ತೇಜಸ್ವಿ ಕಥನದಲ್ಲಿ ಅಲಕ್ಷಿತ ಪ್ರತಿಭೆಗಳ ಹುಡುಕಾಟದ ಆಯಾಮಗಳು

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿವರ್ಷ ನೂರಾರು ಪಿ.ಹೆಚ್.ಡಿ. ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. ಈ ಪ್ರಬಂಧಗಳನ್ನು ನುರಿತ ಪ್ರಾಧ್ಯಾಪಕರಿಂದ ಪರಿಶೀಲನೆ ನಡೆಸಿ ಡಾಕ್ಟರೇಟ್ ಪದವಿಗಳನ್ನೂ ನೀಡಲಾಗುತ್ತಿದೆ. ಆದರೆ ಈ ಸಂಶೋಧನೆಗಳ ಮಾಹಿತಿ ಮತ್ತು ಪ್ರಯೋಜನ ಸಮಾಜದ ಒಳಿತಿಗೆ ಸುಲಭವಾಗಿ ದಕ್ಕುತ್ತಿಲ್ಲ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಆಯ್ದ ಪಿ.ಹೆಚ್.ಡಿ. ಮಹಾಪ್ರಬಂಧದ ಸಾರಾಂಶವನ್ನು ಸಮಾಜಮುಖಿ ಓದುಗರಿಗೆ ಒದಗಿಸಲಾಗುವುದು.

ಈ ಬಾರಿಯ ಪಿ.ಹೆಚ್.ಡಿ. ವಿಷಯ: ‘ತೇಜಸ್ವಿ ಕಥನದಲ್ಲಿ ಅಲಕ್ಷಿತ ಪ್ರತಿಭೆಗಳ ಹುಡುಕಾಟದ ಆಯಾಮಗಳು’

ಸಂಶೋಧಕರು: ಡಾ.ಕಲೀಮ್ ಉಲ್ಲಾ

ಮಾರ್ಗದರ್ಶಕರು: ಪ್ರೊ.ಸಣ್ಣರಾಮ, ವಿಶ್ರಾಂತ ಪ್ರಾಧ್ಯಾಪಕರು, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ.

 

ತೇಜಸ್ವಿ ಕಥನಗಳು ಜೀವಜಗತ್ತಿನ ವಿಶಿಷ್ಟತೆಯನ್ನು ಕನ್ನಡದ ಬೇರೆ ಲೇಖಕರಿಗಿಂತ ವಿಭಿನ್ನವಾಗಿ ಅಭಿವ್ಯಕ್ತಿಸಿವೆ. ನಿಸರ್ಗವನ್ನು ಹಾಗೂ ಅದರ ಒಂದು ಭಾಗವಾದ ಮನುಷ್ಯ ಬದುಕನ್ನು ಸಂಯೋಜಿಸಿಕೊಂಡು ವಿಕಾಸವಾದದ ತಳಹದಿಯಲ್ಲಿ ಕಥನಗಳನ್ನು ಕಟ್ಟಿರುವ ಕ್ರಮ ಕನ್ನಡ ಸಾಹಿತ್ಯದ ಮಟ್ಟಿಗೆ ಹೊಸತು. ಮನುಷ್ಯನ ಜತೆಗೆ ನಿಸರ್ಗವನ್ನು ಬೆಸೆಯುವ, ಜತೆಗೇ ಪ್ರಕೃತಿ ಮತ್ತು ಮನುಷ್ಯನ ನಡವಳಿಕೆಯ ಚಲನಶೀಲ ಪ್ರಕ್ರಿಯೆಗಳನ್ನು ದಾಖಲಿಸುವ ತೇಜಸ್ವಿ ಕಥನಗಳು ಹೊಸ ದಾರಿಯನ್ನು ತುಳಿಯುತ್ತವೆ. ಕಥನಗಳು ಇಕಾಲಜಿ ನಂಬಿಕೆಯಂತೆ ಬದುಕನ್ನು ನಿರ್ಭಾವುಕವಾಗಿ ಮತ್ತು ಕೌತುಕವಾಗಿ ನೋಡಿರುವ ಕ್ರಮ ಕೂಡ ಕನ್ನಡ ಸಾಹಿತ್ಯದ ಮಟ್ಟಿಗೆ ನವೀನ.

