ಈ ಕುಟುಂಬದ ಚರಾಸ್ತಿ ಹಾಗೂ ಸ್ಥಿರಾಸ್ತಿ ಎಂದರೆ 3 ಬೈಕುಗಳು, ಒಂದು ಹಮಾಲರ ಆಶ್ರಯ ಮನೆ.
ಗದಗ ಪಟ್ಟಣದ ಹಮಾಲರ ಕಾಲೊನಿಯಲ್ಲಿ ವಾಸವಾಗಿರುವ 70 ವರ್ಷದ ಹನುಮಂತಪ್ಪ ರಾಮಪ್ಪ ಆರ್ಯೇರ ಉರ್ಫು ಘೋರ್ಪಡೆ ಅವರದು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಹೊಂದಿರುವ ದೊಡ್ಡ ಕುಟುಂಬ. ಹಿಂದೂ ಮರಾಠ ಸಮುದಾಯದ ಇವರ ಮೂಲ ಊರು ಕುಷ್ಟಗಿ ತಾಲೂಕ ತಾವರಗೆರೆ ಹೋಬಳಿಯ ಉಮಳಿ ರಾಂಪುರ.
ಸದ್ಯ ಇವರ ಕುಟುಂಬ ಹಮಾಲರ ಕಾಲನಿ, ಮನೆ ನಂಬರ್ 380, ಹಾತಲಗೇರಿ ರಸ್ತೆ, ಗದಗ-582101 ಇಲ್ಲಿ ವಾಸವಿದೆ. ಹನುಮಂತಪ್ಪನವರ ಹೆಂಡತಿ ರಮಾಬಾಯಿ ದಿವಂಗತರಾಗಿದ್ದಾರೆ. 5 ಗಂಡುಮಕ್ಕಳು, ಒಬ್ಬ ಹೆಣ್ಣುಮಗಳು ಹಾಗೂ ಐವರು ಸೊಸೆಯಂದಿರು ಮತ್ತು 10 ಮೊಮ್ಮಕ್ಕಳನ್ನು ಹೊಂದಿರುವ ಅವಿಭಕ್ತ ಕುಟುಂಬ ಇವರದು. ಎಲ್ಲಾ ಮಕ್ಕಳು ಮೊಬೈಲ್ ಹೊಂದಿದ್ದಾರೆ.
ಹಿರಿಯ ಮಗ 42 ವರ್ಷದ ತಿಪ್ಪಣ್ಣ, ಇವರ ಮೊಬೈಲ್ ಸಂಖ್ಯೆ 9632603647. ಇವರು ರಿಯಲ್ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಾರೆ. ಇವರಿಗೆ 39 ವರ್ಷದ ಪತ್ನಿ ಸುಭದ್ರಬಾಯಿ ಮತ್ತು ಇಬ್ಬರು ಮಕ್ಕಳಿದ್ದಾರೆ; ಎರಡನೆಯವರು ಮಗಳು, 37 ವರ್ಷದ ಲಲಿತಾ. ಇವರನ್ನು ರಾಣೆಬೆನ್ನೂರಿನ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿದೆ. ಇವರಿಗೂ ಇಬ್ಬರು ಮಕ್ಕಳಿದ್ದಾರೆ; ಮೂರನೆಯ ಮಗ 34 ವರ್ಷದ ಶಿವಕುಮಾರ, ಕೃಷಿ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಮಾಡುತ್ತಾರೆ. ಇವರಿಗೆ 32 ವರ್ಷದ ಪತ್ನಿ ಸುಜಾತಾಬಾಯಿ ಹಾಗೂ ಇಬ್ಬರು ಮಕ್ಕಳಿದ್ದಾರೆ; ನಾಲ್ಕನೆಯ ಮಗ 32 ವರ್ಷದ ಚಂದ್ರಶೇಖರ, ಹತ್ತನೇ ತರಗತಿವರೆಗೆ ಓದಿದ್ದಾರೆ. ಕಲ್ಯಾಣ ಮಂಟಪದ ಆಫೀಸಿನಲ್ಲಿ ಸಹಾಯಕರಾಗಿ ಕೆಲಸ ಮಾಡುವ ಇವರಿಗೆ 29 ವರ್ಷದ ಪತ್ನಿ ರಾಧಾಬಾಯಿ ಮತ್ತು ಇಬ್ಬರು ಮಕ್ಕಳಿದ್ದಾರೆ; ಐದನೆಯ ಮಗ 29 ವರ್ಷದ ಪರಶುರಾಮ. ಪಿ.ಯು.ಸಿ. ಓದಿ ಛಾಯಾಗ್ರಾಹಕರಾಗಿ ಹಾಗೂ ಗೃಹರಕ್ಷಕರಾಗಿ ಕೆಲಸ ಮಾಡುತ್ತಾರೆ. ಇವರಿಗೆ 26 ವರ್ಷದ ಹೆಂಡತಿ ತುಳಸಾಬಾಯಿ ಹಾಗೂ ಇಬ್ಬರು ಮಕ್ಕಳಿದ್ದಾರೆ; ಆರನೆಯ ಮಗ 27 ವರ್ಷದ ಗಣೇಶ 7ನೆಯ ತರಗತಿವರೆಗೆ ಓದಿದ್ದು, ಕಟ್ಟಡ ಕಾರ್ಮಿಕ ಮೇಸ್ತ್ರಿ ಕೆಲಸ ಮಾಡುತ್ತಾರೆ. ಇವರಿಗೂ ಮದುವೆ ಆಗಿದ್ದು, 24 ವರ್ಷದ ಹೆಂಡತಿ ಸುಮಾಬಾಯಿ ಇದ್ದಾರೆ.
