ದಲಿತ ವಿಮೋಚನಾ ರಥ ಮತ್ತು ಪಥ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಡೆದು ಎಷ್ಟೇ ಹೋಳಾದರೂ ಅದು ಮಾಡಿದ ಕಾರ್ಯ ಅಸಾಮಾನ್ಯವಾದುದು. ಕರ್ನಾಟಕದಲ್ಲಿ ಈಗ 36 ವಿಶ್ವವಿದ್ಯಾನಿಲಯಗಳಿವೆ. ಈ ವಿಶ್ವವಿದ್ಯಾನಿಲಯಗಳು ಮಾಡಲಾಗದ ಕಾರ್ಯವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಒಂದು ಬಯಲು ವಿಶ್ವವಿದ್ಯಾನಿಲಯದಂತೆ ಕೆಲಸ ಮಾಡಿದೆ. 

ಡಾ.ಅಂಬೇಡ್ಕರ್ ಅವರ ದಲಿತ ವಿಮೋಚನಾ ರಥ ಯಾವುದು? ಎನ್ನುವ ಪ್ರಶ್ನೆ, ಇಂದು ಎಲ್ಲರನ್ನು ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ, ಅಂಬೇಡ್ಕರ್ ರಥ ಒಂದಿಲ್ಲ ಹಲವಾರಿವೆ. ಅದರಲ್ಲಿ ನಿಜ ದಲಿತ ವಿಮೋಚನಾ ರಥ ಯಾವುದೆಂದು ಹುಡುಕಬೇಕಿದೆ. ಈ ಅಂಬೇಡ್ಕರ್ ರಥಕ್ಕೆ ಪರ್ಯಾಯವಾಗಿ ರಾಮರಥ-ಕೃಷ್ಣರಥಗಳು ಇಂದು ಸ್ಪರ್ಧೆಗಿಳಿದಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿದ್ದೆಯಲ್ಲೂ ಕಣ್ಣು ತೆರೆದವನೇ ಗೆಲ್ಲುತ್ತಾನೆ.

80ರ ದಶಕದಲ್ಲಿ ‘ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ ಕನಿಷ್ಠ ಎರಡು ಕೈಗಳಾದರೂ ಬೇಕು’. ಹೀಗಾಗಿ ‘ದಲಿತ ಚಳವಳಿಗೆ ಪ್ರಗತಿಪರರೂ ಬೇಕು’ ಎನ್ನುವ ವಾದ ಪ್ರಧಾನವಾಗಿತ್ತು. ಹೀಗಾಗಿ ಅಂಬೇಡ್ಕರ್ ವಾದದೊಂದಿಗೆ ಮಾರ್ಕ್ಸ್  ವಾದ, ಲೋಹಿಯಾವಾದ, ಗಾಂಧೀವಾದಗಳ ಚಿಂತನೆಯ ಚಲನೆಯ ಮಾರ್ಗದಲ್ಲಿ ಬೆರೆತದ್ದು ಇತಿಹಾಸ. ಈ ಕಾರಣದಿಂದಲೇ ಚಿಂತನೆ ಬೇರೆ ಬೇರೆಯಾಗಿದ್ದಾಗಲೂ ಆಶಯ ಒಂದೇ ಆಗಿತ್ತು. ‘ವಿವಿಧತೆಯಲ್ಲಿ ಏಕತೆ’ ಎಂಬ ಚಿಂತನೆ ರೂಢಿಗತವಾಗಿ ದಲಿತ ಚಳವಳಿಯ ಹೋರಾಟಕ್ಕೆ ತೀವ್ರತೆ ದಕ್ಕಿತು. ಆದರೆ ಈ ವಿವಿಧ ಚಿಂತನಾ ಕ್ರಮಗಳೇ ಮುಂದೆ ತಾತ್ವಿಕ ಭಿನ್ನಾಭಿಪ್ರಾಯಕ್ಕೂ ಮೂಲವಾಯಿತು.

ಬೀದರನ ದಲಿತ ಸಾಹಿತ್ಯ ಸಮೇಳನದ ಸಂದರ್ಭದಲ್ಲಿ ಅಂಬೇಡ್ಕರ್ ರಥದ ನಾಲ್ಕು ಗಾಲಿಗಳಲ್ಲಿ ಮೂರು ಗಾಲಿಗಳನ್ನು ತೆಗೆದು; ಮಾಕ್ರ್ಸವಾದ, ಲೋಹಿಯಾವಾದ, ಗಾಂಧಿವಾದ ಎಂಬ ಮೂರು ಗಾಲಿಗಳನ್ನು ಸೇರಿಸಿ ರಥವನ್ನು ಎಳೆಯಲು ಪ್ರಯತ್ನಿಸಿ ಒಂದಷ್ಟು ಮುಂದೆ ಹೋದರೂ, ಅನಂತರದ ಹಗ್ಗಜಗ್ಗಾಟದ ಒತ್ತಾವತ್ತಿಯ ಎಳೆದಾಟದಲ್ಲಿ ‘ಚಲನೆ ಇಲ್ಲದಾದಾಗ’ ಆಯಾ ಸಿದ್ಧಾಂತವಾದಿಗಳು ತಮ್ಮ ತಮ್ಮ ಗಾಲಿಗಳನ್ನು ಬಿಚ್ಚಿಕೊಂಡು ಹೋದರು ಎಂದಿದ್ದೆ. ಬಿಎಸ್‍ಪಿ ಬಲಗೊಂಡು ‘ಅಂಬೇಡ್ಕರ್ ವಾದವೊಂದೇ ನಮಗೆ ದಿಕ್ಸೂಚಿ, ಅಂಬೇಡ್ಕರ್ ಬಿಟ್ಟರೆ ಪರ್ಯಾಯ ಮಾರ್ಗಗಳಿಲ್ಲ’ ಎಂಬ ವಿಚಾರವನ್ನು ಪ್ರತಿಪಾದಿಸುತ್ತ ‘ದಲಿತರು ಕೊಡುವ ಕೈಯಾಗಬೇಕು ಬೇಡುವ ಕೈಯಾಗಬಾರದು’ ಎಂದು ವಾದಿಸುತ್ತ ‘ರಾಜಕೀಯ ಅಧಿಕಾರವನ್ನು ಹಿಡಿಯುವುದೇ ನಮ್ಮ ಮೂಲ ಗುರಿ’ ಎಂದು ಕಾನ್ಸಿರಾಮ ಅವರ ವಿಚಾರ ಮುಂದು ಮಾಡಿ, ರಾಜಕೀಯದ ವಿಚಾರಕ್ಕೆ ಸಂಬಂಧಿಸಿದ ದ್ವಂದ್ವಗಳನ್ನು ತೆಗೆದುಹಾಕುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದರು. ಅಂಬೇಡ್ಕರ್ ವಿಮೋಚನಾ ರಥ ಅಂಬೇಡ್ಕರ್ ವಾದದೊಂದಿಗೆ ಮತ್ತಷ್ಟು ಹೆಜ್ಜೆ ದೂರ ಚಲಿಸಲು ಕಾರಣವಾ ದರು.

