ಪೆಗಸಸ್: ಭಾರತದ ವಾಟರ್ ಗೇಟ್ ಪ್ರಕರಣ ಮೋದಿಯವರಿಗೆ ಮುಳುವಾಗಲಿದೆಯೇ?

ಡಿ.ಉಮಾಪತಿ

ಇಸ್ರೇಲಿ ಮೂಲದ ಎನ್.ಎಸ್.. ಸಂಸ್ಥೆಯ ಉತ್ಪನ್ನ ಪೆಗಸಸ್. ಅತ್ಯಾಧುನಿಕ ಬೇಹುಗಾರಿಕೆಯ ತಂತ್ರಾಂಶವನ್ನು ಶಸ್ತ್ರಾಸ್ತ್ರ ಎಂದು ಖುದ್ದು ಇಸ್ರೇಲ್ ಸರ್ಕಾರವೇ ಕರೆದಿದೆ. ಭಾರತದಲ್ಲಿ ಪೆಗಸಸ್ ದಾಳಿ ಹಿಂದೆ 2019 ನವೆಂಬರ್ ನಲ್ಲಿ ಸುದ್ದಿಗೆ ಬಂದಿತ್ತು. ತಂತ್ರಾಂಶವನ್ನು ತಾನು ಖರೀದಿ ಮಾಡಿಯೇ ಇಲ್ಲ ಎಂದು ಮೋದಿ ಸರ್ಕಾರ ಅಂದು ಗಟ್ಟಿಯಾಗಿ ನಿರಾಕರಿಸಿರಲಿಲ್ಲ. ಇಂದು ಕೂಡ ಅಲ್ಲಗಳೆದಿಲ್ಲ!

ಮೋದಿ ಸರ್ಕಾರ ಮತ್ತು ಗೋದಿ ಮೀಡಿಯಾ ಒಟ್ಟಾಗಿ ಕೆಳಕ್ಕೆ ತುಳಿದಷ್ಟೂ ಮೇಲೆ ಚಿಮ್ಮಿತೊಡಗಿದೆ ಪೆಗಸಸ್ ಬೇಹುಗಾರಿಕೆ ಪ್ರಕರಣ. ಬೇಹುಗಾರಿಕೆಗೆ ಶಿಕಾರಿಗಳಾಗಿರುವ ಹೊಸ ಹೆಸರುಗಳು ಹೊರಬರತೊಡಗಿವೆ. ಸರ್ಕಾರದ ವಿಶೇಷ ಗೂಢಚರ್ಯ ಅಂಗವೆನಿಸಿದ ರಿಸರ್ಚ್ ಅಂಡ್ ಅನಲಿಸಿಸ್ ವಿಂಗ್ ,ಅಧಿಕಾರಿಗಳೇ ಅಲ್ಲದೆ ಖುದ್ದು ಪ್ರಧಾನಮಂತ್ರಿ ಕಾರ್ಯಾಲಯವೂ ಬೇಹುಗಾರಿಕೆಯ ಬಿಸಿಗೆ ಸಿಲುಕಿದೆ.

ನಡುವೆ ಜನಮತದ ಅಗ್ನಿಪರೀಕ್ಷೆಯಲ್ಲಿ ಮೋಶಾ ಜೋಡಿಯನ್ನು ಘನವಾಗಿ ಸೋಲಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಹೊಸ ಪೇಚನ್ನು ಸೃಷ್ಟಿಸಿದ್ದಾರೆ. ಇಡೀ ಪ್ರಕರಣದ ತಿಪ್ಪೆ ಸಾರಿಸಿ ಇಲ್ಲಿಯ ತನಕ ತನಿಖೆಯ ಮಾತನ್ನೇ ಆಡದೆ ಮೌನ ತಳೆದಿತ್ತು ಕೇಂದ್ರ ಸರ್ಕಾರ. ಬ್ಯಾನರ್ಜಿ ಉರುಳಿಸಿರುವ ಹೊಸ ದಾಳ ಮೋಶಾ ಜೋಡಿಯನ್ನು ಜಾಣಮೌನದ ಚಿಪ್ಪಿನಿಂದ ಹೊರಗೆಳೆಯಲಿದೆ.

ಮೋದಿಯವರು ಮಾಡಬೇಕಿದ್ದ ತನಿಖೆಯ ಕೆಲಸವನ್ನು ಮಮತಾ ಮಾಡಿದ್ದಾರೆ. ಕಾನೂನು ತಜ್ಞರ ಪ್ರಕಾರ ಮಮತಾ ನೇಮಕ ಮಾಡಿರುವ ನ್ಯಾಯಾಂಗ ವಿಚಾರಣಾ ಆಯೋಗ ಸರ್ವವಿಧದಲ್ಲೂ ಕಾನೂನು ಸಮ್ಮತ. ಕೇಂದ್ರ ಸರ್ಕಾರ ಇದೀಗ ನ್ಯಾಯಾಂಗ ವಿಚಾರಣಾ ಆಯೋಗವನ್ನು ನೇಮಕ ಮಾಡಬೇಕಿದ್ದರೆ ಮಮತಾ ನೇಮಿಸಿರುವ ಆಯೋಗದ ವಿಚಾರಣಾ ವ್ಯಾಪ್ತಿಯನ್ನು ಹಿಗ್ಗಿಸಿ ಮಾಡಬಹುದೇ ವಿನಾ ಕುಗ್ಗಿಸಲು ಬರುವುದಿಲ್ಲ. ಮಮತಾ ಜಾಲದಿಂದ ಬಚಾವಾಗಲು ಮೋದಿಯವರ ಮುಂದಿರುವ ಏಕೈಕ ಉಪಾಯವಿದು.

