ನಮ್ಮ ಊರಿನ ಮಾತಿನ ಚತುರರು

ನಮ್ಮ ಊರಿನ ಜನರೇ ವಿಚಿತ್ರ. ಅದು ಎಲ್ಲಿ ಮಾತು ಕಲಿತುಕೊಂಡು ಬಂದರೋ ಏನೋ ಸಂದರ್ಭಕ್ಕೆ ತಕ್ಕಂತಹ ಮಾತುಗಳನ್ನು ಆಡಿ ಕೇಳುಗರನ್ನು ಮೈಮರೆಯಿಸಿ ಬಾಯಿ ಮುಚ್ಚುವಂತೆ ಮಾಡಿಬಿಡುತ್ತಾರೆ. ಅವರ ಮಾತು ಸಂದರ್ಭಕ್ಕೆ ತಕ್ಕಂತೆ ಬಹಳ ಸೊಗಸಾಗಿರುತ್ತದೆ.

ನನ್ನ ಊರು ಸೂರಗೊಂಡನಹಳ್ಳಿ, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿದೆ. ಸುಮಾರು ಮೂರು ನೂರು ಮನೆಗಳಿರುವ ಈ ಗ್ರಾಮದಲ್ಲಿ, ಎಲ್ಲಾ ಜನಾಂಗದವರಿದ್ದಾರೆ. ಪ್ರತಿ ಒಂದು ಜನಾಂಗಕ್ಕೂ ಅವರದೇ ಆದ ದೇವರು. ಯಾವುದೇ ದೇವರ ಹಬ್ಬ-ಜಾತ್ರೆ ಆದರೂ ಅಲ್ಲಿಗೆ ಪ್ರತಿ ಒಂದು ಜಾತಿಯವರೂ ಕಲೆತು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇಲ್ಲಾ ಹಬ್ಬಗಳಿಗಿಂತ ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬ ಎಂದರೆ ಮೊಹರಂ ಹಬ್ಬ.

ತಾಲೂಕು ಕೇಂದ್ರದಿಂದ ಸುಮಾರು ಹದಿನೈದು ಕಿ.ಮೀ. ದೂರದಲ್ಲಿರುವ ಈ ಹಳ್ಳಿಯ ಪೂರ್ವ ದಿಕ್ಕಿನಲ್ಲಿ ಫಲವತ್ತಾದ ಕಪ್ಪು ಭೂಮಿ. ಹತ್ತಿ ಬಿಳಿಜೋಳಕ್ಕೆ ಬಹಳ ಹೆಸರುವಾಸಿ. ಪಶ್ಚಿಮ ದಿಕ್ಕಿನ ಭೂಮಿ ಕೆಂಗಲು (ಕೆಂಪುಭೂಮಿ) ನವಣೆ-ಸಜ್ಜೆಗೆ ಹೇಳಿ ಮಾಡಿಸಿದಂತಹುದು. ಉತ್ತರ ದಿಕ್ಕಿನ ಭೂಮಿ ಕಪ್ಪುಮಿಶ್ರಿತ ಕೆಂಪು. ಇಲ್ಲಿ ತೊಗರಿ, ಕಡಲೆ, ಔಡಲ ಬೆಳೆ ಬೆಳೆಯುತ್ತಾರೆ. ಊರಿನ ದಕ್ಷಿಣದಲ್ಲೇ ಒಂದು ಕೆರೆ. ಇದನ್ನು ಹಿರಿಕೆರೆ ಎಂದು ಕರೆದರೆ, ಅದರ ಪಕ್ಕದಲ್ಲಿರುವ ಕೆರೆಯನ್ನು ಚಿಕ್ಕಕೆರೆ ಎಂದು ಕರೆಯುತ್ತಾರೆ. ಈ ಕೆರೆಗಳ ಮುಂಭಾಗದಲ್ಲಿ ಅಡಿಕೆ, ತೆಂಗು, ಬಾಳೆ ಮತ್ತು ವೀಳ್ಯದ ಎಲೆಯನ್ನು ಬೆಳೆಯುತ್ತಾರೆ. ಈ ತೋಟಗಳ ಎಲೆ ಅಡಿಕೆ ಎಂದರೆ ಇಡೀ ಜಿಲ್ಲೆಗೇ ಹೆಸರುವಾಸಿ. ಜನಪರ ಹಾಡುಗಳಲ್ಲಿ ಇಲ್ಲಿನ ಎಲೆ, ಅಡಿಕೆ ಬಹಳ ವಿಧವಾಗಿ ವರ್ಣಿಸಲ್ಪಟ್ಟಿದೆ. ಹೀಗೆ ತಮಗೆ ಬೇಕುಬೇಕಾದುದನ್ನು ಬೆಳೆದುಕೊಂಡು ಸಮೃದ್ಧಿಯಾಗಿ ಜೀವನ ಸಾಗಿಸುತ್ತಿದ್ದ ನಮ್ಮ ಜನ ಇತ್ತಿತ್ತಲಾಗೆ ಮಳೆಯ ಅಭಾವದಿಂದ ಅಲ್ಪಸ್ವಲ್ಪ ನರಳುತ್ತಲೇ ಬರುತ್ತಿದ್ದಾರೆ. ಆದರೂ ಜೀವನಕ್ಕೇನು ತೊಂದರೆ ಇಲ್ಲ.

