ಬಂದೇಬುಡ್ತು ಸುನಾವಣಾ ಫಲಿತಾಂಸ

ಅಂತೂ ಫಲಿತಾಂಶ ಬಂದಿದೆ. ಕಳ್ಳರು, ಸುಳ್ಳರು, ಕ್ರಿಮಿನಲ್ ಪರಂಪರೆಯವರು, ಭ್ರಷ್ಟರು, ನೀಚರು ಬೇರೆಬೇರೆ ಮುಖವಾಡ ಹಾಕಿಕೊಂಡು ಗೆದ್ದು ಬಂದಿದ್ದಾರೆ. 

ತೆಪರೇಸಿ ಎದೆ ಬಡ್ಕಂಡ್ ಅಳುತ್ತಿದ್ದ: “ಇಂಗೂ ಆಗಿಬುಡ್ತಾ ಸುನಾವಣಾ ಫಲಿತಾಂಸ? ಏಟೊಂದು ಕೆಲ್ಸಾ ಮಾಡಿದೀವಿ ನಾವು. ಆದ್ರೂ ನಮ್ಮಣ್ಣ ಗೆಲ್ಲಲಿಲ್ವಲ್ಲಲ್ಲೋ. ಅವ್ರಂಥ ಮಾನವೀಯತೆ ಇರೋ ಜನ ಇನ್ನೆಲ್ಲಾದ್ರೂ ಬರ್ತಾರಾ? ಎಷ್ಟು ಸಾರಾಯಿ ಕೊಡಿಸ್ತಿದ್ರು, ಬಾಡೂಟ ಆಕಿಸ್ತೀದ್ರು. ಆಪಾಟಿ ಹೋಮನೇಮ ಮಾಡ್ಸಿದ್ರು. ಕೊಳಕುಮಠದ ಸೋಮಿಗೋಲು ಕಾಳ ಜ್ಞಾನದ ಬುಕ್ಕು ತೆಗ್ದು, `ಹೋರಿಗಳೆರಡು ಹೋರೆ ಕೊಂಬು ಮುರ್ಕಂಡು ನೆತ್ರ ಸುರ್ಕಂಡ್ ನರಳ್ತಿದ್ರೆ ಈ ಪುಂಗವ ಗೆದ್ದು ಮೀಸೆ ತಿರುವ್ತದೆ’ ಅಂತ ಸೋಕ ಯೋಳಿದ್ದ್ ನಿಜವಾಯ್ತದೇಂತ ಅನ್ಕಂಡ್ರೆ ಸುಳ್ಳಾಯ್ತಲ್ಲ ಕಣಣ್ಣ. ನಮ್ಮಣ್ಣ ಗೆದ್ದಿದ್ರೆ ಸಾರಾಯಿ ಪೀಪಾಯಿಗೇ ಸ್ರ್ಟಾ ಆಕಿ ಕುಡಿಸ್ತಿದ್ರು. ನಂಗಾ ನಾಚ್ ಮಾಡ್ಸಿ ಮಲಿ ಕುಣಿಯೋದನ್ನ ತೋರಿಸಿದ್ರು. ಓಯ್ತಲ್ಲಪ್ಪಾ, ಯೆಲ್ಲ ಒಂಟೋಯ್ತ್.’’

ಕ್ಷೇತ್ರಕ್ಕೆ ಏನಾದರೂ ಮಾಡಲಿ, ಬಿಡಲಿ, ಕಾರ್ಯಕರ್ತರನ್ನು ಚೆನ್ನಾಗಿ ನೋಡಿಕೊಂಡರೆ ಸಾಕು ಎಂಬುದು ಅವನ ಮಾತಿನೊಳಗಿನ ಹೂರಣವಾಗಿತ್ತು.

ಅವಳು ಕೂಬಾ ಸರಂದ್ಲೋಜೆ. ಬಾಯಿ ಬಿಟ್ಟರೆ ವ್ಹಾಕ್ ಎನಿಸುವ ಕಪ್ಪು ವಸಡು. ಮಾತಿನಲ್ಲಿ ದೇಶಭಕ್ತಿ, ರಾಷ್ಟ್ರಗೌರವ, ಮೋದೀಜಿ ಮಾಡಿದ ದೇಶೋದ್ಧಾರಗಳ ಬಗೆಗೆ ಪುಂಖಾನುಪುಂಖವಾಗಿ ಮಾತನಾಡುವ ಅವಳಿಗೆ ಅರುವತ್ತು ವರ್ಷಗಳ ಆಡಳಿತದಲ್ಲಿ ಅವರು ಮಾಡದ್ದನ್ನು ನಾವು ಮಾಡಿದ್ದೇವೆ ಎನ್ನಲು ಹೆಮ್ಮೆ. ಹೌದು ಈ ಸಲ ಆಕಿ ಪ್ರಕಟಿಸಿದ ತನ್ನ ಸ್ಥಿರ, ಚರ ಸೊತ್ತುಗಳ ದ್ವಿಗುಣಿತ ಪ್ರಗತಿ ನೋಡಿದರೆ ನನಗೂ ಹಾಗೆಯೇ ಅನಿಸುತ್ತದೆ. ಆ ಬೇಕೂಫಗಳು ಅರುವತ್ತು ವರ್ಷಗಳಲ್ಲಿ ಇಷ್ಟು ಮಾಡ್ಲಿಕ್ಕೆ ಆಗದ್ದನ್ನು ತಾನು ಐದೇ ವರ್ಷದಲ್ಲಿ ಸಾಧಿಸಿದ್ದೇನೆಂಬ ಹೆಮ್ಮೆ ಅವಳಿಗಿದೆ. ಏನೂ ಮಾಡಿಲ್ಲವೆಂದು ಅವಳ ಕ್ಷೇತ್ರದ ಮತದಾರರು ಪ್ರತಿಭಟನೆ ಮಾಡಿದ್ದರ ಹಿಂದೆ ಸತ್ಯವಿದೆ, ಧರ್ಮವಿದೆ, ಈ ನೆಲದ ಸಂಸ್ಕೃತಿಯಿದೆ, ಕ್ಷಾತ್ರ ತೇಜಸ್ಸಿದೆ ಎನ್ನುವ ಅರಿವು ಅವಳಿಗೆ ಚೆನ್ನಾಗಿಯೇ ಇದೆ.

