“ಪ್ರಾಣಗಳನ್ನು ರಕ್ಷಿಸಿ, ಯಾತನೆಯನ್ನು ನಿವಾರಿಸಿ”

– ಸಂದೀಪ ಪುಕನ್

“ಕಾಂಗ್ರೆಸ್ ಪಕ್ಷವು ಈ ಸಂಕಷ್ಟದ ಸಮಯದಯಲ್ಲಿ ಸಾಧ್ಯವಿರುವ ಎಲ್ಲಾ ನೆರವನ್ನು ನೀಡುತ್ತಿದೆ ಮತ್ತು ನೀಡುವ ನೆರವನ್ನು ಯಾವ ಪ್ರಚಾರವು ಇಲ್ಲದೆ ಮಾಡುವುದನ್ನು ಬಯಸುತ್ತದೆ.”

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು `ದಿ ಹಿಂದು’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ದೇಶದ ಜನರ ಜೀವಗಳನ್ನು ರಕ್ಷಿಸಲು ಹಾಗು ಅವರನ್ನು ನೋವಿನಿಂದ ಪಾರು ಮಾಡಲು ಒಂದು ಅಂಶದ ಕಾರ್ಯಕ್ರಮದ ಅವಶ್ಯಕತೆ ಈ ದೇಶಕ್ಕೆ ಈ ವಿಪತ್ತಿನ ಕಾಲದಲ್ಲಿ ಜರೂರಿದೆ ಎಂದು ಮತ್ತು ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಪಕ್ಷ-ಭೇದ ಮರೆತು ಒಗ್ಗಟ್ಟಿನಿಂದ ಸಮರೋಪಾದಿಯಾಗಿ ಕೆಲಸ ಮಾಡಬೇಕೆಂಬ ಮನವಿಯನ್ನು ಮಾಡಿದರು.

”ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡಬೇಕು ಮತ್ತು ಅಗತ್ಯವಿರುವ ಎಲ್ಲಾ ನೆರವನ್ನು ಸಂಗ್ರಹಿಸಿ, ಸಂಕಷ್ಟದಲ್ಲಿರುವ ಮಿಲಿಯನ್ ಗಟ್ಟಲೆ ಜನರಿಗೆ ತಲುಪಿಸಬೇಕಾಗಿದೆ. ಯೋಜಿತ ಲಸಿಕೆಯ ಕಾರ್ಯಕ್ರಮವು ತ್ವರಿತವಾಗಿ ವಿಸ್ತರಿಸುವಂತೆ ನೋಡಿಕೊಳ್ಳಬೇಕಾಗಿದೆ. ಲಸಿಕೆಯ ಪೂರೈಕೆಯನ್ನು ಮತ್ತು ವ್ಯಾಕ್ಸಿನೇಶನ್ ಪ್ರಮಾಣವನ್ನು ಹೆಚ್ಚಿಸುವುದು ಈ ಕ್ಷಣದ ಜರೂರು. ಇದಕ್ಕೆ ರಾಷ್ಟ್ರ ಮಟ್ಟದ ಪ್ರಯತ್ನದ ಅವಶ್ಯಕತೆ ಇದೆ.” ಎಂದು ಸೋನಿಯಾ ಗಾಂಧಿಯವರು ಒತ್ತಿ ಹೇಳಿದರು.

ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಆರೋಪ-ಪ್ರತ್ಯಾರೋಪಗಳಿಂದ ದೂರ ಉಳಿದು, ಜನರ ನೋವು ನೀವಾರಿಸುವ ಜವಬ್ದಾರಿಯನ್ನು ಪಕ್ಷದ ನಾಯಕರುಗಳಿಗೆ ವಹಿಸಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಿರುವ ಎಲ್ಲಾ ನೆರವನ್ನು ನೀಡಲು ನಾವು ಸಿದ್ಧರಿರುವುದಾಗಿ ಅವರು ಹೇಳಿದರು.

ರಾಷ್ಟ್ರೀಯ ವಿಪತ್ತಿನ/ ಬಿಕ್ಕಟ್ಟಿನ ಸಂದರ್ಭಗಳಲ್ಲಿ ”ರಾಜಕೀಯ ಇಚ್ಚಾಶಕ್ತಿ”ಯು / ”ರಾಜಕೀಯ ಸಹಕಾರವು” ಕೇಳಿಸಿಕೊಳ್ಳುವ ಸಂಯಮದಿಂದ ರೂಪಗೊಳ್ಳುತ್ತದೆಯೆ ಹೂರತು ”ನನಗೆಲ್ಲ ತಿಳಿದಿದೆ ಎಂಬ ಅಹಂನಿಂದ ಅಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

