ಬದುಕು ಮುಗಿಸಿದ ಕನ್ನಡದ ಮೊದಲ ಬಾಂಡ್‍ಗರ್ಲ್ ಜಯಂತಿ

ಎನ್.ಎಸ್.ಶ್ರೀಧರ ಮೂರ್ತಿ

ಜಯಂತಿ ಎಂದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬರೀ ಕಲಾವಿದೆ ಮಾತ್ರವಲ್ಲ, ಒಂದು ಅಧ್ಯಾಯವೇ ಸರಿ. ರಾಜ್ಕುಮಾರ್ ಅವರನ್ನು ಜಯಂತಿಯವರೊಬ್ಬರೇರಾಜ್ಅಂತ ಕರೆಯುತ್ತಾ ಇದ್ದಿದ್ದು. ಈಗ ಅಧ್ಯಾಯ ಮುಗಿದಿದೆ.

ಜಯಂತಿಯವರನ್ನು ನೋಡಿದರೆ ಯಾರಿಗೂ ದೊಡ್ಡ ಸ್ಟಾರ್ ಎನ್ನಿಸುತ್ತಲೇ ಇರಲಿಲ್ಲ. ಮಾತು ತೀರಾ ಸರಳ, ಸ್ವಭಾವವನ್ನು ಬೇಕಿದ್ದರೆ ಮುಗ್ಧ ಎಂದೇ ಕರೆಯ ಬಹುದು. ಮನಸ್ಸಿನಲ್ಲಿ ಏನೂ ಮುಚ್ಚಿಟ್ಟು ಕೊಳ್ಳೋದು ಅವರ ಸ್ವಭಾವದಲ್ಲಿಯೇ ಇರಲಿಲ್ಲ. ನಾನು ಅವರನ್ನು ಪ್ರತಿ ಸಲ ಭೇಟಿ ಮಾಡಿದಾಗಲೂ ಬಡಬಡನೇ ಮಾತನಾಡುತ್ತಿದ್ದರು. ಅವರ ಮಾತಿನ ಪ್ರವಾಹದಲ್ಲಿ ಇತಿಹಾಸ ಕೊಚ್ಚಿ ಹೋಗುತ್ತಿತ್ತು. ನಾವು ನಮಗೆ ಬೇಕಾದ ಅಂಶಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕಿತ್ತು.

ನಾನು ಅವರನ್ನು ಕೊನೆಯ ಸಲ ನೋಡಿದ್ದು ಟಿ.ಎಸ್.ನಾಗಾಭರಣ ಅವರ ಜನ್ಮದಿನದ ಕಾರ್ಯಕ್ರಮ ಜನವರಿ 23ರಂದು. ಅವರು ಇನ್ನೇನು ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಬಂದಿದ್ದರು. ಅನಾರೋಗ್ಯದಿಂದ ಕುಗ್ಗಿದ್ದರು. ಆದರೆ ಮಾತಿನಲ್ಲಿ ಅದು ಕೊಂಚವೂ ಕಾಣಿಸಿಕೊಂಡಿರಲಿಲ್ಲ. ನನ್ನ ಕಂಡ ಕೂಡಲೇಏನೋ ಶ್ರೀಧರ ಹೀಗಿದ್ದಿಯೋಎಂದು ಅವರು ಕೂಗಿಕೊಂಡಿದ್ದು ಇನ್ನೂ ನನ್ನ ಕಿವಿಯಲ್ಲಿ ಹೊಸದು ಎನ್ನುವ ಹಾಗೇ ಇದೆ. ಅವರು ನನ್ನನ್ನು ಮಾತ್ರವಲ್ಲ ಹತ್ತಿರದವರು ಯಾರನ್ನೇ ಕಂಡರೂ ಹೀಗೆ ಪ್ರೀತಿ ಸಂಭ್ರಮಗಳಿಂದಲೇ ಮಾತನಾಡಿಸುತ್ತಾ ಇದ್ದರು.

