ದೇಶದ ಘನತೆ ಎತ್ತಿಹಿಡಿಯಲು ಮತ್ತೆ ಮೋದಿ

ಮತ್ತೊಮ್ಮೆ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿ ಆದರೆ ದೇಶವನ್ನು ಒಂದು ಅಥವಾ ಎರಡನೇ ಸ್ಥಾನಕ್ಕೆ ತಂದು ನಿಲ್ಲಿಸುತ್ತಾರೆ. ಮುಂದಿನ ದಿನಗಳಲ್ಲಿ ಭಾರತ ಎಲ್ಲ ರೀತಿಯಲ್ಲಿ ಸೂಪರ್ ಪವರ್ ಆಗುವುದಕ್ಕೆ ಸಾಧ್ಯವಿದೆ.

ಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ದೇಶದ ಜನಕ್ಕೆ ನಾಲ್ಕೈದು ವಿಚಾರಗಳಲ್ಲಿ ಬಹಳ ಸ್ಪಷ್ಟವಾಗಿ ಮನವಿ ಮಾಡಿದ್ದರು, ಭರವಸೆ ನೀಡಿದ್ದರು. ಅವರು ಮುಖ್ಯವಾಗಿ ಪ್ರಸ್ತಾಪಿಸಿದ್ದು ನಾಲ್ಕು ಅಂಶಗಳನ್ನು: ಮೊದಲನೇದಾಗಿ, ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತೇನೆ ಅಂದಿದ್ದರು. ಅಂದಹಾಗೆ ಕಳೆದ ಐದು ವರ್ಷಗಳಲ್ಲಿ ಒಂದೂ ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲದ ರೀತಿಯಲ್ಲಿ ಆಡಳಿತ ನೀಡಿದ್ದಾರೆ. ಅವರು ಗುಜರಾತಿನ ಮುಖ್ಯಮಂತ್ರಿಯಾಗಿ ಹನ್ನೆರಡು ವರ್ಷಗಳ ಕಾಲ ಕೆಲಸ ಮಾಡಿದಾಗಲೂ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದಾರೆ. ಇವತ್ತು ಭ್ರಷ್ಟಾಚಾರವನ್ನು ತೆಗೆದುಹಾಕುವ ನಿಟ್ಟಿನಲ್ಲಿ ಒಂದು ಹಂತ ತಲುಪಲಾಗಿದೆ.

ಎರಡನೆಯದಾಗಿ, ದೇಶದ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದರು. ‘ಜನ್-ಧನ್’ ಖಾತೆಗೆ ದುಡ್ಡು ಹಾಕಿದ್ದು, ‘ಉಜ್ವಲ’ ಕಾರ್ಯಕ್ರಮ, ‘ಆಯುಷ್ಮಾನ್ ಭಾರತ’, ಕಡಿಮೆ ದರದಲ್ಲಿ ಕೊಡುವ ‘ಜನರಿಕ್ ಔಷಧಿ’, ‘ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಯೋಜನೆ’ಯಡಿಯಲ್ಲಿ ವಿದ್ಯುತ್ ಇಲ್ಲದವರ ಮನೆಗಳಿಗೆ ಕರೆಂಟ್ ಕೊಟ್ಟಿದ್ದು, ‘ಅಮೃತ್’ ಯೋಜನೆ… ಈ ರೀತಿ ನೂರಾರು ಯೋಜನೆಗಳನ್ನು ಜನರ ಹಿತದೃಷ್ಟಿಯಿಂದ ದೇಶದಲ್ಲಿ ಮಾಡಿದ್ದಾರೆ. ಅಭಿವೃದ್ಧಿಯ ದಾಪುಗಾಲು ಇಡಲಾಗಿದೆ. ಇವೆಲ್ಲಾ ಕೆಲಸಗಳನ್ನು ಯಾವುದೇ ಭ್ರಷ್ಟಾಚಾರದ ವಾಸನೆ ಇಲ್ಲದೆ ಮಾಡಿದ್ದಾರೆ.

