ನನ್ನ ಅರಿವು ಚಿಗುರಿಸಿದ ಗುರು ಚಿಮೂ

ನಾಡಿನ ಹಿರಿಯ ಸಂಶೋಧಕ ಪ್ರೊ.ಎಂ.ಚಿದಾನಂದಮೂರ್ತಿ ನನ್ನ ಭಾಗಕ್ಕೆ, ಬದುಕಿಗೆ ಕೇವಲ ಮಾಷ್ಟರಾಗಿದ್ದವರಲ್ಲ; ನನ್ನ ಸಂಶೋಧನೆಯ ಮೂಲ ಸ್ವರಗಳನ್ನು, ಸಾಂಸ್ಕೃತಿಕ ಅರಿವಿನ ವೈಚಾರಿಕತೆಯ ಮೂಲಾಕ್ಷರಗಳನ್ನು ನನ್ನ ಮಸ್ತಕದಕನ್ನೆ ನೆಲದಲ್ಲಿ ಬಿತ್ತಿ, ಸಕಲಜೀವಾತ್ಮರಿಗೆ ನೆರಳನ್ನೋ, ಫಲವನ್ನೋ ನೀಡುವ ಮರವಾಗುವ ಜೀವವಾಗಿಸಿದವರು.

ಡಾ.ಟಿ.ಗೋವಿಂದರಾಜು

ಬೆಂಗಳೂರಿನ ಕಲಾ ಕಾಲೇಜಿನಲ್ಲಿ ಬಿಎ ಪದವಿ ಬಳಿಕ, ಅದಾಗ ಜ್ಞಾನಭಾರತಿಯಲ್ಲಿ ತಲೆ ಎತ್ತಿದ್ದ ಕನ್ನಡ ಅಧ್ಯಯನ ಕೇಂದ್ರಕ್ಕೆ ಬಂದು ಸೇರಿದೆ. ಛಾಯಾಗ್ರಹಣವೋ, ವೈದ್ಯವೋ, ತೋಟಗಾರಿಕೆಯೋ ಕೊನೆಗೆ ವಿಜ್ಞಾನವೋ ಕಲಿಯಬೇಕಾದ ನಾನು ಕೊನೆಗೆ ಎಲ್ಲಿಯೂ ಸಲ್ಲದಹಳ್ಳೀಮುಕ್ಕನಾಗಿ ಕನ್ನಡಕ್ಕೆ ಬಂದದ್ದೇ ಒಂದು ಕತೆ. ಹಾಗೆ ಬಂದಾಗ ಎಂಎ ಪದವಿಗೆ ನನಗೆ ಬೇಕಾದ ಜಾನಪದ, ನಾಟಕದಂತಹ ವಿಶೇಷ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ, ಮಧ್ಯಾಹ್ನದ ಬಿಸಿಯೂಟ ಪಡೆವಲ್ಲಿ ಗುರು ಜಿಎಸ್‍ಎಸ್ ಉದಾರತೆ ತೋರಿದ್ದೂ ಸ್ಮರಣೀಯವೇ. ಮುಂದೆ ಕಿರಂ, ಮರುಳಸಿದ್ಧಪ್ಪ, ಬರಗೂರು, ಕಂಬಾರ, ವೀರಣ್ಣ, ಕೆವಿನಾ, ವಿದ್ಯಾಶಂಕರ್, ಲನಾ ಭಟ್ಟ… ಹೀಗೆ ಯಾರಾರ ಸಂಪರ್ಕದಿಂದ ನಾನು ಏನೇನು ಕಲಿತೆ, ಹೇಗ್ಹೇಗೆ ಬದಲಾದೆ, ಬೆಳೆದೆ, ಬಳಿಕ ನನ್ನತನದ ಹಾದಿಗೆ ಭದ್ರವಾದೆ ಎಂಬುದೂ ಒಂದು ಹಂಚಿಕೊಳ್ಳುವ ಇತಿಹಾಸವೇ.

