ಪರ್ಯಾಯ ನಾಯಕತ್ವ ಎಲ್ಲಿದೆ?

150 ವರ್ಷಗಳ ಹಳೆಯ ಪಕ್ಷ ಕಾಂಗ್ರೆಸ್ಸಿಗೆ ಇಂದು ಲೋಕಸಭೆಯ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರಾಜಕೀಯವಾಗಿ ಇಡೀ ದೇಶವನ್ನು ಮುನ್ನೆಡೆವ ನಾಯಕತ್ವ ಇಂದು ಕಾಂಗ್ರೆಸ್ ಪಕ್ಷ ಸೇರಿದಂತೆ ಬೇರೆ ಯಾವ ಪಕ್ಷಕ್ಕೂ ಇಲ್ಲ; ಹಾಗಾಗಿ ನರೇಂದ್ರ ಮೋದಿ ದೇಶಕ್ಕೆ ಅನಿವಾರ್ಯವಾಗಿದ್ದಾರೆ.

ಭಾರತ ಪಕ್ಷಾಧಾರಿತವಾದ ಪ್ರಜಾಪ್ರಭುತ್ವವನ್ನು ಹೊಂದಿದ ಬಹುದೊಡ್ಡ ದೇಶ. ಈ ಇಡೀ ದೇಶವನ್ನು ಒಟ್ಟಿಗೆ ಕರೆದೊಯ್ಯುವ ಪರ್ಯಾಯ ನಾಯಕತ್ವ ಎಲ್ಲೂ ಕಾಣುತ್ತಿಲ್ಲ. ಹೀಗಾಗಿಯೇ ನರೇಂದ್ರ ಮೋದಿ ದೇಶಕ್ಕೆ ಅನಿವಾರ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ. 21ನೇ ಶತಮಾನಕ್ಕೆ ಬೇಕಾಗಿರುವ ಆಶಾದಾಯಕ ಭಾರತವನ್ನು ಅಂದರೆ ಆರ್ಥಿಕವಾಗಿ ಕೆಳಮಟ್ಟದಲ್ಲಿರುವ ಪ್ರತಿಯೊಬ್ಬರಲ್ಲಿ ತನ್ನ ಜೀವನದಲ್ಲಿ ಪ್ರಗತಿ ಸಾಧಿಸಬೇಕು, ಸಾಧನೆ ಮಾಡಬೇಕು ಹಾಗೂ ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಎನ್ನುವ ಆಶಾಭಾವನೆ ಮೂಡಿಸಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.

ಆರ್ಥಿಕವಾಗಿ ಪ್ರಗತಿ ಆದ ದೇಶಗಳಲ್ಲಿ ಅಂದರೆ ಜಿ-7 ದೇಶಗಳಲ್ಲಿ ಆರ್ಥಿಕ ಪ್ರಗತಿದರ ಪ್ರತಿಶತ 2 ರಿಂದ 3ರಷ್ಟು ಇದೆ. ಪ್ರಗತಿಶೀಲ ದೇಶಗಳಲ್ಲಿ, ಅಂದರೆ ಚೀನಾ ಮುಂತಾದ ದೇಶಗಳಲ್ಲಿ ಆರ್ಥಿಕ ಪ್ರಗತಿದರ ಶೇಕಡಾ 4 ರಿಂದ 5ರಷ್ಟಿದೆ. ಆದರೆ ಭಾರತದಲ್ಲಿ ಇದು ಪ್ರತಿಶತ 7.6ರಷ್ಟಿದೆ. ಕೇಂದ್ರದಲ್ಲಿ ಎನ್‍ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಹಣದುಬ್ಬರ ಪ್ರಮಾಣ ಬಹಳ ನಿಯಂತ್ರಣದಲ್ಲಿದೆ. ಅದು ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಶೇ.10ಕ್ಕೆ ತಲುಪಿದ್ದನ್ನು ನಾವು ಕಂಡಿದ್ದೇವೆ.

ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ. ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ರಸ್ತೆ ಅಭಿವೃದ್ಧಿ ಪ್ರತಿದಿನಕ್ಕೆ 4 ರಿಂದ 5 ಕಿ.ಮೀ ಇತ್ತು; ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪ್ರತಿದಿನಕ್ಕೆ 30 ರಿಂದ 35 ಕಿ.ಮೀ.ಗೆ ಏರಿಕೆಯಾಗಿದೆ. ‘ಸಾಗರ್ ಮಹಲ್’ ಎಂಬ ಯೋಜನೆಯಡಿ ಬಂದರುಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ವಿಮಾನ ನಿಲ್ದಾಣಗಳು 4-5 ಪಟ್ಟು ಹೆಚ್ಚಿವೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಥಮಬಾರಿಗೆ ನಮ್ಮ ನದಿ ನೀರನ್ನು ಸಂಚಾರಕ್ಕೆ ಬಳಕೆ ಮಾಡಲು ಆರಂಭವಾಗಿದೆ. ಹೀಗೆ ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಹಿಂದಿನ ಯಾವ ಸರಕಾರ ಮಾಡದಷ್ಟು ಪ್ರಗತಿಯನ್ನು ಮೋದಿ ಸರಕಾರ ಮಾಡಿದೆ.

ಮೂರನೆಯದಾಗಿ ನಮ್ಮ ಏಷ್ಯನ್ ಮನಸ್ಥಿತಿಯನ್ನು ಮೀರಿ ಮೋದಿಯವರು ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ಸಾಮಾನ್ಯವಾಗಿ ಏಷ್ಯಾದಲ್ಲಿ ಯಾರೂ ಮುಂದಾಳತ್ವವನ್ನು ವಹಿಸುತ್ತಿರಲಿಲ್ಲ. ಮೋದಿಯವರು ಅವೆಲ್ಲವನ್ನು ಮೀರಿ ಜಾಗತಿಕ ಮಟ್ಟದಲ್ಲಿ ಬಹಳ ಪ್ರಭಾವಿ ನಾಯಕರಾಗಿ ರೂಪುಗೊಂಡಿದ್ದಾರೆ. 90ಕ್ಕೂ ಹೆಚ್ಚು ರಾಷ್ಟ್ರಗಳು ಆರ್ಥಿಕ ಹಾಗೂ ಭಯೋತ್ಪಾದನೆ ವಿಚಾರದಲ್ಲಿ ನಮ್ಮ ಜೊತೆ ನಿಲ್ಲುವಂತೆ ಮೋದಿ ಮಾಡಿದ್ದಾರೆ.

ಮೊದಲು ಹೊಲದಲ್ಲಿ ಬೆಳೆ ಹಾನಿಯಾದರೆ ಮಾತ್ರ ಪರಿಹಾರ ಕೊಡಲಾಗುತ್ತಿತ್ತು. ಈಗ ಹಾಗಿಲ್ಲ, ಬೆಳೆಯನ್ನು ಹೊಲದಿಂದ ಕಣಕ್ಕೆ ತಂದಾಗ ಹಾನಿಯಾದರೂ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗಿದೆ.

ಇನ್ನು ರಕ್ಷಣಾ ವಲಯದಲ್ಲಿ ಎರಡು ವಿಚಾರಗಳು ಬಹಳ ಪ್ರಮುಖ. ಮೊದಲನೆಯದಾಗಿ ನಮ್ಮ ಸೈನಿಕರ ಮನೋಬಲವನ್ನು ಹೆಚ್ಚಿಸುವುದು, ಎರಡನೆಯದಾಗಿ ಅವರ ಕೈಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕೊಡುವುದು. ಇವೆರಡು ವಿಚಾರಗಳಲ್ಲಿ ಬಹಳ ದೊಡ್ಡ ಕೆಲಸವನ್ನು ನರೇಂದ್ರ ಮೋದಿಯವರು ಮಾಡಿದ್ದಾರೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ಮೇಕ್ ಇನ್ ಯೋಜನೆಯಡಿ ಭಾರತದಲ್ಲೇ ತಯಾರಿಸಲು ಕೈಗಾರಿಕೆಗಳಿಗೆ ಅವಕಾಶ ನೀಡಿದ್ದಾರೆ. ಇದರಿಂದಾಗಿ ಭಾರತವೂ ಬಹಳ ಪ್ರಬಲ ರಾಷ್ಟ್ರ ಎನ್ನುವಂತಾಗಿದೆ. ಮುಂದಿನ ಐದು ವರ್ಷಗಳ ಕಾಲ ಈ ಯೋಜನೆ ಮುಂದುವರಿದರೆ ರಕ್ಷಣಾ ಕ್ಷೇತ್ರದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು ದಿನಕ್ಕೆ 35-36 ಉಪಗ್ರಹಗಳನ್ನು ಉಡಾಯಿಸುವಂತಾಗಿದ್ದು, ವಿದೇಶಗಳ ಉಪಗ್ರಹಗಳನ್ನು ನಮ್ಮ ಯಂತ್ರಗಳ ಮೂಲಕ ಬಾಹ್ಯಾಕಾಶಕ್ಕೆ ಹಾರಿಸುವಂತಾಗಿದ್ದು ಮೋದಿಯವರ ಅಧಿಕಾರದ ಅವಧಿಯಲ್ಲಿ.