ಕಳೆದ ಸಲದ ಚುನಾವಣೆಯಲ್ಲಿ ಮುಸ್ಲೀಮರನ್ನು ಪಾಕಿಸ್ತಾನಕ್ಕೆ ಓಡಿಸಬೇಕು, ಗೋಮಾತೆಗೆ ದೇವಾಲಯ ಕಟ್ಟಬೇಕು, ರಾಮಮಂದಿರ ಏಳಬೇಕು ಎಂದು ಬೊಬ್ಬಿಡುತ್ತಿದ್ದ ಅದೇ ಮನುಷ್ಯ ಈ ಸಲ ಮುಸ್ಲೀಮರ ಟೋಪಿ ಹಾಕಿಕೊಂಡು ದರ್ಗಾದಲ್ಲಿ ನಮಾಜು ಮಾಡಿದ್ದ.

ಕಳೆದ ಸಲದ ಚುನಾವಣೆಯಲ್ಲಿ ಮುಸ್ಲೀಮರನ್ನು ಪಾಕಿಸ್ತಾನಕ್ಕೆ ಓಡಿಸಬೇಕು, ಗೋಮಾತೆಗೆ ದೇವಾಲಯ ಕಟ್ಟಬೇಕು, ರಾಮಮಂದಿರ  ಏಳಬೇಕು ಎಂದು ಬೊಬ್ಬಿಡುತ್ತಿದ್ದ ಅದೇ ಮನುಷ್ಯ ಈ ಸಲ ಮುಸ್ಲೀಮರ ಟೋಪಿ ಹಾಕಿಕೊಂಡು ದರ್ಗಾದಲ್ಲಿ ನಮಾಜು ಮಾಡಿದ್ದ. ಟಿಪ್ಪುವಿನ ಬಗೆಗೆ ಸುಪ್ರಭಾತ ಬರೆದು ಹಾಡಿದ್ದ. ಮೋದೀಜಿಯ ಆರ್ಥಿಕ ನೀತಿಯಿಂದ ದೇಶ ಸಂಪನ್ನವಾದ ಬಗೆಗೆ ಹೊಗಳಿದ್ದ ಅದೇ ನಾಲಿಗೆಯಲ್ಲಿ ನೋಟ್ ಬ್ಯಾನ್ ಮಾಡಿ ದೇಶ ಹಾಳಾದ ಬಗೆಗೆ ಸಾಕಷ್ಟು ಅಣಿಮುತ್ತುಗಳನ್ನು ಉದುರಿಸಿದ್ದ.