ಪೂರ್ಣಚಂದ್ರ ತೇಜಸ್ವಿ ಅವರ ಕಥನವು ಅಲಕ್ಷಿತ ಪ್ರತಿಭೆಗಳ ಜಗತ್ತಿನ ಜ್ಞಾನಗಳನ್ನು ತನ್ನೊಳಗೆ ಕಾಣಿಸಿರುವ ಬಗೆ ವಿಶಿಷ್ಟವಾದದ್ದು. ಯಾರೂ ಅಷ್ಟಾಗಿ ಗಮನಿಸದ ವೈವಿಧ್ಯಮಯ ಲೋಕವೊಂದನ್ನು ತೇಜಸ್ವಿ ಕಥನಗಳು ಕಟ್ಟುತ್ತವೆ. ಇದರಲ್ಲಿ ಲೋಕ ಗಮನಿಸಿದ ಅಲಕ್ಷಿತ ಲೋಕವೊಂದಿದೆ. ಇದನ್ನು ನಾಗರಿಕ ಜಗತ್ತಿನಿಂದ ಅವಜ್ಞೆಗೆ ಒಳಪಟ್ಟ ಸಮೂಹವೆಂದು ಭಾವಿಸಿಕೊಳ್ಳಬಹುದು. ನಿಸರ್ಗದ ಪ್ರಾಣಿ, ಪಕ್ಷಿ, ಕೀಟ, ಸರೀಸೃಪ, ಗಿಡ, ಮರ, ಹೂವು, ನದಿ, ಕಾಡು, ರೈತರು, ಕಾಡಿನ ಜನರೂ, ಕುಶಲಕರ್ಮಿಗಳು, ತಮ್ಮ ಜ್ಞಾನದ ಮಹತ್ವ ಅರಿಯದ ಎಲ್ಲ ಸಾಮಾನ್ಯರೂ ಈ ಪಟ್ಟಿಯಲ್ಲಿ ಸೇರಿಕೊಳ್ಳುತ್ತಾರೆ. ಇವರೆಲ್ಲಾ ಪಠ್ಯದಿಂದ ವಿದ್ಯೆ ಕಲಿತ ಮೇಧಾವಿಗಳಲ್ಲ. ನಿಸರ್ಗದ ಒಡನಾಟದಿಂದ, ತಮ್ಮ ಪರಂಪರೆಯಿಂದ ಅರಿವನ್ನು ವಿಸ್ತರಿಸಿಕೊಂಡ ವಿಶಾಲ ಸಮೂಹ. ಈ ವರ್ಗದ ಜ್ಞಾನಕ್ಕೆ, ತಿಳಿವಳಿಕೆಗೆ, ಬದುಕಿನ ರೀತಿಗೆ ನಾಗರಿಕ ಲೋಕದಲ್ಲಿ ವಿಶೇಷ ಗೌರವಗಳಿಲ್ಲ. ಒಂದರ್ಥದಲ್ಲಿ ಇವರೆಲ್ಲಾ ನಿರ್ಲಕ್ಷಿತರು. ಇಂಥ ಅಲಕ್ಷಿತರ ಜ್ಞಾನ ವಿನ್ಯಾಸಗಳನ್ನು ತೇಜಸ್ವಿ ಕಥನಗಳು ವಿವರಿಸಿರುವ ರೀತಿ ವಿಭಿನ್ನವಾಗಿದೆ. ಈ ಪರಿಕಲ್ಪನಾ ಸ್ವರೂಪವನ್ನೇ ಮುಖ್ಯ ಆಶಯ ಎಂದು ಭಾವಿಸಿ ವಿಶ್ಲೇಷಿಸಿರುವ ಸಂಶೋಧನೆಯೇ ‘ತೇಜಸ್ವಿ ಕಥನದಲ್ಲಿ ಅಲಕ್ಷಿತ ಪ್ರತಿಭೆಗಳ ಹುಡುಕಾಟದ ಆಯಾಮಗಳು’

ಪ್ರಧಾನಧಾರೆಯ ಜಗತ್ತು ಗಮನಿಸದೆ ನಿರ್ಲಕ್ಷ್ಯ ವಹಿಸುವ ಪ್ರಕೃತಿ, ವ್ಯಕ್ತಿ, ವಸ್ತು, ಸನ್ನಿವೇಶ ಮತ್ತು ಚಾರಿತ್ರಿಕ ಸಂದರ್ಭಗಳ ಕಡೆಗೆ ತೇಜಸ್ವಿ ಕಥನಗಳು ಸೂಕ್ಷ್ಮನೋಟ ಹರಿಸುತ್ತವೆ. ಸುಪ್ತಜ್ಞಾನದ ಪಾರಂಪಾರಿಕ ತಿಳಿವಳಿಕೆಯಿರುವ ಸಮುದಾಯಗಳು, ತಮ್ಮ ಪ್ರತಿಭಾ ಮಹತ್ವವನ್ನು ಅರಿಯದೆ ತೊಳಲಾಡುವ ಎಲ್ಲಾ ಬಗೆಯ ಅವಸ್ಥೆಗಳನ್ನು ಅದು ತೆರೆದಿಡುತ್ತವೆ. ಈ ಬಗೆಯ ಅಲಕ್ಷಿತ ಸಮುದಾಯದ ಕ್ರಿಯಾಶೀಲತೆಗಳನ್ನು ತೇಜಸ್ವಿ ಕಥನಗಳು ದೊಡ್ಡ ಕಣ್ಣೋಟದಿಂದ ಕಂಡು ಮಾನವೀಯ ನೆಲೆಯಿಂದ ಅರ್ಥ ಮಾಡಿಸುತ್ತವೆ. ಇದಕ್ಕೆ ಲೇಖಕರ ವಿಸ್ತಾರ ಅನುಭವ, ತಾತ್ವಿಕ ತಿಳಿವಳಿಕೆ, ಸಾಮಾಜಿಕ ಜಾಗೃತಿಗಳು ಪ್ರೇರೇಕವಾಗಿವೆ. ಅಧೋಜಗತ್ತಿಗೆ ಜ್ಞಾನದ ಮಾತು, ಅನುಭವ, ಉಪಾಯ, ಬದುಕಿನ ಜಾಣ್ಮೆಗಳು ಕಥನ ಲೋಕದಲ್ಲಿ ಸೃಜನಶೀಲವಾಗಿ ಉಳಿಯಲು ತೇಜಸ್ವಿ ಕಥನ ಮಾಡಿದ ಈ ಪ್ರಯತ್ನ ಇತ್ಯಾತ್ಮಕ ಎನಿಸುವ ಒಂದು ಹೊಸ ನಡೆ.

