ನಿರಾಳವಾಗಿ ಉಸಿರಾಡುವ ಸಮಾಜದ ಕನಸನ್ನು ಕಾಣುತ್ತಾ…

-ಡಾ.ಸಂತೋಷ್ ನಾಯಕ್ ಆರ್.

2020, ಕೊರೊನಾ ವೈರಸ್‌ನಿಂದಾಗಿ ಜಗತ್ತಿನ ಬಹುತೇಕ ದೇಶಗಳ ಜನರು ಮುಖ ಮುಚ್ಚಿಕೊಂಡು, ಉಸಿರುಗಟ್ಟಿಸಿಕೊಂಡು ಓಡಾಡಿದ, ಒಬ್ಬರನ್ನೊಬ್ಬರು ಭೇಟಿ ಮಾಡಲು, ಮಾತಾಡಲು, ಹುಟ್ಟುಸಾವುಗಳಲ್ಲಿ, ಸುಖದುಃಖಗಳಲ್ಲಿ ಜೊತೆಯಾಗಲು ಆಗದಂತೆ ತಲ್ಲಣಗೊಂಡ ವರ್ಷ. ಇದೇ ಸಮಯದಲ್ಲಿ ಮತ್ತೊಂದು ವೈರಸ್ ಸಹ ಜಗತ್ತನ್ನು ತಲ್ಲಣಗೊಳಿಸಿತ್ತು. ಈ ವೈರಸ್ ಸಹ ಸಾವಿರಾರು ವರ್ಷಗಳಿಂದ ಎಲ್ಲೆಡೆ ಇದ್ದರೂ ಈ ವರ್ಷ ಜಗತ್ತಿನಾದ್ಯಂತ ಸಂಚಲನ ಮೂಡಿಸಿದ್ದು ಜಾರ್ಜ್ ಫ್ಲಾಯ್ಡ್ನ ಸಾವಿನೊಂದಿಗೆ. ಅವನನ್ನು ಉಸಿರುಗಟ್ಟಿಸಿ ಕೊಂದ ವೈರಸ್‌ನ ಹೆಸರು ಜನಾಂಗೀಯ ದ್ವೇಷÀ.

ಮೊದಲಿಗೆ, ಕೊರೊನಾ ಬಂದಿದ್ದರಿAದ ಕೇವಲ ಭಾರತದಲ್ಲಷ್ಟೇ ಅಲ್ಲ, ಜಗತ್ತಿನೆಲ್ಲಡೆ ಇರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಸರ್ಕಾರಗಳ ಮಿತಿ ಮತ್ತು ನಿಷ್ಕಿçಯತೆ, ವೈದ್ಯಕೀಯ ಸೌಲಭ್ಯಗಳ ಕೊರತೆ, ಆಹಾರ, ಔಷಧಿ ಮೊದಲಾದ ಅತ್ಯಗತ್ಯ ವಸ್ತುಗಳ ದಾಸ್ತಾನು ಮತ್ತು ಪೂರೈಕೆಯಲ್ಲಿನ ಅವ್ಯವಸ್ಥೆ ಮೊದಲಾದವುಗಳ ವಾಸ್ತವಿಕ ಚಿತ್ರಣ ಬಯಲಾದಂತೆ, ನಮ್ಮ ಸಮಾಜದಲ್ಲಿನ ಹುಳುಕುಗಳೂ ಸಹ ಬಯಲಾಯಿತು.

ಉಳ್ಳವರು ಮತ್ತು ಇಲ್ಲದವರ ನಡುವಿನ ತಾರತಮ್ಯ, ಸಾಂಕ್ರಾಮಿಕಗಳ ನಿರ್ವಹಣೆಯಲ್ಲಿನ ಸಮಸ್ಯೆ, ಉದ್ದಿಮೆಗಳ, ವ್ಯವಹಾರಗಳ ಆರ್ಥಿಕ ನಷ್ಟ, ಕೋಟ್ಯಂತರ ಜನರ ಉದ್ಯೋಗಗಳಲ್ಲಿನ ಕಡಿತ, ಕಾರ್ಮಿಕರ ವ¯ಸೆ, ಕೂಲಿಗಾಗಿ ಬಂದವರು ಅನಾಥರಾಗಿ ಹೋಗಿದ್ದು, ಸೋಂಕಿತರು ಮತ್ತು ಸೋಂಕು ಹರಡಿಸುವವರು ಎಂದು ಉಂಟಾದÀ ಸಾಮಾಜಿಕ ಕಳಂಕ, ಶವ ವಿಲೇವಾರಿಯ ಭ್ರಷ್ಟಾಚಾರ, ಸಾಮಾನ್ಯ ಕಾಯಿಲೆಗಳಿಗೂ ಚಿಕಿತ್ಸೆ ಸಿಗದ ಪರಿಸ್ಥಿತಿಗಳು, ಇವುಗಳೆಲ್ಲವುಗಳನ್ನು ನೋಡುವುದರ ಜೊತೆಗೆ ವರ್ಷದ ಮಧ್ಯದಲ್ಲಿ ಅಮೆರಿಕಾದಲ್ಲಿ ಸುರುವಾದ ‘ಬ್ಲಾಕ್ ಲೈವ್ಸ್ ಮ್ಯಾರ‍್ಸ್’ ಚಳವಳಿ ಜಗತ್ತು ಎದುರಿಸಬೇಕಾದ ಮತ್ತೊಂದು ಸಾಂಕ್ರಾಮಿಕದೆಡೆಗೆ ಗಮನವನ್ನು ಸೆಳೆಯಿತು.

