‘ನಾವು ಸಂಕೀರ್ಣ ಕಾಲದಲ್ಲಿ ವಾಸಿಸುತ್ತಿದ್ದೇವೆ’

ಹರಿಯಾಣದ ಅಶೋಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರತಾಪ್ ಭಾನು ಮೆಹ್ತಾ ಅವರು ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಅವರ ನಿರ್ಗಮನದ ಸಂದರ್ಭ ಮತ್ತು ಕಾರಣಗಳು ದೇಶದ ಉನ್ನತ ಶಿಕ್ಷಣ ವಲಯದ ಆಗುಹೋಗುಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿವೆ. ಪ್ರಭುತ್ವದ ಕಟು ಟೀಕಾಕಾರರಾದ ಮೆಹ್ತಾ ತಮ್ಮ ವಿದ್ಯಾರ್ಥಿಗಳು ಮತ್ತು ಅಧ್ಯಾಪಕಮಿತ್ರರಿಗೆ ಬರೆದ ಪತ್ರಗಳಲ್ಲಿ ಶಿಕ್ಷಣ ಕ್ಷೇತ್ರದ ವರ್ತಮಾನದ ಬಿಕ್ಕಟ್ಟು ಮತ್ತು ಭವಿಷ್ಯದ ಆಶಾವಾದ ಎರಡನ್ನೂ ಗುರುತಿಸಬಹುದು.

ಪ್ರತಾಪ್ ಭಾನು ಮೆಹ್ತಾ

ನಲ್ಮೆಯ ಸೂಪರ್ ಹೀರೋಗಳೇ,

ನಾನು ಈ ಹಿಂದೆ ಬರೆದದ್ದಕ್ಕಿಂತ ಈ ಪತ್ರ ಬರೆಯಲು ನನಗೆ ಕಶ್ಟಕರವೆನಿಸಿದೆ. ನಾನು ಈ ಮೊದಲೇ ಇದನ್ನು ಬರೆಯಬೇಕೆಂದುಕೊಂಡಿದ್ದೆ. ಆದರೆ ನನ್ನ ರಾಜೀನಾಮೆಗೆ ಕಾರಣವಾದ ಸರಣಿ ಘಟನಾವಳಿಗಳ ಪ್ರಕ್ರಿಯೆಯಲ್ಲಿ ಪ್ರೊ.ಸುಬ್ರಮಣಿಯನ್ ಅವರೊಂದಿಗೆ ಚರ್ಚೆಯಲ್ಲಿ ತೊಡಗಿದ್ದೆ. ಕಳೆದವಾರ ನೀವು ತೋರಿದ ಪ್ರೀತಿಭರಿತ ಬೆಂಬಲ ಮತ್ತು ವಾತ್ಸಲ್ಯ ನನಗೆ ಕುಗ್ಗಿಹೋಗುವಂತೆ ಮಾಡಿದೆ. ನಿಮ್ಮ ಈ ಒಗ್ಗಟ್ಟು ನನಗೆ ಪದಗಳಲ್ಲಿ ಅರ್ಥೈಸುವುದಕ್ಕಿಂತ ಹೆಚ್ಚಿನದನ್ನು ಕೊಟ್ಟಿದೆ. ಈ ವಾರ ನಾನು ನೆಪಿಸಿಕೊಂಡಾಗಲೆಲ್ಲಾ ನಾನು ನಿಮ್ಮ ವಾತ್ಸಲ್ಯದಲ್ಲಿ ಮುಳುಗುವಂತೆ ಮಾಡಿದೆ.

ಆದರೆ ಈ ಬರೆವಣಿಗೆಗೆ ಕಶ್ಟಕರವಾದ, ಆಳ ಕಾರಣವೆಂದರೆ; ದೋಶಾರೋಪಣೆ ಮಾಡಲಾಗಿಯೂ ನೈತಿಕ ಸ್ಪಶ್ಟತೆ ಮತ್ತು ಆಳವಾದ ರಾಜಕೀಯ ಬುದ್ಧಿವಂತಿಕೆಯೊಂದಿಗೆ ‘ಅಶೋಕ’ ಒಂದು ಸಂಸ್ಥೆಯಾಗಿ ನಿಮ್ಮ ಮುಂದೆ ನಿಂತಿದೆ. ನಿಮ್ಮ ಪ್ರತಿಭಟನೆಗಳನ್ನು ನಾವು, ಹಿರಿಯರು ಏನನ್ನು ಅರ್ಥಮಾಡಿಕೊಳ್ಳಲು ಎಡವಿದ್ದೇವೆ ಎಂಬುದನ್ನು ತಕ್ಶಣವೇ ಗ್ರಹಿಸಿದ್ದೇವೆ. ನಿಮ್ಮ ಪ್ರತಿಭಟನೆ ಇಬ್ಬರು ವ್ಯಕ್ತಿಗಳ ಬಗ್ಗೆ ಅಲ್ಲ. ಬದಲಿಗೆ ಅದು ಅಶೋಕದ ಸಾಂಸ್ಥಿಕ ಸಮಗ್ರತೆಯ ಬಗ್ಗೆ. ಆದರೆ ಇದು ಬಾರತದ ಪ್ರಜಾಪ್ರಭುತ್ವದ ಮೇಲೆ ಮೊಳಗುತ್ತಿರುವ ಕತ್ತಲೆ ಮತ್ತು ಅಶುಭ ನೆರಳುಗಳ ಬಗೆಗೂ ಇತ್ತು. ನಾವು ಅಶೋಕದ ಬಗ್ಗೆ ಚಿಂತಿಸುತ್ತಿರುವಾಗ, ಭಾರತದ ಇತರೆಡೆಗಳಲ್ಲಿನ ವಿಶ್ವವಿದ್ಯಾಲಯಗಳಲ್ಲಿನ ನಮ್ಮ ಅಕಾಡೆಮಿಕ್ ಸಹೋದ್ಯೋಗಿಗಳು ಎದುರಿಸುತ್ತಿರುವ ಸವಾಲುಗಳಿಗೆ ಹೋಲಿಸಿದರೆ ನಾವು ಎದುರಿಸುತ್ತಿರುವ ಸವಾಲುಗಳು ಮಸುಕಾಗಿವೆ ಎಂಬುದನ್ನು ನೀವು ನಮಗೆ ನೆನಪಿಸಿದಂತಾಗಿದೆ.