ತೇಜಸ್ವಿಯವರ ಸಮಾಜವಾದಿ ಪ್ರಜ್ಞೆಗೂ ಅಲಕ್ಷಿತ ಲೋಕಗಳನ್ನು ಕಾಣಿಸುವ ಅವರ ಕಥನ ಕ್ರಮಕ್ಕೂ ಒಂದು ಆಂತರಿಕ ಸಂಬಂಧವಿದೆ. ತೇಜಸ್ವಿ ಒಪ್ಪಿದ್ದ ಸಮಾಜವಾದದ ಪರಿಕಲ್ಪನೆಯು ವರ್ಗ ಜಾತಿಗಳ ನೆಲೆಯಲ್ಲಿ ಮನುಷ್ಯರನ್ನು ಮತ್ತು ನಿಸರ್ಗವನ್ನು ತರತಮ ಮಾಡುವ ವಿಧಾನವನ್ನು ಮೂಲಭೂತವಾಗಿ ವಿರೋಧಿಸುತ್ತದೆ. ಸಮಾಜವಾದವು ಜಾತಿ ವರ್ಗ ಲಿಂಗಭೇದಗಳಾಚೆ ಎಲ್ಲರಲ್ಲಿಯೂ ಇರುವ ಮೂಲಭೂತ ಚೈತನ್ಯಗಳನ್ನು ಗುರುತಿಸಿ ಗೌರವಿಸುತ್ತದೆ. ಈ ತಾತ್ವಿಕ ಹಿನ್ನೆಲೆಯು ತೇಜಸ್ವಿಯವರ ಒಟ್ಟು ಕಥನದಲ್ಲಿ ಮುಖ್ಯ ಧಾರೆಯಾಗಿ ಕೆಲಸ ಮಾಡಿದೆ. ಇದರ ಜಾಡು ಹಿಡಿದು ಹೊರಟಾಗ ಹೊಳೆದ ಸತ್ಯಗಳನ್ನು ಸಂಗ್ರಹಿಸಿ ಹೇಳುವ ಕೆಲಸವನ್ನು ಈ ಅಧ್ಯಯನ ಮಾಡಲು ಪ್ರಯತ್ನಿಸಿದೆ.

ತೇಜಸ್ವಿ ಕಥನದಲ್ಲಿ ಬರುವ ಸಾಮಾನ್ಯ ಪಾತ್ರಗಳು ಸೃಷ್ಟಿ, ದೈವತ್ವ, ಮನುಷ್ಯನ ನಡವಳಿಕೆ, ಮತ್ತು ನಿಸರ್ಗದ ನಿಯಮಗಳನ್ನು ಕುರಿತು ತಮ್ಮದೇ ಆದ ಹೊಸ ತತ್ವವಾದವನ್ನು ರೂಪಿಸುತ್ತವೆ. ನಿಸರ್ಗದ ಇತರೆ ಜೀವಚರಗಳೂ ಕೂಡ ಮಾತು ಬಾರದ ತಮ್ಮ ವಿಕ್ಷಿಪ್ತ ಸ್ಥಿತಿಯಲ್ಲೂ ತಮ್ಮ ಪ್ರತಿಕ್ರಿಯೆಯನ್ನು ವಿನೂತನವಾಗಿ ದಾಖಲಿಸುತ್ತವೆ. ಇದು ಸೃಷ್ಟಿಯ ಸಂಕೀರ್ಣವಾದ ಮತ್ತು ಮೇಲು ನೋಟದ ಗ್ರಹಿಕೆಗೆ ನಿಲುಕದ ಸೂಕ್ಷ್ಮವಾದ ವಿಷಯ. ಇದರ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಈ ಸಂಶೋಧನೆ ಮಾಡಿದೆ.

ತೇಜಸ್ವಿ ಕಥನದಲ್ಲಿ ಬರುವ ಸಾಮಾನ್ಯ ಪಾತ್ರಗಳು ಸೃಷ್ಟಿ, ದೈವತ್ವ, ಮನುಷ್ಯನ ನಡವಳಿಕೆ, ಮತ್ತು ನಿಸರ್ಗದ ನಿಯಮಗಳನ್ನು ಕುರಿತು ತಮ್ಮದೇ ಆದ ಹೊಸ ತತ್ವವಾದವನ್ನು ರೂಪಿಸುತ್ತವೆ. ನಿಸರ್ಗದ ಇತರೆ ಜೀವಚರಗಳೂ ಕೂಡ ಮಾತು ಬಾರದ ತಮ್ಮ ವಿಕ್ಷಿಪ್ತ ಸ್ಥಿತಿಯಲ್ಲೂ ತಮ್ಮ ಪ್ರತಿಕ್ರಿಯೆಯನ್ನು ವಿನೂತನವಾಗಿ ದಾಖಲಿಸುತ್ತವೆ. ಇದು ಸೃಷ್ಟಿಯ ಸಂಕೀರ್ಣವಾದ ಮತ್ತು ಮೇಲು ನೋಟದ ಗ್ರಹಿಕೆಗೆ ನಿಲುಕದ ಸೂಕ್ಷ್ಮವಾದ ವಿಷಯ. ಇದರ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಈ ಸಂಶೋಧನೆ ಮಾಡಿದೆ.