‘’ಕೇಂದ್ರ ಸರಕಾರವು ಕೆಲವು ತಿಂಗಳುಗಳ ಹಿಂದೆ ಕೊರೊನ ಮಹಾಮಾರಿಯ ವಿರುದ್ಧ ಯುದ್ಧ ಜಯಿಸಿದವರಂತೆ ಸಂಭ್ರಮಾಚರಣೆಯಲ್ಲಿ ತೊಡಗಿತು. ಸಂಸತ್ತಿನ ಸ್ಥಾಯಿ ಸಮಿತಿ ಮಾಡಿದ ಎಲ್ಲಾ ಮುನ್ನೆಚ್ಚರಿಕೆಯ ಶಿಫಾರಸುಗಳನ್ನು ನಿರ್ಲಕ್ಷಿಸಿತು. ಫೆಬ್ರವರಿ ಮಾಹೆಯ ಮೊದಲ ಭಾಗದಲ್ಲಿ, ಭಾರತದ ಮತ್ತು ವಿದೇಶದಲ್ಲಿನ ತಜ್ಞರು ಪ್ರಪಂಚದ ವಿವಿಧ ಭಾಗಗಳಲ್ಲಿನ ಪರಿಸ್ಥಿತಿಯನ್ನು ಅವಲೊಕಿಸಿ ಭಾರತಕ್ಕೆ ಎಚ್ಚರಿಕೆಯನ್ನು ನೀಡುತ್ತಲೆ ಬಂದರು. ಆದರೆ ನಾವು ಅಹಂಕಾರ ಮತ್ತು ಸಂತೃಪ್ತಿಯ ಜಾಲದಲ್ಲಿ ಸಿಲುಕಿದ್ದೆವು. ಸೂಪರ್ ಸ್ಪ್ರೆಡರ್ ಕಾರ್ಯಕ್ರಮಗಳನ್ನು ಯಾವುದೇ ಮುಂದಾಲೋಚನೆಯಿಲ್ಲದೆ ಹಮ್ಮಿಕೊಳ್ಳಲಾಯಿತು ಮತ್ತು ಅವುಗಳು ತಂದೊಡ್ಡುವ ಅಪಾಯಗಳನ್ನು ನಿರ್ಲಕ್ಷಿಸಲಾಯಿತು’’ ಎಂದು ಅವರು ಹೇಳಿದರು.

ವ್ಯಾಕ್ಸಿನ್ ನೀತಿಯನ್ನು ಅಮಾನವೀಯ ರೀತಿಯಲ್ಲಿ ಪ್ರಧಾನಿಗಳು ರಾಜಕೀಯಗೊಳಿಸಿದರು ಎಂದು ಆರೋಪಿಸಿದರು. ವಸ್ತುಸ್ಥಿತಿಯನ್ನು ಮರೆಮಾಚಲು ಕೋವಿಡ್ – 19 ನೆಪವನ್ನು ಸರಕಾರ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಗುಜರಾತ್, ಮಧ್ಯಪ್ರದೇಶ, ಮತ್ತು ಉತ್ತರಪ್ರದೇಶ ಸರಕಾರಗಳು ಈ ನೆಪವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿವೆ ಎಂದರು.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಅಂತರಾಷ್ಟ್ರೀಯ ಸಮುದಾಯ ಭಾರತದ ನೆರವಿಗೆ ಬರುತ್ತಿರುವುದು ಶ್ಲಾಘನೀಯವಾದುದ್ದು; ಆದರೆ ಇದನ್ನು ಪ್ರಧಾನಿಗಳ ವರ್ಚಸ್ಸನ್ನು ”ವೃದ್ಧಿಸಲು” ಹೊಗಳಿಕೆಗೆ ಬಳಸುತ್ತಿರುವುದು ಖೇದನೀಯ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರವು ಪ್ರಾಶಸ್ತ್ಯ ನೀಡುವುದರಲ್ಲಿ ಎಡವಿದ್ದು, ಸೆಂಟ್ರಲ್ ವಿಸ್ತಾದಂತಹ ಯೋಜನೆಗಳು ಇಂದು ಭಾರತವನ್ನು ವಿದೇಶಿ ನೆರವನ್ನು ಅವಲಂಬಿಸುವಂತೆ ಮಾಡಿವೆ ಎಂದು ಆರೋಪಿಸಿದರು.

