ಬಹುತ್ವ ಭಾರತ

ಜನರನ್ನು ಮೇಲು ಕೀಳುಗಳೆಂದು ಪದರ ಪದರವಾಗಿ ವಿಂಗಡಿಸಿದ ಬಹುಪುರಾತನ ಸಮಾಜಪದ್ಧತಿಯ ದೇಶವಿದು. ಇಂತಹ ಸಮಾಜವನ್ನು ಸಮಾನವಾಗಿ ಕಾಣಬೇಕಾದರೆ ಮೊದಲು ಕೆಳಪದರದವರನ್ನು ಮೇಲೆ ತರುವ ಕೆಲಸ ಆಗಬೇಕು.

ದೇಶವೊಂದರ ಪ್ರಗತಿಗೆ ಪೂರಕ ಯಾವುದು ಹಾಗೂ ದೇಶದ ಹಿಂದುಳಿಯುವಿಕೆಗೆ ಕಾರಣಗಳಾವುವು ಎಂಬುದರ ಕಡೆಗೆ ಬೊಟ್ಟು ಮಾಡಿವೆ ನಾರಾಯಣಮೂರ್ತಿಯವರ ಮಾತುಗಳು. ಆದರೆ ಈ ಚರ್ಚೆಯಲ್ಲಿ ಭಾರತವನ್ನು ಒಟ್ಟಾರೆಯಾಗಿ ಒಂದು ಪರಿಧಿಯೊಳಗಿಟ್ಟು ನೋಡಲು ಸಾಧ್ಯವಾಗಬಹುದೆಂದು ಅನಿಸುವುದಿಲ್ಲ.

ಭಾರತೀಯ ಸಂಸ್ಕೃತಿ ಅಂದರೇನು ಎನ್ನುವುದೇ ಮೂಲಭೂತ ಪ್ರಶ್ನೆ. ಅರುಣಾಚಲ, ನಾಗಾಲ್ಯಾಂಡ್, ತ್ರಿಪುರಗಳ ಗಡಿರೇಖೆಗಳಿಂದ ತೊಡಗಿ ಪಶ್ಚಿಮದ ಗುಜರಾತ್, ರಾಜಸ್ಥಾನ್ ಪಂಜಾಬ್, ಉತ್ತರದ ಕಾಶ್ಮೀರ, ಲೇಹ್ ಲಡಾಕ್ ಮಾತ್ರವಲ್ಲ ದಕ್ಷಿಣ ಭಾರತವಿಡೀ ಸಾಧ್ಯವಾದಷ್ಟು ಸುತ್ತಾಡಿ ‘ಭಾರತೀಯರನ್ನು’ ಅಚ್ಚರಿಯ ಕಣ್ಣುಗಳಿಂದ ಕಂಡಿದ್ದೇನೆ. ಈ ಬಹುತ್ವ ಸಂಸ್ಕೃತಿಯೇ ‘ಭಾರತೀಯ ಸಂಸ್ಕೃತಿ’ ಎಂಬುದು ನಿಜವಿಚಾರ. ‘ಒಂದು ಧ್ವಜ, ಒಂದು ಸಂವಿಧಾನ’ ಇರುವುದು ಮಾತ್ರ ಭಾರತೀಯರ ಏಕಸಂಸ್ಕೃತಿ ಎನ್ನುತ್ತೇನೆ ನಾನು. ಉಳಿದೆಲ್ಲವೂ ಬಹುಸಂಸ್ಕೃತಿ. ಇದು ‘ಬಹುತ್ವ ಭಾರತ’.