ಸಮರ್ಪಣಾ ಮನೋಭಾವ ತ್ಯಾಗ ಬದ್ಧತೆಗಳು ಸಮೃದ್ಧವಾಗಿದ್ದರಿಂದ ಸಾಮಾಜಿಕ ಹಿತಾಸಕ್ತಿಯ ಕಾರ್ಯಗಳು ಸಾಧ್ಯವಾದವು. ‘ಸಮಾಜಕ್ಕಾಗಿ ಬದುಕಿದವರು ಸತ್ತ ನಂತರವೂ ಬದುಕಿ ಉಳಿಯುತ್ತಾರೆ ತಮಗಾಗಿ ಬದುಕಿದವರು ಬದುಕಿದ್ದಾಗಲೇ ಸಾಯುತ್ತಾರೆ’ ಎನ್ನುವ ಧೋರಣೆ ಅಡಿಪಾಯವಾಗಿತ್ತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಡೆದು ಎಷ್ಟೇ ಹೋಳಾದರೂ ಅದು ಮಾಡಿದ ಕಾರ್ಯ ಅಸಾಮಾನ್ಯವಾದುದು. ಕರ್ನಾಟಕದಲ್ಲಿ ಈಗ 36 ವಿಶ್ವವಿದ್ಯಾನಿಲಯಗಳಿವೆ. ಈ ವಿಶ್ವವಿದ್ಯಾನಿಲಯಗಳು ಮಾಡಲಾಗದ ಕಾರ್ಯವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಒಂದು ಬಯಲು ವಿಶ್ವವಿದ್ಯಾನಿಲಯದಂತೆ ಕೆಲಸ ಮಾಡಿದೆ. ಇಲ್ಲಿ ನೇಮಕವಾದ ಕುಲಪತಿ/ಕುಲಸಚಿವರಿಲ್ಲ. ನಿತ್ಯ ತರಗತಿ-ಬೋಧನೆಗಳಿಲ್ಲ, ಪ್ರಾಧ್ಯಾಪಕರಿಲ್ಲ, ಸಂಬಳವಿಲ್ಲ. ಇಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಕುಲಪತಿ, ಕುಲಸಚಿವ, ಅಧ್ಯಾಪಕರಂತೆ ಕೆಲಸ ಮಾಡಿದ್ದಾರೆ. ಸಮರ್ಪಣಾ ಮನೋಭಾವ ತ್ಯಾಗ ಬದ್ಧತೆಗಳು ಸಮೃದ್ಧವಾಗಿದ್ದರಿಂದ ಸಾಮಾಜಿಕ ಹಿತಾಸಕ್ತಿಯ ಕಾರ್ಯಗಳು ಸಾಧ್ಯವಾದವು. ‘ಸಮಾಜಕ್ಕಾಗಿ ಬದುಕಿದವರು ಸತ್ತ ನಂತರವೂ ಬದುಕಿ ಉಳಿಯುತ್ತಾರೆ ತಮಗಾಗಿ ಬದುಕಿದವರು ಬದುಕಿದ್ದಾಗಲೇ ಸಾಯುತ್ತಾರೆ’ ಎನ್ನುವ ಧೋರಣೆ ಅಡಿಪಾಯವಾಗಿತ್ತು. ಇಂಥ ಮೌಲ್ಯ ದುರ್ಬಲವಾದಾಗ ಮತ್ತು ಕಾಲಕಾಲಕ್ಕೆ ಸಂಘಟನೆಯ ಹೋರಾಟದ ಸಮೀಕರಣ ಬದಲಿಸುತ್ತ ಮರುಹುಟ್ಟು ಪಡೆಯದೆ ಹೋದುದು ಗಮನಾರ್ಹ. ತಟಸ್ಥತೆಯ ಹಲವು ಕಾರಣಗಳಲ್ಲಿ ಇದು ಪ್ರಧಾನವಾಗಿದೆ.

ಸ್ವಸಂಘಟನೆಯ ತಾತ್ವಿಕ ನೆಲೆಗೆ ಕಿವಿಗೊಡದೆ ಅನ್ಯ ಚಿಂತನೆ ಹಾಗೂ ಸಂಘಟನಾ ಶಕ್ತಿಗೆ ಇಂಬಾಗುವುದು ಎಂದರೆ ಸಂಚಯ ಶಕ್ತಿಯನ್ನು ಕ್ಷೀಣಿಸಿದಂತೆ ಆಗುತ್ತದೆ ಎನ್ನುವುದರ ಅರಿವಿರಬೇಕು. ಈ ಅರಿವಿನ ದಲಿತ ಹೋರಾಟವು ಮಂದಿನ ಹೊಸ ನಡೆಗೆ ನಾಂದಿಯಾಗಬಲ್ಲದು. ದಲಿತ ಶಕ್ತಿಯ ‘ಒಳ ರಾಜನೀತಿ’ ಮತ್ತು ದಲಿತೇತರ ಶಕ್ತಿಯ ‘ಹೊರ ರಾಜನೀತಿ’ ಹೇಗಿರಬೇಕೆಂದು ಪರಸ್ಪರ ಗುರುತಿಸಿಕೊಂಡು ಯೋಜನಾ ಬದ್ಧವಾಗಿ ಚಲಿಸಿದ್ದೇ ಆದರೆ ಯಶಸ್ಸು ಕಾಣಲು ಸಾಧ್ಯವಿದೆ. ‘ಒಳ ರಾಜನೀತಿ’ ಹಾಗೂ ‘ಹೊರ ರಾಜನೀತಿ’ ಪರಸ್ಪರ ಒಂದಾಗಿ ಹೋಗದೆ; ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ ಎಂದು ಹೊರಟಿದ್ದೇ ಆದರೆ ಅದು ನೆಲೆ-ನೀತಿ ಇಲ್ಲದ ದಲಿತ ಹೋರಾಟದ ರಾಜನೀತಿ ಆಗುತ್ತದೆ.

ಸಾವು ವ್ಯಕ್ತಿಗಳಿಗೆ, ಇದ್ದೂ ಸತ್ತಂತೆ ಬದುಕುವವರಿಗೆ, ಕರ್ನಾಟಕದಲ್ಲಿ ದಲಿತ ಚಳವಳಿ ಚಟುವಟಿಕೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಅವು ತಮ್ಮದೇ ಆದ ರೀತಿಯಲ್ಲಿ ಬದುಕಿದ್ದರ ಕುರಿತು ಸಾಕ್ಷಿಯನ್ನು ಹೇಳುತ್ತವೆ.