ಈ ನಮ್ಮ ಊರಿನ ಜನರೇ ವಿಚಿತ್ರ. ಅದು ಎಲ್ಲಿ ಮಾತು ಕಲಿತುಕೊಂಡು ಬಂದರೋ ಏನೋ ಸಂದರ್ಭಕ್ಕೆ ತಕ್ಕಂತಹ ಮಾತುಗಳನ್ನು ಆಡಿ ಕೇಳುಗರನ್ನು ಮೈಮರೆಯಿಸಿ ಬಾಯಿ ಮುಚ್ಚುವಂತೆ ಮಾಡಿಬಿಡುತ್ತಾರೆ. ಅವರ ಮಾತು ಸಂದರ್ಭಕ್ಕೆ ತಕ್ಕಂತೆ ಬಹಳ ಸೊಗಸಾಗಿರುತ್ತದೆ.

ಊರಲ್ಲಿ ಏನೇ ಜಗಳವಾದರೂ ಅದು ತೀರ್ಮಾನವಾಗುತ್ತಿದ್ದುದು ಗೌಡರ ಮನೆ ಮುಂದೆಯೇ. ಗೌಡರೇ ಎಲ್ಲವುದನ್ನು ವಿಚಾರ ಮಾಡಿ, ತಪ್ಪಿಗೆ ತಕ್ಕ ಶಿಕ್ಷೆಯನ್ನು, ಬೇರಿನ್ಯಾವುದನ್ನೂ ಪರಿಗಣಿಸದಂತೆ ನೀಡುತ್ತಿದ್ದರು. ಜನ ಅದನ್ನು ಮರುಮಾತಿಲ್ಲದಂತೆ ಸ್ವೀಕಾರ ಮಾಡಿಕೊಳ್ಳುತ್ತಿದ್ದರು. ಒಂದು ಸಾರಿ ಊರಲ್ಲಿ ಎರಡು ಗುಂಪುಗಳ ಮಧ್ಯೆ ದೊಡ್ಡ ಗಲಾಟೆ ಸಂಭವಿಸಿತು. ಎರಡೂ ಕಡೆಯವರಿಗೂ ಹೊಡೆತಗಳು ಬಿದ್ದು, ಪೊಲೀಸ್ ಕಂಪ್ಲೇಂಟ್ ಆಗಿ, ಅನೇಕ ವರ್ಷಗಳ ಕಾಲ ಕೋರ್ಟ್‍ಗೆ ಅಲೆದು ಅಲೆದು ಸುಸ್ತಾಗಿ, ಇದ್ದಬದ್ದ ಹಣವನ್ನೆಲ್ಲಾ ಖರ್ಚು ಮಾಡಿಕೊಂಡು, ಕೊನೆಗೆ ಎಲ್ಲರೂ ರಾಜಿ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದೇಬಿಟ್ಟರು. ಊರ ಗೌಡರು ಈ ಮಾತಿಗೆ ಸಮ್ಮತಿಸಿ, ಕೋರ್ಟಿನಲ್ಲೇ ರಾಜಿ ಆಗಬೇಕೆನ್ನುವ ನಿಬಂಧನೆ ಇದ್ದ ಕಾರಣದಿಂದ ಅಲ್ಲೇ ರಾಜಿ ಮಾಡಿಸಲು ಸಿದ್ಧರಾದರು.

ರಾಜಿ ಆಗುವ ದಿನ ಬಂದೇಬಿಟ್ಟಿತು. ಎರಡೂ ಕಡೆಯವರು ಜಡ್ಜ್ ಮುಂದೆ ಸಾಲಾಗಿ ನಿಂತಿದ್ದಾರೆ. ಒಂದು ಕಡೆಯ ವ್ಯಕ್ತಿ ಓಬಯ್ಯ, ಹೆಡ್ಡ ಅವನಿಗೆ ಏನು ಎತ್ತ ಎನ್ನುವುದು ಗೊತ್ತಾಗದೆ ಕೋರ್ಟಿನ ಮುಂದುಗಡೆ ಸುಮ್ಮನೆ ಓಡಾಡುತ್ತಿದ್ದಾನೆ. ಇವನನ್ನು ಕೋರ್ಟ್ ಒಳಗಡೆ ಜಡ್ಜ್ ಮುಂದೆ ನಿಂತಿದ್ದ ಕುರುಡ ನಾಗೇಂದ್ರಪ್ಪ ನೋಡಿ, ನಾನೆಲ್ಲಿದ್ದೇನೆ ಎನ್ನುವುದನ್ನೇ ಮರೆತು ಕಿಟಕಿ ಮುಖಾಂತರವೇ ಜೋರಾಗಿ “ಹೇ! ಓಬಾ, ಲೇ! ಓಬಾ, ಬಾರೋ ಒಳಗಡೆಗೆ” ಎಂದು ಕೈಎತ್ತಿ ಕೂಗಿದ್ದಾನೆ. ಇದನ್ನು ನೋಡಿದ ಜಡ್ಜ್ ಕೋಪದಿಂದ ಅವನತ್ತ ನೋಡಿ ‘ರೀ ಏನ್ರೀ ಇದೆಲ್ಲಾ’ ಎಂದು ಅಬ್ಬರಿಸಿದ್ದಾರೆ. ಆಗ ಗೌಡರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಏನೋ ಮುಂದೆ ಆಗೇ ಬಿಡುತ್ತದೆ ಎಂದುಕೊಂಡು ನಾಗೇಂದ್ರಪ್ಪನ ಹತ್ತಿರಕ್ಕೆ ಹೋಗಿ ಅವನ ಮೈ ಸವರುತ್ತಾ “ಹೆದ್ರಕ್ಕೊ ಬೇಡಪ್ಪ, ಹೆದ್ರಿಕೆ ಬೇಡಪ್ಪ” ಎಂದು ಹೇಳೇ ಹೇಳಿದ್ದಾರೆ.

