ನಿಜವಾದ ನರೇಂದ್ರ ಮೋದಿ ಯಾರು? ಕೋಮುವಾದಿ ಸಾಮ್ರಾಟನೋ ಅಥವಾ ಒಳಗೊಳ್ಳುವಿಕೆ ರೂವಾರಿಯೋ?

ಆರ್.ಜಗನ್ನಾಥನ್ ಅವರು ರಾಜಕಾರಣ ಮತ್ತು ಅರ್ಥಿಕ ವಿಷಯಗಳಲ್ಲಿ ಅಧಿಕಾರಯುತವಾಗಿ ವಿಶ್ಲೇಷಣೆ ಮಾಡಬಲ್ಲ ಭಾರತದ ಬಹುಮುಖ್ಯ ಪತ್ರಕರ್ತರು. ಅವರು ‘ಫೋಬ್ಸ್ ಇಂಡಿಯಾ’ದ ಮಾಜಿ ಮುಖ್ಯ ಸಂಪಾದಕರು; ಅದಕ್ಕೂ ಮುಂಚೆ ಫಸ್ರ್ಟ್‍ಪೋಸ್ಟ್.ಕಾಂ, ಬಿಸಿನೆಸ್ ಇಂಡಿಯಾ, ಬಿಸಿನೆಸ್ ವರ್ಲ್ಡ್, ಫೈನಾನ್ಸಿಯಲ್ ಎಕ್ಸ್ ಪ್ರೆಸ್ ಮತ್ತು ಡಿ.ಎನ್.ಎ.ಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹಾರ್ಪರ್ ಕೊಲಿನ್ಸ್ ಪಬ್ಲಿಷರ್ಸ್ ಪ್ರಕಟಿಸಿರುವ ‘ಮೇಕಿಂಗ್ ಸೆನ್ಸ್ ಆಫ್ ಮೋದೀಸ್ ಇಂಡಿಯಾ’ ಕೃತಿಯಲ್ಲಿನ ಆರ್.ಜಗನ್ನಾಥನ್ ಅವರ ಲೇಖನದ ಅನುವಾದವನ್ನಿಲ್ಲಿ ನೀಡಿದ್ದೇವೆ.

ರೇಂದ್ರ ಮೋದಿ ಸಾಕಷ್ಟು ಜನರನ್ನು ನಿರಾಸೆಗೊಳಸಿದ್ದಾರೆ. ಅವರು ತಮ್ಮ ಹೊಗಳುಭಟ್ಟರನ್ನು ನಿರಾಸೆಗೊಳಿಸಿದ್ದಾರಲ್ಲದೆ ಆರ್ಥಿಕವಾಗಿ ಅಥವಾ ಸಾಂಸ್ಕøತಿಕವಾಗಿ ತಾವು ಅಂದುಕೊಂಡಿದ್ದಕ್ಕಿಂತ ‘ಕಡಿಮೆ ಬಲಪಂಥೀಯ’ ಎಂಬುದನ್ನು ಸಾಬೀತುಪಡಿಸುವ ಮೂಲಕ ಅವರನ್ನು ಮೋದಿ ನಿರಾಸೆಗೊಳಿಸಿದ್ದಾರೆ. ಆದರೆ ಅವರು 2002ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕೋಮು ಹತ್ಯಾಕಾಂಡಗಳ ‘ಆದ್ಯತಾ ಚಿತ್ರಣ’ವನ್ನೂ ನಿರಾಕರಿಸುವ ಮೂಲಕ ತಮ್ಮ ವಿರೋಧಿಗಳನ್ನೂ ನಿರಾಸೆಗೊಳಿಸಿದ್ದಾರೆ. ಹೀಗಾಗಿ ಅವರು ಸಂಘ ಪರಿವಾರದ ಅತಿರೇಕದ, ಪಕ್ಷಪಾತದಿಂದ ಕೂಡಿದ ಸಂಗತಿಗಳ ಕಡೆಗೆ ಗಮನ ಕೇಂದ್ರೀಕರಿಸುವ ಮೂಲಕ ಹೆಚ್ಚಾಗಿ ಟೀಕೆಗಳನ್ನು ಮಾಡುತ್ತಾ ತಾವೂ ಟೀಕೆಗಳನ್ನು ಎದುರಿಸಿದರು. ಮೋದಿ ಹೆಚ್ಚು ಕಡಿಮೆ ಅರ್ಧ ಶತಮಾನದಿಂದ ಸಂಘಪರಿವಾರದ ಆಂತರಿಕ ಭಾಗವಾಗಿದ್ದವರು.

ಸತ್ಯ ಸಂಗತಿಯೆಂದರೆ, 1984ರ ನಂತರ ಮೂವತ್ತು ವರ್ಷಗಳಲ್ಲಿ ರಾಜೀವ್ ಗಾಂಧಿಯ ನಂತರ ಸಂಸತ್ತಿನ ಸಂಪೂರ್ಣ ಬಹುಮತ ಗೆದ್ದು ಸಾಂಪ್ರದಾಯಿಕತೆಯನ್ನು ಮುರಿದ ರಾಜಕೀಯ ನಾಯಕ ನರೇಂದ್ರ ದಾಮೋದರದಾಸ್ ಮೋದಿ. ಹಾಗಂತ ಅವರು ಆರ್ಥಿಕ ಹಕ್ಕನ್ನು ಬಯಸಿದಂತಹ ರೊನಾಲ್ಡ್ ರೇಗನ್ ಆಗಲೀ ಅಥವಾ ಮಾರ್ಗರೇಟ್ ಥ್ಯಾಚರ್ ಆಗಲೀ ಅಲ್ಲ;  ಸಾಂಸ್ಕøತಿಕ ಮತ್ತು ಧಾರ್ಮಿಕ ಕಾರಣಗಳಿಗಾಗಿ ಇಷ್ಟಪಡುವಂತಹ ಕಟ್ಟರ್ ಹಿಂದೂ ಐಕಾನ್ ಕೂಡ ಅಲ್ಲ. ಅಯೋಧ್ಯೆಯ ರಾಮಮಂದಿರ ಕಟ್ಟಿಸುವುದು ಅವರ ಮೊದಲನೆಯ ಆದ್ಯತೆಯೂ ಅಲ್ಲ. ಅದನ್ನು ಅವರು ಅನಗತ್ಯ ಎಂದೇ ಭಾವಿಸಿದ್ದಾರೆ. ಅಧಿಕಾರ ಕೇಂದ್ರಿತ ರಾಜಕಾರಣದಲ್ಲಿ ಅಕ್ಬರ್ ಆರಂಭದಲ್ಲಿ ಪರಮತವೈರಿಯಾಗಿದ್ದರೂ ನಂತರ ಆತನ ಆಳ್ವಿಕೆಯಲ್ಲಿ ಬಹುತ್ವವನ್ನು ಕಾಣಬಹುದು. ಆದರೆ ನರೇಂದ್ರ ಮೋದಿ 2002ರ ಗುಜರಾತನ್ನು ಬಹಳ ಹಿಂದಕ್ಕೆ ತಂದು ನಿಲ್ಲಿಸಿದರು. ಅವರು ಭಾರತೀಯ ಜನತಾಪಕ್ಷದಲ್ಲಿ ಬಲವಾಗಿ ಬೇರೂರಲು ತಮ್ಮ ರಾಜಕೀಯ ದೀರ್ಘಾಯುಷ್ಯಕ್ಕಾಗಿ ತಮ್ಮದೇ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅವರನ್ನು ನೀವು ಬಲಪಂಥೀಯ ಎಂಬ ದೃಷ್ಟಿಕೋನದಿಂದ ನೋಡಿದರೂ ಸಹ ಅವರು ಬಲಪಂಥೀಯರಲ್ಲ, ಪಶ್ಚಿಮದಲ್ಲಿ ಅರ್ಥೈಸಿಕೊಂಡಂತೆ ಯಾವುದೇ ರೀತಿಯಲ್ಲೂ ಸಾಂಪ್ರದಾಯಿಕ ಬಲಪಂಥೀಯನೂ ಅಲ್ಲ್ಲ, ‘ಉದಾರ, ಜಾತ್ಯಾತೀತ’ ಭಾರತದಲ್ಲಿನ ಇಂಗ್ಲಿಷ್ ಮಾತನಾಡುವ ಗಣ್ಯರಂತೆಯೂ ಅಲ್ಲ.

ಹಾಗಾದರೆ ಮೋದಿ ನಿಜವಾಗಿಯೂ ಏನನ್ನು ಪ್ರತಿನಿಧಿಸುತ್ತಾರೆ? ಒಬ್ಬ ವ್ಯಕ್ತಿಯಾಗಿ, ತನ್ನ ಪ್ರಚಾರದ ಚಿತ್ರಣಕ್ಕೆ ವಿರುದ್ಧವಾಗಿ ಆತ ಏನನ್ನು ಇಷ್ಟಪಡುತ್ತಾರೆ? ಭಾರತದ ಪ್ರಧಾನಮಂತ್ರಿಯಾದ ನಂತರ ಏನು ಹೇಳಿದ್ದರು ಎನ್ನುವುದಕ್ಕೆ ವಿರುದ್ಧವಾಗಿ; ನಿಜವಾಗಿ ಅವರು ಯಾವುದನ್ನು ನಂಬುತ್ತಾರೆ? ಅರ್ಥಶಾಸ್ತ್ರದ ಬಗ್ಗೆ ಆತನ ಗ್ರಹಿಕೆ ಏನು? ಸಂಘಪರಿವಾರದ ಹಿಂದೂರಾಷ್ಟ್ರಕ್ಕೆ ಮನ್ನಣೆ ಕೊಟ್ಟಿದ್ದಾರಾ ಅಥವಾ ಅದರಲ್ಲೂ ಆತ ಹಿಂದೆ ಬಿದ್ದಿದ್ದಾರಾ? ಅಲ್ಪಸಂಖ್ಯಾತರನ್ನು ನಿಖರವಾಗಿ ಹೇಗೆ ನೋಡುತ್ತಾರೆ? ಪ್ರಚಾರಕ್ಕಾಗಿ ಬಳಸಿದ ಸ್ಲೋಗನ್ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಪ್ರಾಮಾಣಿಕವಾಗಿಯೂ ಶೋಷಣಾರಹಿತ ಅಭಿವೃದ್ಧಿ ಮಂತ್ರವೇ ಅಥವಾ ಇಲ್ಲಿಯ ತನಕ ಯಾರೂ ಪರಿಹರಿಸದ ಭಾರತದ ಅಲ್ಪ ಸಂಖ್ಯಾತರು, ಅದರಲ್ಲೂ ವಿಶೇಷವಾಗಿ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಸುಕು ಹೊದಿಸುವುದೇ?