ನಲ್ವತ್ತು ವರ್ಷಗಳ ದಲಿತ ಚಳವಳಿಯ ನಡೆಯಲ್ಲಿ ‘ದಲಿತ ಚಳವಳಿ ಸತ್ತಿದೆ’ ಎಂದವರೂ ಇದ್ದಾರೆ. ನನ್ನ ವಿಚಾರದಲ್ಲಿ ಅದು ಸತ್ತಿಲ್ಲ. ಮಹೋನ್ನತವಾದ ಆಶೋತ್ತರಗಳು ಸುಲಭವಾಗಿ ಸಾಯುವುದೂ ಇಲ್ಲ ಮತ್ತು ಸುಲಭವಾಗಿ ಸಾಧಿಸಲೂ ಬಿಡುವುದೂ ಇಲ್ಲ. ಹಸಿದ ಒಡಲು, ಹಸಿದ ಮನ, ಹಸಿದ ಮೆದುಳುಗಳು ಎಂದೂ ಚಳವಳಿಯನ್ನು ಶವವಾಗಲು ಬಿಡುವುದಿಲ್ಲ. ಸಾವು ವ್ಯಕ್ತಿಗಳಿಗೆ, ಇದ್ದೂ ಸತ್ತಂತೆ ಬದುಕುವವರಿಗೆ, ಕರ್ನಾಟಕದಲ್ಲಿ ದಲಿತ ಚಳವಳಿ ಚಟುವಟಿಕೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಅವು ತಮ್ಮದೇ ಆದ ರೀತಿಯಲ್ಲಿ ಬದುಕಿದ್ದರ ಕುರಿತು ಸಾಕ್ಷಿಯನ್ನು ಹೇಳುತ್ತವೆ. ಮಳೆ ಬಿದ್ದ ನೀರು ಅಲ್ಲಲ್ಲಿ ಹರಿದು ಹೋಗದೆ ಪ್ರಧಾನ ಶಕ್ತಿಯಾಗಿ ಹರಿವಂತೆ ನೋಡಿಕೊಳ್ಳುವುದು ಸಮಕಾಲೀನ ನಾಯಕರ ಕೆಲಸ. ಇದಿಲ್ಲವೆಂದಾದಲ್ಲಿ ಅವರ ನಾಯಕತ್ವ ಪ್ರಶ್ನಾರ್ಹವಾಗುತ್ತದೆ.

ಜಾತಿಯದನ್ನು ಮೀರಿ ನೋಡುವುದಾದರೆ; ದಲಿತ ಹೋರಾಟಗಾರರಲ್ಲಿ ಮೂರು ವರ್ಗಗಳಿವೆ. 1. ‘ನೇರ ಹೋರಾಟಗಾರರು’, 2. ಬರಹವೇ ಪ್ರಧಾನ ಅಸ್ತ್ರ ಮಾಡಿಕೊಂಡ `ಪರೋಕ್ಷ ಹೋರಾಟಗಾರರು’ 3. ನೇರ ಹೋರಾಟ ಹಾಗೂ ಬರಹಾಸ್ತ್ರ ಎರಡನ್ನೂ ಮೇಳೈಸಿಕೊಂಡು ಬಂದ `ಸಮನ್ವಯಿತ ಹೋರಾಟಗಾರರು’. ಈ ಮೂವರಲ್ಲಿ ಬಂಧುತ್ವದಿಂದ ಸಾಮೂಹಿಕ ಹೋರಾಟಕ್ಕೆ ಪಕ್ಕಾಗದಿರುವುದು ದೊಡ್ಡ ಕೊರತೆಯ ರಂದ್ರವಾಗಿದೆ. ಈ ಭೇದ ಅಳಿಸಬೇಕಿದೆ. ಇತಿಹಾಸ ಅರಿತ ಅಧ್ಯಯನಕಾರರು, ನೇರ ಹೋರಾಟಗಾರರ ಕ್ಷೇತ್ರಾನುಭವ, ಸಮನ್ವಯಿಕರ ಮಥನ ಮಾರ್ಗ ಇವೆಲ್ಲ ಒಂದಾದಲ್ಲಿ ಹೊಸ ಹೆದ್ದಾರಿ ಎದ್ದು ನಿಲ್ಲುತ್ತದೆ.

ಇದು ತಕ್ಕಮಟ್ಟಿಗೆ ಹೊಕ್ಕು ಬಳಕೆಗೆ ಅನುವು ಮಾಡಿಕೊಟ್ಟಿದೆ. ಆದರೆ ಈ ಸ್ವರೂಪದ ಬೆಸುಗೆಯಲ್ಲದ ಬೆಸುಗೆಯ ಅಖಂಡತ್ವಕ್ಕೆ ಮುಖ ಮಾಡುವ ಪ್ರಕ್ರಿಯೆ ಆಂತರಿಕವಾಗಿಯೇ ಸಂದೇಹ ಹಾಗೂ ಗೇಲಿಗೆ ತುತ್ತಾಗಿದೆ.

`ಬಿಡಿಬಿಡಿ ಸಂಘಟನೆಗಳೆಲ್ಲ ಇಡಿತನಕ್ಕೆ ತಿರುಗಿಸಬೇಕು’ ಎನ್ನುವ ಮಾತು ಹಳೆಯದಾದರೂ, ಸಂಘಟನೆಗಳು ಎಲ್ಲಿಯವರೆಗೆ ಛಿದ್ರವಾಗಿರುತ್ತವೆಯೋ ಅಲ್ಲಿಯವರೆಗೆ ಈ ಸಲಹೆ ಅಷ್ಟೇ ಹಸಿರಾಗಿರುತ್ತದೆ. ‘ಒಡೆದ ಮನಸ್ಸುಗಳನ್ನು ಒಂದು ಮಾಡುವುದು ಸುಲಭ ಸಾಧ್ಯವಲ್ಲ’. ಸ್ವತಂತ್ರ ಅಸ್ತಿತ್ವದೊಂದಿಗೆ ವ್ಯವಹರಿಸಿ ಬದುಕಿದ ಬಿಡಿ ಅಸ್ತಿತ್ವದ ನಾಯಕರು ತಮ್ಮತನವನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಇಡಿತನದಲ್ಲಿ ತಾವು ಕಳೆದು ಹೋಗುವ ಭಯ ಕಾಡುವುದರಿಂದ ‘ನಾವು ಒಂದಾಗಬೇಕು’ ಎಂಬ ಸಮಾವೇಶಗಳು ಹೆಸರಿಗೆ ಮಾತ್ರ ನಡೆದಿವೆ. ಬಿಡಿತನವನ್ನು ಸಮರ್ಥಿಸುತ್ತ ತಮ್ಮ ತಮ್ಮ ಸಂಘದ ಬ್ಯಾನರಿನ ಅಸ್ತಿತ್ವದೊಂದಿಗೆ ಒಂದೆಡೆ ಹೆಚ್ಚಿನ ಸಂಘಟನೆಗಳು ಸೇರಿ ಪ್ರತಿಕ್ರಿಯಿಸುವ ಪ್ರಯೋಗ ನಡೆಸಿದ್ದು ಯಶಸ್ವಿಯಾಗದಿದ್ದರೂ, ಇದು ತಕ್ಕಮಟ್ಟಿಗೆ ಹೊಕ್ಕು ಬಳಕೆಗೆ ಅನುವು ಮಾಡಿಕೊಟ್ಟಿದೆ. ಆದರೆ ಈ ಸ್ವರೂಪದ ಬೆಸುಗೆಯಲ್ಲದ ಬೆಸುಗೆಯ ಅಖಂಡತ್ವಕ್ಕೆ ಮುಖ ಮಾಡುವ ಪ್ರಕ್ರಿಯೆ ಆಂತರಿಕವಾಗಿಯೇ ಸಂದೇಹ ಹಾಗೂ ಗೇಲಿಗೆ ತುತ್ತಾಗಿದೆ.