ಸೋನಿಯಾ ಗಾಂಧಿ ಸಂದರ್ಶನ

ಕೊರೊನದ 2ನೆಯ ಅಲೆಯು ದೇಶದ  ಜನತೆಯನ್ನು ತತ್ತರಿಸುವಂತೆ ಮಾಡಿದ್ದು, ದೇಶವು ಇತ್ತೀಚಿನ ಇತಿಹಾಸದಲ್ಲೆ ಎಂದೂ ಕಂಡರಿಯದ ಭೀಕರ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಎದುರುಸುತ್ತಿದೆ. ಈ ಬಿಕ್ಕಟ್ಟಿಗೆ ನಿಮ್ಮ ಪ್ರಕಾರ ಯಾರು ಅಥವಾ ಏನು ಕಾರಣ?

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲಾ ಪಕ್ಷಗಳು ಪಕ್ಷ-ಭೇದ ಮರೆತು ಒಗ್ಗಟ್ಟಿನಿಂದ ಸಮರೋಪಾದಿಯಾಗಿ ಕೆಲಸ ಮಾಡಬೇಕು. ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡಬೇಕು ಮತ್ತು ಅಗತ್ಯವಿರುವ ಎಲ್ಲಾ ನೆರವನ್ನು ಸಂಗ್ರಹಿಸಿ, ಸಂಕಷ್ಟದಲ್ಲಿರುವ ಮಿಲಿಯನ್ ಗಟ್ಟಲೆ ಜನರಿಗೆ ತಲುಪಿಸಬೇಕಾಗಿದೆ. ಯೋಜಿತ ವ್ಯಾಕ್ಸಿನೇಶನ್ ಕಾರ್ಯಕ್ರಮವು ತ್ವರಿತವಾಗಿ ವಿಸ್ತರಿಸುವಂತೆ ನೋಡಿಕೊಳ್ಳಬೇಕಾಗಿದೆ. ವ್ಯಾಕ್ಸಿನ್ ಪೂರೈಕೆಯನ್ನು ಮತ್ತು ವ್ಯಾಕ್ಸಿನೇಶನ್ ಪ್ರಮಾಣವನ್ನು ಹೆಚ್ಚಿಸುವುದು ಈ ಕ್ಷಣದ ಜರೂರು.

ಆದರೆ ನಾನು ಹೇಳುವುದೇನೆಂದರೆ, ಕೇಂದ್ರಸರಕಾರವು ಕೆಲವು ತಿಂಗಳುಗಳ ಹಿಂದೆ ಕೊರೊನ ವಿರುದ್ಧ ಸಮರ ಜಯಿಸಿದವರಂತೆ ಸಂಭ್ರಮಿಸಿದರು ಮತ್ತು ತಮ್ಮೆದುರಿದ್ದ ವಸ್ತುಸ್ಥಿತಿಯನ್ನು ಮರೆಮಾಚಿದರು. ಸಂಸತ್ತಿನ ಸ್ಥಾಯಿ ಸಮಿತಿಯು ರೂಪಿಸಿದ ಎಲ್ಲಾ ಮುನ್ನೆಚ್ಚರಿಕೆಯ ಶಿಫಾರಸುಗಳನ್ನು ನಿರ್ಲಕ್ಷಿಸಿತು. ಫೆಬ್ರವರಿ ಮಾಹೆಯ ಮೊದಲ ಭಾಗದಲ್ಲಿ, ಭಾರತದ ಮತ್ತು ವಿದೇಶದಲ್ಲಿನ ತಜ್ಞರು ಪ್ರಪಂಚದ ವಿವಿಧ ಭಾಗಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಭಾರತಕ್ಕೆ ಎಚ್ಚರಿಕೆಯನ್ನು ನೀಡುತ್ತಲೆ ಬಂದರು. ಆದರೆ ನಾವು ಅಹಂಕಾರ ಮತ್ತು ಸಂತೃಪ್ತಿಯ ಜಾಲದಲ್ಲಿ ಸಿಲುಕಿದ್ದೆವು. ಸೂಪರ್ ಸ್ಪ್ರೆಡರ್ ಕಾರ್ಯಕ್ರಮಗಳನ್ನು ಯಾವುದೇ ಮುಂದಾಲೋಚನೆಯಿಲ್ಲದೆ ಹಮ್ಮಿಕೊಳ್ಳಲಾಯಿತು ಮತ್ತು ಅವುಗಳು ತಂದೊಡ್ಡುವ ಅಪಾಯಗಳನ್ನು ನಿರ್ಲಕ್ಷಿಸಲಾಯಿತು.

ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಪರಸ್ಪರ ಪ್ರತ್ಯಾರೋಪದಲ್ಲಿ ತೊಡಗದೆ ಮತ್ತು ಯಾರನ್ನೊ ಜವಾಬ್ದಾರರನ್ನಾಗಿ ಮಾಡದೆ; ಜನರ ಜೀವಗಳನ್ನ ಉಳಿಸುವುದು ಅತಿ ಮುಖ್ಯವಾದುದ್ದು ಎನ್ನುವ ಒಂದು ವಾದದ ಬಗ್ಗೆ ತಮ್ಮ ಅಭಿಪ್ರಾಯವೇನು?

