ಪ್ರಜಾಸತ್ತೆ ‘ಕಾಯು’ತ್ತಿದೆ!

ಹಿಂದೆ ಹಳ್ಳಿಗಳಲ್ಲಿ ಹಲವಾರು ಕಾಂಗ್ರೆಸ್ ಮನೆತನಗಳನ್ನು ಕಾಣಬಹುದಿತ್ತು. ಈ ಕುಟುಂಬಗಳ ಸದಸ್ಯರಿಗೆ ಕಾಂಗ್ರೆಸ್ ಜೊತೆಗೆ ತಲೆಮಾರುಗಳ ಅಚಲ ನಂಟು, ನಿಷ್ಠೆ. ಅವರ ಪಾಲಿಗೆ ಸ್ವಾತಂತ್ರ‍್ಯ, ದೇಶಪ್ರೇಮ ಮತ್ತು ಕಾಂಗ್ರೆಸ್ ಒಲವು ಬೇರೆಬೇರೆ ಆಗಿರಲಿಲ್ಲ. ನಮ್ಮೂರಲ್ಲಿ ನಮ್ಮದೂ ಅಂತಹದೇ ಮನೆತನ. ಆಗ ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಎಂ.ವೈ.ಘರ‍್ಪಡೆ ಅವರೇ ಖಾಯಂ ಹುರಿಯಾಳು, ಗೆಲುವು ಅವರಿಗೇ ಮುಡುಪು. ಸಂಡೂರು ಸಂಸ್ಥಾನದ ಮಾಜಿ ಅರಸು, ಪ್ರಜಾತಂತ್ರ ವ್ಯವಸ್ಥೆಯ ಪ್ರತಿನಿಧಿ ಘರ‍್ಪಡೆ ತಮ್ಮ ತಂಡದೊಂದಿಗೆ ನಮ್ಮ ಮನೆಗೆ ಬಂದರೆ ಅವರಿಗೆ ಉಪ್ಪಿಟ್ಟು ಸರಬರಾಜು ಮಾಡುವ ಉಮೇದು ನನ್ನದಾಗಿರುತ್ತಿತ್ತು. ನಾನಾಗ ರ‍್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯರ‍್ಥಿ.

ನಾನು ಬಾಲ್ಯದಲ್ಲಿ ಗಮನಿಸಿದಂತೆ ಹಳ್ಳಿಯ ಬಹುಪಾಲು ಜನ ಚುನಾವಣೆ ಬರುವುದೇ ಕಾಂಗ್ರೆಸ್ಸಿನ ಆಗಿನ ಆಕಳು-ಕರು ಚಿಹ್ನೆಗೆ ಮತ ಒತ್ತಲು ಎಂದು ಭಾವಿಸಿದ್ದರು. ಬಹುಶಃ ಇದಕ್ಕೆ ಸ್ವಾತಂತ್ರ‍್ಯೋತ್ತರ ಭಾರತದ ಆರಂಭಿಕ ಅವಧಿಯ ಭಾವನಾತ್ಮಕ ಸೆಲೆ ಕಾರಣವಿರಬಹುದು. ಜೊತೆಗೆ ಆಗಿನ ರಾಜಕೀಯ ಧುರೀಣರು ಹಳ್ಳಿಗರೊಂದಿಗೆ ಅಷ್ಟೇ ಸಲುಗೆ, ವಿಶ್ವಾಸ, ನಿಕಟ ಒಡನಾಟ ಹೊಂದಿದ್ದರು. ಘರ‍್ಪಡೆಯವರು ನಿಧನರಾಗುವ ಕೆಲವು ದಿನಗಳ ಮುಂಚೆ ನಾನು ವೃತ್ತಿರ‍್ತವ್ಯ ನಿಮಿತ್ತ ಅವರನ್ನು ಭೇಟಿಯಾಗಿದ್ದೆ. ನನ್ನ ಹೆಸರಿನ ಜೊತೆಗಿದ್ದ ಊರಿನ ಹೆಸರು ಗಮನಿಸಿ ನಮ್ಮ ಕುಟುಂಬದ ವಿವರ ಪಡೆದರು; ಊರಿನ ಹಲವರ ಹೆಸರುಗಳನ್ನು ನೆನಪಿಸಿಕೊಂಡು ವಿಚಾರಿಸಿದರು. ಎಷ್ಟೋ ರ‍್ಷಗಳ ಅಂತರವಿದ್ದರೂ ಹಳ್ಳಿಯ ಸಾಮಾನ್ಯ ರೈತನಾಗಿದ್ದ ನನ್ನ ತಂದೆಯನ್ನು ನೆನೆದು, ‘ಅಂತಹವರು ಈಗ ಸಿಗುವುದಿಲ್ಲ…’ ಎಂದು ಉದ್ಗರಿಸಿದ್ದು ನನ್ನನ್ನು ಈಗಲೂ ವಿಸ್ಮಯಗೊಳಿಸುವ ಸಂಗತಿ.

