ಪ್ರಜಾಪ್ರಭುತ್ವದ ಅಂತ್ಯ ಸಮೀಪಿಸುತ್ತಿದೆಯೇ?

ಜಗತ್ತಿನಾದ್ಯಂತ ತೀವ್ರ ಬಲಪಂಥೀಯ ನಿಲುವು ಏಕಪ್ರಕಾರವಾಗಿ ಬೆಳೆಯುತ್ತಿದೆ. ಅಮೆರಿಕೆಯ ವಿಷಯಕ್ಕೆ ಬಂದರೆ ಸಮಸ್ಯೆ ಕೇವಲ ಒಬ್ಬ ಟ್ರಂಪ್ ಎನ್ನುವ ಮನುಷ್ಯನದಲ್ಲ, ಅದಕ್ಕಿಂತಲೂ ತುಂಬಾ ದೊಡ್ಡದು. ರೋಸೆನ್‍ಬರ್ಗ್ ಹೇಳುವುದೇ ನಿಜವಾಗಿದ್ದಲ್ಲಿ, ಆಧಿಕಾರಕ್ಕೆ ಯಾರೇ ಬರಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ.

ಲಿಸ್ಬನ್ನಿನಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ರಾಜಕೀಯ ಮನೋವಿಜ್ಞಾನಿಗಳ ವಾರ್ಷಿಕ ಸಮ್ಮೇಳನ ನಡೆಯಿತು. ನೂರಕ್ಕೂ ಹೆಚ್ಚು ಸಂಶೋಧಕರು ಸೇರಿದ್ದರು. ಅಲ್ಲಿ ಮಾತನಾಡುತ್ತಾ “ಪ್ರಜಾಪ್ರಭುತ್ವ ತನ್ನನ್ನೇ ತಿಂದುಕೊಂಡು ಬಿಡುತ್ತಿದೆ. ಅದು ಬಹುಕಾಲ ಉಳಿಯುವುದಿಲ್ಲ,” ಎಂದು ಪ್ರಖ್ಯಾತ ರಾಜಕೀಯ ಮನೋವಿಜ್ಞಾನಿ ಷಾನ್ ರೋಸೆನ್‍ಬರ್ಗ್ ಭವಿಷ್ಯ ನುಡಿದ. ಅವನು ಸಮ್ಮೇಳನದಲ್ಲಿ ಮಂಡಿಸಿದ ಲೇಖನದಲ್ಲಿ ಅಮೆರಿಕೆ ಮತ್ತು ಪಶ್ಚಿಮದ ಮೂಲಭೂತ ನಂಬಿಕೆಗಳನ್ನೇ ಪ್ರಶ್ನಿಸಿದ್ದ. ಸ್ವಾಭಾವಿಕವಾಗಿಯೇ ಅವನ ಮಾತುಗಳು ದೊಡ್ಡ ಗದ್ದಲವನ್ನೇ ಹುಟ್ಟುಹಾಕಿತು. ಅವನ ಮಾತುಗಳು ಪ್ರಮುಖವಾಗಿ ಅಮೆರಿಕೆಯನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಆಡಿದ್ದಂಥವಾದರೂ ಅವು ಭಾರತವೂ ಸೇರಿದಂತೆ ಸಾರ್ವತ್ರಿಕವಾಗಿ ಅನ್ವಯವಾಗುವಂತಹ ಮೌಲಿಕವಾದ ಮಾತುಗಳು. ವಾಷಿಂಗ್‍ಟನ್ ವಿಶ್ವವಿದ್ಯಾನಿಲಯದ ಹಿಸ್ಟರಿ ನ್ಯೂಸ್ ನೆಟ್‍ವರ್ಕನ ಸ್ಥಾಪಕನಾದ ರಿಂಕ್ ಶಂಕಮನ್ ರೋಸೆನ್‍ಬರ್ಗ್‍ನ ವಾದವನ್ನು ಸ್ಥೂಲವಾಗಿ ಹೀಗೆ ವರದಿಮಾಡಿದ್ದಾನೆ.

ಒಮ್ಮೆ ತುಂಬಾ ವ್ಯಾಪಕವಾಗಿದ್ದ ಪ್ರಜಾಸತ್ತಾತ್ಮಕ ವ್ಯವಸ್ಥೆ ಇಂದು ಅವಸಾನ ಹೊಂದುತ್ತಿದೆ. 20ನೇ ಶತಮಾನದ ಕೊನೆಯ ಭಾಗ ಪ್ರಜಾಪ್ರಭುತ್ವ ವ್ಯವಸ್ಥೆಯ ಸುವರ್ಣಯುಗವಾಗಿತ್ತು. ಒಂದು ಸಮೀಕ್ಷೆಯ ಪ್ರಕಾರ 1945ರಲ್ಲಿ ಜಗತ್ತಿನಲ್ಲಿ ಕೇವಲ 12 ಪ್ರಜಾಪ್ರಭುತ್ವ ವ್ಯವಸ್ಥೆಗಳಿದ್ದವು. ಶತಮಾನದ ಕೊನೆಯ ವೇಳೆಗೆ ಅವುಗಳ ಸಂಖ್ಯೆ 87ಕ್ಕೆ ಏರಿತ್ತು. ನಂತರ ಪರಿಸ್ಥಿತಿ ತಲೆಕೆಳಕಾಯಿತು. 21ನೇ ಶತಮಾನದ ಎರಡನೆಯ ದಶಕದಲ್ಲಿ ಪ್ರಜಾಪ್ರಭುತ್ವದ ಕಡೆಗಿನ ಚಲನೆ ದಿಢೀರೆಂದು ನಿಂತುಹೋಯಿತು. ಅಷ್ಟೇ ಅಲ್ಲ, ಹಲವು ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ವಿಮುಖಗೊಳ್ಳಲು ಪ್ರಾರಂಭಿಸಿದವು.

