ಧರ್ಮದ ಹೆಸರಿನ ಮೋಸ ಬಯಲುಮಾಡುವ ‘ಟ್ರ್ಯಾನ್ಸ್’

ಎಲ್.ಚಿನ್ನಪ್ಪ ಬೆಂಗಳೂರು

ಹುಸಿ ಪವಾಡಗಳ ಮೂಲಕ ಭಕರನ್ನು ಮರುಳುಮಾಡಿ ಹಣ ಗಳಿಸುವ ಧಾರ್ಮಿಕ ಪಂಥವೊಂದರ ಕಾರ್ಯವೈಖರಿಯನ್ನು ಬಯಲು ಮಾಡುವ ವಿಶಿಷ್ಟ ಮಲಯಾಳಂ ಸಿನಿಮಾ ಯೂಟ್ಯೂಬ್ ನಲ್ಲಿ ಲಭ್ಯ.

ಕೆಲವು ಶ್ರೀಮಂತ ಧರ್ಮನಿಷ್ಠರು ಧರ್ಮ ಪ್ರಚಾರಕ್ಕಾಗಿ ಧನ ಸಹಾಯ ಮಾಡಿ ತಾವು ಖರ್ಚುಮಾಡಿದ ದುಪ್ಪಟ್ಟು ಹಣವನ್ನು ಬಾಚಿಕೊಳ್ಳುವುದೇ ಅವರ ದಾನದ ಹಿನ್ನಲೆಯಲ್ಲಿ ಅಡಗಿರುವ ಮರ್ಮ. (ಮನಿ ಬ್ಯಾಕ್ ಪಾಲಿಸಿ) ‘ನನಗೆ ಇಷ್ಟು ಬಂದರೆ ಅದರಲ್ಲಿ ಇಷ್ಟು ಹಣ ನಿಮಗೆ ಕಾಣಿಕೆ ನೀಡುತ್ತೇನೆಎಂದು ದೇವರಿಗೇ ಆಮಿಷವೊಡ್ಡಿ ಹಣ ಮಾಡುವ ಪ್ರವೃತ್ತಿ ಅವರದು. ಕೆಲವು ಕ್ರಿಶ್ಚಿಯನ್ ಪಂಥದವರು ಇದನ್ನೇ ಉದ್ಯಮವನ್ನಾಗಿಯೂ ಮಾಡಿಕೊಂಡಿದ್ದಾರೆ. ಅಲ್ಲಲ್ಲಿ ಸಾರ್ವಜನಿಕ ಧರ್ಮಪ್ರಚಾರದ ಕೂಟಗಳನ್ನು, ರೋಗ ಸೌಖ್ಯ ಕೂಟಗಳನ್ನು ಏರ್ಪಡಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುವವರಿದ್ದಾರೆ.

ಅಂಥ ಎಲ್ಲಾ ಕೂಟಗಳಲ್ಲಿ ದೇವರನ್ನು ಸ್ತುತಿಸುವ, ಮಹಿಮೆಪಡಿಸುವಅಲ್ಲೇಲೂಯಾ, ಪ್ರೈಸ್ ಲಾರ್ಡ್ಉದ್ಗೋಷಣೆಗಳು ಅಬ್ಬರದಿಂದ ಬಾನೆತ್ತರಕ್ಕೆ ಮೊಳಗುತ್ತವೆ. ಪರವಶರಾದ ಭಕ್ತರು, ಕುಣಿದು ಕುಪ್ಪಳಿಸಿ ಕರಗಳನ್ನು ತಟ್ಟುತ್ತ ಆವೇಶಭರಿತರಾಗಿ ದೇವರ ಮಹಿಮೆ ಪಠಿಸುತ್ತಾರೆ. ಮನಃಸ್ಪರ್ಶಿ ಸೆಂಟಿಮೆಂಟ್ ಬೋಧನೆಗಳಿಂದ, ಇಂಪಾದ ಗಾನಗಳಿಂದ ಅದ್ಭುತ ಪವಾಡಗಳಿಂದ ಭಕ್ತರು ಭಾವಾವೇಶಕ್ಕೊಳಗಾಗುತ್ತಾರೆ. ‘ನೀವು ದೇವರಿಗೆ ನೀಡುವ ಧಾರಾಳ ಕಾಣಿಕೆಯಿಂದಲೆÀ ನಿಮ್ಮ ಕಷ್ಟ ದುಃಖಗಳು, ಸಮಸ್ಯೆಗಳೆಲ್ಲ ದೂರವಾಗಿ ಅದಕ್ಕೆ ಇಮ್ಮಡಿಯಷ್ಟು ಪ್ರತಿಫಲ ಹೊಂದುವಿರಿ(ಗಿವ್ ಅಂಡ್ ಯು ಶಲ್ ರಿಸೀವ್) ಎಂಬ ಬೋಧಕನ ಕರೆಗೆ ಭಕ್ತರ ಕಾಣಿಕೆಗಳು ಯಥೇಚ್ಛವಾಗಿ ಸುರಿದು, ಆಯೋಜಕರ ಬೊಕ್ಕಸವು ಭರ್ತಿಯಾಗುತ್ತದೆ.