ಭಾರತದಲ್ಲಿ ಪೆಗಸಸ್ ದಾಳಿ ಹಿಂದೆ 2019 ನವೆಂಬರ್ ನಲ್ಲಿ ಸುದ್ದಿಗೆ ಬಂದಿತ್ತು. 121 ಮಂದಿ ಭಾರತೀಯರ ವಾಟ್ಸ್ಯಾಪ್ ಸಂದೇಶಗಳನ್ನು ಹ್ಯಾಕ್ ಮಾಡಲಾಗಿತ್ತು. ಆಗ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಅಂಶ ನಿಚ್ಚಳವಾಗಿರಲಿಲ್ಲ. ಪೆಗಸಸ್ ತಂತ್ರಾಂಶವನ್ನು ತಾನು ಖರೀದಿ ಮಾಡಿಯೇ ಇಲ್ಲ ಎಂದು ಮೋದಿ ಸರ್ಕಾರ ಅಂದು ಗಟ್ಟಿಯಾಗಿ ನಿರಾಕರಿಸಿರಲಿಲ್ಲ. ಇಂದು ಕೂಡ ಅಲ್ಲಗಳೆದಿಲ್ಲ.

ಇಸ್ರೇಲಿ ಮೂಲದ ಎನ್.ಎಸ್.. ಸಂಸ್ಥೆಯ ಉತ್ಪನ್ನ ಪೆಗಸಸ್. ಅತ್ಯಾಧುನಿಕ ಬೇಹುಗಾರಿಕೆಯ ತಂತ್ರಾಂಶವನ್ನು ಶಸ್ತ್ರಾಸ್ತ್ರ ಎಂದು ಖುದ್ದು ಇಸ್ರೇಲ್ ಸರ್ಕಾರವೇ ಕರೆದಿದೆ. ಭಯೋತ್ಪಾದನೆ ಮತ್ತು ಘೋರ ಪಾತಕಗಳನ್ನು ಮುಂಚಿತವಾಗಿಯೇ ತಿಳಿದು ತಡೆಯಲು ಮತ್ತು ಅಪರಾಧಗಳ ತನಿಖೆಗೆಂದು ಕಾನೂನಾತ್ಮಕ ಬಳಕೆಗೆ ತಂತ್ರಾಂಶ ಮೀಸಲು. ಕೇವಲ ಸರ್ಕಾರಗಳಿಗೆ ಮಾತ್ರವೇ ಸೈಬರ್ ಅಸ್ತ್ರವನ್ನು ಮಾರಾಟ ಮಾಡಲಾಗುವುದು ಎಂದು ಇಸ್ರೇಲ್ ಸರ್ಕಾರ ಮತ್ತು ಪೆಗಸಸ್ ತಯಾರಿಸುವ ಎನ್.ಎಸ್.. ಸ್ಪಷ್ಟಪÀಡಿಸಿವೆ. ಆದರೆ ಅಸ್ತ್ರವನ್ನು ಭಾರತವೂ ಸೇರಿದಂತೆ 50 ದೇಶಗಳ ಪತ್ರಕರ್ತರು, ಹೋರಾಟಗಾರರು, ಪ್ರತಿಪಕ್ಷಗಳ ರಾಜಕಾರಣಿಗಳು ಹಾಗೂ ಭಿನ್ನಮತೀಯರ ಮೇಲೆ ಬೇಹುಗಾರಿಕೆ ನಡೆಸಲು ದುರುಪಯೋಗ ಮಾಡಲಾಗಿದೆ.

ಮೋದಿಯವರ ಮಂತ್ರಿಮಂಡಲದ ಸದಸ್ಯ ಪ್ರಹ್ಲಾದ ಸಿಂಗ್ ಪಟೇಲ್ ಅವರಷ್ಟೇ ಅಲ್ಲದೆ, ಅವರ ಪತ್ನಿ, ಮಗಳು, ಬಾಣಸಿಗ, ತೋಟದ ಮಾಲಿ ಸೇರಿದಂತೆ ಕುಟುಂಬದ 15 ಫೆೀರ್ಟಿನುಗಳ ಪೆಗಸಸ್ ಬೇಹುಗಾರಿಕೆ ನಡೆದಿದೆ. ಪಟೇಲ್ ಐದು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಬಿಜೆಪಿಯ ಹಳೆಯ ಚಹರೆ. ವಾಜಪೇಯಿ ಮಂತ್ರಿಮಂಡಲದಲ್ಲೂ ಇದ್ದವರು. ಇತ್ತೀಚಿನ ಮಂತ್ರಿಮಂಡಲ ಪುನಾರಚನೆಯಲ್ಲಿ ಸಂಸ್ಕೃತಿಪ್ರವಾಸೋದ್ಯೋಮ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಖಾತೆಗಳ ಕಿತ್ತುಕೊಂಡು ಆಹಾರ ಸಂಸ್ಕರಣೆ ಮತ್ತು ಜಲಶಕ್ತಿಯ ರಾಜ್ಯ ಸಚಿವ ಸ್ಥಾನ ನೀಡಿ ಶಿಕ್ಷಿಸಿದ್ದು ಕುತೂಹಲಕರ.