ಅಮೆರಿಕಾದಲ್ಲಿ ಮತ್ತು ಯೂರೋಪಿನ ಇತರೆ ದೇಶಗಳಲ್ಲಿ ಕರಿಯ ಜನಾಂಗದ ಫ್ಲಾಯ್ಡ್ನ ಹತ್ಯೆಯಂತಹವುಗಳು ಜನಾಂಗೀಯ ದ್ವೇಷವೆನಿಸಿದರೆ, ಭಾರತದಲ್ಲಿ ಅದು ಧರ್ಮ, ಜಾತಿ, ಬುಡಕಟ್ಟು ಅಥವಾ ಸಮುದಾಯ ದ್ವೇಷಗಳ ಸ್ವರೂಪದಲ್ಲಿರುತ್ತದೆ. ಅಂದರೆ ಸಾಮಾಜಿಕವಾಗಿ ತಾನು ಶ್ರೇಷ್ಠವೆಂದು ಭಾವಿಸಿದ, ಸಾಮಾಜಿಕ ಏಣಿಶ್ರೇಣಿಯಲ್ಲಿ ಮೇಲಿರುವ ಬಲಿಷ್ಠ ಜನಸಮುದಾಯವು ಇತರೆ ಸÀಮುದಾಯಗಳÀ ಕುರಿತು ದೀರ್ಘಕಾಲದಿಂದ ಪೋಷಿಸಿಕೊಂಡು ಬಂದಿರುವ ಪೂರ್ವಗ್ರಹದಿಂದಾಗಿ, ಅಕಾರಣವೋ, ಸಕಾರಣವೋ, ಕ್ಷÄಲ್ಲಕ ಕಾರಣವೋ ಸಿಕ್ಕರೆ ಕೊಲ್ಲುವಷ್ಟು ದ್ವೇಷವನ್ನು, ಹಿಂಸೆಯನ್ನು ಮಾನಸಿಕವಾಗಿ ಹೊತ್ತುಕೊಂಡು ತಿರುಗುತ್ತಿರುವ, ಹರಡುತ್ತಿರುವ ಬಗೆಯು ಯಾವುದೇ ಸಾಂಕ್ರಾಮಿಕಕ್ಕೆ ಕಡಿಮೆಯಿಲ್ಲ.

ಈ ಬಗೆಯ ಹಿಂಸಾಚಾರಕ್ಕೆ ತತ್ಕಾಲಕ್ಕೆ, ತೋರಿಕೆಗೆ ಕೆಲವು ಕಾರಣಗಳು ಕಂಡು ಬಂದರೂ, ಅವುಗಳ ಹಿನ್ನೆಲೆಯಲ್ಲಿ ಹಿಂಸೆಗೊಳಗಾದವರ ಜನಾಂಗ, ಧರ್ಮ, ಆಹಾರ, ಜಾತಿ, ದೃಷ್ಟಿಕೋನ, ಲಿಂಗ, ರಾಜಕೀಯ ನಿಲುವು ಮೊದಲಾದವುಗಳ ಮೇಲಿನ ಅಸಹನೆಯೇ ಪ್ರಮುಖ ಕಾರಣವಾಗಿರುತ್ತದೆ. ‘ನಾವು’ ಮತ್ತು ‘ಇತರರು’ ಎಂಬ ಭಾವ ಮೊದಲಿಗಿಂತಲೂ ವ್ಯಾಪಕವಾಗಿ ಬಲವಾಗುತ್ತಿದೆ. ತಂತ್ರಜ್ಞಾನದಲ್ಲಿ ಜಗತ್ತು ಮುಂದುವರೆದAತೆಯೇ, ದ್ವೇಷ ಭಾಷಣಗಳು, ಪ್ರಚೋದಿತ ವಾದಗಳು, ಸುಳ್ಳು ಸುದ್ದಿಗಳು, ತಿರುಚಿದ ಸುದ್ದಿಗಳು ಟಿವಿ ಚಾನಲ್‌ಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ಹರಿಯಲು ತೊಡಗಿದ್ದು, ಇವುಗಳನ್ನು ಸೃಷ್ಟಿಸಲು, ಹರಡಿಸಲು ಕಾರ್ಖಾನೆಗಳೇ ಹುಟ್ಟಿಕೊಂಡಿವೆ. ಇವು ನೇರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದಿಲ್ಲವಾದರೂ, ನೋಡುಗರ ಮನಸಿನ ಮೇಲೆ ಪರಿಣಾಮ ಬೀರುತ್ತದೆ. ಮತ್ತು ನೋಡುಗರಿಗೆ ಕೂಡ ಬಹು ಸಂಖ್ಯೆಯಲ್ಲಿ ಜನ ಒಪ್ಪಿರುವುದರಿಂದ ತಾವೂ ಅದೇ ಅಭಿಪ್ರಾಯವನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಹೀಗೆ ಅನೇಕ ಗುಂಪುಗಳ ಮಧ್ಯೆ ನಿರಂತರವಾಗಿ ಭಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ.