ಸಂಘಟನೆ ಒಡೆದ ಕನ್ನಡಿಯಾಗಿದೆ, ಛಿದ್ರವಾಗಿದೆ, ನಿಷ್ಕ್ರೀಯವಾಗಿದೆ, ಜಡವಾಗಿದೆ, ಸ್ವಾರ್ಥಸಾಧನೆಗೆ ಪಕ್ಕಾಗಿದೆ. ಹೀಗೆ ಪದೇ ಪದೇ ಹೇಳುತ್ತ ಹೋಗಿ, ತಮ್ಮ ವಸ್ತುನಿಷ್ಠ ಮಾತಿನ ಪ್ರದರ್ಶನದಿಂದ ಸಂಘಟನೆಯನ್ನು ಅಪ್ರತ್ಯಕ್ಷವಾಗಿ ದುರ್ಬಲಗೊಳಿಸಿದಂತಾಗಿದೆ. ಮತ್ತು ಪರೋಕ್ಷವಾಗಿ ಒಂದುಗೂಡದ ಮನೋಭಾವಕ್ಕೆ ಪ್ರೇರೇಪಿಸಿದಂತಾಗಿದೆ. ಇದು ಅರಿವಿಗೆಬಂದಾಗ ಇದರ ಕುರಿತು ಚರ್ಚೆಯಾಗಿ ಈ ಧೋರಣೆಯಿಂದ ಹಿಂದೆ ಸರಿದದ್ದೂ ಇದೆ. ಸಂಘಟನೆಯ ನಾಯಕರು ಮತ್ತು ಕಾರ್ಯಕರ್ತರಲ್ಲಿ ಈ ಬಿಡಿತನದ ಬಗ್ಗೆ ತಮ್ಮೊಳಗೆ ಅಪರಾಧಿ ಪ್ರಜ್ಞೆ ಜಾಗೃತವಾಗದ ಹೊರತು, ಅಖಂಡತ್ವದ ಒತ್ತಾಸೆಯ ಪ್ರಜ್ಞೆ ಜಾಗೃತವಾಗದು. ಸಂಘಟನೆ ಛಿದ್ರೀಕರಣದ ಆತ್ಯಂತಿಕ ಘಟ್ಟ ತಲುಪಿದಾಗ ಮಾತ್ರ ಇದು ಜಾಗೃತವಾಗುತ್ತದೆ ಮತ್ತು ಆಸ್ಫೋಟದ ಒಂದು ಘಟನೆಗೆ ಒಗ್ಗೂಡಲು ಕಾಯುತ್ತದೆ. ಈ ಸಮಯದ ಎದುರಾಗುವಿಕೆಗೆ ನಾವು ಕ್ರಿಯಾಶೀಲರಾಗಬೇಕಾಗಿದೆ.

ಈ ಹಿಂದೆ ಚಳವಳಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯೇ ಪ್ರಧಾನವಾಗಿತ್ತು. ಈಗ ಅವರ ನಾಯಕತ್ವವೇ ಪ್ರಧಾನವಾಗಬೇಕಾಗಿದೆ. ಅಕ್ಷರಲೋಕದ ಮಹಿಳೆಯರು ಕತ್ತಲಲೋಕದ ಮಹಿಳೆಯರೂ ಭೇದವಿಲ್ಲದೆ ಸಂಘಟನೆಗೆ ಪುನರ್ಜನ್ಮವನ್ನು ನೀಡಬೇಕೆಂಬ ಬದ್ಧತೆ ಮೂಡಬೇಕಿದೆ.

ದಸಂಸವನ್ನು ಪುನರ್ ಸಂಘಟಿಸುವಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸಬೇಕಿದೆ. ದಲಿತ ಸಂಘಟನೆಗಳಲ್ಲಿರುವ ನಾಯಕರು ಹಿಂದೆ ಸರಿದು, ದಲಿತ ಸಂಘಟನೆ ಅಥವಾ ಸಂಘಟನೆಗಳಿಗೆ ಮಹಿಳೆಯರ ನಾಯಕತ್ವವನ್ನು ನೀಡಬೇಕಿದೆ. ಮಹಿಳೆಯರ ನಾಯಕತ್ವದಲ್ಲಿ ಸಂಘಟನೆಯನ್ನು ಬಲಪಡಿಸಿದರೆ ದಲಿತ ಚಳವಳಿಗೆ ಹೊಸ ಆಯಾಮ ದೊರೆಯುತ್ತದೆ. ಈ ಆಯಾಮದ ತೀವ್ರತೆಯೇ ಸಮಗ್ರವಾಗಿ ಸಂಘಟನೆ ಅಖಂಡತ್ವಕ್ಕೆ ತಿರುಗಿಸುವುದರೊಂದಿಗೆ ದಲಿತ ಚಳವಳಿಗೆ ಪುನರ್ಜನ್ಮವನ್ನು ನೀಡಲು ಸಾಧ್ಯವಿದೆ. ತುರ್ತಾಗಿ ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಮುಂದಾಗುವ ಅಗತ್ಯವಿದೆ. ಈ ಹಿಂದೆ ಚಳವಳಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯೇ ಪ್ರಧಾನವಾಗಿತ್ತು. ಈಗ ಅವರ ನಾಯಕತ್ವವೇ ಪ್ರಧಾನವಾಗಬೇಕಾಗಿದೆ. ಅಕ್ಷರಲೋಕದ ಮಹಿಳೆಯರು ಕತ್ತಲಲೋಕದ ಮಹಿಳೆಯರೂ ಭೇದವಿಲ್ಲದೆ ಸಂಘಟನೆಗೆ ಪುನರ್ಜನ್ಮವನ್ನು ನೀಡಬೇಕೆಂಬ ಬದ್ಧತೆ ಮೂಡಬೇಕಿದೆ. ದಲಿತರ ಎರಡನೇ ಸುತ್ತಿನ ಹೋರಾಟವಾಗಿ ಮುಂದೆ ಎದ್ದು ನಿಲ್ಲುವುದು ಮಹಿಳಾ ಚಳವಳಿಯೇ ಆಗಿದೆ. ಅದಕ್ಕಾಗಿ ಮಹಿಳಾ ಕಾರ್ಯಕರ್ತರ ಪಡೆ ಸನ್ನದ್ಧವಾಗಬೇಕಿದೆ.