ಪೋಲಾಂಡ್, ಹಂಗರಿ, ಫ್ರಾನ್ಸ್, ಬ್ರಿಟನ್, ಇಟಲಿ, ಬ್ರೆಜಿಲ್ ಮತ್ತು ಅಮೆರಿಕೆಯಲ್ಲಿ ಬಲಪಂಥೀಯ ರಾಜಕಾರಣಿಗಳು ಅಧಿಕಾರ ಹಿಡಿದಿದ್ದಾರೆ ಅಥವಾ ಈ ದೇಶಗಳ ರಾಜಕೀಯ ವ್ಯವಸ್ಥೆ ಅತ್ತ ಕಡೆ ವಾಲುತ್ತಿದೆ. ಅವಕ್ಕೆ ಜನಸಾಮಾನ್ಯರ ಅಪಾರವಾದ ಬೆಂಬಲ ಸಿಗುತ್ತಿದೆ. “ಒಂದು ಲೆಕ್ಕಾಚಾರದ ಪ್ರಕಾರ 1998ರಲ್ಲಿ ಯುರೋಪಿನಲ್ಲಿ ಶೇಕಡ 4ರಷ್ಟು ಜನಸಾಮಾನ್ಯರು ಮಾತ್ರ ಬಲಪಂಥೀಯರನ್ನು ಬೆಂಬಲಿಸುತ್ತಿದ್ದರು. 2018ರ ಹೊತ್ತಿಗೆ ಹಾಗೆ ಬೆಂಬಲಿಸುವವರ ಸಂಖ್ಯೆ ಶೇಕಡ 13ಕ್ಕೆ ಏರಿತು. ಆದರೆ ನಿಜವಾಗಿಯೂ ಅಚ್ಚರಿ ಹುಟ್ಟಿಸುವ ಸಂಗತಿಯೆಂದರೆ ಜರ್ಮನಿಯಲ್ಲಿ, ಮಹಾನ್ ಆರ್ಥಿಕ ಹಿಂಜರಿಕೆ ಕೊನೆಗೊಂಡ ನಂತರವೂ ಈ ಪ್ರವೃತ್ತಿ ಹೆಚ್ಚಿದೆ. ಅಷ್ಟೇ ಅಲ್ಲ ಜರ್ಮನಿಗೆ ಬರುವ ವಲಸಿಗರ ಸಂಖ್ಯೆ ಕಡಿಮೆಯಾದ ನಂತರವೂ ಬಲಪಂಥೀಯರಿಗೆ ಜನಸಾಮಾನ್ಯರ ಮತಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.

ಹಲವು ಚಿಂತಕರು “ಚರಿತ್ರೆಯು ಮುಗಿಯಿತು” ಎಂದು ಮೂರು ದಶಕದ ಹಿಂದೆಯೇ ಹೇಳುವುದಕ್ಕೆ ಪ್ರಾರಂಭಿಸಿದ್ದರು. ಆದರೆ ಈಗ ರೋಸನ್Àಬರ್ಗ್ ಪ್ರಜಾಪ್ರಭುತ್ವವೇ ಸತ್ತುಹೋಗುತ್ತದೆ. ಅದರ ಕಾಲ ಮುಗಿಯಿತು ಎಂದು ಹೇಳುತ್ತಿದ್ದಾನೆ. ಹೀಗೆ ಹೇಳುತ್ತಿರುವ ಅವನು ಕೀಳ್ಮಟ್ಟದ ದೊಂಬಿ ಪ್ರಚೋದಕನಲ್ಲ. ಏಲ್, ಆಕ್ಸ್‍ಫರ್ಡ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯಗಳ ಪ್ರತಿಷ್ಠಿತ ಪದವಿಗಳನ್ನು ಹೊಂದಿರುವ ದೊಡ್ಡ ಸಮಾಜವಿಜ್ಞಾನಿ. ಅವನ ವಾದದ ಪ್ರಮುಖ ಅಂಶವನ್ನು ಸ್ಥೂಲವಾಗಿ ಹೀಗೆ ಸಂಗ್ರಹಿಸಬಹುದು:

ಜನರಿಂದ ಬಹಳಷ್ಟನ್ನು ನಿರೀಕ್ಷಿಸುತ್ತದೆ. ತಮಗಿಂತ ಭಿನ್ನವಾದ ನಿಲುವನ್ನು ಹೊಂದಿರುವವರನ್ನು ಗೌರವಿಸಬೇಕು ಮತ್ತು ತಮಗಿಂತ ಭಿನ್ನವಾಗಿ ಕಾಣುವವರನ್ನು ಆದರದಿಂದ ಕಾಣಬೇಕು ಎಂದೆಲ್ಲಾ ಅದು ನಿರೀಕ್ಷಿಸುತ್ತದೆ.