ರಾಜ್ ಕುಮಾರ್ ಅವರ ಜೊತೆ ಅತಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಅನ್ನಿಸಿಕೊಂಡಿರುವ ಜಯಂತಿ ಕೂಡ ಭರತ ನಾಟ್ಯ ಕಲಾವಿದೆ ಆಗುವ ಕನಸನ್ನು ಕಂಡವರು. ಅವರ ನಿಜವಾದ ಹೆಸರು ಕೃಷ್ಣಕುಮಾರಿ. ತಂದೆ ಕಾಲದಲ್ಲಿಯೇ ಕಾಲೇಜ್ ಉಪನ್ಯಾಸಕರು. ಮಗಳನ್ನು ಕಾನ್ವೆಂಟ್ನಲ್ಲಿ ಓದಿಸಿ ಡಾಕ್ಟರ್ ಮಾಡುವ ಕನಸು ಕಾಣ್ತಾ ಇದ್ದರು. ಆದರೆ ತಾಯಿ, ಮಗಳು ಸಿನಿಮಾ ಕಡೆ ಬರಲಿ ಅಂತ ಆಸೆ ಪಡ್ತಾ ಇದ್ದವರು. ತಾಯಿಯ ಆಸೆಗೆ ಸ್ಟುಡಿಯೋ ಸುತ್ತುವರೆದರೂ ಅವಕಾಶ ಸುಲಭವಾಗಿ ಸಿಗಲಿಲ್ಲ. ಕೊನೆಗೆ ಎನ್.ಟಿ.ಆರ್. ಅವರಜಗದೇಕವೀರ ಕಥಾಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರ ಸಿಕ್ಕಿತು. ಅದರಿಂದಲೇ ತೆಲುಗು ಚಿತ್ರರಂಗದ ಗಮನ ಸೆಳೆದ ಅವರು ಬಹು ಬೇಗ ಬೇಡಿಕೆ ತಾರೆ ಅನ್ನಿಸಿಕೊಂಡುಬಿಟ್ಟರು.

ಜಯಂತಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದುಜೇನುಗೂಡುಸಿನಿಮಾ ಮೂಲಕ. ಆದರೆ ಹೆಸರು ಮಾಡಿದ್ದುಚಂದವಳ್ಳಿಯ ತೋಟಸಿನಿಮಾ ಮೂಲಕ. ಅಲ್ಲಿಂದ ಮುಂದೆ ಕನ್ನಡ ಸಿನಿಮಾದಲ್ಲಿ ಅವರು ಬಹಳ ಬೇಡಿಕೆ ನಟಿ ಎನ್ನಿಸಿಕೊಂಡುಬಿಟ್ಟರು. 1964ರಿಂದ 1970ರೊಳಗೆ ಅವರು ಅರವತ್ತು ಕನ್ನಡ ಸಿನಿಮಾದಲ್ಲಿ ಆಕ್ಟ್ ಮಾಡಿದ್ದರು. 1964-65ರಲ್ಲಿ ಅವರು ಅಭಿನಯಿಸಿದ ತಲಾ ಆರು ಚಿತ್ರಗಳು ಬಿಡುಗಡೆಯಾದರೆ 1966ರಲ್ಲಿ ಅದು ಏಳಕ್ಕೆ ಏರಿತು. 1967ರಲ್ಲಿ ಒಂಬತ್ತು ಚಿತ್ರಗಳು ಬಿಡುಗಡೆಯಾದರೆ 1969, 1971ರಲ್ಲಿ ಅದು ಹತ್ತಕ್ಕೆ ಏರಿತು. 1982ರಲ್ಲಿಧರ್ಮ ದಾರಿ ತಪ್ಪಿತುಚಿತ್ರದ ಮೂಲಕ ಶತಚಿತ್ರ ನಟಿ ಎನ್ನಿಸಿಕೊಂಡರು.

