ದೇಶ ತಿಳಿಯಬಯಸುತ್ತದೆ ಅರ್ನಬ್ ಮಾಡಿದ್ದೇನು?

-ಎo.ಕೆ.ಆನoದರಾಜೇ ಅರಸ್

ಈ ಮಹಾನ್ ಮಾಧ್ಯಮ ನಾಯಕ ಈಗ ಸಾರ್ವಜನಿಕ ಕಟಕಟೆಯಲ್ಲಿ ನಿಂತಿದ್ದು, ನ್ಯಾಯಾಂಗದ ಕಟಕಟೆಯಲ್ಲಿ ನಿಲ್ಲುವ ದಿನಗಳು ದೂರವಿಲ್ಲ. ಸುದ್ದಿ ಮಾಧ್ಯಮದ ಇಂತಹದೊAದು ಬೆಳವಣಿಗೆ ಮಾಧ್ಯಮ ವೃತ್ತಿಪರರನ್ನು ಕಂಗೆಡಿಸಿದೆ.

“ಎಲ್ಲದಕ್ಕಿಂತ ಹೆಚ್ಚಾಗಿ, ಪ್ರಪಂಚದಲ್ಲಿ ಎಲ್ಲೇ ಆಗಲಿ ಯಾರದೇ ವಿರುದ್ಧ ಅನ್ಯಾಯವಾಗುತ್ತಿದ್ದರೆ ಅದನ್ನು ಆಳವಾಗಿ ಅನುಭವಿಸುವ ಸಾಮರ್ಥ್ಯವನ್ನು ಹೊಂದಿರಿ.”

-ಚೆ ಗೆವಾರ

ದೇಶದ ಪ್ರಖ್ಯಾತ ಸುದ್ದಿ ನಿರೂಪಕ ಅರ್ನಬ್ ಗೋಸ್ವಾಮಿ ಈಗ ಹಾಟ್ ಸೀಟ್‌ನಲ್ಲಿದ್ದಾರೆ. ಅರ್ನಬ್ ಅವರ ಜೀವನ ಹಾಗೂ ವ್ಯಕ್ತಿತ್ವ ವಿರೋಧಾಭಾಸಗಳಿಂದ ತುಂಬಿದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. ಅವರ ಮನೆಯಲ್ಲಿ ಅರ್ಜೆಂಟೀನಾದ ಮಾರ್ಕಿ್ಸಸ್ಟ್ ಕ್ರಾಂತಿಕಾರಿ ಚೆ ಗೆವೆರಾ ಅವರ ಭಾವಚಿತ್ರವಿದೆ. ಅವರ ಪುತ್ರನಿಗೆ ಚೆ ಗೆವೆರಾ ಅವರ ಹೆಸರನಿಟ್ಟಿದ್ದಾರೆ. ಆದರೆ ಅವರು ಅಕ್ರಮವಾಗಿ ಅವರ ವಾಹಿನಿಯ ಟಿಆರ್‌ಪಿ ಹೆಚ್ಚಿಸಿಕೊಳ್ಳುತ್ತಿದ್ದಾಗ, ಅದರಿಂದ ಇತರೇ ಸುದ್ದಿವಾಹಿನಿಗಳಿಗೆ ಆಗುತ್ತಿರುವ ಅನ್ಯಾಯದ ಯಾವುದೇ ಆಳವಾದ ಅನುಭವ ಅವರಿಗಾಗುತ್ತಿರಲಿಲ್ಲವೇ? ಅಥವಾ ದೇಶದ ಜನರಿಗೆ ಸುಳ್ಳು ಹೇಳುತ್ತಿದ್ದೇನೆಂದು ಅನಿಸುತ್ತಿರಲಿಲ್ಲವೇ? ಛೇ, ತನಗೆ ಎಂತಹ ಹಿಂಬಾಲಕರಿದ್ದಾರೆAದು ಚೆ ಗೆವಾರ ತನ್ನ ಗೋರಿಯಲ್ಲಿ ಹೊರಳಾಡುತ್ತಿರಬಹುದು.

ತನ್ನ ಬಟ್ಟೆಯಷ್ಟು ಬೆಳ್ಳಗೆ ಮತ್ಯಾರದ್ದೂ ಇಲ್ಲ ಅನ್ನೋ ಹಾಗೆ ಪ್ರತಿ ರಾತ್ರಿ ಇಡೀ ದೇಶವನ್ನೇ ಪ್ರಶ್ನಿಸುತ್ತಿದ್ದ ದೇಶಭಕ್ತ ಅರ್ನಬ್ ಗೋಸ್ವಾಮಿ ಈಗ ಉತ್ತರಿಸಬೇಕಾಗಿದೆ. ರಿಪಬ್ಲಿಕ್ ಟಿವಿ ಸುದ್ದಿವಾಹಿನಿಯ ಟಿಆರ್‌ಪಿ (ಟಾರ್ಗೆಟ್/ಟೆಲಿವಿಷನ್ ರೇಟಿಂಗ್ ಪಾಯಿಂಟ್) ಹೆಚ್ಚಿಸಲು ಬಾರ್ಕ್ನೊಂದಿಗೆ ಶಾಮೀಲಾಗಿದ್ದರು, ತಮ್ಮ ರಾಜಕೀಯ ವಲಯದ ಪ್ರಭಾವಗಳನ್ನು ವೈಯಕ್ತಿಕ ಹಾಗೂ ತಮ್ಮ ಸುದ್ದಿ ವಾಹಿನಿಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಹಾಗೂ ದೇಶದ ಭದ್ರತೆಯೊಂದಿಗೆ ರಾಜಿಯಾಗಿದ್ದಾರೆ ಎಂಬ ಅಂಶಗಳು ಅವರು ಬಾರ್ಕ್ನ ಮಾಜಿ ಮುಖ್ಯಸ್ಥರೊಂದಿಗೆ ನಡೆಸಿರುವ ವಾಟ್ಸ್ಅಪ್ ಚಾಟ್‌ಗಳಲ್ಲಿ ಗೋಚರಿಸಿವೆ.