ಮುಂದಿನ ಕೆಲವು ದಶಕಗಳಲ್ಲಿ ಜಗತ್ತಿನಾದ್ಯಂತ ಪಾಶ್ಚಾತ್ಯ ಮಾದರಿಯ ದೊಡ್ಡ ಪ್ರಜಾಪ್ರಭುತ್ವಗಳು ಕ್ಷೀಣಿಸುತ್ತಾ ಹೋಗುತ್ತವೆ. ಹಾಗಾಗದೇ ಉಳಿದುಕೊಂಡ ದೇಶಗಳು ತಮ್ಮದೇ ಚಿಪ್ಪಿನಲ್ಲಿ ಉಳಿದುಕೊಂಡು ಬಿಡುತ್ತವೆ. ಪ್ರಜಾಪ್ರಭುತ್ವದ ಜಾಗದಲ್ಲಿ ಅಧಿಕಾರಕ್ಕೆ ಬರುವ ಬಲಪಂಥೀಯ ಜನಪ್ರಿಯ ಸರ್ಕಾರಗಳು ತೀರಾ ಸಂಕೀರ್ಣವಾದ ಸಮಸ್ಯೆಗಳಿಗೆ ಸರಳವಾದ ಉತ್ತರಗಳನ್ನು ಕೊಡುತ್ತವೆ.

ಜನರಿಗೆ ಪ್ರಜಾಪ್ರಭುತ್ವ ಎನ್ನುವುದು ತುಂಬಾ ಕಠಿಣವಾದ ವ್ಯವಸ್ಥೆ. ಅದು ಜನರಿಂದ ಬಹಳಷ್ಟನ್ನು ನಿರೀಕ್ಷಿಸುತ್ತದೆ. ತಮಗಿಂತ ಭಿನ್ನವಾದ ನಿಲುವನ್ನು ಹೊಂದಿರುವವರನ್ನು ಗೌರವಿಸಬೇಕು ಮತ್ತು ತಮಗಿಂತ ಭಿನ್ನವಾಗಿ ಕಾಣುವವರನ್ನು ಆದರದಿಂದ ಕಾಣಬೇಕು ಎಂದೆಲ್ಲಾ ಅದು ನಿರೀಕ್ಷಿಸುತ್ತದೆ.

ಲಭ್ಯವಿರುವ ಹೇರಳವಾದ ಮಾಹಿತಿಗಳನ್ನು ಪ್ರಜೆಗಳು ಜರಡಿಯಾಡಿ, ಕೆಟ್ಟದ್ದರಿಂದ ಒಳಯದನ್ನು, ಸುಳ್ಳಿನಿಂದ ಸತ್ಯವನ್ನು ಬೇರ್ಪಡಿಸಿಕೊಳ್ಳಬೇಕು ಎಂದು ಪ್ರಜಾಪ್ರಭುತ್ವ ನಿರೀಕ್ಷಿಸುತ್ತದೆ. ಹೀಗೆ ಮಾಡಲು ಚಿಂತನೆ, ಶಿಸ್ತು ಮತ್ತು ತರ್ಕ ಬೇಕಾಗುತ್ತದೆ. ಆದರೆ ದುರಾದೃಷ್ಟದ ಸಂಗತಿ ಎಂದರೆ ಆಧುನಿಕ ಸಾಮೂಹಿಕ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಈ ಗುಣಗಳು ಮನುಷ್ಯನಲ್ಲಿ ವಿಕಾಸಗೊಳ್ಳಲಿಲ್ಲ. ಮನುಷ್ಯರ ಚಿಂತನೆ ನೇರವಾಗಿ ಇರುವುದಿಲ್ಲ ಎಂದು ರೋಸೆನ್‍ಬರ್ಗ್ ವಾದಿಸುತ್ತಾನೆ. ಇದಕ್ಕೆ ಪೂರಕವಾಗಿ ಅವನು ಹಲವಾರು ಮನೋವೈಜ್ಞಾನಿಕ ಸಂಶೋಧನೆಗಳನ್ನು ಉಲ್ಲೇಖಿಸುತ್ತಾನೆ.

ಹಲವು ಬಗೆಯ ಪೂರ್ವಗ್ರಹಗಳು ಮನುಷ್ಯನ ಮಿದುಳನ್ನು ವಿಕೃತಗೊಳಿಸುತ್ತದೆ. ಈ ರೀತಿಯ ಮನಸ್ಸಿನ ವಿಕೃತಿ ತೀರಾ ಮೂಲಭೂತ ಮಟ್ಟದಲ್ಲಿ ಆಗಿರುತ್ತದೆ. ಉದಾಹರಣೆಗೆ ತಲೆಗೆ ಹೂಡಿಯನ್ನು (ಟೋಪಿಯಂಥದ್ದನ್ನು) ಧರಿಸಿರುವ ಕರಿಯನೊಬ್ಬನ ಚಿತ್ರ ನೋಡಿದ ಕೂಡಲೆ ಬಿಳಿಯರಲ್ಲಿ ಅಪ್ರಜ್ಞಾಪೂರ್ವಕವಾಗಿ ಜನಾಂಗೀಯ ಭಾವನೆ ಉಂಟಾಗುತ್ತದೆ. ಯಾವುದಾದರೂ ಸಾಕ್ಷ್ಯಗಳು ನಮ್ಮ ಉದ್ದೇಶಕ್ಕೆ ಸರಿಹೊಂದದೇ ಹೋದರೆ ಅವುಗಳನ್ನು ನಾವು ಬದಿಗೊತ್ತಿಬಿಡುತ್ತೇವೆ. ನಮ್ಮ ಪೂರ್ವಗ್ರಹಗಳನ್ನು ಸಮರ್ಥಿಸುವಂತಹ ಮಾಹಿತಿಗಳಿಗೆ ಆತುಕೊಳ್ಳುತ್ತೇವೆ. ನಾವು ತಪ್ಪು ಮಾಡಿದ್ದೇವೆ ಎನ್ನುವ ಮಾತುಗಳು ನಮ್ಮನ್ನು ತುಂಬಾ ಖಿನ್ನರನ್ನಾಗಿಸುತ್ತವೆ. ಅವನ ಪ್ರಕಾರ ನಮ್ಮ ಮನಸ್ಸುಗಳು ಆಧುನಿಕ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ. ಮನುಷ್ಯರು ಅದಕ್ಕೆ ಸಜ್ಜುಗೊಂಡಿಲ್ಲ.

