ಪಾಪ… ಸಂಪಾದಕರ ಪಾಡು!

ಪತ್ರಿಕೋದ್ಯಮದ ಗೊತ್ತು ಗುರಿಯಿಲ್ಲದೇ, ನೆತ್ತಿಯ ಮೇಲೆ ಕಣ್ಣಿಟ್ಟುಕೊಂಡು ಕಾಲಿಡುವ ಉಡಾಳರನ್ನು ತಿದ್ದುತ್ತಾ… ಸೋಮಾರಿ ಲೇಖಕರನ್ನೂ ಪ್ರೋತ್ಸಾಹಿಸುತ್ತಾ, ಮೂರ್ಖರನ್ನು ಸಹಿಸಿಕೊಳ್ಳುತ್ತಾ, ನಿಂದೆಪ್ರಶಂಸೆಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಾ ಪ್ರತೀ ಪತ್ರಿಕಾ ಬಳಗದಲ್ಲೂ ಇರಬಹುದಾದ ಇಂಥಾ ಕರುಣಾಜನಕ ಸಂಪಾದಕರಿಗೆ ಶರಣು. ಸಂಪಾದಕರ ಸಂತತಿ ಸಾವಿರವಾಗಲಿ; ಆದರೆ ಈ ರೀತಿಯ ಉಪಸಂಪಾದಕರ, ಅಂಕಣಕಾರರ ಸಂತತಿ ಹೆಚ್ಚದಿರಲಿ!

ಬಾಲು… ಬಾಲೂ… ಏ… ಬಾ…ಲೂ

ಏನ್ಸಾರ್?

ಟೀವಿ ನೋಡಿದ್ಯಾ?

ಸಾರ್, ಎರಡು ವರ್ಷವಾಯ್ತು!

ನೀನೆಂಥಾ ಪತ್ರಕರ್ತನೋ ಮಾರಾಯಾ? ಕಣ್ಮುಂದೆ 24 ಗಂಟೆ ನಾಲ್ಕು ಟೀವಿ ಓಡ್ತಾ ಇದ್ರೂ ನೋಡ್ಲಿಲ್ವಾ?

ವಿಷಯ ಏನು ಹೇಳಿ.

ಸ್ಮಿತಾ ಬೋಪಯ್ಯ ಅತ್ತು ಬಿಟ್ಟಾಳಂತ!

ಅವಳಿಗೆ ಸಿನಿಮಾದಲ್ಲೀಗ ಅವಕಾಶ ಕಡಿಮೆಯಾಗಿರಬಹುದು.

ಅದೇನು ದೊಡ್ಡ ವಿಷಯ ಬಿಡಿ ಸಾರ್… ಪ್ರತೀ ತಿಂಗಳೂ ಸಂಬಳ ತಗಳೋವಾಗ ನನಗೂ ಅಳು ಬರುತ್ತೆ.

ಈ ತುಟ್ಟಿ ಕಾಲದಾಗೆ ಪತ್ರಿಕೆ ಮಾಡೋದಲ್ಲದೇ ಪಹಿಲಾ ತಾರೀಖ್ ಸಂಬಳ ಬೇರೆ ಕೊಡ್ತಾರೇನು? ನಿನ್ನ ವಿಷಯ ಹಂಗಿರಲೋ ತಮ್ಮಾ… ಕೂಡಲೇ ಇದರದೊಂದು ಡಬಲ್ ಕಾಲಂ ನ್ಯೂಸ್ ಮಾಡಿ ಫಸ್ಟ್ ಪೇಜಿಗೆ ಹಾಕು.

‘ಅಪ್ಪನನ್ನು ನೆನೆದು ಮನವು ಒಪ್ಪವಾಯಿತು. ಕಣ್ಣೀರಿನಲ್ಲಿ ತೇಲಿ ತೆಪ್ಪವಾಯಿತು!’

ಹೆಂಗಿದೆ ಸಾರ್ ಹೆಡ್ಡಿಂಗು?