ಬಾರ್ಕ್ ಮಾಜಿ ಮುಖ್ಯಸ್ಥರು ಎರಡು ಬಾರಿ ಅರ್ನಬ್ ಗೋಸ್ವಾಮಿ ತಮಗೆ ಹಣ ನೀಡಿದ್ದರೆಂದು ಪೊಲೀಸರಿಗೆ ತಾವು ನೀಡಿರುವ ತಪ್ಪೊಪ್ಪಿಗೆಯಲ್ಲಿ ಹೇಳಿದ್ದಾರೆ. ಈ ಹರಟೆಗಳು ಒಂದೆರಡು ಸಾಲುಗಳನ್ನು ಹೊಂದಿಲ್ಲ. ಅರ್ನಬ್‌ನ ವ್ಯಕ್ತಿತ್ವದ ಎಲ್ಲಾ ಮುಖಗಳನ್ನು ಬಯಲು ಮಾಡುವ ನೂರಾರು ಪುಟಗಳ ವಾಟ್ಸ್ಅಪ್ ಚಾಟ್‌ಗಳು ಈಗ ಬಹಿರಂಗವಾಗಿವೆ. ಅರ್ನಬ್ ಎಂತಹ ದೇಶಭಕ್ತ, ಸಜ್ಜನ, ಸುಸಂಸ್ಕೃತ ವ್ಯಕ್ತಿಯೆಂಬುದನ್ನು ಈಗ ದೇಶ ತಿಳಿಯಬಯಸುತ್ತದೆ.

ಈಗಾಗಲೇ ಬಹಿರಂಗವಾಗಿರುವ ವಾಟ್ಸ್ಅಪ್ ಚಾಟ್‌ಗಳಿಗೆ ಸಂಬOಧಿಸಿದOತೆ ಅರ್ನಬ್ ಗೋಸ್ವಾಮಿ ಇದುವರೆಗೆ ತುಟಿ ಬಿಚ್ಚಿಲ್ಲ. ಎಲ್ಲರನ್ನೂ ಎಲ್ಲಾ ಸಮಯದಲ್ಲೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಸರಳ ಸತ್ಯ ಗೊತ್ತಿಲ್ಲದ ದಡ್ಡರೇನಲ್ಲ ಅರ್ನಬ್ ಗೋಸ್ವಾಮಿ. ಆದರೀಗ ಅವರ ಮುಖವಾಡ ಕಳಚಿಬಿದ್ದಿದೆ.

ಬಾರ್ಕ್ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಇಂಡಿಯಾ – ಕನ್ನಡದಲ್ಲಿ ಪ್ರಸಾರ ಪ್ರೇಕ್ಷಕರ ಸಂಶೋಧಾನ ಪರಿಷತ್ ಎಂದು ಕರೆಯಬಹುದು) ಪ್ರಸಾರವಾಹಿನಿಗಳು, ಜಾಹೀರಾತುದಾರರು ಹಾಗೂ ಜಾಹೀರಾತು ಮತ್ತು ಮಾಧ್ಯಮ ಸಂಸ್ಥೆಗಳನ್ನು ಪ್ರತಿನಿಧಿಸುವ ಮಧ್ಯಸ್ಥಗಾರರು ಸಂಯುಕ್ತವಾಗಿ ಸ್ಥಾಪಿಸಿರುವ ಸಂಸ್ಥೆ. ಅತ್ಯಂತ ಸಮರ್ಥ ತಾಂತ್ರಿಕ ಸಬಲತೆಗಳೊಂದಿಗೆ ನಿರ್ಮಾಣಗೊಂಡಿರುವ ಈ ಸಂಸ್ಥೆಯು ಪಾರದರ್ಶಕ, ನಿಖರ ಹಾಗೂ ಅಂತರ್ಗತ ಟಿವಿ ವೀಕ್ಷಕರ ಮಾಪನ ವ್ಯವಸ್ಥೆಯನ್ನು ಹೊಂದಿದೆ. ಬಾರ್ಕ್ ಒದಗಿಸುವ ಬೃಹತ್ ದತ್ತಾಂಶ ಹಾಗೂ ಒಳನೋಟಗಳ ಆಧಾರದ ಮೇಲೆ ಅತ್ಯಂತ ಕ್ರಿಯಾತ್ಮಕವಾಗಿರುವ ಹಾಗೂ ಬೆಳೆಯುತ್ತಿರುವ ಟಿವಿ ಕ್ಷೇತ್ರದಲ್ಲಿ ಮಾಧ್ಯಮದ ಖರ್ಚು ಹಾಗೂ ವಿಷಯವಸ್ತುಗಳ ಆಯ್ಕೆಯನ್ನು ನಿರ್ಧರಿಸಲಾಗುತ್ತಿದೆ.

