ನನ್ನ ಕ್ಲಿಕ್

ಮೀನುಗಾರನ ಚಿತ್ತಾರ

ಮೀನುಗಾರಿಕೆ ಒಂದು ಕಲೆ. ಗಾಳ ಹಾಕಿ, ಅಥವಾ ಬಲೆಯಿಂದ ಮೀನು ಹಿಡಿಯುವುದು ಮೀನುಗಾರರ ಕುಲಕಸಬು. ಆದರೆ ಇಲ್ಲಿರುವ ಮೀನುಗಾರ ತನ್ನ ಕೆಲಸದಲ್ಲಿ ಮಗ್ನನಾಗಿರುವಾಗಲೇ ದೃಶ್ಯಕಾವ್ಯ ಮೂಡಿಸಿದ್ದಾನೆ. ಮುಸ್ಸಂಜೆಯ ಹೊತ್ತಿನಲ್ಲಿ ಮೀನುಗಾರ ನಿಂತ ನೀರಿನಲ್ಲಿ ಬಲೆ ಹರಡಿದ ನಂತರ ಉದ್ದ ಬೆತ್ತದಿಂದ ನೀರಿಗೆ ಬಡಿಯುತ್ತಾನೆ. ಇದರಿಂದಾದ ತಲ್ಲಣಕ್ಕೆ ಮೀನುಗಳು ಚದುರಿ ಬಲೆಯಲ್ಲಿ ಬೀಳಲಿ ಎಂಬುದು ಆತನ ಉದ್ದೇಶ. ಆದರೆ ಆತ ಬಡಿದ ರಭಸಕ್ಕೆ ನೀರು ಚಿಮ್ಮಿ, ಸಂಜೆಯ ಸೂರ್ಯ ಕಿರಣಗಳನ್ನು ಪ್ರತಿಫಲಿಸಿ ಚಿತ್ತಾರ ಮೂಡಿರುವುದು ಮೀನುಗಾರನ ಗಮನಕ್ಕೆ ಬಂದ ಹಾಗಿಲ್ಲ. ಅವನ ಗಮನವೆಲ್ಲಾ ಎಷ್ಟು ಮೀನು ಸಿಗಬಹುದು ಎಂಬ ಲೆಕ್ಕಾಚಾರದ ಕಡೆಗೆ. ಆದರೆ ಪ್ರಕೃತಿಯ ಕರಾಮತ್ತಿನಿಂದಾದ ಚಿತ್ತಾರ ಕ್ಯಾಮರ ಕಣ್ಣಲ್ಲಿ ಸೆರೆಯಾಯಿತು. ಮಂಡ್ಯ ಜಿಲ್ಲೆಯ ಹಳ್ಳಿಯೊಂದರ, ಕಾವೇರಿ ನದಿ ತೀರದಲ್ಲಿ ಕಂಡು ಬಂದ ದೃಶ್ಯವಿದು.
-ಡಾ. ಎಸ್. ಶಿಶುಪಾಲ (9449162135)
ಸೂಕ್ಷ್ಮಜೀವಿಶಾಸ್ತ್ರ ವಿಭಾಗ
ದಾವಣಗೆರೆ ವಿಶ್ವವಿದ್ಯಾನಿಲಯ
ಶಿವಗಂಗೋತ್ರಿ, ದಾವಣಗೆರೆ
ssdumb@gmail.com

 

ಗುರುಬಸವರಾಜ ಯು
ದಕ್ಷಿಣ ಭಾರತದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕೃಷ್ಣ ದೇವರಾಯನ ನಾಡು , ತುಂಗಭದ್ರಾ ಪವಿತ್ರ ನದಿ ತಟದಲ್ಲಿರುವ ವಿರೂಪಾಕ್ಷ ದೇವಾಲಯದ ಒಂದು ನೋಟ ಮಾತಂಗ ಪರ್ವತದಿಂದ…!