ಪ್ರಜಾಪ್ರಭುತ್ವವಿರೋಧಿ ಭಾವನೆಗಳಿಗೆ ಬಲಿಯಾಗದಂತೆ ಹಲವು ಸಂಸ್ಥೆಗಳು ಜನರನ್ನು ಪರಂಪರಾಗತವಾಗಿ ಕಾಪಾಡಿಕೊಂಡು ಬಂದಿದ್ದವು. ಅವುಗಳ ಮೇಲೆ ಗಣ್ಯರಿಗೆ (ಎಲೈಟುಗಳಿಗೆ) ಇದ್ದ ಹಿಡಿತ ಇದಕ್ಕೆ ಬಹುಮಟ್ಟಿಗೆ ಕಾರಣವಾಗಿತ್ತು. ಆದರೆ ಇಂದು ಅಂತಹ ಸಂಸ್ಥೆಗಳ ಮೇಲೆ ಗಣ್ಯರಿಗೆ (ಎಲೈಟುಗಳಿಗೆ) ಹಿಡಿತ ತಪ್ಪಿಹೋಗುತ್ತಿದೆ. ಇದು ಬಲಪಂಥೀಯ ರಾಜಕಾರಣಿಗಳ ಯಶಸ್ಸಿಗೆ ಕಾರಣವಾಗಿದೆ. ಈಗ ಜನರೇ ಸ್ವತಃ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. ಬಲಪಂಥೀಯರು ಸೂಚಿಸುವ ಸರಳವಾದ ಪರಿಹಾರಗಳು ಅವರಿಗೆ ಆಕರ್ಷಕವಾಗಿ ತೋರುತ್ತವೆ. ಅವರು ಅದಕ್ಕೆ ಮಾರುಹೋಗುತ್ತಾರೆ. ಜಗತ್ತಿನಾದ್ಯಂತ ಆಗುತ್ತಿರುವುದೇ ಅದು. ಬಲಪಂಥೀಯ ನೇತಾರರರು ನೀಡುವ ಪರಿಹಾರಗಳು ಸಾಮಾನ್ಯವಾಗಿ ಪರಕೀಯರ ಬಗ್ಗೆ ದ್ವೇಷ (ಜನೋಫೋಬಿಯಾ), ಜನಾಂಗೀಯವಾದ ಮತ್ತು ನಿರಂಕುಶಪ್ರಭುತ್ವ ಆಗಿರುತ್ತದೆ.

ಸಾರ್ವಜನಿಕವಾಗಿ ನಡೆಯುತ್ತಿದ್ದ ಚರ್ಚೆಗಳು ಮತ್ತು ಸಂಸ್ಥೆಗಳ ಮೇಲೆ ಈ ಗಣ್ಯರ ಪ್ರಭಾವ ಬಹಳವಾಗಿ ಆಗುತ್ತಿತ್ತು. ಅವರ ಈ ಎಲ್ಲಾ ಕ್ರಿಯೆಗಳಿಂದ ಜನರಿಗೆ ಪ್ರಜಾತಾಂತ್ರಿಕ ಮೌಲ್ಯಗಳ ಮಹತ್ವ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿತ್ತು.