ಗೆದ್ದು ಬಂದ ಮೇಲೆ ಇರೋಧ ಪಕ್ಸದ ಪರವಾಗಿ ಅಡ್ಡ ಮತದಾನ ಮಾಡಿದ್ದ ಅದೇ ಧರ್ಮನಿಷ್ಠ ಈ ಸಲ ಅಲ್ಲಿಂದ ಇಲ್ಲಿಗೆ ಬಂದು ಗೆದ್ದವನು ಮೋದಿಯಿಂದ ದೇಶಕ್ಕೆ ಏನೆಲ್ಲ ಕೆಡುಕಾಯಿತೆಂದು ನಾಲಿಗೆಯನ್ನು ಮೆಟ್ಟುಗಲ್ಲಿಗೆ ತಿಕ್ಕಿ ತಿಕ್ಕಿ ಘೋಷಿಸಿದ್ದ. “ಯಾಕಣ್ಣ, ಅಲ್ಲಿಂದ ಇಲ್ಲಿಗೆ   ಬಂದೆ? ಈ ಪಕ್ಷದ ನೀತಿ ನಿಂಗೆ ಈ ಸಲ ಇಷ್ಟವಾಯಿತಾ?’’ ಕೇಳಿದರೆ ಅವನು ಖಿಕ್ ಎಂದು ನಕ್ಕು, “ನೀತಿ ಬಗೆಗೆ ಒಂದಕ್ಸರನೂ ಮಾತ್ನಾಡ್ಬೇಡ, ನಂಗೆಲ್ಲ ಗೊತ್ತಿದೆ. ಇಪ್ಪತ್ತು ಕೋಟಿ ತನಕ ಕೊಡ್ತೇನೆಂದ್ರೂ ಟಿಕೇಟ್ ಕೊಡ್ಲಿಲ್ಲ. ನೀತಿ ಬಗ್ಗೆ ಮಾತ್ನಾಡೋ ಪಕ್ಷದಲ್ಲೂ ಟಿಕೇಟು ಮಾರಾಟ ಆಗ್ತದೆ ಗೊತ್ತಾಯ್ತಾ? ಎಪ್ಪತ್ತು ಲಕ್ಸ ಮಾತ್ರ ಖರ್ಚು ಮಾಡು ಅಂತ ಚುನಾವಣಾ ಆಯೋಗ ವದರ್ತದೆ, ಅಷ್ಟಕ್ಕೆ ಗೆಲ್ಲೋಕೆ ಆಗ್ತದಾ? ಒಂದೊಂದು ಬೂತಿಗೆ ಇಪ್ಪತ್ತೈದು ಸಾವ್ರ ಅಂಚಿದ್ರೂ ಇದ್ಕಿಂತ ಎಚ್ಚಾಯ್ತದೆ. ಇನ್ನು ಬೋಳಿಮಕ್ಕಳು ಮತದಾರ ಬಂಧುಗಳು ಎಲ್ರ ಕೈಯಿಂದ್ಲೂ ದುಡ್ ಇಸ್ಕಂತವೆ. ಮನೆಗೆ ಓದಾಗ ನಿಂಗೇ ಓಟಾಕ್ತೀನಿ ಅಂತ ಪ್ರಮಾಣ ಮಾಡ್ತವೆ. ಸತ್ಯ, ನ್ಯಾಯ ಅನ್ನೋದ್ ಸತ್ತೇಹೋತ್ ಕಣಣ್ಣ. ಯಾರ್ನೂ ನಂಬಂಗಿಲ್ಲ, ಆಗ ಅಲ್ಲಿದ್ದೆ, ಈಗ ಇಲ್ಲಿದೀನಿ. ಎಲ್ಲಿಗೆ ಎಂಗೆ ಬೇಕೋ ಅಂಗೆ ಮಾತಾಡ್ತೀನಿ, ಜನ ನಂಬ್ತಾರೆ, ಓಟು ಕೊಡ್ತಾರೆ, ಇನ್ನೇನ್ಲಾ ಬೇಕು?’’ ಎಂದು ತಾನು ಮಾಡಿದ ಹೊಲಸು ಕಾರ್ಯದಲ್ಲೂ ಮತದಾರರ ಅಪ್ರಾಮಾಣಿಕತೆಯನ್ನು ಶಂಕಿಸುತ್ತಾನೆ.

ದನಗಳ್ಳರನ್ನು ಹಿಡಿಯೋದು, ತ್ರಿವಳಿ ತಲಾಖ್ ವಿರುದ್ಧ ಬೊಬ್ಬಿರಿಯೋದು ಇದಷ್ಟನ್ನೇ ಮಾಡಿದ್ದರೂ ಜನ ಅವನಿಗೆ ಓಟು ಮಾಡಿದ್ದಾರೆ. ಕಾರಣ ಜನಕ್ಕೆ ಬೇಕಾಗಿರೋದ್ ರಕ್ತ ಕುದಿಯುವ ಮಾತು ವಿನಾ ಕೆಲಸ ಅಲ್ಲ. ತಂಗಳಪ್ಪ ಹಲವಾರು ದೇವಾಲಯ ಸುತ್ತಿದ್ದಾನೆ, ಪೀಠಾಧೀಶರ ಕಾಲು ಹಿಡಿದಿದ್ದಾನೆ. ಚಂಡಿಕಾ ಹವನ ಮಾಡ್ಸಿದ್ದಾನೆ. ಸೊಸೆಯಂದಿರ ಬಗೆಗೆ ಅವನಿಗೆ ತೀರ ಅಸಮಾಧಾನವೂ ಇದೆ.