ಇಂತಹ ಪ್ರಭಾವಿ ಸಂಸ್ಥೆಗೆ ಕೆಲವು ತಿಂಗಳುಗಳ ಮುನ್ನ, ಕೆಲವು ವರ್ಷಗಳ ಕಾಲ ಪಾರ್ಥೊ ದಾಸಗುಪ್ತ ಮುಖ್ಯಸ್ಥರಾಗಿದ್ದರು. ಇವರು ಮ್ಯಾನೇಜ್‌ಮೆಂಟ್‌ನಲ್ಲಿ ಅಪಾರ ಅನುಭವವಿರುವ ವ್ಯಕ್ತಿ. ಗ್ರಾಹಕ ಸರಕುಗಳ ಕ್ಷೇತ್ರವು ಸೇರಿದಂತೆ ಮುದ್ರಣ ಹಾಗೂ ಟಿವಿ ಕ್ಷೇತ್ರಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಟೈಮ್ಸ್ ನೌ,ಫ್ಯೂಚರ್ ಮೀಡಿಯಾ, ದಿ ಎಕನಾಮಿಕ್ ಟೈಮ್ಸ್ ಹಾಗೂ ಟೈಮ್ಸ್ ಮಲ್ಟಿಮೀಡಿಯಾ ಸಂಸ್ಥೆಗಳಲ್ಲಿ ಮ್ಯಾನೇಜ್‌ಮೆಂಟ್ ತಂಡಗಳನ್ನು ಬೆಳೆಸಿ ಮುನ್ನೆಡೆಸಿದ್ದಾರೆ. ಬಾರ್ಕ್ನಲ್ಲಿ ಇವರ ವಾರ್ಷಿಕ ಸಂಬಳ ಸುಮಾರು ನಾಲ್ಕು ಕೋಟಿ ರೂಪಾಯಿಗಳು. ದಾಸಗುಪ್ತ ಹಾಗೂ ಅರ್ನಬ್ ಇವರಿಬ್ಬರ ಸಂಬAಧ ಟೈಮ್ಸ್ ನೌ ಸಂಸ್ಥೆಯಲ್ಲಿ ಅವರು ಸಹೋದ್ಯೋಗಿಗಳಾಗಿದ್ದ ಸಂದರ್ಭದಲ್ಲಿ ಆರಂಭವಾಗಿರುವ ಸಾಧ್ಯತೆಗಳುಂಟು. ಆ ನಂಟು ದಾಸಗುಪ್ತ ಬಾರ್ಕ್ನ ಮುಖ್ಯಸ್ಥರಾದ ನಂತರ ಇನ್ನಷ್ಟು ಪುಷ್ಟಿಗೊಂಡಿದೆ.

ಅರ್ನಬ್ ತಮ್ಮ ರಿಪಬ್ಲಿಕ್ ಟಿವಿ ವಾಹಿನಿಯನ್ನು ಆರಂಭದಿAದ ಎಂದೂ ಪಕ್ಷಾತೀತವಾಗಿ ನಡೆಸಿರಲಿಲ್ಲವೆಂಬುದು ಜಗಜ್ಜಾಹೀರಾದ ವಿಷಯವಾಗಿತ್ತು. ಇದಕ್ಕೆ ಸಂಬAಧಿಸಿದAತೆ ಅವರಿಗೆ ಯಾವುದೇ ದ್ವಂದ್ವವಿರಲಿಲ್ಲ. ಹಲವಾರು ಪಕ್ಷಗಳ ಮುಖಂಡರು ಈ ವಾಹಿನಿಯ ಚರ್ಚೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಕೆಲವರು ಮುಕ್ತವಾಗಿ ಬಹಿಷ್ಕರಿಸಿದ್ದರು. ಇಂಗ್ಲಿಷ್ ವಾಹಿನಿಗಳ ಪೈಕಿ ರಿಪಬ್ಲಿಕ್ ಟಿವಿಯಷ್ಟು ಏಕಪಕ್ಷೀಯವಾದ ವಾಹಿನಿ ಮತ್ತೊಂದಿರಲಿಲ್ಲ. ಅದು ಕೇವಲ ಬಿಜೆಪಿ ಪಕ್ಷದ ಮುಖವಾಣಿಯಾಗಿರಲಿಲ್ಲ. ಅಧಿಕೃತ ಸರ್ಕಾರಿ ವಾಹಿನಿಯ ವಿಷಪೂರಿತ ಆವೃತ್ತಿಯಂತೆ ವರ್ತಿಸುತಿತ್ತು. ಇಂತಹದ್ದೊOದು ಬೆಳವಣಿಗೆಯೇ ಆಂಗ್ಲ ಸುದ್ದಿ ವಾಹಿನಿಗಳ ಇಡೀ ಸಮೂಹಕ್ಕೆ ಮುಜುಗರ ಉಂಟು ಮಾಡಿತ್ತು. ಇಂಗ್ಲಿಷ್ ಸುದ್ದಿವಾಹಿನಿಗಳ ಪೈಕಿ ಅತ್ಯಂತ ಪೀತವಾಹಿನಿ  ಇದಾಗಿತ್ತು.