ಸುಪ್ರೀಮ್ ಕೋರ್ಟಿನ ನಿವೃತ್ತ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೋಯ್ ಅವರ ಮೇಲೆ ಲೈಂಗಿಕ ಕಿರುಕುಳದ ಆಪಾದನೆ ಮಾಡಿದ್ದ ಹೆಣ್ಣುಮಗಳು ಮತ್ತು ಆಕೆಯ ಕುಟುಂಬದವರ ಫೆೀರ್ಟಿನುಗಳನ್ನೂ ಪೆಗಸಸ್ ಹೊಕ್ಕಿತ್ತು ಎಂಬುದು ಏನನ್ನು ಸಾರುತ್ತದೆ? ಸುಪ್ರೀಮ್ ಕೋರ್ಟು ಪ್ರಕರಣದ ವಿಚಾರಣೆ ನಡೆಸಿದ ವೈಖರಿ ಪೆಗಸಸ್ ಹಿನ್ನೆಲೆಯಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕುತ್ತದೆ. ನ್ಯಾಯಾಂಗದಲ್ಲಿ ಜನರು ಇರಿಸಿರುವ ವಿಶ್ವಾಸ ಮುಕ್ಕಾಗಬಾರದು ಎಂಬ ಕಳಕಳಿಯಿದ್ದರೆ ಪ್ರಶ್ನೆಗಳ ತುರ್ತು ನಿವಾರಣೆ ಒಳಿತು.

ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಯೊಬ್ಬರ ಫೆೀರ್ಟಿನನ್ನೂ ಪೆಗಸಿಸ್ ಬೇಹುಗಾರಿಕೆಗೆ ಒಳಪಡಿಸಲಾಗಿತ್ತು ಎಂಬ ಅತ್ಯಂತ ಆತಂಕದ ಸಂಗತಿಯನ್ನೂ ತನಿಖಾ ವರದಿಗಳು ಹೊರಹಾಕಿವೆ. ಮತ್ತೊಂದು ಪ್ರಮುಖ ಸಾಂವಿಧಾನಿಕ ಸಂಸ್ಥೆಯೂ ಪೆಗಸಸ್ ಬೇಹುಗಾರಿಕೆಯಿಂದ ಬಚಾವಾಗಿಲ್ಲ. ಚುನಾವಣಾ ವ್ಯವಸ್ಥೆ ಒಂದು ಬಗೆಯಲ್ಲಿ ಜನತಂತ್ರದ ಬುನಾದಿ. ಅದನ್ನು ಅಲುಗಿಸುವ ದುಸ್ಸಾಹಸ ಜರುಗಿದೆ. ಪ್ರತಿಪಕ್ಷಗಳು ಮತ್ತು ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ಭಿನ್ನಮತೀಯರ ಮೇಲೆ ನಡೆದಿರುವ ಪೆಗಸಸ್ ದಾಳಿಯೂ ಜನತಾಂತ್ರಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರ.

ಬೇಹುಗಾರಿಕೆ ತಂತ್ರಜ್ಞಾನ ವಿಕಾಸ ಮತ್ತು ಮಾರುಕಟ್ಟೆಯು ಜನತಂತ್ರಗಳಿಗೆ ಮಾರಕ. ಲಾಭ ಗಳಿಕೆಯೊಂದೇ ಪರಮ ಗುರಿಯಾಗಿರುವ ಅದರ ಸ್ವೇಚ್ಛಾಚಾರಕ್ಕೆ ಜವಾಬುದೇಹಿಯ ಅಂಕುಶ ಇರಿಸಬೇಕಿದೆ. ಎಂಬ ತನ್ನ ಕೃತಿಯಲ್ಲಿ ಇಂತಹ ಅಗತ್ಯವನ್ನು ಮನಗಾಣಿಸಿದ್ದಾನೆ.

ಗೂಢಚರ್ಯೆಗೆ ವಿದೇಶೀ ಕಂಪನಿಯ ನೆರವು ಪಡೆದಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ರಾಷ್ಟ್ರೀಯ ಭದ್ರತೆಗೆ ಒದಗಿದ ಗಂಡಾಂತರ. ವಿದೇಶೀ ಕಂಪನಿಗೆ ಹಸ್ತಗತವಾಗಿರುವ ನಮ್ಮ ದೇಶಕ್ಕೆ ಸಂಬಂಧಿಸಿರುವ ಬೇಹುಗಾರಿಕೆ ವಿವರಗಳನ್ನು ಇಟ್ಟುಕೊಂಡು ತೆಪ್ಪಗೆ ಕುಳಿತುಬಿಡುವರೇ? ಮಾಹಿತಿಯೇ ಶಕ್ತಿ ಎಂಬ ಇಂದಿನ ದಿನಮಾನದಲ್ಲಿ ಜಾಗತಿಕ ರಾಜಕೀಯದ ಹಿತಾಸಕ್ತಿಗಳಿಗೆ ಬೇಹುಗಾರಿಕೆ ಮಾಹಿತಿ ಗ್ರಾಸವಾಗದೆ ಉಳಿದೀತೇ? ನಮ್ಮ ದೇಶದ ಹಿತಾಸಕ್ತಿಗೆ ಹಾನಿ ಉಂಟು ಮಾಡುವುದಿಲ್ಲವೇ?