ಈಗ ನಾಗೇಂದ್ರಪ್ಪನ ಬಗ್ಗೆ ಒಂದೆರಡು ಮಾತನ್ನು ಹೇಳಲೇಬೇಕು. ಅವನು ಬಹಳ ಜೋರು ಮತ್ತು ಮಹಾಚುರುಕು. ಅವನು ನಡೆದಾಡಿದರೆ ನೆಲ ನಡುಗಿದಂತಾಗುತ್ತಿತ್ತು. ಒಂದು ಸಾರಿ ಏನಾಯ್ತು ಎಂದರೆ ಊರಿನ ಪಕ್ಕದಲ್ಲೇ ಒಂದು ನೀರಿನ ಕೋಡಿ, ಅದರ ಸುತ್ತ ಪೆಳೆಗಳು ಹೇಗೆಂದರೆ ಹಾಗೆ ಬೆಳೆದಿವೆ. ಆ ನೀರಿನ ಜಾಗಕ್ಕೆ ಅಗಸರ ತಿಪ್ಪೇಸ್ವಾಮಿ ಬಟ್ಟೆ ಒಗೆದುಕೊಂಡು ಬರುವುದಕ್ಕೆ ಹೋಗಿದ್ದಾನೆ. ಕೋಡಿ ಒಳಗೆ ಒಳಗಡೆಗೆ ಇಣಿಕಿ ನೋಡಿದ್ದಾನೆ. ಅಲ್ಲಿ ಒಂದು ಕರಡಿ ತನ್ನ ಮರಿಗಳ ಮುಂದೆ ಕೂತಿದೆ. ಇದನ್ನ ನೋಡಿದ ಕೂಡಲೇ ಅವನು ಹೆದರಿಕೊಂಡು ಊರಿನ ಕಡೆಗೆ ಓಡಿಬಂದು, ನಡೆದದ್ದನ್ನೆಲ್ಲಾ ನಡುಗುತ್ತಲೇ ಊರಿನವರಿಗೆ ಹೇಳಿದ್ದಾನೆ.

ಈ ಮಾತನ್ನು ಒಲೆ ಮುಂದೆ ಕೂತು ಮೆಣಸಿನಕಾಯಿ ಮಿರ್ಚಿ ಕರಿ ಯುತ್ತಿದ್ದ ನಾಗೇಂದ್ರಪ್ಪ ಕೇಳಿಸಿಕೊಂಡು, “ಥೂ! ಹೇಡಿ ನನ್ನ ಮಗನೆ, ಹೆಣ್ಗ, ಅಲ್ಲೇ ಕರಡಿನ ಬಡಿದು ಬರುವುದನ್ನು ಬಿಟ್ಟು, ನರಸತ್ತವನಂತೆ ಓಡಿ ಬಂದಿದ್ದಾನೆ” ಎಂದು ಬೈದು ತನ್ನ ಮನೆಯಲ್ಲಿದ್ದ ಒಂದು ಕೊಡಲಿಯನ್ನು ತೆಗೆದುಕೊಂಡು, ಅದನ್ನು ಚೆನ್ನಾಗಿ ಮಸೆದುಕೊಂಡು “ಬಾರೊ ಹೇಡಿ, ಆ ಕರಡಿ ಎಲ್ಲೈತೆ ತೋರಿಸು, ಅದನ್ನ ಒಂದೇ ಏಟಿಗೆ ಕತ್ತರಿಸದಿದ್ರೆ ನಾನು ಗಂಡ್ಸೇ ಅಲ್ಲ” ಎಂದು ಘರ್ಜಿಸುತ್ತಾ, ತಿಪ್ಪೇಸ್ವಾಮಿಯನ್ನು ಕರಡಿ ಇದ್ದ ಜಾಗಕ್ಕೆ ಕರೆದುಕೊಂಡು ಬಂದಿದ್ದಾನೆ. ಅವರಿಬ್ಬರು ಮುಂದೆ, ಅವರ ಹಿಂದೆ ಊರಿನ ಅನೇಕ ಹುಡುಗರು. ತಿಪ್ಪೇಸ್ವಾಮಿ ಕೋಡಿ ಹತ್ತಿರಕ್ಕೆ ಕರೆದುಕೊಂಡು ಹೋಗಿ, ಇಲ್ಲೇ, ಇದರ ಒಳಗಡೆ ಕೂತಿದೆ ಎಂದು ಹೇಳಿ ಪಕ್ಕಕ್ಕೆ ಸರಿದಿದ್ದಾನೆ.