ಪ್ರಾಮಾಣಿಕತೆ, ಅರ್ಹತೆ ಆಧಾರದ ಆಯ್ಕೆ, ದೇಶದ ಬಗ್ಗೆ ಹೆಮ್ಮೆ, ಸ್ಪರ್ಧಾತ್ಮಕ ಮನೋಭಾವ ಹಾಗೂ ಚುರುಕುತನಗಳು ಅಭಿವೃದ್ಧಿ ಹೊಂದಿದ ದೇಶದ ಗುಣಲಕ್ಷಣಗಳಾಗಿವೆ’. ಈ ಗುಣಾತ್ಮಕ ಅಂಶಗಳು ಭಾರತೀಯರಲ್ಲಿ ಇಲ್ಲವೆನ್ನಲು ಸಾಧ್ಯವಿಲ್ಲ. ಭಾರತೀಯರಲ್ಲಿ ಪ್ರಾಮಾಣಿಕತೆಯೂ ಇದೆ, ಸ್ಪರ್ಧಾತ್ಮಕ ಮನೋಭಾವವೂ, ಚುರುಕುತನವೂ, ಅನ್ವೇಷಣೆಯ ಗುಣವೂ ಇದೆ. ಅವಶ್ಯಕತೆಯೇ ಅನ್ವೇಷಣೆಯ ಮೂಲವೆನ್ನುವಂತೆ ಕೃಷಿರಂಗದಲ್ಲಿ ಅಗತ್ಯವಾದ (ಯಂತ್ರಗಳನ್ನು) ಅನ್ವೇಷಣೆ ಮಾಡಿದವರಿದ್ದಾರೆ. ತಾಂತ್ರಿಕ ಓದು ಇಲ್ಲದೆ, ಸರಕಾರದ ಸಹಾಯಧನವಿಲ್ಲದೆ ರೈತರು ಮಾಡಿದ ಅನ್ವೇಷಣೆ ತಾಂತ್ರಿಕ ಪರಿಣತಿ ಪಡೆದ ವಿಜ್ಞಾನಿಯ ಅನ್ವೇಷಣೆಗೆ ಕಡಿಮೆಯೇನಲ್ಲ.

ಪ್ರತಿಯೊಬ್ಬ ನಾಗರಿಕನು ದೇಶದ ಬಗ್ಗೆ ಹೆಮ್ಮೆಪಡಬೇಕಾಗಿಲ್ಲ. ಆದರೆ ಹೊಣೆಗಾರಿಕೆ ಇರಬೇಕು. ಕೆಲವು ಸಂದರ್ಭಗಳಲ್ಲಿ ಪ್ರಭುತ್ವದ ಅಸಮರ್ಥ ಆಡಳಿತದಿಂದ ಭ್ರಮನಿರಸನಗೊಂಡು ದೇಶದ ಬಗ್ಗೆ ಹೆಮ್ಮೆಪಡಲಾಗದ, ಮುಜುಗರಪಡುವ ಸನ್ನಿವೇಶಗಳು ಎದುರಾಗಿವೆ.

ಜಗತ್ಪಸಿದ್ಧ ವಿಜ್ಞಾನಿಗಳಾಗಿ ಬಾರತೀಯರು

ವೈಜ್ಞಾನಿಕವಾಗಿ ಭಾರತೀಯರ ಸಾಧನೆ ಕಡಿಮೆಯೇನಿಲ್ಲ. ಪ್ರತಿಭಾ ಪಲಾಯನ ನಮ್ಮ ದೇಶದ ಕೆಟ್ಟವ್ಯವಸ್ಥೆಗೆ ಹಿಡಿದ ಕನ್ನಡಿ. ವೈಜ್ಞಾನಿಕ ಶೋಧಕ್ಕೆ ಭಾರತದಲ್ಲಿ ಅನುಕೂಲಕರ ವಾತಾವರಣ ಇಲ್ಲದೆ ಪ್ರತಿಭೆಗಳು ವಿದೇಶಕ್ಕೆ ತೆರಳಿ ಅಲ್ಲಿಯ ಪೌರತ್ವ  ಪಡೆದುಕೊಳ್ಳುತ್ತಿವೆ. ಹೀಗೆ ಅಭಿವೃದ್ಧಿಯ ದೇಶಗಳÀಲ್ಲಿ ನೆಲೆಸಿರುವ ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವದ ಜೊತೆ ಮೇಲೆ ಹೇಳಿದ ಎಲ್ಲಾ ಗುಣಲಕ್ಷಣಗಳಿವೆ. ಭಾರತೀಯರು ನಾಸಾ ವಿಜ್ಞಾನಿಗಳಾಗಿಯೂ ಜಗತ್ಪçಸಿದ್ಧರಾಗಿದ್ದಾರೆ. ಭಾರತದಲ್ಲೂ ವೈಜ್ಞಾನಿಕ ಸಂಶೋಧನೆಯ ಪ್ರಸಿದ್ಧಿಗೆ ನಮ್ಮ ವಿಜ್ಞಾನಿಗಳ ನಿಸ್ವಾರ್ಥ ಅನ್ವೇಷಣಾ ಗುಣ ಕಾರಣ. ಒಂದು ವೇಳೆ ಅಭಿವೃದ್ಧಿ ದೇಶಗಳು ವಿಜ್ಞಾನಕ್ಕೆ ನೀಡುತ್ತಿರುವ ಬೆಂಬಲವನ್ನು ನಮ್ಮ ಸರಕಾರವೂ ನೀಡಿದ್ದರೆ ಭಾರತೀಯರು ಖಂಡಿತಾ ಅಂತಹ ದೇಶಗಳ ವಿಜ್ಞಾನರಂಗಕ್ಕೂ ಸವಾಲೆಸೆದು ಮುನ್ನುಗ್ಗುತ್ತಿದ್ದರು.