ಇನ್ನು ದಿಲ್ಲಿಗೆ ಹೋಗೋದೆ ಅಪರೂಪ ಮಾಡ್ಕೊಂಡಿದ್ದ ಗಿಳಿನಕುಮಾರ್ ಪಿಟೀಲು ಎಂಬವನು ರಾಜ್ಯದಲ್ಲೇ ನಂಬರ್ ಒಂದು ಸಂಸದನಂತೆ. ಪಾಪ, ಹಿಂದಿ ಭಾಷೆ ಬರೋದಿಲ್ಲ. ಕನ್ನಡಾಭಿಮಾನ ಎಷ್ಟಿದೆಯೆಂದರೆ ವಿರೋಧ ಪಕ್ಸದವರಿಗೆ ಬಳಸೋ ಅತಿ ಕೆಟ್ಟ ಕನ್ನಡ ಹೊರತು ಬೇರೊಂದು ಭಾಷೆ ಬರದವನು ಡೆಲ್ಲಿಗೆ ಹೋದ್ರೆ ಚಾ ಬೇಕಿದ್ರೂ ಹಿಂದೀಲೇ ಕೇಳ್ಬೇಕು. ಹಿಂದಿ ಬಿಲ್‍ಕುಲ್ ನಹೀ. ಹೀಗಾಗಿ ಊರಿನಲ್ಲೇ ಇದ್ಕೊಂಡು ರಾಜಕೀಯ ಮಾಡುತ್ತ, ಹಲವಾರು ಆಶ್ವಾಸನೆಗಳನ್ನು ನೀಡುತ್ತ ಇದರಲ್ಲಿ ಬಂದಿರೋದು ಶ್ವಾಸ ಮಾತ್ರ, ಆನೆ ಅಲ್ಲದಿದ್ರೂ ತನ್ನ ಕ್ಷೇತ್ರಕ್ಕೆ ನೂರೆಂಭತ್ತು ಕೋಟಿ ತಂದಿದೇನೆ ಅಂದಿದಾನೆ. ಕೇಂದ್ರದ ಹೆದ್ದಾರಿ ಪ್ರಾಧಿಕಾರದವರು ಸರಿಯಾಗಿ ಕೆಲಸ ಮಾಡದಿದ್ರೆ ಜೈಲಿಗೆ ಹಾಕಿಸ್ತೀನಿ ಎಂದು ಸಭೆಗಳಲ್ಲಿ ಅವನು ಮಾಡಿದ ಆಕ್ರೋಶಪೂರಿತ ಭೀಷಣಕ್ಕೆ ಚಪ್ಪಾಳೆ ಬಿದ್ದಿದೆ. ಜೊತೆಗೆ ಪ್ರಾಧಿಕಾರದಿಂದ ಸಂಜೆ ಅವನ ಮನೆಗೆ ಸಂಸದನಿಗೆ ಸಲ್ಲಬೇಕಾದ ನ್ಯಾಯೋಚಿತ ಕಪ್ಪದ ಚೆಕ್ ಕೂಡ ತಲುಪಿದೆ. ದನಗಳ್ಳರನ್ನು ಹಿಡಿಯೋದು, ತ್ರಿವಳಿ ತಲಾಖ್ ವಿರುದ್ಧ ಬೊಬ್ಬಿರಿಯೋದು ಇದಷ್ಟನ್ನೇ ಮಾಡಿದ್ದರೂ ಜನ ಅವನಿಗೆ ಓಟು ಮಾಡಿದ್ದಾರೆ. ಕಾರಣ ಜನಕ್ಕೆ ಬೇಕಾಗಿರೋದ್ ರಕ್ತ ಕುದಿಯುವ ಮಾತು  ವಿನಾ ಕೆಲಸ ಅಲ್ಲ.

ತಂಗಳಪ್ಪ ಹಲವಾರು ದೇವಾಲಯ ಸುತ್ತಿದ್ದಾನೆ, ಪೀಠಾಧೀಶರ ಕಾಲು ಹಿಡಿದಿದ್ದಾನೆ. ಚಂಡಿಕಾ ಹವನ ಮಾಡ್ಸಿದ್ದಾನೆ. ಸೊಸೆಯಂದಿರ ಬಗೆಗೆ ಅವನಿಗೆ ತೀರ ಅಸಮಾಧಾನವೂ ಇದೆ. ಒಂದೊಂದು ಮಗ ಆದ ಕೂಡಲೇ ಯಾಕೆ ಅವರೆಲ್ಲ ಮಗು ಬರೋ ದಾರಿಗೆ ಗೇಟು ಹಾಕ್ಬೇಕಿತ್ತು? ಇನ್ನೊಂದಷ್ಟು ಮೊಮ್ಮಕ್ಕಳಿರ್ತಿದ್ರೆ ರಾಜ್ಯದ ಅಷ್ಟೂ ಕ್ಷೇತ್ರಗಳಿಗೆ ಚುನಾವಣೆಗೆ ನಿಲ್ಲಿಸುವ ಮೂಲಕ ಜಾತ್ಯತೀತ ಪಕ್ಷ ಮಾತ್ರವಲ್ಲ, ನಮ್ಮ ಕೌಟುಂಬಿಕ ಪಕ್ಷ ಅಂತ ರಿಜಿಸ್ಟರ್ ಮಾಡಿಸಬಹುದಿತ್ತಲ್ಲವೆ! ಹೀಗೆ ಪರಿತಪಿಸುತ್ತಿದ್ದಾನೆ. ಹಲವು ಕಡೆ ಗ್ಲಿಸರಿನ್ ಹಾಕದೆ ಕಂಬನಿ ಮಿಡಿದಿದ್ದರೆ ನಮ್ಮನ್ನು ನಂಬಿದ ಮತದಾರ ರಿಗೆ ಚಿಪ್ಪು ಬಿಟ್ರೆ ಇನ್ನೇನೂ ಕೊಟ್ಟಿಲ್ಲ ಅನ್ನುವ ಪಶ್ಚಾತ್ತಾಪ ಕಾರಣ ಅಲ್ಲ. ಇದು ನನ್ನ ಕಟ್ಟ ಕಡೆಯ ಚುನಾವಣೆ ಎನ್ನುತ್ತ ಬದುಕಿರುವ ತನಕ, ಹಾಸಿಗೆಯಲ್ಲಿ ಗೊಟಕ್ ಅನ್ನುವ ತನಕ ಸ್ಪರ್ಧಿಸುತ್ತಲೇ ಇರುವ ಆಶಯದ ಹಿಂದಿರುವ ಜನಾಕರ್ಷಣೆಯ ಟ್ರಾಜಿಡಿ ಸೀನ್.

