ತುರ್ತುಪರಿಸ್ಥಿತಿ ಬೆಂಬಲಿಸಿದ ಪತ್ರಕರ್ತರು, ಕಲಾವಿದರು!

ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ

ಹೊತ್ತಿನ ಅಘೋಷಿತ ತುರ್ತುಪರಿಸ್ಥಿತಿಯಲ್ಲಿ ಮಾಧ್ಯಮಗಳುಸತ್ಯಕ್ಕೆ ನಿಷ್ಠರಾಗದೇ, ‘ವ್ಯವಸ್ಥೆಗೆ ಅಥವಾಪ್ರಭುತ್ವಕ್ಕೆ ನಿಷ್ಠರಾಗಲು ಕಾರಣ; ಅವುಗಳ ವ್ಯಾವಹಾರಿಕಸತ್ಯ ಮನಃಸ್ಥಿತಿ.

ಸಮಾಜಮುಖಿಪತ್ರಿಕೆಯಲ್ಲಿಸ್ವತಂತ್ರ ಪತ್ರಿಕೋದ್ಯಮ ಕುರಿತ ಮುಂದುವರಿದ ಚರ್ಚೆಯಲ್ಲಿ ವಿದ್ವಾಂಸರು ತಮ್ಮ ವಿಚಾರಗಳನ್ನು ಸೂಕ್ತ ನಿದರ್ಶನಗಳೊಂದಿಗೆ ಮಂಡಿಸುತ್ತಿರುವುದರಿಂದ ಸ್ವತಂತ್ರಪೂರ್ವ ಮತ್ತು ಸ್ವತಂತ್ರೋತ್ತರ ಕಾಲಘಟ್ಟಗಳಲ್ಲಿ ಮಾಧ್ಯಮಗಳು ತಮ್ಮ ಅಸ್ತಿತ್ವ, ಅಸ್ಮಿತೆಗಾಗಿ ಬಣ್ಣ ಬದಲಿಸಿಕೊಳ್ಳುತ್ತಿರುವುದು ಬಯಲಾಗುತ್ತಿದೆ. ದೇಶದ ಮಾಧ್ಯಮ ಚರಿತ್ರೆಯ ಅರಿವಿಗಾಗಿ ಇಂತಹ ಚರ್ಚೆಯುಪ್ರಭುತ್ವಆಶ್ರಿತ ಮಾಧ್ಯಮಗಳಲ್ಲಿ ನಡೆಯದಿದ್ದರೂ, ಇಲ್ಲ್ಲಿ ನಡೆಯುತ್ತಿರುವ ಮಹತ್ವದ ಚರ್ಚೆಯಿಂದ ಜಿಡ್ಡುಗಟ್ಟಿದ ಪ್ರಭುತ್ವ ಕಣ್ತೆರೆಯುವುದೂ ಇಲ್ಲ್ಲ; ಆದರೆ ಮಾಧ್ಯಮ ಮತ್ತು ಪ್ರಭುತ್ವದವ್ಯಾವಹಾರಿಕಸಂಬಂಧಗಳಪಿಸುಮಾತುಗಳು ಬಹಿರಂಗಗೊಳ್ಳುತ್ತಿರುವುದು ದಿಟ.

ಡಾ.ಜ್ಯೋತಿಯವರ ಲೇಖನದಲ್ಲಿಮಾಧ್ಯಮಗಳು ಸತ್ಯಕ್ಕೆ ನಿಷ್ಠರಾಗಿರಬೇಕೇ ಹೊರತು, ವ್ಯವಸ್ಥೆಗಲ್ಲಎಂಬ ವಾದವು 1975 ತುರ್ತುಪರಿಸ್ಥಿತಿ ಸಂದರ್ಭದಲ್ಲಿನ ಮಾಧ್ಯಮಗಳಿಗೆ ಅನ್ವಯಿಸುತ್ತದೆ. ಅಂದಿನ ಮಾಧ್ಯಮಗಳು ಇಂದಿರಾ ಹೇರಿದ ತುರ್ತುಪರಿಸ್ಥಿತಿಗೆಮಾಧ್ಯಮ ಪಾವಿತ್ರ್ಯ ಹಿನ್ನೆಲೆಯಲ್ಲಿ ನಿಷ್ಠರಾಗಲಿಲ್ಲ. ಆದರೆ, ಹೊತ್ತಿನ ಅಘೋಷಿತ ತುರ್ತುಪರಿಸ್ಥಿತಿಯಲ್ಲಿ ಮಾಧ್ಯಮಗಳುಸತ್ಯಕ್ಕೆ ನಿಷ್ಠರಾಗದೇ, ‘ವ್ಯವಸ್ಥೆಗೆ ಅಥವಾಪ್ರಭುತ್ವಕ್ಕೆ ನಿಷ್ಠರಾಗಲು ಕಾರಣ; ಅವುಗಳ ವ್ಯಾವಹಾರಿಕಸತ್ಯ ಮನಸ್ಥಿತಿ. ‘ಸತ್ಯಕ್ಕೆ ನಿಷ್ಠವಾಗಿ, ‘ವ್ಯವಸ್ಥೆಗೆ ನಿಷ್ಠವಾಗದ ಕನ್ನಡದ ಪ್ರಮುಖ ಪತ್ರಿಕೆಗಳು ಇಂದುದೈಹಿಕವಾಗಿ ಕೃಷವಾಗುತ್ತಿರುವುದು ಒಂದು ಉದಾಹರಣೆಯಷ್ಟೇ.

