ಪ್ಲೇಗ್ ಹೊಡೆತಕ್ಕೆ ಮೈಸೂರು ರಾಜ್ಯ ತತ್ತರಿಸಿದಾಗ

ಪ್ಲೇಗ್ ರೋಗಕ್ಕೆ ಹೆಚ್ಚು ಬಾಧಿತವಾದದ್ದು ಬೆಂಗಳೂರು ಜಿಲ್ಲೆ. ಇಲ್ಲಿ, 14,831 ಪ್ರಕರಣಗಳು ಮತ್ತು 12,273 ಮಂದಿಯ ಸಾವು ವರದಿಯಾಗಿತ್ತು. ಕೇವಲ ಬೆಂಗಳೂರು ನಗರದಲ್ಲಿ 3,346 ಪ್ರಕರಣ ಮತ್ತು 2,665 ಸಾವು ಸಂಭವಿಸಿದ್ದವು. ಹಾಗೆಯೇ, ಮೈಸೂರು ನಗರದಲ್ಲಿ 2,667 ಪ್ರಕರಣ ಮತ್ತು 2171 ಸಾವು ವರದಿಯಾಗಿದ್ದವು. ಸರ್ಕಾರದ ವೆಚ್ಚದಲ್ಲಿ ಪ್ಲೇಗಿನಿಂದ ಸತ್ತವರ ಶವಗಳನ್ನು ಹೂಳಲು ಅಥವಾ ಸುಡಲು ವ್ಯವಸ್ಥೆ ಮಾಡಲಾಯಿತು.

ಮೈಸೂರು ಪ್ರಾಂತ್ಯವು ತೀವ್ರ ಕ್ಷಾಮ ಅಥವಾ ಬರಗಾಲದ ಪರಿಸ್ಥಿತಿಯಿಂದ ಅತೀವ ಸಂಕಷ್ಟಕ್ಕೆ ಒಳಪಟ್ಟಿತ್ತು. ಇದರ ಜೊತೆಗೆ, ರಾಜಮನೆತನದ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯದ ಮೇಲೆ, ಪ್ಲೇಗ್ ಸಾಂಕ್ರಾಮಿಕ ಕಾಯಿಲೆಯೂ ಆಕ್ರಮಣ ಮಾಡಿತು. ವಿಶೇಷವಾಗಿ, ರೈಲ್ವೆ ಸಂಪರ್ಕದಿಂದಾಗಿ ಪ್ಲೇಗ್ ರೋಗಾಣು ನೆರೆಯ ಬಾಂಬೆ ಪ್ರಾಂತ್ಯದಿಂದ ಇಲ್ಲಿಗೆ ಹರಡಿತು. ಇದು, ಮದ್ರಾಸ್-ದಕ್ಷಿಣ-ಮರಾಠಾ (ಎಂಎಸ್‌ಎಂ) ರೈಲ್ವೆಯ ಮೂಲಕ ಹುಬ್ಬಳ್ಳಿಯಿಂದ, ಹರಿಹರ, ಅರಸಿಕೇರೆ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಪಸರಿಸಿತು. ಬೆಂಗಳೂರು ಪೇಟೆಯಲ್ಲಿ ಮೊದಲ ಬಾರಿಗೆ ಪ್ಲೇಗ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದು 1898ರ ಆಗಸ್ಟ್ 12ರಂದು. ನಂತರ, ಇದು ನೆರೆಯ ಕೋಲಾರ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಿಗೆ ಹರಡಿತು.

