ನಿಮ್ಮ ಪತ್ರಿಕೆಗೆ ಎರಡು ವರ್ಷ!

 ಜನೆವರಿ 2020ರ ಸಂಚಿಕೆಯೊಂದಿಗೆ ‘ಸಮಾಜಮುಖಿ’ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಕಾಲಿರಿಸಲಿದೆ. ನಿಮ್ಮ ಪತ್ರಿಕೆಯ ಈ ಹೆಜ್ಜೆಗುರುತನ್ನು ಸಂಭ್ರಮದಿಂದ ಆಚರಿಸಲು 2020 ಜನೆವರಿ 4 ರಂದು ಸಡಗರದ ಸಮಾರಂಭ ಆಯೋಜಿಸಲಾಗಿದೆ. ಬೆಳಿಗ್ಗೆ 10 ಘಂಟೆಗೆ ಬೆಂಗಳೂರಿನ ಶಿವಾನಂದ ವೃತ್ತದ ಬಳಿಯ ಗಾಂಧೀ ಭವನದಲ್ಲಿ (ಕುಮಾರಪಾರ್ಕ್ ಪೂರ್ವ) ಪತ್ರಿಕೆಯ ಬಿಡುಗಡೆಯ ಜೊತೆಗೆ ದಿನಪೂರ್ತಿಯ ಚಟುವಟಿಕೆಗಳಿಗೆ ಆರಂಭ ನೀಡಲಾಗುವುದು. ಸಂಜೆ 5ಕ್ಕೆ ‘ಆಧುನಿಕ ಕರ್ನಾಟಕದ ಪರಿಕಲ್ಪನೆ’ ಕುರಿತ ವಿಚಾರ ಸಂಕಿರಣವೂ ಇದೆ. ನಾಡಿನ ಹೆಸರಾಂತ ಗಣ್ಯರು, ವಿಚಾರವಾದಿಗಳು ಮತ್ತು ಚಿಂತಕರು ಪಾಲ್ಗೊಳ್ಳಲಿದ್ದಾರೆ. ಈ ಎರಡೂ ಸಮಾರಂಭಗಳಲ್ಲಿ ಭಾಗವಹಿಸಲು ಕರ್ನಾಟಕದ ಎಲ್ಲೆಡೆಯ ಸಮಾಜಮುಖೀ ಗೆಳೆಯರಿಗೆ ಆತ್ಮೀಯ ಆಹ್ವಾನ.

ಚಂದಾದಾರರ ತುರ್ತು ಗಮನಕ್ಕೆ

ವರ್ಷಾಂತ್ಯದ ಈ ಹೊತ್ತಿನಲ್ಲಿ ಬಹುಪಾಲು ಚಂದಾದಾರರ ಚಂದಾ ಅವಧಿ ಮುಕ್ತಾಯವಾಗುವುದು ಸಹಜ. ಹಾಗಾಗಿ ಇದು ಚಂದಾದಾರರ ಬೆಂಬಲವನ್ನೇ ನಂಬಿರುವ ಸಮಾಜಮುಖಿಯ ಚಂದಾ ನವೀಕರಿಸುವ ಸಮಯ. ಚಂದಾ ಅವಧಿ ಮುಕ್ತಾಯವಾದ ಚಂದಾದಾರರಿಗೆ ವೈಯಕ್ತಿವಾಗಿ ಮಾಹಿತಿ ನೀಡಲು ಪ್ರಯತ್ನ ಮಾಡುತ್ತಿದ್ದೇವೆ. ಕಾರಣಾಂತರಗಳಿಂದ ಕೆಲವರ ಸಂಪರ್ಕ ಸಾಧ್ಯವಾಗುತ್ತಿಲ್ಲ. ಚಂದಾ ಅವಧಿ ಮುಕ್ತಾಯವಾಗುವ ದಿನಾಂಕ ನಿಮ್ಮ ಅಂಚೆ ವಿಳಾಸದ ಲೇಬಲ್ ಮೇಲ್ಭಾಗದಲ್ಲಿ ನಮೂದಾಗಿರುತ್ತದೆ; ದಯವಿಟ್ಟು ಪರಿಶೀಲಿಸಿ ಚಂದಾ ನವೀಕರಿಸಲು ಸವಿನಯ ಪ್ರಾರ್ಥನೆ. ಅವಧಿ ಮುಗಿಯುವ ಮೊದಲೇ ಚಂದಾ ನವೀಕರಣ ಮಾಡಿದರೆ ಸಮಾಜಮುಖಿಯ ನಿರಂತರ ಓದಿಗೆ, ಪತ್ರಿಕೆಯೊಂದಿಗಿನ ನಂಟಿಗೆ, ಪತ್ರಿಕೆಯ ಬೆಳವಣಿಗೆಗೆ ನೆರವಾಗುತ್ತದೆ.