ನಾಗೇಂದ್ರಪ್ಪನ ಮುಖವೆಲ್ಲಾ ರಕ್ತಮಯ, ಒಂದು ಕಣ್ಣೇ ನೆಲದ ಮೇಲೆ ಬಿದ್ದಿದೆ. ನೋವು ತಡೆಯಲಾರದೆ ಕಿರಿಚಾಡಿದ್ದಾನೆ. ಆಸ್ಪತ್ರೆಗೆ ಸೇರಿಸಿದ್ದಾರೆ. ಅದೆಷ್ಟೋ ವರ್ಷಗಳಿಗೆ ಅವನ ಮುಖ ಸರಿಯಾಗಿದೆ. ಆದರೆ ಮುಖವೆಲ್ಲಾ ಪರಚಿಕೊಂಡಂತಿದೆ ಮತ್ತು ಅವನ ಒಂದು ಕಣ್ಣೇ ಇಲ್ಲ. ಅದಕ್ಕೋಸ್ಕರವೇ ಜನ ಅವನನ್ನು ಕುರುಡು ನಾಗೇಂದ್ರಪ್ಪನೆಂದೇ ಕರೆಯುತ್ತಿದ್ದುದು.

ನಾಗೇಂದ್ರಪ್ಪ ಕೋಡಿ ತೂಬಿನ ಮುಂದೆ ಕೊಡಲಿ ಎತ್ತಿಕೊಂಡೇ ಘರ್ಜಿಸಿದ್ದಾನೆ. ಅವನ ಘರ್ಜನೆ ಕೇಳಿದ್ದೇ ತಡ ಕರಡಿ ಹೊರಗಡೆ ಹಾರಿ ಕೊಂಡು ಬಂದು, ನಾಗೇಂದ್ರಪ್ಪ ಅದನ್ನ ಕಡಿಯುವುದಕ್ಕಿಂಥ ಮೊದಲೇ ಅವನನ್ನ ಅದು ಹಿಡಿದು ಎಳೆದಾಡಿ, ಮುಖವನ್ನೆಲ್ಲಾ ಗಿಬರಿ, ಒಂದು ಕಣ್ಣು ಕಿತ್ತು ತನ್ನ ಮರಿಗಳ ಜೊತೆ ಓಟಕಿತ್ತಿದೆ. ನಾಗೇಂದ್ರಪ್ಪನ ಮುಖವೆಲ್ಲಾ ರಕ್ತಮಯ, ಒಂದು ಕಣ್ಣೇ ನೆಲದ ಮೇಲೆ ಬಿದ್ದಿದೆ. ನೋವು ತಡೆಯಲಾರದೆ ಕಿರಿಚಾಡಿದ್ದಾನೆ. ಆಸ್ಪತ್ರೆಗೆ ಸೇರಿಸಿದ್ದಾರೆ. ಅದೆಷ್ಟೋ ವರ್ಷಗಳಿಗೆ ಅವನ ಮುಖ ಸರಿಯಾಗಿದೆ. ಆದರೆ ಮುಖವೆಲ್ಲಾ ಪರಚಿಕೊಂಡಂತಿದೆ ಮತ್ತು ಅವನ ಒಂದು ಕಣ್ಣೇ ಇಲ್ಲ. ಅದಕ್ಕೋಸ್ಕರವೇ ಜನ ಅವನನ್ನು ಕುರುಡು ನಾಗೇಂದ್ರಪ್ಪನೆಂದೇ ಕರೆಯುತ್ತಿದ್ದುದು.

ಈ ನಾಗೇಂದ್ರಪ್ಪ ಈಗ ಕೋರ್ಟ್ ಒಳಗಡೆಯಿಂದಲೇ, ಒಬ್ಬ ಇಲ್ಲದಿದ್ದರೂ ರಾಜಿ ಆಗುವುದಿಲ್ಲ ಎಂದುಕೊಂಡು ಜಡ್ಜ್ ಮುಂದುಗಡೆ ಇಂದಲೇ “ಹೇ ಓಬ! ಲೇ! ಬಾರೋ ಇಲ್ಲಿ” ಎಂದು ಕೂಗಿದ್ದಾನೆ. ಇದನ್ನೆಲ್ಲಾ ಗಮನಿಸಿದ ಜಡ್ಜ್, “ಏನ್ರೀ ಇದೆಲ್ಲಾ” ಅಂದಾಗ, ಗೌಡ್ರು “ಸ್ವಾಮಿ ಒಂದು ಸಾರಿ ಕರಡಿ ಇವನ ಮುಖವನ್ನೆಲ್ಲಾ ಗಿಬರಿ ಒಂದು ಕಣ್ಣನ್ನೇ ಕಿತ್ತು ಬಿಸಾಕಿದೆ. ಅಂದಿನಿಂದ ಇವನಿಗೆ ಯಾವುದೇ ತರಹದ ಕಪ್ಪು ಬಟ್ಟೆ ಕಂಡರೆ ಆಗುವುದೇ ಇಲ್ಲ, ಹೆದರಿಬಿಡುತ್ತಾನೆ. ಇಲ್ಲಿ ಈ ಸಾಹೇಬರುಗಳೆಲ್ಲಾ ಕಪ್ಪು ಕೋಟು ಧರಿಸಿರುವುದನ್ನು ನೋಡಿ, ಅವನಿಗೆ ಹೆದರಿಕೆ ಆಗಿ ಈ ರೀತಿ ಕಿರಿಚಿದ್ದಾನೆ” ಎಂದಿದ್ದಾರೆ. ಆಗ ಜಡ್ಜ್, ‘ಅವನನ್ನು ಹೊರಗಡೆ ಕರೆದುಕೊಂಡು ಹೋಗಿ, ನೀರು ಕುಡಿಸಿಕೊಂಡು ನಿಧಾನವಾಗಿ ಕರೆದುಕೊಂಡು ಬನ್ನಿ’ ಎಂದ ಕೂಡಲೇ ನಮ್ಮ ಗೌಡರು ಅವನನ್ನು ಹೊರಗಡೆ ಕರೆದುಕೊಂಡು ಹೋಗಿ ಚೆನ್ನಾಗಿ ಬೈದು, ಎಚ್ಚರಿಕೆ ಕೊಟ್ಟು ಮತ್ತೆ ಒಳಗಡೆ ಕರೆದುಕೊಂಡು ಬಂದಿದ್ದಾರೆ.