ರೋಸೆನ್‍ಬರ್ಗನ ಪ್ರಕಾರ ಗಣ್ಯರು ಎಂದರೆ, “ಆರ್ಥಿಕ, ರಾಜಕೀಯ ಹಾಗೂ ಬೌದ್ಧಿಕ ಪಿರಮಿಡ್ಡಿನ ಮೇಲು ತುದಿಯಲ್ಲಿ ಇರುವ ಸೆನೆಟರುಗಳು, ಪತ್ರಕರ್ತರು, ಪ್ರಾಧ್ಯಾಪಕರು, ನ್ಯಾಯಾಧೀಶರು ಮತ್ತು ಸರ್ಕಾರಿ ಅಧಿಕಾರಶಾಹಿಗಳು ಮುಂತಾದವರು. ಅವರಿಗೆ ಪ್ರಜಾತಾಂತ್ರಿಕ ಸಂಸ್ಕೃತಿ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬೆಂಬಲಿಸುವ ಉದ್ದೇಶವಿದೆ. ಅವರಿಗೆ ಹೀಗೆ ಬೆಂಬಲಿಸುವುದಕ್ಕೆ ಬೇಕಾದ ಅಧಿಕಾರವು ಇರುತ್ತದೆ.” ಸಾರ್ವಜನಿಕವಾಗಿ ನಡೆಯುತ್ತಿದ್ದ ಚರ್ಚೆಗಳು ಮತ್ತು ಸಂಸ್ಥೆಗಳ ಮೇಲೆ ಈ ಗಣ್ಯರ ಪ್ರಭಾವ ಬಹಳವಾಗಿ ಆಗುತ್ತಿತ್ತು. ಅವರ ಈ ಎಲ್ಲಾ ಕ್ರಿಯೆಗಳಿಂದ ಜನರಿಗೆ ಪ್ರಜಾತಾಂತ್ರಿಕ ಮೌಲ್ಯಗಳ ಮಹತ್ವ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿತ್ತು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜನ ಇಂದು ಗಣ್ಯರನ್ನು ಅವಲಂಭಿಸುತ್ತಿಲ್ಲ. ಸಾಮಾಜಿಕ ಮಾಧ್ಯಮ ಮತ್ತು ಹೊಸ ತಂತ್ರಜ್ಞಾನದಿಂದಾಗಿ, ಅಂತರ್ಜಾಲ ಬಳಸಲು ಬಳಕೆ ತಿಳಿದಿರುವ ಮತ್ತು ಬಳಸುವುದಕ್ಕೆ ಅವಕಾಶವಿರುವ ಯಾರು ಬೇಕಾದರೂ ತಮ್ಮದೇ ಆದ ಒಂದು ಬ್ಲಾಗ್‍ನ್ನು ಪ್ರಕಟಿಸಬಹುದು. ತಮ್ಮ ನಿಲುವಿನ ಕಡೆ ಜನರ ಗಮನ ಸೆಳೆಯಬಹುದು. ಅದು ನಿಜವಾಗಿರಬೇಕಾಗಿಲ್ಲ ಮತ್ತು ಅದು ಸುಳ್ಳು ವಾದಗಳನ್ನು ಆಧರಿಸಿರಬಹುದು. ಜನ ಉದಾಹರಣೆಗೆ ಅಮೆರಿಕೆಯ ಚುನಾವಣೆಯ ಸಂದರ್ಭದಲ್ಲಿ ವಾಷಿಂಗ್‍ಟನ್ ಡಿ.ಸಿ. ಪಿಜ್ಜಾ ಪಾರ್ಲರ್ ಕೆಳಮಾಳಿಗೆಯಲ್ಲಿ ಹಿಲರಿ ಕ್ಲಿಂಟನ್ ಮಕ್ಕಳ ಲೈಂಗಿಕ ದಂಧೆ ನಡೆಸುತ್ತಿದ್ದಾರೆ ಎಂಬ ಸುಳ್ಳು ಸುದ್ದಿ ದಳ್ಳುರಿಯಂತೆ ವ್ಯಾಪಕವಾಗಿ ಹರಡಿತು. ಅದು ಎಷ್ಟರ ಮಟ್ಟಿಗೆ ಪ್ರಭಾವಿಸಿತ್ತು ಅಂದರೆ ಕೊನೆಗೆ ಪಿಜ್ಜಾ ಪಾರ್ಲರಿನಲ್ಲಿ ಶೂಟಿಂಗೂ ನಡೆದುಹೋಯಿತು.

ಮೊದಲಾಗಿದ್ದರೆ ಅಂತಹ ಪಿತೂರಿಯ ಸುದ್ದಿಗಳನ್ನು ಗಣ್ಯರು (ಎಲಿಟಿಸ್ಟುಗಳು) ಯಶಸ್ವಿಯಾಗಿ ಅಲ್ಲಗಳೆದಿರಬಹುದಿತ್ತು. ಅವುಗಳಲ್ಲಿ ಇರುವ ಅಸಂಗತತೆಗಳನ್ನು ತೋರಿಸಿರಬಹುದಿತ್ತು. ಆದರೆ ಇಂದು ಈ ರೀತಿಯ ಗಣ್ಯರನ್ನು ಗಂಭೀರವಾಗಿ ಪರಿಗಣಿಸುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಜನ ಈಗ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಿಂದ ಪಡೆಯುತ್ತಾರೆ. ಅವರು ಪ್ರತಿಷ್ಠಿತ ಟಿವಿ ಛಾನಲ್ಲುಗಳನ್ನು ಅಥವಾ ವಾರ್ತಾಪತ್ರಿಕೆಗಳನ್ನು ಅವಲಂಬಿಸಿರುವುದಿಲ್ಲ. ಬದಲಾಗಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುತ್ತಾರೆ. ಟ್ರಂಪ್ ಚುನಾವಣೆಯ ಸಂದರ್ಭದಲ್ಲಿ ಟ್ರಂಪನ್ನು ಪೋಪ್ ಫ್ರಾನ್ಸಿಸ್ ಬೆಂಬಲಿಸಿದರು ಎಂಬ ಸುಳ್ಳು ಸುದ್ದಿಯನ್ನು ಹತ್ತು ಮಿಲಿಯನ್ ಜನ ಫೇಸ್‍ಬುಕ್ಕಿನಲ್ಲಿ ನೋಡಿದರಂತೆ. ವಿಪರ್ಯಾಸವೆಂದರೆ ಸಷಿಯಲ್ ಮೀಡಿಯಾ ಮತ್ತು ಅಂತರ್ಜಾಲದ ಮೂಲಕ ಸುದ್ದಿಸಮಾಚಾರಗಳು ಅನಾಯಾಸವಾಗಿ ಪ್ರಕಟಗೊಳ್ಳಲು ಅನುವು ಮಾಡಿಕೊಟ್ಟಿರುವ ಪ್ರಜಾತಾಂತ್ರಿಕ ಸ್ವಾತಂತ್ರ್ಯವೇ ನಮ್ಮನ್ನು ನಿರಂಕುಶವಾದಿಗಳನ್ನಾಗಿ ಮಾಡುತ್ತಿರುವುದು.