ನಮ್ಮದು ಸಾಹಿತ್ಯ ಪತ್ರಿಕೆ ಅಲ್ಲೋ. ದಿನ ಪತ್ರಿಕೆ. ನಿಮ್ಮ ಎಂ.ಡಿ. ಆಮೇಲೆ ಸಾಹಿತ್ಯ ಪರಿಷತ್ ಮುಂದೆ ಕೂತ್ಕೊಂಡು ಭಿಕ್ಷೆ ಬೇಡಬೇಕಾಗುತ್ತೆ.

ಅತ್ತಿದ್ದು ಯಾಕಂತೆ ಸಾರ್?

ಅವಳಪ್ಪ ಸತ್ತೋದರಂತೆ.

ಅಯ್ಯೋ.. ಛೇ ಪಾಪ.. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಪೂರಾ ಕೇಳೋ… ಸತ್ತಿದ್ದು ಕಳೆದ ಚುನಾವಣೆಗೂ ಮುಂಚೆ.

ಮತ್ತೆ, ಇಷ್ಟೊಂದು ಲೇಟ್ ರಿಯಾಕ್ಷನ್ ಯಾಕೆ ಸಾರ್?

ಲಾಸ್ಟ್ ಇಲೆಕ್ಷನ್ನಲ್ಲಿ ಅವರಪ್ಪನ ಜೊತೆ ಬಂದು ಓಟು ಹಾಕಿದ್ಲಂತೆ, ಈಗ ಒಂಟಿ ಆಗಿಬಿಟ್ಟಾಳಂತಾ ದುಃಖ…

ಓ..ಕೆ ಗೊತ್ತಾಯ್ತು ಬಿಡಿ ಸಾರ್. ನಮ್ಮಪ್ಪಾನೂ ಹೋಗಿ 6 ವರ್ಷವಾಯ್ತು. ಮೊದಲು ಅಪ್ಪನ್ನ ನೆನಪಿಸಿಕೊಂಡಾಗಲೆಲ್ಲಾ ಅಳು ಬರ್ತಿತ್ತು. ಈಗ ಅಳು ಬರುವಂತಾದಾಗಲೆಲ್ಲಾ ಅಪ್ಪನ ನೆನಪಾಗತ್ತೆ.

ಬಾಲೂ! ಪೇಪರ್ ಗೆ ನಿನ್ನ ಸುದ್ದಿ ಬ್ಯಾಡವೋ… ಹೇಳಿದಷ್ಟು ಮಾತ್ರ ಮಾಡೋ.

ಸರಿ ಸರ್… ‘ಅಪ್ಪನನ್ನು ನೆನೆದು ಮನವು ಒಪ್ಪವಾಯಿತು. ಕಣ್ಣೀರಿನಲ್ಲಿ ತೇಲಿ ತೆಪ್ಪವಾಯಿತು!’

ಹೆಂಗಿದೆ ಸಾರ್ ಹೆಡ್ಡಿಂಗು?

ನಮ್ಮದು ಸಾಹಿತ್ಯ ಪತ್ರಿಕೆ ಅಲ್ಲೋ. ದಿನ ಪತ್ರಿಕೆ. ನಿಮ್ಮ ಎಂ.ಡಿ. ಆಮೇಲೆ ಸಾಹಿತ್ಯ ಪರಿಷತ್ ಮುಂದೆ ಕೂತ್ಕೊಂಡು ಭಿಕ್ಷೆ ಬೇಡಬೇಕಾಗುತ್ತೆ.

ವಾಹ್! ಎಂಥಾ ಸುಂದರ ಉತ್ಪ್ರೇಕ್ಷಾಲಂಕಾರ ಅಲ್ವಾ ಸಾರ್? ಅಲ್ಲಿ ಬಿಡಿಗಾಸು ಕೂಡ ಹುಟ್ಟಲ್ಲ ಬಿಡಿ.

ಈಗೇನು ಮಾತಾಡ್ತಾ ನಿಂದರ್ತಿಯೋ ಇಲ್ಲ ನ್ಯೂಸ್ ಮಾಡಿ ಹಾಕ್ತಿಯೋ?

ಹೆಡಿಂಗ್ ಏನು ಕೊಡ್ಲಿ ಸಾರ್?

ನೀನೇ ಕ್ರಿಯೇಟಿವ್ ಆಗಿ ಏನಾದ್ರೂ ಮಾಡು.