‘ನೀರು ಕಲಕದೆ ಶುದ್ಧೀಕರಣ ಸಾಧ್ಯವಿಲ್ಲ’. ಆದರೆ ನಮ್ಮ ಗ್ರಹಿಕೆ ‘ನೀರು ಕಲಕದಿರುವುದೇ ನೆಮ್ಮದಿಯ ಬದುಕಿಗೆ ಮೂಲ’ ಎನ್ನುವುದಾಗಿದೆ. ನೀರು ಕಲಕಿದಾಗ ಸಮಾಜದಲ್ಲಿ ರಾಡಿ ಎಷ್ಟಿದೆ ಎನ್ನುವುದು ಅರಿವಿಗೆ ಬರುತ್ತದೆ. ಸವರ್ಣೀಯರ ವ್ಯಾಖ್ಯಾನವೆಂದರೆ ‘ದಲಿತರ ಸಂಘಟನಾತ್ಮಕ ಶಕ್ತಿಯೇ ದಲಿತರಿಗೆ ಮುಳುವು’ ಎಂದು ವ್ಯಾಖ್ಯಾನಿಸುವುದಾಗಿದೆ. ಇದು ತಿರುವು ಮುರುವಾದ ಚಿಂತನೆಯಾಗಿದೆ. ಅಧಿಕಾರಶಾಹಿ ವ್ಯವಸ್ಥೆ ದಲಿತರನ್ನು ಬೆಳೆಯಗೊಡದೆ ಅಡ್ಡಿ ಮಾಡಿದೆ. `ಬೆಳೆದ ದಲಿತರೇ ದಲಿತರಿಗೆ ಅಡ್ಡಿಯಾಗುತ್ತಿದ್ದಾರೆ’ ಎಂದು ಮೇಲುನೋಟಕ್ಕೆ ಗೋಚರವಾಗುತ್ತದೆ. ಆದರೆ ದಲಿತರನ್ನು ನಿಯಂತ್ರಿಸಲು ದಲಿತ ಅಧಿಕಾರಿಗಳನ್ನೇ ಬಳಸಿಕೊಳ್ಳುವುದು ಸರಕಾರದ-ಆಡಳಿತದ ಮಾರ್ಗವಾಗಿದೆ.

ಅಧಿಕಾರೇತರ ಕ್ಷೇತ್ರಗಳಲ್ಲೂ ಇಂಥ ತಂತ್ರದ ಮಾರ್ಗಗಳಿವೆ. ಇಂಥ ತಂತ್ರಗಾರಿಕೆಯಲ್ಲಿ ಸವರ್ಣೀಯರ ಗೆಲುವು ಅಧಿಕವಾಗುತ್ತಿದೆ. ಇದಕ್ಕೆ ಕಾರಣ ಸಂಘಟನೆಗಳ ದುರ್ಬಲತೆ. ಸಂಘಟನೆಗಳು ಶಕ್ತಿಯುತವಾಗಿದ್ದಾಗ ದಲಿತಪರವಾದ ಅಧಿಕಾರಿಗಳಿಗೆ ಹಾಗೂ ಇತರರಿಗೆ ನೈತಿಕ ಬಲವಿದ್ದು ಎದುರಿಸಲು ಮಾರ್ಗವಿರುತ್ತದೆ. ಸಂಘಟನಾತ್ಮಕ ಶಕ್ತಿಗೆ ಜನಬಲ ನೈತಿಕಬಲ ಇಲ್ಲದೆ ಹೋದಾಗ ಜನಾಂಗಿಕ ವ್ಯಕ್ತಿಗಳು, ನೌಕರರು, ನಾಯಕರು ಹೊಂದಾಣಿಕೆ ರಾಜಕಾರಣಕ್ಕೆ ಪಕ್ಕಾಗುತ್ತಾರೆ. ಸಾಮಾಜಿಕ ಸಂಘಟನೆಗಳು ನೈತಿಕತೆಯನ್ನು ಬೆಳೆಸುತ್ತವೆ. ದ.ಸಂ.ಸ. ಪ್ರಬಲವಾಗಿದ್ದಾಗ ದಲಿತ ನೌಕರರು ಅದರ ಸ್ಪರ್ಶದಿಂದ ಚೊಕ್ಕಹೊನ್ನಾಗಿದ್ದರು. ಹೀಗಾಗಿ ಸರಕಾರಿ ಇಲಾಖೆಗಳಿಗೂ ಮಾನವೀಯತೆಯ ಗುಣದಕ್ಕಿತ್ತು. ಅದೀಗ ಹಗಲಲ್ಲಿ ದೀಪಹಚ್ಚಿ ಹುಡುಕಬೇಕು.

ಇತ್ತೀಚೇಗೆ ಗುಂಡ್ಲುಪೇಟೆ ಭಾಗದಲ್ಲಿ ನಡೆದ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಕೊಟ್ಟ ಪ್ರತಿಕ್ರಿಯೆ ಇಂಥದ್ದಾಗಿದೆ. ಹೀಗಾದಾಗ ಉತ್ಪಾದನೆಯ ಅನ್ಯಮಾರ್ಗಕ್ಕೆ ದಾರಿ ಮೂಡುತ್ತದೆ ಎನ್ನುವ ಅರಿವು ನಮ್ಮದಾಗಬೇಕಿದೆ. ಉತ್ಪಾದನಾ ಸಂಬಂಧಗಳು ವೃದ್ಧಿಯಾದಾಗ ಬಹಿಷ್ಕಾರಗಳು ಬೆತ್ತಲೆ ಮೆರವಣಿಗೆಗಳು ಗೌಣವಾಗುತ್ತವೆ.

