ಪ್ರಾಣಿ ಸಂಕುಲದಲ್ಲಿ ಮಾನವಾತೀತ ಇಂದ್ರಿಯ ಶಕ್ತಿ

-ಡಾ.ವೆಂಕಟಯ್ಯ ಅಪ್ಪಗೆರೆ

ನಾಯಿಗಿರುವ ಘ್ರಾಣಶಕ್ತಿ, ಪಕ್ಷಿನೋಟಶಕ್ತಿ, ಗೀಜಗನ ಹಕ್ಕಿ ಗೂಡು ಕಟ್ಟುವ ಕೌಶಲ, ದ್ವಿಲಿಂಗಿ ತಂತ್ರಜ್ಞಾನ ಬಳಸುವ ಸಸ್ಯಗಳು, ಬಾವಲಿಗಳು, ಹುಟ್ಟಿದ ತಕ್ಷಣ ಓಡಾಡುವ ಹಸುಕರುಗಳು; ನೀರಿಗೆ ಬಿಟ್ಟಾಗ ಪೂರ್ವತರಬೇತಿಯಿಲ್ಲದೆ ಕ್ಷಣಾರ್ಧದಲ್ಲಿ ಈಜುವ ಚತುರ್ಪಾದಿಗಳು -ಇವೆಲ್ಲಾ ಮನುಷ್ಯನಿಗೆ ಸಾಧ್ಯವಿಲ್ಲ. ಅವನಿಗೆ ಮೀರಿದ ಇಂದ್ರಿಯ ಶಕ್ತಿ ಪ್ರಾಣಿಪಕ್ಷಿ ಪ್ರಭೇದಗಳಿಗಿದೆ.

ಮಾತು ನರಮಾನವರಲ್ಲಿ ಮಾತ್ರ ಎಂಬ ಲೋಕಾರೂಢಿಯಿದೆ. ಮಾನವೇತರ ಜೀವಸಂಕುಲದಲ್ಲಿ ಸಂವಹನಕ್ಕೆ ತಮ್ಮದೇ ಆದ ಭಾಷೆ, ಸಂಜ್ಞೆ, ಸಂಕೇತ, ಅನುಕರಣೆ, ಹೂಂಕಾರ, ಇಂದ್ರಿಯಾತೀತ ಸಂವಹನ ಶಕ್ತಿ ಕಲೆಗಳಿವೆ. ಪ್ರಕೃತಿದತ್ತ ತಂತ್ರ ಯುಕ್ತಿಗಳು ಅವುಗಳಿಗೆ ಲಭಿಸಿವೆ. ಜೀವವಿಕಾಸದಲ್ಲಿ ಆವಿಷ್ಕಾರ ಪರಿಷ್ಕಾರಗಳಾಗಿವೆ. ಡಾರ್ವಿನ್‍ನ ವಿಕಾಸವಾದದಂತೆ ಅವು ತಮ್ಮ ಅಸ್ತಿತ್ವದಲ್ಲಿ ಬದುಕುಳಿಯಲು ಜೀವಸಂಘರ್ಷದ ವಿವಿಧ ಮಾರ್ಗೋಪಾಯಗಳನ್ನು ಅಳವಡಿಸಿಕೊಂಡಿವೆ. ಅವು ಮಾನವನ ಗ್ರಹಿಕೆ, ಇಂದ್ರಿಯ ಶಕ್ತಿಗೆ ಮೀರಿದ್ದು.

ಮಾನವ ತಾನೇ ಬುದ್ಧಿವಂತ ಎಂದು ಭಾವಿಸಿ ತನ್ನ ದೃಷ್ಟಿಯಿಂದಲೇ ಸಹ ಸಂಕುಲವನ್ನು ತುಲನೆಮಾಡುವುದು ಆತನ ಸೀಮಿತ ಶಕ್ತಿಯಾಗಿದೆ. ಅದನ್ನು ಆತನ ದೌರ್ಬಲ್ಯವೆಂದರೂ ತಪ್ಪಾಗಲಾರದು. ಅಷ್ಟೇ ಏಕೆ ಈ ಜೀವಜಗತ್ತನ್ನು ಆಳುತ್ತಿರುವುದು ನಾನೇ ಎಂಬುದು ಸಹ ವಾಸ್ತವ ಬಾಹಿರವಾದ ನಂಬಿಕೆ. ಇದು ಅವನ ಹುಸಿ ಕಲ್ಪನೆ (ಠಿseuಜo ಛಿoಟಿಛಿeಠಿಣ). ನಿಜಕ್ಕೂ ಈಗ ನಮ್ಮನ್ನಾಳುತ್ತಿರುವುದು ಸೂಕ್ಷ್ಮಾಣು ಜೀವಿಗಳು.