‘ಈ ಸಂಕಟ ನನಗೇ ಯಾಕಯ್ಯ? ಗಳಗಳನೆ ಅತ್ತ ಸ್ಮಿತಾ ಬೋಪಯ್ಯ!’

ಚೆನ್ನಾಗಿಲ್ಲ.

ಸಾಕು ಸುಮ್ಮನಿರಯ್ಯಾ! ಪತ್ರಕರ್ತ ಆಗಿ ಜನ್ಮ ತಳೆದು, ಕನ್ನಡದ ಪತ್ರಿಕೆಯಲ್ಲಿದ್ದೂ.. ತಿಂಗಳಿಗೊಮ್ಮೆ ಸಂಬಳ ಕೇಳೋಕೆ ನಾಚಿಕೆ ಆಗಲ್ವಾ? ನಾವೆಲ್ಲಾ ವರುಷಗಟ್ಟಲೆ…

‘ಯಡ್ಡಿ, ಕುಮ್ಮಿ, ಸಿದ್ಧು ನಂತರ ಸ್ಮಿತಾ ಸರದಿ!’

ಇದು ಟ್ಯಾಬ್ಲಾಯ್ಡ್ ಅಲ್ಲೋ. ಹೆಡಿಂಗ್‍ನಾಗೆ ಡಿಗ್ನಿಟಿ ಇರಬೇಕು. ಕಾಂಟ್ರವರ್ಷಿಯಲ್ ಬ್ಯಾಡೋ…

‘ಮತದಾನಕ್ಕೆ ಜೈ, ಸ್ಮಿತಾ ಬೋಪಯ್ಯ ಕ್ರೈ’

ಇದೇನು ಟೀವಿ ಚಾನಲ್ಲಂತ ಮಾಡಿದೀ ಯೇನು?

‘ಮತದಾನದ ಸ್ಪರ್ಷ.. ಸ್ಮಿತಾ ಮುಖದಲ್ಲಿಲ್ಲ ಹರುಷ!’

ಬ್ಯಾಡ ಬಿಡಪಾ ಹೋಗಲಿ…

‘ಹರಿದು ಬಂದ ಕಣ್ಣೀರ ಕುಂಟೆ, ಎಲೆಕ್ಷನ್ ಟೈಮಲ್ಲಿ ಹೀಗೂ ಹುಂಠೇ?’

ಸರಿಯಪ್ಪಾ.. ನಿನಗೇನು ತೋಚತ್ತೋ ಅದೇ ಹೆಡಿಂಗ್ ಕೊಟ್ಟು ನ್ಯೂಸು ಮಾಡು ಹೊಂಡು.

ಸಾರ್… ಒಂದು ಕೊನೆ ಮಾತು ಹೇಳಲೇ?

ಬೇಗ ಹೇಳಿ ನಡಿ, ನ್ಯೂಸ್ ಮಾಡು. ಏ ಒಂದ್ಲೋಟ ನೀರು ತಂದ್ಕೊಡ್ರೋ.

ಈ ಸಂಕಟ ನನಗೇ ಯಾಕಯ್ಯ? ಗಳಗಳನೆ ಅತ್ತ ಸ್ಮಿತಾ ಬೋಪಯ್ಯ!’
ಚೆನ್ನಾಗಿಲ್ಲ.
‘ಯಡ್ಡಿ, ಕುಮ್ಮಿ, ಸಿದ್ಧು ನಂತರ ಸ್ಮಿತಾ ಸರದಿ!’
ಇದು ಟ್ಯಾಬ್ಲಾಯ್ಡ್ ಅಲ್ಲೋ. ಹೆಡಿಂಗ್‍ನಾಗೆ ಡಿಗ್ನಿಟಿ ಇರಬೇಕು. ಕಾಂಟ್ರವರ್ಷಿಯಲ್ ಬ್ಯಾಡೋ…
‘ಮತದಾನಕ್ಕೆ ಜೈ, ಸ್ಮಿತಾ ಬೋಪಯ್ಯ ಕ್ರೈ’
ಇದೇನು ಟೀವಿ ಚಾನಲ್ಲಂತ ಮಾಡಿದೀಯೇನು?