ಸುನಾವಣೆಗೆ ನಿಂತ ಎಲ್ಲರ ಬಾಯಲ್ಲೂ ದೇಶೋದ್ಧಾರದ ಭಗವದ್ಗೀತೆಯಿದೆ. ಸರ್ವ ಧರ್ಮ ಸಮನ್ವಯದ ಸಹೃದಯತೆಯ ಉದಾಹರಣೆಗಳಿವೆ. ವೇದ, ಉಪನಿಷತ್, ಪುರಾಣಗಳ ಆಸ್ಖಲಿತ ಉಪದೇಶವಿದೆ. ಆದರೆ ಯಾರೂ ಕೋಟಿಗಟ್ಟಲೆ ಹಣ ಮುಗಿಸದೆ ಗೆದ್ದು ಬಂದಿರೋಲ್ಲ.

ಮಂಡಿಯೂರಪ್ಪನ ಮೊಗದಲ್ಲಿ ಕಾದ ಕಾವಲಿಗೆಯ ಕಳೆ. ಮುಂಡೇದಕ್ಕೆ ನಗು ಅಂ ದರೆ ಏನನ್ನೋದು ಗೊತ್ತಿಲ್ಲ. ಮುಖದ ಮ್ಯಾಗೆ ಭತ್ತ ಬಿಸಾಡಿದ್ರೆ ಅರಳಾಗಿ ಸಿಡಿಯುತ್ತೆ. ಅದಕ್ಕಾಗಿ ಸದಾ ನಗುವ ಬೇತಾಳವನ್ನು ಜೊತೆಗೆ ಕರೆದೊಯ್ಯುತ್ತಾನೆ. ನೂರನಾಲ್ಕು ಬಂದ ಕೂಡಲೇ ಕುರ್ಚಿ ಸಿಕ್ಕೇಬಿಡ್ತು ಅನ್ಕಂಡು ಅರಮನೆ ಮೈದಾನಕ್ಕೆ ಬರಲು ಅಷ್ಟೂ ಜನರಿಗೆ ಹೇಳಿದ್ದಾನೆ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಸಮಾರಂಭಕ್ಕೆ ಬರಲು ವಿಮಾನದ ಟಿಕೇಟು ಬುಕ್ ಮಾಡ್ಸಿದಾನೆ. ಇಷ್ಟೆಲ್ಲ ಆದ್ರೂ ಗಣಿತ ಗೊತ್ತಿರಲಿಲ್ಲ. ಮೂವತ್ತೇಳು ನೂರಾನಾಲ್ಕಕ್ಕಿಂತ ದೊಡ್ಡದಾಗುತ್ತೆ, ಪವರ್ ಫುಲ್ ಎಂಬೋದು ತಿಳಿದಿರಲಿಲ್ಲ. ನೂರಾನಾಲ್ಕು ಸಂಖ್ಯೆಗೇ ಸ್ಟ್ರಕ್ ಆಗುತ್ತೆ, ಮುಂದಿನ ಎಲ್ಲ ಕ್ಷೇತ್ರಗಳ ಫಲಿತಾಂಸಾನೂ ಬೇರೆಯೋರಿಗೆ ಹೋಗುತ್ತೆ ಅಂತ ಗೊತ್ತಿರ್ತಿದ್ರೆ ಲಂಚವನ್ನು ಚೆಕ್ ಮೂಲಕ ತಗಂಡು ಜೈಲಿನಲ್ಲಿ ಮುದ್ದೆ ಮುರಿಯುತ್ತಿರಲಿಲ್ಲ. ವಂಶ ಪಾರಂಪರ್ಯ ಆಡಳಿತದ ಬಗೆಗೆ ಮಾತನಾಡುವ ಇವನ ಮಕ್ಕಳು ಕೂಡ ಒಂದಷ್ಟು ಕೋಟಿ ಗೆಬರಿ ಕೊಂಡಿದಾರೆ. ಸ್ಪರ್ಧೆಗೆ ನಿಂತು ಕೋಟಾ ಖಾಲಿ ಮಾಡ್ಕಂಡಿದಾರೆ. ಗೆದ್ದು ಬಂದ್ರೆ ಇದ್ರ ನೂರು ಪಟ್ಟು ಮಾಡ್ಕೋತಾರೆ. ಸುನಾವಣೆಗೆ ನಿಂತ ಎಲ್ಲರ ಬಾಯಲ್ಲೂ ದೇಶೋದ್ಧಾರದ ಭಗವದ್ಗೀತೆಯಿದೆ. ಸರ್ವ ಧರ್ಮ ಸಮನ್ವಯದ ಸಹೃದಯತೆಯ ಉದಾಹರಣೆಗಳಿವೆ. ವೇದ, ಉಪನಿಷತ್, ಪುರಾಣಗಳ ಆಸ್ಖಲಿತ ಉಪದೇಶವಿದೆ. ಆದರೆ ಯಾರೂ ಕೋಟಿಗಟ್ಟಲೆ ಹಣ ಮುಗಿಸದೆ ಗೆದ್ದು ಬಂದಿರೋಲ್ಲ. ಇದೊಂದು ಬಿಸಿನೆಸ್. ಖರ್ಚು ಮಾಡಿದ ಹಣಾನ ಹೇಗಿದ್ರೂ ಮತ್ತೆ ಪಡೀತೀನಿ ಅನ್ನುವ ಆತ್ಮವಿಶ್ವಾಸ ಇರೋದ್ರಿಂದ್ಲೇ   ಅದಕ್ಕೆ ಇಳಿದಿದ್ದಾನೆ. ಅವನಿಗೆ ರಕ್ತ ಬೇಕಿದ್ರೂ ಕೊಡಲು ಸಿದ್ಧನಿರುವ ಕಾರ್ಯಕರ್ತನಿಗೆ ಸಂಜೆ ಎಣ್ಣೆಗೆ ದುಡ್ಡು ಬರದಿದ್ದರೆ ಇವನ ರಕ್ತವನ್ನೇ ಗಟಗಟ ಅಂತ ಕುಡ್ದುಬಿಡ್ತಾನೆ.