ಆ ಕಾಲದಲ್ಲಿ, ಪ್ಲೇಗನ್ನು ಕೀಟಗಳಿಂದ (ಯೆರ್ಸೀನಿಯಾ) ಹರಡುವ ಅತ್ಯಂತ ಭಯಾನಕ ರೋಗವೆಂದು ಪರಿಗಣಿಸಲಾಗಿತ್ತು. ಮೈಸೂರು ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಪ್ಲೇಗ್, 14ನೇ ಶತಮಾನದ ಯುರೋಪಿನ ಬುಬೊನಿಕ್ ಪ್ಲೇಗಿಗಿಂತ ಭಿನ್ನವಾಗಿತ್ತು. ಏಕೆಂದರೆ, ಇದರ ಏಕೈಕ ಕೇಂದ್ರಬಿಂದು ಬೆಂಗಳೂರು ಪೇಟೆ ಮಾತ್ರ. ಆಗ, ಹಳೆಯ ಬೆಂಗಳೂರು ಪಟ್ಟಣವು ಸರಿಯಾದ ಸೌಲಭ್ಯ ಮತ್ತು ಸೌಕರ್ಯಗಳ ತೀವ್ರ ಕೊರತೆಯಿಂದ ಉಸಿರುಗಟ್ಟಿತ್ತು.  ಅಲ್ಲದೆ, ಬಸ್ ಮತ್ತು ರೈಲ್ವೆ ನಿಲ್ದಾಣಗಳ ಮಧ್ಯೆ ಅತಿಯಾದ ಹೊಲಸು ಮತ್ತು ಕೊಳೆಗೇರಿ ಇತ್ತು. ಇದರಿಂದಾಗಿ, ಈ ಸಾಂಕ್ರಾಮಿಕ ರೋಗವು ದಿನದಿಂದ ದಿನಕ್ಕೆ ಮೈಸೂರು ಪ್ರಾಂತ್ಯದ ಇತರ ಭಾಗಗಳಿಗೆ ಹರಡಿತು.

ಸರ್ಕಾರ, 1897ರ ಫೆಬ್ರವರಿ 11ರಂದೇ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯನ್ನು ಅಂಗೀಕರಿಸಿತ್ತು. ಈ ಕಾಯ್ದೆಗೆ ಅನುಗುಣವಾಗಿ, ಪ್ಲೇಗ್ ಹತೋಟಿಗೆ ತರುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಲಾಯಿತು. ಅಂತಿಮವಾಗಿ, ಜನಸಾಮಾನ್ಯರನ್ನು ಪ್ಲೇಗಿನಿಂದ ರಕ್ಷಿಸಲು ಹಲವಾರು ಮುನ್ನೆಚ್ಚರಿಕೆಯ ಕ್ರಮಗಳನ್ನು ಜಾರಿಗೆ ತರಲಾಯಿತು. ಅವುಗಳಲ್ಲಿ ಮುಖ್ಯವಾಗಿ, ತಪಾಸಣೆ ಕೇಂದ್ರಗಳ ಸ್ಥಾಪನೆ, ರೈಲ್ವೆ ಮತ್ತು ರಸ್ತೆಯಲ್ಲಿ ಪ್ರಯಾಣಿಸುವ ಜನಸಾಮಾನ್ಯರ ಪರೀಕ್ಷೆ, ತಾತ್ಕಾಲಿಕ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಪಟ್ಟಣ ಹಾಗು ಹಳ್ಳಿಗಳಲ್ಲಿ ವಿಶೇಷ ನೈರ್ಮಲ್ಯ ಸುಧಾರಣೆ ಕ್ರಮಗಳನ್ನು ಜಾರಿಗೊಳಿಸುವುದು, ಇತ್ಯಾದಿ.

