ನನ್ನ ಕ್ಲಿಕ್

ಕಬಿನಿ ನಿರಾಶೆಗೊಳಿಸುವುದಿಲ್ಲ!

 

ಇಲ್ಲಿರುವ ಚಿತ್ರಗಳನ್ನು ಕಳೆದ ಜನೆವರಿಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಬಿನಿ ನದಿ ಪರಿಸರದಲ್ಲಿ ತೆಗೆದಿದ್ದೇನೆ. ಮರದ ಮೇಲೆ ಕುಳಿತಿದ್ದ ಚಿರತೆಯನ್ನು ಬೆಳಿಗ್ಗೆ ಸಫಾರಿಯಲ್ಲಿ ಸೆರೆಹಿಡಿಯಲಾಗಿದೆ. ಹಿಂದಿನ ದಿನ ಈ ಚಿರತೆ ಮಚ್ಚೆಯ ಜಿಂಕೆಯೊಂದನ್ನು ಕೊಂದು ಆರಾಮವಾಗಿ ಮರದ ಮೇಲೆ ಕುಳಿತಿತ್ತು. ಹಾಗಾಗಿ ಚಿರತೆಯ ಚಿತ್ರ ಮತ್ತು ವಿಡಿಯೊ ತೆಗೆದುಕೊಳ್ಳಲು ಸಾಕಷ್ಟು ಸಮಯ ಸಿಕ್ಕಿತು.

ಇನ್ನು ಈ ಭವ್ಯ ಹುಲಿರಾಯ ಕಬಿನಿ ಹಿನ್ನೀರಿನಲ್ಲಿ ಕಂಡುಬಂದ; ಪೊದೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಅವನು ಕಬಿನಿ ಹಿನ್ನೀರಿನ ಹೊಸ ಪ್ರಬಲ ಆಡಳಿತಗಾರ. ಅವನು ಹದಿನೈದು ನಿಮಿಷ ಪೊದೆಯಲ್ಲಿ ಕುಳಿತಿದ್ದರಿಂದ ಸ್ಥಳದಲ್ಲಿದ್ದ ನಾವು ಅದೃಷ್ಟವಂತರು. ನಂತರ ಆ ಸ್ಥಳಕ್ಕೆ ಇನ್ನೆರಡು ಜೀಪುಗಳು ಬರುತ್ತಿದ್ದಂತೆ ಹುಲಿರಾಯ ಅಲ್ಲಿಂದ ಹೊರಡಲು ನಿರ್ಧರಿಸಿದ. ಆತ ಎರಡು ಜೀಪುಗಳ ನಡುವಿನ ಹಾದಿಯನ್ನು ದಾಟುವಷ್ಟು ಧೈರ್ಯಶಾಲಿಯಾಗಿದ್ದರಿಂದ ನಿಧಾನವಾಗಿ ಘನ ಗಾಂಭೀರ್ಯದಿಂದ ಪೊದೆಗಳಲ್ಲಿ ಕಣ್ಮರೆಯಾದ. ಒಂದು ಹಂತದಲ್ಲಿ ಹುಲಿ ನಮ್ಮ ಜೀಪಿನಿಂದ ಐದು ಅಡಿಗಳಷ್ಟು ಹತ್ತಿರದಲ್ಲಿತ್ತು. ಹುಲಿ ಮತ್ತು ಚಿರತೆಗಳನ್ನು ನೈಸರ್ಗಿಕ ಆವಾಸಸ್ಥಾನದಲ್ಲಿ ನೋಡುವುದು ರೋಚಕ ಅನುಭವ.

Leave a Reply

Your email address will not be published.