲೂ, ತಂತ್ರಗಾರಿಕೆಯಿಂದಾಗಿಯೇ ಅವು ಅತ್ಯುತ್ತಮ ರಚನೆಗಳೆಂದು ಬಿಂಬಿಸಿಕೊಂಡಿವೆ.

ಚಂದ್ರಕಾಂತ ಕರದಳ್ಳಿ ಅವರು ಅಂತಹದೊಂದು ತಂತ್ರ ಬಳಸಿಯೇ ಕಥಾ ವಸ್ತುವಿನೊಳಕ್ಕೆ ಪ್ರವೇಶಿಕೆ ಪಡೆಯುತ್ತಾರೆ. ಕಾಡಿನ ಕನವರಿಕೆಯಲ್ಲಿ ಮಕ್ಕಳು ಮಲಗುವ ಹಾಗೆ, ಅದಕ್ಕೆ ಪೂರಕವಾದ ವಿವರಣೆಯನ್ನು ಕಾದಂಬರಿಯ ಪ್ರಾರಂಭದಲ್ಲೇ ಚಿತ್ರಿಸುತ್ತಾರೆ. ನಂತರದಲ್ಲಿ ಕನಸು ಕಾಣುವ ಮಕ್ಕಳನ್ನು ಎತ್ತಿಕೊಂಡು ಹೋಗಿ, ಇಡೀ ಕಾಡಿನ ತುಂಬೆಲ್ಲ ಸುತ್ತಿಸುತ್ತಾರೆ. ಮಾರ್ಗದರ್ಶಿಕೆಯಾಗಿ ಕಾಡಿನ ತಾಯಿ ಮಕ್ಕಳಿಗೆ ಕಾಡಿನ ದರ್ಶನವನ್ನು ಮಾಡಿಸುತ್ತಾ ಹೋಗುತ್ತಾಳೆ.

ಕಾಡನ್ನು ಹೊಕ್ಕ ಮಕ್ಕಳ ಕೂತುಹಲ ಕ್ಷಣ-ಕ್ಷಣಕ್ಕೂ ಇಮ್ಮಡಿಕೊಳ್ಳುತ್ತಲೇ ಹೋಗುತ್ತದೆ. ಕಾಡಿನ ತಾಯಿ ಅರಣ್ಯದಲ್ಲಿರುವ ಅನೇಕ ಸಂಗತಿಗಳನ್ನು ಪರಿಚಯಿಸುತ್ತಾಳೆ. ಅಲ್ಲಿ ವಾಸಿಸುವ ಪ್ರಾಣಿಗಳನ್ನು ತೋರಿಸುತ್ತಾಳೆ. ಅವುಗಳ ಗುಣ, ಸ್ವಭಾವ, ಹಿಂಜರಿಕೆ, ಹಿಂಸೆ, ಕ್ರೂರತೆ, ಅಹಾರಕ್ಕಾಗಿ ಬೇಟೆ ಆಡುವ ಬಗೆ ಹೀಗೆ ಹಲವು ಮಾಹಿತಿ ನೀಡುತ್ತಾಳೆ. ಕಾಡು ಇರುವುದರಿಂದಾಗಿಯೇ ನಾಡು ಇರುವುದಾಗಿ ಮಕ್ಕಳಿಗೆ ತಿಳಿ ಹೇಳುತ್ತಾಳೆ. ಕಾಡಿನ ಉಪಯೋಗ, ಮಳೆ-ಬೆಳೆ, ಹೂ-ಹಣ್ಣು-ಕಾಯಿ, ನಿಸರ್ಗ, ನೀರಿನ ಝರಿಗಳು, ಕೋಗಿಲೆಯ ಹಾಡು, ನವಿಲಿನ ನರ್ತನ, ಸಿಂಹದ ಘರ್ಜನೆ, ಹಾವಿನ ಸಾಹಸ, ಹಸಿವು-ಬದುಕಿನ ನಡುವಿನ ಹೋರಾಟ ಮುಂತಾದ ವೈಚಿತ್ರ್ಯ ಮತ್ತು ವೈಪರೀತ್ಯಗಳೆಲ್ಲವೂ ಇಲ್ಲಿ ಬಾಲ ಭಾಷೆಯಲ್ಲಿ ಎರಕ ಹೊಯ್ದಂತಿವೆ.