ಸುಶಾಂತ್‌ಸಿOಗ್ ರಜಪೂತ್‌ನ ಆತ್ಮಹತ್ಯೆ ವಿಷಯದಲ್ಲಿ ಅರ್ನಬ್ ಗೋಸ್ವಾಮಿ ಮುಂಬೈ ಪೊಲೀಸರ ವಿರುದ್ಧ ಅವಿರತ ಅಭಿಯಾನ ಆರಂಭಿಸಿದ್ದರು. ಇದಕ್ಕೆ ರಾಜಕೀಯ ಲೇಪವಿತ್ತು. ಮುಂಬೈ ಪೊಲೀಸರು ಇವರ ವಿರುದ್ಧ ತಿರುಗಿಬಿದ್ದಿದ್ದರು. ರಿಪಬ್ಲಿಕ್ ಟಿವಿ ಸಂಸ್ಥೆಗೆ ಒಳಾಂಗಣ ವಿನ್ಯಾಸಕ್ಕೆ ಸಂಬOಧಿಸಿದOತೆ ಕೆಲಸ ಮಾಡಿದ್ದ ವಾಸ್ತುಶಿಲ್ಪಿ ಅನ್ವಯ್ ನಾಯಕ್ ಹಾಗೂ ಅವರ ತಾಯಿ ಕುಮುದ್ ನಾಯಕ್ 2018ರಲ್ಲಿ ಅವರ ಆಲಿಬಾಗ್ ಬಂಗಲೆಯಲ್ಲಿ ಮೃತಪಟ್ಟಿರುವುದು ಕಂಡುಬರುತ್ತದೆ. ಅನ್ವಯ್ ನಾಯಕ್ ತಮ್ಮ ಆತ್ಮಹತ್ಯೆ ಚೀಟಿಯಲ್ಲಿ ತಮ್ಮ ನಿರ್ಧಾರಕ್ಕೆ ಅರ್ನಬ್ ಕಾರಣವೆಂದು ದೂಷಿಸಿರುತ್ತಾರೆ. ಈ ಪ್ರಕರಣದಲ್ಲಿ ಅರ್ನಬ್ ಅವರನ್ನು ಬಂಧಿಸಲಾಗುತ್ತದೆ. ಅರ್ನಬ್‌ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಜಾಮೀನು ದೊರೆತು, ಜೈಲಿನಿಂದ ಹೊರಬಂದಾಗ ಅವರಿಗೆ ಅದ್ಧೂರಿ ಸ್ವಾಗತ ಸಿಗುತ್ತದೆ. ರಿಪಬ್ಲಿಕ್ ಚಾನಲ್‌ನಲ್ಲಿ ಅರ್ನಬ್ ಅವರನ್ನು ಮಹಾನ್ ಸಾಧನೆ ಮಾಡಿದ ಮಹಾನ್ ನಾಯಕನೆಂಬOತೆ ಬಿಂಬಿಸಲಾಗುತ್ತದೆ.

ಈ ಮಹಾನ್ ಮಾಧ್ಯಮ ನಾಯಕ ಈಗ ಸಾರ್ವಜನಿಕ ಕಟಕಟೆಯಲ್ಲಿ ನಿಂತಿದ್ದು, ನ್ಯಾಯಾಂಗದ ಕಟಕಟೆಯಲ್ಲಿ ನಿಲ್ಲುವ ದಿನಗಳು ದೂರವಿಲ್ಲ. ಸುದ್ದಿ ಮಾಧ್ಯಮದ ಇಂತಹದೊOದು ಬೆಳವಣಿಗೆ ಮಾಧ್ಯಮ ವೃತ್ತಿಪರರನ್ನು ಕಂಗೆಡಿಸಿದೆ. ಅರ್ನಬ್ ಗೋಸ್ವಾಮಿ ವೃತ್ತಿಯಲ್ಲಿ ಅತೀ ಬೇಗನೆ ಎತ್ತರಕ್ಕೆ ಬೆಳೆದ ವ್ಯಕ್ತಿ. ದೆಹಲಿಯ ಪ್ರತಿಷ್ಠಿತ ಹಿಂದೂ ಕಾಲೇಜಿನಲ್ಲಿ, ನಂತರ ಸೇಂಟ್ ಆಂಥೋನಿ ಹಾಗೂ ಆಕ್ಸ್ಫರ್ಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸ. ಸಿಡ್ನಿ ಸಸೆಕ್ಸ್ ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿಸಿಟಿಂಗ್ ಫೆಲೋ. ಟೆಲಿಗ್ರಾಫ್‌ನಲ್ಲಿ ವೃತ್ತಿ ಆರಂಭ. ಒಂದು ವರ್ಷದ ನಂತರ ಎನ್‌ಡಿಟಿವಿ ಸೇರ್ಪಡೆ. ಅಲ್ಲಿ ಹತ್ತು ವರ್ಷಗಳ ಯಶಸ್ವಿ ವೃತ್ತಿಯ ಬಳಿಕ, 2006ರಲ್ಲಿ ಟೈಮ್ಸ್ ನೌನಲ್ಲಿ ಮುಖ್ಯ ಸಂಪಾದಕರಾಗಿ ಸೇರ್ಪಡೆ. ಅಲ್ಲಿ ದಶಕದ ಕಾಲ ಉತ್ತುಂಗದಲ್ಲಿ ಮೆರೆದವರು ಅರ್ನಬ್ ಗೋಸ್ವಾಮಿ.