ಮೂರನೆಯದಾಗಿ, ನಮ್ಮ ಗಡಿಗಳ ರಕ್ಷಣೆ ಮಾಡುತ್ತೇನೆ, ನಮ್ಮ ಸೈನಿಕರಿಗೆ ಗೌರವ ಕೊಡುತ್ತೇನೆ ಮತ್ತು ನಮ್ಮ ಸೈನ್ಯವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತೇನೆ ಎಂದಿದ್ದರು. ನಮ್ಮ ಸೈನಿಕರಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನೂ ನಮ್ಮ ದೇಶದಲ್ಲಿ ತಯಾರಿಸುತ್ತಿರಲಿಲ್ಲ; ಎಲ್ಲವನ್ನು ಆಮದು ಮಾಡಿಕೋಳ್ಳುತ್ತಿದ್ದೆವು. ಅಂತಹ ಪರಿಸ್ಥಿತಿ ದೇಶದಲ್ಲಿತ್ತು. ಈಗ ನಮ್ಮ ದೇಶದಲ್ಲೇ ಅಗತ್ಯ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ಹಲವಾರು ಕಾರ್ಖಾನೆಗಳನ್ನು ತೆರೆಯಲಾಗಿದೆ. ಡಿ.ಆರ್.ಡಿ.ಓ.ಗೆ ಹೆಚ್ಚಿನ ಹಣ ನೀಡಲಾಗಿದೆ. ಅದರ ಜೊತೆಗೆ ವಿದೇಶಿ ಕಂಪನಿಗಳು ಸಹ ಭಾರತಕ್ಕೆ ಬಂದು ಇಲ್ಲಿಯೇ ಕಾರ್ಖಾನೆ ತೆರೆದು ಶಸ್ತ್ರಾಸ್ತ್ರಗಳನ್ನು ತಯಾರಿಸುವಂತೆ ಮಾಡಲಾಗಿದೆ. ಈ ರೀತಿ ನಮ್ಮ ಸೈನಿಕರಿಗೆ ಗೌರವ ತರುವ ನಿಟ್ಟಿನಲ್ಲಿ, ಗಡಿಗಳಲ್ಲಿ ದಿಟ್ಟ ಉತ್ತರ ನೀಡುವ ನಿಟ್ಟಿನಲ್ಲಿ ಮತ್ತು ಗಡಿಭಾಗದಲ್ಲಿ ಸುಸಜ್ಜಿತ ರಸ್ತೆಗಳನ್ನು ಮಾಡುವ ನಿಟ್ಟಿನಲ್ಲಿ ಒಂದು ದಾಪುಗಾಲು ಇಡಲಾಗಿದೆ.

ಅವರು ಎಂದೂ ದೇಶದ ಬಗ್ಗೆ ನಕರಾತ್ಮಕವಾಗಿ ಮಾತನಾಡಲಿಲ್ಲ. ಇವತ್ತು ವಿದೇಶಗಳಿಗೆ ಹೋದಾಗ ನಮ್ಮ ಪ್ರಧಾನಿಗೆ ಕೆಂಪುಹಾಸಿನ ಸ್ವಾಗತ ಸಿಗುವಂತಾಗಿದ್ದರೆ ಅದು ಮೋದಿಯವರ ಕಾಲದಲ್ಲಿ ಆಗಿದೆ.

ಮೊದಲ ಮತ್ತು ಎರಡನೇ ಸರ್ಜಿಕಲ್ ಸ್ಟ್ರೈಕನ್ನು ನಾವು ನೋಡಿದ್ದೇವೆ. ಪುಲ್ವಾಮಾ ಘಟನೆಗೂ ಮೊದಲು ಹಲವಾರು ಘಟನೆಗಳು ಆಗಿವೆ. ಆದರೆ ಎದುರಾಳಿಗಳಿಗೆ ದಿಟ್ಟ ಉತ್ತರವನ್ನು ನೀಡುವ ಕೆಲಸವನ್ನು ಮೋದಿಯವರು ಮಾಡಿದ್ದಾರೆ. ಮತೀಯ ಗಲಭೆ, ಕೋಮು ಸಂಘರ್ಷಗಳು ಕಳೆದ ಐದು ವರ್ಷಗಳಲ್ಲಿ ನಡೆದಿಲ್ಲ. ಎಲ್ಲರನ್ನೂ ಸೌಹಾರ್ದಯುತವಾಗಿ ಕೊಂಡೊಯ್ಯುವ ಕೆಲಸವನ್ನು ಮೋದಿಯವರು ಮಾಡಿದ್ದಾರೆ.