ಇವುಗಳನ್ನು ಕಾರ್ಯಗತಗೊಳಿಸಿ ಮೇಲ್ವಿಚಾರಣೆ ಮಾಡಲು, ಪ್ಲೇಗ್ ಕಮಿಷನರ್ ಆಗಿ ವಿಶೇಷ ಅಧಿಕಾರಿಯನ್ನು ನೇಮಿಸಲಾಯಿತು. ಇದಕ್ಕಾಗಿ ಸರ್ಕಾರವು ಪ್ರಾಂತೀಯ ಮತ್ತು ಮುನ್ಸಿಪಲ್ ನಿಧಿಯಿಂದಲೂ ಹಣ ಖರ್ಚು ಮಾಡಿತು. ಇದರೊಂದಿಗೆ, ಸೋಂಕಿತರನ್ನು ತ್ವರಿತವಾಗಿ ಸ್ಥಳಾಂತರಿಸುವ ಕ್ರಮ ಕೈಗೊಳ್ಳುವುದು, ಹಾಗು ವೈರಾಣು ವಾಹಕ ಜೀವಿಗಳ ನಿರ್ನಾಮ ಮಾಡಲು ಸರ್ಕಾರವು ಪ್ರೋತ್ಸಾಹಿಸಿತು. ಜೊತೆಗೆ, ಸರಿಯಾದ ನೈರ್ಮಲ್ಯೀಕರಣ ವಿಧಾನಗಳನ್ನು ಪ್ರಚುರಪಡಿಸಿತು ಮತ್ತು ಅಂತಹ ಕ್ರಮಗಳನ್ನು ಕೈಗೊಳ್ಳಲು ನಗದು ಬಹುಮಾನಗಳನ್ನು ಘೋಷಿಸಿತು.

ಮೈಸೂರು ಪ್ರಾಂತ್ಯದಲ್ಲಿ, ಪ್ಲೇಗ್ ಸೋಂಕಿನ ತೀವ್ರತೆ 1998ರ ಸೆಪ್ಟೆಂಬರಿನಿಂದ ಡಿಸೆಂಬರಿನವರೆಗೆ ಹೆಚ್ಚಾಗಿ ಕಂಡುಬಂತು. ಅಂತೆಯೇ, ಇತರ ಜಿಲ್ಲೆಗಳಲ್ಲಿ 1899ರ ಜನವರಿಯಿಂದ ಮಾರ್ಚಿನವರೆಗೆ ಅಲ್ಲೊಂದು ಇಲ್ಲೊಂದು ಪ್ರಕರಣಗಳು ವರದಿಯಾಗಿದ್ದವು. ಇವುಗಳಲ್ಲಿ, ಹೆಚ್ಚು ಬಾಧಿತವಾದದ್ದು ಬೆಂಗಳೂರು ಜಿಲ್ಲೆ. ಇಲ್ಲಿ, 14,831 ಪ್ರಕರಣಗಳು ಮತ್ತು 12,273 ಮಂದಿಯ ಸಾವು ವರದಿಯಾಗಿತ್ತು. ಕೇವಲ ಬೆಂಗಳೂರು ನಗರದಲ್ಲಿ 3,346 ಪ್ರಕರಣ ಮತ್ತು 2,665 ಸಾವು ಸಂಭವಿಸಿದ್ದವು. ಹಾಗೆಯೇ, ಮೈಸೂರು ನಗರದಲ್ಲಿ 2,667 ಪ್ರಕರಣ ಮತ್ತು 2171 ಸಾವು ವರದಿಯಾಗಿದ್ದವು. ಸರ್ಕಾರದ ವೆಚ್ಚದಲ್ಲಿ ಪ್ಲೇಗಿನಿಂದ ಸತ್ತವರ ಶವಗಳನ್ನು ಹೂಳಲು ಅಥವಾ ಸುಡಲು ವ್ಯವಸ್ಥೆ ಮಾಡಲಾಯಿತು. ಜೊತೆಗೆ, ಮರಣ ಪ್ರಮಾಣಪತ್ರಗಳನ್ನು ವಿಳಂಬವಿಲ್ಲದೆ ನೀಡಲು ಕ್ರಮ ಕೈಗೊಳ್ಳಲಾಯಿತು. ಅಲ್ಲದೆ, ಸಾವಿನ ನೋಂದಣಿಯನ್ನು ಸಹ ತಕ್ಷಣ ನಿರ್ವಹಿಸಲಾಯಿತು. ಅಂದಿನ ದಿವಾನರಾಗಿದ್ದ ಟಿಆರ್‌ಎ ಚೆಟ್ಟಿ, ಈ ಎಲ್ಲಾ ಅಂಕಿಅಂಶ ಮತ್ತು ಮಾಹಿತಿಯನ್ನು ಅಧಿಕೃತವಾಗಿ ದೃಢೀಕರಿಸಿದ್ದಾರೆ. 