ಅರ್ನಬ್ ಕೌಟುಂಬಿಕ ಹಿನ್ನೆಲೆ ಸಹ ಬಲವಾದದ್ದೇ. ತಂದೆ ಸೈನ್ಯದಲ್ಲಿ ಕರ್ನಲ್ ಆಗಿದ್ದರು. ನಿವೃತ್ತಿಯ ನಂತರ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿದ್ದರು. ಬರಹಗಾರರೂ ಸಹ ಆದ ಇವರು ಅಸ್ಸಾಂ ಸಾಹಿತ್ಯ ಸಭಾ ಪ್ರಶಸ್ತಿಯ ಪುರಸ್ಕöÈತರು. ತಾಯಿ ಬರಹಗಾರ್ತಿ. ಇವರ ತಾಯಿಯ ತಂದೆ ಅಸ್ಸಾಂನಲ್ಲಿ ಸಿಪಿಐ ಪಕ್ಷದಲ್ಲಿದ್ದು ವಿಧಾನಸಭೆಯ ಸದಸ್ಯರಾಗಿದ್ದರು ಹಾಗೂ ಹಲವಾರು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿದ್ದರು. ಇಂತಹ ಪ್ರಭಾವಿ ಕೌಟಂಬಿಕ ಹಿನ್ನೆಲೆ ಹಾಗೂ ಯಶಸ್ವಿ ವೃತ್ತಿ ಹಿನ್ನೆಲೆಯಿಂದ ಬಂದ ಅರ್ನಬ್ ಗೋಸ್ವಾಮಿ ಜಾರಿಬಿದ್ದಿದ್ದೇಕೆ?

ಈ ಟಿಆರ್‌ಪಿ ಹಗರಣದಲ್ಲಿ ಈಗಾಗಲೇ ಮುಂಬೈ ಪೊಲೀಸರು ಸುಮಾರು 500 ಪುಟಗಳ ಚಾರ್ಜ್ಶೀಟ್ ದಾಖಲಿಸಿದ್ದಾರೆೆ. ಟಿಆರ್‌ಪಿ ಹೆಚ್ಚಳಕ್ಕೆ ಸಂಬOಧಿಸಿದOತೆ ತಮ್ಮ ‘ಸ್ನೇಹಿತ’ ಅರ್ನಬ್ ಗೋಸ್ವಾಮಿಗೆ ಸಹಾಯ ಮಾಡಲು ಪಾರ್ಥೊ ದಾಸಗುಪ್ತ ಹೇಗೆ ಅಧಿಕೃತ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡರು ಎಂಬುದನ್ನು ಈ ಚಾರ್ಜ್ಶೀಟ್ ಬಹಿರಂಗಪಡಿಸುತ್ತದೆ. ಈ ಹಗರಣದಲ್ಲಿ ಅರ್ನಬ್ ಹಾಗೂ ದಾಸಗುಪ್ತ ಹೊರತು ಪಡಿಸಿ ಬಾರ್ಕ್ ಹಾಗೂ ರಿಪಬ್ಲಿಕ್ ಟಿವಿಯ ಹಲವು ಹಿರಿಯ ಅಧಿಕಾರಿಗಳು ಸಹ ಕೈಜೋಡಿಸಿದ್ದಾರೆ. ಕೆಲವು ವರದಿಗಳ ಪ್ರಕಾರ ಈ ಹರಟೆಗಳು ದಾಸಗುಪ್ತ ಹಾಗೂ ಅರ್ನಬ್ ನ್ಯಾಯಾಂಗದ ಮೇಲೆ ಸಹ ಹೇಗೆ ಪ್ರಭಾವ ಬೀರಲು ಯತ್ನಿಸಿದರೆಂಬುದನ್ನು ಬಯಲು ಪಡಿಸಿವೆ. ಬಾರ್ಕ್ನಲ್ಲಿ ಅರ್ನಬ್ ಗೋಸ್ವಾಮಿ ಪ್ರಕರಣಕ್ಕೂ ಮುನ್ನ ಹಲವಾರು ಹಗರಣಗಳು ನಡೆದಿರುವ ಸಾಧ್ಯತೆಯನ್ನು ಈ ಸಂದರ್ಭದಲ್ಲಿ ಅಲ್ಲಗಳೆಯಲು ಸಾಧ್ಯವಿಲ್ಲ.

ಒಂದು ಹರಟೆಯಲ್ಲಿ ದಾಸಗುಪ್ತ ಅವರು ಬಾರ್ಕ್ನ ಮಾಜಿ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾದ ರೋಮಿಲ್ ರಾಮ್‌ಗರ್ಹಿಯ ಅವರಿಗೆ ಟೈಮ್ಸ್ ನೌನ ಕೊಲ್ಕತ್ತಾ ಟಿಆರ್‌ಪಿ ಕಡಿಮೆ ತೋರಿಸಲು ಹೇಳುತ್ತಾರೆ. ಇದರ ಉದ್ದೇಶ ರಿಪಬ್ಲಿಕ್ ಟಿವಿಗೆ ಲಾಭ ಮಾಡಿಕೊಡುವುದಾಗಿರುತ್ತಾರೆ. ಏಪ್ರಿಲ್ 19, 2019, ರಂದು ರೊಮಿಲ್ ರಾಮ್‌ಗರ್ಹಿಯ ಹೇಳುತ್ತಾರೆ, “ನಾವು ದೆಹಲಿ ಲ್ಯಾಂಡಿAಗ್ ಸಂಖ್ಯೆಯನ್ನು ನಿಯಂತ್ರಿಸುತ್ತಿರುವುದರಿAದ ತಮಿಳುನಾಡಿನಲ್ಲಿ (ರಿಪಬ್ಲಿಕ್ ಟಿವಿಯ ಟಿಆರ್‌ಪಿ ಸಂಖ್ಯೆ) ಕಡಿಮೆಯಾಗಿದೆ,” 2017, ಆಗಸ್ಟ್ 29ರ ಚಾಟ್‌ನಲ್ಲಿ ಪಾರ್ಥೊ ದಾಸಗುಪ್ತ ರೊಮಿಲ್‌ಗೆ ನಂಬರ್ ಒಕೆನಾ? ಎಂದು ಕೇಳುತ್ತಾರೆ. ಇದಕ್ಕೆ ಉತ್ತರವಾಗಿ ರೋಮಿಲ್ “ಹೌದು, ಟೈಮ್ಸ್ ನೌ ಹಾಗೂ ರಿಪಬ್ಲಿಕ್ ನಡುವಿನ ಅಂತರ ಹೆಚ್ಚಾಗಿದೆ’ ಎಂದುತ್ತರಿಸುತ್ತಾರೆ.