ಜಲಜೀವಿಗಳನ್ನು ಹೊರತುಪಡಿಸಿದರೆ ಭೂಜೀವ ಸಂಕುಲದಲ್ಲಿ ಈಗ ಏನಿದ್ದರೂ ಸೂಕ್ಷ್ಮ (ಒiಛಿಡಿo) ಜೀವಿಗಳ ಪಾರಮ್ಯ. ಬೃಹತ್ (ಒಚಿಛಿಡಿo) ದೇಹಿಗಳ ಅಸ್ತಿತ್ವ ಅಳಿವಿನಂಚಿನಲ್ಲಿವೆ. ಉದಾಹರಣೆ ದೈತ್ಯಾಕಾರದ ಟ್ರೈನೊಸಾರ್, ಸೈನೊಸಾರ್, ಡೈನೊಸಾರ್ ಇವೆಲ್ಲಾ ಅಳಿಸಿಹೋಗಿ ಇತರೆ ಬೃಹತ್ ಪ್ರಾಣಿಗಳು ಸಹ ನಶಿಸುತ್ತಿವೆ. ಸದ್ಯದ ಸಕಲ ಜೀವಸಂಕುಲವನ್ನು (eಟಿಣiಡಿe bioಟogiಛಿಚಿಟ sಥಿsಣem) ಸೂಕ್ಷ್ಮಜೀವಿಗಳೇ ನಿಯಂತ್ರಿಸುತ್ತಿರುವುದನ್ನು ಮರೆಯಲಾಗದು. ಅವು ದಾಳಿಮಾಡಿದರೆ ಸಕಲ ಜೀವಿಗಳು (ಸಸ್ಯ, ಪ್ರಾಣಿ, ಪಕ್ಷಿ) ಸರ್ವನಾಶವಾಗುವುದರಲ್ಲಿ ಸಂಶಯವಿಲ್ಲ. ಅದು ಪಿಡುಗು ಸಾಂಕ್ರಾಮಿಕ ರೋಗ ಮುಂತಾದವುಗಳ ಮೂಲಕ ನಾವು ಕಂಡುಹಿಡಿಯುವ ರಾಸಾಯನಿಕ, ಕ್ರಿಮಿನಾಶಕಗಳನ್ನು ಕಾಲಾನಂತರ ಜೀರ್ಣಿಸಿಕೊಂಡು ಹೊಸ ರೂಪಧರಿಸಿ ಕ್ಷಣಾರ್ಧದಲ್ಲಿ ಹೆಮ್ಮಾರಿಯಂತೆ ಸ್ವಾಹಗೊಳಿಸಬಲ್ಲವು. ಹಿಂದೆ ಇನ್‍ಫ್ಲುಯೆಂಜ, ನಂತರ ಸಾರ್ಸ್, ಎಬೊಲಾ, ಕೊರೋನಾ ಮುಂತಾದ ರೂಪಾಂತರ ಹೊಂದಿದ ವಿದ್ಯಮಾನ ಇದಕ್ಕೆ ಪುಷ್ಟಿನೀಡುತ್ತದೆ.

