ನಮ್ಮನ್ನು ಬಿಟ್ಟರೆ ಇಲ್ಲ; ಧೋರಣೆ ಸರಿಯಲ್ಲ!

ಮಾರ್ಚ್ ಸಂಚಿಕೆಯಲ್ಲಿ ಪ್ರಕಟಿಸಿರುವ ಎಲ್ಲ ಲೇಖನಗಳು ಬಹಳ ಚಿಂತನಶೀಲವಾಗಿವೆ. ಈ ಲೇಖನಗಳ ವಸ್ತುವಿಷಯ ನಿಜಕ್ಕೂ ಗಂಭೀರವಾದವು ಹಾಗು ಬಹಳ ಪ್ರಸ್ತುತವಾದ ವಿಷಯಗಳು. ನಮ್ಮ ದೇಶದಲ್ಲಿ ಪ್ರಾರಂಭವಾಗಿರುವ ಹೊಸ ಸಮಸ್ಯೆಗಳು ಜಾತಿ ಧರ್ಮದ ಮೇಲೆ ಆಧಾರವಾಗಿರುವುದು ನಿಜಕ್ಕೂ ದುಃಖಕರ ಸಂಗತಿ.

ನಾರಾಯಣಮೂರ್ತಿ ಅವರ ಭಾಷಣಗಳನ್ನು ಪ್ರಕಟಿಸಿದ್ದೀರಿ. ಇದು ಬಹಳ ಸಂತೋಷದ ವಿಷಯ. ಅವರ ಭಾಷಣಗಳÀ ವಿಷಯಗಳನ್ನು ನಮ್ಮ ತರುಣ ಪೀಳಿಗೆ ಬಹಳ ಗಂಭೀರವಾಗಿ ಯೋಚಿಸಬೇಕಾಗಿದೆ. ಅವರು ನಮ್ಮ ದೇಶವೇಕೆ ಪಾಶ್ಚಾ÷್ಯತ್ಯ ದೇಶಗಳ ಮಟ್ಟದಲ್ಲಿ ವಿಜ್ಞಾನಿಗಳನ್ನು ಹೊರತರುತ್ತಿಲ್ಲ ಎನ್ನುವುದರ ಬಗ್ಗೆ ಬಹಳ ಉತ್ತಮ ರೀತಿಯಲ್ಲಿ ಪರಾಮರ್ಶಿಸಿದ್ದಾರೆ. ಸಧ್ಯದಲ್ಲಿ ನಮ್ಮ ದೇಶದ ವಿದ್ಯಾವಂತ ಜನತೆ ನಾವು ಎಲ್ಲ ಮಾಡಿ ಮುಗಿಸಿ ಎಲ್ಲವನ್ನು ಸಾಧಿಸಿ ಬಿಟ್ಟಿದ್ದೇವೆ ಎನ್ನುವ ರೀತಿಯ ಮನೋಭಾವನೆ ಬೆಳೆಸಿಕೊಂಡಿದ್ದಾರೆ. ನಿಜ ಹೇಳಬೇಕೆಂದರೆ, ನಮ್ಮನ್ನು ಬಿಟ್ಟರೆ ಇಲ್ಲ! ಎನ್ನುವ ಧೋರಣೆ ಇದೆ. ವಿಜ್ಞಾನದಲ್ಲಿ ಈ ಧೋರಣೆ ಸಲ್ಲದು.

ನಾನು ನನ್ನ ಪತಿ ಅಮೆರಿಕೆಯ ಪ್ರಸಿದ್ಧ ವಿಶ್ವವಿದ್ಯಾಲಯದಲ್ಲೇ ಸಂಶೋಧನೆ ನಡೆಸಿದ್ದೇವೆ. ಇಲ್ಲಿ ಅತ್ಯಂತ ಬುದ್ಧಿವಂತ ಮತ್ತು ನೂರಾರು ಸಾಧನೆ ಗೈದ ವಿಜ್ಞಾನಿಗಳು ಕೂಡಾ ಈ ಧೋರಣೆ ಹೊಂದಿರುವುದಿಲ್ಲ. ಅವರಿಗೆ ಜ್ಞಾನದ ದಾಹ ಮತ್ತು ವಿಜ್ಞಾದ ಬಗ್ಗೆ ಎಷ್ಟು ಕೌತುಕ ಮತ್ತು ಕುತೂಹಲವಿದೆ ಎನ್ನುವುದನ್ನು ನೋಡಿ ಬೆರಗಾಗಿದ್ದೇನೆ. ಹಾಗಾಗಿ ಈ ದೇಶಗಳು ಇನ್ನು ವಿಜ್ಞಾನದಲ್ಲಿ ಮುಂದುವರೆದ ದೇಶಗಳಾಗಿವೆ ಮತ್ತು ಇನ್ನು ಉನ್ನತವಾದದ್ದನ್ನು ಸಾಧಿಸುತ್ತಲೇ ಇದ್ದಾರೆ. ಇದನ್ನು ನಮ್ಮ ತರುಣ ಪೀಳಿಗೆ ಅರಿತರೆ ಮಾತ್ರ ನಾವು ನಮ್ಮ ದೇಶ ವಿಜ್ಞಾನದಲ್ಲಿ ಉತ್ತಮವಾದದ್ದನ್ನು ಸಾಧಿಸಲು ಸಾಧ್ಯ.

ನೂರಾರು ವರ್ಷಗಳ ಹಿಂದೆ ನಮ್ಮ ಹಿರಿಯರು ಮಾಡಿದ ಹಲವು ಉತ್ತಮ ಕಾರ್ಯಗಳನ್ನೇ ಹೊಗಳುತ್ತಾ ಕುಳಿತುಕೊಂಡರೆ ನಾವು ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುವ ಘಟ್ಟ ತಲುಪಲು ಸಾಧ್ಯವಿಲ್ಲ. ಒಟ್ಟಿನಲ್ಲಿ ವಿಚಾರಶೀಲ ಲೇಖನಗಳನ್ನು ಪ್ರಕಟಿಸಿ ಈ ವಿಷಯಗಳಿಗೆ ಒಂದು ಚಿಂತನ ವೇದಿಕೆ ನೀಡಿದ್ದೀರಿ. ಬಹಳ ಸಂತೋಷ.

Leave a Reply

Your email address will not be published.