ಪೆಗಸಸ್ ಗ್ರಾಹಕ ದೇಶಗಳು ತಮ್ಮ ನಾಗರಿಕರ ಬೇಹುಗಾರಿಕೆಗೆಂದು ತಯಾರಿಸಿದ 50 ಸಾವಿರ ಮಂದಿಯ ಪಟ್ಟಿಯೊಂದು ಜನಪರ ಸುದ್ದಿಗಾರಿಕೆ ಸಂಸ್ಥೆಯೊಂದರ ಕೈವಶವಾಗಿದೆ. ನಾನಾ ಒತ್ತಡಗಳು ಮತ್ತು ಬೆದರಿಕೆಗಳ ಕಾರಣ ಪ್ರಕಟಣೆಯ ಬೆಳಕು ಕಾಣದೆ ಹೋಗುವ ಜನಹಿತದ ತನಿಖಾ ವರದಿಗಳನ್ನು ಪ್ರಕಟಿಸುವ ಮತ್ತು ಅಂತಹ ವರದಿಗಾರರಿಗೆ ರಕ್ಷಣೆ ನೀಡುವ ಉದ್ದೇಶದ ಸ್ವಯಂಸೇವಾ ಸಂಸ್ಥೆಯಿದು. ಪ್ಯಾರಿಸ್ ನಲ್ಲಿ ನೆಲೆಗೊಂಡಿರುವ ಅದರ ಹೆಸರು . ಸಾಮಾಜಿಕ ಬದ್ಧತೆಯುಳ್ಳ ಪತ್ರಕರ್ತರ ಸಮೂಹ ಒಟ್ಟು ಸೇರಿ ಹುಟ್ಟಿಹಾಕಿರುವ ಸಂಘಟನೆ.

ಪತ್ರಕರ್ತನೊಬ್ಬನನ್ನು ಹತ್ಯೆ ಮಾಡಿದಾಕ್ಷಣ, ಆತ ತಯಾರಿಸಿದ್ದ ತನಿಖಾವರದಿಯೂ ಸಾಯಬೇಕಿಲ್ಲ ಎಂಬುದು   ಧ್ಯೇಯವಾಕ್ಯ. ಸಾರ್ವಜನಿಕ ಆರ್ಥಿಕ ನೆರವಿನಿಂದ ನಡೆಯುವ ಲಾಭದ ಉದ್ದೇಶವಿಲ್ಲದ ಸಂಘಟನೆ. ಲಾರೆಂಟ್ ರಿಚರ್ಡ್ ಎಂಬ ಪತ್ರಕರ್ತ ಸಂಘಟನೆಯನ್ನು ಅರಂಭಿಸಿದ. ‘ಚಾರ್ಲಿ ಹೆಬ್ಡೋಹೆಸರಿನ ವಿಡಂಬನಾತ್ಮಕ ಫ್ರೆಂಚ್ ವಾರಪತ್ರಿಕೆಯ ತನ್ನ ಸಹೋದ್ಯೋಗಿಗಳು ಭಯೋತ್ಪಾದಕರ ದಾಳಿಗೆ ತುತ್ತಾದದ್ದನ್ನು ಕಣ್ಣಾರೆ ಕಂಡ ನಂತರ ರಿಚರ್ಡ್ ಇರಿಸಿದ ಹೆಜ್ಜೆಯಿದು. ಪತ್ರಿಕಾಂಗದ ಮೇಲೆ ಜರುಗುವ ಘೋರ ದಾಳಿಗಳ ಹಿನ್ನೆಲೆಯಲ್ಲಿ ಇಂತಹ ಸಂಘಟನೆಯೊಂದರ ಅಗತ್ಯವಿದೆ ಎಂದು ಅವನಿಗೆ ಅನ್ನಿಸಿತ್ತು.

ನಾಲ್ಕು ದಶಕಗಳ ಹಿಂದೆ ಅಮೆರಿಕೆಯ ಫೀನಿಕ್ಸ್ ನಲ್ಲಿ ಡಾನ್ ಬೋಲ್ಸ್ ಎಂಬ ವರದಿಗಾರ ಕಾರ್ ಬಾಂಬ್ ದಾಳಿಗೆ ಬಲಿಯಾದ. ಆತ ಸಿದ್ಧಪಡಿಸುತ್ತಿದ್ದ ಭೂಹಗರಣದ ತನಿಖಾ ವರದಿ ಅಪೂರ್ಣವಾಗಿ ಉಳಿಯಿತು. ಅಮೆರಿಕೆಯ 28 ಪತ್ರಿಕೆಗಳು ಮತ್ತು ಟೆಲಿವಿಷನ್ ಸ್ಟೇಷನ್ ಗಳ 38 ಮಂದಿ ಪತ್ರಕರ್ತರು ಒಟ್ಟು ಸೇರಿ ಕೆಲಸ ಮಾಡಿ ಡಾನ್ ಬೋಲ್ಸ್ ಅಪೂರ್ಣ ತನಿಖಾ ವರದಿಯನ್ನು ಪೂರ್ಣಗೊಳಿಸುತ್ತಾರೆ. ಅಭೂತಪೂರ್ವ ಘಟನೆ ಎತ್ತಿ ಹಿಡಿದ ಸಹಯೋಗದ ಯಶಸ್ಸು  ಹಿಂದಿನ ಪ್ರೇರಣೆ.