ವೈಜ್ಞಾನಿಕವಾಗಿ ದ್ವೇಷವನ್ನು ಏಳು ಬಗೆಗಳಲ್ಲಿ ವಿಂಗಡಿಸಲಾಗಿದೆ. ಅವೆಂದರೆ ಒಪ್ಪಿತ ದ್ವೇಷ, ಉರಿಯುವ, ಸುಡುವ, ತಣ್ಣಗಿನ, ತಳಮಳಿಸುತ್ತಿರುವ, ಉಗ್ರ ದ್ವೇಷ ಮತ್ತು ಇವೆಲ್ಲವನ್ನೂ ಒಳಗೊಳ್ಳುವ ದ್ವೇಷಗಳು. ನಿವೃತ್ತ ಐಪಿಎಸ್ ಅಧಿಕಾರಿ ಎನ್.ಸಿ.ಆಸ್ತಾನ ಅವರ ಅಭಿಪ್ರಾಯದಂತೆ ಭಾರತದಲ್ಲಿ ಈಗ ಸುಡುವ ದ್ವೇಷದ ಕಿಚ್ಚು ಸಕ್ರಿಯವಾಗಿವೆ. ಅದರಂತೆ ತಮ್ಮ ಗುಂಪಿಗೆ ಹೊರತಾದ ಇತರÀರು ಬದುಕಲು ಯೋಗ್ಯರಾದ ಮನುಷ್ಯರೇ ಅಲ್ಲ, ಅಥವಾ ತಮಗಿಂತ ಕೀಳು ಮತ್ತು ಇವರಿಂದ ತಮಗೆ, ತಮ್ಮ ಗುಂಪಿಗೆ ಅಪಾಯ ಕಾದಿದೆ ಎಂದು ಭಾವಿಸಲಾಗುತ್ತದೆ. ಮತ್ತು ಹೀಗೆ ಭಾವಿಸಲಾದ ಅಪಾಯವನ್ನು ಕಡಿಮೆಮಾಡಿಕೊಳ್ಳಲು ತುರ್ತಾಗಿ ಏನಾದರೂ ಮಾಡಬೇಕೆಂದು ತಿಳಿಯಲಾಗುತ್ತದೆ. ಹಾಗಾಗಿ ದ್ವೇಷದ ಹಿಂಸೆಗೆ, ಹಲ್ಲೆಗೆ ಒಳಗಾದವರು ಏನು ಮಾಡಿದ್ದರು ಎಂಬ ಕಾರಣ ಮುಖ್ಯವಾಗದೆ, ಅವರು ಯಾವ ಗುಂಪಿನವರು ಎಂಬ ಕಾರಣದಿಂದಾಗಿ ದ್ವೇಷಕ್ಕೆ ಒಳಗಾಗಿರುತ್ತಾರೆ.