ನಮ್ಮಪ್ಪನ ಮಾತು ಕೇಳಿದ್ದಿದ್ದರೆ, ಇವತ್ತು ಈ ಸ್ಮಿತಾ ಕಣ್ಣೀರಿನ ನ್ಯೂಸ್ ಮಾಡೋ ದುರ್ಗತಿ ನನಗೆ ಬರ್ತಾ ಇತ್ತಾ ಸಾರ್? ನನಗೂ ಕಣ್ಣೀರು ಬರ್ತಿದೆ. ನಂದೇ ಒಂದು ಕೋಟ್ ತಗೊಂಡು ಫೋಟೊ ಸಮೇತ ಹಾಕಿಬಿಡ್ಲಾ ಸಾರ್?

ಏಯ್! ಯಾರೋ ಅಲ್ಲಿ.. ಈ ಬಾಲೂನ ದೂರ ಕಳಿಸ್ರೀ. ಅರ್ಜೆಂಟ್ ಆ ಸ್ಮಿತಾ ಬೋಪಯ್ಯದೊಂದು ನ್ಯೂಸ್ ಮಾಡ್ರೋ. ಸುದ್ದೀಗೆ ಗ್ಲಾಮರಸ್ ಫೋಟೋ ಹಾಕಿ ಸಾಯಬೇಡ್ರೋ. ಅಳ್ತಾ ಇರೋ ಫೋಟೊ ಹಾಕಿ.

*
ಬಾಲೂ…

ಏನ್ಸಾರ್?

ಈ ದಿನವೇ ಸುದಿನ ಕಣಯ್ಯಾ! ಒಂದೇ ಬಾರಿಗೆ ಓಗೊಟ್ಟೆಯಲ್ಲಾ.

ಸಾರ್! ನಾನು ನಾಳೆ ರಜಾ ಹಾಕೋಣಾಂತಾ…

ಇನ್ನೊಂದು ಪದ ಮುಂದೆ ಮಾತನಾಡಿದರೆ ಎಚ್ಚರಿಕೆ! ನಿಮ್ಮ ಮುಂದೆ ನಗುತ್ತಾ ಮಾತನಾಡೋದೇ ತಪ್ಪು. ಈಗ ಕರೆದಿದ್ದು ಯಾಕೇ ಗೊತ್ತಾ?

ಇಲ್ಲ ಹೇಳಿ…

ಇಲ್ನೋಡು… ಈ ಪುಟ ನೋಡು, ಇದನ್ನು ಯಾರೋ ಎಡಿಟ್ ಮಾಡಿದ್ದು?

ನಾನೇ! ನಾನೇ! ನಾನೇ! ನಂಗೊತ್ತಿತ್ತು ಸಾರ್… ನೀವು ಹೊಗಳೋದು ಗ್ಯಾರಂಟಿ ಅಂತಾ. ಎಷ್ಟು ಚೆನ್ನಾಗಿ ಬಂದಿದೆ ಅಲ್ವಾ?

ಸುಡುಗಾಡು ಚೆನ್ನಾಗಿ ಬಂದಿದೆ! ಬೇರೆ ಯಾರಾದ್ರೂ ಇದ್ದಿದ್ದರೆ ನಿಂತ ಜಾಗದಲ್ಲೇ ನಿನಗೆ ಸೆಟಲ್‍ಮೆಂಟ್ ಮಾಡಿ ಕಳಿಸಿಬಿಡುತ್ತಿದ್ದರು.

ಹ್ಹಾ! ನಿಜವಾಗ್ಲೂ? ಸಾರ್.. ಪ್ಲೀಸ್! ನಿಮ್ಮ ದಮ್ಮಯ್ಯ… ನನಗೂ ಕಳಿಸಿಬಿಡಿ. ಅದೇನೋ ಸೆಟಲ್‍ಮೆಂಟ್ ಅಂದ್ರಲ್ಲಾ. ಎರಡು ತಿಂಗಳು ಬಾಕಿ ಇದೆ. ನೀವು ಸ್ವಲ್ಪ ಕಡಿಮೆ ಕೊಟ್ಟರೂ ನಡೀತದೆ…