ಕೂಡಲೇ ಸೂಕ್ತ ಮೊತ್ತ ಸಂದಾಯ ಮಾಡಿ ನವೀಕರಣ ಮಾಡಿಕೊಳ್ಳದ ಚಂದಾದಾರರಿಗೆ ಮುಂದಿನ ಸಂಚಿಕೆಯನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ.

ಚಂದಾ ವಿವರ:
ಒಂದು ವರ್ಷಕ್ಕೆ : ರೂ. 500
ಮೂರು ವರ್ಷಕ್ಕೆ: ರೂ. 1400
ಐದು ವರ್ಷಕ್ಕೆ : ರೂ. 2000

ಚಂದಾ ನವೀಕರಿಸುವುದು ಹೇಗೆ?

ಕೆಳಗಿನ ಬ್ಯಾಂಕ್ ಖಾತೆಗೆ ಚಂದಾ ಹಣ ಸಂದಾಯ ಮಾಡಿ, ಮೊಬೈಲ್ ಸಂಖ್ಯೆ 9606934018 ಗೆ ಮಾಹಿತಿ ನೀಡಿ.

Samajamukhi Prakashana Private Ltd,
Bank A/c No: 37262378162, IFSC: SBIN0040252,
SBI, Bengaluru.

ವಿಶೇಷ ಸೂಚನೆ:
ಸಮಾಜಮುಖಿ ಪತ್ರಿಕೆ ಪ್ರತೀ ತಿಂಗಳು 2ನೇ ತಾರೀಖು ಅಂಚೆ ಮೂಲಕ ಎಲ್ಲಾ ಚಂದಾದಾರರಿಗೆ ರವಾನೆಯಾಗುತ್ತದೆ. 12ನೇ ತಾರೀಖಿನ ಒಳಗೆ ತಮಗೆ ತಲುಪದೇ ಇದ್ದರೆ ದಯವಿಟ್ಟು ನಿಮಗೆ ಬಟವಾಡೆ ಮಾಡುವ ಅಂಚೆಯಣ್ಣನ್ನು ಒಮ್ಮೆ ವಿಚಾರಿಸಿ. ನಂತರ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ:
ಮೊಬೈಲ್ ಸಂಖ್ಯೆ: 9606934018, 9449525352

ಎರಡು ಕನಿಷ್ಟ; ಹೆಚ್ಚಿಗೆ ನಿಮ್ಮಿಷ್ಟ

ನಿಮ್ಮ ಕೈಯಲ್ಲಿರುವ ಈ ಸಂಚಿಕೆಯೊಂದಿಗೆ ಸಮಾಜಮುಖಿ ಪತ್ರಿಕೆ ನಿರಂತರ ಪ್ರಕಟಣೆಯ ಎರಡು ವರ್ಷಗಳನ್ನು ಮುಗಿಸಿ ಮೂರನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ. ಇದು ಸಾಧ್ಯವಾಗಿದ್ದು ನಿಮ್ಮೆಲ್ಲರ ಸಹಕಾರದಿಂದ. ಈ ಹೊತ್ತಿನಲ್ಲಿ, ಕನ್ನಡ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕುಸಿದುಬಿದ್ದಿದೆ ಎಂಬ ಸಾರ್ವತ್ರಿಕ ಅನ್ನಿಸಿಕೆಯನ್ನು ಸುಳ್ಳಾಗಿಸುವ ಶಪಥ ನಮ್ಮದು. ಆ ಮೂಲಕ ಸಮಾಜಮುಖೀ ಚಿಂತನೆಯ ಕುಟುಂಬವನ್ನು ವಿಸ್ತರಿಸುವ ಸ್ವಾರ್ಥವೂ ನಮಗಿದೆ. ಈಗಿರುವ ಸಮಾಜಮುಖಿ ಓದುಗರ ಸಂಖ್ಯೆಯನ್ನು ಮೂರು ಪಟ್ಟು ಹಿಗ್ಗಿಸುವುದು ನಮ್ಮ ಗುರಿ. ಈಗಿರುವ ಒಬ್ಬ ಓದುಗರು ಇನ್ನಿಬ್ಬರು ಓದುಗರನ್ನು ಸಮಾಜಮುಖಿ ಕುಟುಂಬಕ್ಕೆ ಸೇರಿಸಿದರೆ ಸಾಕು; ಗುರಿ ತಲುಪುವುದು ಸಲೀಸು.