ನಂತರ ಜಡ್ಜ್ ಎರಡೂ ಕಡೆಯವರನ್ನ ವಿಚಾರಿಸಿ ರಾಜಿ ಮಾಡಿದ ನಂತರ ಮತ್ತೆ ಗೌಡರನ್ನ, “ಏನ್ರಿ ಗೌಡರೇ, ನಿಮ್ಮ ಊರಲ್ಲಿ ಇಷ್ಟೇನಾ? ಅಥವಾ ಇನ್ನು ಏನೇನಾದರು ಇದೆಯಾ? ಎಂದು ಕೇಳಿದ್ದಾರೆ. ಆ ಮಾತಿಗೆ ಗೌಡರು, “ಇನ್ನು ಏನಿಲ್ಲಾ ಸ್ವಾಮಿ, ಏನೋ ಊರಲ್ಲಿ ಅಲ್ಪ ಸ್ವಲ್ಪ ಭಿನ್ನಾಭಿಪ್ರಾಯಗಳಿವೆ” ಎಂದಿದ್ದಾರೆ. ಈ ಮಾತನ್ನ ಕೇಳಿಸಿಕೊಂಡ ಜಡ್ಜ್, “ಭಿನ್ನಾಭಿಪ್ರಾಯ ಎಂದರೆ ಏನು” ಎಂದು ಪ್ರಶ್ನಿಸಿದ್ದಾರೆ. ಆಗ ಗೌಡರು ಈಗ ಏನು ಹೇಳಿದರೂ ನಾನು ಮಾತಿಗೆ ಸಿಕ್ಕಿಬಿಡುತ್ತೇನೆ ಎಂದುಕೊಂಡು, ಏನನ್ನೂ ಹೇಳದೆ, “ಅದೇ ಸ್ವಾಮಿ ಭಿನ್ನಾಭಿಪ್ರಾಯ ಎಂದರೆ ಅಭಿಪ್ರಾಯದಲ್ಲಿ ಭಿನ್ನ” ಎಂದಿದ್ದಾರೆ. ಈ ಮಾತನ್ನು ಕೇಳಿದ ಜಡ್ಜ್ ತಮ್ಮ ಮುಖದ ಮೇಲೆ ನಗುವನ್ನು ಕಂಡುಕೊಂಡು ‘ಹಾಗೆಂದರೇನು’? ಎಂದು ಕೇಳಿದ್ದಾರೆ. ಆಗ ಗೌಡರು ನಿಧಾನವಾಗೇ “ಅದೇ ಸ್ವಾಮಿ ನನ್ನ ಮಾತು ನಿಮಗೆ ಅರ್ಥವಾಗಲ್ಲ, ನಿಮ್ಮ ಮಾತು ನನಗೆ ಅರ್ಥವಾಗಲ್ಲ” ಎಂದಿದ್ದಾರೆ. ಈ ಮಾತು ಕೇಳಿದ ಜಡ್ಜ್ ಮುಗುಳ್ನಗುತ್ತಾ ಸುಮ್ಮನಾಗಿದ್ದಾರೆ.

“ನೋಡಪ್ಪಾ ಒಂದು ತಟ್ಟೆ ತುಂಬಾ ಪಾಯಿಸಾನೆ ತೆಗೆದುಕೊಂಡು, ಅದನ್ನು ಸಮನಾಗಿ ಎರಡು ಪಾಲು ಮಾಡಿ, ಇದರಲ್ಲಿ ಯಾವ ಪಾಲು ಚೆನ್ನಾಗಿದೆ, ಎಂದು ಕೇಳಿದರೆ, ನಾನು ಏನನ್ನು ಹೇಳಲಿ ಎಂದು ಹೇಳುತ್ತಾ ನನ್ನ ಮುಂದಿನ ಮಾತನ್ನೇ ತಡೆಹಿಡಿದ.