ಅಕ್ವಿಸರಿ ಸಂಸ್ಥೆಯ ಆಡಿಟಿಂಗ್

ಕಳೆದ ಮಾರ್ಚ್ನಲ್ಲಿ ಬಾರ್ಕ್ ಸಂಸ್ಥೆಯು ಮುಂಬೈ-ಮೂಲದ ಅಕ್ವಿಸರಿ ರಿಸ್ಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಬಾರ್ಕ್ ಸಂಸ್ಥೆಯ ಕಾರ್ಯಾಚರಣೆಗಳ ಫೊರೆನ್ಸಿಕ್ ಆಡಿಟ್ ಮಾಡಲು ಸಂಪರ್ಕಿಸುತ್ತದೆ. ಬಾರ್ಕ್ನ ಮಾಜಿ ಅಧಿಕಾರಿಗಳಾದ ಸಿಇಒ ಪಾರ್ಥೊ ದಾಸಗುಪ್ತ, ಸಿಓಓ ರೊಮಿಲ್ ರಾಮಗರ್ಹಿಯಾ, ವೆಂಕಟ್ ಸುಜಿತ್ ಸಾಮ್ರಾಟ್ (ಹೆಡ್ ಆಫ್ ಪ್ರಾಡಕ್ಟ್ಸ್ ಫಾರ್ ಸೌಥ್), ಪೆಖಮ್ ಬಸು, ಉಪಾಧ್ಯಕ್ಷರು-ಸ್ಟಾçಟಜಿ, ದಕ್ಷಿಣ ವಲಯ ಮುಖ್ಯಸ್ಥರಾದ ರುಷಭ್ ಮೆಹ್ತಾ ಹಾಗೂ ಚೀಫ್ ಪೀಪಲ್ ಅಧಿಕಾರಿ ಹಾಗೂ ಮಾನವ ಸಂಪನ್ಮೂಲ ಮುಖ್ಯಸ್ಥ ಮನಷಿ ಕುಮಾರ್, 2016 ಹಾಗೂ 2019ರ ನಡುವೆ ಬಾರ್ಕ್ನ ನೀತಿನಿಯಮಗಳನ್ನು ಉಲ್ಲಂಘಿಸಿದರೆOದು, ಟಿಆರ್‌ಪಿಗಳನ್ನು ಬದಲಿಸಿದರೆಂದು ಹಾಗೂ ದುಬಾರಿ ಉಡುಗೊರೆಗಳನ್ನು ಖರೀದಿಸಲು ಕಂಪನಿಯ ಹಣವನ್ನು ದುರ್ಬಳಕೆ ಮಾಡಿಕೊಂಡರೆAದು ಅಕ್ವಿಸರಿ ಸಂಸ್ಥೆಯ ಫೊರೆನ್ಸಿಕ್ ಆಡಿಟ್ ಸಂಸ್ಥೆ ಬಹಿರಂಗಪಡಿಸಿದೆ.

ಈ ವರದಿಯ ಪ್ರಕಾರ ದಾಸಗುಪ್ತ ಟೈಮ್ಸ್ ನೌ ಹಾಗೂ ರಿಪಬ್ಲಿಕ್ ಟಿವಿ ಚಾನಲ್‌ಗಳ ಟಿಆರ್‌ಪಿ ಬದಲಾವಣೆಗಳ ಬಗ್ಗೆ ತಿಳಿದಿದ್ದರೆಂದು ಹೇಳಲಾಗಿದೆ. 2017 ರ ಜೂನ್‌ನಲ್ಲಿ ರೊಮಿಲ್ ಹಾಗೂ ಮೆಹ್ತಾ ವಿನಿಮಯ ಮಾಡಿಕೊಳ್ಳುವ ಇಮೇಲ್‌ಗಳಲ್ಲಿ ಈ ಕುರಿತು ಮಾಹಿತಿಯಿರುತ್ತದೆ. ಈ ಇಮೇಲ್‌ನಲ್ಲಿ ಮೆಹ್ತಾ ಹೀಗೆ ಬರೆಯುತ್ತಾರೆ, “ರಿಪಬ್ಲಿಕ್ ಟಿವಿ ಅಖಿಲ ಭಾರತ ಮಟ್ಟದಲ್ಲಿ ನಂ. 1 ಸ್ಥಾನದಲ್ಲಿದೆ. ಟೈಮ್ಸ್ ನೌ ಸಂಖ್ಯೆ ಕಡಿಮೆಯಾಗಿದೆ. ರಿಪಬ್ಲಿಕ್ ಟಿವಿ ಭಾರತ ಗ್ರಾಮೀಣ, ಮುಂಬೈ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ನಂ. 1 ಸ್ಥಾನದಲಿದೆ.” ರೊಮಿಲ್ ಈ ಇಮೇಲ್ ಅನ್ನು ದಾಸಗುಪ್ತ ಅವರಿಗೆ ಕಳುಹಿಸುತ್ತಾರೆ.