ಅವರ “ಆಲಿಗಾರ್ಕಿಕ್” “ಪ್ರಜಾಸತ್ತಾತ್ಮಕ ಅಧಿಕಾರ” ಅಥವಾ “ಪ್ರಜಾಸತ್ತಾತ್ಮಕ ನಿಯಂತ್ರಣ” ಜನತೆಯ ನಿರಂಕುಶ ಭಾವನೆಯನ್ನು ನಿಯಂತ್ರಣದಲ್ಲಿಟ್ಟಿತ್ತು. ಪ್ರಜಾಪ್ರಭುತ್ವದ ಕಠಿಣ ಬೇಡಿಕೆಗಳಿಗೆ ಹೋಲಿಸಿದರೆ, ಬಲಪಂಥೀಯ ಜನಪ್ರಿಯತೆ ಕಾಟನ್ ಕ್ಯಾಂಡಿ ಇದ್ದ ಹಾಗೆ. ನಮಗಿಂತ ಭಿನ್ನವಾಗಿ ಯೋಚಿಸುವ, ನಮಗಿಂತ ಭಿನ್ನವಾಗಿ ಕಾಣುವ ಜನರೊಂದಿಗೆ ನಮ್ಮ ದೇಶವನ್ನು ಹಂಚಿಕೊಂಡು ಬದುಕಬೇಕು ಎಂದು ಪ್ರಜಾಸತ್ತಾತ್ಮಕ ವ್ಯವಸ್ಥೆ ಬಯಸುತ್ತದೆ.

ರೋಸೆನ್‍ಬರ್ಗನ ಪ್ರಕಾರ ಹಿಂದಿನಿಂದಲೂ ಒಂದು ಪ್ರಜಾತಾಂತ್ರಿಕ ವ್ಯವಸ್ಥೆ ನಿಯಂತ್ರಣ ತಪ್ಪದಂತೆ ಸಮಾಜವನ್ನು ರಕ್ಷಿಸುತ್ತಾ ಬಂದವರು ಇಂತಹ ಗಣ್ಯರು. ಅವರ “ಆಲಿಗಾರ್ಕಿಕ್” “ಪ್ರಜಾಸತ್ತಾತ್ಮಕ ಅಧಿಕಾರ” ಅಥವಾ “ಪ್ರಜಾಸತ್ತಾತ್ಮಕ ನಿಯಂತ್ರಣ” ಜನತೆಯ ನಿರಂಕುಶ ಭಾವನೆಯನ್ನು ನಿಯಂತ್ರಣದಲ್ಲಿಟ್ಟಿತ್ತು. ಪ್ರಜಾಪ್ರಭುತ್ವದ ಕಠಿಣ ಬೇಡಿಕೆಗಳಿಗೆ ಹೋಲಿಸಿದರೆ, ಬಲಪಂಥೀಯ ಜನಪ್ರಿಯತೆ ಕಾಟನ್ ಕ್ಯಾಂಡಿ ಇದ್ದ ಹಾಗೆ. ನಮಗಿಂತ ಭಿನ್ನವಾಗಿ ಯೋಚಿಸುವ, ನಮಗಿಂತ ಭಿನ್ನವಾಗಿ ಕಾಣುವ ಜನರೊಂದಿಗೆ ನಮ್ಮ ದೇಶವನ್ನು ಹಂಚಿಕೊಂಡು ಬದುಕಬೇಕು ಎಂದು ಪ್ರಜಾಸತ್ತಾತ್ಮಕ ವ್ಯವಸ್ಥೆ ಬಯಸುತ್ತದೆ. ಪ್ರಜಾಪ್ರಭುತ್ವವು ಹೊಂದಾಣಿಕೆ ಮತ್ತು ವಿವಿಧತೆಯನ್ನು ಬೆಂಬಲಿಸುತ್ತದೆ. ಆದರೆ ಅದಕ್ಕೆ ಅಪಾರ ಸಹಿಷ್ಣುತೆ ಬೇಕಾಗುತ್ತದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಬಲಪಂಥೀಯ ವಕ್ತಾರರು ತುಂಬಾ ಸುಲಭವಾದ ಪರಿಹಾರಗಳನ್ನು ಸೂಚಿಸುತ್ತಾರೆ. ಜನರಿಗೆ ಅದು ಮೆಚ್ಚುಗೆಯೂ ಆಗುತ್ತಿದೆ.