ಈ ಎಲ್ಲಾ ಪ್ರಶ್ನೆಗಳಿಗೆ ಬಹಳ ಸ್ಪಷ್ಟವಾಗಿ ಉತ್ತರಗಳನ್ನು ಕಂಡುಕೊಳ್ಳದ ಹೊರತು ಮೋದಿಯನ್ನು ಯಾವುದೇ ಚೌಕಟ್ಟಿಗೆ ಒಳಪಡಿಸಲು (ಫ್ರೇಮಿಗೆ ಹಾಕಲು) ಸಾಧ್ಯವಿಲ್ಲ. ಆದರೆ, ನಿಜವಾದ ನರೇಂದ್ರ ಮೋದಿ ಭಿನ್ನ-ಭಿನ್ನವಾಗಿ, ಜಾಣ್ಮೆಯಿಂದ ಕೆಲವೇ ಕೆಲವು ಆಯ್ದ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೋರ್ಪಡಿಸಿಕೊಳ್ಳುತ್ತಾರೆ. ಬಹಳ ಮುಖ್ಯವಾಗಿ ವಿದೇಶಿ ಯಾತ್ರೆಗಳಲ್ಲಿ ಭಾರತದಲ್ಲಿ ಮಾಡುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ತನ್ನನ್ನು ತಾನು ತೋರಿಸಿಕೊಳ್ಳುತ್ತಾರೆ. ಸ್ವದೇಶದಲ್ಲಿ ತುಂಬಾ ಗಂಭೀರವೆಂಬಂತೆ ತೋರುತ್ತಾರೆ, ಎಲ್ಲರಿಗೂ ಸಲಹೆ ನೀಡುತ್ತಾರೆ ತುಂಬಾ ಕೆಲಸ ಮಾಡುತ್ತಾರೆ. ಇದರಲ್ಲಿ ಯಾವುದೇ ನಾಟಕವಿಲ್ಲ ಎಂಬಂತೆ ತೋರುತ್ತದೆ. ಪರದೇಶದಲ್ಲಿ, ಇದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಾರೆ, ಜಪಾನಿನಲ್ಲಿ ಢೋಲು ಬಾರಿಸುವಾಗ ಅಥವಾ ಚೀನಾದ ಪ್ರಧಾನಿ ಲೀ ಕಿಂಗ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವಾಗ ಅಥವಾ ಮಂಗೋಲಿಯಾ, ಆಸ್ಟ್ರೇಲಿಯಾಗಳಲ್ಲೂ ಹೆಚ್ಚು ಸ್ವತಂತ್ರವಾಗಿ ಮೋದಿ ಅಲ್ಲಿ ಹೇಗೆ ಬೇಕೋ ಹಾಗೆ ವರ್ತಿಸುತ್ತಾರೆ. ವಿನೋದಪ್ರಿಯ ಎಂಬಂತೆಯೂ ಕಾಣಿಸುತ್ತಾರೆ. ಆದರೆ, ಕೆಲವು ಕಾರಣಗಳಿಗಾಗಿ ಭಾರತೀಯರು ಅವರನ್ನು ಈ ರೀತಿ ನೋಡಲು ಇಷ್ಟಪಡುವುದಿಲ್ಲ. ಇಲ್ಲಿ ತಾನು ಇಪ್ಪತ್ನಾಲ್ಕು ತಾಸೂ ಅವಿಶ್ರಾಂತವಾಗಿ ತನ್ನ ಜನಗಳಿಗಾಗಿಯೇ ದುಡಿಯುವ 56 ಇಂಚು ಎದೆಯ ಬಲಶಾಲಿ ಮನುಷ್ಯ, ಎಂಬಂತೆ ಬಿಂಬಿಸಿಕೊಳ್ಳಲು ಇಷ್ಟಪಡುತ್ತಾರೆ.

ರಾಜಕೀಯವಾಗಿ, ಅವರಿಗೆ ಹಲವಾರು ಮಗ್ಗುಲುಗಳಿವೆ: ಆಕ್ರಮಣಶೀಲ ಧೋರಣೆ, ನಿಂದಕಪ್ರವೃತ್ತಿ; ಸೋನಿಯಾ ಗಾಂಧಿಯ ಇಟಲಿ ಮೂಲವನ್ನು ಕೆಣಕುವುದು, ಅಥವಾ ತುಂಬಾ ಸೂಕ್ಷ್ಮವಾಗಿ ಗಮನಿಸಿದಾಗ ಕಾಂಗ್ರೆಸ್ಸನ್ನು ದೆಹಲಿಯ ಸುಲ್ತಾನರಿಗೆ ಹೋಲಿಸುವುದರ ಮೂಲಕ ಅಲ್ಪಸಂಖ್ಯಾತರನ್ನು ಮೂದಲಿಸುವುದು, ಅಥವಾ ರಾಹುಲ್ ಗಾಂಧಿಯನ್ನು ‘ಶೆಹಜಾದಾ’ ಎಂದು ಗೇಲಿಮಾಡುವುದು. ಆಸ್ತಿ ಮತ್ತು ಭೂ-ಕಬಳಿಕೆಯ ಒಂದು ದೊಡ್ಡ ಪರಂಪರೆಯೆ ಇದೆ ಎಂದು ಹೇಳುವ ಮೂಲಕ ಸೋನಿಯಾರ ‘ದಾಮಾದ್’, ಅಳಿಯ ರಾಬರ್ಟ್ ವಾಧ್ರಾರನ್ನು ತಮಾಷೆ ಮಾಡುವುದು. ಆದರೆ ಒಮ್ಮೆ ಯುದ್ಧ ಮುಗಿದ ಬಳಿಕ ಆತನೊಬ್ಬ ತನ್ನ ತಾಯಿಯ ಆಶೀರ್ವಾದ ಬೇಡುವ ಕರ್ತವ್ಯನಿಷ್ಠ ಮಗ. ಚುನಾವಣಾ ಜಯದ ನಂತರ ಆತ ಯೋಗ್ಯ ಮತ್ತು ವಿನಯಶೀಲ. 2012ರ ಗುಜರಾತಿನ ಚುನಾವಣೆಯ ಜಯದ ನಂತರ, ತನ್ನ ಎದುರಾಳಿ ಮತ್ತು ಪ್ರತಿಸ್ಪರ್ಧಿಯಾದ ಕೇಶುಭಾಯಿ ಪಟೇಲರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅವರ ಸದಾಶಯವನ್ನು ಪಡೆದರು. ಲೋಕಸಭೆಯ ಜಯದ ನಂತರವೂ ತನ್ನ ಹೊಸ ಮನೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ರನ್ನು ಭೇಟಿ ಮಾಡಿದ್ದಾರೆ. ಹೀಗೆ ಮಾಜಿ ಪ್ರಧಾನಿಗೆ ಭೇಟಿಯಾಗಿ ಗೌರವ ನೀಡಿದುದರಲ್ಲಿ ಯಾವುದೇ ಶಿಷ್ಟಾಚಾರವಿಲ್ಲ, ಮತ್ತು ಇಲ್ಲಿ ಯಾವುದೇ ಸಂಗತಿಗಳು ಅವರಿಗೆ ಅಡ್ಡ ಬರಲಿಲ್ಲ\

ಒಂದು ವೈಯಕ್ತಿಕ ಮತ್ತೊಂದು ಸಾರ್ವಜನಿಕ ಎಂಬಂತೆ ಮೋದಿ ತಮ್ಮ ವ್ಯಕ್ತಿತ್ವಕ್ಕೆ ಹಲವು ಮಜಲುಗಳನ್ನು ಹೊಂದಿದ್ದಾರೆ ಎಂಬುದು ಬಹಳ ಸ್ಪಷ್ಟವಾಗಿ ಗೋಚರಿಸುವ ಸಂಗತಿ. ಹಾಗೆಯೇ ನಾವು ಮೋದಿಯ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿಲ್ಲ, ನಿಜವಾದ ನರೇಂದ್ರ ಮೋದಿಯನ್ನು ತಿಳಿಯುವುದಿದೆ.

ಒಂದು ವೈಯಕ್ತಿಕ ಮತ್ತೊಂದು ಸಾರ್ವಜನಿಕ ಎಂಬಂತೆ ಮೋದಿ ತಮ್ಮ ವ್ಯಕ್ತಿತ್ವಕ್ಕೆ ಹಲವು ಮಜಲುಗಳನ್ನು ಹೊಂದಿದ್ದಾರೆ ಎಂಬುದು ಬಹಳ ಸ್ಪಷ್ಟವಾಗಿ ಗೋಚರಿಸುವ ಸಂಗತಿ. ಹಾಗೆಯೇ ನಾವು ಮೋದಿಯ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿಲ್ಲ, ನಿಜವಾದ ನರೇಂದ್ರ ಮೋದಿಯನ್ನು ತಿಳಿಯುವುದಿದೆ. ನಾವು ತಿಳಿಯಲೇ ಬೇಕಿರುವುದು: ಮುಖ್ಯವಾಗಿ ಸಾರ್ವಜನಿಕರು ತನ್ನನ್ನು ಸಮಗ್ರವಾಗಿ ಹೇಗೆ ಗ್ರಹಿಸಿದ್ದಾರೆ ಎಂದು ತಿಳಿದುಕೊಳ್ಳುವುದು ಅವರಿಗೆ ಕೌತುಕದ ಮತ್ತು ಬಹಳ ಮುಖ್ಯವಾದ ಸಂಗತಿ. ಇದು ಅವರ ನೈಜ ವ್ಯಕ್ತಿತ್ವಕ್ಕೆ ದೊರಕುವ ಮೊದಲ ಸುಳಿವು. ತಮ್ಮ ನಿಲುವಿನ ಮೂಲಕ ಅವರು ಹೇಗೆ ಕಾಣಿಸುತ್ತಾರೆ ಎಂಬುದು ಹೇಗೆ ಮುಖ್ಯವೋ ಹಾಗೆಯೇ ಅವರು ಇದರ ಮೂಲಕ ಎಲ್ಲವನ್ನೂ ನಿಯಂತ್ರಿಸಲಿಚ್ಛಿಸುತ್ತಾರೆ.