ಮೊದಲ ವರ್ಷದ ಮೊದಲ ಸೆಮಿಸ್ಟರಿನ ಮೊದಲ ತರಗತಿ.. ಅದಕ್ಕಿನ್ನೂ ವೇಳಾ ಪಟ್ಟಿ, ಅಧ್ಯಾಪಕರ ನಿರ್ಧಾರ ಆಗಿರಲಿಲ್ಲ ಎನ್ನಿಸುತ್ತೆ. ಅಂತೂ ಮೊದಲ ದಿನ ಮೊದಲ ಪಿರಿಯಡ್‍ಗೆ ಬಂದವರೇ ಡಾ.ಎಂಸಿಎಂ (ಮಠದ ಚಿದಾನಂದಮೂರ್ತಿ). ಚಿಮೂ ಬಂದಾಕ್ಷಣ ಎದ್ದು ನಿಂತು ಗೌರವ ಸೂಚಿಸಿದೆವು. ಅವರ ದನಿ, ದೈಹಿಕ ಸೌಷ್ಠವವೂ ಹಾಗೇ ಇತ್ತು. ಚಿಮೂ ಅವರು ಜಿಎಸ್‍ಎಸ್‍ಗಿಂತ ಹಿರಿಯ ವಯಸ್ಕರೆಂದೇ ನಂಬಿದ್ದ ನನಗೆ ಬೇಗ ಭ್ರಮ ನಿರಸನವಾಯಿತು: ಚಿದಾನಂದಮೂರ್ತಿಯವರೇ ಶಿವರುದ್ರಪ್ಪನವರ ವಿದ್ಯಾರ್ಥಿಯಾಗಿದ್ದವರು!

ಒಂದಿಷ್ಟು ಸಾಹಿತ್ಯ, ಸಾಮಾಜಿಕಾದಿ ವಿಷಯಗಳ ಬಗ್ಗೆ ಲೋಕಾಭಿರಾಮವಾಗಿ ಮಾತಾಡಿ, ಕೊನೆಗೆ ಪುರಂದರ ದಾಸರ ಬಗ್ಗೆ ಪ್ರಬಂಧ ಬರೆವ ಹೋಂ ವರ್ಕ್ ನೀಡಿದರು. ಹೈಸ್ಕೂಲ್‍ನಲ್ಲಿ ಬರೆದು ರೂಢಿಯಿದ್ದ ನಾನೂ ಉತ್ಸುಕತೆಯಿಂದಲೇ ಒಂದೆರಡು ಪುಟ ಬರೆದುಕೊಂಡು ಹೋದೆ. ಮಾರನೇ ದಿನ ನೋಡಿದಾಗ ನನ್ನ ಹಾಗೂ ಪಕ್ಕದಲ್ಲೇ ಕೂರುತ್ತಿದ್ದ ಸಹಪಾಠಿ ಚಂದ್ರಶೇಖರ್ ನಂಗಲಿಯ ಬರಹಗಳ ಮೊದಲ ಸಾಲುಗಳು ಬಹುಮಟ್ಟಿಗೆ ಒಂದೇ ಬಗೆಯಾಗಿದ್ದು ಇಬ್ಬರಿಗೂ ಅಚ್ಚರಿ ಎನಿಸಿದ್ದವು.

ಸರ್ ಅದನ್ನು ಒಪ್ಪಿ, ಅದರ ಬಗ್ಗೆ ಮತ್ತಷ್ಟು ಮನವರಿಕೆ ಮಾಡಿದರು. ಮತ್ತೊಮ್ಮೆ ವಚನ ಚಳವಳಿ ಬಗ್ಗೆ ಮಾತಾಡುತ್ತಾ, ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣ ಮಂತ್ರಿ ಪದವಿಯಲ್ಲಿರದಿದ್ದರೆ ಏನಾಗುತ್ತಿತ್ತು..?