ಲೋಹಿಯಾ ತಾತ್ವಿಕತೆ ಹಿನ್ನೆಲೆ ಮತ್ತು ಲೇಖಕರಿಗಿರುವ ಸಹಜ ಕುತೂಹಲವು ಲೋಕದ ಕಣ್ಣಲ್ಲಿ ಸಾಮಾನ್ಯ ಎನಿಸುವ ನೂರಾರು ವ್ಯಕ್ತಿ, ಪ್ರಾಣಿ, ಪಕ್ಷಿ, ಗಿಡ, ಮರ, ಬಳ್ಳಿಗಳು ಮತ್ತು ಕ್ಷುದ್ರ ಎನಿಸುವ ಜೀವ ಜಂತುಗಳಿಗೆ ಕಥನದ ನೆಲೆ ಕಲ್ಪಿಸುತ್ತದೆ. ಲೇಖಕರ ಸೃಷ್ಟಿಕ್ರಿಯೆಯ ಹಿಂದೆ ಅವರು ನಂಬಿದ ರಾಜಕೀಯ, ಸಾಮಾಜಿಕ, ಹಾಗೂ ದಾರ್ಶನಿಕವಾದ ಸಿದ್ಧಾಂತಗಳು ಜೀವಧಾತುವಿನ ಹಾಗೆ ಕೆಲಸ ಮಾಡುವುದೂ ಕೂಡ ಅಲಕ್ಷಿತ ಪ್ರತಿಭೆಗಳ ಹುಡುಕಾಟಕ್ಕೆ ಪೂರಕವೆನಿಸುತ್ತವೆ. ಹೀಗಾಗಿ ತೇಜಸ್ವಿ ಕಥನದಲ್ಲಿ ಬರುವ ಸಾಮಾನ್ಯ ಪಾತ್ರಗಳು ಸೃಷ್ಟಿ, ದೈವತ್ವ, ಮನುಷ್ಯನ ನಡವಳಿಕೆ, ಮತ್ತು ನಿಸರ್ಗದ ನಿಯಮಗಳನ್ನು ಕುರಿತು ತಮ್ಮದೇ ಆದ ಹೊಸ ತತ್ವವಾದವನ್ನು ರೂಪಿಸುತ್ತವೆ. ನಿಸರ್ಗದ ಇತರೆ ಜೀವಚರಗಳೂ ಕೂಡ ಮಾತು ಬಾರದ ತಮ್ಮ ವಿಕ್ಷಿಪ್ತ ಸ್ಥಿತಿಯಲ್ಲೂ ತಮ್ಮ ಪ್ರತಿಕ್ರಿಯೆಯನ್ನು ವಿನೂತನವಾಗಿ ದಾಖಲಿಸುತ್ತವೆ. ಇದು ಸೃಷ್ಟಿಯ ಸಂಕೀರ್ಣವಾದ ಮತ್ತು ಮೇಲು ನೋಟದ ಗ್ರಹಿಕೆಗೆ ನಿಲುಕದ ಸೂಕ್ಷ್ಮವಾದ ವಿಷಯ. ಇದರ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಈ ಸಂಶೋಧನೆ ಮಾಡಿದೆ.

 

 

 

 

 

 

ವ್ಯಕ್ತಿಗೆ, ಪ್ರಾಣಿ-ಪಕ್ಷಿಗೆ,ಪ್ರಕೃತಿಯ ಗಿಡ-ಮರ ಕೀಟ ಪ್ರಪಂಚಕ್ಕೆ ಜ್ಞಾನದ ನೂರಾರು ವಿಧಗಳು ತಿಳಿದಿವೆ. ಜೀವಜಗತ್ತು ಒಟ್ಟಾಗಿ ಬದುಕುವಾಗ ತನ್ನ ಉಳಿವಿಗೆ ಸಾಮಾನ್ಯರ ಕಣ್ಣಿಗೆ ಕಾಣದ ಹಲವಾರು ಸಂಬಂಧಗಳನ್ನು ಸ್ಥಾಪಿಸಿಕೊಂಡಿರುತ್ತದೆ. ಹಾಗೆಯೇ ಬಾಳಿ ಬದುಕಲು ನೂರಾರು ಬಗೆಯ ರಕ್ಷಣಾ ತಂತ್ರಗಳನ್ನೂ ಕಲಿತಿರುತ್ತದ. ಉಳಿಯುವ ಮತ್ತು ಬದುಕುವ ಈ ಪ್ರಕ್ರಿಯೆಯ ನಡುವೆ ಜ್ಞಾನವು ಸೃಷ್ಟಿಯಾಗುತ್ತಿರುತ್ತದೆ. ಈ ವಿಶಿಷ್ಟ ಜ್ಞಾನ ಮತ್ತು ಪ್ರತಿಭೆಯಿಲ್ಲದೆ ಆಹಾರ ಹುಡುಕುವ, ಬದುಕು ಕಟ್ಟುವ, ಅಭಿವ್ಯಕ್ತಿಸುವ ಅವಕಾಶಗಳು ಜೀವಜಗತ್ತಿನಲ್ಲಿ ಇರುವುದಿಲ್ಲ. ಈ ಜ್ಞಾನವು ಪಕ್ಷಿ ಪ್ರಾಣಿಗಳಿಗೆ ರಕ್ತಗತವಾಗಿ, ಮನುಷ್ಯನಿಗೆ ಬದುಕಿನ ಅನುಭವಗಳಿಂದ ಜತೆಗೆ ಪ್ರಕೃತಿಯ ಒಡನಾಟದಿಂದ ದಕ್ಕಿರುತ್ತದೆ. ಇಂಥ ತಿಳಿವಳಿಕೆ, ಬದುಕಿನ ಅನುಭವದ ಸಮೃದ್ಧ ಜ್ಞಾನ ನಾಗರಿಕ ಜಗತ್ತಿನ ದೃಷ್ಟಿಯಿಂದ ಅಲಕ್ಷಿತ ಸ್ಥಿತಿಯಲ್ಲಿವೆ.