ಮೇಲಿನ ಮೂಲಭೂತ ಸಿದ್ಧಾಂತಗಳನ್ನೇ ಆಧಾರವನ್ನಾಗಿಟ್ಟುಕೊಂಡುಟ್ರ್ಯಾನ್ಸ್ಎಂಬ ಮಲೆಯಾಳಂ ಚಲನಚಿತ್ರವನ್ನು ತಯಾರಿಸಿದ್ದಾರೆ. ಚಲನಚಿತ್ರದಲ್ಲಿ ಅಂತಹುದೇ ಸನ್ನಿವೇಶಗಳು ವಿಫುಲವಾಗಿ ಅಳವಡಿಕೆಯಾಗಿವೆ. ಕ್ಯಾನ್ಸರ್ ರೋಗಿಗಳನ್ನು ಗುಣಪಡಿಸುವುದು, ಕಾಲು ಊನವಾದವಳ ಊರುಗೋಲನ್ನು ಕಿತ್ತೆಸೆದು ಸ್ಟೇಜ್ ಮೇಲೆ ನಡೆಯುವಂತೆ ಮಾಡುವುದು, ಸೊಂಟದ ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದವನನ್ನು ಸ್ವಸ್ಥ ಪಡಿಸುವುದು, ಕಣ್ಣು ಕಾಣದ ಮಹಿಳೆಗೆ ದೃಷ್ಟಿ ಬರುವಂತೆ ಮಾಡುವುದು, ಕೋಟನ್ನು ಬೀಸಿದಾಗ ಜನಸಮೂಹವು ಸಮ್ಮೋಹಕ್ಕಳೊಗಾಗಿ ಒಬ್ಬರ ಮೇಲೊಬ್ಬರು ಒರಗಿ ಬೀಳುವುದು ಮುಂತಾದ ಪವಾಡ ದೃಶ್ಯಗಳು ಚಿತ್ರದಲ್ಲಿವೆ. ಕ್ರಿಶ್ಚಿಯನ್ ಧರ್ಮವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ಹಣ ಮಾಡುವ ತಂತ್ರವಿದು. ಇದೊಂದು ಮನೋವೈಜ್ಞಾನಿಕ ಕಥಾಹಂದರವುಳ್ಳ ಚಲನಚಿತ್ರ.

ಅನ್ವರ್ ರಶೀದ್ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಚಿತ್ರ ಫೆಬ್ರುವರಿ ತಿಂಗಳಿನಲ್ಲಿ ಕೇರಳಾದ್ಯಂತ ತೆರೆ ಕಂಡಿದ್ದು ಕೋವಿಡ್-19 ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಮುಚ್ಚಿಕೊಂಡವು. ಇದರ ಚಿತ್ರಕಥೆ ಮತ್ತು ಸಂಭಾಷಣೆ ಬರೆದವರು ವಿನ್ಸೆಂಟ್ ವಡಕನ್. ಮುಖ್ಯ ಪಾತ್ರದಲ್ಲಿ ಪಹಾದ್ ಫಾಸಿಲ್, ಪೋಷಕ ಪಾತ್ರಗಳಲ್ಲಿ ದಿಲೀಶ್ ಪೋತನ್, ಗೌತಮ್ ಮೆನನ್, ಚೆಂಬನ್ ವಿನೋದ್ ಜೋಸ್, ನಸ್ರಿಯ ನಜೀó, ಸೌಬಿನ್ ಶಾಹಿರ್ ಹಾಗು ವಿನಾಯಕನ್ ಇದ್ದಾರೆ. ಅಮಲ್ ನೀರದ್ ಛಾಯಾಗ್ರಾಹಕರಾಗಿ ಹಾಗು ಹೊಸಬ ವಿಜಯನ್ ಜಾಕ್ಸನ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಚಿತ್ರದ ಎಡಿಟಿಂಗ್ ಪ್ರವೀಣ್ ಪ್ರಭಾಕರ್. ಚಿತ್ರದ ಕಾಲಾವಧಿ 2 ಗಂಟೆ 48 ನಿಮಿಷಗಳು.