ಅವರು ಮಾಧ್ಯಮದ ಜೊತೆಗೆ ಮುಕ್ತ ಪ್ರಶ್ನೋತ್ತರ ಗೋಷ್ಠಿಯಲ್ಲಿ ಭಾಗವಹಿಸದಿರಲು ಅಥವಾ ಎಲ್ಲರಿಗೂ ಅವಕಾಶವಿರುವ ಮುಕ್ತ ಪತ್ರಿಕಾ ಗೋಷ್ಠಿಗಳಲ್ಲಿ ಪಾಲ್ಗೊಳ್ಳದಿರಲು ಕಾರಣವೂ ಇದೆ: ಅವರು ಅನಿರೀಕ್ಷಿತವಾಗಿ ಮತ್ತು ಆಶ್ಚರ್ಯಕರವಾಗಿ ಬಂದು ಮುಜುಗರಕ್ಕೀಡುಮಾಡುವ ಪ್ರಶ್ನೆಗಳನ್ನು ಇಷ್ಟಪಡುವುದಿಲ್ಲ. ಖಚಿತವಾಗಿಯೂ ಇದು ಮೋದಿಯ ವಿಶಿಷ್ಟತೆಯಲ್ಲ. ಅನೇಕ ಭಾರತೀಯ ರಾಜಕಾರಣಿಗಳು ಇದನ್ನು ಅನುಸರಿಸುತ್ತಾರೆ- ಸೋನಿಯಾ ಮತ್ತು ರಾಹುಲ್ ಗಾಂಧಿ, ಅಖಿಲ ಭಾರತೀಯ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನ (ಎ.ಐ.ಎ.ಡಿ.ಎಂ.ಕೆ.) ಜೆ.ಜಯಲಲಿತ, ಬಹುಜನ ಸಮಾಜವಾದಿ (ಬಿ.ಎಸ್.ಪಿ.) ಪಾರ್ಟಿಯ ಮಾಯಾವತಿ, ಅಥವಾ ಬಿಜು ಜನತಾ ದಳದ (ಬಿ.ಜೆ.ಡಿ) ನವೀನ್ ಪಟ್ನಾಯಕ್ ಕೂಡ. ಅವರು ತಮ್ಮ ಸುತ್ತಲಿರುವ ರಹಸ್ಯ ಮತ್ತು ಅದರ ಸೆಳವನ್ನು ಕಾಪಾಡಿಕೊಳ್ಳಲು ಈ ರೀತಿ ಮಾಡುತ್ತಾರೆ. ಮಾಧ್ಯಮಗಳು ಅವರ ಬಗ್ಗೆ ಸದಾ ಆಸಕ್ತಿ ತಳೆಯುವಂತೆ ಮಾಡುವುದೂ ಕೂಡ ಇದರ ಒಂದು ತಂತ್ರವಾಗಿದೆ; ಕಠಿಣ ಪ್ರಶ್ನೆಗಳಿಗೆ ಉತ್ತರಿಸದೆ ತಪ್ಪಿಸಿಕೊಳ್ಳುವುದು ಕೂಡ ಈ ಕಾರ್ಯತಂತ್ರದ ಒಂದು ಭಾಗ.

ಗೌರವ ಪಡೆಯುವ ಸಲುವಾಗಿ ಬಾಲಿವುಡ್ ನಟರು ಈ ಕಾರ್ಯತಂತ್ರವನ್ನು ರೂಢಿಸಿಕೊಂಡಿದ್ದಾರೆ. ಬಾಲಿವುಡ್‍ನ ಹಿರಿಯ ನಟರು ಯಾವುದೇ ಸಿನಿಮಾ ಬಿಡುಗಡೆ ಇಲ್ಲದಿದ್ದಾಗ ಅವರು ಜೊತೆಗಿದ್ದರೂ ಒಬ್ಬರಿಗೊಬ್ಬರು ಅಥವಾ ಯಾರೊಬ್ಬರಿಗೂ ಪರಸ್ಪರ ಮಾತಾಡಲು ನಿರಾಕರಿಸುತ್ತಾರೆ. ಸಿನಿಮಾ ಬಿಡುಗಡೆಯ ಸಂದರ್ಭಕ್ಕೆ ಹೆಚ್ಚು ಮಾತಾಡುತ್ತಾರೆ. ಆಗ ಅವರು ತಮಗೆ ಯಾವ ಪ್ರಶ್ನೆ ಕೇಳಿದರೆ ಸಂತೋಷವಾಗುತ್ತದೆ ಮತ್ತು ಯಾವ ಪತ್ರಕರ್ತರು ತಮ್ಮನ್ನೇ ಹೆಚ್ಚು ಕೇಂದ್ರೀಕರಿಸುತ್ತಾರೋ ಅಂತಹ ವಿಶ್ವಾಸಾರ್ಹ ಪತ್ರಕರ್ತರ ಜೊತೆಗೆ ಮಾತ್ರ, ತಮ್ಮ ಮುಂಬರುವ ಸಿನಿಮಾಗಳಿಗೆ ಪುಕ್ಕಟೆಯಾಗಿ ಪ್ರಚಾರ ಸಿಗುವ ಕಾರಣಕ್ಕಾಗಿ, ಸಂತೋಷದಿಂದ ಮಾತಾಡುತ್ತಾರೆ. ಮೋದಿ 2014ರ ಲೋಕಸಭಾ ಚುನಾವಣೆಯ ತನಕ ಬಹಳ ಜಾಣ್ಮೆಯಿಂದ ಬಾಲಿವುಡ್ ನಟರ ತಂತ್ರಗಳನ್ನೇ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಎಪ್ರಿಲ್ ಮಧ್ಯದಲ್ಲಿ ಚುನಾವಣೆಗಳು ನಡೆಯುವವರೆಗೂ ಅವರು ಎಲ್ಲಾ ಸಂದರ್ಶನಗಳನ್ನು ನಿರಾಕರಿಸಿದರು. ಆಗ ಎಂದಿನಂತೆ ತನ್ನ ಹಿಂಬಾಲಕರ ‘ಮೋದಿ, ಮೋದಿ’ ಎನ್ನುವ ಘೋಷಣೆಯ ಕೂಗಿನೊಂದಿಗೆ ವ್ಯವಸ್ಥಿತವಾಗಿ ಸಂಯೋಜಿಸಲ್ಪಟ್ಟ ರಜತ್ ಶರ್ಮಾ ನಡೆಸುವ ‘ಆಪ್ ಕಿ ಅದಾಲತ್’ ಎನ್ನುವ ಕಾರ್ಯಕ್ರಮವೊಂದರಲ್ಲಿ ಸ್ಫೋಟಕ ಸಂದರ್ಶನವೊಂದನ್ನು ನೀಡಿದರು. ಇಲ್ಲಿಂದ ಮೋದಿ ತಾವು ಬಯಸಿದ ತಮ್ಮ ಉದ್ದೇಶಕ್ಕಾಗಿಯೇ ಸೇವೆ ಮಾಡುವಂತಹ ಮಾಧ್ಯಮವನ್ನು ಪಡೆದರು. ಇತರೆ ಸಮಯದಲ್ಲಿ ಅವರು ಮಾಧ್ಯಮದಿಂದ ದೂರವೇ ಇರುತ್ತಾರೆ ಎನ್ನುವುದಂತೂ ದಿಟ.

2002ರ ಕೋಮುವಾದಿ ಸಾಮ್ರಾಟ ಪಟ್ಟದಿಂದ 2014ರ ಒಳಗೊಳ್ಳುವಿಕೆ ರೂವಾರಿಯಾಗಿ ರೂಪಾಂತರಗೊಂಡಿದ್ದನ್ನು ಗಮನಿಸಿದರೆ ಮೋದಿ ಗ್ರಹಿಕೆಗಳ ನಿರ್ವಹಣೆಗೆ ನೀಡುವ ಪ್ರಾಶಸ್ತ್ಯ ಮನದಟ್ಟಾಗುತ್ತದೆ. ಮೋದಿ ತಮ್ಮನ್ನು ತಾವು ಹೇಗೆ ನಿರಂತರವಾಗಿ ಮರು ರೂಪಿಸಿಕೊಂಡಿದ್ದಾರೆ ಎಂಬುದನ್ನು ಪರಿಗಣಿಸಬೇಕು. ಅದು ತುಂಬಾ ಮಹತ್ವದ್ದೆನಿಸುತ್ತದೆ.