ನೀವು ಯಾವುದೋ ವಿಶಯಕ್ಕೇ ಅಂಟಿಕೊಂಡಿದ್ದಿರಿ. ಆದರೆ ನಿಮ್ಮ ಪ್ರತಿಭಟನೆ ಅಶೋಕದ ಕುರಿತು ಕೇಂದ್ರೀಕೃತವಾಗಿತ್ತು. ಆದರೆ ಇದು ಅಶೋಕನಿಗಿಂತಲೂ ದೊಡ್ಡದಾದ ಮೌಲ್ಯಗಳನ್ನು ಒಳಗೊಂಡಿದೆ. ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ ನನ್ನ ಇಶ್ಟದ ಉಲ್ಲೇಖಗಳಲ್ಲಿ ಒಂದಾದ ಜಾರ್ಜ್ ಎಲಿಯಟ್ ಹೇಳುವಂತೆ ‘ದಂಗೆಯ ಹಕ್ಕು ಉನ್ನತ ನಿಯಮವನ್ನು ಹುಡುಕುವ ಹಕ್ಕಾಗಿದೆ. ಮತ್ತು ಕೇವಲ ಅಧರ್ಮದಲ್ಲಿ ಅಲೆದಾಡಬಾರದು’. ನಿಮ್ಮ ‘ದಂಗೆ’ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಕಾಳಜಿಯಲ್ಲಿ ನೆಲೆಗೊಂಡಿದೆ. ನೀವು ಅದನ್ನು ಘನತೆ ಮತ್ತು ನಿಜವಾದ ಕಾರ್ಯವಿಧಾನದ ಮೂಲಕ ನಿರ್ವಹಿಸಿದ್ದೀರಿ. ಮತ್ತು ನಿಮ್ಮಲ್ಲಿ ಕೆಲವರು ಹಂಚಿಕೊಂಡ ಸಾಂಸ್ಕøತಿಕ ಸಂಗತಿಗಳ ಆಧಾರದ ಮೇಲೆ ಕೆಲವು ಗಂಭೀರ ಕಲಾತ್ಮಕ ಸೃಜನಶೀಲತೆಯನ್ನು ನಾನು ಸೇರಿಸಬಹುದು.

ನಾನು ಮೊದಲು ಹೇಳುವ ವಿಶಯವೆಂದರೆ ನಿಮ್ಮನ್ನು ನಿರಾಸೆಗೊಳಿಸಿದವರು ನಿಮಗೆ ಏನು ಹೇಳಬಹುದು? ಈ ಉಪಖ್ಯಾನ ಅಶೋಕನ ಪ್ರತಿಶ್ಠೆಗೆ ಧಕ್ಕೆ ತಂದಿದೆ. ಆದರೆ ದೊಡ್ಡ ಮಟ್ಟದಲ್ಲಿ ಅಶೋಕನ ಹೆಸರಿಗೆ ಖ್ಯಾತಿ ಬರುತ್ತದೆ. ಅದು ವಿಶ್ವವಿದ್ಯಾಲಯ ಮಾಡಿದ ಕೆಲಸದಿಂದಲ್ಲ ನೀವು ಮಾಡಿದ ಕಾರ್ಯದಿಂದ. ನೀವು ಒಂದೆರಡು ಪ್ರಾಧ್ಯಾಪಕರನ್ನು ಕಳೆದುಕೊಳ್ಳಬಹುದು. ಆದರೆ ನಿಮ್ಮನ್ನು ಪ್ರತಿಯೊಬ್ಬರೂ ಆಶ್ಚರ್ಯ ಮತ್ತು ಮೆಚ್ಚುಗೆಯಿಂದ ನೋಡುತ್ತಾರೆ. ಈ ವಿಶ್ವವಿದ್ಯಾಲಯದೊಂದಿಗೆ ಯಾರಾದರೂ ಸಹವಾಸ ಮಾಡಲು ಬಯಸಿದರೆ ಅದು ನಿಮ್ಮ ಪ್ರಮುಖ ಮೌಲ್ಯಗಳನ್ನು ಸಮರ್ಥಿಸಿಕೊಂಡ ಮತ್ತು ಸಮತೋಲನ ಅಭಿವ್ಯಕ್ತಿಯ ಹೊಣೆಗಾರಿಕೆಯನ್ನು ಕೋರಿದಂತಿದೆ.