ಪೆಗಸಸ್ ದಾಳಿಗೆ ಗುರಿಯಾದವರ ಪಟ್ಟಿಯಲ್ಲಿದ್ದ ಭಾರತದ ಪತ್ರಕರ್ತರನ್ನು ಸಂಪರ್ಕಿಸಿ ಅವರ ಫೆÇೀನುಗಳಲ್ಲಿನ ಡೇಟಾವನ್ನು ಟೋರಾಂಟೋದ ಸಿಟಿಜನ್ ಪ್ರಯೋಗಶಾಲೆಯಲ್ಲಿ ವಿಧಿವಿಜ್ಞಾನದ ವಿಶ್ಲೇಷಣೆಗೆ ಒಳಪಡಿಸಿ ಖಚಿತಪಡಿಸಿದ್ದು ಇದೇ ಸಂಸ್ಥೆ. ಅಂತಾರಾಷ್ಟ್ರೀಯ ಕ್ಷಮಾದಾನ ಸಂಸ್ಥೆಯೂ ಕ್ರಿಯೆಯಲ್ಲಿ ಸಕ್ರಿಯ ಭಾಗಿದಾರ. ಸಂಸ್ಥೆಯ ಸೆಕ್ಯೂರಿಟಿ ಪ್ರಯೋಗಶಾಲೆಯಲ್ಲೂ ದಾಳಿಗೆ ಶಿಕಾರಿಯಾದ ಫೆೀರ್ಟಿನುಗಳ ಡೇಟಾ ವಿಶ್ಲೇಷಣೆ ಜರುಗಿತ್ತು. ಜಗತ್ತಿನ ಹದಿನೇಳು ಮೀಡಿಯಾ ಸದನಗಳ 80ಕ್ಕೂ ಹೆಚ್ಚು ಪತ್ರಕರ್ತರು ಸೇರಿ ಪೆಗಸಸ್ ದುರುಪಯೋಗದ ತನಿಖಾ ವರದಿಯನ್ನು ತಯಾರಿಸಿದ್ದಾರೆ. ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಫೆೀರ್ಟಿಗ್ ಪ್ರಾಜೆಕ್ಟ್ , ವಾಷಿಂಗ್ಟನ್ ಫೆೀರ್ಟಿಸ್ಟ್, ದಿ ಗಾರ್ಡಿಯನ್, ಭಾರತದ ದಿ ವೈರ್ ಕೂಡ 17 ಭಾಗೀದಾರ ಪಟ್ಟಿಯಲ್ಲಿ ಸೇರಿವೆ.

ಭಾರತದಲ್ಲಿ ದಾಳಿಯ ಹಿಂದಿರುವುದು ವಿದೇಶೀ ಸರ್ಕಾರವೇ ಅಥವಾ ಸ್ವದೇಶೀ ಸರ್ಕಾರವೇ ಎಂಬುದು ಅಧಿಕೃತವಾಗಿ ತಿಳಿಯಬೇಕಿದೆ. ತನ್ನದೇ ಪ್ರಜೆಗಳ ಮೇಲೆ ಸೈಬರಾಸ್ತ್ರ ದಾಳಿ ನಡೆಸಿದ್ದು ತಾನು ಹೌದೇ ಅಲ್ಲವೇ ಎಂಬ ಕುರಿತು ಭಾರತ ಸರ್ಕಾರ ಬಾಯಿ ಬಿಡುತ್ತಿಲ್ಲ. ತನ್ನ ಪ್ರಜೆಗಳ ನಾಗರಿಕ ಹಕ್ಕುಗಳು ಮತ್ತು ಖಾಸಗಿತನವನ್ನು ಗೌರವಿಸಿ ರಕ್ಷಿಸುವುದು ಆಯಾ ದೇಶದ ಸರ್ಕಾರಗಳ ಆದ್ಯ ಕರ್ತವ್ಯ. ಅನಧಿಕೃತ ಬೇಹುಗಾರಿಕೆ ನಡೆದಿಲ್ಲವೆಂದು ಜಾಣತನದ ಮುಸುಕಿನ ಹಿಂದೆ ಅವಿತುಕೊಳ್ಳುತ್ತಿದೆ. ಸರ್ಕಾರದ ಕೈವಾಡ ನಿಚ್ಚಳವಿದ್ದರೂ ಅದಕ್ಕೆ ಅಧಿಕೃತ ಮುದ್ರೆ ಲಭಿಸಿಲ್ಲ.

ಫ್ರ್ಯಾನ್ಸ್ ಸೇರಿದಂತೆ ಹತ್ತು ರಾಷ್ಟ್ರಗಳ ಮುಖ್ಯಸ್ಥರೂ ಪಟ್ಟಿಯಲ್ಲಿದ್ದಾರೆ. ಪೈಕಿ ಫ್ರ್ಯಾನ್ಸ್ ದೇಶದ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಅವರ ಮೊಬೈಲ್ ಫೆೀರ್ಟಿನ್ ಕೂಡ ಸೇರಿದೆ. ಅಂಶ ಹೊರಬಿದ್ದ ತಕ್ಷಣ ಅವರು ತಮ್ಮ ಮೊಬೈಲ್ ಫೆೀರ್ಟಿನನ್ನು ಬದಲಾಯಿಸಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್, ಇರಾಕ್ ಅಧ್ಯಕ್ಷ ಬರ್ಹಮ್ ಸಾಲೀಹ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೆೀರ್ಟಿಸಾ, ಮೊರೊಕ್ಕೋ ದೇಶದ ರಾಜ ಆರನೆಯ ಮೊಹಮ್ಮದ್ ಅವರೂ ಪೆಗಸಸ್ ಬೇಹುಗಾರಿಕೆಗೆ ಗುರಿಯಾಗಿದ್ದಾರೆ.