ಅಸ್ಪೃಶ್ಯಲೋಕ ಅರಿವಿನ ಮೂಲಕ ಎಚ್ಚರವಾಗಿದ್ದಾಗ ಬೆಳಕಿನ ಬದುಕಿದೆ. ಇದಕ್ಕೆ ಪರ್ಯಾಯ ಮಾರ್ಗವಾಗಿ ಅಂಬೇಡ್ಕರ್ ಗುರುತಿಸಿರುವುದು ಮತಾಂತರದ ಧಾರ್ಮಿಕ ಮಾರ್ಗ. ಇದು ಸಾಮೂಹಿಕ ಬಲವನ್ನು, ಆರ್ಥಿಕ ಬಲವನ್ನು ಕಂಡುಕೊಳ್ಳುತ್ತದಲ್ಲದೆ ‘ನಾವು ನಿಮ್ಮವರಲ್ಲ’ ಎಂಬ ಸಂದೇಶವನ್ನು ರವಾನಿಸುತ್ತದೆ. ಆಗ ದೌರ್ಜನ್ಯಕ್ಕೆ ಕಡಿವಾಣ ಬೀಳಲು ಒಂದು ಮಾರ್ಗ ತೆರೆದುಕೊಳ್ಳುತ್ತದೆ, ಸಾಂಘಿಕಶಕ್ತಿ ಆರ್ಥಿಕ ಶಕ್ತಿಯನ್ನು ಮೀರಿ ಬದುಕಲು ಕಲಿಸುತ್ತದೆ. ಇತ್ತೀಚೇಗೆ ಗುಂಡ್ಲುಪೇಟೆ ಭಾಗದಲ್ಲಿ ನಡೆದ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಕೊಟ್ಟ ಪ್ರತಿಕ್ರಿಯೆ ಇಂಥದ್ದಾಗಿದೆ. ಹೀಗಾದಾಗ ಉತ್ಪಾದನೆಯ ಅನ್ಯಮಾರ್ಗಕ್ಕೆ ದಾರಿ ಮೂಡುತ್ತದೆ ಎನ್ನುವ ಅರಿವು ನಮ್ಮದಾಗಬೇಕಿದೆ. ಉತ್ಪಾದನಾ ಸಂಬಂಧಗಳು ವೃದ್ಧಿಯಾದಾಗ ಬಹಿಷ್ಕಾರಗಳು ಬೆತ್ತಲೆ ಮೆರವಣಿಗೆಗಳು ಗೌಣವಾಗುತ್ತವೆ. ಭಾರತದಂತಹ ದೇಶದಲ್ಲಿ ಉತ್ಪಾದನಾ ಸಂಬಂಧದಲ್ಲಿಯೇ ಎರಡು ರೀತಿ ಇವೆ. ಒಂದು ಸ್ವಕೀಯ ಉತ್ಪಾದನಾ ಸಂಬಂಧದ ನೆಲೆಗಳು, ಇನ್ನೊಂದು ಪರಕೀಯ ಉತ್ಪಾದನಾ ಸಂಬಂಧದ ನೆಲೆಗಳು. ದಲಿತರ ಬದುಕು ಪರಕೀಯ ಉತ್ಪಾದನಾ ಸಂಬಂಧಗಳಿಂದ ಕಳಚಿಕೊಳ್ಳುವ ಮಾರ್ಗಗಳನ್ನು ಅರಸಬೇಕಿದೆ. ಪರಾವಲಂಬಿ ಬದುಕು ಇರುವವರೆಗೆ ಬಹಿಷ್ಕಾರಗಳಿಂದ ಸುಲಭವಾಗಿ ಬಿಡುಗಡೆ ಸಾಧ್ಯವಾಗದು.

ಡಾ.ಅಂಬೇಡ್ಕರ್ ಅವರು ರಾಜಕೀಯ ಅಧಿಕಾರಕ್ಕಾಗಿ ಅಲ್ಪಸಂಖ್ಯಾತರೊಂದಿಗೆ ಸಖ್ಯ ಅಗತ್ಯವೆಂದು ಹೇಳಿದ ವಿಚಾರವನ್ನು ಮುಂದಿಟ್ಟುಕೊಂಡು ಕೆಲ ಸಂಘಟನೆಗಳು ಇದನ್ನು ಮುಂದುವರೆಸಿಕೊಂಡು ಬಂದಿವೆ. ಕೆಲ ವಿಶ್ಲೇಷಕರು ಮತ್ತು ಅಧ್ಯಯನಕಾರರು ಅಲ್ಪಸಂಖ್ಯಾತರ ಸಖ್ಯವೇ ದೌರ್ಬಲ್ಯಕ್ಕೆ ಮೂಲವಾಗಿದೆ, ಅದರಿಂದ ಬಿಡಿಸಿಕೊಂಡರೆ ಲಾಭ ಹೆಚ್ಚು ಎನ್ನುವ ಮಾತುಗಳನ್ನಾಡಿದ್ದಾರೆ. ಇಂಥ ಧೋರಣೆ ಕ್ರಿಯಾಶೀಲತೆಯನ್ನು ಕಳೆಯುತ್ತವೆ ಮತ್ತು ಒಡೆದಾಳುವ ನೀತಿಗೆ ನೂಕುತ್ತವೆ. ತಾತ್ವಿಕವಾಗಿ ಇಂದಿನ ಸಂದರ್ಭದಲ್ಲಿ ಮೇಲು ನೋಟಕ್ಕೆ ಇದು ಸರಿ ಎನಿಸಿದರೂ ಇವುಗಳ ಬೇರು ಕಿತ್ತು ಹಾಕುವುದು ಸಾಧ್ಯವಿಲ್ಲ. ಭಿನ್ನಮತ ಚಿಂತನೆ ಬಂದಾಗ ಸಾಮಾನ್ಯ ಅಂತರವನ್ನು ಕಾಯ್ದುಕೊಳ್ಳುತ್ತಲೇ ಸಕಾರಾತ್ಮಕ ಸಂಬಂಧದೊಂದಿಗೆ ಮುನ್ನಡೆಯಬೇಕು. ಅಲ್ಪಸಂಖ್ಯಾಕ ನೌಕರ ವರ್ಗದ ಬಗ್ಗೆ ಹೋರಾಟ ಮಾಡುವುದು ಸರಿಯಲ್ಲ ಎಂಬ ಧೋರಣೆಯು ಸಮರ್ಥಿನೀಯವಲ್ಲ.

ಇಂಥ ಮರವನ್ನು ಯಾರೂ ಕಳ್ಳತನದಿಂದ ಕಡಿಯಲಾಗದು. ಇಂಥ ಹೆಜ್ಜಾಲವನ್ನು ಬೆಳಸಿ ಉಳಿಸಿಕೊಂಡು ಹೋಗಲು ಭಕ್ತರ ಅಗತ್ಯಕ್ಕಿಂತ ಅನುಯಾಯಿಗಳ ಅಗತ್ಯ ಹೆಚ್ಚಿದೆ.

