ದಲಿತ ಚಳವಳಿಯ ಏಳು-ಬೀಳು

ಪುರೋಹಿತಶಾಹಿಗೆ, ಅಧಿಕಾರಶಾಹಿಗೆ ಮತ್ತು ಜಾತಿವಾದಿಗಳಿಗೆ ಸಿಂಹಸ್ವಪ್ನವಾಗಿದ್ದ ಚಳವಳಿ ದುರ್ಬಲಗೊಂಡಿದೆ. ಶೋಷಣೆ ಮಾಡುವವರಿಗೆ ಅನುಕೂಲವಾಗುವಂತೆ ಛಿದ್ರಗೊಂಡ ಚಳವಳಿಯ ನಾಯಕರು ಸರ್ಕಾರಿ ಕಛೇರಿಗಳನ್ನು ಸುತ್ತುತ್ತ, ಅಧಿಕಾರಿಗಳಲ್ಲಿ ಕೈಚಾಚಿ ನಿಂತಿದ್ದಾರೆ.

ಆರನೆಯ ಶತಮಾನದಲ್ಲಿ ಸಂಘ, ಸಂಘಟನೆ, ಹೋರಾಟ ಪರಿಕಲ್ಪನೆಯನ್ನು ಹುಟ್ಟುಹಾಕಿದವರು; ಮೊಟ್ಟಮೊದಲಿಗೆ ‘ಬಹುಜನ’ ಪದ ಪ್ರಯೋಗಿಸಿದವರು ಬುದ್ಧ. ಬಹುಜನ ಹಿತಾಯ ಬಹುಜನ ಸುಖಾಯ ಲೋಕಾನು ಕಂಪಾಯ ಎಂಬುದು ಬಿಕ್ಕುಗಳಿಗೆ ಹೇಳಿದ ಸಂದೇಶವಾಗಿದೆ.

ನಂತರ 12ನೇ ಶತಮಾನದಲ್ಲಿ ಶರಣ ಚಳವಳಿ ಹುಟ್ಟುಹಾಕಿದವರು ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮೊದಲಾದ ಶರಣರು. ಎಲ್ಲ ವರ್ಗದವರನ್ನು ಅನುಭವ ಮಂಟಪದಡಿಯಲ್ಲಿ ತಂದು ವೇದಿಕೆ ಕಲ್ಪಿಸಿ, ಸಂವಾದ, ವಚನಗಳ ರಚನೆ ದಾಸೋಹ, ಇಷ್ಟಲಿಂಗ ಪೂಜೆ ಏರ್ಪಡಿಸಿದರು. ಕಾಯಕಕ್ಕೆ ಒತ್ತುಕೊಟ್ಟು ತಮ್ಮ ಜಾತಿ ಹೇಳಿಕೊಳ್ಳಲು ಅಸಹ್ಯಪಡುವ ಜನರಿಗೆ ಗೌರವ ದೊರಕಿಸಿಕೊಟ್ಟರು. ಅವರ ಜಾತಿಗೆ ವೃತ್ತಿಗೌರವ ನೀಡುವ ಮೂಲಕ ಈ ಸಮುದಾಯಗಳಲ್ಲಿ ಇದ್ದ ಕೀಳರಿಮೆಯನ್ನು ತೊಡೆದು ಹಾಕುವ ಉದ್ದೇಶ ಅವರದಾಗಿತ್ತು.