ನೀವು ಯಾವುದನ್ನೂ ಹಾನಿಗೊಳಿಸದೆ ಅದರ ಆತ್ಮ ಮತ್ತು ಹ್ರುದಯವನ್ನು ಸೋಲಿಸುತ್ತಿದ್ದೀರಿ ಎಂದರ್ಥ. ಎರಡನೆಯದಾಗಿ, ಈ ವಿಶಯದಲ್ಲಿ ನೀವು ನನಗಾಗಿ ಮಧ್ಯಸ್ಥಿಕೆ ವಹಿಸುವುದಲ್ಲ. ಆದರೆ ನಿಮ್ಮ ಧ್ವನಿಯು ದೀರ್ಘಾವಧಿಯಲ್ಲಿ ಅಶೋಕ ವಿಶ್ವವಿದ್ಯಾಲಯವನ್ನು ಒಂದು ಉತ್ತಮ ವಿಶ್ವವಿದ್ಯಾಲಯವನ್ನಾಗಿ ಮಾಡುತ್ತದೆ. ಮತ್ತು ಅದರ ಆದರ್ಶಗಳು ಮತ್ತು ಮೌಲ್ಯಗಳಿಂದ ತುಂಬಿರುತ್ತದೆ ಎಂದು ನಾನು ಯೋಚಿಸಬಲ್ಲೆ. ಆದ್ದರಿಂದ ನಿಮ್ಮ ಈ ಧ್ವನಿಯು ಈಗಾಗಲೇ ಒಂದು ರೀತಿಯ ವಿಜಯದ ಸಂಕೇತವಾಗಿದೆ. ಉಪನ್ಯಾಸಗಳ ಮೂಲಕ ನಾವು ನಿಮಗೆ ಕೆಟ್ಟದಾಗಿ ಕಲಿಸಲು ಪ್ರಯತ್ನಿಸಿದ್ದಕ್ಕೆ ನಿಮ್ಮ ಈ ನಿಲುವು ನಮಗೆ ಪಾಠ ಹೇಳಿದಂತಾಗಿದೆ. ನಿಮ್ಮ ಬಗ್ಗೆ ನೀವು ಹೆಮ್ಮೆ ಪಡಬೇಕು. ನೀವು ಈಗಾಗಲೇ ಉತ್ತಮ ಜಗತ್ತನ್ನು ರಚಿಸಿದ್ದೀರಿ ಎಂಬ ವಿಶ್ವಾಸವಿರಬೇಕು. ನೀವು ಈಗಾಗಲೇ ಅಶೋಕನ ಧ್ಯೇಯವನ್ನು ಸಾಧಿಸಿದ್ದೀರಿ.

