ಧರ್ಮಕ್ಕಿಂತ ದೇಶ ದೊಡ್ಡದು!

ಡಾ.ಎಚ್.ಎಚ್.ನದಾಫ

ಇತಿಹಾಸದಿಂದ ಪಾಠ ಕಲಿಯುವ ಬದಲು ಅಲ್ಲಿ ನಡೆದ ತಪ್ಪುಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದೇವೆ. ಬಹುಭಾಷೆಬಹುಸಂಸ್ಕøತಿಯ ಜೀವಕಳೆಯನ್ನು ಹೊಂದಿದ ನೆಲಮೂಲ ಸಂಸ್ಕøತಿಯಲ್ಲಿ ಹೊರಗಿನಿಂದ ಬಂದವರು ಯಾರು? ಎನ್ನುವ ಪ್ರಶ್ನೆಗೆ ಉತ್ತರಕಂಡುಕೊಳ್ಳುವಲ್ಲಿ ಸೋಲುತ್ತೇವೆ.

ಪ್ರಸಕ್ತ ಸಂದರ್ಭದಲ್ಲಿ ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ಅವಮಾನಿಸುವ, ಅಪಮಾನಿಸುವ ಮತ್ತು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರುಗಳು ನಡೆದಿವೆ. ಎಲ್ಲಾ ಸಮುದಾಯಗಳಲ್ಲಿಯೂ ಕೆಟ್ಟ ವ್ಯಕ್ತಿಗಳು ಇದ್ದಾರೆ, ಇದನ್ನು ಅಲ್ಲಗಳೆಯಲಿಕ್ಕೆ ಸಾಧ್ಯವೇ ಇಲ್ಲ. ಕೆಲವು ಸಮುದಾಯದ ಕೆಟ್ಟವ್ಯಕ್ತಿಗಳ ವ್ಯಕ್ತಿತ್ವ ಅದು ಬಯಲಿಗೆ ಬರುತ್ತಿದ್ದಂತೆಯೇ ಅದನ್ನು ಅಲ್ಲಿಯೇ ಮುಚ್ಚಿಹಾಕಿ ಅದು ಪ್ರಸರಣಗೊಳ್ಳದ ಹಾಗೆ ತಡೆಯಲ್ಪಡುತ್ತಾರೆ. ಅಕಸ್ಮಾತ ಹೀನ ಕೆಲಸ ಮಾಡಿದ ವ್ಯಕ್ತಿ ಮುಸ್ಲಿಂ ಆಗಿದ್ದರೆ ಮರುದಿನವೇ ದಿನ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ ಕೋಮು ಸಂಘರ್ಷಕ್ಕೆ ರಹದಾರಿಯಾಗಿಬಿಡುತ್ತದೆ. ಇಂತಹ ಸಂಘರ್ಷದ ಹಾದಿಗೆ ದೊಡ್ಡ ಚರಿತ್ರೆಯೇ ಇದೆ. ಇಂತಹ ಸಂಘರ್ಷವನ್ನು ಜೀವಂತವಾಗಿಟ್ಟರೆ ನಮಗೆ ಲಾಭವಿದೆ ಎನ್ನುವವರೂ ಇದ್ದಾರೆ. ಅದಕ್ಕಾಗಿಯೇ ಕೆಲವೊಂದಿಷ್ಟು ಗುಂಪುಗಳನ್ನು ಕಟ್ಟಿಕೊಂಡು ಆಯಕಟ್ಟಿನ ಸ್ಥಳದಲ್ಲಿ ಛೂ ಬಿಡುತ್ತಿದ್ದಾರೆ.