ಪ್ರಾಮಾಣಿಕತೆ

ಅನೇಕ ಭಾರತೀಯರು ವಿದೇಶಗಳಲ್ಲಿ ಪ್ರಾಮಾಣಿಕ ಜೀವನವನ್ನು ನಡೆಸುತ್ತಿದ್ದಾರೆ. ಪ್ರಾಮಾಣಿಕತೆ ಜನ್ಮದಿಂದಲೇ ಇರುತ್ತದೆ. ನಮ್ಮ ಸುತ್ತಲಿನ ವಾತಾವರಣ, ಕಾಯಿದೆ ಕಾನೂನುಗಳು ಪ್ರಾಮಾಣಿಕತೆಯಿಂದ ಜೀವಿಸಲು ಪೂರಕವಾಗಿರಬೇಕಷ್ಟೆ. ಈ ಕಾರಣದಿಂದ ವಿದೇಶದಲ್ಲಿ ನೆಲೆಯಾದ ಪ್ರತಿಭಾವಂತ ಪೀಳಿಗೆಗೆ ಮಾತ್ರವಲ್ಲ ಇಲ್ಲಿರುವ ಭಾರತೀಯರಿಗೂ ಭ್ರಮನಿರಸನವಾಗುತ್ತಿದೆ.

ಶಿಕ್ಷಣ ವ್ಯವಸ್ಥೆ

ಸಮಾಜದ ಬಗ್ಗೆ ಪ್ರಾಮಾಣಿಕತೆ, ದೇಶದ ಬಗ್ಗೆ ಹೊಣೆಗಾರಿಕೆ, ದೇಶಪ್ರೇಮ, ಹೆಣ್ಣು-ಗಂಡು ಸಮಾನ ಎಂಬ ಮನೋಭಾವ- ಇಂತಹ ಮೌಲ್ಯಾಧಾರಿತ ವಿಷಯಗಳು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇರಬೇಕು. ಇವು ಭಾರತೀಯ ಪ್ರಜೆಗಳನ್ನು ರೂಪುಗೊಳಿಸಬೇಕು. ದೇಶಕ್ಕಾಗಿ ಮಿಡಿವ, ತುಡಿವ ಮನೋಭಾವ ಮಕ್ಕಳಲ್ಲಿ ಬೆಳೆಯಬೇಕಾದರೆ ಶಿಕ್ಷಣವ್ಯವಸ್ಥೆಯನ್ನು ಸರಿಯಾಗಿ ರೂಪಿಸÀಬೇಕು. ನಾವು ಭಾರತವನ್ನು ವಿದೇಶಗಳಿಗೆ ಹೋಲಿಸುವಾಗ ಈ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ನಮ್ಮಲ್ಲಿರುವುದು ಅಂಕಗಳಿಗೆ ಪೈಪೋಟಿ ನೀಡಬಲ್ಲ ಉದ್ಯಮರೂಪದ ಶಿಕ್ಷಣಸಂಸ್ಥೆಗಳು. ಹಿಂದೆ ಇದ್ದ ಶಿಕ್ಷಣವ್ಯವಸ್ಥೆಯೂ ಈಗ ಕುಸಿಯುತ್ತಿದೆ. ಇಲ್ಲಿ ಜ್ಞಾಪಕ ಶಕ್ತಿಯೊಂದೇ ಸಾಕಾಗುತ್ತದೆ. ಬುದ್ಧಿವಂತಿಕೆ ಅಗತ್ಯ ಇರುವುದಿಲ್ಲ. ಇವೆಲ್ಲವುಗಳ ಜೊತೆಗೆ ನಮ್ಮ ವಿಶ್ವವಿದ್ಯಾಲಯಗಳಿಗೆ ರಾಜಕಾರಣ ಪ್ರವೇಶ ಪಡೆದಿದೆ.