ಸಾಂಸ್ಥಿಕ ಸಂದರ್ಭಗಳಲ್ಲಿ ತತ್ವಗಳನ್ನು ಮತ್ತು ಮೌಲ್ಯಗಳನ್ನು ಬದಲಾಯಿಸಲಾಗುವುದಿಲ್ಲ; ವ್ಯಕ್ತಿಗಳ ವಿಶಯದಲ್ಲಿ ಯಾವಾಗಲಾದರೂ ಮಾಡಬಹುದು. ಆದ್ದರಿಂದ ನಿಮಗೆ ನನ್ನ ಮನವಿ ಇದು. ನನಗೆ ಇದು ಹೊರ ನಡೆಯುವ ಸಮಯ. ಅಶೋಕ ವಿಶ್ವವಿದ್ಯಾಲಯದಲ್ಲಿ ಕಳೆದ ಬೋಧನೆಯ ಎರಡು ವರ್ಶ ನನಗೆ ಸಂಪೂರ್ಣ ಸಂತೋಶವನ್ನುಂಟುಮಾಡಿದೆ. ನನ್ನ ಜೀವನವನ್ನು ನಾನು ತಪ್ಪಿಲ್ಲದೆ ಸಾಗಿಸಿದ್ದೇನೆ ಎಂಬ ದ್ರುಶ್ಟಿಕೋನವನ್ನು ಇದು ಬಲಪಡಿಸಿದೆ: ವಿದ್ಯಾರ್ಥಿಗಳು ನಿಮ್ಮನ್ನು ಯಾವತ್ತು ನಿರಾಶೆಗೊಳಿಸಲಿಲ್ಲ. ಆದ್ದರಿಂದ ಉತ್ತಮವಾದ ಅಶೋಕ ವಿಶ್ವವಿದ್ಯಾಲಯವನ್ನು ತೊರೆಯುವುದು, ವಿದ್ಯಾರ್ಥಿಗಳನ್ನು ಮತ್ತು ಸಹೋದ್ಯೋಗಿಗಳನ್ನು ಬಿಟ್ಟುಹೋಗುವುದು ಅಶ್ಟು ಸುಲಭದ ನಿರ್ಧಾರವಲ್ಲ. ಆದರೆ ಇದು ನನ್ನ ಮೌಲ್ಯಗಳಿಗೆ ಅನುಗುಣವಾಗಿ ಮಾಡಬೇಕಾದ ಏಕೈಕ ಗೌರವಾನ್ವಿತ ವಿಶಯವಾಗಿದೆ; ಮೌಲ್ಯಗಳನ್ನು ನೀವು ಹರಡುತ್ತೀರಿ ಎಂದು ನಂಬುತ್ತೇನೆ. ವಿಶ್ವವಿದ್ಯಾಲಯದ ಹಿತದ್ರುಶ್ಟಿಯಿಂದ ಎಂಬುದನ್ನು ನಾನು ಬಲ್ಲೆ. ಪದೇ ಪದೇ ಹೇಳುವಂತೆ ‘ಒಂದೇ ನದಿಯಲ್ಲಿ ಎರಡು ಬಾರಿ ಈಜಲು ಸಾಧ್ಯವಿಲ್ಲ’ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅಶೋಕನ ವಿರುದ್ಧ ಭಾವದಲಿ ನಾನು ಎರಡು ಬಾರಿ ರಾಜೀನಾಮೆ ನೀಡಲು ಪ್ರಯತ್ನಿಸಿದ್ದೆ!! ಅದ್ರುಶ್ಟವನ್ನು ಮತ್ತೊಮ್ಮೆ ಪ್ರಚೋದಿಸಿದ್ದಕ್ಕಾಗಿ ನೀವು ನನ್ನನ್ನು ಕ್ಶಮಿಸಬಹುದೆಂದು ನಾನು ಭಾವಿಸುತ್ತೇನೆ. ನನ್ನ ವಿಶಯದಲ್ಲಿ ರಾಜೀನಾಮೆಗೆ ಕಾರಣವಾದ ಸನ್ನಿವೇಶಗಳು ಮುಂದಿನ ಭವಿಶ್ಯಕ್ಕಾಗಿ ಯಾವುದೇ ರೀತಿಯಲ್ಲಿ ಬದಲಾಗುವುದಿಲ್ಲ. ಹಾಗಾಗಿ ನಾನು ಈ ಅಧ್ಯಾಯವನ್ನು ಇಲ್ಲಿಗೇ ಮುಚ್ಚಬೇಕು. ಈ ವಿಶಯದ ಕುರಿತು ನೀವು ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಹೇರಬಾರದೆಂದು ನಿಮ್ಮನ್ನು ಕೋರುತ್ತೇನೆ. ನಿಮಗೆ ನಿರಾಶೆಯಾಗುತ್ತದೆಂದು ನನಗೂ ಗೊತ್ತು. ಆದರೆ ನಾನು ಪ್ರಾಧ್ಯಾಪಕನಾಗಿ ನನ್ನ ಕೊನೆಯ ವಿವೇಚನೆಯನ್ನು ಚಲಾಯಿಸಬಹುದಾದರೆ ನಿಮ್ಮ ಕಾರ್ಯಯೋಜನೆ ಇಬ್ಬರು ಪ್ರಾಧ್ಯಾಪಕರ ಭವಿಶ್ಯಕ್ಕಿಂತ ದೊಡ್ಡದಿದೆ. ನಿಮ್ಮ ಹೊಸ ವಿಶ್ವಾಸ ಮತ್ತು ಭವಿಶ್ಯವನ್ನು ರೂಪಿಸಲು ಟ್ರಸ್ಟಿಗಳು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಗಳು ಕೆಲಸ ಮಾಡುತ್ತಾರೆ ಎಂದು ನಾನು ನಂಬಿದ್ದೇನೆ. ನಿಮ್ಮ ಮಾರ್ಗದರ್ಶನದೊಂದಿಗೆ ಅವರು ಅಶೋಕ ವಿಶ್ವಿದ್ಯಾಲಯದ ಸಾಂಸ್ಥಿಕ ಸ್ವಾಯತ್ತೆ ಮತ್ತು ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳು, ಧೈರ್ಯ, ಸಮಂಜಸತೆ ಮತ್ತು ತಿಳಿವಳಿಕೆಯನ್ನು ನೀವು ಸಾಕಾರಗೊಳಿಸಿಕೊಂಡಿದ್ದರೆ ವಿಶ್ವವಿದ್ಯಾಲಯವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಅಶೋಕ ವಿಶ್ವವಿದ್ಯಾಲಯವನ್ನು ಸಾಕಾರಗೊಳಿಸಲು ನೀವು ಅವರೊಂದಿಗೆ ಕೈ ಜೋಡಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ನಾವು ಸಂಕೀರ್ಣ ಕಾಲದಲ್ಲಿ ವಾಸಿಸುತ್ತಿದ್ದೇವೆ. ಭಾರತವು ಸ್ರುಜನಶೀಲತೆಯಿಂದ ತುಳುಕಾಡುತ್ತಿದೆ. ಆದರೆ ಸರ್ವಾಧಿಕಾರದ ಕರಿನೆರಳುಗಳು ಸಹ ನಮ್ಮ ಮೇಲೆ ಪ್ರಭಾವ ಬೀರುತ್ತಿವೆ. ನಮ್ಮನ್ನೆಲ್ಲ ಒಮ್ಮೊಮ್ಮೆ ಪ್ರತಿಕೂಲ ಮತ್ತು ಒಮ್ಮೊಮ್ಮೆ ಅವಮಾನಕರ ಸ್ಥಾನಗಳಿಗೆ ತಂದು ನಿಲ್ಲಿಸಿಬಿಡುತ್ತಿವೆ. ಈ ಪರಿಸ್ಥಿತಿಗಳನ್ನು ನಿವಾರಿಸುವ ಬುದ್ಧಿವಂತಿಕೆ ಮತ್ತು ಅನ್ಯ ಮಾರ್ಗಗಳನ್ನು ನಾವು ಹುಡುಕಬೇಕಿದೆ. ನಮ್ಮಲ್ಲಿ ಹೆಚ್ಚಿನವರು ಈ ರೀತಿಯ ಕತ್ತಲನ್ನು ಮತ್ತು ಪ್ರತಿಕೂಲತೆಯನ್ನು ವಿಶಾದಿಸುತ್ತಿರುತ್ತಾರೆ. ನಮಗೆ ಬೇಕಾದುದೇನೆಂಬುದನ್ನು ವಿವೇಕಾನಂದರು ಹೇಳಿದ್ದ ಯುವ ಪೀಳಿಗೆಯೊಂದು ಹೊರಹೊಮ್ಮುತ್ತಿದೆ ಎಂಬ ಧ್ರುಡ ನಿಶ್ಚಯದಿಂದ ನಾನು ಅಶೋಕ ವಿಶ್ವವಿದ್ಯಾಲಯವನ್ನು ಬಿಡುತ್ತಿದ್ದೇನೆ. ಕತ್ತಲೆಯನ್ನು ಆಳುವ ಜನಗಳ ಅಗತ್ಯ ನಮಗಿಲ್ಲ, ಬೆಳಕನ್ನು ನೀಡಬಲ್ಲವರಾರಾದರೂ ಇರಲಿ ನಮಗೆ ಬೇಕು. ನನಗೆ ವಿಶ್ವಾಸವಿದೆ ನೀವೆಲ್ಲರೂ ಅದನ್ನು ಮಾಡಬಹುದು ಮತ್ತು ಮಾಡುತ್ತೀರಿ.