ಈ ಕುಟುಂಬದ ಚರಾಸ್ತಿ ಹಾಗೂ ಸ್ಥಿರಾಸ್ತಿ ಎಂದರೆ 3 ಬೈಕುಗಳು, ಒಂದು ಹಮಾಲರ ಆಶ್ರಯ ಮನೆ. ಇವರು ಎಸ್.ಕೆ.ಎಸ್. ಗ್ರಾಮಶಕ್ತಿ ಇಕ್ವಿಟಿಸ್ ಹಾಗೂ ಮಹಿಳಾ ಸ್ತ್ರೀ ಶಕ್ತಿ ಗುಂಪುಗಳಿಂದ ಶೇಕಡಾ 1 ರ ಬಡ್ಡಿದರದಲ್ಲಿ ತಲಾ 40 ಸಾವಿರ ಸಾಲ ಪಡೆದಿದ್ದಾರೆ. ಈ ಕುಟುಂಬಕ್ಕೆ ಯಾವುದೇ ಜಮೀನು ಇಲ್ಲ. ಇವರು ದಿನನಿತ್ಯ ಸ್ಥಳೀಯ ದಿನಪತ್ರಿಕೆಯಾದ ನವೋದಯ ಪತ್ರಿಕೆಯನ್ನು ಕಳೆದ 10 ವರ್ಷಗಳಿಂದ ಓದುತ್ತಿದ್ದಾರೆ.
ಸಸ್ಯಾಹಾರ ಹಾಗೂ ಮಾಂಸಾಹಾರ ಎರಡೂ ಆಹಾರ ಪದ್ಧತಿಗಳನ್ನು ಹನುಮಂತಪ್ಪ ಅವರ ಕುಟುಂಬ ಅನುಸರಿಸುತ್ತದೆ.
ಸರ್ಕಾರದಿಂದ ಈ ಕುಟುಂಬಕ್ಕೆ ಹಮಾಲರ ಆಶ್ರಯ ಮನೆ, ಪಡಿತರ ಚೀಟಿ, ಅನಿಲಭಾಗ್ಯ ಯೋಜನೆಯಡಿ 2 ಕುಟುಂಬಕ್ಕೆ ಗ್ಯಾಸ್ ಸೌಲಭ್ಯ, ಮನೆಯ ಯಜಮಾನರಾದ ಹನುಮಂತಪ್ಪ ಘೋರ್ಪಡೆ ಅವರಿಗೆ 500 ರೂಗಳ ವೃದ್ಧಾಪ್ಯ ವೇತನ ಹಾಗೂ ಹಿರಿಯ ನಾಗರಿಕರಿಗೆ ನೀಡಲಾಗುವ ರಿಯಾಯಿತಿ ಬಸ್ ಪಾಸ್ ಸೌಲಭ್ಯಗಳು ದೊರೆತಿವೆ.
ಕುಟುಂಬದ ಮಾಸಿಕ ಆದಾಯ ರೂ.30000 ಹಾಗೂ ವೆಚ್ಚ ರೂ.26000. ಉಳಿತಾಯದ ಹಣ ಹಬ್ಬಹರಿದಿನಗಳಲ್ಲಿ ಖರ್ಚಾಗುತ್ತದೆ. ಇದರ ನಡುವೆಯೂ ಒಂದಷ್ಟು ಹಣವನ್ನು ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡಿಟ್ಟಿದ್ದಾರೆ.
ಪ್ರತಿ ಕುಟುಂಬಕ್ಕೂ ಸ್ವಂತ ಸೂರು, ಮಕ್ಕಳಿಗೆ ಶೈಕ್ಷಣಿಕ ಸಾಲ ಸೌಲಭ್ಯ, ಸ್ವಯಂ ಉದ್ಯೋಗಕ್ಕಾಗಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಬಡ್ಡಿ ರಹಿತ ಸಾಲ ಸೌಲಭ್ಯ ಪಡೆಯಬೇಕೆಂಬುದು ಹನುಮಂತಪ್ಪ ಕುಟುಂಬದ ಅಪೇಕ್ಷೆಗಳಾಗಿವೆ.
ಅನಿರೀಕ್ಷಿತವಾಗಿ ಬರುವ ಆಸ್ಪತ್ರೆಯ ಖರ್ಚು, ನಿರುದ್ಯೋಗ ಸಮಸ್ಯೆ ಹಾಗೂ ದುಡಿಮೆಗೆ ತಕ್ಕಂತೆ ಸಂಬಳವಿಲ್ಲ ಎಂಬುದು ಈ ಕುಟುಂಬಕ್ಕಿರುವ ಅಡೆತಡೆಗಳಾಗಿವೆ.