ನಮ್ಮ ಊರಲ್ಲಿ ಅಣ್ಣ ತಮ್ಮ ಇಬ್ಬರು ಇದ್ದರು. ಅವರಿಬ್ಬರೂ ಮಹಾಗಂಟುಕಳ್ಳರು. ಸಾಲ ಪಡೆದ ಹಣವನ್ನ ಹಿಂದಿರಿಗುಸುತ್ತಿದ್ದುದೇ ಕಡಿಮೆ. ಇದ್ದದ್ದರಲ್ಲೂ ತಮ್ಮ ಸ್ವಲ್ಪ ವಾಸಿ ಎಂದು ಜನ ಹೇಳುತ್ತಿದ್ದರು. ಅವರಿಬ್ಬರಲ್ಲಿ ಯಾರು ಉತ್ತಮ ಎನ್ನುವುದನ್ನ ನಾನು ತಿಳಿದುಕೊಳ್ಳಬೇಕಾಗಿತ್ತು. ಆಗ ನಾನು ನಮ್ಮೂರಿನ ಪ್ರಮುಖ ನಿಜಪ್ಪನನ್ನು ಕೇಳಿದೆ “ಏನಪ್ಪಾ, ಈ ಅಣ್ಣ ತಮ್ಮಂದಿರಲ್ಲಿ ಯಾರು ಉತ್ತಮ” ಎಂದು ಅದಕ್ಕೆ ಆತ, “ನೋಡಪ್ಪಾ ಒಂದು ತಟ್ಟೆ ತುಂಬಾ ಪಾಯಿಸಾನೆ ತೆಗೆದುಕೊಂಡು, ಅದನ್ನು ಸಮನಾಗಿ ಎರಡು ಪಾಲು ಮಾಡಿ, ಇದರಲ್ಲಿ ಯಾವ ಪಾಲು ಚೆನ್ನಾಗಿದೆ, ಎಂದು ಕೇಳಿದರೆ, ನಾನು ಏನನ್ನು ಹೇಳಲಿ ಎಂದು ಹೇಳುತ್ತಾ ನನ್ನ ಮುಂದಿನ ಮಾತನ್ನೇ ತಡೆಹಿಡಿದ.

ಚಿತ್ರದುರ್ಗ ಜಿಲ್ಲೆ ಸದಾ ಬರಗಾಲಕ್ಕೆ ತುತ್ತಾಗುತ್ತದೆ. ಅಲ್ಪಸ್ವಲ್ಪ ಮಳೆ ಬಂದರೆ ಸಾಕು ರೈತ ಮಾಡುವ ಕೆಲಸವನ್ನೆಲ್ಲಾ ಮಾಡಲೇಬೇಕು. ಇಂತಹ ವೇಳೆಯಲ್ಲಿ ನಾನು ನಿಜಪ್ಪ ಅವರನ್ನು ಕೇಳಿದೆ, “ಏನಪ್ಪಾ, ಈ ವರ್ಷದ ಬೆಳೆ ಹೇಗೆ?”. ಆಗ ಆತ, ‘ನೋಡಪ್ಪಾ ನಾನು ಹೇಳುವುದು ಏನೆಂದರೆ, ಹೊಲ ಹಸನು ಮಾಡಿದೆ ಏನಪ್ಪಾ ಎಂದರೆ, ಹಸನು ಮಾಡಿದೆ’ ಎನ್ನುತ್ತಾನೆ. ‘ಏನಾದರೂ ಬಿತ್ತಿದೆ ಏನಪ್ಪಾ’ ಎಂದರೆ, ‘ಹೊಡೆದೆನಪ್ಪ, ಹಕ್ಕಿ ಪಕ್ಷಿಗಳ ಕಾದೆ ಏನಪ್ಪಾ ಕಾದೆನಪ್ಪಾ, ಹೊಲನ ಕೊಯ್ದೆ ಏನಪ್ಪಾ ಎಂದರೆ ಕೊಯ್ದೆನಪ್ಪಾ’. ‘ತೆನೆ ತುಳಿಸಿದೆ ಏನಪ್ಪ’ ಎಂದರೆ, ‘ತುಳಿಸಿದೆನಪ್ಪ ಎಷ್ಟು ಬೆಳೆ ಬಂತು ಎಂದರೆ ಏನೂ ಬರ್ಲಿಲ್ಲಪ್ಪ, ಇದೇ ನಮ್ಮ ಪರಿಸ್ಥಿತಿ’ ಎಂದ.

ನಮ್ಮೂರ ಗ್ರಾಮ ಪಂಚಾಯ್ತಿ ಸದಸ್ಯನ ಮಗನನ್ನ, ಅವನು ಸೈಕಲ್ ತುಳಿಯುವ ವೇಳೆ ಪೊಲೀಸರು ಹಿಡಿದಿದ್ದಾರೆ. ಅವನು ಹೆದರಿಕೊಂಡು ತನ್ನ ಜೇಬಿನಲ್ಲಿದ್ದ ಹಣ ಕೊಡಲು ಹೋಗಿದ್ದಾನೆ. ಅವರು ನಾವು ಇಷ್ಟೆಲ್ಲಾ ತಗೋಳಲ್ಲ ಎಂದು ಹೇಳಿ ಬೈದು ಹೋಗಿದ್ದಾರೆ. ಈ ವಿಚಾರವನ್ನು ಅವನು ಅವರ ಅಪ್ಪನಿಗೆ ತಿಳಿಸಿದ್ದಾನೆ. ಆಗ ಅವನ ತಂದೆ ಶಾಮಣ್ಣ ಪೊಲೀಸ್‍ನವರೇನಾದರೂ ಇನ್ನು ಮುಂದೆ ನಿನ್ನ ಹಿಡಿದರೆ ನನ್ನ ಹೆಸರು ಹೇಳು ಎಂದಿದ್ದಾನೆ. ಅದಕ್ಕೆ ಆ ಹುಡುಗ ‘ನಿನ್ನ ಹೆಸರನ್ನೇನಾದರು ನಾನು ಹೇಳಿದರೆ, ಅವರು ನನ್ನನ್ನ ಇನ್ನೂ ಜೋರಾಗಿ ಹೊಡೆಯುತ್ತಾರೆ ಅಷ್ಟೆ!’ ಎಂದು ಹೇಳುತ್ತಾ ಮುಂದೆ ಹೋಗಿದ್ದಾನೆ.