ಪಾಠದ ಸಂದರ್ಭದಲ್ಲಿ ಸರ್, ಯುರೋಪಿನ ಕ್ರಾಂತಿ ವಿಷಯ ಪ್ರಸ್ತಾಪಿಸಿ, ‘ಕ್ರಾಂತಿ’ ಎಂದರೇನೆಂದರು. ಅನಿಸಿದ್ದನ್ನು ಹೇಳುತ್ತಿದ್ದವರನ್ನು ತಡೆದು, ಹಾಗಾದರೆ, ಕ್ರಾಂತಿ ಎಂದರೆ ಸರ್ವನಾಶ ಮಾಡುವುದು ಎಂದರ್ಥವೇ? ಎಂಬ ಪ್ರಶ್ನೆ ಎಸೆದರು. ಲಗಾಮು ಜಗ್ಗಿಸಿ ಎಳೆಯಿತು. ಹೌದಲ್ಲ, ಸರ್ವನಾಶವಾದರೆ ಉಳಿವುದೇನು? ಆಮೇಲೆ ನಾವೇನು! ಸಿದ್ಧಾರ್ಥನಿಗೆ ಬೆಳಕಾದಂತೆ ನನಗೂ ಅರಿವು ಎಚ್ಚರಿಸಿತು: ‘ಹೌದು ಸರ್; ಸರ್ವನಾಶ ಅಲ್ಲ, ತೀವ್ರವಾದ ಬದಲಾವಣೆ; ಅಮಾನವೀಯವಾದ ಹಳೆಯದು ಹೋಗಿ ಹೊಸ ತಿಳಿವಿನ ಹೊಸ ಬದುಕು ಹುಟ್ಟುವುದು’ ಎಂಬರ್ಥದಲ್ಲಿ ಹೇಳಿದೆ. ಸರ್ ಅದನ್ನು ಒಪ್ಪಿ, ಅದರ ಬಗ್ಗೆ ಮತ್ತಷ್ಟು ಮನವರಿಕೆ ಮಾಡಿದರು. ಮತ್ತೊಮ್ಮೆ ವಚನ ಚಳವಳಿ ಬಗ್ಗೆ ಮಾತಾಡುತ್ತಾ, ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣ ಮಂತ್ರಿ ಪದವಿಯಲ್ಲಿರದಿದ್ದರೆ ಏನಾಗುತ್ತಿತ್ತು..? ಎಂದರು. ಬಹುಶಃ ನಾನು ತಕ್ಷಣ ಪ್ರತಿಕ್ರಿಯಿಸಿದ್ದೆ: ‘ಸಾಮಾಜಿಕ ಚಳವಳಿಯನ್ನು ಆ ಪ್ರಮಾಣದಲ್ಲಿ (ಅಧಿಕಾರಯುತವಾಗಿ) ಮಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ (ಒಬ್ಬ ಸಾಮಾನ್ಯ ಶರಣನೋ, ವಚನಕಾರನೋ ಆಗಿರುತ್ತಿದ್ದನೇನೋ). ಮೇಷ್ಟರು ಅದಕ್ಕೆ ಸಮ್ಮತಿಸಿ, ಹೋರಾಟದಲ್ಲಿ ಅಧಿಕಾರ ಹಾಗೂ ಸ್ಥಾನ ಗೌರವದ ಅಗತ್ಯದ ಬಗೆಗೂ ವಿವರಿಸಿದ ನೆನಪು.