ನಾನು ಜೋಧಪುರದ ಒಂದು ಪಟ್ಟಣದಿಂದ ಬಂದವನು, ನಮ್ಮಲ್ಲಿ ಮಾರ್ವಾಡಿಯಲ್ಲಿ ಒಂದು ನುಡಿಗಟ್ಟಿದೆ “ಧರಮ್ ರೆಹ ಸಿ, ರೆಹ ಸಿ ಧಾರಾ” ಎಂಬುದು (ಧರ್ಮವಿದ್ದಲ್ಲಿ ಭೂಮಿಯು ರಕ್ಶಿಸಲ್ಪಟ್ಟಿದೆ). ಈ ವಿಶಯದ ಕುರಿತ ನಿಮ್ಮೊಂದಿಗಿನ ನನ್ನ ಸಂಭಾಶಣೆ ನನಗೆ ಮಹದಾನಂದವನ್ನುಂಟು ಮಾಡುತ್ತದೆ. ಆದರೆ ಈ ಸಂಭಾಶಣೆಯ ಒಳ್ಳೆಯ ಸಂಗತಿಯೆಂದರೆ, ನಾವು ಎಲ್ಲಿದ್ದರೂ ಅದು ಮುಂದುವರೆಯುತ್ತದೆ; ಈ ವರ್ಶ ಪ್ಲೇಟೋ, ಮಹಾಭಾರತ, ಮಾಂಟೆಗ್ನೆ, ಹಾಬ್ಸ್, ಮಾಕ್ರ್ಸ್, ಬ್ಯೂವೋಯಿರ್, ಕಾಂಟ್ ಮತ್ತು ಅನೇಕರ ಪಠ್ಯಗಳನ್ನು ನಾನು ನಿಮ್ಮೊಂದಿಗೆ ಅನುಭವಿಸಿ ಖುಶಿ ಪಟ್ಟಿದ್ದೇನೆ. ಆದರೆ ನೀವು ನಮಗೆ ಹೇಳಿ ಕೊಟ್ಟಿದ್ದು ತುಂಬಾ ಮೌಲ್ಯಯುತವಾದುದು:

ಉದಾರ ಮೌಲ್ಯಗಳು ಅವು ಹೊಂದಿರಬೇಕಾದ ಧರ್ಮಕ್ಕಿಂತ ಹೆಚ್ಚಾಗಿ ಒಂದು ಬಗೆಯ ಪಾತ್ರವನ್ನು ಹೊಂದಿವೆ ಎನಿಸುತ್ತಿದೆ. ಇದು ನೀವು ಸಾಕಶ್ಟು ಅಳತೆಯನ್ನು ಹೊಂದಿದ ಪಾತ್ರ. ನಾನು ನಿಮಗೆ ಶಾಶ್ವತವಾಗಿ ಕ್ರುತಜ್ಞನಾಗಿದ್ದೇನೆ.