ವಿಳಂಬ ನ್ಯಾಯದಾನ

ನಮ್ಮ ಕಾನೂನು ನ್ಯಾಯದಾನದಲ್ಲಿ ವಿಳಂಬಸೂತ್ರವನ್ನು ಅನುಸರಿಸುತ್ತದೆ. ವಿದೇಶಗಳಲ್ಲಿರುವಂತೆ ತ್ವರಿತ ನ್ಯಾಯದಾನ ಇಲ್ಲಿಲ್ಲ. ತ್ವರಿತ ನ್ಯಾಯದಾನವಿಲ್ಲದ ಸಮಾಜದಲ್ಲಿ ಕಾನೂನಿನ ಭಯವಿರದು. ಭ್ರಷ್ಟಾಚಾರಿಗಳು, ಅತ್ಯಾಚಾರಿಗಳು ಜೈಲುವಾಸ ಅನುಭವಿಸಿ ಬೇಲ್ ಮೇಲೆ ಬಿಡುಗಡೆಗೊಂಡು ಬರುವಾಗ ಕೂಡಾ ಹಾರತುರಾಯಿ ಹಾಕಿ ಸ್ವಾಗತಿಸುವ ವ್ಯವಸ್ಥೆಯ ದೇಶವಿದು. ಬಡವರಿಗೆ ನ್ಯಾಯ ಕೇಳಲು ಸಾಧ್ಯವಾಗದ ವ್ಯವಸ್ಥೆ ಇಲ್ಲಿದೆ. ಮಾತ್ರವಲ್ಲ ಇಂತಹವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲೂ ನಮ್ಮ ರಾಜಕೀಯ ಪಕ್ಷಗಳು ಅವಕಾಶ ನೀಡುತ್ತವೆ. ಹೀಗೆ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳ ‘ಪ್ರಭುತ್ವ’ ನಡೆಸುವ ಈ ದೇಶದಲ್ಲಿ ಜನಸಾಮಾನ್ಯರು ಪ್ರಾಮಾಣಿಕರಾಗಿರಲು ಹೇಗೆ ಸಾಧ್ಯವಾಗುತ್ತದೆ? ಹೀಗಾಗಿ ಪ್ರಾಮಾಣಿಕ ಮನಸ್ಸುಗಳು ಒಡೆದುಹೋಗಿ ದೇಶದ ಬಗ್ಗೆ ನಿರ್ಲಕ್ಷö್ಯ ತಳೆದು ಪ್ರತಿಭಾ ಪಲಾಯನವಾಗುವುದು ನಾವು ಕಾಣುತ್ತಿರುವ ಸತ್ಯ. ಇದರಿಂದಾಗಿ ವಿಶೇಷವಾಗಿ ವೈಜ್ಞಾನಿಕ ರಂಗಕ್ಕೆ ಭ್ರಮನಿರಸನ ಆಗುತ್ತಿರುವುದು ಸುಳ್ಳಲ್ಲ.

‘ಪ್ರಾಮಾಣಿಕತೆ, ಅರ್ಹತೆ ಆಧಾರದ ಆಯ್ಕೆ, ಸ್ಪರ್ಧಾತ್ಮಕ ಮನೋಭಾವ, ಚುರುಕುತನಗಳು ಅಭಿವೃದ್ಧಿ ಹೊಂದಿದ ದೇಶದ ಗುಣಲಕ್ಷಣಗಳಾಗಿವೆ.’

‘ಅರ್ಹತೆ ಆಧಾರದ ಆಯ್ಕೆಗೆ ಮೀಸಲಾತಿ ತೊಡಕು’ ಎಂಬ ಧ್ವನಿಯನ್ನು ನಾರಾಯಣಮೂರ್ತಿಯವರ ಮೇಲಿನ ಮಾತುಗಳಲ್ಲಿ ಗುರುತಿಸಿದ್ದೇನೆ. ಭಾರತದಲ್ಲಿ ಮೀಸಲಾತಿ ಇರುವುದರಿಂದ ಮೇಲಿನ ಪ್ರಶ್ನೆ ಉದ್ಭವವಾಗಿದೆ ಎಂದು ಭಾವಿಸಿದ್ದೇನೆ.