ಇನ್ನೊಂದು ತರಗತಿ ಮಾತ್ರ ನನಗೆ ಹೆಚ್ಚು ಮುಖ್ಯದ್ದಾಯಿತು. ‘ಭಾರತೀಯ ಸಂಸ್ಕೃತಿ’ ಬಗ್ಗೆ ಪ್ರಬಂಧ ಬರೆದು ತರುವ ಹೋಂ ವರ್ಕ್ಕೊಟ್ಟರು. ನಾನು ಮತ್ತದೇ ಹೈಸ್ಕೂಲ್, ಪಿಯು ವಿದ್ಯಾರ್ಥಿಯ ಅಭ್ಯಾಸದಂತೆ ಬರೆದುಕೊಂಡು ಹೋಗಿದ್ದೆ. ಮೇಷ್ಟರು ಕುತೂಹಲದಿಂಲೇ ಕಣ್ಣಾಡಿಸಿದರು. ಬಹುಶಃ ನಮ್ಮ ತಿಳಿವಿನ ಮಟ್ಟವನ್ನು ಅರಿವ ಉದ್ದೇಶದಿಂದಲೇ ಅವರು ಈ ಬಗೆಯ ಹೋಂ ವರ್ಕ್ ಕೊಡುತ್ತಿದ್ದರೆಂದು ನಾನು ಸಹಜವಾಗಿ ನಂಬುತ್ತೇನೆ. ಆದಷ್ಟೂ ಚೆನ್ನಾಗಿ ಬರೆಯಬೇಕೆಂಬ ಉಮೇದೂ ನನ್ನಂತಹವರಿಗೆ ಸಹಜವಾಗೇ ಇರುತ್ತೆ. ಅವರು ನನ್ನತ್ತ ತಿರುಗಿ ಬಹು ಅಕ್ಕರೆ, ಮಮತೆಯಿಂದಲೇ ತಾಯ್ನುಡಿಯಂಥಾ ಮೆದು ಮಾತಲ್ಲೆ ತಿದ್ದಿದರು: ‘ನೀವೆಲ್ಲಾ ಈಗ ಸಾಹಿತ್ಯದ ವಿದ್ಯಾರ್ಥಿಗಳು. ನಿಮ್ಮ ಬರಹದ ಕ್ರಮ, ವಿಚಾರ ಹೀಗಿರಬಾರದು. ಜಗತ್ತಿನಲ್ಲಿ ಯಾವ ಸಂಸ್ಕೃತಿಯೂ ಸರ್ವ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಧರ್ಮ, ಪರಂಪರೆಯ ಬಗೆಗೂ ನಾವು ಹಾಗೇ ತಿಳಿಯಬೇಕು, ಮಾತಾಡಬೇಕು..’ ನನಗೆ ತಟ್ಟಿದಂತಾದರೂ ಬುದ್ಧಿ ಚುರುಕೂ ಆಯಿತು. ನಾನು ಬರೆದದ್ದು ‘ಭಾರತವು ದಿವ್ಯಭೂಮಿ, ಭವ್ಯಭೂಮಿ. ಭಾರತೀಯ ಸಂಸ್ಕೃತಿ ಶ್ರೇಷ್ಠವಾದುದು, ಪವಿತ್ರವಾದುದು, ಇದನ್ನು ಮೀರಿಸುವಂತಹದ್ದು ಜಗತ್ತಿನಲ್ಲಿ ಯಾವುದೂ ಇಲ್ಲ..’

ಬಿಎ ತರಗತಿಯ ವಚನ ಪಠ್ಯದಲ್ಲಿ ಬರಗೂರರ ಉಪನ್ಯಾಸ ಕೇಳಿ ಒಂದಿಷ್ಟು ಬದಲಾಗಿದ್ದರೂ, ಚಿಮೂ ಮಾತಿನಿಂದ ನಾನು ಮತ್ತಷ್ಟು ಬದಲಾದೆ. ಮುಂದೆ ‘ಸಂಸ್ಕೃತಿ ಅಧ್ಯಯನ’ದ ತರಗತಿಯಲ್ಲಿ ಮರುಳಸಿದ್ಧಪ್ಪ ಅವರು ಖ್ಯಾತ ಸಾಂಸ್ಕೃತಿಕ ಚಿಂತಕ ಕ್ರೋಬರನ ವ್ಯಾಖ್ಯೆಯ ಪಾಠ ಮಾಡಿದಾಗ ಚಿಮೂ ಅವರ ಮಾತುಗಳು ಚೆನ್ನಾಗಿ ಮನನವಾದವು. ಸಿವಿ, ಕಿರಂ ಅಂತಹವರ ಪಾಠದಲ್ಲಿ, ಸಂಗದಲ್ಲಿ ನನ್ನ ತಿಳಿವಿನ ದಾರಿಯೇ ಬೇರಾಯಿತು.