ತನ್ನ ಸಹೋದ್ಯೋಗಿ ಅಧ್ಯಾಪಕರಿಗೆ ಮೆಹ್ತಾ ಅವರು ಬರೆದ ಪತ್ರದ ಪೂರ್ಣಪಾಠ

ಆತ್ಮೀಯ ಸಹೋದ್ಯೋಗಿಗಳೇ ಮತ್ತು ಸ್ನೇಹಿತರೇ,

ಕಳೆದ ವಾರ ನೀವು ನನಗೆ ಮತ್ತು ಅರವಿಂದ ಅವರಿಗೆ ನೀಡಿದ ವೈಯಕ್ತಿಕ ಬೆಂಬಲಕ್ಕೆ ಧನ್ಯವಾದ ಹೇಳಲು ನಾನು ಇದನ್ನು ಬರೆಯುತ್ತಿದ್ದೇನೆ. ಆದರೆ ಬಹುಮುಖ್ಯವಾಗಿ ಸಿಬ್ಬಂದಿಗಳ ಹೇಳಿಕೆಯಲ್ಲಿ ನೀವು ಅದನ್ನು ನಿರೂಪಿಸಿದ ನಿಖರತೆ ಮತ್ತು ಸ್ಪಶ್ಟ ವಾಕ್ಚತುರತೆಗಾಗಿ ನನ್ನ ಅಂತರಾಳದ ಕ್ರುತಜ್ಞತೆಗಳನ್ನು ಸಲ್ಲಿಸುತ್ತೇನೆ. ಆ ಹೇಳಿಕೆಯು ನಿಮ್ಮನ್ನು ಭಾರತೀಯ ಉನ್ನತ ಶಿಕ್ಶಣದಲ್ಲಿ ವಿಶಿಶ್ಟ ಶಕ್ತಿಯನ್ನಾಗಿಸುವ ಮತ್ತು ಅದ್ಭುತ ಮೌಲ್ಯಗಳಿಗೆ ಸಾಕ್ಷಿಯಾಗಿದೆ. ನಾನು ಈ ಅಧ್ಯಾಪಕ ವ್ರುಂದದ ಭಾಗವಾಗುವ ಸದವಕಾಶ ಸಿಕ್ಕಿದ್ದು ನನ್ನ ಭಾಗ್ಯವೆಂದು ನಂಬಿದ್ದೇನೆ.

ನನ್ನ ರಾಜೀನಾಮೆಯು ಸಲ್ಲಿಕೆಯಾದ ಕೂಡಲೇ ಅಂಗೀಕರಿಸಲ್ಪಟ್ಟಿದೆ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ವಿದ್ಯಾರ್ಥಿಗಳು ಹೃತ್ಪೂರ್ವಕತೆಯೊಂದಿಗೆ ಮಾಡಿದ ಸ್ಪಶ್ಟತೆಯ ವಾದಗಳು ಮತ್ತು ನೀವು ರಾಜೀನಾಮೆಯನ್ನು ಮರುಪರೀಶೀಲಿಸಲು ಕೋರಿಕೊಂಡಿದ್ದನ್ನು ನಿರ್ಲಕ್ಷಿಸುವುದು ತುಸು ಕಶ್ಟಕರವೇ ಆಗಿತ್ತು. ಆದರೆ ಮೊದಲಿಗೆ ನನ್ನ ರಾಜೀನಾಮೆಗೆ ಪ್ರೇರೇಪಿಸಿದ ಸಂಗತಿಗಳಲ್ಲಿ ಕೊಂಚವೂ ಬದಲಾವಣೆಯಾಗಿಲ್ಲ. ಪರಿಸ್ಥಿತಿ ನಾವು ಬಯಸಿದಕ್ಕಿಂತ ತುಸು ಭಿನ್ನವೇ ಆಗಿದೆ, ಹೊರನಡೆಯುವುದೇ ಸೂಕ್ತವಾಗಿದ್ದ ಸಂಗತಿಯಾಗಿತ್ತು. ಮತ್ತು ಇದು ವಿಶ್ವವಿದ್ಯಾಲಯದ ಹಿತದ್ರುಶ್ಟಿಯಿಂದ ಒಳ್ಳೆಯದೆಂದೇ ನಾನು ಭಾವಿಸಿದ್ದೇನೆ.