ಹಲವು ನುಡಿಗಟ್ಟುಗಳು ಹಾಗೂ ಘೋಷಣಾ ವಾಕ್ಯಗಳು ಮಕ್ಕಳಿಗೆ ಆಪ್ತ ಎನಿಸದಿರವು. ನಿಸರ್ಗವನ್ನು ಲೇಖಕರು ಮಕ್ಕಳಿಗೆ ‘ದೇವರು’ ಎನ್ನುವ ಪರಿಕಲ್ಪನೆಯಲ್ಲಿ ಪರಿಚಯಿಸುತ್ತಾರೆ. ಗಿಡ-ಮರ, ನೆಲ-ಜಲ, ಸೂರ್ಯ-ಚಂದ್ರ ಗ್ರಹಣಗಳನ್ನೆಲ್ಲ ದೈವೀಶಕ್ತಿಯ ಸ್ವರೂಪದಲ್ಲಿ ಎಳೆಯರಿಗೆ ಹೇಳುತ್ತಾರೆ. ತನ್ಮೂಲಕ ಮಕ್ಕಳಲ್ಲಿ ಕಾಡಿನ ಬಗ್ಗೆ, ಪ್ರಾಣಿಗಳ ಬಗ್ಗೆ, ಪರಿಸರದ ಬಗ್ಗೆ, ಕಾಡಿನ ಸಂರಕ್ಷಣೆಯ ಬಗ್ಗೆ ಪ್ರೀತಿ, ಅಭಿಮಾನ, ಜವಾಬ್ದಾರಿಗಳು ಹುಟ್ಟುವಂತೆ ಪ್ರೇರೇಪಿಸುತ್ತಾರೆ.

ಕಾದಂಬರಿಯ ಉದ್ದಕ್ಕೂ, ಕಾಡಿನ ತಾಯಿಯ ಪಾತ್ರವು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ. ಆಕೆ ಮಕ್ಕಳ ಬಗ್ಗೆ ತೋರುವ ಕಾಳಜಿ, ಕಕ್ಕುಲಾತಿ, ಅನನ್ಯವಾದದ್ದು. ಹಲವು ಬಗೆಯ ಹಣ್ಣುಗಳನ್ನು ತಿನ್ನಲು ಕೊಡುತ್ತಾಳೆ. ಬೆಟ್ಟ-ಗುಡ್ಡಗಳಿಂದ ಹರಿದುಬರುವ ಝರಿಯ ತಣ್ಣೀರನ್ನು ಕುಡಿಸುತ್ತಾಳೆ. ಗಿಡ-ಮರಗಳ ಅಡಿಯಲ್ಲಿ ಕೂಡಿಸಿ, ಎಳೆಯರಿಗೆ ದಣಿವು, ಆಯಾಸವಾಗದಂತೆ ವಿಶ್ರಾಂತಿ ಕೊಡಿಸುತ್ತಾಳೆ.

ಈ ಮೂಲಕ ಕಾಡಿನ ಬಗೆಗೆ ತನಗಿರುವ ಮಮಕಾರ, ಕಾಳಜಿ, ಮಹತ್ವ, ಪರಿಸರದ ರಕ್ಷಣೆ, ವನ್ಯಜೀವಿಗಳ ಜೀವನ ಶೈಲಿ, ಬದುಕಿನ ಕ್ರಮ ಹೀಗೆ ಎಳೆಎಳೆಯಾಗಿ ಎಲ್ಲವನ್ನೂ ಬಿಚ್ಚಿಡುತ್ತಾರೆ.

ಹೊತ್ತು ಮುಳುಗುತ್ತಿದ್ದಂತೆ ಲಗುಬಗೆಯಿಂದ ಮಕ್ಕಳನ್ನು ವ್ಯಾನಿನಲ್ಲಿ ಕರೆದುತಂದು ಮನೆಗೆ ತಲುಪಿಸುತ್ತಾಳೆ. ದಣಿವಿನಿಂದ ಬಳಲಿದ ಮಕ್ಕಳು ಬೇಗ ಏಳುವುದೇ ಇಲ್ಲ. ತಾಯಿಂದಿರು ಬೆಳಿಗ್ಗೆ ಎಬ್ಬಿಸಿದಾಗಲೇ ಕಣ್ಣು ಬಿಡುತ್ತವೆ. ಕನಸಿನಲ್ಲಿ ಕಂಡ ಕಾಡಿನ ವರ್ಣನೆ ಮಾಡುತ್ತವೆ.