ಬೇಹುಗಾರಿಕೆ ಎಂಬುದು ರಾಜ್ಯಾಡಳಿತದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ವೇದಗಳಲ್ಲೂ ಕ್ರಿಯೆಯ ಪ್ರಸ್ತಾಪವಿದೆ. ಋಗ್ವೇದದಲ್ಲಿ ವರುಣದೇವನು ಗೂಢಚರರನ್ನು ಬಳಸುವ ಉಲ್ಲೇಖ ಉಂಟು. ರಾಮಾಯಣಮಹಾಭಾರತ ಮಹಾಕಾವ್ಯಗಳಲ್ಲಿ ವ್ಯವಸ್ಥಿತ ಗೂಢಚರ್ಯ ಜಾಲವನ್ನೇ ಕಾಣಬಹುದು. ಮನುಸ್ಮೃತಿ ಮತ್ತು ಕೌಟಿಲ್ಯನ ಅರ್ಥಶಾಸ್ತ್ರ ಕೃತಿಗಳು ಕುರಿತು ಸವಿವರ ಬೆಳಕು ಚೆಲ್ಲುತ್ತವೆ. ಎಲ್ಲ ಪ್ರಸ್ತಾಪಗಳು ಧರ್ಮ ಅಥವಾ ಕರ್ಮದ ನೈತಿಕ ತಳಹದಿಯನ್ನು ಹೊಂದಿವೆ. ಪ್ರತ್ಯೇಕ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಇರುವಂತೆ ಪ್ರಭುತ್ವಕ್ಕೂ ನೀತಿ ಸಂಹಿತೆ ಇರಬೇಕು. ಬೇಹುಗಾರಿಕೆ ಕ್ರಿಯೆಯೂ ಧರ್ಮಕರ್ಮದ ಮೂಲಭೂತ ನೈತಿಕತೆಗೆ ಒಳಪಟ್ಟು ನಡೆಯಬೇಕು ಎಂದು ವಿಧಿಸಲಾಗಿದೆ.

ಆದರೆ ಭಾರತ ಸರ್ಕಾರ ನಡೆಸುವ ಬೇಹುಗಾರಿಕೆಗೆ ಯಾವ ಅಂಕೆಶಂಕೆಯೂ ಇಲ್ಲ.

ದೇಶದ ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು, ಸಾರ್ವಜನಿಕ ಒಳಿತು ಸಾಧಿಸಲು ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಗೋಪ್ಯ ನಿಗಾ ಇರಿಸಿ ಅವರ ದೂರವಾಣಿ ಮಾತುಕತೆಗಳು ಮತ್ತು ಡಿಜಿಟಲ್ ಮಾಹಿತಿಗಳನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸುವ ಅಧಿಕಾರ ಸರ್ಕಾರಗಳಿಗೆ ಇದೆ. ಭಾರತೀಯ ಟೆಲಿಗ್ರಾಫ್ ಕಾಯಿದೆ, ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಹಾಗೆ ಮಾಡಲು ಕಾನೂನು ವಿಧಿವಿಧಾನಗಳಿವೆ. ಅವುಗಳನ್ನು ಅನುಸರಿಸಬೇಕು. ಬೇಕಾಬಿಟ್ಟಿ ನಡೆಸಲಾಗುವುದಿಲ್ಲ. ಆದರೆ ಸರ್ಕಾರಗಳು ಬೇಹುಗಾರಿಕೆಗೆ ವಿಧಿ ವಿಧಾನಗಳನ್ನು ಅನುಸರಿಸುವುದು ಅಪರೂಪ. ತಮ್ಮ ಅಳಿವು ಉಳಿವು ಮತ್ತು ಪ್ರತಿಪಕ್ಷಗಳೂ ಸೇರಿದಂತೆ ಹೋರಾಟಗಾರರ ನಡೆಗಳ ಮೇಲೆ ನಿಗಾ ಇರಿಸಲು ಬೇಕಾಬಿಟ್ಟಿ ಬಳಸುತ್ತಲೇ ಬಂದಿವೆ. ಸರ್ಕಾರಗಳ ಕೃತ್ಯಗಳು ಅನೈತಿಕತೆ, ಗೋಪ್ಯತೆ ಮತ್ತು ಮನಸೇಚ್ಛೆಯ ಕತ್ತಲಿನಲ್ಲಿ ಮುಳುಗಿ ಹೋಗಿವೆ. ಪಾರದರ್ಶಕತೆಗೆ ಬಹುದೂರ.

ಅಸೀಮಿತ ಬೇಹುಗಾರಿಕೆ ತಂತ್ರಜ್ಞಾನದ ಶಕ್ತಿ ಸಂಚಯವು ದೇಶವೊಂದನ್ನು ಕಾಯಮ್ಮಾಗಿ ಸರ್ವಾಧಿಕಾರದ ಕೈಗೆ ಇಡಬಲ್ಲದು. ಇಂತಹ ಸರ್ವಾಧಿಕಾರಕ್ಕೆ ಪ್ರತಿರೋಧವನ್ನು ಎಷ್ಟೇ ಗೋಪ್ಯವಾಗಿ ಕಟ್ಟಿದರೂ ಸರ್ಕಾರದ ಬೇಹುಗಾರಿಕೆಯ ಹದ್ದಿನ ಕಣ್ಣು ತಪ್ಪಿಸುವುದು ಅಸಾಧ್ಯವಾಗುತ್ತದೆ. ಅಂತಹ ಪ್ರಚಂಡ ಸಾಮಥ್ರ್ಯ ಬೇಹುಗಾರಿಕೆಯ ತಂತ್ರಜ್ಞಾನದ್ದು ಎಂಬ ಅರ್ಥದ ಮಾತುಗಳನ್ನು ಅಮೆರಿಕೆಯ ಸಂಸದ ಫ್ರ್ಯಾಂಕ್ ಚರ್ಚ್ ವಾಟರ್ ಗೇಟ್ ಹಗರಣದ ಸಂದರ್ಭದಲ್ಲಿ ಹೇಳಿದ್ದ.