ಗೆದ್ದು ಬಂದ ಮೇಲೆ ಏನ್ಮಾಡ್ತೀಯಣ್ಣ ಅಂತ ಕೇಳಿದ್ರೆ ಏನಂತಾನೆ? ನಮ್ಮನೀ ಮುಂದೆ ನೂರೆಕ್ರೆ ಮಾವಿನ ತೋಪು ಐತಲ್ಲ, ಅದನ್ನ ತಗೋತೀನಿ ಅಂತಾನೆ.

ಇವತ್ತು ಹಸಿರು ಶಾಲು ಹಾಕಿಕೊಂಡ ಮತದಾರ ನಾಳೆ ಬೆಳ್ಳಂಬೆಳಗ್ಗೆ ಕೇಸರಿ ಶಾಲು ಹೊದ್ಕೊಂಡಿದಾನೆ ಅಂದ್ರೆ ಏನರ್ಥ? ಮುಂಡೇದೇ, ಅವನು ರಾಮಮಂದಿರ ಆಗಲಿ ಅಂತಾನೋ ತ್ರಿವಳಿ ತಲಾಖ್ ನಿಂತುಬಿಡಲಿ ಅಂತಾನೋ ಶಾಲು ಬದಲಾಯಿಸಿಲ್ಲ. ಮಧ್ಯರಾತ್ರೆ ಅವನ ಮನೆಯಂಗಳಲ್ಲಿ ಧರ್ಮ ಪಕ್ಷದ ಅಭ್ಯರ್ಥಿಯ ಕಾರು ನಿಂತಾಗ ಅವನಲ್ಲಿ ಸ್ಫುರಿಸಿದ ಹಿಂದುತ್ವದ ನಿಷ್ಠೆಯೂ ಬದಲಾವಣೆ ತಂದುದಲ್ಲ. ಒಂದು ಪಿಂಕ್ ನೋಟು, ಜೊತೆಗೊಂದು ಗಿಫ್ಟ್ ಇಷ್ಟರಲ್ಲೇ ದೆಶದ ಭವಿಷ್ಯವನ್ನು ಅಸಮರ್ಥರ, ದುಷ್ಟರ, ಅವಿವೇಕಿಗಳ, ಅನುಭವ ಶೂನ್ಯರ ಕೈಗೆ ಒಪ್ಪಿಸಿಬಿಟ್ಟ ಅಲ್ಪತೃಪ್ತ ಶಿಖಾಮಣಿ.

ಗೆದ್ದು ಬಂದ ಮೇಲೆ ಏನ್ಮಾಡ್ತೀಯಣ್ಣ ಅಂತ ಕೇಳಿದ್ರೆ ಏನಂತಾನೆ? ನಮ್ಮನೀ ಮುಂದೆ ನೂರೆಕ್ರೆ ಮಾವಿನ ತೋಪು ಐತಲ್ಲ, ಅದನ್ನ ತಗೋತೀನಿ ಅಂತಾನೆ. ಮಗ ಈಗ್ಲೇ ಹಟ ಹಿಡಿದು ಕೂತಿದಾನಂತೆ, ಒಂದು ಫ್ಯಾಕ್ಟರಿ ಹಾಕ್ತೀನಿ ದುಡ್ ಕೊಡು ಅಂತ. ಒಬ್ಬ ಸಂಸದನ ಮಗ ಹಾಗೆ ಬಯಸೋದು ತಪ್ಪಲ್ಲವಲ್ಲ! ಅಚ್ಚುಕಟ್ಟಾಗಿ ಮಗನಿಗೆ ಅದನ್ನು ಮಾಡಿಕೊಡ್ತಾನೆ. ಈಗಿರೋ ಕಾರು ಹಳತಾಗಿದೆ, ದರ್ಶನ್ ಹತ್ತಿರ ಇರೋ ಕೋಟಿಗಳ ಕಾರು ವೈನಾಗಿದೆ ಅಂತಾಳೆ ಹೆಂಡತಿ. ಇಂತಹ ಹಲವಾರು ಆಶೆಗಳು ಕಣ್ಮುಂದೆ ಇವೆ.