ನಾಲ್ಕನೆಯದ್ದು, ವಿದೇಶಗಳಲ್ಲಿ ಭಾರತಕ್ಕೆ ಗೌರವ ಸಿಗಬೇಕು; ಆ ರೀತಿ ತಲೆಯೆತ್ತಿ ನಿಲ್ಲುವಂತೆ ಮಾಡುತ್ತೇನೆ ಎಂದಿದ್ದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಹಲವಾರು ದೇಶಗಳನ್ನು ಮೋದಿಯವರು ಸುತ್ತಿದರು. ಆ ಎಲ್ಲ ಸಂದರ್ಭಗಳಲ್ಲಿ ಭಾರತದ ಪ್ರೌಢಿಮೆ ಬಗ್ಗೆ, ಸಂಸಸ್ಕೃತಿ ಬಗ್ಗೆ ಮಾತನಾಡುತ್ತ ಬಂದರು. ಅವರು ಎಂದೂ ದೇಶದ ಬಗ್ಗೆ ನಕರಾತ್ಮಕವಾಗಿ ಮಾತನಾಡಲಿಲ್ಲ. ಇವತ್ತು ವಿದೇಶಗಳಿಗೆ ಹೋದಾಗ ನಮ್ಮ ಪ್ರಧಾನಿಗೆ ಕೆಂಪುಹಾಸಿನ ಸ್ವಾಗತ ಸಿಗುವಂತಾಗಿದ್ದರೆ ಅದು ಮೋದಿಯವರ ಕಾಲದಲ್ಲಿ ಆಗಿದೆ. ನಮ್ಮೆಲ್ಲರ ಉದ್ದೇಶವಿದ್ದದ್ದು ಭಯೋತ್ಪಾದನೆಯಲ್ಲಿ ಪಾಕಿಸ್ತಾನವನ್ನು ಏಕಾಂಗಿಯನ್ನಾಗಿ ಮಾಡಬೇಕೆಂಬುದು.

ಭಯೋತ್ಪಾದನೆಯನ್ನು ಬೆಂಬಲಿಸುವುದು, ಭಯೋತ್ಪಾದಕರಿಗೆ ಹಣ ಕೊಡುವುದು, ಭಯೋತ್ಪಾದಕರನ್ನು ರಪ್ತು ಮಾಡುವುದು ಪಾಕಿಸ್ತಾನ. ಅಷ್ಟೆ ಅಲ್ಲದೇ ಭಯೋತ್ಪಾದಕರಿಗೆ ತರಬೇತಿ ನೀಡುವುದು ಪಾಕಿಸ್ತಾನ. ಅದಕ್ಕಾಗಿ ಪ್ರಪಂಚದ ಎಲ್ಲ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಮೋದಿಯವರು ಏಕಾಂಗಿ ಮಾಡಿದರು. ಮೊನ್ನೆ ನಡೆದ ಪುಲ್ವಾಮ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ಬಳಿಕ ನಡೆದ ಬೆಳವಣಿಗೆಗಳು ಅವರ ರಾಜತಾಂತ್ರಿಕ ಗೆಲುವನ್ನು ತೋರಿಸುತ್ತವೆ.