ಇದನ್ನು ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ತಾಯಿ ಭುವನೇಶ್ವರಿಯ ಹಂಪಿಹೊಳಿಯಲ್ಲಿ ನಾನು ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸುದೀರ್ಘ ಪತ್ರ ಬರೆದಿಟ್ಟು ಹೊಳೆಗೆ ಹಾರಿ, ಅಲ್ಲಿದ್ದ ಅಂಬಿಗರ ನೆರವಿನಿಂದ ಬದುಕಿ ಬಂದಿದ್ದರು.

ನನ್ನ ಎದೆಯಲ್ಲಿಷ್ಟು ವಿಚಾರವಂತಿಕೆಯ, ಸಂಸ್ತಿ ಚಿಂತನೆಯ ಕಿಡಿ ಹತ್ತಿಸಿ, ನನ್ನನ್ನು ಹೀಗೆ ಹೊಸ ಹಾದಿಗೆ ದೂಡಿದ್ದ, ಎಂದೂ ಮರೆಯಬಾರದ ಚಿಮೂ ಆಮೇಲೇ ತಾವೇ ‘ಚಿಂತನೆಯ ಹಿಂಪಯಣ’ದ ಹಳೇ ಕೊರಕಲು ಜಾಡಿಗೆ ಬಿದ್ದದ್ದು ಕಂಡು ನನಗೆ ತೀವ್ರವಾದ ವಿಷದ, ನೋವು ಆಯಿತು; ಎಂದೂ ಆಗುತ್ತಲೇ ಇರುತ್ತದೆ. ಅವರಲ್ಲಿ ಬೆಳೆದ ಧರ್ಮ-ಪರಂಪರೆ- ಸಂಸ್ಕೃತಿಯ ‘ವ್ಯಸನ’ ಯಾವ ಹಂತದ್ದೆಂದರೆ, ‘ಭವ್ಯವಾದ ಕನ್ನಡ ಸಂಸ್ಕೃತಿ ಪರಂಪರೆ ಅನ್ಯರ ಆಕ್ರಮಣಕ್ಕೆ ಸಿಕ್ಕಿ ನಾಶವಾಗಿದೆ; ನೃಪತುಂಗ, ಚಾಳುಕ್ಯಾದಿ ಅರಸರ ಕಾಲದ ವೈಭವ ಮರಳಿ ತರಲು ಯಾರೂ ಮುಂದಾಗುತ್ತಿಲ್ಲ; ಇದನ್ನು ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ತಾಯಿ ಭುವನೇಶ್ವರಿಯ ಹಂಪಿಹೊಳಿಯಲ್ಲಿ ನಾನು ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸುದೀರ್ಘ ಪತ್ರ ಬರೆದಿಟ್ಟು ಹೊಳೆಗೆ ಹಾರಿ, ಅಲ್ಲಿದ್ದ ಅಂಬಿಗರ ನೆರವಿನಿಂದ ಬದುಕಿ ಬಂದಿದ್ದರು.