ಪ್ಲೇಗ್ ಸೋಂಕು ಪೀಡಿತರಿಗಾಗಿ ಪ್ರತ್ಯೇಕ ಆಸ್ಪತ್ರೆಗಳನ್ನು ಮೀಸಲಿಟ್ಟು ಅಲ್ಲಿ ಚಿಕಿತ್ಸೆ ನೀಡಲಾಯಿತು. ಈ ರೋಗಲಕ್ಷಣ ಹೊಂದಿರುವವರು ಮತ್ತು ಅಂತಹ ಪ್ರದೇಶಗಳಲ್ಲಿ ವಾಸಿಸುವವರ ವಾಸ್ತವ್ಯಕ್ಕಾಗಿ ಪ್ರತ್ಯೇಕ ಪ್ಲೇಗ್ ಶಿಬಿರಗಳನ್ನು ಸ್ಥಾಪಿಸಲಾಯಿತು. ಬೆಂಗಳೂರು ಪಟ್ಟಣದಲ್ಲಿ, ವಾಸಕ್ಕೆ ಅನರ್ಹವೆಂದು ಪರಿಗಣಿಸಲ್ಪಟ್ಟ ಮನೆಗಳನ್ನು ನೆಲಸಮ ಮಾಡಲಾಯಿತು. ಜನಸಂದಣಿಯ ಪ್ರದೇಶಗಳನ್ನು ಮುಚ್ಚಿಸಿ, ಹೊಸ ಪ್ರದೇಶಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಜೊತೆಗೆ, ಸಾರ್ವಜನಿಕ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು, ಮತ್ತು ನೆಲಸಮ ಮಾಡದ ಮನೆಗಳಲ್ಲಿ ಸೋಂಕು ನಿವಾರಕ ಔಷಧಿ ಸಿಂಪರಣೆ ವ್ಯವಸ್ಥಿತವಾಗಿ ನಡೆಸಲಾಯಿತು. ವಿಶೇಷವಾಗಿ, ಬೆಂಗಳೂರು ನಗರದಲ್ಲಿ 50000 ಜನರಿಗೆ ವಾಸಿಸಲು ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ, ತಲಾ 1000 ಎಕರೆ ವ್ಯಾಪ್ತಿಯ ಎರಡು ದೊಡ್ಡ ವಿಸ್ತರಣಾ ಭೂಪ್ರದೇಶವನ್ನು ಮಂಜೂರು ಮಾಡಲಾಯಿತು. 

ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೂಡ, ಬಡ ಜನರಿಗೆ ಶೆಡ್ ಅಥವಾ ಕ್ಯಾಂಪ್ ನಿರ್ಮಿಸಲು ಮರದ ತುಂಡುಗಳು ಮತ್ತು ಬಿದಿರನ್ನು ಉಚಿತವಾಗಿ ನೀಡಲಾಯಿತು. ಸರ್ಕಾರವು, ಕಾರ್ಮಿಕರಿಗೆ ಹೊಸ ಪ್ರದೇಶಗಳಲ್ಲಿ ತಮ್ಮ ಮನೆಗಳನ್ನು ನಿರ್ಮಿಸಲು, ಒಂದು ವರ್ಷದ ಸಂಬಳವನ್ನು ಮುಂಗಡವಾಗಿ ಮಂಜೂರು ಮಾಡಿತು. ಕೋಲಾರದ ಚಿನ್ನದ ಗಣಿಯನ್ನು ರಕ್ಷಿಸಲು ಹೆಚ್ಚಿನ ಕಾಳಜಿ ವಹಿಸಲಾಯಿತು. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ, ದಿವಾನರು ತಮ್ಮ ಪ್ಲೇಗ್ ನಿರ್ವಹಣಾ ಕಾರ್ಯವಿಧಾನದ ಬಗ್ಗೆ ಹೀಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ, ‘ಸರ್ಕಾರ ಜಾರಿಗೊಳಿಸಲಾದ ಪ್ಲೇಗ್ ನಿಯಂತ್ರಣ ಕ್ರಮ ಎಲ್ಲೆಡೆ ಯಶಸ್ವಿಯಾಗಲಿಲ್ಲ. ಇವು, ಜನರ ಭಾವನೆ ಮತ್ತು ಪೂರ್ವಗ್ರಹಗಳ ವಿರೋಧ ಎದುರಿಸಿತು. ಇದರ ಫಲವಾಗಿ, ಜನ ಇನ್ನೂ ಹೆಚ್ಚು ಆತಂಕಿತರಾಗಿ, ಸಾವಿನ ಸಂಖ್ಯೆ ಹೆಚ್ಚಾಯಿತು.’