ಹಿಂದಿ ಸಾಹಿತಿ ಭೀಷ್ಮ ಸಾಹನಿ ಅವರು ತಮ್ಮ `ಥಮಸ್ಕಾದಂಬರಿಯಲ್ಲಿ ಹೇಳಿರುವಂತೆ `ಹಂದಿಯ ದೇಹವನ್ನ ಯಾರಾದರೂ ಮಸೀದಿಗೆ ತಂದು ಹಾಕಿದರೆ ಇದು ಕೋಮು ಹಿಂಸೆಗೆ ಬಳಸಲಾಗಿರುವ ತಂತ್ರ ಎಂಬುದನ್ನು ಅರ್ಥಮಾಡಿಕೊಳ್ಳಿಎಂದು ಮುಸ್ಲಿಂ ಸಮುದಾಯಕ್ಕೆ ಹೇಳಿರುವ ಮಾತು ತುಂಬಾ ಮಹತ್ವದ್ದಾಗಿದೆ. ಧರ್ಮದ ಹೆಸರಿನಲ್ಲಿ ಗಲಭೆಯನ್ನು ಸೃಷ್ಟಿಸಿದಾಗ ಅಮಾಯಕ, ಮುಗ್ಧಜನ ಅನುಭವಿಸುವ ಸಾವು, ನೋವು ಸಂಕಷ್ಟಗಳನ್ನು ಕುರಿತು ಕಾದಂಬರಿ ತಿಳಿಸುತ್ತದೆ. ಇಲ್ಲಿ ಬಲಿಯಾಗುವವರೇ ಅಮಾಯಕ ಮುಗ್ಧಜನ. `ಹಂದಿಕೊಂದು ಮಸೀದಿಯೊಳಗೆ ಹಾಕಿದವನೂ ಪಾಪ ಪ್ರಜ್ಞೆಯಿಂದ ಪೀಡಿತನಾಗಿ ಸತ್ತು ಹೋದರೆ, ಈತನ ಕೈಗೆ 5 ರೂಪಾಯಿ ನೋಟು ಇಟ್ಟು ಗಲಭೆಗೆ ಕಾರಣನಾದವನು `ಶಾಂತಿಮಂತ್ರ ಹೇಳುತ್ತ ಗಣ್ಯವ್ಯಕ್ತಿಗಳನ್ನು ಸೇರಿಕೊಳ್ಳುವುದರೊಂದಿಗೆ `ಥಮಸ್ಕಾದಂಬರಿ ಮುಕ್ತಾಯವಾಗುತ್ತದೆ.

ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ ಮೂಲಕ ಭಾವನೆಗಳನ್ನು ಕೆರಳಿಸುವಂತಹ ಪ್ರಕ್ರಿಯೆಗಳು ನಡೆದಿವೆ. ಮಹಾರಾಷ್ಟ್ರದಲ್ಲಿ ಶಿವಾಜಿ ಮತ್ತು ಬಾಳಾಠಾಕ್ರೆಯ ವಿರುದ್ಧ ಪೆೀಸ್ಟ್ ಹಾಕಿ ಗಲಭೆಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇದನ್ನು ಹಾಕಿದವರು ಮುಸ್ಲಿಂ ಯುವಕರು ಆಗಿರಲಿಲ್ಲ. ಆದರೆ ಗಲಭೆಯ ಸಂಕಷ್ಟಕ್ಕೆ ಈಡಾದವರು ಮುಸ್ಲಿಮರು. ಕಂಡಕಂಡಲ್ಲಿ ಅವರ ಮೇಲೆ ಹಲ್ಲೆ ಮಾಡಿ, ಅವರ ಅಂಗಡಿಮುಂಗಟ್ಟುಗಳನ್ನು ಧ್ವಂಸಗೊಳಿಸಿದರು ಹಾಗೂ ಓರ್ವ ಮುಸ್ಲಿಮ್ ಕಂಪ್ಯೂಟರ್ ಇಂಜಿನಿಯರ್ನನ್ನು ಕೊಲೆ ಮಾಡಿದರು. ಹೀಗೆ ಮುಸ್ಲಿಂಮರನ್ನೇ ಕೇಂದ್ರೀಕರಿಸಿ ಹಿಂದೂ ಮತ ಬ್ಯಾಂಕ್ ಭದ್ರಪಡಿಸುವುದರೊಂದಿಗೆ ಎಲ್ಲ ಹಿಂದೂಗಳು ಒಂದು ಮುಸ್ಲಿಂಮರು ಬೇರೆ ಎನ್ನುವ ಭ್ರಮೆಯನ್ನು ಸೃಷ್ಟಿಮಾಡಲಾಗುತ್ತಿದೆ. ನಿಜವಾದ ಚರಿತ್ರೆಯನ್ನೇ ಅರಿಯದ ಹಿಂದೂ ಧರ್ಮದ ಅನೇಕ ಕೆಳ ಸಮುದಾಯಗಳು ಇದನ್ನೇ ನಂಬಿಕೊಂಡು ಅದೇ ಭ್ರಮೆಯಲ್ಲಿ ಕೇಕೆ ಹಾಕುತ್ತಿವೆ.