ಇನ್ನು ಇತರೆ ಜೀವಿಗಳು ತಮ್ಮ ಸಂತಾನ ಪ್ರಸರಣಕ್ಕೆ ಸಂವಹನಕ್ಕೆ ಬಳಸುವ ವಿಶಿಷ್ಟ ತಂತ್ರಗಳು ನಮ್ಮನ್ನು ನಿಬ್ಬೆರಗುಗೊಳಿಸುತ್ತವೆ. ಪ್ರಾಣಿಪಕ್ಷಿಗಳು ಉಲಿಯುತ್ತವೆ, ಹೂಂಕರಿಸುತ್ತವೆ, ಘೀಳಿಡುತ್ತವೆ, ಗರ್ಜಿಸುತ್ತವೆ, ಚಿಲಿಪಿಲಿ, ಅರಚುವಿಕೆ, ಆಕ್ರಂದನ, ನುಲಿಯುವಿಕೆ, ನಾದ ನಿನಾದದ ಗಾನಹೊಮ್ಮಿಸುವುದು ಇತ್ಯಾದಿ. ಇದಕ್ಕೆ ಮಿಗಿಲಾಗಿ ಸಸ್ಯಸಂಕುಲ ತನ್ನ ಬೀಜ ಪ್ರಸರಣಕ್ಕೆ ಬಳಸುವ ‘ಸ್ಪೋರ್ಸ್’ (ಗಾಳಿಯಲ್ಲಿ ತೇಲಿಬಿಡುವ ವೀರ್ಯಾಣು ಅಂಶ); ಕಿಲೋಮೀಟರ್‍ಗಟ್ಟಲೆ ದೂರವಿರುವ ಸಂಗಾತಿಗೆ ಪರಸ್ಪರ ಇರುವಿಕೆಯನ್ನು ವಾಸನೆಯುಕ್ತ ಅದೃಶ್ಯ ಫಿರೋಮೋನ್‍ಗಳ ರೂಪದಲ್ಲಿ (ಗುಪ್ತ ಸಂಕೇತಗಳ ಮೂಲಕ) ಕಳಿಸಿ ಕೂಡುವ ಸರ್ಪಮಿಲನ, ಅದೇ ತಂತ್ರದಲ್ಲಿ ಅಗಮ್ಯ ದೂರದಲ್ಲಿರುವ ಇಲಿಯ ಇರುವಿಕೆಯನ್ನು ಕಂಡು ಬೇಟೆಯಾಡುವುದು, ಪ್ರತಿರಕ್ಷಣೆಗೆ ಇಲಿಯೂ ಸಹ ತನ್ನ ಇರುವಿಕೆಯನ್ನು ಬೇರೆಕಡೆಯಿರುವಂತೆ ಹಾವಿಗೆ ಯಾಮಾರಿಸಲು ಪ್ರತಿಸಂದೇಶವನ್ನು ಫಿರೋಮೋನುಗಳ ರೂಪದಲ್ಲಿ ಕಳಿಸಿ ರಕ್ಷಿಸಿಕೊಳ್ಳುವುದು ಮುಂತಾದ ತಂತ್ರಗಳು ಮಾನವನ ವಿಜ್ಞಾನಕ್ಕೂ ಮಿಗಿಲಾದ ವಿಸ್ಮಯಗಳಾಗಿವೆ.

ನಾನು ಹರಪನಹಳ್ಳಿಯಲ್ಲಿ ಉದ್ಯೋಗಮಾಡುತ್ತಿದ್ದ ದಿನಗಳವು. ಭಾನುವಾರದ ರಜೆಯ ಬೆಳಗಿನ ಸಮಯದಲ್ಲಿ ಮನೆಯ ಮುಂದಿನ ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ತನ್ಮಯತೆಯಿಂದ ದಿನಪತ್ರಿಕೆ ಓದುತ್ತಿದ್ದೆ. ನಾವು ಬೆಳೆಸಿದ್ದ ಬಸಳೆ ಗಿಡ ಮಾರುದ್ದ ಬಳ್ಳಿಯಾಗಿ ನೆಲದ ಕಾಂಪೌಂಡಿನಿಂದ ಮನೆಯ ತಾರಸಿವರೆಗಿನ ಎತ್ತರಕ್ಕೆ ಸಮೃದ್ಧವಾಗಿ ಬೆಳೆದು ನಿಂತಿತ್ತು. ಅಲ್ಲಿಗೆ ಟುವ್ವಿಯಂತಹ ಸಣ್ಣ ಹಕ್ಕಿ (ಗುಬ್ಬಚ್ಚಿಗಿಂತ ಸಣ್ಣನೆಯ ಕಪ್ಪುಬಣ್ಣದ)ಯೊಂದು ಬಂದು ತನ್ನ ಹಿಂಬದಿ ಬಾಲದ ಪುಕ್ಕ ಎತ್ತಿ ಪದೇಪದೆ ಟುವ್ವಿ ಟುವ್ವಿ ಶಬ್ದಮಾಡಿ ನನ್ನ ಓದಿಗೆ ಭಂಗ ತರುತ್ತಿತ್ತು. ಅದನ್ನು ಓಡಿಸಬೇಕೆಂದು ನೋಡುವಾಗ ಒಂದು ವಿಶೇಷ ಗಮನಿಸಿದೆ.