ಕಥೆಯ ಸಾರಾಂಶ

ಸಾಲೊಮನ್ ಡೇವಿಸ್ಐಸಾಕ್ ಥಾಮಸ್ ಎಂಬುವವರು ಮುಂಬಯಿಯಲ್ಲಿ ಸಂಯುಕ್ತ ಸಂಸ್ಥೆಯೊಂದರ ಪಾಲುದಾರರು. ಸಂಸ್ಥೆಯನ್ನು ಮತ್ತಷ್ಟು ಆರ್ಥಿಕವಾಗಿ ಸಬಲಗೊಳಿಸಲು ಅವರು ಕಂಡುಕೊಂಡ ವಿಧಾನ ಯೇಸುಕ್ರಿಸ್ತನ ಧರ್ಮ ಪ್ರಚಾರ. ವಿಜುಪÀ್ರಸಾದ್ ಎಂಬ ಹತಾಶ ಯುವಕನ ಜೀವನದಲ್ಲಿ ಘಟಿಸಿದ ಕಥಾವಸ್ತುವಿದು (ಪ್ಲಾಟ್). ಪ್ರಚೋದನಾಕಾರಿ ಭಾಷಣಕಾರ ಹಾಗು ನಿರೀಶ್ವರವಾದಿ ಯುವಕ ವಿಜುಪ್ರಸಾದ್ ಪಾಂಡಿತ್ಯವನ್ನು ಸಂಸ್ಥೆಯು ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಬಳಸಿಕೊಳ್ಳುತ್ತದೆ. ಕ್ರೈಸ್ತ ಧರ್ಮದ ಬೋಧನೆಯಲ್ಲಿ ಅವನಿಗೆ ತರಬೆೀತಿ ನೀಡಿ ಅವನನ್ನು ಅದ್ಭುತ ಪವಾಡಗಳನ್ನು ಮಾಡುವ (ಮಿರಾಕಲ್ ವರ್ಕರ್) ಮಾಂತ್ರಿಕನನ್ನಾಗಿ ಬದಲಾಯಿಸುತ್ತಾರೆ. ಅವನಿಗೆ ಅದರಿಂದ ನಿರೀಕ್ಷೆಗಿಂತ ಹೆಚ್ಚಿನ ಮೊತ್ತದ ಸಂಭಾವನೆ ದೊರಕುತ್ತದೆ. ಅಪ್ಪಟ ನಾಸ್ತಿಕನಾಗಿದ್ದ ವಿಜುಪ್ರಸಾದ್ ಕ್ರೈಸ್ತ ಧರ್ಮದ ಬೋಧಕ/ಪ್ರಚಾರಕನಾಗಿ ಬದಲಾಗುತ್ತಾನೆ. ಮುಂದೆ ಸಮಾಜದಲ್ಲಿ ಅವನ ಹೆಸರುಪಾಸ್ಟರ್ ಜೋಶುವ ಕಾರ್ಲ್ಟನ್ಎಂದೇ ಪ್ರಖ್ಯಾತವಾಗುತ್ತದೆ.