ನರೇಂದ್ರ ಮೋದಿಯವರ ಸರಕಾರ ರೈತರ ಪರವಾಗಿಲ್ಲ ಎಂಬುದು ಅಪ್ಪಟ ಸುಳ್ಳು. ರೈತಾಪಿ ಕೇತ್ರದಲ್ಲಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮೂಲಭೂತ ಬದಲಾವಣೆಗಳನ್ನು ಮಾಡಿದ್ದಾರೆ. ಬೆಳೆ ಹಾನಿಯಾದಾಗ ಪರಿಹಾರ ನೀಡುವ ಮೂವತ್ತು ವರ್ಷಗಳಷ್ಟು ಹಳೆಯ ಮಾನದಂಡವನ್ನು ಬದಲಾವಣೆ ಮಾಡಿದ್ದಾರೆ. ಶೇಕಡಾ 50ರಷ್ಟು ಬೆಳೆ ಹಾನಿಯಾದರೆ ಮಾತ್ರ ಪರಿಹಾರ ಕೊಡುವುದನ್ನು ಶೇಕಡಾ 30ಕ್ಕೆ ಇಳಿಸಲಾಯಿತು. ಪರಿಹಾರದ ಹಣವನ್ನು ಒಂದೂವರೆ ಪಟ್ಟು ಹೆಚ್ಚಿಸಲಾಗಿದೆ. ರೈತರು ಬೆಳೆದ ಬೆಳೆಗಳಿಗೆ ಒಂದೂವರೆ ಪಟ್ಟು ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಪರಿಹಾರ ಕೊಡುವ ನಿಯಮಗಳಲ್ಲೂ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಮೊದಲು ಹೊಲದಲ್ಲಿ ಬೆಳೆ ಹಾನಿಯಾದರೆ ಮಾತ್ರ ಪರಿಹಾರ ಕೊಡಲಾಗುತ್ತಿತ್ತು. ಈಗ ಹಾಗಿಲ್ಲ, ಬೆಳೆಯನ್ನು ಹೊಲದಿಂದ ಕಣಕ್ಕೆ ತಂದಾಗ ಹಾನಿಯಾದರೂ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗಿದೆ.

ಎಲ್ಲ ರಾಜ್ಯಗಳು ಕೇಂದ್ರ ಸರಕಾರದ ತೆರಿಗೆ ಹಣವನ್ನು ಹೆಚ್ಚಿಸುವಂತೆ ಒತ್ತಾಯ ಮಾಡುತ್ತಿದ್ದವು. ಅದರೆ ಈ ಬೇಡಿಕೆ ಇದುವರೆಗೂ ಈಡೇರಿರಲಿಲ್ಲ. ನರೇಂದ್ರ ಮೋದಿಯವರು ತೆರಿಗೆ ಹಣದ ಪಾಲನ್ನು ಶೇ.32 ರಿಂದ ಶೇ.42ಕ್ಕೆ ಹೆಚ್ಚಿಸುವ ಔದಾರ್ಯವನ್ನು ತೋರಿಸಿದ್ದಾರೆ. ಇದರಿಂದಾಗಿ 14ನೇ ಹಣಕಾಸು ಆಯೋಗದಲ್ಲಿ ನಮ್ಮ ರಾಜ್ಯಕ್ಕೆ ಐದು ವರ್ಷಗಳಿಗೆ 80 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹಣ ದೊರೆಯಲಿದೆ. ಹೀಗೆ ಹಲವಾರು ಪ್ರಗತಿಪರ ಯೋಚನೆಗಳನ್ನು ಮೋದಿಯವರು ಹೊಂದಿದ್ದಾರೆ. ಇವೆಲ್ಲಾ ಮುಂದಿನ ಐದು ವರ್ಷಗಳಿಗೆ ಮುಂದುವರಿಯಬೇಕಿದೆ.

Leave a Reply

Your email address will not be published.