ತೇಜಸ್ವಿಯವರು ಮುಖ್ಯವಾಗಿ ಸಮಾಜವಾದ, ವಿಕಾಸವಾದ, ಪರಿಸರವಾದ, ವ್ಯಕ್ತಿವಿಶಿಷ್ಟವಾದಗಳಿಂದ ಪ್ರೇರಣೆ ಪಡೆದವರು. ಅವು ಅವರ ಕಥನ ನಿರ್ಮಾಣದಲ್ಲಿ ಭಾಗವಹಿಸುವ ಮತ್ತು ಅಲಕ್ಷಿತ ಲೋಕಗಳನ್ನು ಕಾಣಿಸುವ ಪರಿ ವಿಭಿನ್ನವಾಗಿದೆ. ವಿಕಾಸವಾದವು ನಿಸರ್ಗದ ಜತೆಗಿನ ಹೋರಾಟದಲ್ಲಿ ಬಲಿಷ್ಠರು ಮಾತ್ರ ಉಳಿಯುವ ತತ್ವವನ್ನು ಒಪ್ಪುತ್ತದೆ. ಇದು ಮೂಲತಃ ಅಲಕ್ಷಿತ ಲೋಕವನ್ನು ಕಾಣಲು ಒಂದು ಅಡ್ಡಿಯೂ ಆಗಿದೆ. ಆದರೆ ಮನುಷ್ಯ ಸಮಾಜದ ಒಳಿತಿಗಾಗಿ ಹುಟ್ಟಿದ ಸಮಾಜವಾದವು ಇದಕ್ಕೆ ಪ್ರತಿಯಾಗಿ ದುರ್ಬಲರ ಉಳಿವಿನ ಬಗ್ಗೆ ಹೆಚ್ಚು ಕಾಳಜಿವಹಿಸುತ್ತದೆ. ತೇಜಸ್ವಿ ಕಥನದ ವಿಶಿಷ್ಟತೆ ಇರುವುದು ಹೀಗೆ ಪರಸ್ಪರ ವಿರುದ್ಧವೆನಿಸುವ ಎರಡು ತತ್ವವಾದಗಳನ್ನು ತಮ್ಮ ಆಶಯಕ್ಕೆ ಅನುಗುಣವಾಗಿ ಜಾಣ್ಮೆಯಿಂದ ಒಗ್ಗಿಸಿಕೊಳ್ಳುವ ಜಾಣ್ಮೆಯಲ್ಲಿ. ಪರಿಸರವಾದದಲ್ಲಿ ಕಥನ ತೆಗೆದುಕೊಂಡ ಮುಖ್ಯ ಎಳೆಗಳು ಯಾವುವೂ ಕೂಡ ಬಿಡಿಯಾದ ಅಸ್ತಿತ್ವದಲ್ಲಿರುವುದಿಲ್ಲ. ಪ್ರತಿ ಬಿಡಿಯು ಇಡಿಯ ರಚನೆಯ ಒಂದು ಭಾಗವೇ ಆಗಿರುತ್ತದೆ.

ವಿಕಾಸವಾದವು ನಿಸರ್ಗದ ಜತೆಗಿನ ಹೋರಾಟದಲ್ಲಿ ಬಲಿಷ್ಠರು ಮಾತ್ರ ಉಳಿಯುವ ತತ್ವವನ್ನು ಒಪ್ಪುತ್ತದೆ. ಇದು ಮೂಲತಃ ಅಲಕ್ಷಿತ ಲೋಕವನ್ನು ಕಾಣಲು ಒಂದು ಅಡ್ಡಿಯೂ ಆಗಿದೆ. ಆದರೆ ಮನುಷ್ಯ ಸಮಾಜದ ಒಳಿತಿಗಾಗಿ ಹುಟ್ಟಿದ ಸಮಾಜವಾದವು ಇದಕ್ಕೆ ಪ್ರತಿಯಾಗಿ ದುರ್ಬಲರ ಉಳಿವಿನ ಬಗ್ಗೆ ಹೆಚ್ಚು ಕಾಳಜಿವಹಿಸುತ್ತದೆ.

ಯಾವುದೂ ಸ್ಥಗಿತವಾಗಿರುವುದಿಲ್ಲ. ಎಲ್ಲವೂ ನಿರಂತರ ಚಲನೆಗೆ ಒಳಪಟ್ಟಿರುತ್ತದೆ. ಈ ಚಲನಶೀಲ ಪ್ರಕ್ರಿಯೆಯಲ್ಲಿ ಬದಲಾವಣೆ ಅನಿವಾರ್ಯವಾದ ಸಂಗತಿ. ನಿಸರ್ಗಕ್ಕೆ ಸಂಬಂಧಿಸಿದ ಈ ತಾತ್ವಿಕ ಎಳೆಗಳನ್ನು ಸ್ವಹಿತಾಸಕ್ತಿಗಳಿಂದ ಬೇಗನೆ ಜಡಗೊಳ್ಳುವ ಮನುಷ್ಯ ಸಮಾಜವನ್ನು ನೋಡಲು ಕಥನ ಬಳಸಿಕೊಳ್ಳುತ್ತದೆ. ಈ ಕ್ರಮದಲ್ಲಿ ತಾತ್ವಿಕ ಎಳೆಗಳನ್ನು ಪ್ರಯೋಗಿಸಿ ಮನುಷ್ಯ ಸಮಾಜದಲ್ಲಿರುವ ಸ್ಥಗಿತತೆಯನ್ನು ನಿರಾಕರಿಸುತ್ತದೆ. ಅದನ್ನು ಚಲನಶೀಲ ಜೀವಂತಗೊಳಿಸುವ ಸಂಗತಿಗಳನ್ನು ಪ್ರೀತಿಯಿಂದ ಚಿತ್ರಿಸುತ್ತದೆ. ಹೀಗೆ ಚಲನಶೀಲನಗೊಳಿಸುವ ಶಕ್ತಿಗಳು ಅನೇಕ ಸಮಾಜದ ನಿರ್ಲಕ್ಷಿತ ವಲಯಕ್ಕೆ ಸೇರಿರುತ್ತಾರೆ.