ಈ ವಾದವನ್ನು ನಾನು ಒಪ್ಪುತ್ತೇನೆ. ಈ ಸಂದರ್ಭದಲ್ಲಿ ಒಂದು ಅಂಶದ ಕಾರ್ಯಕ್ರಮವೆಂದರೆ ಜನರ ಪ್ರಾಣಗಳನ್ನು ಕಾಪಾಡುವುದು, ಅವರ ನೋವು ಮತ್ತು ಆತಂಕಗಳನ್ನು ನಿವಾರಿಸುವುದು, ಹಾಗೆಯೇ ಆಕ್ಸಿಸನ್, ಬೆಡ್, ಅಗತ್ಯ ವೈದ್ಯಕೀಯ ಸವಲತ್ತುಗಳ ಕೊರತೆಯನ್ನು ನಿವಾರಿಸುವುದು. ಈ ಒಂದು ಅಂಶದ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷವು ಪ್ರತಿಯೊಂದು ರಾಜ್ಯಗಳಲ್ಲಿ ಹಮ್ಮಿಕೊಂಡಿದೆ. ನಮಗೆ ಆಗುವ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು.

ನಾವು ತಳಮಟ್ಟದಲ್ಲಿ ಮಾಡಲಾಗುತ್ತಿರುವ ಈ ಕೆಲಸಗಳಿಗೆ ರಾಜಕೀಯ ಪ್ರಚಾರ ಪಡೆಯುವ ಸಮಯ ಇದಲ್ಲ. ಇದು ನಮ್ಮ ಕರ್ತವ್ಯಗಳನ್ನು ಯಾವುದೇ ಪ್ರಚಾರವಿಲ್ಲದೆ ಮಾಡುವ ಸಮಯ. ಈ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಉದಾರವಾಗಿ ಬಂದಂತಹ ಅಂತರಾಷ್ಟ್ರೀಯ ಸಮುದಾಯಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ.

ಆದರೆ ನೋವಿನ ಸಂಗತಿಯೆಂದರೆ ಇದನ್ನು ಪ್ರಧಾನ ಮಂತ್ರಿಯ ಗುಣಗಾನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅದರೆ ವಾಸ್ತವದಲ್ಲಿ ಈ ಸರಕಾರವು ಅಶಕ್ತ, ಸಂವೇದನಾರಹಿತ, ಪ್ರಾಮುಖ್ಯ ತಿಳಿಯದ್ದಾಗಿದೆ. ಉದಾಹರಣೆಗೆ, ಸೆಂಟ್ರಲ್ ವಿಸ್ಥಾ ಪ್ರೊಜೆಕ್ಟ್ ನಂತಹ ದುಂದುವೆಚ್ಚದ ಯೋಜನೆಗಳ ಅವಶ್ಯಕತೆ ಇಂತಹ ಪರಿಸ್ಥಿತಿಯಲ್ಲಿ ಇತ್ತಾ? ಅನೇಕ ವ್ಯಕ್ತಿಗಳು, ಸಂಘಸಂಸ್ಥೆಗಳು ಜನರಿಗೆ ಅಗತ್ಯ ನೆರವನ್ನ ನೀಡಿದ್ದಾರೆ. ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ಅನೇಕ ಸವಾಲುಗಳನ್ನು ಎದುರಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಋಣವನ್ನು ಎಂದಿಗೂ ತೀರಿಸಲಾಗದು.

ಇತ್ತೀಚೆಗೆ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಅವರು ಕೊವಿಡ್ ವ್ಯಾಕ್ಸಿನೇಶನ್ ಗೆ ಸಂಬಂಧಿಸಿದಂತೆ ಆರು ಸಲಹೆಗಳನ್ನು ನೀಡಿದ್ದರು. ಆರೋಗ್ಯ ಸಚಿವರಾದ ಡಾ|| ಹರ್ಷವರ್ಧನ್ ರವರು ಆ ಸಲಹೆಗಳನ್ನು ಅಪಹಾಸ್ಯ ಮಾಡಿದರು. ನೀವು ಮತ್ತು ರಾಹುಲ್ ಗಾಂಧಿಯವರು ಸಹ ನಿರಂತರವಾಗಿ ಪ್ರಧಾನ ಮಂತ್ರಿಗಳಿಗೆ ಸಲಹೆಗಳನ್ನು ನೀಡುತ್ತಲೇ ಬಂದಿದ್ದೀರಿ. ಆದರೆ, ಈ ಬಿಕ್ಕಟ್ಟನ್ನು ಕಾಂಗೆಸ್ ಪಕ್ಷವು ರಾಜಕೀಯಗೊಳಿಸುತ್ತಿದೆ ಎಂಬ ಆರೋಪವಿದೆಯಲ್ಲ?