ಆದರೆ ಆ ಪರಿಹಾರಗಳು ರಾಜಕೀಯವಾಗಿ ಸರಿಯಾಗಿರಬೇಕಾಗಿಲ್ಲ. ಅವುಗಳನ್ನು ಸೂಚಿಸುವ ಬಲಪಂಥೀಯ ವಕ್ತಾರರ ಮಾತುಗಳು ಸುಸಂಗತವಾಗಿಯೂ ಇರಬೇಕಾಗಿಲ್ಲ. ಉದಾಹರಣೆಗೆ ವಲಸಿಗರು ಅಮೆರಿಕದವರ ನೌಕರಿಗಳನ್ನು ಕಸಿದುಕೊಂಡಿದ್ದಾರೆ ಎಂದು ಈ ಬಲಪಂಥೀಯ ವಕ್ತಾರರು ಆರೋಪಿಸುತ್ತಾರೆ. ಆದರೆ ಅದೇ ಬಲಪಂಥೀಯರು ಈ ವಲಸಿಗರು ಸೋಮಾರಿಗಳು, ಕ್ಷೇಮಾಭಿವೃದ್ಧಿಯ ಸವಲತ್ತನ್ನು ಸೂರೆ ಹೊಡೆದು ಬದುಕುತ್ತಿದ್ದಾರೆ ಎಂದೂ ಅವರನ್ನು ಆಕ್ಷೇಪಿಸುತ್ತಾರೆ. ತಮ್ಮ ತೊಂದರೆಗಳಿಗೆ ಕಾರಣವೆಂದು ತೋರಿಸಿ, ದೂಷಿಸುವುದಕ್ಕೆ ಬಲಪಂಥೀಯರ ಬೆಂಬಲಿಗರಿಗೆ ಈಗ ಒಬ್ಬ ಶತ್ರು ಸಿಕ್ಕಿದ್ದಾನೆ. ಅವರಿಗೆ ಬೇಕಿರುವುದು ಅಷ್ಟೆ.

ಶ್ರೀಸಾಮಾನ್ಯ ಬೆಂಬಲಿತ ಬಲಪಂಥೀಯ ಪಕ್ಷ ನಿಮ್ಮಿಂದ ನಿರೀಕ್ಷಿಸೋದು ವಿಧೇಯತೆಯನ್ನು ಮಾತ್ರ. ಹೀಗೆ ವಿಧೇಯರಾದ ನಿಮ್ಮನ್ನು ಅವರ ರಾಷ್ಟ್ರೀಯತೆಯ ಕಲ್ಪನೆಗೆ ನಿಮ್ಮನ್ನು ಶರಣಾಗಿಸುತ್ತದೆ. ಇದು ಒಳ್ಳೆಯದಲ್ಲದೇ ಇರಬಹುದು. ಆದರೆ ಪ್ರಜಾಪ್ರಭುತ್ವದ ನಿರೀಕ್ಷೆಗೆ ಹೋಲಿಸಿಕೊಂಡರೆ ಇದು ಅಂತಹ ಹೊರೆಯಾಗುವ ನಿರೀಕ್ಷೆಯಲ್ಲ. ಪ್ರಜಾಪ್ರಭುತ್ವ ಬಯಸುವಂತೆ ಇಲ್ಲಿ ನೀವೇನು ಸ್ವತಂತ್ರವಾಗಿ ಯೋಚಿಸಬೇಕಾದ ತಾಪತ್ರಯವಿಲ್ಲ. ಒಬ್ಬ ನಿರಂಕುಶ ನಾಯಕನಿಗೆ ವಿಧೇಯತೆಯಿಂದ ಶರಣಾಗಿಬಿಡುವುದು ಸುಲಭ.

ಒಟ್ಟಾರೆಯಾಗಿ ಹೇಳುವುದಾದರೆ, ಹೆಚ್ಚಿನ ಅಮೆರಿಕನ್ನರಿಗೆ ಪ್ರಜಾಸತ್ತಾತ್ಮ ಸಂಸ್ಕೃತಿಯನ್ನು, ಸಂಸ್ಥೆಗಳನ್ನು, ಆಚರಣೆಗಳನ್ನು ಅಥವಾ ಪೌರತ್ವವನ್ನು ನಿಜವಾಗಿ ಅರ್ಥಮಾಡಿಕೊಳ್ಳಬೇಕಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅಥವಾ ಅದರ ಮೌಲ್ಯವನ್ನೂ ಕೂಡ ಅವರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. “ಪ್ರಜಾತಾಂತ್ರಿಕ ವ್ಯವಸ್ಥೆಯೊಂದು ಜನರಿಂದ ಏನನ್ನು ನಿರೀಕ್ಷಿಸುತ್ತದೆಯೋ ಆ ನಿರೀಕ್ಷೆಯನ್ನು ಅವರು ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ. ಅಥವಾ ಅದನ್ನು ಕುರಿತ ಅವರ ಗ್ರಹಿಕೆ ಸಮಂಜಸವಾಗಿಲ್ಲ. ಹಾಗಾಗಿ ಜನ ವ್ಯವಹರಿಸುವ ಕ್ರಮ, ಪ್ರಜಾತಾಂತ್ರಿಕ ಸಂಸ್ಥೆಗಳ ಕಾರ್ಯವೈಖರಿಗೆ ಮತ್ತು ಪ್ರಜಾತಾಂತ್ರಿಕ ಆಚರಣೆಗಳು ಹಾಗೂ ಮೌಲ್ಯಗಳಿಗೆ ತೊಂದರೆಯನ್ನೇ ಮಾಡುತ್ತದೆ.