ಮಿಸ್ ಲೀಲಾವತಿ’ ‘ಬೆಟ್ಟದ ಹುಲಿಸಿನಿಮಾಗಳಲ್ಲಿ ಜಯಂತಿ ಸ್ವಿಮಿಂಗ್ ಸೂಟ್ ಹಾಕಿ ಬೋಲ್ಡ್ ಪಾರ್ಟ್ ಮಾಡಿದರು. ಕನ್ನಡದಲ್ಲಿ ಮೊದಲ ಬಾಂಡ್ ಸಿನಿಮಾಜೇಡರ ಬಲೆಬಂದಾಗ ಮೊದಲ ಬಾಂಡ್ ಗರ್ಲ್ ಎನ್ನಿಸಿಕೊಂಡವರೂ ಕೂಡ ಜಯಂತಿ ಅವರೇ. ಇದೆಲ್ಲಕ್ಕಿಂತಲೂ ಇಂಟರೆಸ್ಟಿಂಗ್ ಅದ ಕಥೆಎಡಕಲ್ಲು ಗುಡ್ಡದ ಮೇಲೆಸಿನಿಮಾದ್ದು. ಪಾತ್ರದ ಕಥೆ ಮೊದಲು ಪುಟ್ಟಣ್ಣ ಕಣಗಾಲ್ ಅವರು ಹೇಳಿದಾಗಮಾಡಲ್ಲಅಂತ ಸ್ಪಷ್ಟವಾಗಿಯೇ ಹೇಳಿದರು. ಪುಟ್ಟಣ್ಣ ಮತ್ತೆ ಮತ್ತೆ ಕೇಳಿದರು. ಕೊನೆಗೆ ಕಥೆ ಬದಲಾಯಿಸ್ತೀನಿ ಅಂದರು. ಅದನ್ನು ಕೇಳಿ ಜಯಂತಿ ಒಪ್ಪಿಕೊಂಡರು. ಆದರೆ ಪುಟ್ಟಣ್ಣನವರು ಕಥೆ ಬದಲಾಯಿಸಲಿಲ್ಲ. ಜೊತೆಗೆ ಆರತಿ ಪಾತ್ರವನ್ನೇ ಮೇಲೆತ್ತಲು ಟ್ರೈ ಮಾಡಿದರು. ಆದರೆ ಜಯಂತಿ ಅದನ್ನೂ ಚಾಲೆಂಜ್ ಆಗಿ ತೆಗೆದುಕೊಂಡು ಪಾತ್ರವನ್ನು ತುಂಬಾ ಚೆನ್ನಾಗಿ ಮಾಡಿದರು. ಪ್ರೇಕ್ಷಕರು ಮೆಚ್ಚಿದರು. ಅವರಿಗೆ ರಾಜ್ಯ ಪ್ರಶಸ್ತಿ ಕೂಡ ಸಿನಿಮಾಕ್ಕೆ ಸಿಕ್ಕಿತು.

ಪಾತ್ರ ಅನ್ನೋದು ದೊಡ್ಡದೇ ಆಗಿರಬೇಕಿಲ್ಲ. ಚಿಕ್ಕ ಪಾತ್ರಗಳನ್ನೂ ಮಾಡಿ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡು ಬಿಡಬಹುದು ಅಂತ ತೋರಿಸಿಕೊಟ್ಟವರು ಜಯಂತಿ. ‘ನಾಗರ ಹಾವುಸಿನಿಮಾದಲ್ಲಿ ಒನಕೆ ಓಬವ್ವನ ಪಾತ್ರವನ್ನು ಪುಟ್ಟಣ್ಣನವರು ಯೋಚಿಸಿದ್ದರು. ಅದು ಕೇವಲ ಒಂದು ಹಾಡಿನಲ್ಲಿ ಬಂದು ಹೋಗುವಂತಹ ಪಾತ್ರ. ತಮ್ಮ ಹಿಂದಿನ ಚಿತ್ರಗಳ ಸಕ್ಸಸ್ಫುಲ್ ಹೀರೋಯಿನ್ ಕಲ್ಪನಾ ಅವರನ್ನು ಕೇಳಿದರು. ಆದರೆ ಅವರು ದೊಡ್ಡ ಪಾತ್ರದ ನಿರೀಕ್ಷೆಯಲ್ಲಿ ಇದ್ದರು. ಚಿಕ್ಕ ಪಾತ್ರ ಮಾಡಲ್ಲ ಎಂದು ಬಿಟ್ಟರು. ಹೀಗಾಗಿ ಪಾತ್ರ ಜಯಂತಿಯವರಿಗೆ ಬಂದಿತು. ಆದರೆ ಜಯಂತಿ ಅದಕ್ಕೆ ಜೀವ ತುಂಬಿದರು. ಒಂದೇ ಹಾಡಿನಲ್ಲಿ ಬಂದರು ಪಾತ್ರ ಅಜರಾಮರವಾಗಿ ಉಳಿದು ಬಿಟ್ಟಿತು. ಇಂದಿಗೂ ಓಬವ್ವ ಅಂದರೆ ಜಯಂತಿಯವರೇ ನೆನಪಿಗೆ ಬರುವಷ್ಟರ ಮಟ್ಟಿಗೆ.