ಯಾವ ದೇಶವೂ ಪಾಕಿಸ್ತಾನದ ಪರ ನಿಲ್ಲದೇ ಭಾರತಕ್ಕೆ ಬೆಂಬಲ ನೀಡಿದವು. ಮಾತ್ರವಲ್ಲದೇ ಭಾರತಕ್ಕೆ ಅಗತ್ಯ ನೆರವು ನೀಡುವುದಾಗಿ ಹೇಳಿದವು. ಈ ಧೈರ್ಯ ಬರುವಂತಾದ್ದು ನರೇಂದ್ರ ಮೋದಿ ಕಾರಣಕ್ಕಾಗಿ. ಅವರು ಕಳೆದ ನಾಲ್ಕೈದು ವರ್ಷಗಳಲ್ಲಿ ಹಲವಾರು ದೇಶಗಳನ್ನು ಸುತ್ತಿ ಸಂಬಂಧ ಸುಧಾರಣೆ ಮಾಡಿದ್ದು, ನಡೆದುಕೊಂಡ ರೀತಿ, ಈ ಕಾರಣಕ್ಕಾಗಿ ಬೆಂಬಲ ಸಿಗುವಂತಾಗಿದೆ. ಭಾರತಕ್ಕೂ ಧಮ್ಮಿದೆ, ಭಾರತವೂ ಗಟ್ಟಿ ಇದೆ ಎಂಬ ಕಾರಣಕ್ಕಾಗಿ ನಮ್ಮನ್ನು ಎಲ್ಲರೂ ಮಾತನಾಡಿಸುತ್ತಾರೆ. ನಾವು ವೀಕ್ ಇದ್ದಿದ್ದರೆ ನಮ್ಮನ್ನು ಯಾರೂ ಬೆಂಬಲಿಸುತ್ತಿರಲಿಲ್ಲ.

‘ಮಹಾ ಘಟಬಂಧನ್’ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು? ರಾಹುಲ್ ಗಾಂಧಿ ಅವರು ಪ್ರಧಾನಿ ಆಗುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಮಹಾಘಟಬಂಧನ್‍ದಲ್ಲಿ ಪ್ರಧಾನಿ ಆಗುವ ಮುಖಗಳೇ ಕಾಣಿಸುತ್ತಿಲ್ಲ

ಈ ನಾಲ್ಕು ಅಂಶಗಳ ವಿಚಾರದಲ್ಲಿ ನರೇಂದ್ರ ಮೋದಿ ಸರಕಾರ ನುಡಿದಂತೆ ನಡೆದುಕೊಂಡಿದೆ. ಆರ್ಥಿಕವಾಗಿ ದೇಶ ಆರನೇ ಸ್ಥಾನಕ್ಕೆ ಬಂದು ನಿಂತಿದೆ. ಫ್ರಾನ್ಸ್ ದೇಶವನ್ನು ಹಿಂದಿಕ್ಕಿ ಮುಂದೆ ಬಂದಿದೆ. ಅದಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿ ಆದರೆ ದೇಶವನ್ನು ಮುಂದಿನ ಐದು ವರ್ಷಗಳಲ್ಲಿ ಒಂದು ಅಥವಾ ಎರಡನೇ ಸ್ಥಾನಕ್ಕೆ ತಂದು ನಿಲ್ಲಿಸುತ್ತಾರೆ. ಮುಂದಿನ ದಿನಗಳಲ್ಲಿ ಭಾರತ ಎಲ್ಲ ರೀತಿಯಲ್ಲಿ ಸೂಪರ್ ಪವರ್ ಆಗುವುದಕ್ಕೆ ಸಾಧ್ಯವಿದೆ. ಜಿ.ಎಸ್.ಟಿ ಸುಧಾರಣೆ ಹಾಗೂ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ ನಿಂತ ಮೇಲೆ ಭಾರತ ಖಂಡಿತವಾಗಿ ಜಗದ್ ವಂದ್ಯವಾಗಲಿದೆ. ನರೇಂದ್ರ ಮೋದಿಯವರು ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಇದೆಲ್ಲ ಸಾಧ್ಯವಾಗಲಿದೆ.

ಭಯೋತ್ಪಾದಕರಿಂದ ದೇಶಕ್ಕೆ ರಕ್ಷಣೆ ಸಿಗಬೇಕೆಂದರೆ ಇವತ್ತು ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂಬ ಭಾವನೆ ದೇಶದ ಜನರಲ್ಲಿದೆ. ಅದಕ್ಕಾಗಿ ನನಗೆ ವಿಶ್ವಾಸವಿದೆ ಬಿಜೆಪಿ ಮೂರುನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ನಿಚ್ಚಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ. ಆಗ ಅವರು ದೇಶದ ಘನತೆಯನ್ನು ಎತ್ತಿ ಹಿಡಿಯಲಿದ್ದಾರೆ ಎಂಬುದು ನಮ್ಮ ವಿಶ್ವಾಸ.