ಮನಶಾಸ್ತçಜ್ಞರು ಗುರುತಿಸುವಂತೆ ಈ ಬಗೆಯ ಹಿಂಸೆಗೆ ತೊಡಗಿಸಿಕೊಳ್ಳುವ ಬಹುತೇಕರು ಕೀಳರಿಮೆಯುಳ್ಳವರೂ, ಜೀವನದಲ್ಲಿ ಅನೇಕ ವೈಫಲ್ಯಗಳನ್ನು ಕಂಡು ಹತಾಶರೂ ಆಗಿರುತ್ತಾರೆ. ಮತ್ತು ತಮ್ಮ ಇಂದಿನ ಪರಿಸ್ಥಿತಿಗಳಿಗೆ ಯಾರನ್ನಾದರೂ, ಯಾವುದನ್ನಾದರೂ ದೂಷಿಸಲೇಬೇಕಾಗಿರುತ್ತದೆ. ಈ ಬಗೆಯಲ್ಲಿ ದೂಷಣೆಗೆ ಒಳಗಾದ ವ್ಯಕ್ತಿಗಳೇ, ಸಮುದಾಯಗಳೇ ಅಥವಾ ಕಾರಣಗಳೇ ಮುಂದೆ ದ್ವೇಷದ ವಸ್ತುಗಳಾಗಿ ಬದಲಾಗುತ್ತವೆ. ತಮ್ಮ ದ್ವೇಷವನ್ನು ಸಾಧಿಸಲು ನೆರವಾಗುವ ಸಂಘಟನೆಗಳು, ಗುಂಪುಗಳು ಅಥವಾ ವ್ಯಕ್ತಿಗಳ ಜೊತೆಗೂಡಿ ತಮ್ಮ ವೈಫಲ್ಯಕ್ಕೆ ಕಾರಣವಾದವರ ಮೇಲೆ ಸೇಡು ತೀರಿಸಿಕೊಂಡು, ಏನನ್ನೋ ಸಾಧಿಸಿದ ತೃಪ್ತಿ ಹೊಂದಲು ಯತ್ನಿಸುತ್ತಾರೆ.

ಇವರ ಮನಸ್ಸಿನಾಳದಲ್ಲಿ ಭಯ ಮೂಡಿಸಿರುವವರ ವಿರುದ್ಧ ನೇರವಾಗಿ ಕಿಡಿ ಕಾರುವವನು ಈ ಗುಂಪಿನ ನಾಯಕನಾಗಿಬಿಡುತ್ತಾನೆ. ಒಂಟಿಯಾಗಿರುವಾಗಿರುವಾಗ ದುರ್ಬಲರಂತೆ ಕಾಣುವ ಈ ಮನೋಭಾವದವರು ಗುಂಪಿನೊAದಿಗೆ ಸೇರಿದಾಗ ಆಕ್ರಮಣಕಾರಿಯಾಗಿಬಿಡುತ್ತಾರೆ. ಹಾಗಾಗಿ ದ್ವೇಷವು ಒಂದು ಗುಂಪಿನ ಜನ ಮತ್ತೊಂದರ ವಿರುದ್ಧ ಒಟ್ಟುಗೂಡಲು ಅಂಟಿನAತೆ ಕೆಲಸ ಮಾಡುವುದೂ ಅಲ್ಲದೆ, ಮುಂದೆ ಗುಣಪಡಿಸಲಾಗದ ಶಾಶ್ವತವಾದ ಮಾನಸಿಕ ಗಾಯವನ್ನೂ ಉಂಟು ಮಾಡುತ್ತದೆ.

1947ರಲ್ಲಿ ಭಾರತÀ ವಿಭಜನೆಯಾದಾಗ ನಡೆದ ಕೋಮು ಗಲಭೆಗಳಲ್ಲಿ ಜೀವ ತೆತ್ತವರು ಸುಮಾರು ಎರಡು ಮಿಲಿಯನ್ ಜನÀ. ಅಂದಿನಿAದ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಕೋಮು ಸಂಘರ್ಷಗಳು ಇಂದಿಗೂ ಅಲ್ಲಲ್ಲಿ ನಡೆಯುತ್ತಲೇ ಇದೆ. ಕೊರೊನಾ ಹರಡಲು ಕಾರಣವಾದವರು ಎಂದು ಕೆಲ ಸಮುದಾಯಗಳನ್ನೇ ನೇರವಾಗಿ ಮಾಧ್ಯಮಗಳು ಆರೋಪಿಸಿದ್ದನ್ನು, ಕೆಲವೇ ತಿಂಗಳ ಹಿಂದೆ ನಡೆದ ಹತ್ರಾಸ್ ಪ್ರಕರಣದಂತ ಜಾತಿ ಕೇಂದ್ರಿತ ದ್ವೇಷದ ಘಟನೆಗಳು, ಕರ್ನಾಟಕದಲ್ಲೂ ನಡೆದ ಮರ್ಯಾದೆಗೇಡು ಹತ್ಯೆಗಳು ದೇಶದಲ್ಲಿ ಇನ್ನೂ ದ್ವೇಷದ ಜ್ವಾಲೆಗಳು ಆರಿಲ್ಲದಿರುವುದನ್ನು ತೋರಿಸುತ್ತದೆ.