ಹೌದು. ಡಾ. ಮನಮೋಹನ್ ಸಿಂಗ್ ಅವರು ತಮ್ಮ ಅಪರಿಮಿತ ಜ್ಞಾನ ಮತ್ತು ಅನುಭವದ ಆಧಾರದಲ್ಲಿ ತುಂಬ ಗಂಭೀರವಾದ, ಗೌರವದಿಂದ ಉಪಯೋಗವುಳ್ಳ ಪತ್ರವನ್ನು ಬರೆದಿದ್ದರು. ನೋವಿನ ಸಂಗತಿಯೆಂದರೆ ಪ್ರಧಾನಿಗಳು ಆ ಪತ್ರವನ್ನು ಗಂಭೀರವಾಗಿ ಪರಿಗಣಿಸದೆ ಕೇಂದ್ರ ಆರೋಗ್ಯ ಮಂತ್ರಿಯನ್ನ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ವೈಯಕ್ತಿಕ ಮತ್ತು ಅನೈತಿಕ ರೀತಿಯಲ್ಲಿ ನಡೆಸಲು ಅವಕಾಶ ಮಾಡಿಕೊಟ್ಟರು. ಈ ರೀತಿಯ ಕೀಳುಮಟ್ಟದ ಪ್ರತಿಕ್ರಿಯೆ ನೋಡಿ ನನ್ನಂತೆ ಅನೇಕರಿಗೆ ಆಘಾತವಾಗಿರಬಹುದು.

ಕಳೆದ 14 ತಿಂಗಳಲ್ಲಿ ಕೊವಿಡ್ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಪರಿಣಾಮಾತ್ಮಕ ಸಲಹೆಗಳುಳ್ಳ ಪತ್ರಗಳನ್ನು ಪ್ರಧಾನಿಗಳಿಗೆ ಬರೆದಿದ್ದೇನೆ. ಯಾವ ಪತ್ರವನ್ನು ಪ್ರಧಾನಿಗಳು ಪುರಸ್ಕರಿಸಿಲ್ಲ. ಈ ಎಲ್ಲಾ ಪತ್ರಗಳನ್ನು ಪಕ್ಷದ ವಿವಿಧ ಫೋರಂಗಳಲ್ಲಿ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳೊಂದಿಗೆ ನಡೆದ ಚರ್ಚೆಗಳಲ್ಲಿ ಮೂಡಿಬಂದ ಸಲಹೆ, ಅನುಭವಗಳೊಂದಿಗೆ ಪ್ರಯೋಗಾತ್ಮಕ ಸಲಹೆಗಳೊಂದಿಗೆ ಬರೆಯಲಾಗಿತ್ತು. ಇದರಲ್ಲಿ ಬಿಕ್ಕಟ್ಟನ್ನು ರಾಜಕೀಯಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವು ಜವಾಬ್ದಾರಿಯುತ ಮತ್ತು ಸಂವೇದನಶೀಲ ವಿರೋಧ ಪಕ್ಷವಾಗಿ ನಮ್ಮ ಆದ್ಯ ಕರ್ತವ್ಯವನ್ನು ನಿರ್ವಹಿಸಿದ್ದೇವೆ.

ಕೊವಿಡ್ ಗೆ ಸಂಬಂಧಿಸಿದಂತಹ ಅಂಕಿಅಂಶಗಳನ್ನು ತಿರುಚಿ ವಾಸ್ತವ ಪರಿಸ್ಥಿತಿಯನ್ನು ಮರೆಮಾಚಲಾಗುತ್ತಿದೆ ಎಂಬ ಆರೋಪವಿದೆಯಲ್ಲ…