ಈಗಿನ ಸ್ಥಿತಿಯಲ್ಲಿ ಮೋದಿ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಯಾಕೆಂದರೆ ಪ್ರತಿಪಕ್ಷಗಳು ಒಟ್ಟಾಗಿ ರಚಿಸಿರುವ ‘ಮಹಾ ಘಟಬಂಧನ್’ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು? ರಾಹುಲ್ ಗಾಂಧಿ ಅವರು ಪ್ರಧಾನಿ ಆಗುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಮಹಾಘಟಬಂಧನ್‍ದಲ್ಲಿ ಪ್ರಧಾನಿ ಆಗುವ ಮುಖಗಳೇ ಕಾಣಿಸುತ್ತಿಲ್ಲ. ಮೋದಿ ಸರಿಸಮಾನ ಅಲ್ಲ, ಅವರ ಹತ್ತಿರಕ್ಕೂ ಬಂದು ನಿಲ್ಲುವಂತಹ ಮುಖಗಳೇ ಕಾಣಿಸುತ್ತಿಲ್ಲ. ಅದಕ್ಕಾಗಿ ದೇಶದ ಅಭಿವೃದ್ಧಿಗಾಗಿ, ಭ್ರಷ್ಟಾಚಾರ ನಿಗ್ರಹಕ್ಕಾಗಿ ಈ ದೇಶಕ್ಕೆ ಮೋದಿ ಅನಿವಾರ್ಯ ಮತ್ತು ಅಗತ್ಯವಿದೆ.

ವಿರೋಧ ಪಕ್ಷವಾಗಿ ಯಾರು ಏನು ಬೇಕಾದರೂ ಮಾತನಾಡಬಹುದು. ಮೋದಿಯವರ ವೈಫಲ್ಯಗಳನ್ನು ಯಾರಿಗೂ ಪಟ್ಟಿ ಮಾಡಲಾಗುತ್ತಿಲ್ಲ. ಮೋದಿಯವರಿಂದ ಇಂಥದ್ದರಲ್ಲಿ ನಷ್ಟವಾಗಿದೆ, ಇಂಥ ಹಾನಿಯಾಗಿದೆ ಎಂದು ಹೇಳುವುದು ಯಾವುದಿದೆ, ಒಂದೂ ಕಾಣಿಸುತ್ತಿಲ್ಲ. ನೋಟ್ ಬ್ಯಾನ್ ದೇಶಕ್ಕೆ ಅನಿವಾರ್ಯವಾಗಿತ್ತು. ಕಾಶ್ಮಿರದಲ್ಲಿ ಇಂದು ಭಯೋತ್ಪಾದನೆಯನ್ನು ನಿಲ್ಲಿಸಲು ನೋಟ್ ಬ್ಯಾನ್‍ನಿಂದ ಯಶಸ್ವಿಯಾಗಿದೆ. ಭಾರತದ ನೋಟುಗಳನ್ನು ಪ್ರಿಂಟ್ ಮಾಡಿ ಕಳ್ಳರ ಜಾಲವು ಕಳ್ಳಮಾರ್ಗದಲ್ಲಿ ನಮ್ಮ ದೇಶಕ್ಕೆ ತಂದು ಚಲಾವಣೆ ಮಾಡುತ್ತಿತ್ತು. ಇದೆಲ್ಲವೂ ನೋಟ್ ಬ್ಯಾನ್ ಮಾಡಿದ ನಂತರ ನಿಂತು ಹೋಯಿತು. ಹಾಗಾಗಿ ನೋಟ್ ಬ್ಯಾನಿನಿಂದ ದೇಶಕ್ಕೆ ಲಾಭವಾಗಿದೆಯೇ ಹೊರತು ನಷ್ಟವಾಗಿಲ್ಲ. ನಷ್ಟ ಮಾಡುವಂತಹ ಕೆಲಸವನ್ನು ಮೋದಿಯವರು ಎಂದೂ ಮಾಡಿಲ್ಲ.