ಸಾಕು ಸುಮ್ಮನಿರಯ್ಯಾ! ಪತ್ರಕರ್ತ ಆಗಿ ಜನ್ಮ ತಳೆದು, ಕನ್ನಡದ ಪತ್ರಿಕೆಯಲ್ಲಿದ್ದೂ.. ತಿಂಗಳಿಗೊಮ್ಮೆ ಸಂಬಳ ಕೇಳೋಕೆ ನಾಚಿಕೆ ಆಗಲ್ವಾ? ನಾವೆಲ್ಲಾ ವರುಷಗಟ್ಟಲೆ…

ಹೋಗ್ಲಿ ಬಿಡಿ ಸಾರ್… ಕರೆದಿದ್ದೇನೂ ಅಂತ ಹೇಳಿ.

ಸಾರ್.. ಒಂದು ಇಂಟರೆಸ್ಟಿಂಗ್ ಮರ್ಡರ್ ಕೇಸು! ನಮ್ಮ ವರದಿಗಾರ ವಿಡಿಯೋ, ಪೊಲೀಸ್ ಪ್ಯಾದೆಯ ಬೈಟು, ಅಕ್ಕಪಕ್ಕದವರ ಸಾಕ್ಷಿ, ಶೆರ್ಲಾಕ್ಸ್ ಹೋಮ್ಸ್ ಕೋಟ್ ಎಲ್ಲಾ ಕಳಿಸಿದಾನೆ. ಅವನು ಎಲ್ಲೋ ಇರಬೇಕಿತ್ತು ಬಿಡಿ ಸಾರ್. ಹೆಣಾ ನೋಡಿದ ತಕ್ಷಣಾನೇ ಇದು ಸಾವು ಎಂದು ತೀರ್ಮಾನಿಸಿ ಬಿಟ್ಟನಂತೆ.

ಈ ಪೇಜನ್ನ ನೋಡಿದ್ಯಾ? ತುಸುವಾದ್ರೂ ಭಾಷಾಜ್ಞಾನ ಬ್ಯಾಡವಾ? ಇದೇನು ಪ್ರೈಮರಿ ಸ್ಕೂಲಂತಾ ಮಾಡಿದ್ಯೇನು… ದಿನಾ ನಾನು ನಿಮ್ಮ ಕಾಗುಣಿತ ತಿದ್ದುತಾ ಕೂರೋಕೆ? ಇದನ್ನು ಸಂಪೂರ್ಣ ಓದಿ ಮೂವತ್ತೆರಡೂವರೆ ತಪ್ಪು ಹುಡುಕಿದ್ದೀನಿ. ಯಾವುದಿರಬಹುದು ಹುಡುಕಿ ತಿದ್ಕೋ…

ಸರಿ ಸಾರ್.. ಅದಕ್ಕೆ ನಾಲ್ಕೈದು ದಿನ ಬೇಕಾಗಬಹುದು. ಬದಲಾಗಿ ತಮ್ಮ ಶ್ರೀಜಿಹ್ವೆಯಿಂದ ತಾವೇ ನುಡಿದು ಉದ್ದರಿಸಬೇಕು.

ಇದಕ್ಕೇನೂ ಕಮ್ಮಿಯಿಲ್ಲ. ಇದನ್ನೇ ಬರವಣಿಗೆಯಲ್ಲಿ ತೋರಿಸು. ಪೊಲೀಸ್ ಅನ್ನೋ ಕಡೆಯೆಲ್ಲಾ ಪೋಲಿಸ್ ಅಂತಾ ಹಾಕಿದ್ಯಾ. ಶಂಕರ ಶ ಯಾವುದು ಷಟ್ಪದಿ ಷ ಯಾವುದು ಅಂತಾ ನಿನಗೆ ಯಾವ ಜನ್ಮದಲ್ಲಿ ಅರ್ಥವಾಗುತ್ತೋ ಕಾಣೆ. ಗುಡಿಯಲ್ಲಿ ಅಲ್ಲಾಡಿಸುವ ಘಂಟೆಗೂ ಗಡಿಯಾರದ ಗಂಟೆಗೂ ವ್ಯತ್ಯಾಸ ಗೊತ್ತಿಲ್ಲೇನು?