ನಮಗೆ ಎರಡನೆಯ ಒಳನೋಟವನ್ನು ಒದಗಿಸುವ ಸಂಗತಿ ಹೀಗಿದೆ: ಜನ ತನ್ನನ್ನು ಇಷ್ಟಪಡಬೇಕೆಂದು ಬಯಸುತ್ತಾರೆ ಮೋದಿ. ಇದು ಮಾನವಸಹಜ ಗುಣವೂ ಹೌದು. ನಮಗೆಲ್ಲಾ ಹೋಲಿಸಿಕೊಂಡರೆ ಮೋದಿಗೆ ಎಲ್ಲರಿಗಿಂತ ತುಸು ಹೆಚ್ಚೇ ಸ್ವಯಂ-ಆರಾಧನಾ ಭಾವವಿರುವುದು ಕಾಣಿಸುತ್ತದೆ. ಮೋದಿ ತನ್ನನ್ನು ಇಷ್ಟಪಡುವ ಪ್ರೇಕ್ಷರಿದ್ದಾಗ ತುಂಬಾ ಸಂತೋಷದಲ್ಲಿರುತ್ತಾರೆ. ಮೋದಿಯ ಆದ್ಯತೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳ ಮುಂದೆ ತನ್ನಿಷ್ಟದ ಪ್ರೇಕ್ಷಕರೊಟ್ಟಿಗೆ ನಿಯಂತ್ರಿತ ಸಂವಹನ ನಡೆಸುವುದಾಗಿದೆಯೇ ಹೊರತು ತನ್ನ ವಿರುದ್ಧದ ಪ್ರೇಕ್ಷಕರೊಟ್ಟಿಗೆ ಸಂವಹನಿಸಿ ಮುಜುಗರಕ್ಕೀಡಾಗುವುದಲ್ಲ. ಸಾರ್ವಜನಿಕವಾಗಿ ಅಗೌರವಕ್ಕೊಳಗಾಗುವುದನ್ನು ಮೋದಿ ಇಷ್ಟಪಡುವುದಿಲ್ಲ. ಜನ ಪ್ಲೇಗಿಗೆ ಹೆದರುವಂತೆ ಅವರು ಸಾರ್ವಜನಿಕವಾಗಿ ಮುಜುಗರಕ್ಕೀಡಾಗುವುದಕ್ಕೆ ಭಯಪಡುತ್ತಾರೆ.

ನಿಜವಾಗಿಯೂ ಮೋದಿ ತನ್ನ ವಿಮರ್ಶಕರು, ಕಟು ಬರೆಹಗಳಿಂದ, ಪ್ರೇಕ್ಷಕರಿಂದ ದೂರವಿರುವುದಿಲ್ಲ. ನಿರಂತರ ಟೀಕೆಗಳನ್ನು ನಿಭಾಯಿಸಲು ಮೋದಿ ಬಳಸುವ ಸುಲಭ ತಂತ್ರವೆಂದರೆ ಅವರನ್ನು ನಿರ್ಲಕ್ಷಿಸುವುದು. ಪಟ್ಟು ಬಿಡದೇ ಮಾಡುವ ವಿಮರ್ಶೆಯು ಅವರನ್ನು ಇಷ್ಟಪಡದಿರುವವರ ವಿಶ್ವಾಸಾರ್ಹತೆಯನ್ನು ಮೊಟಕುಗೊಳಿಸುತ್ತದೆ ಎಂದು ಆತ ತಿಳಿದಿದ್ದಾರೆ. ಹಾಗಾಗಿ ಮೋದಿ ತಮಗಾಗಿ ಕೆಲಸ ಮಾಡುತ್ತಾನೆ ಎಂದು ಜನ ನಂಬಿದ್ದಾರೆ ಎಂದೇ ಭಾವಿಸುತ್ತಾರೆ. ಇದು ಸತ್ಯ ಕೂಡ. ಇದರಿಂದ 2002ರ ಘಟನೆ ಕುರಿತಂತೆ ಟೀಕಾಕಾರರ ನಿರಂತರ ದಾಳಿಯನ್ನು ಭಾರತದ ಮಧ್ಯಮವರ್ಗ ಅಲಕ್ಷಿಸಲು ಸಾಧ್ಯವಾಗಿದೆ.

2002ರ ಕೋಮುವಾದಿ ಸಾಮ್ರಾಟ ಪಟ್ಟದಿಂದ 2014ರ ಒಳಗೊಳ್ಳುವಿಕೆ ರೂವಾರಿಯಾಗಿ ರೂಪಾಂತರಗೊಂಡಿದ್ದನ್ನು ಗಮನಿಸಿದರೆ ಮೋದಿ ಗ್ರಹಿಕೆಗಳ ನಿರ್ವಹಣೆಗೆ ನೀಡುವ ಪ್ರಾಶಸ್ತ್ಯ ಮನದಟ್ಟಾಗುತ್ತದೆ. ಮೋದಿ ತಮ್ಮನ್ನು ತಾವು ಹೇಗೆ ನಿರಂತರವಾಗಿ ಮರು ರೂಪಿಸಿಕೊಂಡಿದ್ದಾರೆ ಎಂಬುದನ್ನು ಪರಿಗಣಿಸಬೇಕು. ಅದು ತುಂಬಾ ಮಹತ್ವದ್ದೆನಿಸುತ್ತದೆ. 2002ರಲ್ಲಿ ಸಂಘಪರಿವಾರದ ನೆರಳಿನಿಂದ ಅನಾಮಿಕ ರಾಜಕಾರಣಿಯಾಗಿ ಉದಯಿಸಿದ ಮೋದಿಗೆ ತನ್ನನ್ನು ಮತಗಳಿಸುವ ನಾಯಕನಾಗಿ ರೂಪಿಸಿಕೊಳ್ಳಲು ವಿವಾದಾತ್ಮಕ ವಿಷಯವೊಂದು ಬೇಕಿತ್ತು. ಗೋಧ್ರಾ ರೈಲು ದುರಂತ ಅವರಿಗೊಂದು ಅವಕಾಶವಾಯಿತು. ಆಗ ಮೋದಿ ಕೋಮುವಾದಿ ಹತ್ಯೆಗಳನ್ನು ನಿಲ್ಲಿಸಲು ಸಾಕಷ್ಟು ಶ್ರಮಿಸಿದರೋ ಅಥವಾ ರಹಸ್ಯವಾಗಿ ಉತ್ತೇಜಿಸಿದರೋ ಎಂಬುದು ಅನುಮಾನಾಸ್ಪದವಾಗಿದೆ. ಆದರೆ ಗುಜರಾತಿನ ಬಿ.ಜೆ.ಪಿ.ಯ ನಿರ್ವಿವಾದ ನಾಯಕನಾಗಿ ಮೋದಿ ಹೊರಹೊಮ್ಮಲು 2002ರ ಘಟನೆಯೇ ಕಾರಣ ಎಂಬುದರಲ್ಲಿ ಅನುಮಾನ ಉಳಿದಿಲ್ಲ.

ಮುಖ್ಯ ಸಂಗತಿಯೇನೆಂದರೆ, ಮೋದಿ ಯಾರ ನಿಯಂತ್ರಣಕ್ಕೊಳಪಡಲು ಇಷ್ಟಪಡುವುದಿಲ್ಲ. ರಾಜಕೀಯದಲ್ಲೂ ಪೂರ್ಣಕಾಲಿಕ ಸ್ನೇಹಿತರನ್ನು ಹೊಂದುವುದನ್ನು ಅವರು ಬಯಸುವುದಿಲ್ಲ. ಮೋದಿ ರಾಜಕೀಯವಾಗಿ ಮತ್ತು ಭಾವನಾತ್ಮಕವಾಗಿ ಒಂಟಿಯಾಗಿರಲು ಇಷ್ಟಪಡುವ ವ್ಯಕ್ತಿ.

ಅವರು ಅಧಿಕಾರಕ್ಕೆ ಬಂದ ತಕ್ಷಣದಿಂದ ಮುಂದಿನ ಕೆಲ ವರ್ಷಗಳವರೆಗೆ ಈ ‘ಧ್ರುವೀಕರಣ ವ್ಯಕ್ತಿತ್ವ’ವನ್ನು ಕಡಿಮೆ ಬಳಸಿ, ತನ್ನ 2002ರ ಚಿತ್ರಣವನ್ನು ಜಾಲವಾಗಿ ಬಳಸಿಕೊಂಡು ವಿಶ್ವ ಹಿಂದು ಪರಿಷತ್ ಮತ್ತು ಸಂಘಪರಿವಾರದ ಮುಂಚೂಣಿಯಲ್ಲಿದ್ದವರನ್ನೇ ನೇಪಥ್ಯಕ್ಕೆ ಸರಿಸಿ, ಯಾರು ‘ನಾಯಕ’ ಎಂಬುದನ್ನು ತೋರಿಸಿದ್ದು ಈಗ ಇತಿಹಾಸ. ನಿಧಾನಕ್ಕೆ ಅವರೆಲ್ಲಾ ನೇಪಥ್ಯದಲ್ಲೇ ಉಳಿಯುವಂತಾಯಿತು. ತನ್ನ ಈ ರೂಪಕ್ಕೆ ಬದಲಾವಣೆಯ ಅಗತ್ಯವಿದೆ ಎಂದು ಭಾವಿಸಿದ ಮೋದಿ ಪ್ರಜ್ಞಾಪೂರ್ವಕವಾಗಿಯೇ ‘ಬದಲಾವಣೆ’ ಎಂದು ಕರೆಯಲ್ಪಡುವ ‘ಅಭಿವೃದ್ಧಿಯ ಮಂತ್ರ’ವನ್ನು ಜಪಿಸತೊಡಗಿದರು. ಆಗ ಗುಜರಾತಿನಲ್ಲಿ ರೋಮಾಂಚನಕಾರಿ ರೀತಿಯಲ್ಲಿ ಉದ್ಯಮಿಗಳ ಶೃಂಗಸಭೆಗಳು ಆಯೋಜನೆಗೊಳ್ಳತೊಡಗಿದವು. ಇದರಲ್ಲಿ ವಿಶ್ವದ ದೊಡ್ಡದೊಡ್ಡ ಉದ್ಯಮಿಗಳು ಬಂದು ಮೋದಿಯ ‘ಸ್ನೇಹಪರತೆ ಮತ್ತು ಉದ್ಯಮಪರತೆ’ಯನ್ನು ಕೊಂಡಾಡಿದರು, ಅಲ್ಲದೆ ರಾಜ್ಯದ ಮುಂಚೂಣಿ ನಾಯಕರೂ ಇದನ್ನು ಶ್ಲಾಘಿಸಿದರು. ಇಲ್ಲಿಂದ ‘ಗುಜರಾತ್ ಮಾದರಿ’ ಖ್ಯಾತಿಯ ಮಾರ್ಗ ಚಿಗುರತೊಡಗಿತು. ಇದು ಮೋದಿಯ ಪಾಲಿಗೆ ರಾಷ್ಟ್ರಮಟ್ಟದ ಬೆಳವಣಿಗೆಯ ಮೊದಲ ಹೆಜ್ಜೆಯೂ ಹೌದು ಆದರೆ ಮೋದಿ ಪ್ರಧಾನಿಯಾದ ನಂತರ ಗುಜರಾತ್ ಮಾದರಿಯ ಎಲ್ಲಾ ಮಾತುಗಳೂ ನಿಂತುಹೋಗಿವೆ.