ಬಸವಣ್ಣನವರಿಂದ ಅಪೂರ್ಣವಾಗಿದ್ದ ಸಾಮಾಜಿಕ ಪರಿವರ್ತನಾ ಚಳವಳಿಯನ್ನು ಸಮರ್ಥವಾಗಿ ಮುನ್ನೆಡಿಸಿದವರು 20ನೆಯ ಶತಮಾನದ ಡಾ.ಭೀಮರಾವ್ ರಾಮ್‍ಜಿ ಅಂಬೇಡ್ಕರ್. ಬುದ್ಧನ ಕಾಲದಲ್ಲಿ ಆಳರಸರೇ ಪರಿವರ್ತನಾ ಚಳವಳಿಗೆ ತಮ್ಮನ್ನು ಸಮರ್ಪಿಸಿಕೊಂಡಂತೆ ಡಾ.ಅಂಬೇಡ್ಕರ್ ಚಳವಳಿಯ ಉದ್ದೇಶಗಳಿಗೆ ಕಾನೂನಿನ ರೂಪ ಕೊಟ್ಟರು. ಸಂವಿಧಾನಾತ್ಮಕವಾಗಿ ಅಸ್ಪ್ರಶ್ಯತಾ ಆಚರಣೆ ಅಪರಾಧವೆಂದೆನಿಸಿದರು. ಸಾಮಾಜಿಕ ಆರ್ಥಿಕ ಅಸಮಾನತೆಯನ್ನು ತೊಡೆದು ಹಾಕುವುದು ಸಂವಿಧಾನದ ಒಟ್ಟಾರೆ ಉದ್ದೇಶವಾಗಿದೆ.

ಕರ್ನಾಟಕದಲ್ಲಿ ನಡೆದ ಬೂಸಾ ಸಾಹಿತ್ಯ ಚಳವಳಿ, ಹಿನ್ನೆಲೆಯಲ್ಲಿ ದಲಿತರ ಮೇಲಿನ ಹಲ್ಲೆ, ದೌರ್ಜನ್ಯ, ಕೊಲೆಗಳು ಹೆಚ್ಚಾದಾಗ ಕರ್ನಾಟಕದಲ್ಲಿ ದಲಿತ ಚಳವಳಿ ರೂಪುಗೊಂಡಿತು. 1972ರಲ್ಲಿ ಬೆಂಗಳೂರಿನಿಂದ ಡಿ.ಎಂ.ತಿಮ್ಮರಾಯಪ್ಪ ಅವರು ದಲಿತ ಕ್ರಿಯಾ ಸಮಿತಿಯನ್ನು ಪ್ರಾರಂಭಿಸಿದರು. ಅವರೊಂದಿಗೆ ನೌಕರರು, ವಿದ್ಯಾರ್ಥಿ ಮುಖಂಡರು ಸೇರಿಕೊಂಡರು.

ಇಡೀ ದಲಿತ ಚಳವಳಿ ಮೈಕೊಡವಿಕೊಂಡು ಎದ್ದಿತು. ರಾಜ್ಯಾದ್ಯಂತ ಹೋರಾಟಗಳನ್ನು ರೂಪಿಸುವ, ಸಂಘಟನೆ ಇಲ್ಲದೆಡೆ ಅದನ್ನು ಕಟ್ಟುವ ವ್ಯಾಪಕ ಪ್ರಯತ್ನಗಳು ಆ ಕಾಲದಲ್ಲಿ ನಡೆದವು. ಪ್ರೊ.ಬಿ.ಕೃಷ್ಣಪ್ಪನವರ ಮಾರ್ಗದರ್ಶನದಲ್ಲಿ ಹೋರಾಟವನ್ನು ರೂಪಿಸಿಲಾಯಿತು.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಣೆಸಿಕೋಟೆಯ ಭೂಮಾಲೀಕ ಕೃಷ್ಣೇಗೌಡನಿಂದ ಅತ್ಯಾಚಾರಕ್ಕೊಳಗಾದ ಅನಸೂಯಮ್ಮ, ಬಡಕುಟುಂಬದ ಕುಂಬಾರ ಶೇಷಗಿರಿಯಪ್ಪನ ಧಾರುಣ ಕೊಲೆಯ ಪ್ರಸಂಗದಿಂದಾಗಿ ಇಡೀ ದಲಿತ ಚಳವಳಿ ಮೈಕೊಡವಿಕೊಂಡು ಎದ್ದಿತು. ರಾಜ್ಯಾದ್ಯಂತ ಹೋರಾಟಗಳನ್ನು ರೂಪಿಸುವ, ಸಂಘಟನೆ ಇಲ್ಲದೆಡೆ ಅದನ್ನು ಕಟ್ಟುವ ವ್ಯಾಪಕ ಪ್ರಯತ್ನಗಳು ಆ ಕಾಲದಲ್ಲಿ ನಡೆದವು. ಪ್ರೊ.ಬಿ.ಕೃಷ್ಣಪ್ಪನವರ ಮಾರ್ಗದರ್ಶನದಲ್ಲಿ ಹೋರಾಟವನ್ನು ರೂಪಿಸಿಲಾಯಿತು.

ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ದಲಿತ ಚಳವಳಿ ಸಾಕಷ್ಟು ಪ್ರಬಲವಾಗಿತ್ತು. 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದ ಮೇಲೆ ಚಳವಳಿಗೆ ನಿಧಾನವಾಗಿ ತೀವ್ರ ಹಿನ್ನೆಡೆಯಾಯಿತು. ಸರ್ಕಾರದ ಸಮಿತಿಗಳಲ್ಲಿ ದಲಿತ ನಾಯಕರು ಕಾಣಿಸಿಕೊಂಡು, ಸರ್ಕಾರದ ಭಾಗವಾದರು. 1984ರಲ್ಲಿ ದೇವನೂರ ಮಹಾದೇವ ದಲಿತ ಚಳವಳಿಯ ರಾಜ್ಯ ಸಂಚಾಲಕರಾದ ಮೇಲೆ ದಲಿತ ಚಳವಳಿ ರಾಜಕೀಯ ಸಂಘಟನೆಯಾಯಿತು.

ಇವರು ಅಬಕಾರಿ ಸಚಿವರಾಗಿದ್ದ ರಮೇಶ್ ಜಿಗಜಿಣಗಿ ಅವರನ್ನು ಬಳಸಿಕೊಂಡು, ಜಾಹೀರಾತು ಸಂಗ್ರಹಿಸಿ ಪಂಚಮ ವಿಶೇಷಾಂಕ ತಂದರು. ಅಬಕಾರಿ ಗುತ್ತಿಗೆದಾರರಿಂದ ಜಾಹೀರಾತುಗಳನ್ನು ಪಡೆಯುವ ಮೂಲಕ ಸಂಘಟನೆಗೆ ಅಗೌರವ ತಂದರು.

ದೇವನೂರ ಮಹದೇವ ಸಂತನಂತೆ ವರ್ತಿಸಿದರೂ ಸಂತರಲ್ಲ, ದಲಿತ ಚಳವಳಿಯನ್ನು ಬಳಸಿಕೊಂಡವರು. ಇವರೊಂದಿಗೆ ಪಂಚಮ ಪತ್ರಿಕೆಯ ಸಂಪಾದಕ ಎಚ್.ಗೋವಿಂದಯ್ಯ ದಲಿತ ಸಂಘಟನೆಯ ಪದಾಧಿಕಾರಿಗಳಾಗಿದ್ದರು. ಇವರು ಅಬಕಾರಿ ಸಚಿವರಾಗಿದ್ದ ರಮೇಶ್ ಜಿಗಜಿಣಗಿ ಅವರನ್ನು ಬಳಸಿಕೊಂಡು, ಜಾಹೀರಾತು ಸಂಗ್ರಹಿಸಿ ಪಂಚಮ ವಿಶೇಷಾಂಕ ತಂದರು. ಅಬಕಾರಿ ಗುತ್ತಿಗೆದಾರರಿಂದ ಜಾಹೀರಾತುಗಳನ್ನು ಪಡೆಯುವ ಮೂಲಕ ಸಂಘಟನೆಗೆ ಅಗೌರವ ತಂದರು.

1985ರಲ್ಲಿ ಮಹಾದೇವರ ತಮ್ಮ ದೇವನೂರು ಶಿವಮಲ್ಲು ಅವರನ್ನು ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಮುಂದೆ ಕವಿ ಸಿದ್ಧಲಿಂಗಯ್ಯ ಎಂ.ಎಲ್.ಸಿ. ಆದರು. ಹಾಸನದ ಚಂದ್ರಪ್ರಸಾದ್ ತ್ಯಾಗಿ ಅವರು ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಗೆ ಅಧ್ಯಕ್ಷರಾದರು.