ಸಮಾಜದ ಮೇಲ್ಪದರದಲ್ಲಿ ನಿಂತು, ಅಥವಾ ವಿದೇಶದಲ್ಲಿ ನಿಂತು ಇಲ್ಲಿಯ ವಿದ್ಯಮಾನಗಳನ್ನು ಅವಲೋಕಿಸುವಾಗ ಮೀಸಲಾತಿ ಈ ದೇಶದ ಸ್ಪರ್ಧಾತ್ಮಕತೆಗೆ ಬಹುದೊಡ್ಡ ತೊಡಕು ಎಂದು ಭಾಸವಾಗುವುದು ನಿಜ. ಆದರೆ ಪ್ರಾಮಾಣಿಕತೆಗೂ ಮೀಸಲಾತಿಗೂ ಸಂಬAಧವಿಲ್ಲ. ಕೆಲವರು ಅಪ್ರಾಮಾಣಿಕರಿರಬಹುದು. ಅಂತಹವರು ಅಲ್ಲೂ ಇದ್ದಾರೆ ಎಲ್ಲೆಲ್ಲೂ ಇದ್ದಾರೆ.

ಜನರನ್ನು ಮೇಲು-ಕೀಳುಗಳೆಂದು ವಿಂಗಡಿಸಿದ ಬಹು ಪುರಾತನ ಪದ್ಧತಿ ಇರುವ ಸಮಾಜವನ್ನು ಸಮಾನವಾಗಿ ಕಾಣಬೇಕಾದರೆ ಮೊದಲು ಕೆಳಪದರದವರನ್ನು ಮೇಲೆ ತರುವ ಕೆಲಸವಾಗಬೇಕು. ಮೇಲ್ವರ್ಗದವರಿಗೆ ಹೆದರಿ ಮುದುಡಿ ಕುಳಿತ ಸಮಾಜ ಅಷ್ಟು ಸುಲಭದಲ್ಲಿ ಬದಲಾವಣೆಯನ್ನು ಸ್ವೀಕರಿಸಲೂ ಸಾಧ್ಯವಾಗÀದ ಸ್ಥಿತಿಯಿದೆ. ಕೆಳಪದರದಲ್ಲಿರುವವರಿಗೆ ಅವಕಾಶ ಸಿಗಬೇಕಾದರೆ ಮೀಸಲಾತಿ ಬಹುಮುಖ್ಯವಾಗುತ್ತದೆ. ಮೀಸಲಾತಿ ಇದ್ದ ಮಾತ್ರಕ್ಕೆ ಅವರು ದೇಶದ ಪ್ರಗತಿಗೆ, ಪ್ರಾಮಾಣಿಕತೆಗೆ ವೈಜ್ಞಾನಿಕತೆಗೆ ತೊಡಕಾಗುತ್ತಾರೆ ಎಂದು ಭಾವಿಸುವುದು ತಪ್ಪು.

ಮುಜರಾಯಿ ಇಲಾಖೆಗಳ ಮೀಸಲಾತಿ

ಸಂಪನ್ಮೂಲ ಒದಗಿಸುವ ದೇವಸ್ಥಾನಗಳ ಪೂಜೆಗೆ, ಪೌರೋಹಿತ್ಯಕ್ಕೆ ಅರ್ಹತೆ ಒಂದು ವರ್ಗಕ್ಕೆ ಮಾತ್ರ ಇರುವುದೂ ಮೀಸಲಾತಿ ಎಂದು ಇತ್ತೀಚಿನ ದಿನಗಳಲ್ಲಿ ಚರ್ಚೆಯಾಗುತ್ತಿದೆ. ನಮ್ಮ ನಾಗರಿಕತೆಗೆ ಸುಮಾರು 3000ದಿಂದ 4000 ವರುಷಗಳ ಇತಿಹಾಸವಿದೆ. ಆದರೂ ಬ್ರಾಹ್ಮಣವರ್ಗದವರಿಗೆ ಮಾತ್ರ ಅರ್ಚಕ ಸ್ಥಾನ ದೊರಕುತ್ತದೆ. ಮುಜರಾಯಿ ಇಲಾಖೆಗಳ ದೇವಸ್ಥಾನಗಳಲ್ಲೂ ಅವರಿಗೆ ಮಾತ್ರ ಅವಕಾಶ. ಇದೂ ಒಂದು ರೀತಿಯ ಮೀಸಲಾತಿ. ನಮ್ಮ ಸರಕಾರ ಆಸಕ್ತರಿಗೆ ಬೇಕಾದ ತರಬೇತಿ ನೀಡಿ ತಿರುಪತಿ, ತಿರುವಾಂಕೂರು ಮುಂತಾದ ಮುಜರಾಯಿ ಇಲಾಖೆಗಳ ಅನೇಕ ದೇವಸ್ಥಾನಗಳಿಗೆ ಅರ್ಚಕ ಕೆಲಸಕ್ಕೆ ನೇಮಿಸುವ ಕೆಲಸ ಆಗಬೇಕಿದೆ.