ಇನ್ನು ಮಠಾಧಿಪತಿಗಳಿಗೆ ಕೊಟ್ಟ ಆಶ್ವಾಸನೆಗಳಿವೆ, ದೈವ ದೇವರ ಕ್ಷೇತ್ರಗಳಲ್ಲಿ ಯಾಗ ಯಜ್ಞಗಳಾಗಬೇಕು. ಇದನ್ನೆಲ್ಲ ಮಾಡಿಸುವ ಚಿಂತನೆಯಿದೆ. ಏನ್ ಸ್ವಾಮಿ ಇದು? ನಿಮ್ಮ ಕ್ಷೇತ್ರದಲ್ಲಿ ಜನಗಳಿಗೆ ಕುಡಿಯುವ ನೀರಿಲ್ಲ, ಶಾಲೆಯ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ, ಓಡಾಡೋ ರಸ್ತೆ ಶ್ಮಶಾನಕ್ಕೆ ಎಂಡ್ ಆಗತ್ತೆ ಎಂದು ಜನ ತಕರಾರು ತೆಗೆದರೆ ಗೆದ್ದು ಬರೋತನಕ ಜನಗಳ ಕಾಲು ಹಿಡೀತಿದ್ದವನು ಈಗ ಕುತ್ತಿಗೆ ಹಿಡೀತಾನೆ. ಆಕಾಸ ಬೀಳ್ತದೆ ಅಂತ ಅಂಗೈ ಒಡ್ಡೋದಕ್ಕೇ ಆಗ್ತದೇನ್ಲ? ಕುಡಿಯೋ ನೀರು ಹಿಂದಿನವರು ಅರುವತ್ತು ವರ್ಷದಲ್ಲಿ ಕೊಡೋದಕ್ಕೇ ಆಗದ್ದನ್ನ ಆರು ವರ್ಷದಲ್ಲಿ ಕೊಡಿ ಅಂದ್ರೆ ಎಂಗೆ? ವಸಿ ತಡ್ಕಳ್ಳಿ. ಇನ್ನೊಂದು ನೂರು ವರ್ಷದಲ್ಲಿ ಮಂಗ್ಳೂರಿನ ಸಮುದ್ರಾನ ತಿರುವಿ ಇಲ್ಲಿಗೆ ತಂದು ಕುಡೀಯೋ ನೀರು ಮಾತ್ರ ಅಲ್ಲ, ಮನೆ ಬೇಕಿದ್ರೂ ಮುಳುಗಸ್ತೀವಿ ಎಂದು ವೀರಾವೇಶದಿಂದ ಹೇಳುವ ಕೆಚ್ಚು ಅವನಲ್ಲಿದೆ.

ಜನಕ್ಕೆ ಕಲಿಯುವಷ್ಟು ಉಚಿತ ಶಿಕ್ಷಣ ಕೊಡೋದು, ವೈದ್ಯಕೀಯ ವಿದ್ಯಾಲಯಗಳನ್ನು ಸರಕಾರ ಆರಂಭಿಸಿ ಫೀಜು ತಗಳ್ಳದೆ ಡಿಗ್ರಿ  ಕೊಡಿಸೋದು ಇದೊಂದೂ ಜನಗಳಿಗೆ ಬ್ಯಾಡ. ಸಾಲ ತಗಳ್ಳೋದ್, ಮಜಾ ಮಾಡಿ ಮಗ್ಸೋದು, ಮನ್ನಾ ಮಾಡಿ ಅಂತ ಬೊಬ್ಬೆ ಹೊಡಿಯೋದ್, ಸಾಲ ಹೆಚ್ಚಾಯ್ತೋಂತ ಆತ್ಮಹತ್ಯೆಗೆ ಶರಣಾಗೋದು ಇದ್ರಲ್ಲಿ ಇರುವ ಖುಷಿ ಶಿಕ್ಷಣದಲ್ಲಿ ಸಿಗಲ್ಲ. ಮೂವತ್ತು ಕಿಲೋ ಅಕ್ಕಿ ಉಚಿತವಾಗಿ ಸಿಗೋವಾಗ ದುಡಿಯುವ ಅವಶ್ಯ ಏನಿದೆ?

ಅದು ಹುಲ್ಲುಗಾವಲಿನಲ್ಲಿ ಮೇಯುತ್ತಿರುವ ದನದ ಚಿತ್ರ. ಅರೇ, ಇಲ್ಲಿ ದನವೂ ಇಲ್ಲ, ಹುಲ್ಲೂ ಕಾಣಿಸ್ತಿಲ್ಲ ಅಂತ ನೀವು ಹೇಳಿದ್ರೆ ಮುಖಕ್ಕೆ ಫಟಾರ್ ಅಂತ ಹೊಡೆಯುವ ಉತ್ತರವಿದೆ. ದನ ಹುಲ್ಲು ಮೇದು ಮುಗಿಸಿದೆ, ಮತ್ತೆ ಅಲ್ಲಿ ಏನಕ್ಕೆ ನಿಲ್ತದೆ?