ಅದು ಶಬ್ದಮಾಡುವ ಕಡೆಗೆ ಕತ್ತೆತ್ತಿ ನೋಡಿದರೆ ಅದು ಅಲ್ಲಿರದೆ ಬೇರೆಕಡೆಯಿರುತ್ತಿತ್ತು. ಅಂದರೆ ಅದು ಇರುವುದು ಒಂದು ಕಡೆಯಾದರೆ ಅದು ಹೊಮ್ಮಿಸುತ್ತಿದ್ದ ಶಬ್ದ ಬರುವುದು ಇನ್ನೊಂದು ಕಡೆ. ವಿಸ್ಮಯವಾಗಿ ಪರೀಕ್ಷಿಸಿದಾಗ ಅದು ಬೇಟೆಯಾಡುವ ತಂತ್ರವಾಗಿತ್ತು. ಗಿಡದ ಎಲೆಮರೆಯಲ್ಲಿದ್ದ ಹುಳುಗಳು ಎಚ್ಚೆತ್ತು ಶಬ್ದಬರುತ್ತಿರುವ ವಿರುದ್ಧ ದಿಕ್ಕಿಗೆ ಚಲಿಸಿ ತಪ್ಪಿಸಿಕೊಳ್ಳುವಾಗ ಅವು ಪಕ್ಷಿಯಿದ್ದ ಕಡೆಗೆ ಬಂದು ಸುಲಭವಾಗಿ ಪಕ್ಷಿ ಹಿಡಿದು ಭಕ್ಷಿಸುತ್ತಿತ್ತು. ಅದು ಇಲ್ಲಿದ್ದು ಶಬ್ದಮಾಡಿದರೂ ಎದುರಿನ ಕೋನದಿಂದ ಬರುವಂತೆ ಅದು ಹೇಗೆ ತಂತ್ರ ಬಳಸುತ್ತದೆ ಎಂದು ವಿಸ್ಮಯಗೊಂಡೆ. ಯಾವುದೇ ವಾಹಕ ವಸ್ತುವಿನ ಸಹಾಯವಿಲ್ಲದೆ ಅದು ಹೇಗೆ ಶಬ್ದದ ವಕ್ರೀಭವನಗೊಳಿಸುತ್ತದೆ ಎಂದು ವಿಸ್ಮಯಗೊಂಡೆ.

ಪಕ್ಷಿತಜ್ಞರಲ್ಲಿ ವಿಚಾರಿಸಿದಾಗ ಪಕ್ಷಿಗಳ ಆ ತಂತ್ರಜ್ಞಾನದ ಬಗ್ಗೆ ಖಾತ್ರಿ ಮಾಡಿದರು. ಇದನ್ನು ರಾಡಾರ್ ತಂತ್ರದಲ್ಲಿ ಅಳವಡಿಸಿದರೆ ಶತ್ರುಗಳ ದಾಳಿಯನ್ನು ಯಾಮಾರಿಸಬಹುದು.