ಹತ್ರಾಸ್ ಘಟನೆಯಲ್ಲಿ ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಯ ಮನೆಯವರಿಗೆ ಶವವನ್ನೂ ನೋಡಲು ಬಿಡದೆ ಪೊಲೀಸರು ಶವಸಂಸ್ಕಾರ ಮಾಡಿದ್ದು, ಜಾರ್ಜ ಫ್ಲಾಯ್ಡ್ನ ಗೋಣಿನ ಮೇಲೆ ಪೊಲೀಸ್ ಅಧಿಕಾರಿ ಮಂಡಿಯೂರಿ ಉಸಿರುಗಟ್ಟಿಸಿದ್ದು, ಎಲ್ಲೋ ಜಾತಿ ಮತ್ತು ಜನಾಂಗೀಯ ತಾರತಮ್ಯಗಳು ಕಾಲದಿಂದಲೂ, ಈಗಲೂ ಸಮಾಜದ ಮೇಲ್ವರ್ಗದವರಿಗೆÀ, ಆಳುವವರಿಗೆ, ಅಧಿಕಾರಕ್ಕೆ ಸಹಜವಾಗಿಯೇ ಕಾಣುತ್ತಿರುವುದೇನೋ ಅನಿಸುತ್ತದೆ. ಈ ಘಟನೆ ನಡೆದ ಉತ್ತರ ಪ್ರದೇಶದÀಲ್ಲಿಯೇ ನೋಡುವುದಾದರೆ, ದಲಿತ ಮಹಿಳೆಯರ ಮೇಲೆ ನಡೆವÀ ಲೈಂಗಿಕ ಅಪರಾಧಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. 2014ರಲ್ಲಿ 1888 ಘಟನೆಗಳು ವರದಿಯಾಗಿದ್ದರೆ, 2016ರಲ್ಲಿ 2026 ಘಟನೆಗಳು ವರದಿಯಾಗಿವೆ. ಎನ್‌ಸಿಆರ್‌ಬಿ ವಾರ್ಷಿಕವಾಗಿ ಪ್ರಕಟಿಸುವ ವರದಿಯಲ್ಲಿ ಅನುಸೂಚಿತ ಜಾತಿ, ಬುಡಕಟ್ಟು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ನಡೆಯುವ ಅಪರಾಧಗಳ ಸರ್ಕಾರಿ ಅಂಕಿಅAಶಗಳು ಸಹ ಇದ್ದು, ಆಸಕ್ತರು ಗಮನಿಸಬಹುದು.

ಈ ಬಗೆಯ ದ್ವೇಷದ ಹಿಂಸೆ ಪ್ರಕರಣಗಳಲ್ಲಿ ಬಲಿಪಶುಗಳಾದವರಿಗೆ ಆಗುವ ನೋವು ಮತ್ತು ಮಾನಸಿಕ ಆಘಾತಗಳು, ನೆರೆ, ಬರ, ಭೂಕಂಪ, ಸುನಾಮಿ ಕೊನೆಗೆ ಕೊರೊನಾದಂತಹ ಸಾಂಕ್ರಾಮಿಕ ರೋಗಗಳಿಂದುAಟಾದ ಸಾವುನೋವುಗಳಿಗಿಂತ ಭೀಕರ ಪರಿಣಾಮ ಬೀರುತ್ತದೆ. ಸಮುದಾಯದ ಭಾಗವಾಗಿದ್ದ ಜನರೇ ತಮ್ಮ ತಾಯ್ನೆಲದ ಮೇಲೆ, ಬದುಕಿನ ಬಗೆಗೆೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಯಾವುದೇ ಸಮಯದಲ್ಲಿ, ದೇಶದ ಯಾವುದೇ ಭಾಗದಲ್ಲಿ ಈ ಬಗೆಯ ಘಟನೆಗಳು ನಡೆಯಬಹುದಾದ ಆತಂಕದಲ್ಲಿ, ತಮ್ಮ ಸುತ್ತಲಿನ ಸಮಾಜದ ಮೇಲೆ ಅಪನಂಬಿಕೆಯಲ್ಲಿ ಜೀವನವನ್ನು ಕಳೆಯಬೇಕಾಗುತ್ತದೆ.