ಜನರ ಬದುಕಿನ ಜೊತೆ ನೂರಾರು ವರ್ಷಗಳಿಂದ ಕೊಡುಕೊಳೆ ಮಾಡಿಕೊಂಡು ಬದುಕುತ್ತಿರುವ ಪ್ರಾಣಿ, ಪಕ್ಷಿ, ಕೀಟ, ಗಿಡ ಮರ ಬಳ್ಳಿಗಳೆಂಬ ಲೋಕವೂ ಇದೆ. ಮನುಷ್ಯ ಲೋಕಕ್ಕೆ ಇರುವಂತೆಯೇ ಈ ಕಾಡಿನ ಜೀವ ಜಾಲಕ್ಕೂ ಬದುಕುವ ಜೀವನ ಕ್ರಮವಿದೆ. ಈ ಜೀವನಕ್ಕೂ ಒಂದು ತತ್ವವಿದೆ. ಈ ಲೋಕದ ನಡವಳಿಕೆ, ಗುಣ, ಸ್ವಭಾವ, ತಿಳಿವಳಿಕೆಗಳಲ್ಲಿ ವೈವಿಧ್ಯ ಇದೆ. ಬದುಕುವ ರೀತಿಯನ್ನು ಗಮನಿಸಿದಾಗ ವೈವಿಧ್ಯಮಯ ಪ್ರತಿಭಾ ಸ್ವರೂಪದ ಮಾದರಿಗಳಿವೆ. ಮೇಲಾಗಿ, ಇದೆಲ್ಲವೂ ಸುಪ್ತ ರೂಪದಲ್ಲಿವೆ. ಮನುಷ್ಯ ಮತ್ತು ಪ್ರಕೃತಿ ಎಂಬ ಈ ಎರಡೂ ಜೀವಜಗತ್ತ್ತುಗಳಲ್ಲಿ ಏಕಕಾಲದಲ್ಲಿ ಬದುಕಿ ಆ ಅನುಭವಲೋಕವನ್ನು ಸಮನಾಗಿ ಜೀರ್ಣಿಸಿಕೊಂಡ ಶಕ್ತಿ ತೇಜಸ್ವಿ ಕಥನಕ್ಕಿದೆ. ಹೀಗಾಗಿ, ಈ ಎರಡೂ ಜೀವಜಗತ್ತುಗಳನ್ನು ತೇಜಸ್ವಿ ಕಥನ ತನ್ನಲ್ಲಿ ಸುಲಭವಾಗಿ ಅನುಸಂಧಾನ ಮಾಡಿಕೊಳ್ಳಬಲ್ಲದು. ಇದರೊಟ್ಟಿಗೆ, ಈ ಎರಡೂ ಜೀವ ಲೋಕದ ಅನನ್ಯತೆ, ಸಂಘರ್ಷ, ಸಹಬಾಳ್ವೆ, ಪ್ರತಿಭೆಗಳನ್ನು ಗುರುತಿಸಬಲ್ಲದು. ಎರಡೂ ಲೋಕಗಳ ಅಲಕ್ಷಿತ ಜಗತ್ತಿನ ಪ್ರತಿಭೆಗಳನ್ನು ಅನಾವರಣಗೊಳಿಸಲು ಈ ಹದವಾದ ಅನುಭವ ಗ್ರಹಿಕೆಯ ಹಿನ್ನೆಲೆ ಕಥನಕ್ಕೆ ಹೆಚ್ಚು ಸಹಾಯಕವಾಗಿದೆ.

ಪ್ರಕೃತಿಯನ್ನು ಸರಿಪಡಿಸುವ, ಮಾರ್ಪಡಿಸುವ, ನಿಯಂ ತ್ರಿಸುವ ಶಕ್ತಿ ಮನುಷ್ಯನಿಗಿಲ್ಲ. ತಾನು ಇದನ್ನೆಲ್ಲಾ ಮಾಡುತ್ತೇನೆಂದು ಅಹoಕಾರದಿಂದ ಮುನ್ನುಗ್ಗಿದ ಕಡೆಗಳಲ್ಲಿ ಆತ ಸೋತು ಹತಾಶನಾಗಿ ವಿವೇಕ ಪಡೆಯುವ ನಿದರ್ಶನಗಳು ಕಥನದಲ್ಲಿವೆ.