ನನ್ನ ಮಗ ನನ್ನನ್ನು ನೋಡ್ಕೊಳ್ತಾ ಇಲ್ಲ ಅಂತ ಒಂದು ಘೋಷಣೆ ಕೂಗಿದ್ರೆ ಅರುವತ್ತೈದು ದಾಟಿದವರಿಗೆ ತಿಂಗಳಿಗೆ ಸಾವಿರ ಬರುತ್ತೆ, ಆ ಹಣಾನ ಮನೆಗೊಯ್ಯೋದ್ ಮಗನೇ ಆಗಿದ್ರೂ ಇದೆಲ್ಲ ಸರಕಾರದ ಕೊಡುಗೆ ಅಂದ್ಕಂಡ್ ಸದುಪಯೋಗಕ್ಕೆ ಕಾದಿರುವ ಜನಗಳಿಗೆ ನಿಜವಾದ ಅಭಿವೃದ್ಧಿಯ ಕನಸು ಸುಟ್ಟುಹೋಗಿದೆ. ಜಿಎಸ್‍ಟಿ ಬಂದ ಮ್ಯಾಕೆ ಹತ್ತ್ ಪೈಸೆಗೆ ಕಿಲೋ ಅಕ್ಕಿ ಸಿಗ್ತದೆ ಅನ್ಕಂಡವ್ರಿಗೆ ಬದಲಾವಣೆಯ ವಾಸನೆ ಕೂಡ ಬಂದಿರಲಿಲ್ಲವಾದ್ರೂ ಹಮಾರೇ ಕೋ ದೇಶ ಸಂಪೂರ್ಣ ಬದಲ್ ಕರ್ತಾ ಹೈ ಎಂಬ ಹೈಪಿಚ್ಚಿನ ಕೂಗು ಕೇಳಿ ಕೇಳಿ ಉಂಟಾದ ಮತಿಭ್ರಮಣೆಯ ಫಲವಾಗಿ ಎಲ್ಲರೂ ಅದನ್ನು ಕೂಗುತ್ತಿದ್ದಾರೆ. ಖಾಲಿ ಹಾಳೆ ಇದೆ. ಅದು ಹುಲ್ಲುಗಾವಲಿನಲ್ಲಿ ಮೇಯುತ್ತಿರುವ ದನದ ಚಿತ್ರ. ಅರೇ, ಇಲ್ಲಿ ದನವೂ ಇಲ್ಲ, ಹುಲ್ಲೂ ಕಾಣಿಸ್ತಿಲ್ಲ ಅಂತ ನೀವು ಹೇಳಿದ್ರೆ ಮುಖಕ್ಕೆ ಫಟಾರ್ ಅಂತ ಹೊಡೆಯುವ ಉತ್ತರವಿದೆ. ದನ ಹುಲ್ಲು ಮೇದು ಮುಗಿಸಿದೆ, ಮತ್ತೆ ಅಲ್ಲಿ ಏನಕ್ಕೆ ನಿಲ್ತದೆ? ಎದ್ದೋಡ್ತದೆ ಅಂತ ಅದೇ ಪಕ್ಷದವರು ಹೇಳಿದ ಮೇಲೆ ಖಾಲಿ ಹಾಳೆ ನೋಡಿ ಅಲ್ಲಿ ಅಭಿವೃದ್ಧಿಯನ್ನು ಗುರುತಿಸಲು ಶ್ರಮಪಡುತ್ತಾನೆ ಮತದಾರ.

ಅಂತೂ ಫಲಿತಾಂಶ ಬಂದಿದೆ. ಕಳ್ಳರು, ಸುಳ್ಳರು, ಕ್ರಿಮಿನಲ್ ಪರಂಪರೆಯವರು, ಭ್ರಷ್ಟರು, ನೀಚರು ಬೇರೆ ಬೇರೆ ಮುಖವಾಡ ಹಾಕಿಕೊಂಡು ಗೆದ್ದು ಬಂದಿದ್ದಾರೆ. ಚುನಾವಣಾ ಆಯೋಗ ಹೇಳುವ ಎಪ್ಪತ್ತು ಲಕ್ಷದ ಮಿತಿಯಲ್ಲಿ ಖರ್ಚು ಮಾಡಿ ಯಾರೂ ಗೆದ್ದವರಲ್ಲ, ಅಷ್ಟೇ ಹಣ ಮುಗಸ್ತೀನಿ ಅಂದವರು ಗೆಲ್ಲೋದೂ ಇಲ್ಲ. ವಂದೇ ಗೋಮಾತರಮ್ ಅಂತ ಕೂಗಿದ ಯಾರೂ ಗೋಹತ್ಯೆಯನ್ನು ನಿಲ್ಲಿಸೋದಿಲ್ಲ, ಮುದಿ ದನಗಳಿಗೆ, ಹೋರಿ ಕರುಗಳಿಗೆ ಗೋಶಾಲೆ ಕಟ್ಟಿಸುವುದಿಲ್ಲ. ನಾಳೆ ಜನ ಅದನ್ನೆಲ್ಲ ಕೇಳೋದೂ ಇಲ್ಲ.

ಐದು ವರ್ಷ ಖರ್ಚು ಮಾಡಿದ ಹಣ ಮರು ಸಂಪಾದನೆಯ ಮಾರ್ಗದಲ್ಲಿ ತಲ್ಲೀನರಾಗುವ ದುಷ್ಟ ವರ್ಗದ ಕೈಗೆ ದೇಶದ ಚುಕ್ಕಾಣಿ ಕೊಟ್ಟಿದ್ದೇವೆ, ಮತ್ತೊಮ್ಮೆ ಮೂರ್ಖರಾಗಿ ರಾಮರಾಜ್ಯದ ಕನಸು ಕಾಣುತ್ತ ಹರಕು ಚಾದರ ಹೊದ್ದು, ಕಡಿಯುವ ಸೊಳ್ಳೆಗಳ ಕಾಟದಿಂದ ಮೈಯನ್ನು ಬರಬರ ಕೆರೆದುಕೊಂಡು ಪವಿತ್ರವಾದ ಸಂಸತ್ತಿನ ನೆಲವನ್ನು ಅಪವಿತ್ರರಿಂದ ತುಂಬುವ ಘನವಾದ ಪಾಪದಲ್ಲಿ ಭಾಗಿಯಾಗಿದ್ದೇವೆ. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬ ಮಾತನ್ನು ಹೇಳಿದವನ ದೇಶದ ಜನ ನಾವಲ್ಲವೆ!

Leave a Reply

Your email address will not be published.