ಈ ಪರಸ್ಪರ ಅಪನಂಬಿಕೆಗಳು ವಿಷಚಕ್ರದಂತೆ ತಿರುಗುತ್ತಲೇ ಇದ್ದು ದೇಶದ ಒಟ್ಟಾರೆ ಸಾಮಾಜಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಲೇಖಕ ಮತ್ತು ಹೋರಾಟಗಾರ ಹರ್ಷಮಂದರ್ ತಮ್ಮದೊಂದು ಸಂದರ್ಶನದಲ್ಲಿ ಹೇಳಿದ್ದನ್ನ ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಆದರೆ ದೇಶದ ಜನಸಮುದಾಯಗಳು ಯಾವುದಾದರೊಂದು ಭಯದಲ್ಲಿ ಬದುಕುವುದು ಅನೇಕ ಬಂಡವಾಳಶಾಹಿಗಳಿಗೂ, ಧಾರ್ಮಿಕ ಮೂಲಭೂತವಾದಿಗಳಿಗೂ, ರಾಜಕೀಯ ನಾಯಕರುಗಳಿಗೂ ಲಾಭದಾಯಕವೇ ಆಗಿರುತ್ತದೆ. ಆದುದರಿಂದ ಲಾಭ ಇರುವ ತನಕ ಈ ಉರಿಯನ್ನು ಕಾಯ್ದುಕೊಳ್ಳಲು ಸ್ಥಾಪಿತ ಹಿತಾಸಕ್ತಿಯ ವರ್ಗಗಳು ಶ್ರಮಿಸುತ್ತಲೇ ಇರುತ್ತವೆ.

ಆದರೆ, ಕೊರೊನಾದ ಭಯವಿದ್ದರೂ, ಕರಿಯ ಬಿಳಿಯ ಎಂಬ ಭೇದವಿಲ್ಲದೆ ಅಮೆರಿಕಾದ ಜನ ಜಾರ್ಜ್ ಫ್ಲಾಯ್ಡ್ ನ ಸಾವಿಗೆ ಆಕ್ರೋಶ ವ್ಯಕ್ತಪಡಿಸಲು ಸಹಸ್ರಾರು ಸಂಖ್ಯೆಯಲ್ಲಿ ಬೀದಿಗಿಳಿದರು. ಪ್ರತಿಭಟನೆಯ ಕಾವು ಪೊಲೀಸರು ಮತ್ತು ಆಡಳಿತ ವರ್ಗ ಮಂಡಿಯೂರಿ ಜನರ ಕ್ಷಮೆ ಕೇಳುವಂತೆ ಮಾಡಿತು. ಜನ ವ್ಯವಸ್ಥೆಯನ್ನು ಪ್ರಶ್ನಿಸಿದರು, ಮತ್ತು ಈ ಚಳವಳಿ ನಿಧಾನವಾಗಿ ಜಗತ್ತನ್ನೇ ವ್ಯಾಪಿಸತೊಡಗಿತು. ಭಾರತದಲ್ಲೂ ದ್ವೇಷದ ಹಿಂಸೆಯ ವಿರುದ್ಧ ಅನೇಕ ಪ್ರತಿಭಟನೆಗಳು ನಡೆದವು. ನೂರಾರು ವರ್ಷಗಳಿಂದ ಬಂದ ಜೀವವಿರೋಧಿಯಾದÀ ಯಾವುದೇ ನಂಬಿಕೆ ಹಾಗು ಸಿದ್ಧಾಂತಗಳನ್ನು, ಆದರ್ಶಗಳನ್ನು ಜನ ನಿಧಾನವಾಗಿ ತಿರಸ್ಕರಿಸಲು ತೊಡಗಿದ್ದು, ಮನುಷ್ಯರನ್ನು ಮನುಷ್ಯರಂತೆ ಕಾಣುವ ಅಗತ್ಯ ಈಗ ಮೊದಲಿಗಿಂತಲೂ ಹೆಚ್ಚಿದೆ.