ಚಿತ್ರಕಥೆ

ವಿಜುಪ್ರಸಾದ್ಗೆ ಕುಂಜನ್ ಎಂಬ ಮಾನಸಿಕ ಅಸ್ವಸ್ಥತೆಯುಳ್ಳ ಕಿರಿಯ ಸಹೋದರನಿದ್ದು ಆತ ಮಾನಸಿಕ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಮೇಲೆ ವಿಜು ಹತಾಶನಾಗಿ ಮುಂಬಯಿಗೆ ಹೋಗಿ ನೆಲೆಸುತ್ತಾನೆ. ಹಿಂದೆ ಕನ್ಯಾಕುಮಾರಿಯಲ್ಲಿ ಪರಿಚಯವಾಗಿದ್ದ ಒಬ್ಬ ಕ್ಯಾಸ್ಟಿಂಗ್ ಡೈರೆಕ್ಟರ್ ಮೂಲಕ ಅವನಿಗೆ ಮುಂಬಯಿಯಲ್ಲಿ ಪ್ರಸಿದ್ಧ ಉದ್ಯಮಿಗಳಾದ ಸಾಲೋಮನ್ ಡೇವಿಸ್ಐಸಾಕ್ ಥಾಮಸ್ರವರ ಭೇಟಿಯಾಗುತ್ತದೆ. ಆತನಲ್ಲಿದ್ದ ಪ್ರಚೋದನಾಕಾರಿ ಭಾಷಣಾ ಪಾಂಡಿತ್ಯವನ್ನು ಪೋಷಿಸಿ ಒಬ್ಬ ಕ್ರಿಶ್ಚಿಯನ್ ಧರ್ಮದ ಬೋಧಕನಾಗಿ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ಅವನನ್ನು ನೇಮಕ ಮಾಡಿಕೊಳ್ಳುತ್ತಾರೆ. ಕ್ರೈಸ್ತ ಧರ್ಮದ ಬೋಧನೆ ಹಾಗೂ ಪ್ರಚಾರದ ಬಗ್ಗೆ ತರಬೇತಿ ಪಡೆಯಲು ಅವನನ್ನು ಕೊಚ್ಚಿಗೆ ಕಳುಹಿಸುತ್ತಾರೆ. ಅಲ್ಲಿ ಅವನಿಗೆ ತರಬೆೀತಿ ನೀಡಲು ಸಂಸ್ಥೆಯ ಸಹೋದ್ಯೋಗಿ ಅವರ್ಚನ್ ಎಂಬ ವ್ಯಕ್ತಿ ನಿಯೋಜಿತನಾಗುತ್ತಾನೆ.

ಪ್ರಾರಂಭದಲ್ಲಿ ಕ್ರೈಸ್ತ ಧರ್ಮದ ಬಗ್ಗೆ ತರಬೆೀತಿ ಪಡೆಯಲು ವಿಜುಪ್ರಸಾದ್ ನಿರಾಸಕ್ತನಾದರೂ ಮುಂದೆ ಅವನು ತನ್ನ ಉದ್ದೇಶಿತ ಗುರಿಯಲ್ಲಿ ಸಫಲತೆ ಸಾಧಿಸುತ್ತಾನೆ. ಕ್ರಮೇಣ ಅವನ ಧರ್ಮಬೋಧನೆಗಳು, ಪವಾಡಗಳು, ಶುಕ್ಲ ಪಕ್ಷದ ಚಂದ್ರನಂತೆ ವಿಜೃಂಭಿಸತೊಡಗುತ್ತವೆ. ಒಬ್ಬ ನಿಜವಾದ ಕ್ರಿಶ್ಚಿಯನ್ ಧರ್ಮದ ಬೋಧಕನಂತೆ ಸಾವಿರಾರು ಭಕ್ತರನ್ನು ತನ್ನಡೆಗೆ ಸೆಳೆಯುವ, ಅದ್ಭುತ ಪವಾಡಗಳನ್ನು ಮಾಡುವ ಒಬ್ಬ ಜನಪ್ರಿಯ ಪಾಸ್ಟರ್ ಆಗಿ ಜಾಗತಿಕ ಮಟ್ಟದಲ್ಲಿ ಅವನು ಮುನ್ನೆಲೆಗೆ ಬರುತ್ತಾನೆ. ಸಾಲೋಮನ್ ಹಾಗು ಐಸಾಕ್ರವರ ಉದ್ಯಮವು ವೃದ್ಧಿಸತೊಡಗಿ ಅದು ಜಾಗತಿಕವಾಗಿ ಪ್ರಸಿದ್ಧಿ ಹೊಂದುತ್ತದೆ.