ನಾನು ಪರಿಷತ್ತಿನ ಗ್ರಂಥಾಲಯದಲ್ಲಿ ಏನೋ ಓದುತ್ತಿದ್ದಾಗ ಹತ್ತಿರ ಬಂದು, ‘ಗೋವಿಂದರಾಜು, ನಾನು ಹೀಗೆ ಮಾಡಿದೆ ನೋಡಿ..’ ಎಂದು ಕಾಳಜಿಯಿಂದ ಪತ್ರ ತೋರಿಸಿದ್ದರು. ಅದನ್ನು ನೆನೆದು ನನಗೀಗ ಹನಿಗಣ್ಣಾಗುತ್ತಿವೆ. ಅಂಥಾ ದೊಡ್ಡ ವಿದ್ವಾಂಸರಿಗೂ ನನ್ನಂತಹ ಕಿರಿಯರಲ್ಲಿ ಏನೋ ತೋಡಿಕೊಳ್ಳುವ ತಹತಹ. ಇಂಥಾ ಯಾವ ಭಾವುಕತನದಿಂದ ಏನೂ ಸಾಧ್ಯವಾಗುವುದಿಲ್ಲ ಎಂಬ ಸಾಮಾನ್ಯ ತಿಳಿವನ್ನೂ ಅವರಲ್ಲಿ ಅಳಿಸಿ ಹಾಕಲಾಗಿತ್ತೇ! ನನಗೆ ಬಹಳ ಬೇಕಾಗಿದ್ದ ಮೈಸೂರು ವಿವಿಯ ಅಧ್ಯಾಪಕರೊಬ್ಬರೂ ಹೀಗೇ ವ್ಯಸನ ಹತ್ತಿಸಿಕೊಂಡು, ಕೊನೆಗೆ ‘ಎಲ್ಲೆಡೆ ಲಂಚ.. ಭ್ರಷ್ಟರ ಹಾವಳಿ ಅತಿಯಾಗಿದೆ; ಅರ್ಹರಿಗೆ ಅವಕಾಶ ಸಿಗುತ್ತಿಲ್ಲ; ದೂರುಕೊಟ್ಟರೂ ಫಲವಾಗಿಲ್ಲ. ಇದನ್ನು ನಾನು ವಿರೋಧಿಸುತ್ತೇನೆ..’ ಎಂದು ರಾಜ್ಯಪಾಲರಿಗೆ ಪತ್ರ ಬರೆದು ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ನೇಣು ಬಿಗಿದುಕೊಂಡಿದ್ದರು. ಈ ಇಬ್ಬರೂ ಒಂದೇ ಪರಿವಾರದ (‘ಸ್ಕೂಲ್’) ಸಕ್ರಿಯ ಕಾರ್ಯಕರ್ತರಾಗಿದ್ದರೆಂದು ನನಗೆ ಚೆನ್ನಾಗಿ ಗೊತ್ತಿತ್ತು.

‘ಚಿಮೂ ಅವರನ್ನು ಆ ‘ಸಂಸ್ಕೃತಿ ಸ್ಕೂಲ್’ಗೆ ಸೇರಿಸಿದ್ದೇ ನಾನು. ಬಳಿಕ ಕಿರಂ ಪಾಠ ಕೇಳಿದ ಮೇಲೆ, ಅಲ್ಲಿನ ಪಾಠಕ್ಕೆ ಹೇವರಿಸಿ ಈಚೆ ಓಡಿದೆ; ಚಿಮೂ ಮೇಷ್ಟರು ಪಾಪ ಅಲ್ಲಿಗೇ ಬಲಿಬಿದ್ದರು’ ಎಂದು ನನ್ನೊಬ್ಬ ಮಿತ್ರ ಅಲವತ್ತುಕೊಳ್ಳುತ್ತಿದ್ದಾನೆ! ಇವರಿಬ್ಬರಂತೆ ‘ದಾರಿ ತಪ್ಪಿದ’ವರು ಇನ್ನೂ ಅನೇಕರಿದ್ದಾರೆ. ನಾನು ಹೀಗೆ ಬರೆಯುತ್ತಿರುವುದನ್ನು ವಿರೋಧಿಸುವವರೂ ಹಲವರು ಇರುವುದು ಅಚ್ಚರಿ ಏನಲ್ಲ. ಆದರೆ, ನನ್ನ ಗೌರವದ ಗುರು ಹಾಗೂ ಒಡನಾಡಿಯ ನಡುವಿನ ಅಂತಃಕರಣ, ಕಾಳಜಿಯಿಂದ ನನ್ನ ಅಭಿಪ್ರಾಯವನ್ನು ದಾಖಲಿಸುವ ಸ್ವಾತಂತ್ರ್ಯವಾದರೂ ನನಗಿದೆ; ಅದಕ್ಕೆ ಯಾರಿಗೂ ಹೆದರಬೇಕಿಲ್ಲ ಎಂಬ ಧೈರ್ಯವಂತೂ ನನಗೆ ಬಂದಿದೆ.