ಟಿವಿಯಲ್ಲಿ ಶೇ. 98ರಷ್ಟು ಅಂಕಗಳನ್ನು ಪಿ.ಯು.ಸಿ.ಯಲ್ಲಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತೋರಿಸುತ್ತಿದ್ದಾರೆ. ಅದನ್ನು ನೋಡುತ್ತಿದ್ದ ರಂಗಪ್ಪ ತನ್ನ ಮಗನಿಗೆ ಅವಮಾನ ಮಾಡಲು, “ನೀನು ಆ ರೀತಿ ಅಂಕಗಳನ್ನು ಎಂದೂ ಪಡೆದಿಲ್ಲ ಅಲ್ಲವೇ?” ಎಂದಿದ್ದಾನೆ. ಅದಕ್ಕೆ ಆ ಮಗ ತಡವಿಲ್ಲದಂತೆ, “ಅದೆಲ್ಲಾ ವಂಶ ಪರಂಪರೆ’ ಎನ್ನಬೇಕೇ? ಈ ಮಾತು ಕೇಳಿ ಗ್ರಾಮ ಪಂಚಾಯ್ತಿ ಸದಸ್ಯ ರಂಗಪ್ಪ ತೆಪ್ಪಗಾಗಿದ್ದಾನೆ.

ಸಿಕ್ಕಸಿಕ್ಕವರನ್ನ ಹಣ ಕೇಳಿ, ಅವರಿಗೆ ಹೇಗೆಂದರೆ ಹಾಗೆ ಬಡ್ಡಿ ಕೊಡುತ್ತಾ ಸ್ವರ್ಗದಂತಹ ಮನೆಯನ್ನ ನರಕವನ್ನಾಗಿ ಪರಿವರ್ತಿಸಿದ. ಸಾಲ ಕೊಟ್ಟವರು ಮನೆ ಮುಂದಕ್ಕೆ ಬಂದು ಬಾಯಿಗೆ ಬಂದಂತೆ ಬೈಯುತ್ತಾ ಹಿಡಿದು ಅಲ್ಲಾಡಿಸತೊಡಗಿದರು. ಮೈಲಾರಪ್ಪನಂತಹ ವ್ಯಕ್ತಿ ಇಂತಹುದನ್ನ ನೋಡಲಾರದೆ ಬಿಕ್ಕಿ ಬಿಕ್ಕಿ ಅಳತೊಡಗಿದ.

ಕುರುಡ ನಾಗೇಂದ್ರಪ್ಪ ಒಂದು ಸಿನಿಮಾ ನೋಡಿಕೊಂಡು ಬಂದು ಅದರ ಕಥೆಯನ್ನ ತನ್ನ ಮುಂದಿರುವವರಿಗೆ ಹೇಳುತ್ತಾ “ಏನು ಸಿನಿಮಾಪ್ಪ ಅದು, ಆ ಕಷ್ಟ ಯಾರ್ಯಾರಿಗೂ ಬರಬಾರದು, ನಾನಂತೂ ಅತ್ತು ಅತ್ತು ನನ್ನ ಟವಲೇ ನೆಂದೋಯ್ತು” ಎಂದಿದ್ದಾನೆ. ಆ ಕಥೆ ಕೇಳುತ್ತಿದ್ದ ಸಮಿ, ಒಂದು ಕಣ್ಣಾಗೆ ಅತ್ತಿದ್ದಕ್ಕೇ ಒಂದು ಟವಲ್ ನೆಂದಿರಬೇಕಾದರೆ ಎರಡೂ ಕಣ್ಣಿಂದ ಅತ್ತಿದ್ರೆ ಗ್ಯಾರಂಟಿ ಇನ್ನೊಂದು ಟವಲ್ ಕೂಡಾ ನೆನಿತಿತ್ತಲ್ಲವೇ?’ ಅಂದಾಗ ಸುತ್ತ ಕುಳಿತವರು ನಗತೊಡಗಿದರೆ, ಪಾಪ ನಾಗೇಂದ್ರಪ್ಪ ಸುಮ್ಮನಾಗಿದ್ದಾನೆ.