ಇನ್ನೊಂದು ಅಂತಹದೇ ಪಾತ್ರಕಸ್ತೂರಿ ನಿವಾಸಚಿತ್ರದ್ದು. ಇದರಲ್ಲಿ ನೀಲಾಳ ಬಹಳ ಚಿಕ್ಕ ಪಾತ್ರವನ್ನು ಅವರು ಮಾಡಿದರು. ಅದೂ ಕೂಡ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ‘ಎಲ್ಲೇ ಇರು ಹೇಗೆ ಇರುಹಾಡನ್ನು ಕೇಳಿದ ಕೂಡಲೇ ಜಯಂತಿ ನಮ್ಮ ಮನಸ್ಸಿಗೆ ಬಂದುಬಿಡ್ತಾರೆ. ಇದೆಲ್ಲಾ ಹೇಗಾಯಿತು ಎಂದರೆ ಜಯಂತಿ ನಕ್ಕು ಹೇಳುತ್ತಾ ಇದ್ದರುಪಾತ್ರದೊಳಗೆ ಹೋದ ಮೇಲೆ ಚಿಕ್ಕದು, ದೊಡ್ಡದು ಎಲ್ಲವೂ ನೋಡುವವರಿಗೆ ಬಿಟ್ಟಿದ್ದು, ನನ್ನ ಗಮನ ಏನಿದ್ದರೂ ಅಭಿನಯದ ಕಡೆ ಮಾತ್ರ.’ ಇನ್ನೂ ನಾಯಕಿಯಾಗಿ ಅಭಿನಯಿಸುತ್ತಾ ಇದ್ದಾಗಲೇತಾಯಿಗಿಂತ ದೇವರಿಲ್ಲಚಿತ್ರದಲ್ಲಿ ಇನ್ನೊಬ್ಬ ನಾಯಕಿ ಮಂಜುಳಾ ಅವರಿಗೆ ತಾಯಿಯ ಪಾತ್ರ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ವಿಶೇಷ ಎಂದರೆ ನಂತರ ಕೂಡ ಅವರಿಗೆ ನಾಯಕಿಯ ಪಾತ್ರಗಳು ಸಿಕ್ಕವು.

ಜಯಂತಿಯವರು ರಾಜ್ಕುಮಾರ್ ಅವರ ಜೊತೆಗೆ ಅಭಿನಯಿಸಿದ ಮೊದಲ ಚಿತ್ರಚಂದವಳ್ಳಿಯ ತೋಟ. ಆಗ ಜಯಂತಿ ಇನ್ನೂ ಹೊಸ ಕಲಾವಿದೆ. ರಾಜ್ಕುಮಾರ್ ಆಗಲೇ ಹೆಸರು ಮಾಡಿದ್ದ ಕಲಾವಿದ. ಚಿತ್ರದ ಮೊದಲ ಶಾಟ್ಗೂ ಮೊದಲು ಜಯಂತಿ ಎಲ್ಲಾ ಹಿರಿಯ ಕಲಾವಿದರಿಗೆ ನಮಸ್ಕರಿಸಿದಂತೆ ರಾಜ್ಕುಮಾರ್ ಅವರಿಗೂ ನಮಸ್ಕರಿಸಲು ಹೋದರು. ಆದರೆ ರಾಜ್ಕುಮಾರ್ ಅವರು ತಡೆದುನೀವು ನಿಮ್ಮ ವೃತ್ತಿಯನ್ನು ಗೌರವಿಸಿದರೆ ಸಾಕು, ಅದೇ ನನಗೆ ಮಾಡುವ ನಮಸ್ಕಾರಎಂದರು. ಚಿತ್ರದಲ್ಲಿಯೇ ಅವರಿಬ್ಬರು ಬಹಳ ಒಳ್ಳೆಯ ಸ್ನೇಹಿತರಾದರು. ಎಲ್ಲರೂ ಅಣ್ಣಾ ಎಂದು ಕರೆಯುತ್ತಿದ್ದ ರಾಜ್ಕುಮಾರ್ ಅವರನ್ನು ಜಯಂತಿಯವರೊಬ್ಬರೇರಾಜ್ಅಂತ ಕರೆಯುತ್ತಾ ಇದ್ದಿದ್ದು.