ಎಲ್ಲೋ ಏನೋ ನಡೆದರೆ ನಮಗೂ ಅದಕ್ಕೂ ಸಂಬAಧವಿಲ್ಲವೆAದು ಕೂರಲು ಸಾಧ್ಯವಿಲ್ಲ. ಎಲ್ಲೋ ಕರಗುವ ಹಿಮ, ಎಲ್ಲೋ ಹತ್ತುವ ಕಾಡ್ಗಿಚ್ಚು, ಎಲ್ಲೋ ಏರುವ ಸಮುದ್ರ ಮಟ್ಟ, ಜಗತ್ತಿನ ಯಾವುದೋ ಭಾಗದಲ್ಲಿ ಕಾಣಿಸಿಕೊಂಡ ವೈರಸ್ ಇನ್ನೆಲ್ಲೋ ಪರಿಣಾಮ ಬೀರುತ್ತದೆ. ನಿಜಾರ್ಥದಲ್ಲಿ ಜಗತ್ತು ಒಂದು ಪುಟ್ಟ ಹಳ್ಳಿಯಾಗಿದ್ದು, ಮಾನವ ಕುಲ ಮುಂದುವರೆಯಬೇಕಾದರೆ ಸೌಹಾರ್ದ ತರುವ, ಸಮಾನತೆ ತರುವ ಕೆಲಸಗಳು ತೀವ್ರವಾಗಬೇಕಿದೆ. 2021ರಲ್ಲಿ ಕೊರೊನಾ ಲಸಿಕೆ ಬಂದ ನಂತರವೂ ಹೊಸ ಬಗೆಯ ಸಾಮಾನ್ಯ ಜೀವನಕ್ಕೆ (ನ್ಯೂ ನಾರ್ಮಲ್) ಜನಜೀವನ ಒಗ್ಗಬೇಕಿದೆ. ಸಹಜ ಸ್ಥಿತಿಗೆ ಜೀವನ ಮರಳಿ, ಮಾಸ್ಕ್ರಹಿತರಾಗಿ ನಿರಾಳವಾಗಿ ಉಸಿರಾಡಲು ಜಗತ್ತಿನ ಎಲ್ಲರೂ ಬಯಸುತ್ತಿದ್ದಾರೆ.

ಲಕ್ಷಾಂತರ ಮಕ್ಕಳು ಇಡೀ ವರ್ಷವನ್ನು ಮನೆಯೊಳಗೇ ಕಳೆದಿದ್ದಾರೆ. ಮುಂದೆ ಬೆಳೆಯುವ ಮಕ್ಕಳು ಕೊರೊನಾದಂತಹ ವೈರಸ್‌ಗಳಷ್ಟೇ ಅಲ್ಲದೆ ದ್ವೇಷದ ವೈರಸ್ಸಿನ ಕೇಡುಗಳಿಗೂ ಒಳಗಾಗದಂತೆ ನೋಡಿಕೊಳ್ಳಬೇಕಾದ ಹೊಣೆ ಎಲ್ಲರ ಮೇಲಿದೆ. ತನ್ನ ಕೊರಳಿನ ಮೇಲೆ ಮಂಡಿ ಊರಿದ್ದ ಪೊಲೀಸ್ ಅಧಿಕಾರಿಗೆ ‘ಐ ಕಾಂಟ್ ಬ್ರೀತ್’ ಎಂದು ಗೋಗರೆದ ಫ್ಲಾಯ್ಡ್, ಉಸಿರುಗಟ್ಟಿಯೇ ಸತ್ತದ್ದು, ಜಗತ್ತಿನಲ್ಲಿ ಶ್ರೇಷ್ಠತೆಯ ಅಹಂಕಾರವು ದುರ್ಬಲರ ಮೇಲೆ ನಡೆಸುವ ಕ್ರೌರ್ಯದ ರೂಪಕವಾಗಿ ದಾಖಲಾಗಿ ಹೋಗಿದೆ. ಇದುವರೆಗೂ ನಿಷ್ಕೃಷ್ಟತೆಯ ಸಾಮಾಜಿಕ ಕಳಂಕದಿAದ ನೊಂದ ಜನರಿಗೆ ತಮ್ಮ ಅಭಿಪ್ರಾಯಗಳನ್ನು, ನೋವನ್ನು, ಹತಾಶೆಯನ್ನು ಹೇಳಿಕೊಳ್ಳಲು, ಸಾಮಾಜಿಕ ಆರ್ಥಿಕ ಸಮಾನತೆಯ ನೆಮ್ಮದಿಯ ಬದುಕನ್ನು ಬದುಕಲು ಸೂಕ್ತ ಅವಕಾಶ ಕಲ್ಪಿಸುವ ಅಗತ್ಯವಿದೆ. ಇದೇ ವೇಳೆಗೆ ಕಳೆದೆರಡು ತಿಂಗಳ ಹಿಂದೆ ಕೇಂದ್ರ ಸರ್ಕಾರವು ಅನಿಯಂತ್ರಿತ ಆನ್‌ಲೈನ್ ಮಾಧ್ಯಮಗಳು ದ್ವೇಷ ಹರಡುತ್ತಿರುವುದರಿಂದ ಅವುಗಳ ಮೇಲೆ ನಿಯಂತ್ರಣ ಹೇರುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.