ಈಗ ‘ಉದ್ಯಮಸ್ನೇಹಿ’ ನಿಲುವು ಅಥವಾ ಉದ್ಯಮಪತಿಗಳಿಗೆ ಮನ್ನಣೆ ಹಾಕುವ ಧೋರಣೆ ಮುಗಿದ ಅಧ್ಯಾಯ. ಮೋದಿ ತಮ್ಮ ಮೂರನೇ ಅವತಾರದಲ್ಲಿ, ಪ್ರಧಾನ ಮಂತ್ರಿಯಾಗಿ ಬಡತನದ ಬಗ್ಗೆ, ಎಲ್ಲರನ್ನು ಒಳಗೊಂಡ ಅಭಿವೃದ್ಧಿಯ ಬಗ್ಗೆ, ಬಯಲು ಶೌಚಾಲಯದ ಬಗ್ಗೆ, ಮಹಿಳಾ ಸುರಕ್ಷತೆ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ; ಉದ್ಯಮಸ್ನೇಹಿ ಕುರಿತ ಮಾತು ಕಡಿಮೆಯಾಗಿದೆ. ನಿಜವೇನೆಂದರೆ ಮೋದಿ ಬಡತನ ಕುರಿತು ದೇಶದಲ್ಲಿ, ಮತ್ತು ವಾಣಿಜ್ಯ ವಿಷಯದ ಬಗ್ಗೆ ವಿದೇಶದಲ್ಲಿ ಮಾತಾಡುತ್ತಾರೆ. ಕಳೆದ ವರ್ಷದವರೆಗೆ ಮೋದಿಯ ಪರವಾಗಿದ್ದ ಭಾರತದ ಉದ್ಯಮಪತಿಗಳು ಕೂಡ ಬದಲಾವಣೆಯ ಮಂದಗತಿ ಬಗ್ಗೆ ಗೊಣಗತೊಡಗಿದ್ದಾರೆ. ಹಾಗಂತ ಅವರು ಮೋದಿಯ ಮೇಲಿನ ನಂಬಿಕೆಯನ್ನು ಪೂರ್ತಿಯಾಗಿ ಕಳೆದುಕೊಂಡಿಲ್ಲ; ಮೋದಿಯ ಹೊಸ ಮುಖವನ್ನು ಗಮನಿಸುತ್ತಿದ್ದಾರೆ. ಈ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಿನ ಮೋದಿಯಂತೆ ಇಲ್ಲ.

ನಮಗೆ ಮತ್ತೊಂದು ಪ್ರಮುಖ ಒಳನೋಟ ನೀಡುವ ಸಂಗತಿ: ತನ್ನನ್ನು ಇನ್ನೊಬ್ಬರ ದಾಳವಾಗಿ ಕಾಣುವುದರ ಬಗ್ಗೆ ಮೋದಿಗೆ ಬಲವಾದ ವಿರೋಧವಿದೆ. ಆದರೆ ಮೋದಿ ಸುತ್ತಲೂ ಅವರ ರಾಜಕೀಯ ವಿರೋಧಿಗಳಿಂದ ಹೆಣೆಯಲ್ಪಟ್ಟ ಬಹುದೊಡ್ಡ ಸುಳ್ಳು ಆರೋಪವೇನೆಂದರೆ ಅವರು ಉದ್ಯಮಿಗಳ ಪರವಾಗಿದ್ದಾರೆ ಎಂಬುದು. ಉದ್ಯಮಪತಿಗಳೊಂದಿಗಿನ ಇಂತಹ ಆಪ್ತಬಾಂಧವ್ಯಕ್ಕೆ ಉದಾಹರಣೆಯಾಗಿ ಪದೇಪದೇ ಗೌತಮ್ ಅದಾನಿ, ಮುಖೇಶ್ ಅಂಬಾನಿಯವರ ಹೆಸರುಗಳನ್ನು ಉಲ್ಲೇಖಿಸಲಾಗುತ್ತದೆ. 2015ರ ಆರಂಭದಲ್ಲಿ ಲಾಬಿಕೋರರನ್ನು ಬಗ್ಗುಬಡಿಯಲು ಸೂಕ್ಷ್ಮ ಕಾಗದಪತ್ರಗಳನ್ನು ಹೊಂದಿದ ಆರೋಪದಲ್ಲಿ ದೊಡ್ಡದೊಡ್ಡ ಉದ್ಯಮಪತಿಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಹಲವಾರು ಉದ್ಯೋಗಿಗಳು ಮತ್ತು ದಲ್ಲಾಳಿಗಳನ್ನು ಬಂಧಿಸಲಾಯಿತು. ವಾಸ್ತವವಾಗಿ ಸರ್ಕಾರದ ಬಗ್ಗೆ ಭಯ ಹುಟ್ಟಿಸುವುದು ಈ ದಾಳಿಯ ಉದ್ದೇಶವಾಗಿತ್ತು.

ಮುಖ್ಯ ಸಂಗತಿಯೇನೆಂದರೆ, ಮೋದಿ ಯಾರ ನಿಯಂತ್ರಣಕ್ಕೊಳಪಡಲು ಇಷ್ಟಪಡುವುದಿಲ್ಲ. ರಾಜಕೀಯದಲ್ಲೂ ಪೂರ್ಣಕಾಲಿಕ ಸ್ನೇಹಿತರನ್ನು ಹೊಂದುವುದನ್ನು ಅವರು ಬಯಸುವುದಿಲ್ಲ. ಮೋದಿ ರಾಜಕೀಯವಾಗಿ ಮತ್ತು ಭಾವನಾತ್ಮಕವಾಗಿ ಒಂಟಿಯಾಗಿರಲು ಇಷ್ಟಪಡುವ ವ್ಯಕ್ತಿ. ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಮತ್ತು ಪಾರ್ಟಿ ಅಧ್ಯಕ್ಷ ಅಮಿತ್ ಷಾ ಅವರ ನಿಕಟವರ್ತಿಗಳೆಂದು ಹೇಳಲಾಗಿದ್ದರೂ, ಸತ್ಯ ಸರಳವಾಗಿದೆ: ಅವರು ಆತ್ಮೀಯರೆಂದು ಅಂದುಕೊಂಡಿದ್ದರೂ ಅವರ ನಿಕಟತೆಯು ಅವರಿಗಿಂತ ಹೆಚ್ಚಾಗಿ ಮೋದಿಯ ಉದ್ದೇಶಗಳಿಗಾಗಿ ಎನ್ನುವುದು ಸತ್ಯ. ಆತನೊಟ್ಟಿಗಿದ್ದಾಗ ಅವರು ಅಷ್ಟೊಂದು ವೈಯಕ್ತಿಕ ಪ್ರಭಾವವನ್ನು ಹೊಂದಿರುವುದಿಲ್ಲ. ಆದಾಗ್ಯೂ ಸಹ ಅವರು ಎಲ್ಲರಿಗೂ ತಮ್ಮನ್ನು ತಾವು ಹಾಗೆ ತೋರ್ಪಡಿಸಿಕೊಳ್ಳಲು ಇಷ್ಟಪಡುತ್ತಾರೆ.

ಮೋದಿ ಸಂಘಪರಿವಾರದ ನೆಹರೂ ವಿರೋಧಿ ಭಾವನೆಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಸಂಘದ ಪ್ರಕಾರ ನೆಹರೂ ಅವಶ್ಯಕವಾಗಿ ಹಿಂದೂ ವಿರೋಧಿ. ಆದರೆ ಮೋದಿ ನೇರವಾಗಿ ಆ ತರಹದ ಯಾವುದೇ ಮಾತುಗಳನ್ನು ಬಳಸುವುದಿಲ್ಲ. ನೆಹರೂ ಅವರ ಪಾಶ್ಚಿಮಾತ್ಯ ದೃಷ್ಟಿಕೋನವನ್ನು ಗಾಂಧಿ, ಪಟೇಲ್‍ರಿಗೆ ಹೋಲಿಸಿ, ಹಾಗೆನೇ ಕಟ್ಟರ್ ಹಿಂದೂವಾದಿಯಾಗಿದ್ದ ದೀನ್‍ದಯಾಳ್ ಉಪಾಧ್ಯಾಯರ ಮೌಲ್ಯಗಳಿಗೂ ಹೋಲಿಸಿ ನೆಹರೂರವರನ್ನು ಕುಬ್ಜಗೊಳಿಸಲು ಪ್ರಯತ್ನಿಸುತ್ತಾರೆ.