ತನ್ನ ಆಯ್ಕೆಯನ್ನೇ ಅಸಿಂಧುಗೊಳಿಸಿದ ನ್ಯಾಯಪೀಠದ ನಿರ್ಧಾರದಿಂದ ಕಂಗೆಟ್ಟ ಇಂದಿರಾಗಾಂಧಿ, ರಾಜಕೀಯ ಅಸ್ತಿತ್ವಕ್ಕಾಗಿ ವ್ಯಾವಹಾರಿಕಸತ್ಯವೆಂಬ ಆಲದÀ ಬಿಳಲಿಗೆ ಜೋತುಬಿದ್ದಾಗ, ಪತ್ರಕರ್ತ ಖುಷ್ವಂತ್ ಸಿಂಗ್ ಮತ್ತು ಎಂ.ಎಫ್.ಹುಸೇನ್ ಅವರೂ ಅದೇ ಬಿಳಲಿಗೆ ಜೋತುಬಿದ್ದರು. ತಮ್ಮ ಭವಿಷ್ಯದ ವ್ಯಾವಹಾರಿಕಲಾಭಕ್ಕಾಗಿ ತುರ್ತುಪರಿಸ್ಥಿತಿಯನ್ನು ಸಂದರ್ಭೋಚಿತವಾಗಿ ದುಡಿಸಿಕೊಂಡ ಅವರು, ‘ವೃತ್ತಿ ನಿಷ್ಠೆಯನ್ನು ಹೇಗೆ ಕಡೆಗಣಿಸಿದರು ಎಂಬುದಕ್ಕೆ ನಿದರ್ಶನಗಳು ಇಂತಿವೆ.