ಪಾಸ್ಟರ್ ಜೋಶುವನ ಖ್ಯಾತಿಯು ಉತ್ತುಂಗಕ್ಕೇರಿ, ಅವನು ಅಪಾರ ಹಣ ಆಸ್ತಿಗಳ ಒಡೆಯನಾಗುತ್ತಾನೆ. ನಡುವೆ ಮ್ಯಾಥ್ಯೂಸ್ ಎಂಬ ಟಿ.ವಿ.ವರದಿಗಾರ ಅವನನ್ನು ಸಂದರ್ಶನಕ್ಕೆ ಆಹ್ವಾನಿಸಿ ಆನ್ಲೈನ್ನಲ್ಲಿ ಸಂದರ್ಶನ ಜರುಗುತ್ತಿರುವಾಗಲೇ ಜೋಶುವನಿಗೆ ಒಂದು ಪವಾಡ ಮಾಡುವ ಬೇಡಿಕೆಯನ್ನು ಮುಂದಿಡುತ್ತಾನೆ. ಸಂದರ್ಶನದ ನಡುವೆ ಕಮರ್ಷಿಯಲ್ ಬ್ರೇಕ್ ಸಿಕ್ಕಾಗ ಜೋಶುವ ರಹಸ್ಯವಾಗಿ ಅವನಿಗೆ ಡ್ರಗ್ಸ್ ನೀಡಿ ಕ್ಯಾಮೆರಾ ಮುಂದೆಯೇ ಕುಸಿಯುವಂತೆ ಮಾಡುತ್ತಾನೆ. ಮೊದಲಿಗೆ ಇದೊಂದು ಪವಾಡವಾಗಿಯೇ ಕಂಡು ಬಂದದ್ದು ನಂತರ ಆಸ್ಪತ್ರೆಯಲ್ಲಿ ಜರುಗಿದ ರಕ್ತ ಪರೀಕ್ಷೆಗಳಿಂದ ಆತ ಡ್ರ್ರಗ್ಸ್ ಪ್ರಭಾವದಿಂದಲೇ ಕುಸಿದು ಬಿದ್ದದ್ದು ಎಂದು ಸಾಬೀತಾಗುತ್ತದೆ.

ಸುದ್ದಿ ಎಲ್ಲಾ ಚಾನಲ್ಗಳಲ್ಲಿ ಬಿತ್ತರಗೊಂಡ ಮೇಲೆ ಸಾಲೋಮನ್ಐಸಾಕ್ ಸಂಸ್ಥೆಯ ವರ್ಚಸ್ಸು ತಗ್ಗಿ ಅದು ತೊಂದರೆಗೂ ಸಿಲುಕುತ್ತದೆ. ಇದನ್ನು ಸಹಿಸದೆ ಕುಪಿತರಾದ ಸಾಲೋಮನ್ ಡೇವಿಸ್ ಹಾಗು ಐಸಾಕ್ ಥಾಮಸ್, ಪಾಸ್ಟರ್ ಜೋಶುವನ ಮೇಲೆ ದೈಹಿಕ ಹಲ್ಲೆ ಮಾಡುತ್ತಾರೆ. ಅವನ ತಲೆಗೆ ಬಿದ್ದ ಗಂಭೀರ ಪ್ರಮಾಣದ ಪೆಟ್ಟುಗಳಿಂದ ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗುತ್ತಾನೆ. ಆಸ್ಪತ್ರೆಯಲ್ಲಿ ಎರಡು ದಿನಗಳಿಂದ ಕೋಮ ಸ್ಥಿತಿಯಲ್ಲೇ ಇರುವುದನ್ನು ಕಂಡ ಸಾಲೋಮನ್ಐಸಾಕ್ ಮುಂದೆ ತಮಗೆ ಒದಗಬಹುದಾದ ತೊಂದರೆಗಳಿಂದ ಪಾರಾಗಲು ಅವನನ್ನು ಆಸ್ಪತ್ರೆಯಲ್ಲೇ ರಹಸ್ಯವಾಗಿ ಮುಗಿಸಿಬಿಡಲು ನಿರ್ಧರಿಸುತ್ತಾರೆ.