ತೇಜಸ್ವಿಯವರ ಕಥನಗಳಲ್ಲಿನ ವಸ್ತು, ವಿಷಯಗಳು ಹೊಸ ಬಗೆಯ ನಿರೂಪಣೆ ಎಲ್ಲವೂ ಸಂಚಲನಕ್ಕೆ ಕಾರಣವಾದ ಸಂಗತಿಗಳು. ಕಾಡು ಮತ್ತದರ ಅಗಮ್ಯ ಪರಿಸರದ ವಿವರಗಳು ನೂತನ ಓದನ್ನು ಕಲ್ಪಿಸಿದವು. ಮನುಷ್ಯಲೋಕ ಪ್ರಕೃತಿಯ ಪ್ರಾಣಿ ಪಕ್ಷಿಗಳ ಜೊತೆಗಿನ ಸಹಬಾಳ್ವೆಯಾಗಿ ಗುರುತಿಸಿಕೊಂಡ ರೀತಿ ಹೊಸದು ಎನ್ನಿಸಿತ್ತು. ಕಾನನದ ಬದುಕನ್ನು ಅಷ್ಟೊಂದು ಸಮೀಪದಿಂದ; ಕೌತುಕದ ಕಂಗಳಿಂದ ನೋಡಿರದ ಕನ್ನಡದ ಓದುಗರಿಗೆ ತೇಜಸ್ವಿ ಕಥನ ಮಹತ್ವವಾಗಿ ಕಾಣತೊಡಗಿತು. ಇದಕ್ಕೆ ಕಾರಣ ನಾಗರಿಕ ಜಗತ್ತಿನ ಅರಿವಿನ ಮಿತಿ, ಹಾಗೂ ಕಾಡಿನ ಒಡನಾಟದಿಂದ ದೂರವಾದ ಕೀಳರಿಮೆಯ ಭಾವನೆ. ತೇಜಸ್ವಿ ಕಥನಕ್ಕಿಂತ ಮೊದಲು ಕಾರಂತರು ಮತ್ತು ಕುವೆಂಪು ಕೂಡ ಕಾಡನ್ನೂ ಮತ್ತದರೊಳಗಿನ ಜೀವನವನ್ನೂ ಕಟ್ಟಿಕೊಟ್ಟಿದ್ದರು. ಆದರೆ ಈ ಮೂವರ ಪ್ರಕೃತಿ ಗ್ರಹಿಕೆ ಮತ್ತು ಮಾನವ ಬದುಕನ್ನು ಅದರೊಂದಿಗೆ ಹೊಂದಿಸಿ ನೋಡುವ ತಿಳಿವಳಿಕೆ, ಹುಡುಕುವ ನೋಟದ ನೆಲೆಗಳು ಬದಲಿಯಾಗಿದ್ದನ್ನು ಗಮನಿಸಬಹುದು. ಸಾಹಿತ್ಯದಲ್ಲಿ ಪರಿಸರ ಉಳಿಸುವ ಪ್ರಜ್ಞೆ ರೂಪುಗೊಂಡಿದ್ದು, ನಿಸರ್ಗವನ್ನೂ ಅದರೊಳಗಿನ ಅಗೋಚರ ಬದುಕಿನ ಜೀವಸಂಕುಲವನ್ನು ವಿಸ್ಮಯವಾಗಿ ಕಂಡು ಅವುಗಳ ಶಕ್ತಿಯನ್ನು ಅಲಕ್ಷಿತ ಪ್ರತಿಭೆಯ ನೆಲೆಯಲ್ಲಿ ಗ್ರಹಿಸುವ ವೇಳೆಗೆ ನಮ್ಮನ್ನು ಪೊರೆಯುವ ಪ್ರಕೃತಿಯೂ ಅಲಕ್ಷಿತಗೊಂಡು ಮತ್ತೆ ನಾವೇ ಪೊರೆದು ಕಾಪಾಡಬೇಕಾದ ಸ್ಥಿತಿಗೆ ಬರುವ ದುರಂತ ಕಥನಗಳಲ್ಲಿದೆ.

ತೇಜಸ್ವಿ ಕಥನಕ್ಕಿಂತ ಮೊದಲು ಕಾರಂತರು ಮತ್ತು ಕುವೆಂಪು ಕೂಡ ಕಾಡನ್ನೂ ಮತ್ತದರೊಳಗಿನ ಜೀವನವನ್ನೂ ಕಟ್ಟಿಕೊಟ್ಟಿದ್ದರು. ಆದರೆ ಈ ಮೂವರ ಪ್ರಕೃತಿ ಗ್ರಹಿಕೆ ಮತ್ತು ಮಾನವ ಬದುಕನ್ನು ಅದರೊಂದಿಗೆ ಹೊಂದಿಸಿ ನೋಡುವ ತಿಳಿವಳಿಕೆ, ಹುಡುಕುವ ನೋಟದ ನೆಲೆಗಳು ಬದಲಿಯಾಗಿದ್ದನ್ನು ಗಮನಿಸಬಹುದು.

ತೇಜಸ್ವಿ ಕಥನದಲ್ಲಿ ಲೇಖಕ ಒಪ್ಪಿದ ತಾತ್ವಿಕವಾದಗಳು, ನಂಬಿಕೆಗಳು, ಮನೋಸ್ಥಿತಿಗಳು ಒಂದರೊಳಗೊಂದು ಮಿಳಿತಗೊಂಡು ಅಭಿವ್ಯಕ್ತವಾಗಿವೆ. ಪಾತ್ರಗಳನ್ನು ಒಂದು ವಾದ ಇಲ್ಲವೇ ಏಕ ತಿಳಿವಳಿಕೆಯ ಮೂಲಕ ಅಧ್ಯಯನ ನಡೆಸಲು ಬರುವುದಿಲ್ಲ. ವಾದ, ನಂಬಿಕೆ, ಮನೋಸ್ಥಿತಿ, ಗ್ರಹಿಕೆಗಳು ಸಮಷ್ಠಿಗೊಂಡು ಕರಳುಬಳ್ಳಿಯ ಸಂಬಂಧದ ಮಾದರಿಯಲ್ಲಿ ಹೆಣೆದುಕೊಂಡಿವೆ. ಅಲಕ್ಷಿತ ಪಾತ್ರವೊಂದು ಮೊದಲಿಗೆ ವಿಕಾಸವಾದದ ಜೊತೆಗೆ ಗುರುತಿಸಿಕೊಂಡು, ನಂತರ ಪರಿಸರ ಪ್ರಜ್ಞೆ ಪ್ರಕಟಿಸುತ್ತಾ, ಕೊನೆಗೆ ತತ್ವಶಾಸ್ತ್ರದೊಳಗೆ ನುಸುಳಿ ವ್ಯಕ್ತಿ ವಿಶಿಷ್ಟವಾದ ಪ್ರಕಟಿಸುತ್ತದೆ. ಇದು ಅಸಹಜ ಪ್ರಕ್ರಿಯೆಯಲ್ಲ. ನಿರಂತರ ಚಿಂತನೆ, ಬದುಕಿನ ದೃಷ್ಟಿಕೋನಗಳು ಬದಲಾಗುವ ಇತ್ಯಾತ್ಮಕ ನಡೆ. ಅಲಕ್ಷಿತ ಪಾತ್ರಗಳನ್ನು ಪ್ರತ್ಯೇಕಿಸಿ ನೋಡುವ ಬದಲು ಎಲ್ಲಾ ಪ್ರಜ್ಞೆ, ವಾದ, ನಂಬಿಕೆಗಳನ್ನು ಒಪ್ಪಿತ ಸಮ್ಮಿಳಿತ ಸ್ಥಿತಿಯಲ್ಲಿ ನೋಡಬೇಕೆಂಬ ಆ ಮೂಲಕ ಸತ್ಯದ ದರ್ಶನ ಸಾಕ್ಷಾತ್‍ಕರಿಸುವ ಮಾದರಿಯನ್ನು ಕಥನ ರೂಪಿಸಿದೆ.