ಬೇಹುಗಾರಿಕೆಯನ್ನು ತಮ್ಮ ಗೆಳೆಯ ಸುನಿಲ್ ಅಬ್ರಹಾಂ ಅವರು ಉಪ್ಪಿಗೆ ಹೋಲಿಸುತ್ತಿದ್ದರೆಂದು ಸಂಟರ್ ಫರ್ ಇಂಟರ್ನೆಟ್ ಸೊಸೈಟಿಯ ಸಹಸಂಸ್ಥಾಪಕ ಪ್ರಾಣೇಶ್ ಪ್ರಕಾಶ್ ನೆನಪಿಸಿಕೊಂಡಿದ್ದಾರೆ. ದೇಶದ ಆರೋಗ್ಯಕ್ಕೆ ಕೊಂಚ ಉಪ್ಪು ಬೇಕು. ಅತಿಯಾದರೆ ಅಪಾಯ. ಬೇಹುಗಾರಿಕೆಯೂ ಅಂತೆಯೇ. ರಾಷ್ಟ್ರೀಯ ಸುರಕ್ಷತೆ ಇಲ್ಲದೆ ಹೋದರೆ ಸಂವಿಧಾನ ನೀಡಿರುವ ಸ್ವಾತಂತ್ರ್ಯಗಳನ್ನು ಅನುಭವಿಸುವುದು ಅಸಾಧ್ಯ. ಆದರೆ ರಾಷ್ಟ್ರೀಯ ಸುರಕ್ಷತೆಗಾಗಿ ಸ್ವಾತಂತ್ರ್ಯಗಳ ಬೆಲೆ ತೆರಬೇಕು ಎನ್ನುವುದಾದರೆ ಅಂತಹ ರಾಷ್ಟ್ರೀಯ ಸುರಕ್ಷತೆಗೆ ಅರ್ಥವಿಲ್ಲ. ಅತಿಯಾದ ಮತ್ತು ಜವಾಬುದೇಹಿಯಲ್ಲದ ಬೇಹುಗಾರಿಕೆಯು ಖಾಸಗಿತನವನ್ನು, ಆಲೋಚನೆಅಭಿವ್ಯಕ್ತಿಯ ಸ್ವಾಂತ್ತ್ಯಗಳನ್ನು ಗಂಡಾಂತರಕ್ಕೆ ನೂಕುತ್ತದೆ. ಸಾಂವಿಧಾನಿಕ ಉದಾರವಾದಿ ಜನತಂತ್ರದ ಮೇಲೆ ಕಟ್ಟಲಾಗಿರುವ ಕಾನೂನಿನ ಆಡಳಿತದ ಅಡಿಪಾಯವನ್ನು ನುಚ್ಚುನೂರಾಗಿಸುತ್ತದೆ ಎಂದು ಅವರು ಹೇಳುತ್ತಾರೆ.

ಭಾರತದ ಹೆಸರಿಗೆ ಮಸಿಬಳಿಯುವ ಹುನ್ನಾರವಿದು ಎಂದು ಗೃಹಮಂತ್ರಿ ಅಮಿತ್ ಶಾ ಹೇಳಿದ್ದಾರೆ. ನಿಜವಿದ್ದೀತು. ಪಟ್ಟಿಯನ್ನು ಬಯಲು ಮಾಡಿರುವವರು ಭಾರತವೂ ಪೆಗಸಸ್ ಗ್ರಾಹಕ ದೇಶ ಎಂದು ಪಟ್ಟಿ ಮಾಡಿದ್ದಾರೆ. ಇವರ ನಡೆಯ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡಿವೆ ಎಂದೇ ಇಟ್ಟುಕೊಳ್ಳೋಣ. ಆದರೆ ಭಾರತೀಯ ನಾಗರಿಕರ ಫೆೀರ್ಟಿನುಗಳನ್ನು ಪೆಗಸಸ್ ಹೊಕ್ಕಿದ್ದಾದರೂ ಯಾಕೆ ಮತ್ತು ಹೇಗೆ, ಮಸಿ ಬಳಿಯಲು ಭಾರತವನ್ನು ಆರಿಸಿಕೊಂಡವರು ಯಾರು ಮತ್ತು ಯಾಕಾಗಿ ಎಂಬುದು ತಿಳಿಯಲೇಬೇಕಿರುವ ಗುರುತರ ಅಂಶ.

