ನಾನು ನಾನಾಗಿಯೇ

ತಮಿಳು ಮೂಲ: ನಂದವನಂ ಚಂದ್ರಶೇಖರನ್

ಅನುವಾದ: ಮಲರ್ ವಿಳಿ ಕೆ

ಒರಗಿಕೊಳ್ಳಲು

ನನಗೆ ಒಂದು ತೋಳು ಬೇಕು

ಆದರೆ

ನಾನು ಯಾರನ್ನೂ

ಅವಲಂಬಿಸುವವನಲ್ಲ

ಕೈ ಕುಲುಕಿ ಹೊಗಳಲು

ನನಗೆ ಒಳ್ಳೆಯ ಕರಗಳು ಬೇಕು

ಆದರೆ

ನಾನು ಯಾರಿಗೂ

ಕೂಲಿಯಾಳಾಗಿರುವವನಲ್ಲ

ಹಾರೈಸಲು ನನಗೆ

ಒಳ್ಳೆಯ ನುಡಿಗಳು ಬೇಕು

ಆದರೆ

ನಾನು ಯಾರ

ಹಾರೈಕೆಗಾಗಿಯೂ

ಕಾದಿರುವವನಲ್ಲ

ನನ್ನನ್ನಷ್ಟೇ ನಂಬಿ

ನನ್ನ ಪಯಣವನ್ನು ತೊಡಗುವೆ

ಆದರೆ

ಯಾರ ಭಾವನೆಗಳಲ್ಲೂ

ನಾನು ಕಳೆದು ಹೋಗುವವನಲ್ಲ

ಸದಾ ನನ್ನಲ್ಲೇ

ನನ್ನ ಅರಸುವೆನು

ಯಥಾರ್ಥಗಳನ್ನು ಹೊರುತ್ತಲೇ…

ತಮಿಳು ಮೂಲ: ನಂದವನಂ ಚಂದ್ರಶೇಖರನ್

ಅನುವಾದ: ಮಲರ್ ವಿಳಿ ಕೆ

Leave a Reply

Your email address will not be published.