ಸಂಘಟನೆ ಬೋಳುತೆಂಗಿನ ಮರಗಳ ಗದ್ದೆಯಂತಿರಬಾರದು. ಜಡೆಯ ಆಲದ ಮರದಂತೆ ಹೆಜ್ಜೆಹೆಜ್ಜೆಗೂ ಬಿಳಲುಬಿಡುತ್ತ ತನ್ನ ಶಾಖೆಗಳನ್ನು ವಿಸ್ತರಿಸುತ್ತ ಬೀಳಲಾಗದಂತೆ ಬೆಳೆಯಬೇಕು. ಹೀಗಾದಾಗ ಇಂಥ ಮರವನ್ನು ಯಾರೂ ಕಳ್ಳತನದಿಂದ ಕಡಿಯಲಾಗದು. ಇಂಥ ಹೆಜ್ಜಾಲವನ್ನು ಬೆಳಸಿ ಉಳಿಸಿಕೊಂಡು ಹೋಗಲು ಭಕ್ತರ ಅಗತ್ಯಕ್ಕಿಂತ ಅನುಯಾಯಿಗಳ ಅಗತ್ಯ ಹೆಚ್ಚಿದೆ. ಅಂಬೇಡ್ಕರ್ ಚಿಂತನೆ ‘ಹೋರಾಟದ ಮಾರ್ಗ’ ಆಗುವ ಬದಲು ‘ಬದುಕಿನ ಮಾರ್ಗ’ವಾಗಬೇಕು. ಹೊಟ್ಟೆ ತುಂಬಿದವರಿಗಾಗಿ ಮಾಡುವ ಹೋರಾಟ ದುರ್ಬಲವಾದುದು, ಆದ ರೆ ಅವರನ್ನೂ ಹೋರಾಟಕ್ಕೆ ಸಜ್ಜುಗೊಳಿಸಿ ಪೂರಕ ಶಕ್ತಿಯಾಗುವ ಮಾರ್ಗವನ್ನು ರೂಢಿಸಿಕೊಳ್ಳಬೇಕು. ದಲಿತ ಸಂಘಟನೆಗಳ ಹೋರಾಟದ ಸಮೀಕರಣ ಹಾಗೂ ದಲಿತ ಪದದ ವ್ಯಾಖ್ಯಾನವೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ದಲಿತ ಸಂಘರ್ಷ ಸಮಿತಿ ಇತರೆ ಸಂಘಟನೆಗಳು + ಬೌದ್ಧೀಯತೆ + ಅಬೌದ್ಧೀಯತೆ + ಪ್ರಗತಿಪರ ಹೋರಾಟ ಸಂಘಟನೆಗಳು+ಬಿ.ಎಸ್.ಪಿ (ದಬೌಅಪ್ರಬಿ ಸೂತ್ರ) = ದಲಿತ ಸಮಗ್ರ ಶಕ್ತಿ. ಈ ಸಮೀರಣ ಅಂತಿಮವೆಂದು ಗ್ರಹಿಸಬಾರದು. ಇಂಥ ಭಿನ್ನ ಸಮೀಕರಣಗಳನ್ನು ಮುಖಾಮಖಿಗೊಳಿಸಿ ಮಥಿಸಿ ಆಯ್ದುಕೊಳ್ಳುವ ಮಾರ್ಗ ನಮ್ಮದಾಗಬೇಕಿದೆ.

ರಾಜಕಾರಣವೆಂದರೆ ಅಧಿಕಾರ ಪಡೆಯುವುದು ಎಂದರ್ಥ ವಲ್ಲ. ಅಧಿಕಾರದ ಗ್ರಹಣದಿಂದಲೇ ಸಮಾಜ ಪರಿವರ್ತನೆ ಸಾಧ್ಯ ಎನ್ನುವುದು ಸರಳತರ್ಕ. ಹೀಗಾಗಿ ರಾಜಕಾರಣವೆಂದರೆ ಉತ್ತಮ ವ್ಯಕ್ತಿಗಳ ನಿರ್ಮಾಣದಲ್ಲಿಯೇ ಸಮಾಜ ಪರಿವರ್ತನೆ ಅಡಗಿದೆ. ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಘಟನೆಯೂ ರಾಜಕಾರಣವೇ ಆಗಿದೆ. ಹೀಗಾಗಿ ಅವರ ನಡುವಿನ ಉತ್ತಮ ಸಂಬಂಧವೇ ಸಮಾಜ ಸುಧಾರಣೆಯ ಮೊದಲ ಮಾರ್ಗವಾಗಬೇಕು. ಸಾಮಾಜಿಕ ಸಂಘಟನೆಗಳ ರಾಜಕೀಯ ಪಕ್ಷದೊಂದಿಗಿನ ಸಂಬಂಧ; ಸ್ವಾರ್ಥ, ದ್ವೇಷ, ವೈಮನಸ್ಸಿಗೆ ಮಣೆ ಹಾಕುತ್ತವೆ. ಆದ್ದರಿಂದ ಮೊದಲು ಅಂಥ ಸಂಬಂಧಗಳಿಂದ ಸಾಮಾಜಿಕ ಸಂಘಟನೆಗಳು ಹೊರಬರಬೇಕು ಮತ್ತು ರಾಜಕೀಯ ಹೊಟೇಲ್ ಮುಂದಿನ ಬೀಡಾ ಡಬ್ಬಿ ಅಂಗಡಿಗಳಂತಾಗಬಾರದು. ಸಾಮಾಜಿಕ ಸಂಘಟನೆ ರಾಜಕೀಯದ ಕಡೆಗೆ ಮುಖಮಾಡಿದ್ದು ವಿಘಟಿತವಾಗಲು ಮಹತ್ವದ ಕಾರಣಗಳಲೊಂದು. ಸಂಘಟನೆಯಲ್ಲಿ ಅವರದ್ದೇ ಆದ ಒಂದು ಪ್ರತ್ಯೇಕ ಪಕ್ಷ ರೂಪಿಸಿಕೊಳ್ಳುವುದು ಸೂಕ್ತವೆಂದು ಬಗೆದು ಸಾಮಾಜಿಕ ಸಂಘಟನೆಯೊಂದಿಗೆ ರಾಜಕೀಯ ಪಕ್ಷಗಳು ತಲೆ ಎತ್ತಲು ಹವಣಿಸಿದ್ದು ಇನ್ನೊಂದು ಹಂತ. ‘ಅಧಿಕಾರದಾಹ ಎಂಬುದು ಹುಸಿ, ರಾಜಕೀಯ ಅಧಿಕಾರದಿಂದಲೇ ಸಮಸ್ಯೆಗಳ ಪರಿಹಾರ ಸಾಧ್ಯ’ವೆಂಬ ಗ್ರಹಿಕೆ ಮನೆ ಮಾಡಿದ್ದು, ಸಹ್ಯವಾಗಿದೆ.