ಕಿಂಗ್‍ಫಿಷರ್ ಪಕ್ಷಿ ಅತಿ ಎತ್ತರದಿಂದ ಕೆಳಗಿನ ನೀರಿನಾಳದಲ್ಲಿ ಚಲಿಸುತ್ತಿರುವ ಮೀನನ್ನು ಸೂಕ್ಷ್ಮವಾಗಿ ವೀಕ್ಷಿಸುವುದಲ್ಲದೆ ಅದರ ಚಲನೆಯ ದಿಕ್ಕು ವೇಗವನ್ನು ಪರಿಗಣಿಸಿ ಕರಾರುವಾಕ್ಕಾಗಿ ಬೇಟೆಯಾಡುವ ಪರಿ ಸೋಜಿಗ. ಅದರಂತೆ ಹದ್ದು ಆಕಾಶದಲ್ಲಿ ಹಾರಾಡುತ್ತಾ ಭೂಮಿಯಮೇಲೆ ಹರಿದುಹೋಗುತ್ತಿರುವ ಹಾವನ್ನು ಬೇಟೆಯಾಡುವುದು. ಅದರಲ್ಲೂ ಅದರ ಬಾಲವನ್ನು ಮೇಲೆತ್ತಿ ತಲೆ ನೇತಾಡುವಂತೆ ಮಾಡಿ ಹಾವು ಮೂರ್ಛೆ ಹೋಗಿಸುತ್ತದೆ. ಕಾರಣ ಹಾವಿಗೆ ಮೂಳೆಗಳಿಲ್ಲ. ಬಾಲದಿಂದ ಹಿಡಿದು ಶರೀರ ಪೂರ್ತಿ ರಕ್ತ ತಲೆಗೆ ರಭಸದಲ್ಲಿ ಹರಿದು ದಿಗ್ಮೂಢತೆಯಾಗಿ ನಿಷ್ಕ್ರಿಯೆಗೊಳ್ಳುವುದು. ಅದೆಲ್ಲವೂ ಹದ್ದಿಗೆ ಗೊತ್ತು.

ಅದಕ್ಕೆ ಹಾವು ಹಿಡಿಯುವವರು ಬಾಲ ಮೇಲೆತ್ತಿ ಒಂದೆರಡು ಬಾರಿ ತಲೆಕೆಳಕಾಗಿ ತಿರುಗಿಸಿ ನಿಷ್ಕ್ರಿಯೆಗೊಳಿಸುತ್ತಾರೆ. ಅದೇ ಕೋಳಿ ತನ್ನ ಕೊಕ್ಕಿನಲ್ಲಿ ಹಾವಿನ ಕಣ್ಣಿಗೆ ಹೊಡೆದು ನಿಷ್ಕ್ರಿಯೆ ಗೊಳಿಸುತ್ತದೆ. ಆ ತಂತ್ರ ಅದಕ್ಕೆ ಗೊತ್ತು. ಅದೇ ರೀತಿ ಮುಂಗುಸಿ, ಬೆಕ್ಕುಗಳಿಗೆ ಹಾವುಗಳೇ ಹೆದುರುತ್ತವೆ. ಕಾರಣವಿಷ್ಟೇ, ಅವುಗಳ ಮೈತುಂಬಾ ಕೂದಲುಗಳು ಇರುವುದರಿಂದ ಹಾವು ಕಚ್ಚುವುದಾದರೂ ಹಲ್ಲು ಇಳಿಯದೆ ಅವುಗಳ ಕೂದಲಿನಲ್ಲಿ ಸ್ಲಿಪ್ ಆಗಿ ಜಾರಿಕೊಳ್ಳುತ್ತದೆ. ಕೂದಲಿಲ್ಲದ ಮೂತಿಗಷ್ಟೆ ಕಚ್ಚಬೇಕು. ಅದು ಸಾಧ್ಯವಾಗದು. ಅದಕ್ಕೆ ಈ ಪ್ರಾಣಿಗಳು ಅವಕಾಶಕೊಡವು. ಅದು ಬಿಟ್ಟು ಹಾವು-ಮುಂಗುಸಿ ದ್ವೇಷ ಇವೆಲ್ಲಾ ಕಟ್ಟುಕತೆ.