ಪುನರ್ಜನ್ಮಸಿನಿಮಾದಲ್ಲಿ ಇಬ್ಬರೂ ಜೋಡಿಯಾಗಿ ಅಭಿನಯಿಸುತ್ತಾ ಇದ್ದರು. ಸಿನಿಮಾದಲ್ಲಿ ಸೆಟ್ನಲ್ಲಿ ಯಾವಾಗಲೂ ಲವಲವಿಕೆಯಿಂದ ಓಡಾಡುತ್ತಿದ್ದ ರಾಜ್ಕುಮಾರ್ ಯಾರ ಜೊತೆಗೂ ಬೆರೆಯದೆ ಮೌನವಾಗಿ ಒಂದು ಮೂಲೆಯಲ್ಲಿ ಕುಳಿತುಬಿಟ್ಟಿದ್ದರು. ಎಲ್ಲರಿಗೂ ಅಚ್ಚರಿ. ಕೊನೆಗೆ ಜಯಂತಿಯವರು ಹೋಗಿ ವಿಷಯ ಏನು ಅಂತ ವಿಚಾರಿಸಿದರು. ಆಗ ರಾಜ್ಕುಮಾರ್ ಮೆಲ್ಲನೆ ಹೇಳಿದರು. ‘ ಸಿನಿಮಾದಲ್ಲಿ ನಿಮ್ಮ ಕ್ಯಾರೆಕ್ಟರ್ ತುಂಬಾ ಚೆನ್ನಾಗಿತ್ತು. ಆದರೆ ಅದು ಇವತ್ತು ಸತ್ತು ಹೋಗಿಬಿಡುತ್ತಲ್ಲ, ಬೇಸರಕ್ಕೆ ಹೀಗೆ ಕುಳಿತಿರುವೆಜಯಂತಿಯವರಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ‘ಅದು ಕ್ಯಾರೆಕ್ಟರ್ ತಾನೆ? ಎಂದರೂ ರಾಜ್ಕುಮಾರ್ ಅದೇ ಮನಸ್ಥಿತಿಯಲ್ಲಿ ಇದ್ದರು. ಸಿನಿಮಾದಲ್ಲಿಯೇ ಜಯಂತಿಯವರ ಕ್ಯಾರೆಕ್ಟರ್ ಸತ್ತು ಹೋದ ನಂತರಒಲುಮೆಯ ಹೂವೆ, ನೀ ಹೋದೆ ಎಲ್ಲಿಗೆ?’ ಹಾಡು ಬರುತ್ತದೆ. ಇದನ್ನು ಅಭಿನಯಿಸುವಾಗ ರಾಜ್ಕುಮಾರ್ ಶೋಕ ಸಾಗರಕ್ಕೇ ಹೋಗಿಬಿಟ್ಟಿದ್ದರು. ಯಾರು ಎಷ್ಟೇ ಸಮಾಧಾನ ಮಾಡಿದರೂ ಹಾಡಿನ ಚಿತ್ರೀಕರಣ ಮಗಿದ ಬಳಿಕವೂ ಅಳುತ್ತಲೇ ಇದ್ದರು.