ಫಸಲ್‍ಬಿಮಾ ಯೋಜನೆಯಡಿ ರಾಜ್ಯದ 11 ಸಾವಿರ ಕೋಟಿ ರೈತರಿಗೆ ಲಾಭವಾಗಿದೆ. ಹನಿ ನೀರಾವರಿಗೆ ಶೇಕಡಾ 90ರಷ್ಟು ಸಬ್ಸಿಡಿ ಕೊಡಲಾಗುತ್ತಿದೆ. ಮೂನ್ನೂರು ರೂಪಾಯಿಗೆ ಸಿಗುವ ಔಷಧಿ ಇಂದು ಜನರಿಕ್ ಔಷಧಿ ಮಳಿಗೆಯಲ್ಲಿ 10-15 ರೂಪಾಯಿಗೆ ಸಿಗುತ್ತಿದೆ. ಸ್ಟೆಂಟ್‍ಗಳ ಬೆಲೆಯನ್ನೂ ಕಡಿಮೆ ಮಾಡಲಾಗಿದೆ. ಶಿಕ್ಷಣಕ್ಕೆ ಆದ್ಯತೆ ಕೊಟ್ಟಿದ್ದಾರೆ.

ಜಿಎಸ್ಟಿಯಿಂದ ದೇಶಕ್ಕೆ ಮುಂದಿನ ದಿನಗಳಲ್ಲಿ ಲಾಭವಾಗಲಿದೆ. ಯಾಕೆಂದರೆ ಮೊದಲು ಒಂದೊಂದು ರಾಜ್ಯಗಳಲ್ಲಿ ಒಂದೊಂದು ತೆರಿಗೆ ಇದ್ದವು. ಜಿ.ಎಸ್.ಟಿ. ಜಾರಿಗೊಳಿಸಿದ ಮೇಲೆ ‘ಒಂದು ದೇಶ, ಒಂದೇ ತೆರಿಗೆ’ ಎನ್ನುವಂತಾಗಿದೆ. ಇದಕ್ಕೆ ನಮ್ಮ ಉದ್ಯಮಿಗಳು ಹೊಂದಿಕೊಳ್ಳಬೇಕು. ಮೊದಲು ಎಲ್ಲ ಅಂಗಡಿಯವರು ಇದನ್ನು ಹೇಗೆ ಲೆಕ್ಕ ಇಡುವುದು ಎನ್ನುತ್ತಿದ್ದರು. ಈಗ ಜಿ.ಎಸ್.ಟಿ. ಸರಳವಾಗಿದೆ. ನಲವತ್ತು ಲಕ್ಷದವರೆಗೆ ವ್ಯವಹಾರ ಮಾಡುವವರು ಇದರಲ್ಲಿ ಬರುವುದಿಲ್ಲ ಎಂದು ಹೇಳಲಾಗಿದೆ. ಹಾಗಾಗಿ ಸುಧಾರಿತ ಕ್ರಮಗಳನ್ನು ಜಿ.ಎಸ್.ಟಿ.ಯಲ್ಲಿ ತೆಗೆದುಕೊಳ್ಳಲಾಗಿದೆ. ಇದರಿಂದ ಜಿ.ಡಿ.ಪಿ. ಕೂಡ ದೊಡ್ಡ ಮಟ್ಟದಲ್ಲಿ ಏರಿಕೆಯಾಗಲಿದೆ. ಈಗ ಆರ್ಥಿಕವಾಗಿ ಆರನೇ ಸ್ಥಾನದಲ್ಲಿರುವ ನಾವು ಮುಂದಿನ ಐದು ವರ್ಷಗಳಲ್ಲಿ ಎರಡು ಅಥವಾ ಮೂರನೇ ಸ್ಥಾನಕ್ಕೆ ಏರುತ್ತೇವೆ.