ಅವರ ನಿಲುವಿಗೆ ವಿರುದ್ಧವಾದುದು ಹೇಳಿದರೆ ಅಲ್ಲಿಂದ ಸರಿದುಬಿಡುತ್ತಿದ್ದರು. ಒಮ್ಮೆ ಪರಿಷತ್ತಿನಲ್ಲಿ ನನ್ನನ್ನು ಕರೆದು ಉತ್ಸುಕತೆಯಿಂದ, ‘ನೋಡಿ.. ಒಂದು ಹೊಸ ಸಂಗತಿ:

ಡಾ.ಚಿದಾನಂದಮೂರ್ತಿ ಅವರ ಕನ್ನಡ ನಾಡುನುಡಿಯ ಚಿಂತನೆ, ಭಾಷೆ, ಸಂಸ್ಕೃತಿ ಬಗೆಗಿನ ಸಂಶೋಧನಾ ಹಿರಿಮೆ ಉನ್ನತವಾದುದು. ಅದರಲ್ಲಿ ಎರಡು ಮಾತಿಲ್ಲ. ಸದಾ ಸಂಶೋಧನಾಮುಖಿಯಾಗಿದ್ದ ಚಿಮೂ ಅನೇಕ ಸಂದರ್ಭಗಳಲ್ಲಿ ನನಗೆ ಪರಿಷತ್ತು ಅಥವಾ ಮಿಥಿಕ್ ಸೊಸೈಟಿಯ ಗ್ರಂಥಾಲಯಗಳಲ್ಲಿ ಕಾಣಸಿಗುತ್ತಿದ್ದರು. ಇಳಿವಯಸಲೂ ಶಿಸ್ತಿನ ವಿದ್ಯಾರ್ಥಿಯಂತಹ ಅವರ ಶ್ರದ್ಧೆ ಮಾದರಿಯಾದುದು. ಏನಾದರೂ ಹೊಸ ಸಂಗತಿ ದೊರೆತರೆ ಅದನ್ನು ತಕ್ಷಣ ಪ್ರಕಟಿಸುತ್ತಿದ್ದರು. ನನ್ನಂತಹವರೊಂದಿಗೂ ಹಂಚಿಕೊಳ್ಳಬಯಸುತ್ತಿದ್ದರು.

‘ನೀವು ಕಲಿಸಿದ ವಿದ್ಯಾರ್ಥಿ ನಾನು ಎಷ್ಟು ಬೆಳೆದಿದ್ದೇನೆ ನೋಡಿ’ -ಎಂಬ ಸಹಜ ಉತ್ಸುಕತೆಯಿಂದ ಯಾವುದಾದರೂ ಬರಹವನ್ನು ನೀಡಿದರೆ ಅದನ್ನು ಓದಿ, ದಾರಿ ತೋರುವ ಪುರುಸೊತ್ತೂ ಅವರಿಗಿರುತ್ತಿರಲಿಲ್ಲ ಎಂಬುದರ ಅರಿವಾಗಿ ನನಗೂ ಬೇಸರವಾಗಿತ್ತು. ಆದರೆ, ವಯಸ್ಸಾದಂತೆ ಅವರ ಹಲವು ಚಿಂತನೆಗಳು ‘ಬಾಲಿಶ’ವಾದಂತೆ ನನ್ನಂತೆ ಹಲವರಿಗೆ ಅನಿಸಿದರೂ ಹೇಳುವುದು ಕಷ್ಟವಾಗುತ್ತಿತ್ತು. ಅವರ ನಿಲುವಿಗೆ ವಿರುದ್ಧವಾದುದು ಹೇಳಿದರೆ ಅಲ್ಲಿಂದ ಸರಿದುಬಿಡುತ್ತಿದ್ದರು. ಒಮ್ಮೆ ಪರಿಷತ್ತಿನಲ್ಲಿ ನನ್ನನ್ನು ಕರೆದು ಉತ್ಸುಕತೆಯಿಂದ, ‘ನೋಡಿ.. ಒಂದು ಹೊಸ ಸಂಗತಿ: ಹಂಪಿಯಲ್ಲಿ ವಿರೂಪಾಕ್ಷನ ದೇವಸ್ಥಾನದ ಬಲಭಾಗಕ್ಕೆ ಭುವನೇಶ್ವರಿಯ ದೇವಸ್ಥಾನ ಇದೆ! ಬಹುಶಃ ವಿವಾಹ ಪೂರ್ವದ ಸಂಕೇತವಿರಬಹುದಲ್ಲವೇ..?’