ಈ ಕುರಿತು ಅವನನ್ನು ಹೆಚ್ಚಿನವರು ಪ್ರಶ್ನಿಸಿದಾಗ, ತನ್ನನ್ನೂ ಸೇರಿದಂತೆ ಪ್ರತಿಯೊಬ್ಬರಿಗೂ ಜ್ಞಾನವನ್ನು ಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಮಿತಿಗಳಿರುತ್ತವೆ ಮತ್ತು ಭಾವನಾತ್ಮಕ (ಇಮೋಷನಲ್) ಮಿತಿಗಳೂ ಇರುತ್ತವೆ ಎಂದು ರೋಸೆನ್‍ಬರ್ಗ್ ವಿವರಣೆ ನೀಡಿದನು.

ರೋಸೆನ್‍ಬರ್ಗ್ ನಿರಾಶಾವಾದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಸೋಲೊಪ್ಪಿಗೆಯ ಭಾವಕ್ಕೆ ಸಂಪೂರ್ಣವಾಗಿ ಶರಣಾಗಿದ್ದಾನೆ ಎನ್ನುವುದು ಸಮ್ಮೇಳನದಲ್ಲಿ ನೆರದಿದ್ದ ಎಲ್ಲರನ್ನೂ ಕಸಿವಿಸಿಗೊಳಿಸಿತು. ಜೊತೆಗೆ ಇತ್ತೀಚೆಗೆ ಅಕಾಡೆಮಿಗಳಲ್ಲಿ ಗಣ್ಯಪ್ರಜ್ಞೆಯನ್ನು ಅಷ್ಟಾಗಿ ಯಾರೂ ನೆಚ್ಚಿಕೊಳ್ಳದೇ ಇರುವಾಗ ರೋಸೆನ್‍ಬರ್ಗ್ ಗಣ್ಯಪ್ರಜ್ಞೆಗೆ ಅಷ್ಟೊಂದು ಗೌರವ ನೀಡಿದ್ದು ಸಭಾಸದರನ್ನು ಕೆರಳಿಸಿತ್ತು. ಈ ಕುರಿತು ಅವನನ್ನು ಹೆಚ್ಚಿನವರು ಪ್ರಶ್ನಿಸಿದಾಗ, ತನ್ನನ್ನೂ ಸೇರಿದಂತೆ ಪ್ರತಿಯೊಬ್ಬರಿಗೂ ಜ್ಞಾನವನ್ನು ಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಮಿತಿಗಳಿರುತ್ತವೆ ಮತ್ತು ಭಾವನಾತ್ಮಕ (ಇಮೋಷನಲ್) ಮಿತಿಗಳೂ ಇರುತ್ತವೆ ಎಂದು ರೋಸೆನ್‍ಬರ್ಗ್ ವಿವರಣೆ ನೀಡಿದನು.

ಪ್ರಾಧ್ಯಾಪಕರೂ ಸೇರಿದಂತೆ ಪ್ರತಿಯೊಬ್ಬರೂ ಅವೈಚಿಕವಾಗಿರುತ್ತಾರೆ (ಇರ್ಯಾಷನಲ್) ಎನ್ನುವುದನ್ನು ಮನೋವೈಜ್ಞಾನಿಕ ಸಂಶೋಧನೆ ಸಾಬೀತುಪಡಿಸಿದೆ ಎಂಬ ಅಂಶವನ್ನು ರೋಸೆನ್‍ಬರ್ಗ್ ಒಪ್ಪಿಕೊಂಡ. ಈ ಕುರಿತು ಪ್ರೇಕ್ಷಕರಿಗೆ ಮನದಟ್ಟು ಮಾಡಿಕೊಡುವುದು ರೋಸೆನ್‍ಬರ್ಗ್‍ಗೆ ನಿಜವಾಗಿಯೂ ಸಾಧ್ಯವಾಯಿತೋ ಇಲ್ಲವೋ ತಿಳಿಯದು. ಆದರೆ ಈ ವಿಚಾರಗಳು ಹಲವರಲ್ಲಿ ಇರುಸು ಮುರುಸು ಉಂಟುಮಾಡಿದ್ದಂತೂ ನಿಜ.

ಅದೇನೇ ಇರಲಿ, ಜಗತ್ತಿನಾದ್ಯಂತ ತೀವ್ರ ಬಲಪಂಥೀಯ ನಿಲುವು ಏಕಪ್ರಕಾರವಾಗಿ ಬೆಳೆಯುತ್ತಿದೆ. ಅಮೆರಿಕೆಯ ವಿಷಯಕ್ಕೆ ಬಂದರೆ ಸಮಸ್ಯೆ ಕೇವಲ ಒಬ್ಬ ಟ್ರಂಪ್ ಎನ್ನುವ ಮನುಷ್ಯನದಲ್ಲ, ಅದಕ್ಕಿಂತಲೂ ತುಂಬಾ ದೊಡ್ಡದು. ಉದಾರವಾದಿಗಳು ಟ್ರಂಪಿನ ಅಧ್ಯಕ್ಷತೆ ಕೊನೆಗೊಳ್ಳಬೇಕೆಂದು ಬಯಸುತ್ತಾರೆ. ರೋಸೆನ್‍ಬರ್ಗ್ ಹೇಳುವುದೇ ನಿಜವಾಗಿದ್ದಲ್ಲಿ, ಆಧಿಕಾರಕ್ಕೆ ಯಾರೇ ಬರಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ.

Leave a Reply

Your email address will not be published.