1. ತುರ್ತುಪರಿಸ್ಥಿತಿಯ ಕರಾಳತೆಯನ್ನು ಮಾಧ್ಯಮಗಳ ಸಹಿತ ಇಡೀ ದೇಶವೇ ವಿರೋಧಿಸುತ್ತಿದ್ದರೂ, ಒಂದಿನಿತೂ ಧೃತಿಗೆಡದ ಪತ್ರಕರ್ತ ಖುಷ್ವಂತ ಸಿಂಗ್ ಅವರು, ತುರ್ತುಪರಿಸ್ಥಿತಿಯನ್ನೂ, ಇಂದಿರಾಗಾಂಧಿಯನ್ನೂ ಆರಂಭದಲ್ಲಿ ಬೆಂಬಲಿಸಿದ್ದರಿಂದಇಂದಿರಾ ಚಮಚಾಎಂಬ ವಿಶೇಷಣಕ್ಕೆ ಒಳಗಾದರು. “ತುರ್ತುಪರಿಸ್ಥಿತಿಯಲ್ಲಿ ಆಕೆ ಪತ್ರಿಕೆಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದಾಗ, ನಾನು ನನ್ನ ಬೆಂಬಲವನ್ನು ಹಿಂತೆಗೆದುಕೊಂಡೆ. ತನ್ನನ್ನು ವಿರೋಧಿಸುವವರನ್ನು ದೂಷಿಸುವ ಅಭ್ಯಾಸ ಅವರಲ್ಲಿತ್ತು. ಅವರು ನನ್ನನ್ನು ದೂಷಿಸುವ ಅವಕಾಶಕ್ಕಾಗಿ ಕಾಯುತ್ತಿದ್ದರು. ನಂತರದಲ್ಲಿ ಅವರನ್ನು ಭೇಟಿಯಾಗದ ಕಾರಣ ನನ್ನನ್ನು ದೂಷಿಸಲು ಆಕೆಗೆ ಎಂದಿಗೂ ಅವಕಾಶ ನೀಡಲಿಲ್ಲಎಂದು ತುರ್ತು ಪರಿಸ್ಥಿತಿಯ ಸಂದರ್ಭ ನೆನೆದು ಹೇಳಿದ್ದ ಖುಷ್ವಂತ್ ಸಿಂಗ್, ಇನ್ನೊಂದೆಡೆನಾನು ಏಕೆ ತುರ್ತುಪರಿಸ್ಥಿತಿಯನ್ನು ಬೆಂಬಲಿಸಿದೆ(ಜುಲೈ 3, 2000 ಔಟ್ಲುಕ್) ಅನ್ನುವ ಸಂದರ್ಶನದ ಸಂದರ್ಭದಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಖುಷ್ವಂತ್ ಸಿಂಗ್ ಅವರವ್ಯವಸ್ಥೆ ನಿಷ್ಠನಡೆಗಳ ಕಾರಣದಿಂದಲೇ ಇಂದಿರಾಗಾಂಧಿಯವರ ವೈಯಕ್ತಿಕ ಶಿಫಾರಸ್ಸಿನನ್ವಯಹಿಂದೂಸ್ತಾನ್ ಟೈಮ್ಸ್ಸಂಪಾದಕರಾಗುವ ಯೋಗವೂ ಕೂಡಿಬಂತು. ನಂತರದಲ್ಲಿ 1980-86 ಅವಧಿಗೆ ರಾಜ್ಯಸಭೆಯ ಸದಸ್ಯರಾಗಿ, ರಾಜಕೀಯ ಬಡ್ತಿ ಪಡೆಯುವುದರ ಮೂಲಕಮಾಧ್ಯಮ ಪಾವಿತ್ರ್ಯಕುರಿತ ಪ್ರಶ್ನೆ/ಚರ್ಚೆಗಳನ್ನು ಅಂದೇ ಹುಟ್ಟುಹಾಕಿದರು.

2. ರಾಮ್ ಮನೋಹರ ಲೋಹಿಯಾ ಅವರು ಲೋಕಸಭೆಯಲ್ಲಿ ಇಂದಿರಾ ಅವರನ್ನುಗುಂಗಿ ಗುಡಿಯಾ(ಮೂಕ ಗೊಂಬೆ) ಎಂದು ಸಂಬೋಧಿಸಿ ಚರ್ಚಿಸುತ್ತಿದ್ದರೆ, ಅಟಲ್ ಬಿಹಾರಿ ವಾಜಪೇಯೀ ಅವರು, ಇಂಡೋಪಾಕ್ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ ಸಂದರ್ಭದಲ್ಲಿ ಇಂದಿರಾಗಾಂಧಿಯನ್ನುದುರ್ಗೆಎಂದು ಬಣ್ಣಿಸಿದ್ದರು. ಮಾಧ್ಯಮಗಳೂ ಸಹ ಇತ್ತೀಚಿನವರೆಗೂ (2017) ಇಂದಿರಾ ಜನ್ಮಶತಮಾನೋತ್ಸವ ಸಂದರ್ಭದಲ್ಲೂದುರ್ಗೆಎಂದೇ ಉಲ್ಲೇಖಿಸಿದವು. ದಿಟ್ಟ, ದೃಢ, ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ ಅವರನ್ನು ವಿರೋಧಿಗಳು ಸಹದುರ್ಗೆಎಂದೇ ತಮ್ಮ ಮಾತುಗಳಲ್ಲಿ ಉಚ್ಛರಿಸುತ್ತಿದ್ದರು. ಇಂಥ ಮಾತುಗಳಿಂದ ಪ್ರೇರಣೆಗೊಂಡ ಕಲಾವಿದ ಎಮ್ ಎಫ್ ಹುಸೇನ್ ಅವರುದುರ್ಗಾಶೀರ್ಷಿಕೆಯ ಕಲಾಕೃತಿ ರಚಿಸುವುದರ ಮೂಲಕ ಇಂದಿರಾಗಾಂಧಿಯವರನ್ನು ಮತ್ತು ತುರ್ತುಪರಿಸ್ಥಿತಿಯನ್ನೂ ಬೆಂಬಲಿಸಿದರು. ಹುಸೇನ್ ಎಂದಿನಂತೆ ಚಿತ್ರದಲ್ಲೂ ಇಂದಿರಾಗಾಂಧಿಯವರನ್ನು ನಗ್ನವಾಗಿಯೇ ಚಿತ್ರಿಸಿದ್ದಾರೆ! ಆದರೆ ಅದು ವಿವಾದಕ್ಕೀಡಾಗಲಿಲ್ಲ ಎಂಬುದು ಗಮನೀಯ! ಇಷ್ಟಕ್ಕೆ ನಿಲ್ಲದ ಹುಸೇನ್ ಸರಣಿ ದೃಶ್ಯ ನಿರೂಪಣೆಯಲ್ಲಿ ಇಂದಿರಾಗಾಂಧಿಯನ್ನು ಮದರ್ ತೆರೇಸಾಗೆ ಹೋಲಿಸಿ (ಮದರ್ ತೆರೇಸಾ ಸರಣಿ ಚಿತ್ರಗಳು ಬೇರೆ ಇವೆ) ಚಿತ್ರಿಸಿದ ಅವರು, ಅವುಗಳನ್ನು ಇಂದಿರಾ ಮತ್ತು ಬಳಗಕ್ಕೆ ಪ್ರದರ್ಶಿಸುತ್ತ, ಕಾಂಗ್ರೆಸ್ ಚಾವಡಿಯಲ್ಲಿ ಗಣ್ಯಸ್ಥಾನ ಗಿಟ್ಟಿಸಿಕೊಂಡರು.