ಇದಿಷ್ಟು ಈ ಕಾದಂಬರಿಯ ಸಂಕ್ಷಿಪ್ತತೆ. ಇಷ್ಟು ಹೇಳಿದರೆ ಮುಗಿಯುವುದಿಲ್ಲ. ಇನ್ನಷ್ಟು ಸೇರಿಸಲೇ ಬೇಕು.

ಕಾಡು-ಕಾಡುತಾಯಿ-ಮಕ್ಕಳು ಇವಿಷ್ಟು ಇಲ್ಲಿ ಬರುವ ಪಾತ್ರಗಳು. ಮಕ್ಕಳೆಷ್ಟು? -ನಿಖರತೆ ಇಲ್ಲ. ಮಕ್ಕಳ ಹೆಸರೇನು? -ಮಾಹಿತಿ ಇಲ್ಲ. ಈ ಎಲ್ಲ ಇಲ್ಲಗಳು ಇಲ್ಲ ಎನಿಸುವುದೇ ಇಲ್ಲ. ಕಾದಂಬರಿ ಓದುತ್ತಾ ಹೋದಂತೆ ಕಾಡು ತಾಯಿಯ ಪಾತ್ರ ಬೇರೆ ಇನ್ನಾರೂ ಅಲ್ಲ; ಲೇಖಕನೆ ಅದನ್ನು ಧಾರಣಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಈ ಮೂಲಕ ಕಾಡಿನ ಬಗೆಗೆ ತನಗಿರುವ ಮಮಕಾರ, ಕಾಳಜಿ, ಮಹತ್ವ, ಪರಿಸರದ ರಕ್ಷಣೆ, ವನ್ಯಜೀವಿಗಳ ಜೀವನ ಶೈಲಿ, ಬದುಕಿನ ಕ್ರಮ ಹೀಗೆ ಎಳೆಎಳೆಯಾಗಿ ಎಲ್ಲವನ್ನೂ ಬಿಚ್ಚಿಡುತ್ತಾರೆ.

ಈ ಕೃತಿಯನ್ನು ಓದಿದ ನಂತರ ಎರಡು ಮುಖ್ಯ ಸಂಗತಿ ಗೋಚರಿಸುತ್ತವೆ. ಮಕ್ಕಳ ಕೃತಿ ರಚಿಸುವಾಗ ಭಾಷೆ ಅತ್ಯಂತ ಪ್ರಮುಖವಾದದ್ದು. ಮಕ್ಕಳ ಭಾಷೆ ಹಿರೀಕರ ಭಾಷೆಗಿಂತ ಭಿನ್ನವಾದದ್ದು. ಅಲ್ಲಿ ಪ್ರಬುದ್ಧತೆ-ಪಾಂಡಿತ್ಯ ಮುಖ್ಯವಲ್ಲ. ತೊದಲು ನುಡಿಗಳ ಮುಗ್ಧ ಆಲೋಚನೆಗಳು ಮಕ್ಕಳ ಸಾಹಿತ್ಯದ ಜೀವಾಳ. ಕಾದಂಬರಿಯ ಉದ್ದಕ್ಕೂ ಕರದಳ್ಳಿಯವರು ಎಲ್ಲಿಯೂ ತಮ್ಮ ಪ್ರೌಢಿಮೆಯನ್ನು ಪ್ರದರ್ಶಿಸುವುದಕ್ಕೆ ಹೋಗಿಲ್ಲ. ಅತ್ಯಂತ ಸರಳ, ಮುದ್ದಿನ ಭಾಷೆಯಲ್ಲೇ ಘಟನಾವಳಿಗಳನ್ನು ಕಟ್ಟಿಕೊಡುತ್ತಾರೆ. ಮಕ್ಕಳು ಮತ್ತು ಕಾಡು ತಾಯಿಯ ಸಂವಾದಗಳು, ತಾಯಿ-ಮಕ್ಕಳ ಮಾತುಕತೆಗಳಂತಿವೆ. ಲೇಖಕ ಓರ್ವ ತಾಯಿಯಾಗಿ, ಮಕ್ಕಳಿಗೆ ಹೇಳುವುದಿದೆಯಲ್ಲ, ಅದು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕಾದ ಜವಾಬ್ದಾರಿ. ಕೃತಿಕಾರ ಸ್ವತಃ ‘ತಾಯಿ’ ಇಲ್ಲವೇ ‘ಆಯಿ’ ಆಗದ ಹೊರತು ಅದು ಸಿದ್ಧಿಸದು. ಕಾದಂಬರಿಯ ಉದ್ದಕ್ಕೂ ಕರದಳ್ಳಿ ಅವರ ಮಾತೃ ಅಂತಃಕರಣ ವ್ಯಕ್ತವಾಗುತ್ತದೆ.