1899ರ ಅಕ್ಟೋಬರ್ 17ರಂದು, ದಿವಾನರು ಮೈಸೂರಿನ ದಸರಾ ಅಧಿವೇಶನದಲ್ಲಿ ಮಾಡಿದ ಭಾಷಣದ ಸಾರಾಂಶ ಹೀಗಿದೆ:

ಪ್ರತಿನಿಧಿ ಸಭೆ: 1898ರ ಆಗಸ್ಟ್ 12 ರಂದು, ಮೊದಲ ಬಾರಿ ರಾಜ್ಯದ ಬೆಂಗಳೂರು ನಗರದಲ್ಲಿ ಪ್ಲೇಗ್ ಸೋಂಕು ಕಾಣಿಸಿಕೊಂಡಿತು. ಇದು, ದಕ್ಷಿಣ ಮರಾಠಾ ರೈಲ್ವೆಯ ಹುಬ್ಬಳ್ಳಿ ಮತ್ತು ಇತರ ನಿಲ್ದಾಣಗಳಲ್ಲಿ ಸಾಂಕ್ರಾಮಿಕ ರೂಪದಲ್ಲಿ ಹರಡಿಕೊಂಡಿದ್ದರಿಂದ ಬೆಂಗಳೂರಿಗೆ ಪಸರಿಸಿರಬಹುದೆಂದು ನಂಬಬಹುದಾದರೂ, ಈ ರೋಗ ಬೆಂಗಳೂರು ತಲುಪಿದ ನಿಖರ ವಿಧಾನವನ್ನು ಇನ್ನೂ ತೃಪ್ತಿಕರವಾಗಿ ಕಂಡುಹಿಡಿಯಲಾಗಿಲ್ಲ. ಇದು, ಮೊದಲು ರೈಲ್ವೆ ಕೂಲಿಗಳಲ್ಲಿ ಕಂಡು ಬಂದಿತು. ನಂತರ, ರೈಲ್ವೆ ಉದ್ಯೋಗಿಗಳ ಕುಟುಂಬ ವರ್ಗದವರಿಗೆ ಮತ್ತು ಸ್ನೇಹಿತರಿಗೆ ಹರಡಿತು. ಇದು, ಬೆಂಗಳೂರಿನ ರೈಲ್ವೆ ಸರಕುಗಳ ಶೆಡ್ ನಿಂದ ಪ್ರಾರಂಭವಾಗಿ, ನಂತರ, ನಗರದ ಇತರ ಭಾಗಗಳಿಗೆ ಹರಡಿತು.