ಸರಕಾರ ನಮ್ಮನ್ನು ಏನನ್ನು ನಂಬಿಸಲು ಪ್ರಯತ್ನಿಸುತ್ತಿತ್ತೋ ಹಾಗೆ ಇಲ್ಲ; ನೈಜ ಚಿತ್ರಣ ತುಂಬ ಅಧೋಗತಿಯಲ್ಲಿದೆ ಎಂಬುದು ಈಗ ಬರುವ ಸುದ್ದಿಗಳಿಂದ ಸ್ಪಷ್ಟವಾಗುತ್ತಿದೆ. ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಕೊವಿಡ್ ವರದಿಯನ್ನು ತಿರುಚಿರುವುದನ್ನು ನಾನು ಜವಾಬ್ದಾರಿಯುತವಾಗಿಯೆ ಹೇಳಲು ಬಯಸುತ್ತೇನೆ. ಮಾಧ್ಯಮ ಕ್ಷೇತ್ರದ ಅನೇಕ ಮಂದಿ ಇದನ್ನು ವರದಿ ಮಾಡಿದ್ದಾರೆ. 2014 ರಿಂದಲೂ ಆಡಳಿತ ಪ್ರಭುತ್ವದ ವೈಫಲ್ಯಗಳ ಬಗ್ಗೆ ಬರುವ ಅಂಕಿಅಂಶಗಳನ್ನು  ತಿರುಚುವ ವ್ಯಾಧಿ ಮೋದಿ ಸರಕಾರವನ್ನು ಬಾಧಿಸುತ್ತಿದೆ. ಈ ಸರಕಾರಕ್ಕೆ ಡೆಡ್ ಲೈನ್ ಗಳಿಗಿಂತ ಹೆಡ್ ಲೈನ್ಸ್ ಮುಖ್ಯ ಎಂಬುದು ಸ್ಪಷ್ಟವಾಗಿದೆ.

ನೀವು ಇತ್ತೀಚೆಗೆ ಹೇಳಿದ ಹಾಗೆ ಮೋದಿ ಸರಕಾರವು 1ನೆ ಕೊರೊನ ಅಲೆಯನ್ನು ನಿರ್ವಹಿಸುವಲ್ಲಿ ಸಂಪೂರ್ಣ ವೈಫಲ್ಯವನ್ನು ಅನುಭವಿಸಿತು, ವಿರೋಧ ಪಕ್ಷವು ಆಡಳಿತ ಪಕ್ಷದ ಕಾರ್ಯವೈಖರಿಯ ಬಗ್ಗೆ ವಿಮರ್ಶಾತ್ಮಕವಾಗಿ ನಡೆದುಕೊಳ್ಳಲಿಲ್ಲವೇ? ಕಳೆದ ವರ್ಷ ಲಾಕ್ ಡೌನ್ ಕಾರಣದಿಂದ ಉಂಟಾದ ಜನರಿಗಾದ ತೀವ್ರ ತೊಂದರೆಗೆ ಮತ್ತು ಆರ್ಥಿಕತೆಯ ನಾಶಕ್ಕೆ ಮೋದಿ ಸರಕಾರವನ್ನು ಟೀಕಿಸಲಾಯಿತು. ಈಗ ಎಲ್ಲವನ್ನು ರಾಜ್ಯಗಳಿಗೆ ಬಿಟ್ಟು ಕೊಟ್ಟ ಕ್ರಮವನ್ನು ಟೀಕಿಸಲಾಗುತ್ತಿದೆ. ರಾಜಕೀಯ ಒಮ್ಮತವೆಲ್ಲಿ?

ನಿಮಗೆ ಒಂದೆರೆಡು ವಿಷಯಗಳನ್ನು ಹೇಳುತ್ತೇನೆ. ಕೇಂದ್ರ ಸರಕಾರವು ನಿರಂತರವಾಗಿ ರಾಜಕೀಯ ಮತ್ತು ತಾರತಮ್ಯ ನೀತಿಯನ್ನು ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ವಿರುದ್ಧ ಅನುಸರಿಸುತ್ತಾ ಬಂದಿದೆ. ಕೇಂದ್ರ ಸರಕಾರವು ಅಧಿಕಾರವನ್ನೆಲ್ಲ ತನ್ನಲ್ಲೆ ಕೇಂದ್ರೀಕರಣಗೊಳಿಸಿಕೊಂಡಿದೆ. ಯಾವಾಗ ಕೊರೊನ ಪರಿಸ್ಥಿತಿ ಹಿಡಿತಕ್ಕೆ ಸಿಕ್ಕಿತು ಎನಿಸಿತೊ ಎಲ್ಲಾ ಶ್ರೇಯಸ್ಸು ತಮಗೆ ಸಲ್ಲಬೇಕೆಂದರು. ಈಗ ಪರಿಸ್ಥಿತಿ ಕೈ ಮೀರುತ್ತಿರುವಾಗ ರಾಜ್ಯಗಳನ್ನು ದೂಷಿಸಲಾಗುತ್ತಿದೆ.