ಎಪ್ಪತ್ತರ ದಶಕದ ಉತ್ತರರ‍್ಧದಲ್ಲಿ ನಾನು ಹಾವೇರಿಯ ಮುನಿಸಿಪಲ್ ಹೈಸ್ಕೂಲಿನ ವಿದ್ಯರ‍್ಥಿ. ತರ‍್ತು ಪರಿಸ್ಥಿತಿ ನಂತರದ ಚುನಾವಣಾ ಸಂರ‍್ಭ. ರಾಷ್ಟ್ರೀಯ ಹೆದ್ದಾರಿ ಬಾಜು ಇದ್ದ ಹಾವೇರಿಗೆ ಆಗಿನ ಜನತಾ ಪಕ್ಷದ ಧುರೀಣರಾದ ವಾಜಪೇಯಿ, ಅಡ್ವಾನಿ, ಹೆಗಡೆ, ಜೋಷಿ, ಚಂದ್ರಶೇಖರ್, ವೀರೇಂದ್ರ ಪಾಟೀಲ, ಸರೋಜಿನಿ ಮಹಿಷಿ ಮೊದಲಾದ ಘಟಾನುಘಟಿ ನಾಯಕರೆಲ್ಲಾ ಸಾಲುಸಾಲಾಗಿ ಬಂದು ಮಾತಿನ ಮೋಡಿ ಮಾಡುತ್ತಿದ್ದರು. ಅವರೆಲ್ಲಾ ಭಾಷಣದಲ್ಲಿ ಸಿಡಿಗುಂಡು ಹಾರಿಸುವಾಗ ಅದ್ಹೇಗೋ ವೇದಿಕೆಗೆ ನುಸುಳಿ ಅವರ ಹಿಂದೆ ನಿಂತು ರೋಮಾಂಚನಗೊಳ್ಳುವುದು ನನಗೆ ರೂಢಿಯಾಗಿತ್ತು. ಆಗ ಇಂಗ್ಲಿಷ್ ಮನೆಪಾಠ ಮಾಡುತ್ತಿದ್ದ ಚೌಶೆಟ್ಟಿ ಗುರುಗಳು ಹೇಳಿಕೊಟ್ಟಿದ್ದ ‘ಟು ಸ್ಟಾಪ್ ಟ್ರೇನ್ ಪುಲ್ ಚೈನ್, ಟು ಸೇವ್ ಡೆಮಾಕ್ರಸಿ ಪುಲ್ ಇಂದಿರಾ’ ಘೋಷಣೆಯನ್ನು ಬಾಯಿಪಾಠ ಮಾಡಿಕೊಂಡಿದ್ದೆ. ಒಮ್ಮೆ ಜನತಾ ಪಕ್ಷದ ಮೆರವಣಿಗೆಯಲ್ಲಿ ರಂಟೆ ಹೊತ್ತ ರೈತನ ಚಿಹ್ನೆಗಳನ್ನು ಮೈತುಂಬಾ ಅಂಟಿಸಿಕೊಂಡಿದ್ದ ನನ್ನನ್ನು ಯಾರೋ ಹೆಗಲ ಮೇಲೆ ಹೊತ್ತುಕೊಂಡು ಕುಣಿದಿದ್ದರು!

ಈ ಐತಿಹಾಸಿಕ ಚುನಾವಣೆ ನಂತರ ‘ಕಾಂಗ್ರೆಸ್ಸಿನಿಂದ ಕತ್ತೆ ನಿಲ್ಲಿಸಿದರೂ ಗೆಲ್ಲುತ್ತದೆ’ ಎಂಬ ವಾಡಿಕೆ ಬದಲಾಗಿದ್ದನ್ನು ಕಂಡಿದ್ದೇವೆ. ಅಲ್ಲಿಂದ ಮುಂದಿನದು ಕಾಂಗ್ರೆಸ್ಸಿನ ಏಳುಬೀಳುಗಳ ಹಾದಿ. ಇದೀಗ ಈ ಪಕ್ಷ ಸೋತ ಕಾಲುಗಳಿಗೆ ಶಕ್ತಿ ತುಂಬಿಕೊಳ್ಳುವ ಯುಕ್ತಿ ಕಾಣದೆ ಪರದೇಶಿಯಂತೆ ನಿಂತಿರುವುದು ಅನುಕಂಪ ಮತ್ತು ಆತಂಕ ಹುಟ್ಟಿಸುತ್ತಿದೆ. ಇನ್ನೊಂದೆಡೆ ಬಿಜೆಪಿ ತಡೆ ಇಲ್ಲದೆ ಓಡುತ್ತಿದೆ. ನಡುವೆ ನರಳುತ್ತಿರುವುದು ಪ್ರಜಾತಂತ್ರದ ಪ್ರಾಥಮಿಕ ಮೌಲ್ಯಗಳು.

ಕೆಲವೇ ದಶಕಗಳಲ್ಲಿ ಪಕ್ಷಗಳೇನೋ ಪಾತ್ರ ಬದಲಿಸಿಕೊಂಡವು. ಆದರೆ ಕಾಲದ ಬೇಡಿಕೆಗನುಸಾರವಾಗಿ ಮತದಾರ ತನ್ನ ಆಯ್ಕೆಯನ್ನು ಮರುಪರಿಶೀಲನೆಗೆ ಒಳಪಡಿಸುವ ಸಂದಿಗ್ಧದಲ್ಲಿ ಸಿಲುಕಿದ್ದಾನೆ. ಸಮಯದ ಜರಡಿಯಲ್ಲಿ ಈ ಎರಡೂ ಪಕ್ಷಗಳ ಕಾಳುಗಳು ಉರುಳಿ ಜೊಳ್ಳು ಜಾಹೀರಾಗಿದೆ. ಹಾಗಾಗಿ ಸ್ಥಾಪಿತ ಪಕ್ಷಗಳಿಗೆ ಹೊರತಾದ ಹೊಚ್ಚಹೊಸ ‘ರ‍್ಯಾಯ’ ರಾಜಕೀಯ ಸ್ವರೂಪ, ಸಂಸ್ಕೃತಿಯ ಹುಟ್ಟಿಗೆ ಭಾರತದ ಪ್ರಜಾಸತ್ತೆ ‘ಕಾಯು’ತ್ತಿದೆ!

Leave a Reply

Your email address will not be published.