ಸೀತಾರಾಂ ಯೆಚೂರಿ ಅವರು ತಮ್ಮ o iಟಿಜ xಠಿ: Sಚಿಜಿಜಿಡಿoಟಿ ಃಡಿಚಿಜe’s ಒಥಿಣಚಿಟಿಜ eಚಿಟiಣಥಿ ಎಂಬ ಕೃತಿಯಲ್ಲಿ ಹೇಳುವಂತೆ, “ನೂರಾರು ವರ್ಷ ದೇಶದಲ್ಲಿ ನೆಲೆಸಿದ ಜನಗಳ ವಿಭಿನ್ನ ಸಂಸ್ಕøತಿ, ಭಾ, ಪರಂಪರೆ ಹಾಗೂ ಕಟ್ಟಳೆಗಳಲ್ಲಿ ಯಾವುದೇ ಭಿನ್ನತೆ ಇಲ್ಲ ಎಂಬಂತೆ ಹಿಂದೂಧರ್ಮ ಎಂಬ ಒಂದೇ ಪದದೊಳಗೆ ತುರುಕುತ್ತಾರೆ. ಮೇಲೆ ಒಂದು ಬಾಹ್ಯಶತ್ರುವನ್ನು ಸೃಷ್ಟಿಸಿ, ಹಿಂದೂಗಳ ಶಕ್ತಿಯ ಕ್ರೋಡೀಕರಣ ಮಾಡಲು ಶತ್ರುವಿರುದ್ಧ ದ್ವೇಷಭಾವನೆಯನ್ನು

ಉದ್ರೇಕಿಸುತ್ತಾರೆ. ಎರಡನ್ನೂ ಸಾಧಿಸುವುದಕ್ಕಾಗಿ ಇತಿಹಾಸವನ್ನು ತಿರುಚುತ್ತಾರೆ. ಇತಿಹಾಸದ ಸತ್ಯಾಸತ್ಯತೆಯನ್ನು ತಿಳಿಯಲುಪ್ರಾಚ್ಯಸಂಶೋಧನೆ, ಸ್ಮಾರಕ, ಶಿಲಾಶಾಸನ ಹಾಗೂ ಜನಪದ ಕತೆಗಳು ಮೂರು ಮಾರ್ಗಗಳಿವೆ ಎಂದು ಪೆ್ರ.ಹರಬನ್ಸ್ ಮುಖಿಯಾ ಹೇಳುತ್ತಾರೆ. ಆದರೆ ಮೂರು ಮಾರ್ಗಗಳನ್ನು ಇಟ್ಟುಕೊಂಡು ಮಾನವೀಯತೆಯ ದೃಷ್ಟಿಯಿಂದ ಹಾಗೂ ಪ್ರಜಾಪ್ರಭುತ್ವದ ನೆಲೆಯಿಂದ ಬಲಿಷ್ಟ ಭಾರತವನ್ನು ಕಟ್ಟುವ ದೃಷ್ಟಿಯೊಳಗೆ ಇತಿಹಾಸವನ್ನು

ಅರ್ಥೈಸಿಕೊಳ್ಳುತ್ತಿದ್ದೇವೆಯೇ?