ಊರಿನ ಹಿರಿಯ ಮೈಲಾರಪ್ಪ, ನಾಲ್ಕು ಜನ ನೋಡುವಂತೆ ಜೀವನ ಸಾಗಿಸುತ್ತಿದ್ದ. ಅವನ ಏಕೈಕ ಪುತ್ರ ರವಿ ಯಾವ ತೊಂದರೆ ಕಾಣದಂತೆ ಬೆಳೆದು, ಎಲ್ಲಾ ಕೆಟ್ಟ ಅಭ್ಯಾಸಗಳನ್ನು ಮೈಗೂಡಿಸಿಕೊಂಡ. ತಂದೆ ಮಾತನ್ನು ಧಿಕ್ಕರಿಸಿ ತನಗೆ ತಿಳಿದಂತೆ ಖರ್ಚು ಮಾಡುತ್ತಾ, ಮನೆಯಲ್ಲಿರುವವರನ್ನೆಲ್ಲಾ ಬದಿಗೊತ್ತಿ ಮನೆಯಲ್ಲಿನ ಒಂದೊಂದೇ ಸಾಮಾನುಗಳನ್ನು ಮಾರಿ ಹೇಗೆಂದರೆ ಹಾಗೆ ಕುಡಿಯತೊಡಗಿದ, ಕೊನೆಗೆ ಕುಡಿತದ ದಾಸನೇ ಆದ. ಸಿಕ್ಕಸಿಕ್ಕವರನ್ನ ಹಣ ಕೇಳಿ, ಅವರಿಗೆ ಹೇಗೆಂದರೆ ಹಾಗೆ ಬಡ್ಡಿ ಕೊಡುತ್ತಾ ಸ್ವರ್ಗದಂತಹ ಮನೆಯನ್ನ ನರಕವನ್ನಾಗಿ ಪರಿವರ್ತಿಸಿದ. ಸಾಲ ಕೊಟ್ಟವರು ಮನೆ ಮುಂದಕ್ಕೆ ಬಂದು ಬಾಯಿಗೆ ಬಂದಂತೆ ಬೈಯುತ್ತಾ ಹಿಡಿದು ಅಲ್ಲಾಡಿಸತೊಡಗಿದರು. ಮೈಲಾರಪ್ಪನಂತಹ ವ್ಯಕ್ತಿ ಇಂತಹುದನ್ನ ನೋಡಲಾರದೆ ಬಿಕ್ಕಿ ಬಿಕ್ಕಿ ಅಳತೊಡಗಿದ. ರವಿ ತಾಯಿ ಮತ್ತು ಹೆಂಡತಿ ದಿಕ್ಕು ಕಾಣದೆ ಒಳಸೇರಿದವರು. ಕೊನೆಗೆ ಮೈಲಾರಪ್ಪ ಆತ್ಮಹತ್ಯೆಗೂ ಪ್ರಯತ್ನಿಸಿದ.

ಗೌಡರು ಇದನ್ನು ಏನಾದರೂ ಮಾಡಿ ಸರಿ ಮಾಡಬೇಕೆಂದು ಬಯಸಿ ರವಿಯನ್ನು ಕರೆಸಿ ಬುದ್ಧಿ ಹೇಳತೊಡಗಿದರು. ಏನೇನೋ ಬುದ್ಧಿ ಮಾತನ್ನು ಹೇಳುತ್ತಾ ಒಂದು ಮಾತನ್ನು ಹೇಳಿದರು. “ನೋಡೋ ರವಿ, ನಿನ್ನ ತಂದೆ ದೇವರಂತಹ ಮನುಷ್ಯ, ನಿಮ್ಮದು ಬಾಳಿ ಬದುಕಿದ ಮನೆತನ. ಬೇರೆಯವರಿಗೆ ಕೊಟ್ಟ ಮನೆಯೇ ಹೊರತು ಅದರಿಂದ ಪಡೆದುಕೊಂಡ ಮನೆತನವಲ್ಲ. ನೋಡು ಹೇಳುತ್ತೇನೆ ಕೇಳು. ತಂದೆ ಮಗನಿಗೆ ಜನ್ಮ ನೀಡಿದರೆ, ಮಗ ತಂದೆಗೆ ಆಯಸ್ಸು ನೀಡುತ್ತಾನೆ” ಎಂದು ಹೇಳಿದಾಗ ಅಲ್ಲಿ ಕೂತಿದ್ದವರೆಲ್ಲಾ ಮೌನಿಗಳಾಗಿ ಈ ಮಾತನ್ನೇ ಯೋಚಿಸತೊಡಗಿದರು.

ಇಂತಹ ಮಾತುಗಾರರು ನಮ್ಮ ಊರಲ್ಲಿ ಎಷ್ಟೆಷ್ಟೋ ಜನರಿದ್ದಾರೆ. ಅವರ ಮಾತು ಕೇಳುವುದೇ ಒಂದು ಆನಂದ. ನಮ್ಮ ಊರು ಕಾಡುಹಳ್ಳಿ. ರಾಗಿ ಮುದ್ದೆ ಉಳ್ಳಿ ಸಾರನ್ನೇ ತಿನ್ನುತ್ತಿದ್ದರೂ ನಗುವಿಗೆ ಬರವಿಲ್ಲ. ಅವರ ಯೋಚನೆಗೆ ಅಂತ್ಯವಿಲ್ಲ. 

Leave a Reply

Your email address will not be published.