ಭಾರತದಲ್ಲಿ ಪ್ರತಿಪಕ್ಷಗಳು ಮತ್ತು ಭಿನ್ನಮತವನ್ನು ಅಳಿಸಿ ಹಾಕಲು ವಿದೇಶೀ ಶಕ್ತಿಗಳು ಯಾಕೆ ಕಾತರ ತೋರಿವೆ? ವಿದೇಶೀ ಶಕ್ತಿಗಳು ನಮ್ಮ ಜನತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನ ನಡೆಸಿದ್ದರೆ ಅದು ನಮ್ಮ ದೇಶದ ಸಾರ್ವಭೌಮತ್ವಕ್ಕೆ ಒದಗಿರುವ ಕುತ್ತು. ಬಲು ಕಳವಳದ ಗಂಭೀರ ಸಂಗತಿ. ಅದೂ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ, ಮೋದಿಯವರ ಮಂತ್ರಿಮಂಡಲದ ಸದಸ್ಯರು, ಚುನಾವಣಾ ಆಯೋಗದ ಮೇಲೆ ಬೇಹುಗಾರಿಕೆ ನಡೆದಿದೆ. ನಮ್ಮ ದೇಶದ ಒಳಗಿನವರ ಸಹಕಾರವಿಲ್ಲದೆ ವಿದೇಶೀ ಪೆಗಸಸ್ ಬೇಹುಗಾರಿಕೆ ಅಸಾಧ್ಯ. ನೆಹರೂ ಅವರು ನಿಧನರಾಗಿ ಬಹಳ ಕಾಲವಾಗಿದೆ. ಅವರು ಸಹಕರಿಸಿರುವುದು ಸಾಧ್ಯವಿಲ್ಲ.

ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯೊಂದೇ ರಹಸ್ಯವನ್ನು ಭೇದಿಸಬಲ್ಲದು. ಫ್ರಾನ್ಸ್ ಸರ್ಕಾರ ಈಗಾಗಲೇ ತನಿಖೆಗೆ ಮುಂದಾಗಿದೆ. ನಮ್ಮ ಕೇಂದ್ರ ಸರ್ಕಾರವೂ ದೊಡ್ಡಮನಸ್ಸು ಮಾಡಬೇಕು. ಜನತಾಂತ್ರಿಕ ಮೌಲ್ಯಗಳು ನಮ್ಮ ಸಂವಿಧಾನಕರ್ತರು ನೀಡಿರುವ ಬಹುದೊಡ್ಡ ಕೊಡುಗೆಗಳು. ಅವುಗಳನ್ನು ಫೆೀರ್ಟಿದು ಫೆೀರ್ಟಿಷಿಸದಿದ್ದರೆ ಭಾರತವೆಂಬ ಗಣರಾಜ್ಯಕ್ಕೆ ಉಳಿಗಾಲವಿಲ್ಲ. ನಿಟ್ಟಿನಲ್ಲಿ ಜನಶಕ್ತಿ ಎಚ್ಚೆತ್ತುಕೊಳ್ಳಬೇಕಿದೆ. ನ್ಯಾಯಾಂಗ ಸಕ್ರಿಯವಾಗಬೇಕಿದೆ.

ಪ್ರಾಚೀನ ಗ್ರೀಕ್ ದೈವ ಪೆÇಸೈಡನ್ ಎರಡು ಕುದುರೆಗಳಿಗೆ ತಂದೆಯೆನಿಸಿದ್ದ. ಶರವೇಗದಲ್ಲಿ ಧಾವಿಸುವ ಅರೀಯ್ಯಾನ್ ಡೀಮೀಟರ್ ಎಂಬ ದೇವತೆಯ ಮೇಲೆ ಬೇಹುಗಾರಿಕೆಯ ಪರಿಣಾಮ ಅಶ್ವವೊಂದು ಜನಿಸಿತ್ತು. ಮತ್ತೊಂದು ಅಶ್ವವು ಗಾರ್ಗನ್ ಮೆಡೂಸಾ ಎಂಬ ವಿಷೋರಗಗಳೇ ತಲೆಗೂದಲುಗಳೆನಿಸಿದ್ದ ರೆಕ್ಕೆಯ ಹೆಣ್ಣುದೇವತೆಯಿಂದ ಹುಟ್ಟಿತ್ತು. ತಂದೆಯ ಬಿಳಿಗಡ್ಡದಷ್ಟೇ ಬಿಳುಪಿನ ಮತ್ತು ತಾಯಿಯ ರೆಕ್ಕೆಗಳನ್ನು ಹೊಂದಿದ್ದ ಅದರ ಹೆಸರು ಪೆಗಸಸ್.

ಹಿಂದೂರಾಷ್ಟ್ರ ಸ್ಥಾಪನೆಯ ಗುರಿಯಿಟ್ಟುಕೊಂಡು ದೇಶದಲ್ಲಿ ಹಲವು ವರ್ಷಗಳಿಂದ ನಡೆದಿರುವ ರಾಜಕೀಯಸಾಮಾಜಿಕಸೈದ್ಧಾಂತಿಕ ಅಶ್ವಮೇಧ ಯಾಗಕ್ಕೆ ಗ್ರೀಕ್ ಕುದುರೆಯನ್ನು ಹಿಡಿದು ತಂದು ಮುಂದೆ ಬಿಡಲಾಗಿದೆಯೇ? ಕುದುರೆಯನ್ನು ಹಿಡಿದು ಕಟ್ಟಲಾಗುವುದೇ ಎಂಬುದನ್ನು ಕಾಲವೇ ಹೇಳಬೇಕಿದೆ.

*ಲೇಖಕರು ಹಿರಿಯ ಪತ್ರಕರ್ತರು; ಪ್ರಸ್ತುತ ದೆಹಲಿಯಲ್ಲಿದ್ದುಕೊಂಡೇ ಪತ್ರಿಕೆಗಳು, ವೆಬ್ ಸೈಟ್ ಗಳಿಗೆ ಫ್ರೀಲಾನ್ಸ್ ಬರೆಹ ಮತ್ತು ಪುಸ್ತಕಗಳ ಅನುವಾದದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ `ನ್ಯಾಯಪಥವಾರಪತ್ರಿಕೆಯ ಸಲಹಾ ಸಂಪಾದಕರು.

Leave a Reply

Your email address will not be published.