ನಮ್ಮ ಕೆಲ ಸಹೋದ್ಯೋಗಿಗಳನ್ನು ಗಮನಿಸಿದರೆ ನೀವು ನಿಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದೀರಿ ಎಂದೆನಿಸುತ್ತದೆ ನನಗೆ. ಕೆಲವರು ಕೆಲಸದಿಂದ ಹೊರನಡೆದಿರಿ. ನಾನು ‘ಉಪಕುಲಪತಿ’ ಎನ್ನುವ ಶಬ್ದದಿಂದ ನಿಮ್ಮನ್ನು ಗುರುತಿಸುವುದಾದರೆ ಇನ್ನೂ ಕೆಲವರು ಖಂಡಾಂತರ ನಡೆದಿರಿ. ಈ ಸರಣಿಯು ಅಶೋಕ ವಿಶ್ವವಿದ್ಯಾಲಯದ ಮೇಲಿನ ನಂಬಿಕೆಯನ್ನು ಅಲುಗಾಡಿಸಿಲ್ಲ ಎಂಬಂತೆ ನಾನು ನಟಿಸುವುದಿಲ್ಲ. ನಮ್ಮ ಈ ಯಶಸ್ಸಿಗೆ ಕಾರಣವಾದ ಅನೇಕ ಬೇರುಗಳು ಪ್ರಪಂಚದಾದ್ಯಂತ ಇವೆ ಎಂಬ ಒಂದು ಆಶಾಕಿರಣವನ್ನು ಇದು ಹೊಮ್ಮಿಸಿದೆ. ನೀವು ನಿರ್ಮಿಸಲು ಹೊರಟಿದ್ದ ವಿಶ್ವವಿದ್ಯಾಲಯವು ಇನ್ನೂ ಕಾರ್ಯಸಾಧನದ ಹಂತದಲ್ಲಿದೆ ಎಂದು ನಾನು ಭಾವಿಸುತ್ತೇನೆ, ಬಹುಶಃ ಅದರ ಅಸ್ತಿತ್ವಕ್ಕಾಗಿ ಇನ್ನೂ ಹೆಚ್ಚಿನದು ಬೇಕಿದೆ ಎನಿಸುತ್ತಿದೆ. ಅಶೋಕ ವಿಶ್ವವಿದ್ಯಾಲಯದ ಯಶಸ್ಸು ಭಾರತೀಯ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅತ್ಯಗತ್ಯ. ಮುಕ್ತ ಆಲೋಚನೆ ಮತ್ತು ವಿಮರ್ಶೆಗಾಗಿ ಈ ಜಾಗವನ್ನು ಸಂರಕ್ಷಿಸಿಡುವುದು ಅತೀ ಅವಶ್ಯವಾಗಿದೆ. ಕೇವಲ ನಾವು ನಮ್ಮ ವಿದ್ಯಾರ್ಥಿಗಳ ಬಗ್ಗೆ ಚಿಂತಿಸಿದರೆ, ಈ ಯೋಜನೆಯ ಮಹತ್ವದ ಬಗೆಗಿನ ಯಾವುದೇ ರೀತಿಯ ಅನುಮಾನಗಳು ತಕ್ಷಣಕ್ಕೆ ಕರಗುತ್ತವೆ. ನಮ್ಮಂತೆಯೇ ಪ್ರತಿಭಾವಂತ ಮತ್ತು ಹುರುಪಿನ ಬೋಧನಾ ವಿಭಾಗವು ಸಂಸ್ಥಾಪಕರು ಮತ್ತು ಆಡಳಿತದೊಂದಿಗಿನ ಸಂವಾದದಲ್ಲಿ ಅಶೋಕನ ಆದರ್ಶವನ್ನು ನವೀಕರಿಸಲು ಸಾಧ್ಯವಿಲ್ಲ ಎಂಬುದನ್ನು ನಂಬಲು ನಾನು ನಿರಾಕರಿಸುತ್ತೇನೆ.

ನಾವು ಎದುರಿಸುತ್ತಿರುವ ಸವಾಲುಗಳನ್ನು ನಾನು ಗುರುತಿಸುತ್ತೇನೆ. ಅಶೋಕ ವಿಶ್ವವಿದ್ಯಾಲಯವು ಶೈಶವಾವಸ್ಥೆಯಲ್ಲಿದ್ದಾಗ ನಾವು ಅನೇಕ ಜನ ಸಮಾಂತರವಾಗಿ ಈ ವಿಶ್ವವಿದ್ಯಾಲಯವು ಭಾರತದಲ್ಲಿಯೇ ಅತೀ ದೊಡ್ಡ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಲಿದೆ ಎಂಬ ಚರ್ಚೆಗಳಲ್ಲಿ ತೊಡಗಿದ್ದೆವು. ಭಾರತವು ಉನ್ನತ ಶಿಕ್ಷಣದಲ್ಲಿ ಜಾಗತಿಕ ನಾಯಕನಾಗಬಹುದೆಂದು ನಂಬಿದ್ದೆವು. ತತ್ವ, ಅಡೆತಡೆಗಳು, ಅಧಿಕಾರಶಾಹಿ ನಿಯಂತ್ರಣ, ರಾಜಕೀಯ ಪ್ರೋತ್ಸಾಹ, ಹಣಕಾಸು, ಇವೆಲ್ಲವೂ ಭಾರತದ ಸಾಂಸ್ಥಿಕ ದ್ರುಶ್ಟಿಯನ್ನು ಅಳೆಯುವ ಸಾಧನಗಳಾದವು. ಈ ಎಲ್ಲಾ ಸವಾಲುಗಳನ್ನು ಎದುರಿಸಲು ಮತ್ತು ಭಾರತದಲ್ಲಿ ಸಾಧ್ಯವಿರುವ ಮಾನದಂಡಗಳನ್ನು ರೂಪಿಸುವಲ್ಲಿ ಅಶೋಕ ವಿಶ್ವವಿದ್ಯಾಲಯವು ಪ್ರವರ್ತಕ ಸ್ಥಾನವನ್ನು ಹೊಂದಿದೆ. ಆದರೆ ಯಾವುದೇ ವಿಶ್ವವಿದ್ಯಾಲಯವು ಈಗ ನಾವೂ ಎದುರಿಸುತ್ತಿರುವ ಮತ್ತು ವರ್ಣಿಸಲಸಾಧ್ಯವಾದ ಸವಾಲನ್ನು ಎದುರಿಸುತ್ತಿದೆ ಎಂಬುದನ್ನು ಅಲ್ಲಗಳೆಯಲಾಗದು.