ಅಷ್ಟರಲ್ಲಿ ಕೋಮಾಸ್ಥಿತಿಯಲ್ಲಿದ್ದ ಜೋಶುವನಿಗೆ ಆಶ್ಚರ್ಯಕರ ರೀತಿಯಲ್ಲಿ ಪ್ರಜ್ಞೆ ಮರಳುತ್ತದೆ. ಅವನ ದೇಹವು ಇದ್ದಕ್ಕಿದ್ದಂತೆ ಚಲಿಸತೊಡಗಿ ಆತ ತನ್ನ ಬೆಡ್ ಪಕ್ಕದಲ್ಲೇ ಇದ್ದ ಗ್ಲಾಸ್ನ್ನು ಒಡೆದುಕೊಂಡು ಹೊರಬಂದು ಅದ್ಭುತ ರೀತಿಯಲ್ಲಿ ಗುಣವಾಗುತ್ತಾನೆ. ನಂತರ ಸಾಲೋಮನ್ಐಸಾಕ್ ಅವರೊಂದಿಗಿದ್ದ ಒಪ್ಪಂದವನ್ನು ಪುನರ್ವಿಮರ್ಶಿಸಿ ತನಗೆ ಶೇ. 80% ರಷ್ಟು ಪಾಲು ನೀಡುವಂತೆ ಅವರೊಂದಿಗೆ ಸಂಧಾನ ನಡೆಸುತ್ತಾನೆ. ತಲೆಗೆ ಬಿದ್ದ ಭಾರಿ ಪೆಟ್ಟುಗಳಿಂದ ಈತ ಮಾನಸಿಕ ಸೀಮಿತ ಕಳೆದುಕೊಂಡು ಹೀಗೆ ವರ್ತಿಸುತ್ತಿದ್ದಾನೆಂದು ಭಾವಿಸಿದ ಅವರು, ಅವನು ಮುಂದಿಟ್ಟ ಕೋರಿಕೆಯನ್ನು ತಕರಾರು ಮಾಡದೆ ಒಪ್ಪಿಕೊಳ್ಳುತ್ತಾರೆ. ನಡುವೆ ಎಸ್ತೆರ್ ಲೋಪೆಜ್ó ಎಂಬ ಲೈಂಗಿಕ ಕಾರ್ಯಕರ್ತೆಯೊಬ್ಬಳನ್ನು ನೇಮಿಸಿ ಆಕೆಯ ಮೂಲಕ ಜೋಶುವಾನ ವರ್ತನೆ ನಾಟಕೀಯವೇ ಅಥವಾ ಮಾನಸಿಕವೇ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ.

ಕ್ರಮೇಣ ಎಸ್ತರ್ ಜೋಶುವನತ್ತ ಆಕರ್ಷಿತÀಳಾಗುತ್ತಾಳೆ. ಆತನೊಬ್ಬ ಮಾನಸಿಕ ವ್ಯಕ್ತಿ ಎಂದು ಮನದಟ್ಟಾದ ಮೇಲೆ ವಿಷಯವನ್ನು ಸಾಲೋಮನ್ಐಸಾಕ್ಗೆ ತಿಳಿಸುತ್ತಾಳೆ. ಇತ್ತ ಅವರಚನ್ ಜೋಶುವನನ್ನು ಭೇಟಿಯಾಗಿನನಗೆ ತಿಳಿದ ಮಟ್ಟಿಗೆ ಎಸ್ತರ್ ಒಂದು ಕಟ್ಟುಕಥೆಎಂದು ಏನೇನೊ ಸಬೂಬು ಹೇಳಿ ಅವನನ್ನು ಒಪ್ಪಿಸಲು ಪ್ರಯತ್ನಿಸುತ್ತಾನೆ. ನಡುವೆ ಜೋಶುವನ ಅನುಯಾಯಿ ಥಾಮಸ್ ಎಂಬ ವ್ಯಕ್ತಿ ಜ್ವರ ಪೀಡಿತಳಾದ ತನ್ನ ಮಗಳನ್ನು ಕರೆದು ತಂದು ಪವಾಡದ ಮೂಲಕ ಅವಳನ್ನು ಗುಣಪಡಿಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ಜೋಶುವಾನ ಪ್ರಾರ್ಥನೆ ವಿಫಲಗೊಂಡು ಅವನ ಮಗಳು ಸಾಯುತ್ತಾಳೆ. ಜೋಶುವ ಹತಾಶನಾಗಿ, ತಾನೊಬ್ಬ ನಿಜವಾದ ಪಾಸ್ಟರ್ ಅಲ್ಲ, ಅದ್ಭುತ ಪವಾಡ ಮಾಡುವವನೂ ಅಲ್ಲ, ಇದರ ಹಿನ್ನೆಲೆಯಲ್ಲಿ ಸಾಲೋಮನ್ಐಸಾಕ್ರವರೇ ಮುಖ್ಯ ಪಾತ್ರಧಾರಿಗಳು ಎಂದು ಸತ್ಯಾಂಶವನ್ನು ಥಾಮಸ್ ಮುಂದೆ ಬಿಚ್ಚಿಡುತ್ತಾನೆ.