ಇತಿಹಾಸದಿಂದ ಪಾಠ ಕಲಿಯುವ ಬದಲು ಅಲ್ಲಿ ನಡೆದ ತಪ್ಪುಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದೇವೆ. ಬಹುಭಾಷೆಬಹುಸಂಸ್ಕøತಿಯ ಜೀವಕಳೆಯನ್ನು ಹೊಂದಿದ ನೆಲಮೂಲ ಸಂಸ್ಕøತಿಯಲ್ಲಿ ಹೊರಗಿನಿಂದ ಬಂದವರು ಯಾರು? ಎನ್ನುವ ಪ್ರಶ್ನೆಗೆ ಉತ್ತರಕಂಡುಕೊಳ್ಳುವಲ್ಲಿ ಸೋಲುತ್ತೇವೆ. ಏಕೆಂದರೆ ಇಲ್ಲಿರುವ ಭಿನ್ನ ಭಿನ್ನ ಧರ್ಮದವರೆಲ್ಲರೂ ಮೂಲ ನೆಲದ ಬುಡಕಟ್ಟು ಜನಾಂಗಗಳೇ. ‘ಹಿಂದೂ ಮತ, ‘ಹಿಂದೂ ಸಂಸ್ಕೃತಿ‘, ‘ಹಿಂದೂ ನಂಬಿಕೆ, ‘ಹಿಂದೂ ರಾಷ್ಟ್ರಮುಂತಾದವುಗಳನ್ನು ಇಟ್ಟುಕೊಂಡು ಬಡಿದಾಡುತ್ತಿರುವ ನಾವು ವರ್ಣಾಶ್ರಮದ ಸಂಸ್ಕøತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು, ಮೂಲಕ ಇಲ್ಲಿಯ ಮುಸ್ಲಿಂಮರನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ವಿವೇಚನೆ ಇಲ್ಲದೆ ಹಿಂದೂಗಳು ತಮ್ಮ ಶತ್ರುಗಳು ಮುಸ್ಲಿಮರೆಂದು ಅದೇ ರೀತಿ ಮುಸ್ಲಿಮರು ತಮ್ಮ ಶತ್ರುಗಳು ಹಿಂದೂಗಳು ಎಂದು ಭಾವಿಸಿಕೊಂಡರೆ ತಮ್ಮ ಸತ್ವಕ್ಕೆ ತಾವೇ ಕೊಡಲಿಪೆಟ್ಟು ಹಾಕಿಕೊಂಡಂತೆ. ಇದರ ಕಾಳಜಿ ಹಿನ್ನೆಲೆಯಲ್ಲಿಯೇ ಇಲ್ಲಿಯ ಅನೇಕ ಸತ್ಪುರುಷರು, ಸಾಧುಗಳು, ಸಂತರು, ಸೂಫಿಗಳು, ಆರೂಢರು, ಅನುಭಾವಿಗಳು ಧರ್ಮಸಾಮರಸ್ಯದ ಬಂಧುತ್ವವನ್ನು ತಮ್ಮ ಮಾತು ಮತ್ತು ಸಾಹಿತ್ಯದ ಮೂಲಕ ಕಟ್ಟಿಕೊಟ್ಟು ಹೋಗಿದ್ದಾರೆ. ಹಿನ್ನೆಲೆಯಲ್ಲಿ ಇಲ್ಲಿಯ ಗ್ರಾಮೀಣ ಜನಪದರ ಹಬ್ಬಜಾತ್ರೆಉತ್ಸವಗಳಲ್ಲಿ ಸಾಮರಸ್ಯದ ಆಚರಣೆ, ಸಂಪ್ರದಾಯಗಳು ಇನ್ನೂ ಜೀವಂತವಾಗಿವೆ. ಆದರೆ ಕುಹಕ ಮನಸ್ಸುಗಳು ಅಂತಹ ಸ್ಥಳಗಳಿಗೂ ಪ್ರವೇಶ ಮಾಡಿ ಅವರಲ್ಲಿಯೂ ಭೇದಭಾವ ಹುಟ್ಟಿಸಿ ಜಗಳಕ್ಕೆ ನಾಂದಿ ಹಾಡುವಂತಹ ಸಂದರ್ಭವೂ ಬಂದೊದಗಿದೆ. ಇದೆಲ್ಲದರ ಅರಿವು ಇಂದಿನ ಭಾರತೀಯರಲ್ಲಿ ಇರಬೇಕಾಗಿರುವುದು ತುಂಬಾ ಅವಶ್ಯ.

ಕೊನೆಯದಾಗಿ, ಮುಸ್ಲಿಂಮರಿಗೆ ಹೇಳುವುದೇನೆಂದರೆ; ಮೌಲ್ವಿಗಳು ಅತೀಯಾದ ಧಾರ್ಮಿಕ ಕಟ್ಟುಪಾಡುಗಳಿಗೆ ಬಲಿಯಾಗದೇ ಬದಲಾದ ಜಾಗತಿಕ ವರ್ತಮಾನದ ಹಿನ್ನೆಲೆಯಲ್ಲಿ ತಮ್ಮ ವಿವೇಕವನ್ನು ಜಾಗೃತಗೊಳಿಸಕೊಳ್ಳಬೇಕು. ಮೂಲಕ ಮುಗ್ಧ ಮುಸ್ಲಿಂ ಮನಸ್ಸುಗಳನ್ನು ವಿವೇಕದ ದಾರಿಯತ್ತ ಮುನ್ನೆಡೆಸಬೇಕು. ಇಡೀ ಸಮಾಜವನ್ನು ತಮ್ಮ ಸ್ವಾರ್ಥದ ಹಿನ್ನೆಲೆಯಲ್ಲಿ ನೋಡದೆ ಅವರ ಬದುಕು ಗಟ್ಟಿಯಾಗುವುದರ ಕಡೆ ಆಲೋಚಿಸಬೇಕು. ತಾಲಿಬಾನಿಗಳು ಕಟ್ಟಿಕೊಳ್ಳುತ್ತಿರುವಂತಹ ಸಂಸ್ಕøತಿ ನಿಮ್ಮದಾಗದಿರಲಿ. ಭಾರತೀಯ ಮುಸ್ಲಿಂ ಚಿಂತನೆಯ ಆಲೋಚನೆಯೂ ತಮ್ಮ ನಡೆನುಡಿಯಲ್ಲಿರಲಿ. ಹಿನ್ನೆಲೆಯಲ್ಲಿ ಸಂತರು ಅನುಸರಿಸಿದ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ.