ವ್ಯಾಕ್ಸಿನ್ ವಿಷಯವನ್ನೆ ತೆಗೆದುಕೊಳ್ಳಿ. ವ್ಯಾಕ್ಸಿನ್ ಬೆಲೆಯನ್ನು ರಾಜ್ಯಗಳೊಂದಿಗೆ ಚರ್ಚಿಸಿ ನಿಗದಿಪಡಿಸಲಾಯಿತೇ?  ವ್ಯಾಕ್ಸಿನ್ ಬೆಲೆಯ ವಿಚಾರವೆ ಅಸಂಗತವಾಗಿದೆ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಈ ವಿಷಯವನ್ನು ಟೀಕಿಸಿದ್ದಾರೆ. ಇಡೀ ವ್ಯಾಕ್ಸಿನೇಶನ್ ವಿಷಯವನ್ನು ಪ್ರಧಾನಮಂತ್ರಿಗಳು ನಿರಂತರವಾಗಿ ಮತ್ತು ನಿರ್ದಯವಾಗಿ ರಾಜಕೀಯಗೊಳಿಸಿದ್ದಾರೆ. ರಾಜಕೀಯ ಒಮ್ಮತವು ಪ್ರಾಮಾಣಿಕ ಸಮಾಲೋಚನೆ ಮತ್ತು ಕೇಳುವ ಸಂಯಮದಿಂದ ಮೂಡುತ್ತದೆಯೇ ಹೊರತು ನನಗೆಲ್ಲ ತಿಳಿದಿದೆ; ನನ್ನ ದಾರಿಯೆ ಅಂತಿಮ ಎಂಬ ಅಹಂನಿಂದ ಅಲ್ಲ.

ಕೇಂದ್ರ ಸರಕಾರ ಘೋಷಿಸಿರುವ ಹೂಸ ವ್ಯಾಕ್ಸಿನೇಶನ್ ಯೋಜನೆಯ ಬಗ್ಗೆ ನಿಮ್ಮ ಟೀಕೆಗೆ ಸಂಬಂಧಪಟ್ಟಂತೆ ವ್ಯಾಕ್ಸಿನ್ ತಯಾರಕರನ್ನು ಸರಕಾರವು ನ್ಯಾಯಯುತ ಬೆಲೆಯನ್ನು ಪಾವತಿಸಿ ಉತ್ಪಾದನ ಕ್ಷಮತೆಯನ್ನು ವೃದ್ಧಿಸಿ ಬೇಡಿಕೆಯನ್ನು ಪೂರೈಸುವಂತೆ ಪ್ರೋತ್ಸಾಯಿಸಬಾರದೆ?

ಈ ವಿಷಯವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಖಂಡಿತ ವ್ಯಾಕ್ಸಿನ್ ತಯಾರಕರು ಉತ್ಪಾದನ ವೆಚ್ಚವನ್ನು ಮೀರಿ ಸ್ವಲ್ಪ ಲಾಭಾಂಶವನ್ನು ಗಳಿಸಬೇಕಾಗುತ್ತದೆ. ಬೇರೆ ದೇಶಗಳ ಸರಕಾರಗಳು ನಿರ್ವಹಿಸಿದ ರೀತಿಯಲ್ಲಿ – ಉತ್ಪಾದನೆಗೆ ಪ್ರೋತ್ಸಾಯಿಸಿ, ಲಸಿಕೆಯ ಸರಬರಾಜಿಗೆ ಮುಂಗಡ ವಿನಂತಿ ಸಲ್ಲಿಸಿ ಪೂರೈಕೆಯ ಸರಪಣಿಗಳನ್ನು ಬಲಪಡಿಸಬೇಕಿತ್ತಲ್ಲವೇ? ಮೋದಿ ಸರಕಾರವು ಈ ವರ್ಷದ ಜನವರಿ ಮಾಹೆಯ ಕೊನೆಯವರೆಗೂ ಲಸಿಕೆಯ ಮುಂಗಡ ಬೇಡಿಕೆಯ ವಿನಂತಿಯನ್ನು ಸಲ್ಲಿಸಿರಲಿಲ್ಲ ಮತ್ತು ಸಲ್ಲಿಸಿರುವ ಮುಂಗಡ ಬೇಡಿಕೆಯ ವಿನಂತಿಯು ಅಗತ್ಯಕ್ಕಿಂತ ತುಂಬಾ ಕಡಿಮೆ.