ನಿಜವಾಗಿಯೂ ಮೋದಿ ಯಾರು ಎಂಬುದಕ್ಕೆ ಉತ್ತರಗಳನ್ನು ಹುಡುಕುವಾಗ ಯಾರಾದರೂ ಸರಿ ಈ ಮುಂದಿನ ಸಾಧ್ಯತೆಗಳಿಂದ ಆರಂಭಿಸಬೇಕು: ಅವರು ಯಾವುದೇ ಆರೋಪಕ್ಕೆ ಗುರಿಯಾಗುವುದನ್ನು ಅಥವಾ ಯಾವುದೇ ಟೀಕೆಗೆ ಒಳಗಾಗುವುದನ್ನು ಇಷ್ಟಪಡುವುದಿಲ್ಲ. ಈ ಕಾರಣಕ್ಕಾಗಿಯೇ ಅವರು ತನ್ನ ರಾಜಕೀಯ ಮತ್ತು ವೈಯಕ್ತಿಕ ಗುರಿಗಳಿಗನುಗುಣವಾದ ಅಗತ್ಯ ರೀತಿಯ ಇಮೇಜನ್ನು ಬೆಳಿಸಿಕೊಂಡಿದ್ದಾರೆ. ಹಾಗಂತ ಅವರಿಗೆ ಯಾವುದೇ ಪ್ರಮುಖವಾದ ನಂಬಿಕೆಗಳಿಲ್ಲವೆಂದಲ್ಲ. ಅವುಗಳಲ್ಲೊಂದು ಅವರು ಇಷ್ಟ ಪಡುವ ‘ಹಿಂದೂ ರಾಷ್ಟ್ರೀಯತೆ’ ಅಥವಾ ‘ಹಿಂದೂ ಭಾರತೀಯತೆ’. ಆದರೆ ವಾಸ್ತವಿಕ ರಾಜಕಾರಣ ಅವರನ್ನು ತಮ್ಮ ನಿಜವಾದ ‘ಹಿಂದೂ’ ಒಲವು ಕುರಿತು ಹೆಚ್ಚು ಮಾತಾಡುವುದನ್ನು ತಡೆಯುತ್ತದೆ. ಬದಲಿಗೆ ಅವರು ತಮ್ಮ ಸಾಂಸ್ಕøತಿಕ ಯೋಜನೆಗಳನ್ನು ರೂಪಿಸಲು ಅರೆ ಧಾರ್ಮಿಕ ಭಾಷೆ ಮತ್ತು ಸಂಕೇತಗಳನ್ನು ಬಳಸುತ್ತಾನೆ ಅಲ್ಲದೆ ಅವರು ಹಿಂದಿಯಲ್ಲಿ ಮಾತಾಡುತ್ತಾರೆ. ಉದಾಹರಣೆಗೆ ಗಂಗಾ ಶುದ್ಧೀಕರಣ ಯೋಜನೆಗೆ ಅವರು ಕೊಟ್ಟ ಹೆಸರು, ನಮಾಮಿ ಗಂಗೆ. ಸ್ವಾಮಿ ವಿವೇಕಾನಂದ ತಮಗೆ ವೈಯಕ್ತಿಕವಾಗಿ ಸ್ಫೂರ್ತಿ ಎಂಬುದನ್ನು ಎಲ್ಲಾ ಹಿಂದೂಗಳು ನಂಬಲಿ ಎಂದು ಬಯಸುತ್ತಾರೆ, ಆದರೆ ಆಂತರ್ಯದಲ್ಲಿ ಅದಕ್ಕೆ ತದ್ವಿರುದ್ಧವಾದ ನಿಲುವು ಸ್ವಾಮಿ ವಿವೇಕಾನಂದರ ಬಗ್ಗೆ ಇದೆ.

ಮೋದಿ ಸಂಘಪರಿವಾರದ ನೆಹರೂ ವಿರೋಧಿ ಭಾವನೆಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಸಂಘದ ಪ್ರಕಾರ ನೆಹರೂ ಅವಶ್ಯಕವಾಗಿ ಹಿಂದೂ ವಿರೋಧಿ. ಆದರೆ ಮೋದಿ ನೇರವಾಗಿ ಆ ತರಹದ ಯಾವುದೇ ಮಾತುಗಳನ್ನು ಬಳಸುವುದಿಲ್ಲ. ನೆಹರೂ ಅವರ ಪಾಶ್ಚಿಮಾತ್ಯ ದೃಷ್ಟಿಕೋನವನ್ನು ಗಾಂಧಿ, ಪಟೇಲ್‍ರಿಗೆ ಹೋಲಿಸಿ, ಹಾಗೆನೇ ಕಟ್ಟರ್ ಹಿಂದೂವಾದಿಯಾಗಿದ್ದ ದೀನ್‍ದಯಾಳ್ ಉಪಾಧ್ಯಾಯರ ಮೌಲ್ಯಗಳಿಗೂ ಹೋಲಿಸಿ ನೆಹರೂರವರನ್ನು ಕುಬ್ಜಗೊಳಿಸಲು ಪ್ರಯತ್ನಿಸುತ್ತಾರೆ. ಅಲ್ಪಸಂಖ್ಯಾತರನ್ನು ಓಲೈಸಲು ಅವರ ವಿವಾದಾತೀತ ನಾಯಕರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮುಖ್ಯವಾಗಿ ಅವರಲ್ಲಿ: ಸಿಂಹಾಸನಕ್ಕಾಗಿ ಔರಂಗಜೇಬನಿಂದ ಕೊಲ್ಲಲ್ಪಟ್ಟ ದಾರಾ ಶಿಖೋ, ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡ ನಾಯಕ ಅಬ್ಬಾಸ್ ತಯ್ಯಬ್‍ಜಿ, ಮತ್ತು ಯುನಾನಿ ವೈದ್ಯ ವಿದ್ವಾಂಸ ಹಕೀಂ ಅಜ್ಮಲ್ ಖಾನ್. ಅಲ್ಪಸಂಖ್ಯಾತರ ಓಲೈಸಲು ಮೋದಿಯ ಯೋಜನೆಗಳಲ್ಲಿ ಬಳಸಿಕೊಂಡಿರುವ ಹೆಸರುಗಳೂ ಕೂಡ ಇವೇ ಆಗಿವೆ. ಅಲ್ಪಸಂಖ್ಯಾತರಿಗೆ ಅಡ್ಡಿಪಡಿಸದೆ ಅತ್ಯಂತ ಸೂಕ್ಷ್ಮವಾಗಿ ಕಾಳಜಿ ವಹಿಸಿ ಕೆಲಸ ಮಾಡುತ್ತೇನೆ ಎಂಬ ಸಂದೇಶವನ್ನು ನೀಡಲು ಬಳಸುವ ‘ಅಸ್ಮಿತೆಯ ರಾಜಕಾರಣ’ವಿದು

ಮೋದಿಯ ವ್ಯಕ್ತಿತ್ವದಲ್ಲಿರುವ ಇನ್ನೊಂದು ಮುಖ್ಯ ಅಂಶವೆಂದರೆ ಭಾರತದ ನಿರ್ಮಾಣದಲ್ಲಿ ತಮ್ಮ ಪಾತ್ರದ ಬಗ್ಗೆ ತಮಗಿರುವ ನಂಬಿಕೆ. ಭಾರತದ ನಿರ್ಮಾಣದಲ್ಲಿ ಅವರಿಗೆ ತಮ್ಮದೇ ಕನಸುಗಳಿವೆ. ಆದರೆ ಅದಕ್ಕಿಂತ ಹೆಚ್ಚಾಗಿ ಅವರು ತಾವೇ ಎಲ್ಲಾ ಎನ್ನುವಂತೆ ಮಾತಾಡುತ್ತಾರೆ. ಮುಖ್ಯವಾಗಿ ‘ನಾನು’, ‘ನನಗೆ’, ‘ನನ್ನಿಂದ’ ಎನ್ನುವ ಮಾದರಿಯ ಅಭಿವೃದ್ಧಿಯು ಅವರ ಮಾತುಗಳಲ್ಲಿ ಒಳಗೊಂಡಿದೆ. ಆದರೆ ಸಾಧನೆಯ ದೃಷ್ಟಿಕೋನವು ‘ನಾನು’ವಿನ ಗೀಳಿನಲ್ಲಿಯೇ ಇದೆ. ಮೋದಿ ಬಡತನ ಹೋಗಲಾಡಿಸಿದ ಮತ್ತು ಬಲಾಢ್ಯ ರಾಷ್ಟ್ರ ನಿರ್ಮಾಣ ಮಾಡಿದ ಮೊದಲ ಪ್ರಧಾನಿ ಎಂದು ಕರೆಸಿಕೊಳ್ಳಬೇಕೆಂಬ ಮಹದಾಸೆಯಿಟ್ಟುಕೊಂಡಿರುವ ವ್ಯಕ್ತಿ. ಅವರ ಈ ಕನಸಿಗೆ ಶಕ್ತಿ ಒದಗಿಸುವುದು ಹಿಂಬಾಲಕರು, ಹಿಂದೂ ಬ್ರಿಗೇಡ್, ಮುಖ್ಯವಾಗಿ ಬಲಿಷ್ಠ ಭಾರತದವರೆಂದು ಕರೆಸಿಕೊಳ್ಳಬೇಕೆಂದು ಕನಸು ಕಾಣುತ್ತಿರುವ ಮಧ್ಯಮವರ್ಗದ ಜನ. ಅನಿವಾಸಿ ಭಾರತೀಯರು ಈ ವಿಷಯವಾಗಿ ಚದುರಿದ ಆಲೋಚನೆಗಳನ್ನೇ ಹೊಂದಿದ್ದಾರೆ. ಅವರ ಆಲೋಚನೆಯೇನೆಂದರೆ, ನಾವು ಬಲಾಢ್ಯರಾಷ್ಟ್ರದ ಪ್ರಜೆಗಳು, ಮತ್ತು ನಾವು ಆಯ್ಕೆ ಮಾಡಿಕೊಂಡ ದೇಶಗಳಲ್ಲಿ ನಮಗೆ ಸಾಕಷ್ಟು ಮರ್ಯಾದೆ ಸಿಗುತ್ತದೆ, ಮತ್ತು ಇದು ತಮ್ಮ ಗುರುತನ್ನು ಹೆಚ್ಚಿಸುತ್ತದೆ ಎಂಬುದು. ಈ ನೆಲೆಯಿಂದ ನೋಡಿದಾಗ ಮೋದಿಯ ಅತಿ ದೊಡ್ಡ ಯಶಸ್ಸು ಎಂದರೆ ಇಂಡಿಯಾವನ್ನು ವಿದೇಶಕ್ಕೆ ಪರಿಚಯಿಸಿದ್ದು.