ಜುಲೈ 11, 2017, ರಂದು ದಾಸಗುಪ್ತ ಅವರಿಗೆ ಕಳುಹಿಸುವ ಇಮೇಲ್‌ನಲ್ಲಿ “ಟೈಮ್ಸ್ ನೌ, ಸಿಎನ್‌ಎನ್ – ನ್ಯೂಸ್ 18 ಅನ್ನು ಬದಲಾಯಿಸಲಾಗುತ್ತದೆ,” ಎಂದು ಬರೆಯುತ್ತಾರೆ. ಜುಲೈ 17 ರಂದು ಬರೆಯುವ ಮೇಲ್‌ನಲ್ಲಿ ‘ಟೈಮ್ಸ್ ನೌ ಅನ್ನು ಬದಲಿಸಲಾಗುತ್ತದೆ,” ಎಂದು ಬರೆಯುತ್ತಾರೆ. ಆಡಿಟ್ ವರದಿಯ ಪ್ರಕಾರ ಟೈಮ್ಸ್ ನೌನ 22ಕ್ಕೂ ಹೆಚ್ಚು ವರ್ಷದ ನೋಡುಗರ (ಇಂಪ್ರೆಷನ್ಸ್) ಸಂಖ್ಯೆಯನ್ನು ಇಳಿಸಲಾಗುತ್ತದೆ. ಆದರೆ ರಿಪಬ್ಲಿಕ್ ಟಿವಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇದರಿಂದ ರಿಪಬ್ಲಿಕ್ ಟಿವಿಯ ರೇಟಿಂಗ್ ಹೆಚ್ಚಾಗುತ್ತದೆ.

ಅರ್ನಬ್ ಗೋಸ್ವಾಮಿ ಗರಡಿಯಲ್ಲಿಯೇ ಪಳಗಿದ, ಈಗ ಟೈಮ್ಸ್ ನೌ ಸುದ್ದಿ ವಾಹಿನಿಯ ಮುಖ್ಯಸ್ಥೆಯಾಗಿರುವ ನವಿಕಾ ಕುಮಾರ್ ತಮ್ಮ ಎಂಟು ನಿಮಿಷಗಳ ಸ್ವಗತದಲ್ಲಿ ಅರ್ನಬ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಸುದ್ದಿ ಮಾಧ್ಯಮಕ್ಕೆ ಒಂದು ಲಕ್ಷ÷್ಮಣ ರೇಖೆಯಿರುತ್ತದೆ. ಅದನ್ನು ಅರ್ನಬ್ ಮೀರಿದ್ದಾರೆ ಎಂದು ಜರೆದಿದ್ದಾರೆ. ಯಶಸ್ಸಿನ ಬೆನ್ನೇರುತ್ತಾ ಮೌಲ್ಯಗಳನ್ನು ಅರ್ನಬ್ ಮರೆಯಬಾರದಿತ್ತು ಎಂದಿದ್ದಾರೆ.

ಅರ್ನಬ್ ಎದುರಿಸುತ್ತಿರುವ ಗುರುತರ ಆಪಾದನೆಗಳಲ್ಲಿ ಒಂದು ವಿಷಯ ರಾಷ್ಟಿçÃಯ ಭದ್ರತೆಗೆ ಸಂಬAಧಿಸಿದೆ. ಬಾಲಾಕೋಟ್ ವಿಮಾನದಾಳಿ ಬಗ್ಗೆ ಅರ್ನಬ್ ಗೋಸ್ವಾಮಿಗೆ ಮಾಹಿತಿ ಯಾರಿಂದ ಲಭ್ಯವಾಯಿತು? ಇದು ಅತ್ಯಂತ ಸೂಕ್ಷ÷್ಮ ಹಾಗೂ ಗೌಪ್ಯ ಮಾಹಿತಿ. ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಮಂತ್ರಿಯನ್ನು ಒಳಗೊಂಡAತೆ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿರುವ ಕೇವಲ ಬೆರಳಿಣಿಕೆಯಷ್ಟು ಜನರಿಗೆ ಮಾತ್ರ ತಿಳಿದಿರಬೇಕಾದ ವಿಷಯವಿದು. ಅರ್ನಬ್ ತಾನು ಪಾರ್ಥೊ ದಾಸಗುಪ್ತ ಅವರ ಜೊತೆ ಬಾಲಾಕೋಟ್ ವಿಮಾನದಾಳಿಗೆ ಎರಡು ದಿನಗಳ ಹಿಂದೆ ನಡೆಸಿದ ವಾಟ್ಸ್ಅಪ್ ಚಾಟ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