ಸರ್ಕಾರಿ ಕಛೇರಿ ಅಂತ ಬರೆಯೋಕೆ ಅಲ್ಲೇನು ಪಕ್ಕವಾದ್ಯ ಸಮೇತ ಸಂಗೀತ ಹಾಡ್ತಾರೇನೋ ತಿಮ್ಮಣ್ಣಾ? ನಿಮಗೆಲ್ಲಾ ಪಾಠ ಹೇಳೀ ಹೇಳೀ ತಲೆಕೂದಲೆಲ್ಲಾ ಬೆಳ್ಳಗಾಯ್ತು!

ಸಾರ್.. ಇದನ್ನೆಲ್ಲಾ ಬಲ್ಲ ಒಬ್ಬ ಪ್ರೂಫ್‍ರೀಡರ್ ಯಾಕೆ ಇಟ್ಕೋಬಾರದು!

ಕನ್ನಡ ಬರದೇ ಬರೀಯೋ ನೀವೆಲ್ಲ. ಕತ್ತೇ ಕಾಯ್ತೀರೇನೂ?

ಎಂಡಿ ಇನ್ನೂ ಒಂದ್ನಾಕು ತಿಂಗಳು ಬದುಕಿರಬೇಕೋ ಬ್ಯಾಡೋ? ಪ್ರೂಫ್‍ರೀಡರ್… ಖಬರದಾರ! ನನ್ಮುಂದೆ ಇಂಥಾ ಕಪೋಲಕಲ್ಪಿತ ಮಾತಾಡೋದಿಕ್ಕೆ ಮುಂಚೆ ಕೂಲಂಕುಶವಾಗಿ ಯೋಚನೆ ಮಾಡಿ ಆಡು…

ಸಾರ್.. ಅದು ಕಪೋಲ ಕಲ್ಪಿತ ಅಲ್ಲ. ಕಪೋತಕಲ್ಪಿತ. ಹಾಗೇ ಕೂಲಂಕುಶ ಅನ್ನೋದು ತಪ್ಪು ಕೂಲಂಕಷ ಅಂತ ನೀವೇ ಹೇಳಿದ್ರೀ…
ಈಗ ನನ್ನ ಕಣ್ಮುಂದಿನಿಂದ ತೊಲಗ್ತೀಯೋ ಇಲ್ಲವೋ? ಕೈಲಿದ್ದ ಪೇಪರ್‍ವೇಟ್ ಅನ್ನು ಗಟ್ಟಿಯಾಗಿ ಹಿಡಿದು ಸಂಪಾದಕರು ಆರ್ಭಟಿಸಿದರು.

*
ಅಷ್ಟು ಹೊತ್ತಿನಿಂದ ಯಾರ ಜೊತೆ ಫೋನಲ್ಲಿ ಲಲ್ಲೆ ಹೊಡೀತಿದ್ಯೋ? ಟೇಮೆಷ್ಟಾತು ನೋಡಿದ್ಯಾ? ನಿಮ್ಮೆಲ್ಲರಿಗೂ ರಾತ್ರಿ ಒಂದಾರೂ ನಡೀತದೆ, ಎರಡಾದ್ರೂ ನಡೀತದೆ. ನಂಗೆ ಹೆಂಡ್ರು ಮಕ್ಕಳಿದಾರಪಾ.

ಬಾಲೂ… ಕಾಲಂ ಬಂತಾ?
ಇನ್ನೂ ಇಲ್ಲ ಸಾರ್! ಪ್ರಿಂಟಿಗೆ ಹೋಗುವಷ್ಟರಲ್ಲಿ ಕಳಿಸಬೋದು ಬಿಡಿ.
ಮುಂದಿನ ಜನ್ಮದಲ್ಲಾದರೂ ನೀನು ಯಾವುದಾದರೂ ಪತ್ರಿಕಾ ಸಂಪಾದಕನಾಗಿ…
ಸಾರ್.. ಸಾರ್.. ತಪ್ಪಾಯ್ತು. ಅಂಥಾ ಶಾಪ ಹಾಕಬೇಡಿ.