ಭಾರತೀಯ ವಿಶ್ವವಿದ್ಯಾಲಯಗಳು ಸರಕಾರಗಳ ಹಸ್ತಕ್ಷೇಪ ಮತ್ತು ಶೈಕ್ಷಣಿಕ ಬದಲಾವಣೆಗಳ ಸುದೀರ್ಘವಾದ ಇತಿಹಾಸವನ್ನು ಹೊಂದಿವೆ. ಆದರೆ ಈಗ ನಾವು ಮೌಲ್ಯಗಳು ಮತ್ತು ರಕ್ಷಣೆಯ ಆಮ್ಲಜನಕವನ್ನು ಉದಾರವಾದಿ ದೊಡ್ಡ ಪರಿಸರದಿಂದ ಹೀರಿಕೊಳ್ಳುವ ಸ್ಥಿತಿಯನ್ನು ತಲುಪಿದ್ದೇವೆ. ನಾವು ಅಹಿತಕರವೆನಿಸುವ ಈ ಮುಂದಿನ ಪ್ರಶ್ನೆಗಳನ್ನು ಕೇಳಬೇಕಾಗಿದೆ:

ಅನೈತಿಕ ರಾಜಕಾರಣದಿಂದ ಕೂಡಿದ ದೇಶದಲ್ಲಿ ಉದಾರ ವಿಶ್ವವಿದ್ಯಾಲಯಗಳನ್ನು ನಿರ್ಮಾಣ ಮಾಡಲು ಏನು ಬೇಕು? ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಇರುವ ನಮ್ಮ ಸಹೋದ್ಯೋಗಿಗಳು ಹಲವು ದಿನಗಳಿಂದ ಇದನ್ನು ಎದುರಿಸುತ್ತಿದ್ದಾರೆ. ಈ ವಿರೋಧಾಭಾಸವು ಮನೆಗಳವರೆಗೂ ಬರುತ್ತಿದೆ. ಹಾಗಾಗಿ ಅಶೋಕ ವಿಶ್ವವಿದ್ಯಾಲಯವು ಈ ತರಹದ ಸವಾಲುಗಳನ್ನು ಎದುರಿಸುವಲ್ಲಿ ಬಹು ಮುಖ್ಯವಾದ ಪಾತ್ರ ನಿರ್ವಹಿಸಬೇಕಿದೆ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಎತ್ತಿದ ಸವಾಲುಗಳ ಈ ರೀತಿಯು ನಮ್ಮ ನಂಬಿಕೆಯನ್ನು ನವೀರಿಸಿದಂತಾಗಿದೆ ಎಂಬುದನ್ನು ನಾನು ನಂಬುತ್ತೇನೆ. ಹೆಚ್ಚು ವೈಯಕ್ತಿಕ ಟಿಪ್ಪಣಿಯಾದ್ದರಿಂದ ಕ್ರುತಜ್ಞತೆಯ ಜವಾಬ್ದಾರಿಯನ್ನೂ ರೂಪಿಸಲು ಸಾಧ್ಯವಿಲ್ಲ. ಬೌದ್ಧಿಕ ಉತ್ಸಾಹ, ಬೋಧನೆಯ ಬದ್ಧತೆ, ಮತ್ತು ನಿಮ್ಮಿಂದ ಪಡೆದ ವಿನೋದ, ಜೊತೆಗೆ ಅಶೋಕ ವಿಶ್ವವಿದ್ಯಾಲಯ ನನಗಾಗಿ ಉಡುಗೊರೆಯ ರೂಪದಲ್ಲಿ ನೀಡಿದ ‘ಹಲವು ಸ್ನೇಹ’ಗಳು ಎಲ್ಲವೂ ನನ್ನೊಂದಿಗೇ ಉಳಿಯಲಿವೆ. ನಾನು ಎಲ್ಲಿ ಕೊನೆಗೊಂಡರೂ, ಈ ಅಧ್ಯಾಪಕರ ಭಾಗವಾಗಿ ‘ಗರ್ವ’ಪಡುತ್ತೇನೆ. ಈ ಗೌರವಕ್ಕೆ ಸಾಟಿ ಬೇರೆ ಏನೂ ಇಲ್ಲ.

ವಂದನೆಗಳೊಂದಿಗೆ

ಪ್ರತಾಪ್ ಭಾನು ಮೆಹ್ತಾ

ಅನುವಾದ: ಇಸ್ಮಾಯಿಲ್ ಜಬೀರ್ ಬಾವಾಜಿ

(ಗಮನಿಸಿ: ಲೇಖನದಲ್ಲಿ ಬಳಕೆಯಾದ ಕೆಲವು ಅಕ್ಷರಗಳು (, ಸ್ರು, ಕ್ರು, ವ್ರು ಇತ್ಯಾದಿ) ಮುದ್ರಣ ದೋಷಗಳಲ್ಲ. ಲಿಪಿಗೆ ಸಂಬಂಧಿಸಿದಂತೆ ಅನುವಾದಕರಿಗೆ ಬೇರೆಯದೇ ಅಭಿಪ್ರಾಯವಿರುವುದು ಇದಕ್ಕೆ ಕಾರಣ)

Leave a Reply

Your email address will not be published.