ಈ ನಿಟ್ಟಿನಲ್ಲಿ ನೀವೇನು ಮಾಡಬಹುದು?

  • ನೀವು ಇಬ್ಬರು ವಾರ್ಷಿಕ ಚಂದಾದಾರರನ್ನು ಮಾಡಿಸಿ.
  • ನಿಮ್ಮ ಆಯ್ಕೆಯ ಇಬ್ಬರಿಗೆ ಚಂದಾ ಉಡುಗೊರೆ ನೀಡಿ.
  • ಇಬ್ಬರು ವಿದ್ಯಾರ್ಥಿಗಳಿಗೆ ಅಥವಾ ಶಾಲೆ/ಕಾಲೇಜು/ಹಾಸ್ಟೇಲಿಗೆ ಉಡುಗೊರೆ ನೀಡಿ.

ಇದು ನಾವು ಲಾಭ ಮಾಡಿಕೊಳ್ಳುವ ಹುನ್ನಾರವಲ್ಲ; ನಷ್ಟ ಕಡಿಮೆ ಮಾಡಿಕೊಳ್ಳುವ ಹವಣಿಕೆ ಅಷ್ಟೇ. ನಿಮಗೆ ಗೊತ್ತಿರುವಂತೆ ಪತ್ರಿಕೆಯ ಉತ್ಪಾದನಾ ವೆಚ್ಚ ಮಾರಾಟ ಬೆಲೆಗಿಂತ ಹೆಚ್ಚಿರುತ್ತದೆ. ಹಾಗಾಗಿ ಪತ್ರಿಕೆಯ ಪ್ರಸಾರ ಹೆಚ್ಚಿಸುವುದರಿಂದ ನಷ್ಟದ ಪ್ರಮಾಣವೂ ಅಧಿಕಗೊಳ್ಳುತ್ತದೆ; ಪತ್ರಿಕೆ ಲಾಭ ಗಳಿಸಲು ಜಾಹೀರಾತುಗಳನ್ನು ಅವಲಂಬಿಸುವುದು ಅನಿವಾರ್ಯ. ಆದಾಗ್ಯೂ ಚಿಂತನಶೀಲ ವಲಯ ಹಿಗ್ಗಿಸುವ ಉಮೇದಿನಿಂದ ನಿಮ್ಮಲ್ಲಿ ಈ ಮನವಿ.

ನೀವು 1000 ರೂಪಾಯಿ ವ್ಯಯಿಸುವ ಅಥವಾ ಇಬ್ಬರು ಓದುಗರನ್ನು ಪರಿಚಯಿಸುವ ಮೂಲಕ ನೀಡುವ ಸಹೃದಯದ ನೆರವು ಪತ್ರಿಕೆಯ ಪ್ರಸಾರದಲ್ಲಿ ಬಹುದೊಡ್ಡ ಬದಲಾವಣೆ ಮಾಡಲು ಸಾಧ್ಯ.

ಕಚೇರಿಯ ಹೊಸ ವಿಳಾಸ :

ಸಮಾಜಮುಖಿ ಮಾಸಪತ್ರಿಕೆ
ನಂ.8, ಡಾ.ಎಚ್.ಎಲ್.ನಾಗೇಗೌಡ ರಸ್ತೆ (ಸರ್ಪೆಂಟೈನ್ ರಸ್ತೆ),
ಕುಮಾರ ಪಾರ್ಕ್ ಪಶ್ಚಿಮ, ಶೇಷಾದ್ರಿಪುರಂ, ಬೆಂಗಳೂರು-560020.
ಇಮೇಲ್: samajamukhi2017@gmail.com,, ದೂ: 9606934018

Leave a Reply

Your email address will not be published.