‘ಅಪ್ರಾಮಾಣಿಕತೆ, ಅಸಡ್ಡೆ, ಇನ್ನೊಬ್ಬರ ವಿಚಾರಗಳನ್ನು ಕದಿಯುವುದು, ದೇಶದ ಬಗ್ಗೆ ನಿರ್ಲಕ್ಷö್ಯವು ಪ್ರಗತಿ ಕಾಣದ ದೇಶಗಳ ಗುಣಲಕ್ಷಣಗಳಾಗಿವೆ.’

ಭಾರತ ದೇಶಕ್ಕೆ ಈ ಆರೋಪವಿದೆ. ಹೀಗಾಗಿ ಇಲ್ಲಿ ವಿದೇಶಿಯರು ಹಣ ತೊಡಗಿಸಲು ಹಿಂಜರಿಯುತ್ತಾರೆ. ಹಣ ತೊಡಗಿಸಲೆಂದು ಬಂದವರು ಮರಳುತ್ತಾರೆ. ಆದರೆ ಅಪ್ರಾಮಾಣಿಕತೆಯ ಮುಖ್ಯ ಲಕ್ಷಣವು ಭ್ರಷ್ಟಾಚಾರ. ನಮ್ಮ ಚುನಾವಣೆಯ ಪ್ರಕ್ರಿಯೆಯಲ್ಲಿಯೇ ಭ್ರಷ್ಟಾಚಾರ ಅಡಗಿದೆ.

ಬಹುತ್ವ ಭಾರತ

ಇದೊಂದು ದೇಶ ಎಂಬ ಪರಿಕಲ್ಪನೆಯೇ ಇಲ್ಲದ ಜನರ ದೇಶ. ಮೂಲತಃ ಭಾರತ ಹಲವು ಬುಡಗಟ್ಟುಗಳನ್ನು ಹೊಂದಿರುವ ದೇಶ. ಬುಡಗಟ್ಟು ಮೂಲದವರಲ್ಲದವರೂ ಒಂದೊAದು ಪ್ರದೇಶಕ್ಕೂ ಭಿನ್ನಸಂಸ್ಕೃತಿ ಮತ್ತು ಮನೋಧರ್ಮವನ್ನು ಹೊಂದಿದ್ದಾರೆ. ಆಹಾರ, ವಿವಾಹ ಸಂಸ್ಕೃತಿ, ಸಾಮಾಜಿಕ ನಿಯಮಗಳು ಕಟ್ಟುಪಾಡುಗಳು ಎಲ್ಲವೂ ವೈವಿಧ್ಯಮಯ! ಇವೆಲ್ಲವುಗಳ ಜೊತೆಗೆ ಅವರವರ ಮನೋರ್ಧಮದ ಅವರವರು ನಂಬಿಕೊAಡು ಬಂದAತಹ ತತ್ವಾದರ್ಶಗಳೂ ಪರಿಣಾಮ ಬೀರುತ್ತವೆ. ಭಾರತದ ಕೆಲವೆಡೆ ಕಳ್ಳತನ ಮಾಡುವುದನ್ನೇ ಪರಂಪರೆಯೆAದು ಕಳ್ಳತನದ ಕೈಚಳಕವನ್ನು ಮುಂದಿನ ಪೀಳಿಗೆಗೆ ಪಾಠಮಾಡುವ ಸಮುದಾಯ ಇದೆ. ಅವರಿಗೆ ಅದೇ ಸರಿ. ಹಾಗೇ ದೇವದಾಸಿ ಪದ್ಧತಿ ಕೂಡಾ. ಇದು ಉದಾಹರಣೆಗಳಷ್ಟೇ. ಸಾವಿರಾರು ವರ್ಷಗಳಿಂದ ‘ಒಂದು ದೇಶ’ ಎಂಬ ಪರಿಕಲ್ಪನೆಯೇ ಇಲ್ಲದೆ ಸಮುದಾಯಗಳಿಗೆ ರಾಷ್ಟಿçÃಯತೆ ಅಂದರೇನು ಎಂದೇ ತಿಳಿದಿಲ್ಲ. ಅದರ ಅರಿವನ್ನು ಅವರಲ್ಲಿ ಜಾಗೃತಗೊಳಿಸಿ ಒಂದು ದ್ವಜದಡಿ, ಒಂದು ಸಂವಿಧಾನದಡಿ ಅವರನ್ನು ತರುವ ಕೆಲಸ ಇನ್ನೂ ವ್ಯವಸ್ಥಿತವಾಗಿ ಆಗಿಲ್ಲ.