ವಿದೇಶಿಗರು ಮೋದಿಯ ನೇತೃತ್ವದಲ್ಲಿ ಉದಯಿಸುತ್ತಿರುವ ಭಾರತವನ್ನು ಕಾಣುತ್ತಿದ್ದಾರೆ, ಆದರೆ ಅವರು ಉದ್ಯಮದ ಕುರಿತಾದ ಮೋದಿಯ ನಿಲುವುಗಳೇನು ಎಂಬುದನ್ನು ಅರಿಯಲು ಇಷ್ಟಪಡುತ್ತಾರೆ. ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಉದ್ಯಮಕ್ಕೆ ನೀಡಿದ ಮುಕ್ತತೆಯನ್ನು ಇಲ್ಲೂ ಕೊಡುತ್ತಾರೆಯೇ? ಎಂಬುದನ್ನು ವಿದೇಶಿ ಬಂಡವಾಳಿಗರು ಯೋಚಿಸುತ್ತಿದ್ದಾರೆ. ಆರ್ಥಿಕತೆ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಮೋದಿ ಸರಕಾರದ ನಿಲುವುಗಳೇನು? ಚುನಾವಣಾ ಪೂರ್ವದಲ್ಲಿ ಸರಕಾರದ ಗಾತ್ರವನ್ನು ತಗ್ಗಿಸಲಾಗುತ್ತದೆಯೇ ಅಥವಾ ಹಿಗ್ಗಿಸಲಾಗುತ್ತದೆಯೇ? ಎಂಬುದು ವಿದೇಶಿಗರಿಗೆ ಕಾಡುತ್ತಿರುವ ಪ್ರಶ್ನೆಗಳು. ಇವು ನಮ್ಮ ಪ್ರಶ್ನೆಗಳೂ ಆಗಿವೆ. ಮೋದಿಯ ಎರಡು ಬಹುಮುಖ್ಯವಾದ ಹೇಳಿಕೆಗಳೆಂದರೆ, ಒಂದು ‘ಸರ್ಕಾರ ವ್ಯವಹಾರಕ್ಕಾಗಿ ವ್ಯವಹಾರ ಹೊಂದಿಲ್ಲ’, ಎರಡು ‘ಕನಿಷ್ಠ ಸರಕಾರ ಗರಿಷ್ಠ ಆಡಳಿತ’.

ಮೋದಿ ವಾಸ್ತವವಾಗಿ ಕೇವಲ ಸಾರ್ವಜನಿಕ ವಲಯದ ಕಂಪನಿಗಳನ್ನು ಸ್ವಾಯತ್ತ ಕಂಪನಿಗಳನ್ನಾಗಿ ಮಾಡಲು ಆಸಕ್ತರಾಗಿದ್ದಾರೆ. ಅವರು ಖಾಸಗೀಕರಣದಲ್ಲಿ ಯಾವುದೇ ಸೈದ್ಧಾಂತಿಕ ನಂಬಿಕೆಯನ್ನು ಹೊಂದಿಲ್ಲ.

ಇವೆರಡೂ ಮೋದಿ ಪ್ರಧಾನಿಯಾಗಿ ಆಯ್ಕೆಯಾಗುವುದಕ್ಕಿಂತ ಮುಂಚೆಯೇ ನೀಡಿದ್ದ ಹೇಳಿಕೆಗಳು. ಮತ್ತೆ ಅವನ್ನು ಮರು ಹೇಳಿಕೆಯ ರೀತಿಯಲ್ಲಿ ನೀಡಿದ್ದನ್ನು ಕಾಣಬಹುದು. ರೇಗನ್‍ನಂತೆ ಸರಕಾರವನ್ನು ತಗ್ಗಿಸುತ್ತಾರೆ ಎಂದಾಗಲೀ, ಒತ್ತಾಯಪೂರ್ವಕವಾಗಿ ಥ್ಯಾಚರೆಯಂತೆ ಆಸ್ತಿ ಮಾರಾಟ ಮಾಡುತ್ತಾರೆ ಎಂದಾಗಲೀ ಅಲ್ಲ. ಅವರಿಗೆ ಒಂದು ಮಹತ್ತರವಾದ ನಿಲುವು ಇತ್ತು. ಅದು: ಒಂದು, ವ್ಯವಹಾರವು ಅದರ ಗುರಿಗಳನ್ನು ಸುಲಭಗೊಳಿಸುವಲ್ಲಿ ಕೇಂದ್ರೀಕರಿಸುವ ಮೂಲಕ ಆ ವ್ಯವಹಾರವನ್ನು ಹೆಚ್ಚಾಗಿ ಬೆಂಬಲಿಸುತ್ತದೆ; ಎರಡು, ರಾಜ್ಯ ಆಸ್ತಿಗಳನ್ನು ಮಾರಾಟ ಮಾಡುವುದು ಒಂದು ಆದ್ಯತೆಯಾಗಿರುವುದಿಲ್ಲ, ಆದರೆ ಹಣಕಾಸಿನ ಕೊರತೆಯನ್ನು ಕಡಿತಗೊಳಿಸುವುದಕ್ಕೆ ರಾಜಕೀಯವಾಗಿ ಕಾರ್ಯಸಾಧ್ಯವಾಗುವ ಅಥವಾ ಅಗತ್ಯವಾದ ನ್ಯಾಯೋಚಿತ ವಾತಾವರಣದ ಪ್ರತಿಪಾದನೆಯಷ್ಟೇ ಆಗಿರುತ್ತದೆ.

ಮೋದಿ ಒಮ್ಮೆಗೆ ಯಾವುದನ್ನೂ ಖಾಸಗೀಕರಣಗೊಳಿಸುತ್ತಿದ್ದೇನೆಂದು ಸೂಚಿಸಲಿಲ್ಲ. ಅಥವಾ ಸರಕಾರ ತೀರಾ ಹಿಂದುಳಿದಿದೆ ಅದಕ್ಕಾಗಿ ಆರ್ಥಿಕ ವಲಯದ ಬೆಳವಣಿಗೆಗಾಗಿ ಮುಕ್ತ ಮಾರುಕಟ್ಟೆಗೆ ಅವಕಾಶ ಕೊಡಬೇಕು ಎಂದೂ ಹೇಳಲಿಲ್ಲ. ಮೋದಿ ವಾಸ್ತವವಾಗಿ ಕೇವಲ ಸಾರ್ವಜನಿಕ ವಲಯದ ಕಂಪನಿಗಳನ್ನು ಸ್ವಾಯತ್ತ ಕಂಪನಿಗಳನ್ನಾಗಿ ಮಾಡಲು ಆಸಕ್ತರಾಗಿದ್ದಾರೆ. ಅವರು ಖಾಸಗೀಕರಣದಲ್ಲಿ ಯಾವುದೇ ಸೈದ್ಧಾಂತಿಕ ನಂಬಿಕೆಯನ್ನು ಹೊಂದಿಲ್ಲ. ಅದಕ್ಕಾಗಿಯೇ ಸಣ್ಣ ಬ್ಯಾಂಕುಗಳನ್ನು ಖಾಸಗೀರಣ ಮಾಡುವಲ್ಲಿಯೂ ಸಹ ಹಿಂದುಳಿದಿದ್ದಾರೆ. ಪುನರುಜ್ಜೀವನದ ಭರವಸೆ ಮೀರಿರುವ ಕಂಪನಿಗಳನ್ನು ಮಾತ್ರ ಅವರು ಮಾರಾಟ ಮಾಡುತ್ತಾರೆ.

2015ರ ಜನವರಿಯಲ್ಲಿ ನಡೆದ ಜಾಗತಿಕ ಶೃಂಗಸಭೆಯಲ್ಲಿ ಅವರ ಆರ್ಥಿಕ ಮತ್ತು ಸಾಮಾಜಿಕ ದೃಷ್ಟಿಕೋನಗಳ ಕುರಿತಾದ ಹೇಳಿಕೆಗಳನ್ನು ನೋಡುವುದಾದರೆ: ಆರ್ಥಿಕ ಬೆಳವಣಿಗೆಗೆ ಮೂಲಭೂತವಾಗಿರುವ ಪರಿಸರ ವ್ಯವಸ್ಥೆಯನ್ನು ಸರಕಾರ ಪೋಷಿಸಬೇಕು; ಇದು ಸರ್ವಾಂಗೀಣ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ; ಅಲ್ಲಿ ಅಭಿವೃದ್ಧಿಯು ಉದ್ಯೋಗವನ್ನು ಪೋಷಿಸುತ್ತದೆ; ಉದ್ಯೋಗವು ಕೌಶಲಗಳನ್ನು ಸಕ್ರಿಯಗೊಳಿಸುತ್ತದೆ; ಕೌಶಲಗಳು ಉತ್ಪಾದನೆಯೊಂದಿಗೆ ಪರ್ಯಾವಸಾನಗೊಳ್ಳುತ್ತವೆ; ಮತ್ತು ಉತ್ಪಾದನೆಯು ಗುಣಮಟ್ಟವನ್ನು ನಿರ್ಧರಿಸುತ್ತದೆ; ಇದು ಜಾಗತಿಕ ಗುಣಮಟ್ಟವನ್ನು ಪೂರೈಸುತ್ತದೆ; ಈ ಜಾಗತಿಕ ಗುಣಮಟ್ಟ ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಎಲ್ಕಕ್ಕಿಂತ ಮುಖ್ಯವಾಗಿ ಈ ಸಮೃದ್ಧಿಯು ಎಲ್ಲರ ಕಲ್ಯಾಣಕ್ಕಾಗಿಯೇ ಇರುವುದು.

‘ಇಂಡಿಯನ್ ಎಕ್ಸ್‍ಪ್ರೆಸ್’ನಲ್ಲಿ ಬರೆದಂತೆ ‘ಮೋದಿಯನ್ನು ಗ್ರಹಿಸುವುದು ಕಷ್ಟ, ಕಾರಣ ಭಾರತೀಯ ಪ್ರಜಾಪ್ರಭುತ್ವದಲ್ಲಿ ಅವರೊಬ್ಬ ಸಾಂದರ್ಭಿಕ ವಿರೋಧಾಭಾಸಗಳ ಉತ್ಪನ್ನದಂತೆ ಗೋಚರಿಸುತ್ತಾರೆ. ಪ್ರತೀ ಭಾಷಣದಲ್ಲೂ ಆತ್ಮರತಿಯ ಭಾವವನ್ನು ಕಾಣಬಹುದು. ಕೆಲವರು ಈ ರೀತಿಯ ನಾಯಕನಿಗಾಗಿಯೇ ಹಂಬಲಿಸುತ್ತಿದ್ದಾರೆ.