ಹುಸೇನ್ ಕಲಾಕೃತಿಗಳು ಹೆಸರಾಂತ ಪಡುವಣದ ಕಲಾವಿದ ಪಾಬ್ಲೋ ಪಿಕಾಸೋನ ಕಲಾಕೃತಿಗಳಪುನರುತ್ಪಾದನೆಗಳೇ ಆಗಿರುವುದರಿಂದ, ಭಾರತದಪಿಕಾಸೋಎಂಬ ಹೆಗ್ಗಳಿಕೆಗೆ ಹುಸೇನ್ ಪಾತ್ರರಾದರು. ತಂತ್ರಗಾರಿಕೆ, ಮೈವಳಿಕೆ, ಕುಂಚದ ಬೀಸುಗಳು, ವರ್ಣವಿನ್ಯಾಸಗಳೆಲ್ಲವೂ ಪಿಕಾಸೋನ ಕಲಾಕೃತಿಗಳ ಮುಂದುವರಿದ ರೂಪದಂತೆ ಒಡಮೂಡಿದರೆ, ದೇಶೀ ರೂಪ ವಿನ್ಯಾಸಗಳಿಂದಲೇಇದು ಹುಸೇನ್ ಕಲಾಕೃತಿಎನ್ನುವಷ್ಟರಮಟ್ಟಿಗೆ ಅವರ ಅಭಿವ್ಯಕ್ತಿ ಜಗದ್ವ್ಯಾಪಿಸಿತ್ತು. ಸುದೀರ್ಘ ಅವಧಿಯ ಕಲಾರಚನೆಯುದ್ದಕ್ಕೂ ಪಿಕಾಸೋನ ಪ್ರಭಾವ ವಲಯದಿಂದ ಹೊರಬರಲಾರದ ಹುಸೇನ್ ಚಿತ್ರಸರಣಿಯಲ್ಲಿ ನಗ್ನ ದೃಶ್ಯನಿರೂಪಣೆಯೇ ಪ್ರಧಾನ. ಅಂತೆಯೇ ಹಿಂದೂ ದೇವಾನುದೇವತೆಗಳನ್ನು ಗುರಿಯಾಗಿಸಿಕೊಂಡ ಅವರು ಭಾರತಮಾತೆಯನ್ನೂ ಸಹ ನಗ್ನವಾಗಿ ಚಿತ್ರಿಸಿ, ಕೇಸರಿಯುಕ್ತ ಕಣ್ಣುಗಳನ್ನು ಕೆಂಪಾಗಿಸಿದ್ದರು. ಇತರ ಧರ್ಮಗಳ ದೈವ/ಪುರುಷರನ್ನು ಕಲಾಕೃತಿಯಿಂದ ಹೊರಗಿಡುವ ತರತಮ ಅಭಿವ್ಯಕ್ತಿಯ ಪ್ರಶ್ನೆಗಳಿಗೆ ಅವರಲ್ಲಿ ಔದಾರ್ಯದ ಉತ್ತರವಿರಲಿಲ್ಲ; ಉತ್ತರದಾಯಿತ್ವವೂ ಇರಲಿಲ್ಲ.

