ನೆಹರೂ ಮತ್ತು ವಾಜಪೇಯಿ ಭಾರತೀಯ ಪ್ರಜಾಪ್ರಭುತ್ವದ ಆದರ್ಶ ನಾಯಕರು

ನಿತಿನ್ ಗಡ್ಕರಿ

ಆಡಳಿತ ಪಕ್ಷದ ಕೆಲಸದ ಮೇಲೆ ಪ್ರಬಲ ವಿರೋಧ ಪಕ್ಷ ಕಣ್ಣಿಡಬೇಕು, ಕೆಲಸ ಆಗಬೇಕೆಂದರೆ ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಬೇಕು, ಹಾಗೂ ತನ್ನ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಇಷ್ಟನ್ನು ಮಾತ್ರ ಅವರಿಂದ ನಾನು ನಿರೀಕ್ಷಿಸಬಲ್ಲೆ

ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭಾರತೀಯ ಪ್ರಜಾಪ್ರಭುತ್ವದ ಆದರ್ಶ ನಾಯಕರುಎಂದು ಕರೆದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಾತು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ.

ಆಡಳಿತ ಪಕ್ಷದವರು ಮತ್ತು ವಿರೋಧ ಪಕ್ಷದಲ್ಲಿ ಇರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಘನತೆಯಿಂದ ವರ್ತಿಸಬೇಕುಎಂಬ ಮಾತುಗಳನ್ನು ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ನಿತಿನ್ ಗಡ್ಕರಿ ಆಗಸ್ಟ್ 21 ರಂದು ಹಿಂದಿ ಸುದ್ದಿ ವಾಹಿನಿ ನ್ಯೂಸ್ ನೇಷನ್ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಡಿದರು.

ವಾಜಪೇಯಿ ಔರ್ ನೆಹರೂ, ಯೇ ಹಿಂದೂಸ್ತಾನ ಕೇ ಲೋಕ್ತಂತ್ರ ಕೆ ಆದರ್ಶ್ ನೇತಾ, ಔರ್ ದೋನೊ ಕೆಹತೇ ಕಿ ಮೈನ್ ಅಪ್ನೆ ಲೋಕ್ತಂತ್ರಿಕ್ ಮರ್ಯಾದ ಕಾ ಪಾಲನ್ ಕರುಂಗಾ(ವಾಜಪೇಯಿ ಮತ್ತು ನೆಹರೂ ಭಾರತೀಯ ಪ್ರಜಾಪ್ರಭುತ್ವದ ಆದರ್ಶ ನಾಯಕರು. ಇಬ್ಬರೂ ಪ್ರಜಾಪ್ರಭುತ್ವದ ಘನತೆಗೆ ಗೌರವಕೊಟ್ಟು ಕಾರ್ಯನಿರ್ವಹಿಸುತ್ತೇವೆ ಎಂದು ಹೇಳುತ್ತಿದ್ದವರು) ಎಂಬುದು ಗಡ್ಕರಿ ಅವರ ಸ್ಪಷ್ಟ ನುಡಿ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದಾಗಿನ ನೆನಪುಗಳನ್ನು ಹಂಚಿಕೊಂಡರು ಗಡ್ಕರಿ: ಒಮ್ಮೆ ನಾನು ಅಟಲ್ಜಿ ಅವರನ್ನು ಭೇಟಿಯಾದೆ, ಆಗ ನಾನು ಸದನಕ್ಕೆ ಅಡ್ಡಿಪಡಿಸುವ ಕುರಿತು ಹೇಳಿದಾಗ ಅವರುಪ್ರಜಾಪ್ರಭುತ್ವದಲ್ಲಿ ಕಾರ್ಯನಿರ್ವಹಿಸುವ ಬಗೆಯಲ್ಲ ಇದು. ನಮ್ಮ ಸಂದೇಶವನ್ನು ಜನರಿಗೆ ತಲುಪಿಸುವುದು ಮುಖ್ಯಎಂದು ಅವರು ಹೇಳಿದರು.