 

 

 

ಬಾನಿಗೆ ಬಳಿದ ಬಣ್ಣ

ಬೆಂಗಳೂರಿನ ಮುಂಜಾನೆ ಸೂರ್ಯ, ತಾನು ಹಳದಿಯಾಗಿದ್ದರೂ, ಬಾನಿಗೆಲ್ಲ ಕೇಸರಿ ಬಳಿದು, ಮಾನವ ನಿರ್ಮಿತಿಗಳನ್ನು ಕಪ್ಪು – ಹೆಪ್ಪುಗಟ್ಟಿಸಿದ ಕ್ಷಣ. ನಿರ್ಮಾಣ ಹಂತದ ಕಟ್ಟಡಗಳು ಅಸ್ಥಿಪಂಜರದಂತೆ, ಪ್ರಕೃತಿಯ ವರ್ಣಜಾಲದ ಮುಂದೆ ಮಂಕಾದಂತೆ ಕಂಡಿತು. ಮರ – ಗಿಡಗಳ ಹಸಿರಿಗೆ ಅವಕಾಶವೀಯದ ನಗರೀಕರಣದ ಭರಾಟೆಯ ನಡುವೆ ಸೂರ್ಯದೇವ ತನ್ನ ಛಾಪನ್ನು ಬಿಡದೇ ಮೂಡಿಸಿದ ಇಚ್ಛೆಯ ಉಗಮದಂತೆ ಗಮನ ಸೆಳೆಯಿತು.
-ಎಂ. ಸಂಕೀರ್ತ.ಹಾಸನ.

 

ಕ್ರಿಸ್ ಮಸ್ ಕ್ಯಾಂಡಲ್ ಹಚ್ಚಲೊಂದು ಕಡ್ಡಿ

ನೋಡಲು ಥೇಟು ಕ್ರಿಸ್ ಮಸ್ ಕ್ಯಾಂಡಲ್ ಹಚ್ಚುವ ಕಡ್ಡಿಯ ತರಹ ಕಾಣಿಸೋದರಿಂದ ಇದನ್ನು ಹಾಗೆ ಕರೆಯಲಾಗುತ್ತದೆ.ಆದರೆ ಶಾಸ್ತ್ರೀಯ ಹೆಸರು,’’ ಲಿಯೊನೊಟಿಸ್ ನೆಪೆಟಿಫೋಲಿಯಾ’’.ಫ್ಯಾಮಿಲೇಸಿಯೆ ಕುಟುಂಬದಲ್ಲಿ ಇದನ್ನು ವರ್ಗೀಕರಿಸಲಾಗಿದೆ.ಇದರ ಮೂಲ ಆಫ್ರಿಕಾ ಮತ್ತು ದಕ್ಷಿಣ ಭಾರತ.ಅಮೇರಿಕಾ ಮತ್ತು ವೆಸ್ಟಿಂಡೀಸ್ ಗಳಲ್ಲೂ ಹೇರಳವಾಗಿ ಬೆಳೆಯುತ್ತದೆ.ಮೂರು ಮೀಟರ್ ಗಳಷ್ಟು ಎತ್ತರವಾಗಿ ಬೆಳೆಯಬಲ್ಲುದು.ಹೂವುಗಳು ದುಂಡಗೆ ಸುತ್ತಲೂ ಬೆಳೆಯುತ್ತವೆ.ಕಿತ್ತಳೆ,ಕೆಂಪು, ಬಿಳಿ ಮತ್ತು ಜಾಂಬಳಿ ಬಣ್ಣದ ಹೂವುಗಳಾಗುತ್ತವೆ.ಎಲೆಗಳು ತುಂಬಾ ಮೃದುವಾಗಿರುತ್ತವೆ.ಎಲೆಗಳು ಅಲ್ಲಲ್ಲಿ ಹರಡಿಕೊಂಡಂತೆ ಇರುತ್ತವೆ.ಎಲೆಗಳು ಹತ್ತು ಸೆಂಟಿಮೀಟರ್ ದಷ್ಟು ಅಗಲವಾಗಿರುತ್ತವೆ.
ಔಷಧೀಯ ಗುಣವೂ ಈ ಸಸ್ಯಕ್ಕಿದೆ.ಎಲೆಯ ಕಷಾಯ ಜ್ವರ ಮತ್ತು ಕೆಮ್ಮಿಗೆ ಮದ್ದು ಎಂದು ಹೇಳಲಾಗುತ್ತದೆ.
ಚಿತ್ರ ಮತ್ತು ಬರಹ: ನಾರಾಯಣ ಬಾಬಾನಗರ
ಶ್ರಯಧೇನು 873/1 ಪ್ಲಾಟ್ ನಂಬರ್ 7 0 
ಭಾವಸಾರ ನಗರ ದರ್ಗಾ ರಸ್ತೆ
ವಿಜಯಪುರ-586101
ಮೊಬೈಲ್ ನಂಬರ್ 9164469858

 

Leave a Reply

Your email address will not be published.