ಜಗತ್ತು ನಿರಂತರ ಚಲನಶೀ¯ವಾಗಿದ್ದು, ಬದಲಾವಣೆಗೆ ಒಳಪಡುತ್ತಲೇ ಇರುತ್ತದೆ. ತಂತ್ರಜ್ಞಾನ ಮತ್ತು ವೈಜ್ಞಾನಿಕ ಪ್ರಗತಿ ಅತ್ಯಂತ ವೇಗವಾಗಿ ನಡೆಯುತ್ತಿದ್ದು ಅದಕ್ಕೆ ತಕ್ಕ ಹಾಗೆ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳುವ, ಕಲ್ಪನಾತ್ಮಕ ಆದರ್ಶಗಿಳಿಗಿಂತ ವಾಸ್ತವಿಕ ಬದುಕಿಗೆ ಅರ್ಥ ಕೊಡುವ, ಎಲ್ಲರನ್ನೂ ಎಲ್ಲಾ ಬಗೆಯ ವೈವಿಧ್ಯವನ್ನೂ ಸ್ವೀಕರಿಸುವ, ಗೌರವಿಸುವ ಮತ್ತು ಸಹಬಾಳ್ವೆ ಮಾಡುವ ಅಗತ್ಯವು ಇತಿಹಾಸದಲ್ಲಿ ಆಗಿ ಹೋದ ಯಾವುದೇ ಕಾಲಘಟ್ಟಕ್ಕಿಂತಲೂ ಈಗ ಹೆಚ್ಚಾಗಿದೆ. ಸಾವಿರಾರು ವರ್ಷಗಳಿಂದ ಬದುಕಿದ ಕೋಟ್ಯಂತರ ಜನರಿಗೆ ತಮಗೆ ಹೊರೆಸಲಾದ ಅಸ್ಮಿತೆಗಳ ಕಾರಣಕ್ಕೆ ತಮ್ಮದೇ ನೆ¯ದಲ್ಲಿ ತಾವೇ ಅಪರಿಚಿತರಾಗಿ ಹೋಗುವುದು, ತಮ್ಮದೇ ಶ್ರಮದಿಂದ ಕಟ್ಟಿದ ದೇಶವೊಂದರÀ ಇತಿಹಾಸ ಕಥಾನಕದಲ್ಲಿ ಎಲ್ಲೂ ಕಾಣಿಸದಂತೆ ತಿರಸ್ಕೃತರಾಗುವುದು, ತಮ್ಮ ಅಸ್ತಿತ್ವಕ್ಕೆ ಇಲ್ಲಿ ಯಾವುದೇ ಮೌಲ್ಯವಿಲ್ಲ ಎಂಬ ಭಾವನೆಗೊಳಗಾಗುವುದು, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಳವಳಗೊಳ್ಳವುದು ವಿನಾಶಕಾರಿಯಾಗಿ ಪರಿಣಮಿಸುತ್ತದೆ.

ಹಾಗಾಗಿ ಎಲ್ಲಾ ಬಗೆಯಲ್ಲೂ ನಿರಾಳವಾಗಿ ಉಸಿರಾಡುವ ಜಗತ್ತನ್ನ ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕಾದ ಜರೂರತ್ತು ನಮ್ಮೆದುರಿಗಿದ್ದು, ಅದಕ್ಕೆ 2021 ನಿಜವಾದ ವೇದಿಕೆಯಾಗಬಹುದೆಂಬ ನಿರೀಕ್ಷೆಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಬೇಕಾಗಿದೆ. ಇಲ್ಲವಾದಲ್ಲಿ ಇತ್ತೀಚಿಗೆ ಬಂದ ಕ್ರಿಸ್ಟೋಫರ್ ನೋಲನ್ನನ ಸಿನೆಮಾ ‘ಟೆನೆಟ್’ ನಲ್ಲಿನ ಕಥೆಯಂತೆ, ಮುಂದೆ ನೂರಾರು ವರ್ಷಗಳ ನಂತರದ ಭವಿಷ್ಯದ ಪ್ರಜೆಗಳು ಸಂಪೂರ್ಣ ಹಾಳಾದ ಭೂಪರಿಸರದಲ್ಲಿ ಬದುಕುವಂತಾಗಿದ್ದು, ಅದಕ್ಕೆ ಕಾರಣರಾದ ಭೂತಕಾಲದಲ್ಲಿನ ಜನರ ಮೇಲೆ ಸೇಡು ತೀರಿಸಿಕೊಳ್ಳಲು ಕಾಲದಲ್ಲಿ ಹಿಮ್ಮುಖವಾಗಿ ಚಲಿಸಿಬಂದAತ ಕಥೆ ಮುಂದೆ ನಿಜವಾದರೂ ಆದೀತು.

 

Leave a Reply

Your email address will not be published.