ಇಡೀ ಜಗತ್ತಿನ ಮುಸ್ಲಿಂರು ಭಾರತೀಯ ಮುಸ್ಲಿಂ ಸಂಸ್ಕøತಿಯ ಕಂಡು ಅದನ್ನು ಅನುಕರಣೆ ಮಾಡಿಕೊಳ್ಳುವ ರೀತಿಯಲ್ಲಿ ಜೀವಿಸಿ. ಯಾವುದೇ ಕಾರಣಕ್ಕೂ ಕೋಮು ಭಾವನೆಯ ಉದ್ರೇಕದ ಮಾತುಗಳನ್ನು ಜಮಾತಗಳಲ್ಲಿ ಪ್ರಸ್ತಾಪಿಸಬೇಡಿ. ನಿಮ್ಮ ಧರ್ಮದ ಗ್ರಂಥವನ್ನು ಅರ್ಥಮಾಡಿಕೊಳ್ಳುವ ಹಾಗೆ ಬೇರೆ ಧರ್ಮದ ಗ್ರಂಥಗಳನ್ನು ಅರ್ಥಮಾಡಿಕೊಂಡು ಗ್ರಂಥಗಳಲ್ಲಿಯ ಮೌಲ್ಯಗಳನ್ನು ಪ್ರಸ್ತಾಪಿಸಿ. ಗ್ರಂಥಕ್ಕೂ ಗೌರವ ಕೊಡುವಂತಹ ಸ್ವಭಾವ ಬೆಳೆಸಿಕೊಳ್ಳಿ. ಎಲ್ಲಾ ಧರ್ಮಗಳು ಮನುಷ್ಯನ ಉಜ್ವಲತೆಯನ್ನೇ ಬಯಸುತ್ತವೆ ಎಂಬುದು ನಿಮ್ಮ ಚಿಂತನೆಯಾಗಲಿ. ಎಲ್ಲಾ ಧರ್ಮಗಳಲ್ಲಿಯೂ ಕೆಟ್ಟ ವ್ಯಕ್ತಿಗಳು ಇರುತ್ತಾರೆ. ಅಂಥ ಕೆಟ್ಟ ವ್ಯಕ್ತಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ. ಒಬ್ಬ ಧಾರ್ಮಿಕ ಮುಖಂಡ ಕೆಟ್ಟರೆ ಇಡೀ ಸಮಾಜ ಕೆಡುತ್ತದೆ ಎಂಬ ಎಚ್ಚರಿಕೆ ನಿಮ್ಮಲ್ಲಿರಲಿ.