ಇಂದಲ್ಲ ನಾಳೆ ನಾವು ಅಧಿಕಾರದಿಂದ ಕೆಳಗೆ ಇಳಿಯುವವರೇ. ಇವತ್ತು ವಿರೋಧ ಪಕ್ಷದಲ್ಲಿ ಇದ್ದವರು, ನಾಳೆ ಅಧಿಕಾರದಲ್ಲಿ ಇರುತ್ತಾರೆ, ಅಧಿಕಾರದಲ್ಲಿ ಇದ್ದವರು ಕೆಳಗೆ ಇಳಿಯುತ್ತಾರೆ, ಇಲ್ಲಿ ನಮ್ಮ ಪಾತ್ರ ಬದಲಾಗುತ್ತಲೇ ಇರುತ್ತದೆ. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭವಿದುಎಂದು ವಾಸ್ತವಪ್ರಜ್ಞೆ ಪ್ರದರ್ಶಿಸಿದ್ದಾರೆ ಗಡ್ಕರಿ.

ನಾನು ಹಲವಾರು ವರ್ಷ ವಿರೋಧ ಪಕ್ಷವಾಗಿಯೇ ಇದ್ದವನು, ಪ್ರತಿಯೊಬ್ಬರು ಘನತೆಯಿಂದ ವರ್ತಿಸಬೇಕುಎಂದು ಹೇಳಿದ ಅವರು ಇತ್ತೀಚೆಗೆ ಸಂಸತ್ ಮುಂಗಾರು ಅಧಿವೇಶನದಲ್ಲಿ ನಡೆದ ಘಟನೆಗಳು ತಮಗೆ ನೋವನ್ನುಂಟು ಮಾಡಿವೆ ಎಂಬುದನ್ನು ಯಾವ ಹಿಂಜರಿಕೆಯಿಲ್ಲದೇ ಹೇಳಿದ್ದು ಹಲವು ಬಗೆಯ ವ್ಯಾಖ್ಯಾನಗಳಿಗೆ ಆಸ್ಪದ ನೀಡಿದೆ.

ಕಾಂಗ್ರೆಸ್ ಪಕ್ಷದ ಕುರಿತು ಮಾತನಾಡಿದ ಸಚಿವರು, “ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪ್ರಬಲ ವಿರೋಧ ಪಕ್ಷದ ಅಗತ್ಯವಿದೆ. ಆಡಳಿತ ಪಕ್ಷವಿರೋಧ ಪಕ್ಷ ಪ್ರಜಾಪ್ರಭುತ್ವದ ಎರಡು ಚಕ್ರಗಳು, ನೆಹರು ಅವರು ವಾಜಪೇಯಿ ಅವರ ಬಗ್ಗೆ ಗೌರವ ಇಟ್ಟುಕೊಂಡಿದ್ದರು. ವಿರೋಧ ಪಕ್ಷ ಅನ್ನುವುದು ಅತ್ಯವಶ್ಯವಾಗಿ ಇರಲೇಬೇಕುಎಂದರು.

ಆಡಳಿತ ಪಕ್ಷದ ಕೆಲಸದ ಮೇಲೆ ಪ್ರಬಲ ವಿರೋಧ ಪಕ್ಷ ಕಣ್ಣಿಡಬೇಕು, ಕೆಲಸ ಆಗಬೇಕೆಂದರೆ ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಬೇಕು, ಹಾಗೂ ತನ್ನ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಇಷ್ಟನ್ನು ಮಾತ್ರ ಅವರಿಂದ ನಾನು ನಿರೀಕ್ಷಿಸಬಲ್ಲೆಎಂದು ಕೂಡಾ ಸೇರಿಸಿದರು.

ಬಾರಿಯ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ ಹಾಗೂ ಇತರೇ ವಿರೋಧ ಪಕ್ಷಗಳು ಸದನ ನಡೆಯಲು ಬಿಡಲೇ ಇಲ್ಲ ಎಂದು ಬಿಜೆಪಿ ಆರೋಪ ಮಾಡಿತ್ತು. ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲೇ ರೂಲ್ ಬುಕ್ ಹರಿದ ನಂತರ, ಘಟನೆಯ ಬಗ್ಗೆ ಭಾವುಕರಾಗಿ ನುಡಿದಿದ್ದ ನಾಯ್ಡು ಅವರ ಮಾತುಗಳು ಸದನದ ಹೊರಗೂಒಳಗೂ ಕೋಲಾಹಲವನ್ನೇ ಉಂಟು ಮಾಡಿದ್ದವು.

ಅಲ್ಲದೇ, ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ಕೆಸರೆರಚಾಟದ ವೇಳೆ, ನೆಹರೂವಾಜಪೇಯಿ ಹೆಸರುಗಳು ಚಾಲ್ತಿಗೆ ಬಂದಿದ್ದವು.

Leave a Reply

Your email address will not be published.