ಇದು ಕಟ್ಟಿದ ದೇಶವಲ್ಲ

India is not a Nation. A Nation is a set of people with common culture language and ethnicity etc. India is deemed not a nation (by some, and widely contested ) because its multiple races, ethnicities, languages and cultures.

ಹೀಗೆ ಈಗಿನ ಭಾರತವನ್ನು ವ್ಯಾಖ್ಯಾನಿಸಲಾಗುತ್ತದೆ. ಸಾವಿರಾರು ವರುಷಗಳ ಹರಿವಿನಲ್ಲಿ ಜೀವ ತಳೆದು ಬೆಳೆದು ಬಂದ ದೇಶ ಭಾರತ. ವಿಭಿನ್ನ ಸಂಸ್ಕೃತಿಯ, ವಿಭಿನ್ನ ಸಮಾಜ ಪದ್ಧತಿಯ ಜನಸಮುದಾಯದ ರಾಜರು ಆಳಿದ್ದ ದೇಶವಿದು. ಭಾಷೆಯೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಸಂಸ್ಕೃತಿ ಮತ್ತು ಸಾಮಾಜಿಕ ಪದ್ಧತಿ ಕೂಡಾ ಭಿನ್ನವಾಗಿದೆ. ಎಲ್ಲಿಂದಲೋ ಯಾರೋ ಇಲ್ಲಿಗೆ ಬಂದು ಕಟ್ಟಿದ ದೇಶÀವಲ್ಲ.

ದೇಶವೊಂದನ್ನು ಅದರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಲಾಗುತ್ತದೆ. ಕಾನೂನು, ನಿಯಮಗಳನ್ನು ರೂಪಿಸಲಾಗುತ್ತದೆ. ಹುಟ್ಟಿದ ದೇಶದಲ್ಲಿ ಹಾಗಾಗುವುದಿಲ್ಲ. ಬುಡಗಟ್ಟು ಮೂಲದವರು ತಾವೇ ಕಟ್ಟುಪಾಡುಗಳನ್ನು ರಚಿಸಿ ಪ್ರತ್ಯೇಕ ಗುಂಪುಗಳಲ್ಲಿ ಸ್ವತಂತ್ರವಾಗಿ ಜೀವಿಸಿದವರು. ಸ್ವಾತಂತ್ರಾö್ಯನAತರ ‘ಭಾರತ ದೇಶ’ದ ಪರಿಕಲ್ಪನೆ ಮೂಡಿತು. ಈಗಲೂ ಭಾರತದ ಅನೇಕ ಬುಡಗಟ್ಟು ಸಮುದಾಯಗಳಲ್ಲಿ ದೇಶದ ಕಲ್ಪನೆ ಇಲ್ಲ. ಬಹುತ್ವ ಭಾರತ ಒಂದು ರಾಷ್ಷçಧ್ವಜದಡಿ, ಒಂದು ಸಂವಿಧಾನದಡಿ ಬರುವಾಗ ಮೂಲದ ಕೆಲವು ಗುಣಗಳು ಕಳಚಲು ಸಮಯ ಹಿಡಿಯುತ್ತದೆ. ಅದಕ್ಕೆ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ.

*ಲೇಖಕಿ ಮಂಗಳೂರು ಬಳಿಯ ಕಿನ್ನಿಗೋಳಿಯವರು, ಎಂ.ಎ., ಡಿ.ಲಿಟ್. ಪದವೀಧರರು. ಹಲವಾರು ಕತೆ, ಕವನ, ಕಾದಂಬರಿ ಪ್ರಕಟಗೊಂಡಿವೆ. ಸಂಶೋಧನೆಯಲ್ಲಿ ಹೆಚ್ಚು ಆಸಕ್ತಿ. ಪ್ರಸ್ತುತ ಬೆಂಗಳೂರು ನಿವಾಸಿ.

Leave a Reply

Your email address will not be published.