ಸರಕಾರ ಮತ್ತು ಅದರ ಕಾರ್ಯ ದಕ್ಷತೆಯ ಕುರಿತು ಮೋದಿ ತಮ್ಮ ದೃಷ್ಟಿಕೋನವನ್ನು ಪ್ರತಿಪಾದಿಸಬೇಕಿದೆ. ಮುಖ್ಯವಾಗಿ ಐದು ಪ್ರಮುಖ ಕ್ಷೇತ್ರಗಳ ಕಡೆಗೆ ಗಮನ ಹರಿಸಬೇಕಿದೆ: ಮೊದಲನೆಯದು ಸಾರ್ವಜನಿಕ ಸರಕುಗಳು; ಅದರಲ್ಲೂ ರಕ್ಷಣೆ, ಪೊಲೀಸ್ ಮತ್ತು ನ್ಯಾಯಾಂಗವ್ಯವಸ್ಥೆ. ಎರಡನೆಯದು ಬಾಹ್ಯವಿಚಾರಗಳು; ಅದರಲ್ಲೂ ಮುಖ್ಯವಾಗಿ ಇತರರಿಗೆ ತೊಂದರೆಯುಂಟು ಮಾಡುವಂತಹ ಮಾಲಿನ್ಯಗಳು. ಇದಕ್ಕಾಗಿ ನಮಗೆ ಒಂದು ನಿರಂತರ ವ್ಯವಸ್ಥೆ ಅವಶ್ಯಕತೆಯಿದೆ. ಮೂರನೆಯದು ಮಾರುಕಟ್ಟೆ ಶಕ್ತಿ; ಅಲ್ಲಿ ಮುಖ್ಯವಾಗಿ ಏಕಸ್ವಾಮ್ಯ ಮಾರುಕಟ್ಟೆಯ ನಿಯಂತ್ರಣವಾಗಬೇಕು. ನಾಲ್ಕನೆಯದು ಮಾಹಿತಿ ನಿರ್ವಹಣೆ; ಯಾರಾದರೊಬ್ಬರು ಔಷಧೋಪಚಾರಗಳು ಬಹಳ ಮುಖ್ಯ ಎಂಬುದನ್ನು ತಿಳಿಸುವ ಸಲುವಾಗಿ, ಕೊನೆಯದಾಗಿ, ಸಮಾಜದ ಕೆಳಸ್ತರವು ಬಡತನ ಮತ್ತು ಇತರೇ ಅಭಾವಗಳಿಂದ ರಕ್ಷಿಸಲ್ಪಟ್ಟಿದೆ ಎಂದು ಖಚಿತಪಡಿಸಿಕೊಳ್ಳುವ ಸಲುವಾಗಿ. ಮತ್ತು ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಿದ ಕಲ್ಯಾಣಕಾರ್ಯಗಳು, ಸಬ್ಸಿಡಿಯಂತಹ ಕಾರ್ಯವಿಧಾನಗಳ ಕುರಿತು ಮಾಹಿತಿ ನೀಡುವ ಅಗತ್ಯವಿದೆ. ಮುಖ್ಯವಾಗಿ ಇದು ಶಿಕ್ಷಣ ಮತ್ತು ಆರೋಗ್ಯವನ್ನು ಒಳಗೊಂಡಿದೆ.

ಈ ಐದು ಕ್ಷೇತ್ರಗಳಲ್ಲಿ ನಮಗೆ ಸರಕಾರದ ಅಗತ್ಯವಿದೆ, ಅಷ್ಟೇ ಅಲ್ಲದೆ ನಮಗೆ ಸಮರ್ಥ, ಭ್ರಷ್ಟಮುಕ್ತ ಸರಕಾರದ ಅಗತ್ಯವಿದೆ. ನಾನು ಎಷ್ಟು ಹಣ ಖರ್ಚುಮಾಡುತ್ತಿದ್ದೇನೆ ಇದರಿಂದ ನಮಗೆ ಏನು ದೊರೆಯುತ್ತಿದೆ? ಎನ್ನುವಂತಹ ಪ್ರಶ್ನೆಗಳನ್ನು ನಾವು ನಿರಂತರವಾಗಿ ಸರ್ಕಾರಕ್ಕೆ ಕೇಳಬೇಕಿದೆ. ಇದಕ್ಕಾಗಿಯಾದರೂ ಸರಕಾರದ ಅಂಗಸಂಸ್ಥೆಗಳನ್ನು ಸುಧಾರಿಸಬೇಕಿದೆ ಮತ್ತು ಅವುಗಳನ್ನು ಸಮರ್ಥರನ್ನಾಗಿಸಬೇಕಿದೆ ಮೋದಿ ಸರಕಾರವನ್ನು ಕುಗ್ಗಿಸುವುದಿಲ್ಲ, ಅದು ಹೆಚ್ಚು ಪರಿಣಾಮಕಾರಿಯಾಗಬೇಕೆಂದು ಬಯಸಿದಂತೆ ಕಾಣುತ್ತಿದೆ. ಅದರ ಬಗೆಗೆ ಅವರ ದೃಷ್ಟಿಕೋನ ತನ್ನದೇ ಆದ ರಾಜಕೀಯ ಲೆಕ್ಕಾಚಾರಗಳಿಂದ ಕೂಡಿದೆ ಮತ್ತು ಅದರಲ್ಲಿ ಆತ ತನ್ನದೇ ಮುಖ್ಯ ಭೂಮಿಕೆ ಇರಬೇಕೆಂದೇ ಬಯಸುತ್ತಾರೆ.

ಸೆಂಟರ್ ಫಾರ್ ಪಾಲಿಸಿ ರೀಸರ್ಚ್‍ನ ಅಧ್ಯಕ್ಷ ಪ್ರತಾಪ್ ಭಾನು ಮೆಹ್ತಾ ಅತ್ಯುತ್ತಮ ರೀತಿಯಲ್ಲಿ ಮೋದಿಯ ವಿರೋಧಾಭಾಸಗಳ ಕುರಿತು ಸಾರಾಂಶೀಕರಿಸಿದ್ದಾರೆ. ಅವರು ‘ಇಂಡಿಯನ್ ಎಕ್ಸ್‍ಪ್ರೆಸ್’ನಲ್ಲಿ ಬರೆದಂತೆ ‘ಮೋದಿಯನ್ನು ಗ್ರಹಿಸುವುದು ಕಷ್ಟ, ಕಾರಣ ಭಾರತೀಯ ಪ್ರಜಾಪ್ರಭುತ್ವದಲ್ಲಿ ಅವರೊಬ್ಬ ಸಾಂದರ್ಭಿಕ ವಿರೋಧಾಭಾಸಗಳ ಉತ್ಪನ್ನದಂತೆ ಗೋಚರಿಸುತ್ತಾರೆ. ಪ್ರತೀ ಭಾಷಣದಲ್ಲೂ ಆತ್ಮರತಿಯ ಭಾವವನ್ನು ಕಾಣಬಹುದು. ಕೆಲವರು ಈ ರೀತಿಯ ನಾಯಕನಿಗಾಗಿಯೇ ಹಂಬಲಿಸುತ್ತಿದ್ದಾರೆ. ಆದರೆ ಆತನ ಸ್ವ-ನ್ಯಾಯಪರತೆಯ ದೃಷ್ಟಿಯು ಪ್ರಜಾಪ್ರಭುತ್ವದಿಂದಲೂ ಅಧಿಕಾರವನ್ನು ಕಿತ್ತುಕೊಳ್ಳುವಂತೆ ಮಾಡಿದೆ. ಪ್ರಜಾಪ್ರಭುತ್ವದಲ್ಲಿ ಯಾರು ತಮ್ಮನ್ನು ತಾವು ಸ್ವತಂತ್ರವಾಗಿ ಪ್ರತಿನಿಧಿಸಿಕೊಳ್ಳುತ್ತಾರೋ ಅವರು ತನ್ನ ಭವಿಷ್ಯಕ್ಕೆ ತಾನೇ ಶಿಲ್ಪಿಯಾಗಿರುತ್ತಾರೆ, ಆದರೆ ಆಳದಲ್ಲಿ ಯಾರು ಪ್ರಭುತ್ವವಾದಿಯಾಗಿರುತ್ತಾರೋ ಅವರು ಮಾತ್ರ.’

ಮೆಹ್ತಾ ಅವರ ತೀರ್ಮಾನವು ಜನರ ದೃಷ್ಟಿಯಲ್ಲಿ ಮೋದಿ ನ್ಯಾಯಸಮ್ಮತವನ್ನು ಹುಡುಕುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಅಲ್ಲದೆ ಸೇವೆಯೇ ಅಂತಿಮ ಗುರಿ ಎಂಬ ‘ಚಿತ್ರಣ’ ಸೃಷ್ಟಿಸುವ ಹೆಬ್ಬಯಕೆ ಹೊಂದಿದಂತಿದೆ. ಆದರೆ ಇದಕ್ಕೆ ಇರುವ ಇನ್ನೊಂದು ಅರ್ಥವೆಂದರೆ, ಅವರು ವಿವಿಧ ವೇಷಭೂಷಣಗಳಲ್ಲಿ, ವಿವಿಧ ಭಾಷೆಗಳಲ್ಲಿ, ವಿವಿಧ ರೀತಿಯ ಮುಂಡಾಸುಗಳನ್ನು ತಲೆಗೆ ಸುತ್ತುವವ, ಅವಶ್ಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವಂತಹ ಮಹಾನ್ ಅವಕಾಶವಾದಿಯಂತೆ ಗೋಚರಿಸುತ್ತಾರೆ. ಜನರು ಅವರನ್ನು ಓದಿದಂತೆ ಅವರ ಬಗೆಗೆ ಹೊಸ ಹೊಸ ಸ್ಕ್ರಿಪ್ಟ್‍ಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮೋದಿಯನ್ನು ನೀವು ಯಾವ ರೀತಿ ನೋಡಲು ಬಯಸುತ್ತೀರೋ, ಆ ರೀತಿ ನಿಮಗೆ ತೋರ್ಪಡಿಸಿಕೊಳ್ಳುತ್ತಾರೆ. ಉಳಿದಂತೆಲ್ಲಾ ಶುದ್ಧ ಪರಿಕಲ್ಪನೆ ಮಾತ್ರ.

Leave a Reply

Your email address will not be published.