ನರೇಂದ್ರ ಮೋದಿಯವರು ಪೊರಕೆ ಹಿಡಿದುಕೊಂಡರೆ ದೇಶ ಸ್ವಚ್ಚವಾಗಲಿದೆಯೇ ಎಂದು ಪ್ರತಿಪಕ್ಷಗಳವರು ಕೇಳಿದರು. ಈ ದೇಶದಲ್ಲಿ 8 ಕೋಟಿಗೂ ಅಧಿಕ ಶೌಚಾಲಯಗಳನ್ನು ಮೋದಿಯವರು ನಿರ್ಮಾಣ ಮಾಡಿದರು. ಲಕ್ಷಾಂತರ ಕೋಟಿ ಹಣವನ್ನು ಇದಕ್ಕೆ ವ್ಯಯ ಮಾಡಿದ್ದಾರೆ. ಗ್ರಾಮೀಣ ಬಡ ಮಹಿಳೆಯರು ಅಡಿಗೆ ಮಾಡುವಾಗ ಕಣ್ಣೀರು ಹಾಕುತ್ತಿದ್ದರು. ಅವರ ಕಣ್ಣೀರು ಒರೆಸುವ ಕೆಲಸವನ್ನು ಮಾಡಲಾಗಿದೆ. ಉಜ್ವಲ ಗ್ಯಾಸ ಯೋಜನೆಯಡಿ 7 ಕೋಟಿ ಜನರಿಗೆ ಗ್ಯಾಸ್ ದೊರತಿದೆ. ಫಸಲ್‍ಬಿಮಾ ಯೋಜನೆಯಡಿ ರಾಜ್ಯದ 11 ಸಾವಿರ ಕೋಟಿ ರೈತರಿಗೆ ಲಾಭವಾಗಿದೆ. ಹನಿ ನೀರಾವರಿಗೆ ಶೇಕಡಾ 90ರಷ್ಟು ಸಬ್ಸಿಡಿ ಕೊಡಲಾಗುತ್ತಿದೆ. ಮೂನ್ನೂರು ರೂಪಾಯಿಗೆ ಸಿಗುವ ಔಷಧಿ ಇಂದು ಜನರಿಕ್ ಔಷಧಿ ಮಳಿಗೆಯಲ್ಲಿ 10-15 ರೂಪಾಯಿಗೆ ಸಿಗುತ್ತಿದೆ. ಸ್ಟೆಂಟ್‍ಗಳ ಬೆಲೆಯನ್ನೂ ಕಡಿಮೆ ಮಾಡಲಾಗಿದೆ. ಶಿಕ್ಷಣಕ್ಕೆ ಆದ್ಯತೆ ಕೊಟ್ಟಿದ್ದಾರೆ. ಹೆಚ್ಚು ಕಾಲೇಜುಗಳಾಗಿವೆ. ಹೆಚ್ಚು ಐಐಟಿಗಳನ್ನು ತೆರೆಯಲಾಗಿದೆ. ಹೀಗೆ ಬಡವ ಬದುಕಲಿಕ್ಕೆ ಬೇಕಾದ ಎಲ್ಲಾ ಅನುಕೂಲಗಳನ್ನು ನರೇಂದ್ರ ಮೋದಿ ಸರಕಾರ ಮಾಡಿದೆ.

ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುವುದು ದೇಶದ ಹಿತದೃಷ್ಟಿಯಿಂದ ಅನಿವಾರ್ಯ. ಕಡುಬಡವರು ಈ ದೇಶದ ಪ್ರಧಾನಿ ಆಗಬಹುದೆಂಬುದನ್ನು ಭಾರತೀಯ ಜನತಾ ಪಕ್ಷ ದೇಶಕ್ಕೆ ತೋರಿಸಿಕೊಟ್ಟಿದೆ. ಮೋದಿಯವರು ಬಡತನದಿಂದ ಮೇಲೆ ಬಂದು ಪ್ರಧಾನಿಯಾಗಿದ್ದಲ್ಲದೆ ಪ್ರಪಂಚವನ್ನು ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ.

*ಲೇಖಕಿ ಬಿಜೆಪಿ ಪಕ್ಷದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಅಭ್ಯರ್ಥಿ.

Leave a Reply

Your email address will not be published.