ನಾಯಿಗಿರುವ ಘ್ರಾಣಶಕ್ತಿ, ಪಕ್ಷಿನೋಟಶಕ್ತಿ, ಗೀಜಗನ ಹಕ್ಕಿ ಗೂಡು ಕಟ್ಟುವ ಕೌಶಲ, ದ್ವಿಲಿಂಗಿ ತಂತ್ರಜ್ಞಾನ ಬಳಸುವ ಸಸ್ಯಗಳು, ಬಾವಲಿಗಳು, ಹುಟ್ಟಿದ ತಕ್ಷಣ ಅಂಬೆಗಾಲಿಡದೆ ತೆವಳದೆ ಓಡಾಡುವ ಹಸುಕರುಗಳು; ನೀರಿಗೆ ಬಿಟ್ಟಾಗ ಪೂರ್ವತರಬೇತಿಯಿಲ್ಲದೆ ಕ್ಷಣಾರ್ಧದಲ್ಲಿ ಈಜುವ ಚತುರ್ಪಾದಿಗಳು -ಇವೆಲ್ಲಾ ಮನುಷ್ಯನಿಗೆ ಸಾಧ್ಯವಿಲ್ಲ. ಅವನಿಗೆ ಮೀರಿದ ಇಂದ್ರಿಯ ಶಕ್ತಿ ಪ್ರಾಣಿಪಕ್ಷಿ ಪ್ರಭೇದಗಳಿಗಿದೆ. ಇನ್ನು ಸಸ್ಯ ಪ್ರಭೇದಗಳಲ್ಲಿ ಮತ್ತಷ್ಟು ವಿಸ್ಮಯಗಳಿರುವುದು ಸಂಶೋಧನೆಗಳಿಂದ ಭೇದಿಸಬೇಕಿದೆ.

ಇತ್ತೀಚಿನ ಸಂಶೋಧನೆಗಳಲ್ಲಿ, ಇರುವೆಗಳಲ್ಲಿ ಟೆಲಿಪಥಿ ಕ್ರಿಯೆಯ ಶಕ್ತಿಯಿದೆ ಎಂದು ಭಾವಿಸಲಾಗುತ್ತಿದೆ. ಆಹಾರದ ಜಾಡನ್ನು ದೂರದಲ್ಲಿದ್ದರೂ ವಿಸ್ಮಯಕಾರಕವಾದ ಕ್ರಿಯೆಯಿಂದ ಗ್ರಹಿಸಿ ಅದರ ದೂರ ಮತ್ತು ದಿಕ್ಕನ್ನು ಕಂಡುಕೊಳ್ಳುತ್ತವೆ.

ಕೊನೆಯಲ್ಲಿ ಹೇಳುವುದೆಂದರೆ, ಟೆಲಿಪಥಿಯಂತೆ ಅಂತರ್‍ದೃಷ್ಟಿ (Iಟಿಣuiಣioಟಿ), ಅಂತರಂಗದ ದನಿ (ಇನ್ನರ್ ವಾಯ್ಸ್), ಮಾನಸಿಕ ಶಕ್ತಿಯಿಂದ ವಸ್ತುಗಳನ್ನು ಕದಲಿಸುವ ಶಕ್ತಿ (Psಥಿಛಿho ಏiಟಿesis), ಕಣ್ಣಿಗೆ ಕಾಣದ್ದನ್ನು ಕಾಣುವ ಶಕ್ತಿ (ಅಟಚಿiಡಿvoಥಿಚಿಟಿಛಿe), ಪೂರ್ವಜ್ಞಾನ (Pಡಿeಛಿogಟಿiಣioಟಿ) ಇತ್ಯಾದಿಗಳನ್ನು ಕುರಿತು ಪ್ರಯೋಗಗಳು ನಡೆಯುತ್ತಿವೆ. ಇವುಗಳಿಗೆ ಪಿ.ಎಸ್.ಐ. ಪ್ರಯೋಗಗಳೆನ್ನುವರು. ಇವು ಇನ್ನೂ ವೈಜ್ಞಾನಿಕವಾಗಿ ಅಂಗೀಕಾರಗೊಂಡಿಲ್ಲ. ವೈಜ್ಞಾನಿಕವಾಗಿ ರುಜುವಾತಾದಾಗ ಮಾನವೇತರ ಜೀವಜಗತ್ತಿನ ಇಂದ್ರಿಯಾತೀತ ಶಕ್ತಿಗಳು ಬಳಕೆಗೆ ಬಂದು ಮಾನವನಿಗೆ ಹೆಚ್ಚುವರಿ ಶಕ್ತಿ ದೊರೆತು ಒಳಿತಿಗಾಗಿ ಉಪಯೋಗವಾಗಲೆಂದು ಆಶಿಸೋಣ.

Leave a Reply

Your email address will not be published.