ಹೀಗಾಗಿ ಅವರು ಕಾಡಿನಲ್ಲಿ ಕರಗಿಹೋಗಿ, ಬೆರಗುಗಣ್ಣಿನಿಂದ ಎಲ್ಲವನ್ನೂ ಅರಿಯುವ ಪ್ರಯತ್ನ ಮಾಡುತ್ತಾರೆ. ಈ ಎಲ್ಲ ಸಂಗತಿಗಳು ಕಾದಂಬರಿಯ ನಿರೂಪಣಾ ದೃಷ್ಟಿಯಿಂದ ಗುಣಾತ್ಮಕವಾದ ಅಂಶಗಳೆಂದೇ ಹೇಳಬಹುದು. ಕೃತಿ-ರಚನಾ ಕೌಶಲ್ಯದಿಂದಾಗಿಯೇ ಚಂದ್ರಕಾಂತ ಅವರು ಮುನ್ನೆಲೆಗೆ ಬರುತ್ತಾರೆ.

ಮುಖ್ಯವಾಗಿ ಕೃತಿಕಾರನಿಗೆ ಇಲ್ಲಿ ಕಾಡಿನ ಅನಂತ ಸ್ವರೂಪವನ್ನು ದರ್ಶನ ಮಾಡಬೇಕಾಗಿದೆ. ಹಾಗಂತ ಎಲ್ಲಿಯೂ ಪಾಠ ಇಲ್ಲವೇ ಪ್ರವಚನಕ್ಕೆ ಇಳಿಯುವುದಿಲ್ಲ. ಮಕ್ಕಳನ್ನು ಕಾಡಿನಲ್ಲಿ ಸ್ವಚ್ಚಂದವಾಗಿ ತಿರುಗಾಡಲು ಬಿಡುತ್ತಾರೆ. ಹೀಗಾಗಿ ಅವರು ಕಾಡಿನಲ್ಲಿ ಕರಗಿಹೋಗಿ, ಬೆರಗುಗಣ್ಣಿನಿಂದ ಎಲ್ಲವನ್ನೂ ಅರಿಯುವ ಪ್ರಯತ್ನ ಮಾಡುತ್ತಾರೆ. ಈ ಎಲ್ಲ ಸಂಗತಿಗಳು ಕಾದಂಬರಿಯ ನಿರೂಪಣಾ ದೃಷ್ಟಿಯಿಂದ ಗುಣಾತ್ಮಕವಾದ ಅಂಶಗಳೆಂದೇ ಹೇಳಬಹುದು. ಕೃತಿ-ರಚನಾ ಕೌಶಲ್ಯದಿಂದಾಗಿಯೇ ಚಂದ್ರಕಾಂತ ಅವರು ಮುನ್ನೆಲೆಗೆ ಬರುತ್ತಾರೆ.

ಮಕ್ಕಳು ತಮ್ಮ ಸಂಪೂರ್ಣ ಮನಸ್ಸನ್ನು ಅರ್ಪಿಸಿಕೊಳ್ಳುವುದು ಎರಡು ಸಂಗತಿಗಳಿಗೆ ಮಾತ್ರ. ಕಥೆ ಕೇಳುವುದೆಂದರೆ ಅವರಿಗೆ ಎಲ್ಲಿಲ್ಲದ ಹಿಗ್ಗು. ಹಾಗೇ ಹಾಡು ಹೇಳಿ ಕುಣಿಯುವುದಕ್ಕೂ ಅವರು ತುದಿಗಾಲಿನ ಮೇಲೆ ನಿಲ್ಲುತ್ತಾರೆ. ಮಕ್ಕಳ ಸಾಹಿತ್ಯ ರಚಿಸುವಾಗ ಕೃತಿಕಾರ ಈ ಎಲ್ಲ ಸೂಕ್ಷ್ಮಗಳನ್ನು ಬಲ್ಲವನಾಗಿರಬೇಕು. ಎಳೆಯರ ಮನಸ್ಥಿತಿ ಅನೇಕ ಸಂವೇದನೆಗಳ ಆಕರ. ಇವುಗಳ ಪರಿಜ್ಞಾನ ಇಲ್ಲದೇ ಹೋದರೆ ಲೇಖಕ ಅವರ ಹೃದಯವನ್ನು ತಟ್ಟಿಲಾರ. ಕೇವಲ ಪ್ರಾಸದ ಭ್ರಮೆಯಲ್ಲಿ ಬರೆಯುವ ಅನೇಕ ಕವಿಗಳು ವಿಫಲರಾಗುವುದು ಇದೇ ಕಾರಣಕ್ಕಾಗಿ.

