ನನ್ನ ಕ್ಲಿಕ್

ಚಿತ್ರಗಳಾಚೆಯ ಸಾಧ್ಯತೆಗಳತ್ತ ಚಲಿಸುವ ಈ ಛಾಯಾಚಿತ್ರಗಳಲ್ಲಿ ವರ್ಣಚಿತ್ರಗಾರನ ನಿಪುಣತೆ ಇದೆ. ಕಲಾವಿದನ ಕುಂಚದಲ್ಲಿ ಮೂಡಿದಂತಿರುವ ಬಿಗಿಯಾದ ವರ್ಣ ಸಂಯೋಜನೆಯುಳ್ಳ ಈ ಚಿತ್ರಗಳನ್ನು ಪೇಂಟೋಗ್ರಫಿ (Paintography) ಎನ್ನಬಹುದು. ಛಾಯಾಚಿತ್ರಗಾರಿಕೆಯಲ್ಲಿ ಸ್ಥಿರತೆಗೆ ಪ್ರಾಧಾನ್ಯವಿರುತ್ತದೆ. ಈ ನಿಯಮಕ್ಕೆ ವಿರುದ್ಧವಾಗಿ ಇಲ್ಲಿ ಇಮೇಜುಗಳು ನೃತ್ಯ ಮಾಡುತ್ತಿವೆ; ಬಣ್ಣ, ವಸ್ತು ಸಂಯೋಜನೆ ಗಳೆಲ್ಲವೂ ನಲಿಯುತ್ತಿವೆ. ಹಾಗಾಗಿ ಚಿತ್ರಗಳು ನೋಡುಗನ ಮನದಲ್ಲಿ ಕಾವ್ಯವಾಗಿ, ಭಿನ್ನ ಗ್ರಹಿಕೆಯ ಆಲೋಚನಾ ಕ್ರಮದಲ್ಲಿ ಅಭಿವ್ಯಕ್ತಿ ಪಡೆಯುತ್ತವೆ.

 

 

 

 

 

Leave a Reply

Your email address will not be published.