ಪ್ರಕೃತಿಯನ್ನು ಸರಿಪಡಿಸುವ, ಮಾರ್ಪಡಿಸುವ, ನಿಯಂತ್ರಿಸುವ ಶಕ್ತಿ ಮನುಷ್ಯನಿಗಿಲ್ಲ. ತಾನು ಇದನ್ನೆಲ್ಲಾ ಮಾಡುತ್ತೇನೆಂದು ಅಹಕಾರದಿಂದ ಮುನ್ನುಗ್ಗಿದ ಕಡೆಗಳಲ್ಲಿ ಆತ ಸೋತು ಹತಾಶನಾಗಿ ವಿವೇಕ ಪಡೆಯುವ ನಿದರ್ಶನಗಳು ಕಥನದಲ್ಲಿವೆ. ಪ್ರಕೃತಿಯ ಲಯವನ್ನರಿತು ನಡೆದರೆ ಎಲ್ಲರಿಗೂ ಕ್ಷೇಮದ ಬದುಕು ಲಭ್ಯವಿದೆ. ಈ ಲೋಕವನ್ನು ಅದರ ಪಾಡಿಗೆ ಸಹಜವಾಗಿ ಇರುವಂತೆ ಬಿಟ್ಟು ತಾನು ಬದುಕುವ ಸರಿದಾರಿ ಕಂಡುಕೊಳ್ಳಬೇಕು ಎಂಬ ನಿಲುವು ತೇಜಸ್ವಿ ಕಥನಕ್ಕೆ ಇದ್ದಂತೆ ಕಾಣುತ್ತದೆ. ಈ ಸರಳ ಮಾತುಗಳನ್ನು ಪುಷ್ಟೀಕರಿಸಲು ಇಕಾಲಜಿಯ ತತ್ವಗಳನ್ನು ಕಥನ ಬಳಸಿಕೊಂಡಿದೆ. ಇದನ್ನು ಯಥಾಸ್ಥಿತಿವಾದ ಎಂದು ಪರಿಭಾವಿಸದೆ ನಿಸÀರ್ಗದ ವಿವೇಕ ಅರಿತು ನಡೆಯುವ ಸಹಬಾಳ್ವೆ ಎಂದು ಭಾವಿಸಬಹುದಾಗಿದೆ. ಬುದ್ಧಿ, ಜ್ಞಾನ ಇಲ್ಲವೆಂದು ನಾವು ಭಾವಿಸಿರುವ ಮೂಕ ಜಗತ್ತಿಗೂ ಪ್ರಕೃತಿ ಬದುಕುವ ಪಾಠವನ್ನು ಹೇಳಿಕೊಟ್ಟಿದೆ. ಜೀವ ಉಳಿಸಿಕೊಳ್ಳುವ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳ ಸಹಾಯವಿಲ್ಲದೆಯೂ ಪಾರಾಗುವ ಅನೇಕ ತಂತ್ರಗಳನ್ನು ಕಲಿಸಿದೆ. ಪ್ರಕೃತಿಯ ಎದುರು ಹೋರಾಡಿ ಜಾಣ್ಮೆಯಿಂದ ಬದುಕುವ ಸಾಹಸವನ್ನು ಕರುಣಿಸಿದೆ. ತಮ್ಮದೇ ಬುದ್ಧಿವಂತಿಕೆಯಿಂದ ಬದುಕುವ ಈ ಲೋಕದ ಜ್ಞಾನವನ್ನು ಅದರ ಅನನ್ಯತೆಯನ್ನು ಮನುಷ್ಯರಾದ ನಾವು ಅಲ್ಲಗಳೆಯುತ್ತಿದ್ದೇವೆ. ನಿರ್ಲಕ್ಷ್ಯದ ಭಾವದಿಂದ ಕಾಣುತ್ತಿದ್ದೇವೆ. ಇಂತಹ ಅಲಕ್ಷಿತ ಜಗತ್ತಿನ ಸೂಕ್ಷ್ಮ ಬದುಕನ್ನು ಉಪೇಕ್ಷಿಸದೆ ಬದುಕಿನ ಕ್ರಮವೆಂದು, ಅರಿವಿನ ಮೂಲವೆಂದು ಗ್ರಹಿಸಲು ಕಥನ ಒತ್ತಾಯಿಸುತ್ತದೆ.

*ಲೇಖಕರು ಕುವೆಂಪು ವಿವಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಗಳಿಸಿ ಅದೇ ವಿವಿಯಿಂದ ಪಿ.ಎಚ್.ಡಿ. ಪಡೆದಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರು. ‘ಪೂರ್ಣಚಂದ್ರ ತೇಜಸ್ವಿ’, ‘ಕ್ಲಾಸ್ ಟೀಚರ್’ ಪ್ರಕಟಿತ ಕೃತಿಗಳು. ಶಿವಮೊಗ್ಗ ನಿವಾಸಿ.

Leave a Reply

Your email address will not be published.