ಇದನ್ನು ಟಿ.ವಿ. ಪ್ರತಿನಿಧಿ ಮ್ಯಾಥ್ಯೂಸ್ಗೂ ಮನದಟ್ಟು ಮಾಡಲು ಅವನೊಂದು ಪಶ್ಚಾತ್ತಾಪದ ವಿಡಿಯೋವನ್ನೂ ಸಹ ತಯಾರಿಸಿ ಕಳುಹಿಸುತ್ತಾನೆ. ಇದನ್ನು ಹೇಗೋ ತಿಳಿದ ಸಾಲೋಮನ್, ಮ್ಯಾಥ್ಯೂಸ್ನ್ನು ಹತ್ಯೆ ಮಾಡಿಸುತ್ತಾನೆ. ಆದರೆ ಮ್ಯಾಥ್ಯೂಸ್ ಸಾಯುವ ಮುನ್ನ ವೀಡಿಯೋ ಪ್ರಸಾರಗೊಳ್ಳುವಂತೆ ಮಾಡುತ್ತಾನೆ. ಅದು ಎಲ್ಲೆಡೆ ಪ್ರಸಾರಗೊಂಡ ಮೇಲೆ ಅವರ್ಚನ್ ಬಣ್ಣ ಬಯಲಾಗುತ್ತದೆ. ಮಗಳನ್ನು ಕಳೆದುಕೊಂಡು ಹತಾಶನಾದ ಥಾಮಸ್ ಅವಳ ಸಾವಿಗೆ ಕಾರಣಕರ್ತರಾದ ಸಾಲೋಮನ್ ಡೇವಿಸ್ಐಸಾಕ್ ಥಾಮಸ್ ಇಬ್ಬರನ್ನೂ ಹತ್ಯೆ ಮಾಡುತ್ತಾನೆ.

ಜೋಶುವ ತನ್ನ ಮಾನಸಿಕ ಅಸ್ಥಿರತೆ ಕಾರಣಗಳಿಂದ ಅಪರಾಧಮುಕ್ತನಾಗಿ ಪುನರ್ವಸತಿ ಕೇಂದ್ರದಲ್ಲಿ ಕೆಲವು ದಿನಗಳು ಕಳೆದು ಸ್ವಸ್ಥನಾದ ಮೇಲೆ, ಅವನಿಗೆ ಎಸ್ತರ್ ಒಬ್ಬಳೇ ಪ್ರಾಮಾಣಿಕಳು ಎಂಬ ಅರಿವಾಗಿ ಆಕೆ ಪ್ರಸ್ತುತ ಆಮ್ಸ್ಟರ್ಡ್ಯಾಂನಲ್ಲಿರುವುದನ್ನು ತಿಳಿದು ಅಲ್ಲಿಗೆ ತೆರಳುತ್ತಾನೆ. ಆಕೆ ಅಲ್ಲಿನ ಕೆಂಪು ದೀಪದ ಪ್ರದೇಶವೊಂದರಲ್ಲಿ ಪ್ರತ್ಯಕ್ಷಳಾಗಿ ಇಬ್ಬರೂ ಪರಸ್ಪರ ಮುಖ ನೋಡಿ ಆಕೆ ಅವನತ್ತ ಧಾವಿಸಿ ಬರುವಷ್ಟರಲ್ಲಿ ಅವಳ ಮುಂದಿದ್ದ ಕನ್ನಡಿ ಒಡೆದು ಚೂರುಚೂರಾಗುತ್ತದೆ. ಪ್ರೇಕ್ಷಕರಿಗೆ ಕಪ್ಪು ಪರದೆ ಕಾಣಿಸಿಕೊಂಡು ಚಲನಚಿತ್ರ ಕೊನೆಗೊಳ್ಳುತ್ತದೆ. ಚಲನಚಿತ್ರವನ್ನು ಯೂ ಟ್ಯೂಬ್ ಹಾಗೂ ತಮಿಳ್ ರಾಕರ್ಸ್.ಕಾಂನಲ್ಲಿ ಇಂಗ್ಲಿಷ್ ಸಬ್ ಟೈಟಲ್ನೊಂದಿಗೆ ವೀಕ್ಷಿಸಬಹುದು.

Leave a Reply

Your email address will not be published.