ಇಂದಿರಾ ಕುಟುಂಬ ಓಲೈಕೆಗೆ ತಮ್ಮ ಕಲಾಕೃತಿಗಳಲ್ಲಿ ಮಹತ್ವದ ಸ್ಥಾನ ಕೊಟ್ಟು, ‘ವ್ಯವಸ್ಥೆಗೆನಿಷ್ಠೆಯಿಂದ ಜೋತುಬಿದ್ದರು. ಅಷ್ಟೇ ಅಲ್ಲದೇ, ತಮ್ಮ ಕಲಾಕೃತಿಗಳನ್ನು ಹೊತ್ತುಕೊಂಡು ಹೋಗಿ ಪ್ರಧಾನಮಂತ್ರಿ ನಿವಾಸದ ಆವರಣದಲ್ಲಿಯೇ ಇಂದಿರಾಗಾಂಧಿಯ ಮುಂದೆ ಪ್ರದರ್ಶಿಸಿ ಅವರ ಕೃಪಾಶೀರ್ವಾದಕ್ಕೂ ಪಾತ್ರರಾದರು. ಇವು ಭಾರತೀಯ ಸೃಜನಶೀಲ ಕಲಾವಿದನ ನಡೆಯಾದರೆ, ಪರಕೀಯರ ನಡೆಗಳನ್ನು ಇಲ್ಲಿ ಪರಿಶೀಲಿಸ ಬೇಕಾಗುತ್ತದೆ.

ಜರ್ಮನಿಯ ನಾಝಿಗಳು ಮತ್ತು ಫ್ಯಾಸಿಸ್ಟ್ ಇಟಾಲಿಯನ್ನರು ಗೆರ್ನಿಕಾ ನಗರದ ಮೇಲೆ ಬಾಂಬ್ ದಾಳಿ ನಡೆಸಿ, ಧ್ವಂಸ ಮಾಡಿದ್ದನ್ನು ವಿರೋಧಿಸಿ ಜಗತ್ಪ್ರ್ಸಿದ್ಧ ಕಲಾವಿದ ಪಾಬ್ಲೋ ರೂಯಿಜ್ ಪಿಕಾಸೋಗೆರ್ನಿಕಾ(1937) ಕಲಾಕೃತಿಯನ್ನು ರಚಿಸಿದ. ರಚನೆಯ ಹಿಂದೆ ಜರ್ಮನಿಯ ನಾಝಿಗಳನ್ನು ಮತ್ತು ಫ್ಯಾಸಿಸ್ಟ್ ಇಟಾಲಿಯನ್ನರನ್ನು ಓಲೈಸುವ ಇರಾದೆ ಪಿಕಾಸೋನಿಗೆ ಇರಲಿಲ್ಲ. ಪರ್ಯಾಯವಾಗಿ ಪ್ರತಿಭಟಿಸುವ ತುಡಿತ ಹೊಂದಿದ್ದಗೆರ್ನಿಕಾವಿಶ್ವಖ್ಯಾತಿಯ ಮುಂದೆ ಹುಸೇನ್ ಯಾವ ಚಿತ್ರವೂ ಸರಿಗಟ್ಟುವುದಿಲ್ಲ. ಮೌಲ್ಯಯುಕ್ತ, ತತ್ತ್ವಬದ್ಧ ಅಭಿವ್ಯಕ್ತಿಯಲ್ಲಿ ಯಾವುದೇರಾಜಿಮಾಡಿಕೊಳ್ಳದ ಪಿಕಾಸೋನ ಮನಮಿಡಿದಿದ್ದು, ದಾಳಿಯಿಂದ ಕಂಗೆಟ್ಟಿದ್ದ ಗೆರ್ನಿಕಾ ನಗರದ ನಾಗರಿಕರ ನೋವು ಸಂಕಟಗಳಿಗೇ ಹೊರತುವ್ಯವಸ್ಥೆಗೆ ಅಲ್ಲ! ಆದರೆ ಹುಸೇನ್ರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮತ್ತು ನಂತರದ ದಿನಗಳಲ್ಲೂ ದೇಶದ ಜನರದನಿಗೆ ಸ್ಪಂದಿಸದಿದ್ದರೂ, ಹಿಂದೂತ್ವದ ವಿರೋಧಿಯಾದರು! ಜೊತೆಗೆ ತಮ್ಮ ಅಭಿವ್ಯಕ್ತಿಯನ್ನುವ್ಯವಸ್ಥೆಗೆ ನಿಷ್ಠೆಯಿಂದ ಸಮರ್ಪಿಸಿ, ಪುನೀತರಾಗಿರುವುದಕ್ಕೆ ಇಲ್ಲಿರುವ ಚಿತ್ರಗಳೇ ಸಾಕ್ಷಿ.