ಈ ಮಾಹಿತಿ ಒಬ್ಬ ಪತ್ರಕರ್ತನಿಗೆ ಮಾತ್ರ ದೊರಕುತ್ತದೆ. ಇದನ್ನು ಯಾವುದೇ ಹಂತದಲ್ಲಿ ಯಾವುದೇ ಉದ್ದೇಶಕ್ಕಾಗಿ ಬಯಲು ಮಾಡಿದರೂ ಅದು ದೇಶದ್ರೋಹಕ್ಕೆ ಸಮನಾದದ್ದು. ಪ್ರಧಾನ ಮಂತ್ರಿಗಳ ಕಚೇರಿ ಅಥವಾ ಪ್ರಧಾನ ಮಂತ್ರಿಗಳು ಈ ಕುರಿತು ಸ್ಪಷ್ಟೀಕರಣಕೊಡಬೇಕಿದೆ. ಅರ್ನಬ್ ಅವರೇ ಈ ಸುದ್ದಿ ನಿಮಗೆ ಯಾರಿಂದ ದೊರೆಯಿತು? ದೇಶ ತಿಳಿಯಬಯಸುತ್ತದೆ. ಅಲ್ಲದೇ, ದೇಶದ ಭದ್ರತೆಗೆ ಸಂಬOಧಿಸಿದ ವಿಷಯಗಳಲ್ಲಿ ಹಾಗೂ ಪುಲ್ವಾನ ಸೈನಿಕರ ವೀರಮರಣದ ಸುದ್ದಿಗಳನ್ನು ಟಿಆರ್‌ಪಿ ದೃಷ್ಟಿಯಿಂದ ಪ್ರಸಾರ ಮಾಡಿದ ದೇಶಭಕ್ತ ಅರ್ನಬ್ ಗೋಸ್ವಾಮಿ.

ತಮ್ಮ ರಿಪಬ್ಲಿಕ್ ವಾಹಿನಿಯಲ್ಲಿ ಅರ್ನಬ್ ಅಪಾರ ದೇಶಪ್ರೇಮ ತೋರುತ್ತಿದ್ದರು. ದೇಶ ಮೊದಲು ಎಂದರು. ಹಾಲಿ ಕೇಂದ್ರ ಸರ್ಕಾರವನ್ನು ಟೀಕಿಸಿದವರನ್ನು ದೇಶ ವಿರೋಧಿಗಳೆಂದರು. ಅರ್ಬನ್ ನಕ್ಸಲ್ ಎಂಬ ಪದವನ್ನು ಜನಪ್ರಿಯಗೊಳಿಸಿದರು. ಜನಪರವಾಗಿದ್ದ ವಿಚಾರಶೀಲರಿಗೆ ಅರ್ಬನ್ ನಕ್ಸಲ್ ಹಣೆಪಟ್ಟಿ ಕಟ್ಟಿದರು. ಅರ್ನಬ್ ಗೋಸ್ವಾಮಿಯ ಅಭಿಮಾನಿಗಳ ಬಳಗವು ರಾಕೆಟ್ ವೇಗದಲ್ಲಿ ಬೆಳೆಯಿತು. ರಿಪಬ್ಲಿಕ್ ಟಿವಿ ಸುದ್ದಿವಾಹಿನಿಗಳ ಪೈಕಿ ಮೊದಲ ಸ್ಥಾನಕ್ಕೇರಿತು. ಈಗ ಚಾಟ್‌ಗೇಟ್ ಬಹಿರಂಗವಾದ ಮೇಲೆ ಒಂದೊAದಾಗಿ ರಹಸ್ಯಗಳು ಬಹಿರಂಗವಾಗುತ್ತಿವೆ.

ಮುಂಬೈ ಪೊಲೀಸರಿಗೆ ನೀಡಿರುವ ತಪ್ಪೊಪ್ಪಿಗೆಯಲ್ಲಿ ಪಾರ್ಥೊ ದಾಸಗುಪ್ತ ರಿಪಬ್ಲಿಕ್ ಟಿವಿ ವಾಹಿನಿಯ ಟಿಆರ್‌ಪಿಯನ್ನು ಅಕ್ರಮವಾಗಿ ಹೆಚ್ಚಿಸಿ ಮೊದಲ ಸ್ಥಾನಕ್ಕೆ ತರಲು ತಾನು ಹಾಗೂ ತನ್ನ ತಂಡದೊAದಿಗೆ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಅಲ್ಲದೆ, 2017ರಲ್ಲಿ ಕುಟುಂಬದೊಡನೆ ತನ್ನ ಸ್ವೀಡನ್ ಹಾಗೂ ಡೆನ್ಮಾರ್ಕ್ ಪ್ರವಾಸಕ್ಕೆ ಅರ್ನಬ್ ಗೋಸ್ವಾಮಿ 6,000 ಡಾಲರ್ (ಸುಮಾರು ನಾಲ್ಕೂವರೆ ಲಕ್ಷ ರೂಪಾಯಿಗಳು) ಹಾಗೂ 2017ರಲ್ಲಿ ಐಟಿಸಿ ಪರೇಲ್‌ನಲ್ಲಿ 20 ಲಕ್ಷ ರೂಪಾಯಿ ನಗದನ್ನು ನೀಡಿದರೆಂದು ಹೇಳಿದ್ದಾರೆ.

ಅರ್ನಬ್ ಮೇಲಿರುವ ಅಪಾದನೆಗಳು ಸಾಮಾನ್ಯವಾದವುಗಳಲ್ಲ. ಇಡೀ ಮಾಧ್ಯಮ ವ್ಯವಸ್ಥೆಯನ್ನು ಕೂಲಂಕಷವಾಗಿ ಪರೀಕ್ಷೆ ಮಾಡಬೇಕಾದ ಸಮಯವಿದು. ಎತ್ತರದ ಸ್ತರದಲ್ಲಿರುವ ಮಾಧ್ಯಮ ವ್ಯಕ್ತಿಗಳ ಕಪಟತೆ ಜನರನ್ನು ಬೆಚ್ಚಿಬೀಳಿಸಿದೆ.

Leave a Reply

Your email address will not be published.