ಜಾಗೃತಗೊಂಡ ದಲಿತರ ರಾಜಕೀಯ ಪಕ್ಷ ಶಕ್ತವಾಗಿ ಬೆಳೆದಲ್ಲಿ ದಲಿತೇತರ ರಾಜಕೀಯ ಪಕ್ಷಗಳು ಹೊಂದಾಣಿಕೆಗೆ ತಾವಾಗಿಯೇ ಮುಂದಾಗುತ್ತವೆ. ಈ ಅನಿವಾರ್ಯತೆಗೆ ಕಾಯ್ದು ಮೇಲೇಳಬೇಕು.

ಡಾ.ಸಣ್ಣರಾಮ ಅವರು ಕಾರ್ಲ್‍ಮಾರ್ಕ್ಸ್, ಲೋಹಿಯಾ, ಗಾಂಧೀಜಿ ಇವರೆಲ್ಲರ ವಿಚಾರ ಗೊಂದಲಕ್ಕೆ ಬೀಳುವುದಕ್ಕಿಂತ ಕಾರ್ಲ್‍ಮಾರ್ಕ್ಸ್ರ ಕಾರ್ಮಿಕಪರ ಧೋರಣೆ, ಗಾಂಧೀಜಿಯ ಅಹಿಂಸಾ ತತ್ವ, ಲೋಹಿಯಾ ಅವರ ಜಾತಿ ವಿನಾಶ, ಈ ಮೂರೂ ಅಂಬೇಡ್ಕರ್ ವಾದದಲ್ಲಿ ಏಕೀಕೃತಗೊಂಡಿರುವ ಬಗೆಯನ್ನು ಬಿ.ಕೃಷ್ಣಪ್ಪನವರ ಚಿಂತನೆ ಮೂಲಕ ಪ್ರತಿಪಾದಿಸುತ್ತಾರೆ. ಅಲ್ಲದೆ ರಾಜಕೀಯಕ್ಕೆ ಸಂಬಂಧಿಸಿದಂತೆ ಬಿಎಸ್‍ಪಿಯೇ ಅಂತಿಮ, ಏಕೆಂದರೆ ಅದು ಅಂಬೇಡ್ಕರ್ ವಿಚಾರ ಧಾರೆಯಿಂದಲೇ ರೂಪಗೊಂಡಿದ್ದೆಂದು ನಿರೂಪಿಸುತ್ತಾರೆ. ವರ್ತಮಾನದ ಸಂದರ್ಭದಲ್ಲಿ ಈ ಚಿಂತನೆ ಅಲ್ಲಗಳೆಯಲಾಗದು. ಇದರೊಂದಿಗೆ ಸರ್ವೋದಯ ಪಕ್ಷ ರಾಷ್ಟ್ರೀಯ ಎನ್ನಬಹುದಾದ ಪಕ್ಷದೊಂದಿಗೆ ಲೀನವಾಗಿ ಹಾಕುತ್ತಿರುವ ಮುಂದಣ ಹೆಜ್ಜೆಗಳು ಎಣಿಸಬೇಕಾಗಿದೆ.

ದಲಿತ ನಾಯಕರು ಮೊದಲು ದಲಿತರಿಗೆ ನಾಯಕರಾಗಬೇಕು. ಅನಂತರ ದಲಿತೇತರರಿಗೆ ನಾಯಕರಾಗಬೇಕು. ಇದರರ್ಥ ದಲಿತರು, ದಲಿತೇತರರೊಂದಿಗೆ ಸೇರಿ ರಾಜಕೀಯ ಪಕ್ಷ ಕಟ್ಟಬಾರದೆಂದಲ್ಲ. ಕಾಲದ ಅನಿವಾರ್ಯತೆ ಬೇರೆ, ಸ್ವಅಸ್ತಿತ್ವದ ಪ್ರಶ್ನೆ ಬೇರೆ. ಜಾಗೃತಗೊಂಡ ದಲಿತರ ರಾಜಕೀಯ ಪಕ್ಷ ಶಕ್ತವಾಗಿ ಬೆಳೆದಲ್ಲಿ ದಲಿತೇತರ ರಾಜಕೀಯ ಪಕ್ಷಗಳು ಹೊಂದಾಣಿಕೆಗೆ ತಾವಾಗಿಯೇ ಮುಂದಾಗುತ್ತವೆ. ಈ ಅನಿವಾರ್ಯತೆಗೆ ಕಾಯ್ದು ಮೇಲೇಳಬೇಕು. ವರ್ತಮಾನದ ರಾಜಕಾರಣದಲ್ಲಿ ಕ.ದ.ಸಂ.ಸ, ಬಿ.ವಿ.ಎಸ್ ಮತ್ತು ಸರ್ವೋದಯ ಹಾಗೂ ಇತರೆ ಶಕ್ತಿಗಳೊಂದಿಗೆ ಹೇಗೆ ನಡೆಯಬೇಕು ಎಂಬ ಒಳಾಂಗಣ ಚರ್ಚೆ ಅಗತ್ಯವಿದೆ. ದಲಿತಾಭ್ಯುದಯ ಸಮಗ್ರ ಶಕ್ತಿಯಾಗಿ ರೂಪುಗೊಳ್ಳುವಲ್ಲಿ ಚಲಿಸಬೇಕಾದ ಮಾರ್ಗವನ್ನು ನಿರೂಪಿಸುತ್ತ ಅನವಶ್ಯಕ ವಿವಾದಗಳಿಗೆ ಎಡೆಗೊಡದೆ ಸಕಾರಾತ್ಮಕವಾಗಿ ಮುಂದೆ ಕೊಂಡ್ಯೊಯುವ ಸಮೂಹ ನಾಯಕತ್ವದ ಜರೂರತ್ತು ಎಂದಿಗಿಂತಲೂ ಇಂದು ಅಗತ್ಯವಾಗಿದೆ. ಈ ಸ್ವರೂಪದ ಚಿಂತನೆ ಹಾಗೂ ನಡೆ ವರ್ತಮಾನದ ದಲಿತ ಚಳವಳಿಗೆ ಬೇಕಿದೆ.

*ಲೇಖಕರು ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದವರು. ಇವರ ಕೃತಿಗಳಲ್ಲಿ ವೈಚಾರಿಕತೆ ಮತ್ತು ಸೃಜನಶೀಲತೆ ಸಂಯೋಜನೆಗೊಂಡಿರುತ್ತದೆ; ‘ಗೌರ್ಮೆಂಟ್ ಬ್ರಾಹ್ಮಣ’ ಕನ್ನಡದ ಮೊದಲ ದಲಿತ ಆತ್ಮಕಥನ. ಪ್ರಸ್ತುತ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು.

Leave a Reply

Your email address will not be published.