ಚಂದ್ರಕಾಂತ ಕರದಳ್ಳಿ ಅವರ ಕಾದಂಬರಿ ಗದ್ಯವೂ ಹೌದು; ಪದ್ಯವೂ ಹೌದು. ಇದು ಕಥನವೂ ಹೌದು; ಕಾವ್ಯವೂ ಹೌದು. ಕಾದಂಬರಿಯ ಉದ್ದಕ್ಕೂ ಅವರು ಹಲವು ಅರ್ಥಪೂರ್ಣ ಹಾಡುಗಳನ್ನು ಒಳಗು ಮಾಡಿದ್ದಾರೆ. ಒಟ್ಟು ಕಾದಂಬರಿಯ ಹಂದರರಿಂದ ಬೇರ್ಪಡಿಸಿ ನೋಡಲಾರದಷ್ಟು ಇಲ್ಲಿಯ ಕವಿತೆಗಳು ಕಥಾ ವಸ್ತುವಿನಲ್ಲಿ ಬೆರತುಹೋಗಿವೆ. ಸಾಂದರ್ಭಿಕವಾಗಿ ಕಾದಂಬರಿಯಲ್ಲಿ ಅಲ್ಲಲ್ಲಿ ಚಿತ್ರಿಸಿರುವ ಕಲಾತ್ಮಕ ಚಿತ್ರಗಳು ಮಕ್ಕಳ ಮನಸ್ಸನ್ನು ಸೂರೆಗೊಳ್ಳುತ್ತವೆ.

ಹೆಚ್ಚು ಗೊಂದಲಗಳ ಗೂಡಾಗದೆ, ಕೆಲವೇ ಪಾತ್ರಗಳ ಮೂಲಕ ಅತ್ಯಂತ ಸರಳವಾದ ಶೈಲಿಯಲ್ಲಿ ಮೂಡಿ ಬಂದಿರುವ ‘ಕಾಡು ಕನಸಿನ ಬೀಡಿಗೆ’ ಕಾದಂಬರಿ ಕನ್ನಡದ, ಅದರಲ್ಲೂ ಮಕ್ಕಳ ಸಾಹಿತ್ಯದಲ್ಲಿ ಅಪರೂಪದ ಕೃತಿಯಾಗಿದೆ. ತಮ್ಮ ಕಾದಂಬರಿಯ ಮೂಲಕ ‘ಕೇಂದ್ರ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ’ ವನ್ನು ತಂದುಕೊಟ್ಟ ಕೀರ್ತಿ ಚಂದ್ರಕಾಂತ ಕರದಳ್ಳಿ ಅವರಿಗೆ ಸಲ್ಲುತ್ತದೆ. ಈ ಲೇಖನ ಬರೆಯುವ ಹೊತ್ತಿಗೆ ಸರಿಯಾಗಿ ಅವರಿಗೆ 2019ನೇ ಸಾಲಿಗಾಗಿ ಕರ್ನಾಟಕ ಸರಕಾರವು ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ’ ವನ್ನು ಕೊಡಮಾಡಿದೆ. ಇದು ಅವರ ಪ್ರತಿಭೆಗೆ ಸಂದ ಗೌರವ.

ಚಂದ್ರಕಾಂತ ಕರದಳ್ಳಿ ಅವರ ಕಾದಂಬರಿ ಗದ್ಯವೂ ಹೌದು;ಪದ್ಯವೂ ಹೌದು. ಇದು ಕಥನವೂ ಹೌದು; ಕಾವ್ಯವೂ ಹೌದು. ಕಾದಂಬರಿಯ ಉದ್ದಕ್ಕೂ ಅವರು ಹಲವು ಅರ್ಥಪೂರ್ಣ ಹಾಡುಗಳನ್ನು ಒಳಗು ಮಾಡಿದ್ದಾರೆ.

Leave a Reply

Your email address will not be published.