ಒಮ್ಮೆ ಈ ರೋಗವು ಬೆಂಗಳೂರು ನಗರದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಿ, ಆನಂತರ ಎಲ್ಲಾ ದಿಕ್ಕಿನಲ್ಲಿಯೂ ಶೀಘ್ರವಾಗಿ ಹರಡಿ, ನಾಗರಿಕ ಮತ್ತು ಮಿಲಿಟರಿ ಸ್ಟೇಷನ್, ಆಮೇಲೆ ಬೆಂಗಳೂರು ಜಿಲ್ಲೆಯ ಇತರ ಭಾಗಗಳಿಗೆ ಪಸರಿಸಿತು. ನಂತರ, ಮೈಸೂರು ನಗರ, ಕ್ರಮೇಣ ಮೈಸೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಕೆಲವು ಭಾಗಗಳಿಗೆ ಹರಡಿತು. ಇವುಗಳ ಮಧ್ಯೆ, ಸ್ಥಳೀಯ ಪ್ರಕರಣಗಳಿಂದ ಮುಕ್ತವಾಗಿದ್ದ ಜಿಲ್ಲೆಗಳೆಂದರೆ, ಶಿವಮೊಗ್ಗ, ಹಾಸನ, ಕಡೂರು ಮತ್ತು ಚಿತ್ರದುರ್ಗ ಮಾತ್ರ.

ಈ ಪ್ಲೇಗ್ ಸೋಂಕು, ಮೈಸೂರಿನ ಮಹಾರಾಜರು ಮತ್ತು ಅವರ ಕುಟುಂಬವನ್ನೂ ಬಿಡಲಿಲ್ಲ. ಇಡೀ ಕುಟುಂಬವನ್ನು ತಕ್ಷಣ ಪ್ರತ್ಯೇಕಿಸಿ, ಜಗನ್ಮೋಹನ್ ಅರಮನೆಗೆ ಸ್ಥಳಾಂತರಿಸಲಾಯಿತು. ಆ ಸಮಯದಲ್ಲಿ ಇದನ್ನು ಬಾಲಕಿಯರ ಶಾಲೆಯಾಗಿ ಬಳಸಲಾಗುತ್ತಿತ್ತು. ಇಡೀ ಕುಟುಂಬವು, ಜಗನ್ಮೋಹನ್ ಅರಮನೆಯಲ್ಲಿಯೇ ದಸರಾ ಆಚರಿಸಿತು. ಸರ್ಕಾರ 1900ರ ಸೆಪ್ಟೆಂಬರ್ 5ರಂದು, ಈ ಕ್ಯಾರೆಂಟೈನ್ ಸಮಯದಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಕಾರ್ಯವಿಧಾನದ ಸುದೀರ್ಘ ಜ್ಞಾಪಕ ಪತ್ರವನ್ನು ಹೊರಡಿಸಿತು:

10 ದಿನಗಳ ಸಮಾರಂಭದಲ್ಲಿ ರಾಜಮಾತೆ ಮತ್ತು ಮಹಾರಾಜರು ಜಗನ್ಮೋಹನ್ ಅರಮನೆಯಲ್ಲಿ ವಾಸಿಸುತ್ತಾರೆ. ಈಗ ಬಾಲಕಿಯರ ಶಾಲೆಯಾಗಿ ಬಳಸಲಾಗುತ್ತಿರುವ ಅರಮನೆಯ ಆ ಭಾಗದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಾರೆ. ಮಹಾರಾಣಿಯವರು, ದಸರಾ ಸಮಾರಂಭಗಳ ಪ್ರಾರಂಭವಾಗುವವರೆಗೂ ಮತ್ತು ಜಗನ್ಮೋಹನ್ ಅರಮನೆಯಲ್ಲಿ ಉಳಿಯಲು ಹೋಗುವವರೆಗೂ ಮೇಲ್ಮನೆಯಲ್ಲಿ ಇರುತ್ತಾರೆ. ಅವರೊಂದಿಗೆ, ಜಗನ್ಮೋಹನ ಅರಮನೆಗೆ ಹೋಗಲಿರುವ, ಅವರು ಪ್ರಸ್ತಾಪಿಸಿದ ಸೇವಕರು ಮಹಾರಾಣಿ ಅರಮನೆಗೆ ಹೋಗುವವರೆಗೆ ಮೇಲ್ಮನೆಯಲ್ಲಿ ಕ್ಯಾರೆಂಟೈನ್ ನಲ್ಲಿರಬೇಕು.