ನಂತರ ದಲಿತ ಚಳವಳಿ ಒಡೆದು ಹಲವಾರು ಗುಂಪುಗಳಾಗಿ ಉಳಿದಿದೆ.

ಕರ್ನಾಟಕದಲ್ಲಿ ಯಾವ ಪತ್ರಿಕೆಗಳೂ ದಲಿತ ಚಳವಳಿ ಕುರಿತು ವಸ್ತುನಿಷ್ಠ ಲೇಖನ ಪ್ರಕಟಿಸಲಿಲ್ಲ; ಹೊಗಳಿ ಬರೆದವರೇ ಹೆಚ್ಚು. ಆದರೆ ಜಾಣಗೆರೆ ವೆಂಕಟರಾಮಯ್ಯನವರು 1988ರ ಏಪ್ರಿಲ್‍ನಲ್ಲಿ ತಮ್ಮ ‘ಮಾರ್ದನಿ’ ಪತ್ರಿಕೆಯಲ್ಲಿ ‘ದ.ಸಂ.ಸ. ಹಿಡಿದ ದುಷ್ಟಹಾದಿ’ ಎಂಬ ಲೇಖನ ಬರೆದರು. ಅದರಲ್ಲಿ ದಲಿತ ಸಂಘದವರ ಬಣ್ಣ ಬಯಲು ಮಾಡಿದ್ದಾರೆ. ಉಳಿದಂತೆ ಖ್ಯಾತ ಸಾಹಿತಿಗಳಾದ ಯೂ.ಆರ್. ಆನಂತಮೂರ್ತಿ, ಪಿ.ಲಂಕೇಶ್ ಮುಂತಾದವರು ದಲಿತ ನಾಯಕರ ಪರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು; ಅವರ ಲೋಪಗಳ ಬಗ್ಗೆ ಚಕಾರವೆತ್ತಲಿಲ್ಲ, ಬೆಂಬಲವಾಗಿ ನಿಂತವರೇ ಹೆಚ್ಚು.

ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಗಾಂಧಿವಾದ ದಲಿತರ ಏಳ್ಗೆಗೆ ಪೂರಕ ವಾಗಿಲ್ಲ. ದಲಿತ ಚಳವಳಿಯ ಅಂತಿಮ ಉದ್ದೇಶದ ಪುನರ್ ವಿಮರ್ಶೆಯೇ ನಡೆದಿಲ್ಲ. ದಲಿತ ನಾಯಕರು ಸ್ವಾರ್ಥದಲ್ಲಿ ಮುಳುಗಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ. ವರ್ಗಾವಣೆ ದಂಧೆಯಲ್ಲಿ ಕೂಡ ಮುಳುಗಿದ್ದಾರೆ. ಪ್ರಶಸ್ತಿ ಕೊಡಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಸರ್ಕಾರವು ಚಳವಳಿಗಾರರನ್ನು ಭ್ರಷ್ಟತೆಗೆ ತಳ್ಳಿದೆ.

1980 ದಶಕದಲ್ಲಿ ದಲಿತ ಚಳವಳಿಯ ಪರವಾಗಿ ನಿಂತ ಸಾಹಿತಿಗಳು ಅಧಿಕಾರಸ್ಥರ ಮನೆಗಳ ‘ಮುಂದೆ’ ಪ್ರತಿಭಟನೆ ಮಾಡುತ್ತಿದ್ದರು. ಗುಂಡುರಾವ್ ಸೋತ ನಂತರ ಬಂದ ರಾಮಕೃಷ್ಣ ಹೆಗಡೆ ಸರ್ಕಾರದ ಸಮಯದಲ್ಲಿ ದಲಿತ ಸಂಘದ ನಾಯಕರು, ಕಾರ್ಯಕರ್ತರು ಸಚಿವರ, ಶಾಸಕರ ಮನೆಗಳ ‘ಒಳಗೆ’ ಸೇರಿಕೊಂಡರು. ಅದು ಈಗಲೂ ಮುಂದುವರಿದಿದೆ.

Leave a Reply

Your email address will not be published.