ಮುಸ್ಲಿಂ ಸಮಾಜದ ರಾಜಕೀಯ ವ್ಯಕ್ತಿಗಳು ಸಹ ಒಳ ಹುನ್ನಾರದ ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕಿದೆ. ನಿಮ್ಮ ರಾಜಕೀಯ ಭವಿಷ್ಯಕ್ಕಾಗಿ ಮುಸ್ಲಿಂ ಸಮಾಜವನ್ನು ಬಲಿಪಶು ಮಾಡಬೇಡಿ. ಉದ್ದೇಶ ಪೂರ್ವಕವಾಗಿಯೇ ಹಿಂದೂಮುಸ್ಲಿಂ ವಿರೊಧವನ್ನು ಕಟ್ಟುತ್ತಿದ್ದಾರೆ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ಸಮಾಜ ಕೆಳಹಂತಕ್ಕೆ ಇಳಿಯುತ್ತಿರುವ ಕಾರಣಗಳೇನು ಎಂಬುದನ್ನು ಗುರುತಿಸಿ ಅದನ್ನು ಪರಿಹರಿಸುವ ನಿಟ್ಟಿನೊಳಗೆ ಕ್ರಿಯಾಶೀಲರಾಗಬೇಕಿದೆ. ಸಾಚಾರ ವರದಿಯನ್ನು ಗಮನಿದರಂತೂ ಮುಸ್ಲಿಂಮರು ಎಷ್ಟು ಹೀನ ಸ್ಥಿತಿಯಲ್ಲಿದ್ದಾರೆಂಬುದು ತಿಳಿಯುತ್ತದೆ. ಹೀನ ಸ್ಥಿತಿಯಿಂದ ಅವರನ್ನು ಪಾರು ಮಾಡುವಂತಹ ಕೆಲಸಗಳು ನಿಮ್ಮಿಂದಾಗಲಿ. ವೋಟ್ಬ್ಯಾಂಕ್ ರಾಜಕಾರಣ ನಿಮ್ಮದಾಗದಿರಲಿ. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ನೀವು ಗೆದ್ದು ಬರುವುದೇ ದೊಡ್ಡ ಸಾಹಸ. ಗೆದ್ದು ಬಂದ ಮೇಲೆ ಬಲಾಢ್ಯ ಸಮುದಾಯಗಳ ನಾಯಕರ ಚೇಲಾಗಳಾಗಿ ವರ್ತಿಸಬೇಕಾಗುತ್ತದೆ ಎಂಬುದು ಸತ್ಯದ ಮಾತು. ಇಲ್ಲದಿದ್ದರೆ ಅಲ್ಲಿ ನಿಮಗೆ ಪ್ರಾಧಾನ್ಯ ಸಿಗುವದಿಲ್ಲ ಎನ್ನುವುದು ಕಟು ಸತ್ಯ. ಆದ್ದರಿಂದ ನಿಮ್ಮಿಂದ ದೊಡ್ಡ ಪ್ರಮಾಣದ ಕಾರ್ಯಗಳು ನೆರವೇರುವದಿಲ್ಲ ಎನ್ನುವುದು ಒಪ್ಪಿಕೊಳ್ಳುವಂತಹದೇ. ಹಾಗಾಗಿ ಇದ್ದುದ್ದರಲ್ಲಿಯೇ ಎಷ್ಟು ಸಾಧ್ಯವು ಅಷ್ಟು ಸಮಾಜದ ಬದಲಾವಣೆಗೆ ಕೈ ಜೋಡಿಸಿ.

ಇನ್ನು ಸಾಮಾನ್ಯ ಮುಸ್ಲಿಂಮರು ಸಹ ಯಾರದೋ ಮಾತನ್ನು ಕೇಳಿ ವೈರತ್ವಕ್ಕೆ ಬೀಳಬಾರದು. ವಿರೋಧಿಯ ಮನದಲ್ಲಿಯೂ ಅಲ್ಲಾ (ದೇವರು)ನನ್ನು ಕಾಣುವಂತಹ ಗುಣವನ್ನು ಬೆಳಿಸಿಕೊಳ್ಳಿ. ನಿಮ್ಮ ನಡೆನುಡಿ, ಆಚಾರವಿಚಾರಗಳಿಂದ ಮತ್ತೊಬ್ಬರಿಗೆ ತೊಂದರೆಯಾಗದ ಹಾಗೆ ನಡೆದುಕೊಳ್ಳಿ. ಎಂದಿಗೂ ವಾಮಮಾರ್ಗದ ಮೂಲಕ ಕಾರ್ಯಮಗ್ನರಾಗಬೇಡಿ. ಸತ್ಯವೇ ಬದುಕಿನ ಮೌಲ್ಯವಾಗಲಿ. ಖುರಾನ್ ಸಹ ಇದನ್ನೆ ಪ್ರತಿಪಾದಿಸುತ್ತದೆ. ನಿಮ್ಮ ಧರ್ಮ ಆಚರಣೆಯ ನಡೆನುಡಿಯಿಂದ ಖುರಾನಕ್ಕೆ ಕಳಂಕ ಬರಬಾರದು. ಒಬ್ಬ ಮುಸ್ಲಿಂ ವ್ಯಕ್ತಿಗೆ ಕೆಟ್ಟ ಹೆಸರು ಬಂದರೆ ಖುರಾನಕ್ಕೆ ಕೆಟ್ಟ ಹೆಸರು ಬಂದಂತೆ ಎಂಬ ಪರಿಜ್ಞಾನ ನಿಮ್ಮೆಲ್ಲರದಾಗಲಿ. ಧರ್ಮಕ್ಕಿಂತ ದೇಶ ದೊಡ್ಡದು. ದೇಶಕ್ಕೆ ಮೊದಲು ಪ್ರಾಧಾನ್ಯ ಕೊಡೋಣ, ದೇಶಕ್ಕೆ ಅಪಾಯವಾದರೆ ನಮಗೆ ಅಪಾಯವಾದಂತೆ. ಯಾವುದೇ ಕಾರಣಕ್ಕೂ ಭಾವಾವೇಶಕ್ಕೆ ಒಳಗಾಗಬೇಡಿ, ಸಂಯಮವನ್ನು ಕಳೆದುಕೊಂಡು ವರ್ತಿಸಬೇಡಿ.