ಈ ಕ್ಯಾರೆಂಟೈನ್ ಪರಿಣಾಮಕಾರಿಯಾಗಿಸಲು ಸೇವಕರು ಯಾವುದೇ ಕೆಲಸದ ನೆಪದಲ್ಲಿ ಮಾರುಕಟ್ಟೆಗೆ ಹೋಗಬಾರದು. ಮೇಲ್ಮನೆಯ ಪಕ್ಕದಲ್ಲಿ ಅವರಿಗಾಗಿ ಸಣ್ಣ ಮಾರುಕಟ್ಟೆ ನಿರ್ಮಿಸಬೇಕು, (ರಾಜಮಾತೆಯ ವಾಸಸ್ಥಳದ ಹತ್ತಿರ). ಇದಲ್ಲದೆ, ಜವಾಬ್ದಾರಿಯುತ ಅಧಿಕಾರಿಯೊಬ್ಬರು, ಅರಮನೆಯ ಎಲ್ಲಾ ಸೇವಕರು ರಾತ್ರಿ 9 ಗಂಟೆಗೆ ತಂತಮ್ಮ ಕೋಣೆಯಲ್ಲಿದ್ದಾರೆ ಮತ್ತು ಮರುದಿನ ಬೆಳಿಗ್ಗೆ 6 ಗಂಟೆಗೆ ಪುನಃ ಅಲ್ಲೇ ಇದ್ದಾರೆಯೆಂದು ಖಚಿತಪಡಿಸಿಕೊಳ್ಳಬೇಕು. ಜ್ಞಾಪಕ ಪತ್ರದಲ್ಲಿ ಇದನ್ನು ಸಹ ಉಲ್ಲೇಖಿಸಲಾಗಿದೆ, ‘ಸೇವಕರ ಉಡುಗೆ ಶುದ್ಧವಾಗಿರಬೇಕು ಮತ್ತು ಪ್ರತಿದಿನವೂ ಅವರು ತಪ್ಪದೆ ಸ್ನಾನ ಮಾಡಬೇಕು’ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿತ್ತು.

ಅದಲ್ಲದೆ, ಅರಮನೆಯ ಸೇವಕರ ಪಟ್ಟಿಯನ್ನು ವೈದ್ಯರಿಗೆ ಕಳುಹಿಸಬೇಕೆಂದು ಜ್ಞಾಪಕದಲ್ಲಿ ಒತ್ತಾಯಿಸಲಾಗಿದೆ. ಜೊತೆಗೆ, ಸೇವಕರು ದಸರಾದ ಕೊನೆಯದಿನದ ಸಮಾರಂಭದವರೆಗೂ ಜಗನ್ಮೋಹನ್ ಅರಮನೆಯನ್ನು ಬಿಡಬಾರದು, ಸಮಾರಂಭದ ಸಮಯದಲ್ಲಿ ಅರಮನೆಯ ಆವರಣದಲ್ಲಿ, ಯಾವುದೇ ವ್ಯಕ್ತಿ ಪಾಸ್ ಇಲ್ಲದೆ ಪ್ರವೇಶಿಸಬಾರದು, ಗೇಟ್‌ನಲ್ಲಿರುವ ಕಾವಲುಗಾರರನ್ನು ನಿಯಮಿತವಾಗಿ ಬದಲಾಯಿಸಬೇಕು ಇತ್ಯಾದಿ. ಇವು, ರಾಜಮನೆತನಕ್ಕಾಗಿ ಸರಕಾರ ಕೈಗೊಂಡ ಉನ್ನತ ಕ್ರಮಗಳು.

ಕೃಪೆ: ಡೆಕ್ಕನ್ ಹೆರಾಲ್ದ್  

Leave a Reply

Your email address will not be published.