ಇನ್ನು ಜಯಂತಿಯವರ ಸರದಿ. ‘ಚಕ್ರತೀರ್ಥಸಿನಿಮಾದಲ್ಲಿ ಜಯಂತಿಯವರದ್ದು ದ್ವಿಪಾತ್ರ. ಒಂದು ಪಾತ್ರದಲ್ಲಿ ಜಯಂತಿಯವರದ್ದು ರಾಜ್ಕುಮಾರ್ ಅವರ ಹೆಂಡತಿಯ ಪಾತ್ರ. ಸಿನಿಮಾದಲ್ಲಿ ಹಬ್ಬದ ಸನ್ನಿವೇಶ. ಅವತ್ತೂ ಗಂಡ ಮನೆಯಿಂದ ಹೊರಟಾಗ ಹೆಂಡತಿಏನ್ರೀ ಇಂದು ಹಬ್ಬ, ಹಬ್ಬದ ದಿನವೂ ಹೊರಗೆ ಹೋಗಬೇಕಾಅಂತ ಕೇಳ್ತಾಳೆ. ಅದಕ್ಕೆ ಗಂಡಇಲ್ಲಮ್ಮ ಇದು ನಾನು ಹೋದ್ರೇನೆ ಆಗೋ ಕೆಲಸ, ನಾಳೆ ಹೋದ್ರೆ ಆಗಲ್ಲ, ಬೇಗ ಬಂದುಬಿಡ್ತೀನಿಎನ್ನುತ್ತಾರೆ. ಆದರೂ ಹೆಂಡತಿಗೆ ಸಮಾಧಾನವಿಲ್ಲ. ‘ಏಕೋ ಮನಸ್ಸಿಗೆ ಸಮಾಧಾನವಿಲ್ಲ, ಬೇಗ ಬಂದುಬಿಡಿಅನ್ನುತ್ತಾಳೆ. ಆದರೆ ಅವಳು ಭಯ ಪಟ್ಟಂತೆಯೇ ಅಪಘಾತ ಆಗುತ್ತದೆ. ಯಾರೊ ಗಂಡನ ರಕ್ತಸಿಕ್ತವಾದ ದೇಹವನ್ನು ಮನೆಗೆ ತರುತ್ತಾರೆ. ಡೆತ್ ಬೆಡ್ನಲ್ಲಿದ್ದರೂ ಗಂಡಕಮಲಾ, ನೀನು ಯಾವಾಗಲೂ ಹಾಡ್ತಾ ಇದ್ದಿಯಲ್ಲ ಹಾಡನ್ನು ಒಮ್ಮೆ ಹಾಡುಅನ್ನುತ್ತಾರೆ. ಅವಳು ಅಳುತ್ತಾ ಅಳುತ್ತಾ ಹಾಡುತ್ತಿರುವಾಗ ಅವಳ ಕಣ್ಣನ್ನೇ ನೋಡುತ್ತಾಕಮಲಾ ಕಮಲಾಅಂತ ಪ್ರಾಣ ಬಿಡುತ್ತಾರೆ. ಆಗ ಜಯಂತಿ ಕ್ಯಾರೆಕ್ಟರ್ ಗೊಳೋ ಅಂತ ಅವರ ಎದೆಯ ಮೇಲೆ ಬಿದ್ದು ಅಳಬೇಕು. ಶಾಟ್ ಮುಗಿದ ಮೇಲೆ ಕೂಡ ಜಯಂತಿಯವರ ಅಳು ನಿಲ್ಲಲೇ ಇಲ್ಲ. ನಿರ್ದೇಶಕರು, ಸಹನಟರು, ಸಹನಿರ್ದೇಶಕರು ಯಾರು ಬಂದು ಸಮಾಧಾನ ಹೇಳಿದರೂ ಜಯಂತಿ ಅಳುವನ್ನು ನಿಲ್ಲಿಸುತ್ತಲೇ ಇಲ್ಲ. ಕೊನೆಗೆ ರಾಜ್ಕುಮಾರ್ ಅವರೇ ಬಂದುಪಾತ್ರದಲ್ಲಿ ಇನ್ವಾಲ್ವ್ ಆಗಬೇಕು ನಿಜ, ಇಷ್ಟೊಂದಲ್ಲಎಂದು ಸಮಾಧಾನ ಹೇಳಿದರು.

ಹೀಗೆ ಬರೆಯುತ್ತಾ ಹೋದರೆ ನೆನಪುಗಳಿಗೆ ಕೊನೆ ಎಲ್ಲಿ? ಜಯಂತಿ ಎಂದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬರೀ ಕಲಾವಿದೆ ಮಾತ್ರವಲ್ಲ ಒಂದು ಅಧ್ಯಾಯವೇ ಸರಿ!

Leave a Reply

Your email address will not be published.