ಹುಂಬತನದ ವರ್ತನೆ ನಿಮ್ಮ ಅಜ್ಞಾನವನ್ನು ಸಾಬೀತುಪಡಿಸುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಅವರಿಗೆ ಬೇಕಾಗಿರುವುದು ನಿಮ್ಮಂತಹ ಹುಂಬರೇ. ಏಕೆಂದರೆ ಇಲ್ಲಿ ಭಿನ್ನ ಸಂಸ್ಕøತಿಯ ಮತ್ತು ನಿಮ್ಮಂತಹ ಆಹಾರ ಸೇವನೆ ಮಾಡುವ ಅನೇಕರು ಇದ್ದಾರೆ. ಆದರೆ ಅವರು ನಿಮ್ಮ ಹಾಗೆ ದಡ್ಡತನದ ವರ್ತನೆಯನ್ನು ಮಾಡುತ್ತಿಲ್ಲ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಶಿಕ್ಷಣದೊಂದಿಗೆ ಬದುಕನ್ನು ರೂಪಿಸಿಕೊಳ್ಳುವಂತಹ ಛಲವನ್ನು ಮೂಡಿಸಿ. ಪ್ರಾದೇಶಿಕ ಮೌಲ್ಯಗಳನ್ನು ಗೌರವಿಸುವುದರೊಂದಿಗೆ, ಪ್ರಾದೇಶಿಕ ವೈಶಿಷ್ಟ್ಯಗಳನ್ನು ಅರ್ಥ ಮಾಡಿಕೊಂಡು ಅದರೊಂದಿಗೆ ಬೆರೆತು ಬದುಕು ಕಟ್ಟಿಕೊಳ್ಳಿ.

ದೇಶದ ಸಂವಿಧಾನದ ಮೇಲೆ ಬಲವಾದ ನಂಬಿಕೆ ಇಡಿ. ಏನೇ ಕಷ್ಟ ಬಂದರೂ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬ ನಿಲುವಿನೊಂದಿಗೆ ಅದರಲ್ಲಿರುವ ಕಾನೂನುಗಳನ್ನು ಅರ್ಥಮಾಡಿಕೊಳ್ಳಿ. ಕೆಲವೊಮ್ಮೆ ಆಡಳಿತಗಾರರ ಪ್ರಭಾವದ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳಿಗೂ ಧಕ್ಕೆ ಬರಬಹುದು. ಆದರೆ ಅದು ಕ್ಷಣಿಕ ಮಾತ್ರ. ಬಹುಪಾಲು ಭಾರತೀಯರೆಲ್ಲರೂ ವಿವೇಕಿಗಳಾಗಿದ್ದು, ನಿಟ್ಟಿನಲ್ಲಿಯೇ ವರ್ತನೆಯನ್ನು ಮಾಡುತ್ತಿರುತ್ತಾರೆ. ಯಾವುದೂ ಶಾಶ್ವತವಲ್ಲ ಪ್ರಕೃತಿ ಮುನಿದರೆ ಎಲ್ಲವೂ ಸರ್ವನಾಶವಾಗುತ್ತದೆ.

*ಲೇಖಕರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕನ್ನಡ ಮತ್ತು ಜಾನಪದ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.