ಏನ್ಸಾರ್ ನಿಮ್ದು? ನೀವೇ ಯಾವಾಗ್ಲೂ ಹೇಳ್ತೀರಲ್ಲಾ.. ನಿಮ್ಮ ಪರ್ಸನಲ್ ಪ್ರಾಬ್ಲಮ್ಸ್ ಎಲ್ಲಾ ಪತ್ರಿಕೆಯಿಂದ ಆಚೆ ಇಟ್ಟಿರಬೇಕು ಅಂತಾ..

ನಾನು ಹೇಳಿದ್ದನ್ನೆಲ್ಲಾ ಖಡಕ್ಕಾಗಿ ಪಾಲಿಸ್ತ್ಯಾ ನೀನು? ಯಾರದಾರ ಫೋನಲ್ಲಿ ಅಷ್ಟು ಮಾತ್ರ ಹೇಳು…

ನಮ್ಮ ಗ್ರಾಮಾಂತರ ಸ್ಟ್ರಿಂಜರು.

ಏನು ಅಷ್ಟು ಹೊತ್ನಿಂದ ಕಷ್ಟ ಸುಖ ಮಾತಾಡ್ತಾ ಇದಿಯೇನು?

ತಮಾಷೆ ಮಾಡಬೇಡಿ ಸಾರ್, ಕನ್ನಡ ಪತ್ರಿಕೆ ಆಫೀಸಿನಲ್ಲಿ ಸುಖ ಎಲ್ಲಿಂದ ಬರಬೇಕು.

ಏನು ಮಾತಾಡ್ತಿದ್ಯಾ ಅಷ್ಟು ಬೊಗಳು…

ಸಾರ್.. ಒಂದು ಇಂಟರೆಸ್ಟಿಂಗ್ ಮರ್ಡರ್ ಕೇಸು! ನಮ್ಮ ವರದಿಗಾರ ವಿಡಿಯೋ, ಪೊಲೀಸ್ ಪ್ಯಾದೆಯ ಬೈಟು, ಅಕ್ಕಪಕ್ಕದವರ ಸಾಕ್ಷಿ, ಶೆರ್ಲಾಕ್ಸ್ ಹೋಮ್ಸ್ ಕೋಟ್ ಎಲ್ಲಾ ಕಳಿಸಿದಾನೆ. ಅವನು ಎಲ್ಲೋ ಇರಬೇಕಿತ್ತು ಬಿಡಿ ಸಾರ್. ಹೆಣಾ ನೋಡಿದ ತಕ್ಷಣಾನೇ ಇದು ಸಾವು ಎಂದು ತೀರ್ಮಾನಿಸಿ ಬಿಟ್ಟನಂತೆ. ಹಗ್ಗ ಮತ್ತು ಸ್ಟೂಲು ಎರಡಕ್ಕೂ ಇರುವ ಅಂತರ ಸೆಂಟಿಮೀಟರಲ್ಲಿ ಅಳೆದು ಕಳಿಸಿದಾನೆ. ಅದೂ ಅಲ್ಲದೆ ಸತ್ತೋಗಿರೋರ… ಏಥೂ ಮೃತ ದುರ್ದೈವಿಯ ಅಕ್ಕನ ಮಗನಿಗೆ ಚಿಕ್ಕಬಳ್ಳಾಪುರದಲ್ಲಿ ಒಬ್ಬಳು ಲವರ್ ಕೂಡ ಇದ್ದಾಳೆ ಎಂಬ ಎಕ್ಸ್ಲೂಸಿವ್ ಆದ ಖಚಿತ ಮಾಹಿತಿ ಕೂಡ ಕೊಟ್ಟಿದ್ದಾನೆ. ಅದೂ ಅಲ್ಲದೇ ನಮ್ಮ ಸ್ಟ್ರಿಂಜರ್‍ಗೆ ದಿವಂಗತರ ಸ್ನೇಹಿತರು ದೂರದ ಸಂಬಂಧ ಬೇರೆ ಅಂತೆ…

ಏನು ಮಾಡ್ತಿ… ಅಷ್ಟು ಹೇಳಪಾ ಸಾಕು!