ನಂತರ ಪ್ರಧಾನಿಯಾದ ರಾಜೀವಗಾಂಧಿಯವರಿಗೆ ಇಂದಿರಾ ಕುರಿತ ಕಲಾಕೃತಿಗಳನ್ನು ಉಡುಗೊರೆಯಾಗಿ ಸಲ್ಲಿಸಿ, ಅವರ ಆಪ್ತವಲಯದಲ್ಲೂ ಸ್ಥಾನ ಪಡೆದ ಹುಸೇನ್, 1986-92 ಅವಧಿಗೆ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆಯಾದರು. ಇತ್ತ ಕರ್ನಾಟಕದಲ್ಲಿ, ಕೆನ್ ಕಲಾಶಾಲೆಯ ಸ್ಥಾಪಕ, ಕಲಾವಿದ ಆರ್.ಎಂ.ಹಡಪದ ಸಹ ಇಂದಿರಾಗಾಂಧಿಯವರ ರಾಜಕೀಯ ದುರ್ನಡತೆಯನ್ನು ಖಂಡಿಸಿ (1984) ಚಿತ್ರಿಸಿದರು. ಅವರು ಹುಸೇನ್ರಂತೆ ಬೆಳಕಿಗೆ ಬಾರದೇ ಇರುವುದಕ್ಕೆ ಕಾರಣ, ರಾಜಕಾರಣ ಮತ್ತು ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದು. ಒಂದಂತೂ ಸತ್ಯ; ಎಷ್ಟೇ ಮೇಧಾವಿತನವಿದ್ದರೂಗೆಲ್ಲುವ ಕುದುರೆಗೆ (ಪಕ್ಷ) ‘ನಿಷ್ಠರಾದರೆ ಪ್ರಭುತ್ವದ ಮುಷ್ಟಿಯಲ್ಲಿರುವ ಎಲ್ಲಗೌರವಗಳಿಗೆ ಪಾತ್ರರಾಗಬಹುದು ಎಂಬುದಕ್ಕೆ ಮೇಲಿನ ಎರಡು ನಿದರ್ಶನಗಳು ಸಾಕಲ್ಲವೇ?

ಅಪೂರ್ವ ಮೇಧಾವಿತನದಿಂದಲೇ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದ ಇಬ್ಬರೂ ಅಂದಿನ ತುರ್ತುಪರಿಸ್ಥಿತಿಗೆ ಬೆಂಬಲ ನೀಡಿದ ಋಣಭಾರದಿಂದಲೇ ರಾಷ್ಟ್ರದ ಅತ್ಯುನ್ನತ ಗೌರವಗಳು, ರಾಜಕೀಯ ಸ್ಥಾನಮಾನಗಳು ಅವರನ್ನು ಅರಸಿ ಬಂದವೇ? ತುರ್ತುಪರಿಸ್ಥಿತಿಯಂತಹ ಪ್ರಜಾತಂತ್ರದ ದಮನಕಾರಿ ನೀತಿಗೆ ಪತ್ರಕರ್ತರ, ಕಲಾವಿದರ ಬೆಂಬಲ ಔಚಿತ್ಯಪೂರ್ಣವಾಗಿತ್ತೇ? ಜೊತೆಗೆ ಇಂದಿನ ಮಾಧ್ಯಮಗಳುವ್ಯವಸ್ಥೆಗೆ ನಿಷ್ಠರಾಗಿ, ‘ಹೊಂದಾಣಿಕೆಮಾಡಿಕೊಂಡು ಬದುಕುವುದು ಅನಿವಾರ್ಯವೇ? ಮುಂತಾದ ತತ್ಸಂಬಂಧಿ ಪ್ರಶ್ನೆಗಳಿಗೆ ತಾತ್ವಿಕ ವಾಗ್ವಾದಗಳ ಮೂಲಕ ಉತ್ತರ ಕಂಡುಕೊಳ್ಳಬೇಕಾಗಿದೆ.

Leave a Reply

Your email address will not be published.