ಪದವಿ ಮುಗಿದಾಗ ಮೇಷ್ಟರು ಇಂಗ್ಲಿಷನಲ್ಲಿ -ಸ್ವತಃ ಕೈಬರಹದಲ್ಲಿ ಬರೆದುಕೊಟ್ಟ ‘ಪರಿಚಯ ಪತ್ರ’ (ಟೆಸ್ಟಿಮೊನಿಯಲ್) ಅಪರೂಪದ ನನ್ನ ದಾಖಲೆ. ವಿದ್ಯಾರ್ಥಿಗಳಿಗೆ ಪಾಠ ಹೇಳಿದ ಗುರು ನೀಡುವ ಅಂತಹ ಶಿಫಾರಸು ಪತ್ರಗಳು ವಿವಿಯ ಮತ್ತೊಂದು ದೊಡ್ಡ ಪದವಿ ಪತ್ರ ಇದ್ದಂತೆಯೇ. ಮೇಷ್ಟರಿಗೆ ನನ್ನ ತಿಳಿವಿನ ಬಗ್ಗೆ ಎಂಥಾ ನಂಬುಗೆ ಇತ್ತೋ; ವಿದ್ಯಾರ್ಥಿಯಾಗಿದ್ದಾಗಲೇ ಒಮ್ಮೆ ಮಾತಿನಲ್ಲಿ ‘ಕ’ಕಾರದ ಕೆಲ ಶಬ್ದಗಳು ‘ಚ’ಕಾರ (ಕೆನ್ನೆ-ಚೆನ್ನೆ) ಆಗುವ ಭಾಷಶಾಸ್ತ್ರದ ಕೆಲವು ಮಾಹಿತಿಯ ಕ್ಷೇತ್ರಕಾರ್ಯಕ್ಕೆ ನನ್ನನ್ನು ಅರಕಲಗೂಡಿಗೆ ಕಳುಹಿಸಿದ್ದರು.

ಮುಂದೊಮ್ಮೆ, ‘ಎಲ್ಲಿಯಾದರೂ ಕೆಲಸ ಮಾಡುತ್ತೀರಾ..?’ ‘ಹೌದು ಸರ್, ಉಪನ್ಯಾಸಕ..’ ‘ಸಂತೋಷ; ಸ್ವಂತ ಮನೆ ಮಾಡಿಕೊಂಡಿರಾ..?’ ‘ಆಗಿಲ್ಲ..ಸಾ’. ‘ಛೇ, ಬೇರೆ ಎಲ್ಲೆಲ್ಲಿಂದಲೋ ಬಂದು ಇಲ್ಲಿ ನೆಲೆಸುತ್ತಿದ್ದಾರೆ.. ಇಲ್ಲಿಯವರಿಗೇ ಸ್ಥಳವಿಲ್ಲದಂತಾಗುತ್ತದೆ. ಬೆಂಗಳೂರಿನಲ್ಲೇ ಬೇಗ ಒಂದು ಮನೆ ಮಾಡಿಕೊಳ್ಳಿ..’ ಮೇಷ್ಟರದು ಕೊನೆಗೂ ಕನ್ನಡ, ಕನ್ನಡಿಗರ ಉಳಿವಿನ ಆತಂಕ. ಕೊನೆಗೆ ಮಹಾನಗರ ಪಾಲಿಕೆಯ ತುತ್ತತುದಿಯಲ್ಲಿ ನನ್ನ ಊರ ಹಾದಿಯಲ್ಲೇ ನಾನೂ ಒಂದು ಮನೆ ಮಾಡಿಕೊಂಡೆ. ಆದರೆ, ಮೇಷ್ಟರು ಮನೆಯಿಂದ ‘ಹೋರಟ’ರಲ್ಲಾ ! 

Leave a Reply

Your email address will not be published.