ಕವರ್ ಸ್ಟೋರಿ… ಏಳು ಕಾಲಂ ನ್ಯೂಸ್, ಎರಡು ಬಾಕ್ಸು, ಒಂದು ಕೋಟು. ಕನಿಷ್ಟ ಮೂರು ಕಲರ್ ಪೋಟೋ…

ಹತ್ತಿರ ಬಂದು ಗಟ್ಟಿಯಾಗಿ ಭುಜವನ್ನು ಅಮುಕಿದ ಸಂಪಾದಕರು, ಕ್ರೈಂ ಪೇಜಿಗೆ.. ಸಿಂಗಲ್ ಕಾಲಂ.. ಪೋಟೋ ಏನೂ ಬ್ಯಾಡ ಎನ್ನುವಷ್ಟರಲ್ಲಿ ಅವರ ದನಿ ಗದ್ಗದವಾಗಿತ್ತು.

*
ಬಾಲೂ… ಕಾಲಂ ಬಂತಾ?

ಇನ್ನೂ ಇಲ್ಲ ಸಾರ್! ಪ್ರಿಂಟಿಗೆ ಹೋಗುವಷ್ಟರಲ್ಲಿ ಕಳಿಸಬೋದು ಬಿಡಿ.

ಮುಂದಿನ ಜನ್ಮದಲ್ಲಾದರೂ ನೀನು ಯಾವುದಾದರೂ ಪತ್ರಿಕಾ ಸಂಪಾದಕನಾಗಿ…

ಸಾರ್.. ಸಾರ್.. ತಪ್ಪಾಯ್ತು. ಅಂಥಾ ಶಾಪ ಹಾಕಬೇಡಿ. ಮೊನ್ನೆಯಿಂದ ನಲವತ್ತೇಳು ಸಾರಿ ಫೋನ್ ಮಾಡಿದೆ. ಈಗ ಒಂದರ್ಧ ಗಂಟೆ ಮುಂಚೆ ಸಹಾ ಮಾಡಿದ್ದೆ.

ಏನಂದರು ಅಂಕಣಕಾರರು?

“ಸತ್ಯಂ ವದಾಮಿ” ಕಾಲಂ ಥರಾನೇ ಅವರದ್ದು ಒಂದೇ ಮಾತು ಸಾರ್! ಯಾವತ್ತೂ ಬದಲಾಗೋಲ್ಲ.

ಇನ್ನೊಂದು ತಾಸಿನಾಗಿ ಗ್ಯಾರೆಂಟಿ ಕಳಸ್ತೀನಿ ಅಂತದರು ಸಾರ್…

ಅದನ್ನ ಕೇಳಿ ನೀನು ಬಿನ್ನಾಣವಾಗಿ ಫೋನಿಟ್ಟುಬಿಟ್ಟೆ ಅಲಾ?

ಮತ್ತೇನು ಮಾಡಬೇಕಿತ್ತು ಸಾರ್?

ಹಂಗೇ ಲೈನಾಗಿರ್ತೀನಿ ಸಾರ್.. ಬರೆದುಕೊಡಿ. ಇಲ್ಲಾ ನೀವು ಡಿಕ್ಟೇಟ್ ಮಾಡಿ ನಾನು ಬರಕೋತೀನಿ ಅಂತನ್ನಬೇಕಿತ್ತು.

ಸಾರ್! ಸೀರಿಯಸ್ಲೀ…?

ಹೆಚ್ಗೆ ಮಾತಾಡಬ್ಯಾಡ… ಕೂಡಲೇ ಫೋನ್ ಮಾಡು. ಮೂರು ಆರಾಗ್ಲೀ ಆರು ಮೂರಾಗ್ಲೀ… ದೀಡ್ ಮಿನಿಟ್ನಾಗೆ ಅಂಕಣ ತಗಂಡು ನನ್ಮುಂದೆ ಬಡೀಬೇಕು. ತಿಳೀತಿಲ್ಲೋ?

‘ನಾಳೆ ಇಲ್ಲಿ ನಾನೇ ಎದೆಯೊಡೆದುಕೊಂಡು ಬಿದ್ದರೂ ನಿಮಗೆ ಬುದ್ಧಿ ಬರಲ್ಲಾ’ ಎಂದು ಹಳಹಳಿಸುತ್ತಾ ಸಂಪಾದಕರು ಕುರ್ಚಿಯ ಮೇಲೆ ಕುಸಿದು ಕುಳಿತರು.

Leave a Reply

Your email address will not be published.