ಪ್ರತಿಯೊಬ್ಬ ಅರ್ಹ ಭಾರತೀಯನು ಎರಡು ಡೋಸ್ ಲಸಿಕೆಯನ್ನು ಪಡೆಯುವುದಾದರೆ, ನಮಗೆ ಸುಮಾರು ಎರಡು ಬಿಲಿಯನ್ ಲಸಿಕೆಯ ತುರ್ತು ಅವಶ್ಯಕತೆಯಿದೆ. ನಮ್ಮ ಪಕ್ಷವು ಕೊರೊನದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರಕಾರವು ಉಚಿತವಾಗಿ ಸಾಮೂಹಿಕವಾಗಿ ಲಸಿಕೆಯನ್ನು ಲಸಿಕೆ ತಯಾರಕರನ್ನು ಮನವೂಲಿಸಿ ನೀಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಬಯಸುತ್ತದೆ. ಇದನ್ನು ಅನುಷ್ಠಾನ ಮಾಡುವ ಬದಲಾಗಿ, ಸರಕಾರವು ವಿವಿಧ ರೀತಿಯ ಬೆಲೆಗಳನ್ನು ನಿಗದಿಪಡಿಸಿ ಲಾಭ ಮಾಡಿಕೊಳ್ಳಲು ಪ್ರೋತ್ಸಾಯಿಸುತ್ತಿದೆ. 18-45 ವರ್ಷಗಳ ನಡುವಿನ ಯುವಕರಿಗೆ ಉಚಿತ ಲಸಿಕೆ ನೀಡುವ ಜವಾಬ್ದಾರಿಯಿಂದ ಸರಕಾರವು ಸಂಪೂರ್ಣವಾಗಿ ನುಣಿಚಿಕೊಂಡು, ಹೆಚ್ಚಿನ ಹಣ ತೆತ್ತು ಲಸಿಕೆ ಹಾಕಿಸಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ನಿಮ್ಮ ಪ್ರಕಾರ ದೇಶದ ಜನರ ಹಿತದೃಷ್ಟಿಯಿಂದ ಈ ಸರಕಾರ ಮಾಡಲೆಬೇಕಾದ ಆದ್ಯ ಕರ್ತವ್ಯ ಯಾವುದು?

ಯಾವ ಸಂಶಯವಿಲ್ಲದೆ ಉಚಿತ ಲಸಿಕೆ ನೀಡುವುದು ಎಂದು ಉತ್ತರಿಸಬಹುದು. ಕಳೆದ ಜನವರಿಯ ಕೊನೆಗೆ ಸರಕಾರ ನಿಗದಿಪಡಿಸಿದ ಗುರಿಯ 10% ಕ್ಕಿಂತ ಕಡಿಮೆ ಲಸಿಕೆಯನ್ನು ನೀಡಲಾಗಿದೆ. ನಾನು ಇಲ್ಲಿ ಎರಡು ಡೋಸ್ ಪಡೆದವರನ್ನು ಪರಿಗಣಿಸಿ ಮಾತಾಡುತ್ತಿದ್ದೇನೆ. ನಿಗದಿಪಡಿಸಿದ ಗುರಿಯು 300 ಮಿಲಿಯನ್ಸ್ ಆಗಿತ್ತು ಮತ್ತು 18 ವರ್ಷದ ಮೇಲಿನವರನ್ನು ಪರಿಗಣಿಸಿದರೆ ಇನ್ನೂ ಹೆಚ್ಚಾಗುತ್ತದೆ. ಲಸಿಕೆಯ ಪೂರೈಕೆಯನ್ನು ಹೆಚ್ಚಿಸುವುದು ಮತ್ತು ಲಸಿಕೆ ಹಾಕುವ ಪ್ರಮಾಣವನ್ನು ಹೆಚ್ಚಿಸುವುದು ಸದ್ಯದಲ್ಲಿ ತ್ವರಿತವಾಗಿ ಮಾಡಲೇಬೇಕಾದ ಕೆಲಸವಾಗಿದೆ. ಇದೊಂದು ಎಲ್ಲರನ್ನು ಒಳಗೊಂಡ ಕೆಲಸವಾಗಬೇಕು. ಮನಮೋಹನ್ ಸಿಂಗ್ ರವರು ಹೇಳಿದ ಹಾಗೆ ಭಾರತವು ಲಸಿಕೆಯ ಲಭ್ಯತೆಯನ್ನು ಹೆಚ್ಚಿಸಲು ಕಡ್ಡಾಯ ಪರವಾನಿಗೆ ನೀತಿಯನ್ನು ವಿಳಂಬ ಮಾಡದೆ ಜಾರಿಗೆ ತರಬೇಕೆಂಬುದನ್ನು ನಾನು ಈ ಸಂದರ್ಭದಲ್ಲಿ ಪುನರ್ ಉಚ್ಚರಿಸುತ್ತೇನೆ. ಇದರ ಶ್ರೇಯಸ್ಸನ್ನು ಪ್ರಧಾನಿಯವರೇ ತೆಗೆದುಕೊಳ್ಳಲಿ – ಅದರಲ್ಲೇನು ಹೊಸತಿಲ್ಲ – ಆದರೆ ಅವರು ಈ ನಿಟ್ಟಿನಲ್ಲಿ ಕಾರ್ಯ ಪ್ರರುತ್ತರಾಗಲಿ.

ಕನ್ನಡಕ್ಕೆ: ವೀರೇಂದ್ರ ಯಾದವ

Leave a Reply

Your email address will not be published.